Tag: ಎಚ್ ಡಿ ಕುಮಾರಸ್ವಾಮಿ

  • ಅಕ್ಕಿ ಕಡಿತ ಮಾಡಿದ್ಯಾಕೆ, ನನಗೆ ಈಗ 2 ಕೆ.ಜಿ. ಅಕ್ಕಿ ಬೇಕು: ಕಾರ್ಯಕ್ರಮದಲ್ಲೇ ಸಚಿವರಿಗೆ ವ್ಯಕ್ತಿಯಿಂದ ಬೇಡಿಕೆ

    ಅಕ್ಕಿ ಕಡಿತ ಮಾಡಿದ್ಯಾಕೆ, ನನಗೆ ಈಗ 2 ಕೆ.ಜಿ. ಅಕ್ಕಿ ಬೇಕು: ಕಾರ್ಯಕ್ರಮದಲ್ಲೇ ಸಚಿವರಿಗೆ ವ್ಯಕ್ತಿಯಿಂದ ಬೇಡಿಕೆ

    ಚಿಕ್ಕಬಳ್ಳಾಪುರ: ಅನ್ನಭಾಗ್ಯ ಪಡಿತರದಲ್ಲಿ ಎರಡು 2 ಕೆ.ಜಿ. ಅಕ್ಕಿಯನ್ನು ಕಡಿತ ಮಾಡಿದ್ದು ಯಾಕೆ? ನನಗೆ 2 ಕೆಜಿ ಅಕ್ಕಿ ಬೇಕು ಕೊಡಿ ಎಂದು ಖಾಲಿ ಚೀಲ ಹಿಡಿದು ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯೊಬ್ಬರು ಕೃಷಿ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.

    ಗೌರಿಬಿದನೂರು ತಾಲೂಕಿನ ಕಾಚಮಾಚೇನಹಳ್ಳಿ ಗ್ರಾಮದ ಬೊಮ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿ 2018-19 ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು. ಈ ವೇಳೆ ಕಾರ್ಯಕ್ರಮದ ಬಳಿ ಬಂದ ಸ್ಥಳೀಯ ವ್ಯಕ್ತಿಯೊರ್ವ ಏಕೆ ಎರಡು ಕೆ.ಜಿ. ಅಕ್ಕಿ ಕಡಿತ ಮಾಡಿದ್ದೀರಿ ಹೇಳಿ ಅಂತ ಪ್ರಶ್ನೆ ಮಾಡಿದ್ರು. ಅಷ್ಟೇ ಅಲ್ಲದೇ ನನಗೆ 2 ಕೆ.ಜಿ ಅಕ್ಕಿ ಕೊಡಲೇ ಬೇಕು ಅಂತಾ ಖಾಲಿ ಚೀಲ ತಂದು ಪ್ರದರ್ಶನ ಮಾಡಿದರು.

    ಕಾಯಕ್ರಮದ ಧ್ವನಿವರ್ಧಕದ ಧ್ವನಿಯಿಂದ ವ್ಯಕ್ತಿಯ ಮಾತು ಸಚಿವರ ಕಿವಿಗೆ ಬೀಳಲಿಲ್ಲ. ಅಷ್ಟರಲ್ಲಿಯೇ ಅಲ್ಲೇ ಇದ್ದ ಸ್ಥಳೀಯರು ವ್ಯಕ್ತಿಯನ್ನು ಸಮಾಧಾನ ಪಡಿಸಲು ಯತ್ನಿಸಿದರು. ಕೊನೆಗೆ ಯಾರ ಮಾತನ್ನು ಕೇಳದ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡರು.

    https://youtu.be/IdCjm6_9ABA

  • ಮೆಟ್ರೋ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಷನ್ ನಿಂದ 200ಕೋಟಿ ರೂ. ನೆರವು

    ಮೆಟ್ರೋ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಷನ್ ನಿಂದ 200ಕೋಟಿ ರೂ. ನೆರವು

    ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅನೇಕ ಜನಪರ ಕಾರ್ಯಕ್ರಮಕ್ಕೆ ಸರ್ಕಾರದ ಜೊತೆ ಕೈ ಜೋಡಿಸುತ್ತಾ ಬಂದಿದೆ. ಈಗ ಮೆಟ್ರೋ ಕಾಮಗಾರಿಗೆ ಕೂಡ ಸಹಾಯ ಮಾಡಲು ಮುಂದಾಗಿದೆ.

    ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಇಂದು ಮುಖ್ಯಮಂತ್ರಿಗಳ ಕೃಷ್ಣಾ ನಿವಾಸಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೋನಪ್ಪನ ಅಗ್ರಹಾರ ಮೆಟ್ರೋ ಕಾಮಗಾರಿಗೆ ಸಹಾಯ ಮಾಡುವ ಕುರಿತು ಚರ್ಚೆ ನಡೆಸಿದರು.

    ಚರ್ಚೆಯ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕೋನಪ್ಪನ ಅಗ್ರಹಾರ ಮೆಟ್ರೋ ಹಳಿ ನಿರ್ಮಾಣಕ್ಕೆ 100 ಕೋಟಿ ರೂ. ಹಾಗೂ ನಿಲ್ದಾಣಕ್ಕೆ 100 ಕೋಟಿ ರೂ. ಸಹಾಯ ನೀಡುವುದಾಗಿ ಸುಧಾಮೂರ್ತಿ ಅವರು ತಿಳಿಸಿದ್ದಾರೆ. ಇದೇ ತಿಂಗಳ 19 ರಂದು ವಿಧಾನಸೌಧದಲ್ಲಿ ಸರ್ಕಾರ ಮತ್ತು ಇನ್ಫೋಸಿಸ್ ನಡುವೆ ತಿಳವಳಿಕೆಯ ಸ್ಮರಣಿಕೆ (ಎಂಓಯು) ಒಪ್ಪಂದ ನಡೆಯಲಿದೆ. ಇನ್ಫೋಸಿಸ್ ಸಂಸ್ಥೆ ಅನೇಕ ಒಳ್ಳೆ ಕೆಲಸ ಮಾಡ್ತಿದೆ. ಈ ಮೂಲಕ ಇನ್ಫೋಸಿಸ್ ಫೌಂಡೇಷನ್ ಇತರ ಕಂಪೆನಿಗಳಿಗೆ ಮಾದರಿ ಆಗಿದೆ ಎಂದು ಹೇಳಿದರು.

     

    ಸಹಾಯದ ಬಗ್ಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪ್ರತಿಕ್ರಿಯಿಸಿ, ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅದಮನು. ಜನರಿಗೆ ಅನುಕೂಲವಾಗಲು ಈ ಸಹಾಯ ಮಾಡುತ್ತಿದ್ದೇವೆ. ನಮ್ಮಲ್ಲಿ ಇರುವುದನ್ನು ಇನ್ನೊಬ್ಬರಿಗೆ ನೀಡಿ ಸಹಾಯ ಮಾಡಬೇಕು. ಹೀಗಾಗಿ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ಉತ್ತಮವಾಗಿ ನಿರ್ಮಾಣ ಮಾಡಿ, 30 ವರ್ಷ ನಾವೇ ನಿರ್ವಹಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ರು.

  • ರಾಹುಲ್ ಇಮೇಜ್ ಡ್ಯಾಮೇಜ್‍ಗೆ ತಡೆ ಹಾಕಲು `ಕೈ’ ನಾಯಕರಿಂದ ಎಚ್‍ಡಿಕೆ ಮೇಲೆ ಒತ್ತಡ!

    ರಾಹುಲ್ ಇಮೇಜ್ ಡ್ಯಾಮೇಜ್‍ಗೆ ತಡೆ ಹಾಕಲು `ಕೈ’ ನಾಯಕರಿಂದ ಎಚ್‍ಡಿಕೆ ಮೇಲೆ ಒತ್ತಡ!

    ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರೀ ಟೀಕೆಗೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಈಗ ತೈಲದ ಮೇಲಿನ ಸೆಸ್ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

    ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೈಕಲ್ ಏರಿ ಪ್ರತಿಭಟನೆ ಮಾಡಿದ್ದರು. ಆದರೆ ಈಗ ರಾಜ್ಯದ ದೋಸ್ತಿ ಸರ್ಕಾರವೇ ತೈಲ ದರ ಏರಿಕೆ ಮಾಡಿರುವುದು ಟೀಕೆಗೆ ಕಾರಣವಾಗಿದೆ.

    ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡಿ, ಫೋಟೋ, ಹೇಳಿಕೆ ಹರಿಬಿಡುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಕಾಂಗ್ರೆಸ್ ನಾಯಕರು ತೈಲದ ಮೇಲಿನ ಸೆಸ್ ವಾಪಾಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಉ.ಕ.ಗೆ ಅನ್ಯಾಯ:  ಸಮನ್ವಯ ಸಮಿತಿ ತುರ್ತು ಸಭೆಗೆ ಎಚ್.ಕೆ.ಪಾಟೀಲ್ ಒತ್ತಾಯ!

    ಉ.ಕ.ಗೆ ಅನ್ಯಾಯ: ಸಮನ್ವಯ ಸಮಿತಿ ತುರ್ತು ಸಭೆಗೆ ಎಚ್.ಕೆ.ಪಾಟೀಲ್ ಒತ್ತಾಯ!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಬಜೆಟ್‍ಗೆ ಶಾಸಕ ಸುಧಾಕರ್ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರ ಬೆನ್ನಲ್ಲೆ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್,ಕೆ.ಪಾಟೀಲ್ ಅವರು ಕೂಡ ಅಸಮಾಧಾನ ಹೊರಹಾಕಿದ್ದಾರೆ.

    ಎಚ್.ಕೆ.ಪಾಟೀಲ್ ಅವರು ಸದ್ಯ ಸಿ.ಎಂ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾಮುಖ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹೊಸ ಯೋಜನೆಗಳನ್ನು ರೂಪಿಸುವುದು ಸೂಕ್ತ. ಹೀಗಾಗಿ ಸಮನ್ವಯ ಸಮಿತಿ ತುರ್ತು ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

    2018ರ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳ ಗೆಲುವಿಗೆ ಕಾರಣೀಕರ್ತರಾದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಯಾವುದೇ ಹೊಸ ಕಾರ್ಯಕ್ರಮವನ್ನು ಘೋಷಿಸಿಲ್ಲ. ಅಲ್ಲದೇ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ ಎಂದು ಹೇಳಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ದಿಟ್ಟ ನಿರ್ಧಾರದಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಜಾತ್ಯತೀತ ಪಕ್ಷಗಳ ಒಗ್ಗೂಡಿಕೆಯು ರಾಷ್ಟ್ರದಲ್ಲಿ ಹೊಸ ರಾಜಕೀಯ ದಿಕ್ಸೂಚಿಗೆ ಕಾರಣವಾಗಿದೆ. ಹೀಗಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

  • ಕುಮಾರಸ್ವಾಮಿಯನ್ನ ಹಾಡಿಹೊಗಳಿದ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್

    ಕುಮಾರಸ್ವಾಮಿಯನ್ನ ಹಾಡಿಹೊಗಳಿದ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್

    ಬೆಂಗಳೂರು: ದೋಸ್ತಿ ಸರ್ಕಾರದ ಬಜೆಟ್ ಸವಾಲು ಇಂದು ಕೊನೆಗೊಂಡಿದೆ. ಈ ಬೆನ್ನಲ್ಲೇ ಕೈ ಬಳಗದಿಂದ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿದ್ದಾರೆ.

    ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರೈತರ 34 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಕರ್ನಾಟಕದಲ್ಲಿ ಇತಿಹಾಸ ಬರೆದಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಮುಂದುವರಿಸಿದ್ದಾರೆ. ಇದೊಂದು ಆರ್ಥಿಕ ನಿರ್ವಾಹಣೆಯ ಬಜೆಟ್ ಆಗಿದೆ ಎಂದು ಹೇಳಿದರು.

    ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೂ ಬಿಜೆಪಿಯವರು ಸುಮ್ಮನೆ ಇದು ಉತ್ತಮ ಬಜೆಟ್ ಅಲ್ಲ ಅಂತಾ ಆರೋಪ ಮಾಡುತ್ತಿದ್ದಾರೆ ಎಂದರು.

  • ಹಾಸನದ ಬಜೆಟ್ ಅಂದ ಬಿಜೆಪಿಯವರಿಗೆ ಸಿಎಂ ಎಚ್‍ಡಿಕೆ ಖಡಕ್ ತಿರುಗೇಟು

    ಹಾಸನದ ಬಜೆಟ್ ಅಂದ ಬಿಜೆಪಿಯವರಿಗೆ ಸಿಎಂ ಎಚ್‍ಡಿಕೆ ಖಡಕ್ ತಿರುಗೇಟು

    ಬೆಂಗಳೂರು: ಹಾಸನದ ಬಜೆಟ್ ಅಂತ ಹೇಳುತ್ತಿರೋ ಬಿಜೆಪಿಯವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.

    ವಿಧಾನೌಧದಲ್ಲಿ ಮಾತನಾಡಿದ ಅವರು, ಇಂದು ಅವರು ಹಾಸನದ ಬಜೆಟ್ ಅಂತಾರೆ. ಹಾಸನದ ಹೊರ ವರ್ತುಲ ರಸ್ತೆಯ ಕಾಮಗಾರಿಗೆ 30 ಕೋಟಿ ಹಣ ಇಟ್ಟಿದ್ದೇವೆ. ಹಾಸನದ ಶಾಸಕರು ರೇವಣ್ಣ ಅವರಲ್ಲ ಅಂದ್ರು.

    ಹಾಸನದಲ್ಲಿರುವುದು ಬಿಜೆಪಿ ಶಾಸಕರು. ಹೀಗಾಗಿ ಬಿಜೆಪಿ ನಾಯಕರುಗಳಿಗೆ ಹೇಳುತ್ತಿದ್ದೇನೆ ಕಾಮಗಾರಿಗೆ ಇಟ್ಟಂತಹ ಹಣ ಬೇಡವೆಂದ್ರೆ ವಾಪಾಸ್ ತಗೋತೀವಿ. ಬಿಜೆಪಿ ಶಾಸಕರ ವಿರೋಧವಿದ್ರೆ, ಆ 30 ಕೋಟಿ ರೂ, ಪ್ರಾಜೆಕ್ಟ್ ನ ವಾಪಾಸ್ ತಗೋಬೇಕಾದ್ರೆ ತೆಗೆಯಲು ಸಿದ್ಧನಿದ್ದೇನೆ. ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದೇನೆ ನಾನು, ಎಲ್ಲವನ್ನು ಲೆಕ್ಕ ಹಾಕಿದ್ರೆ ಕೊಟ್ಟಿರುವಂತಹ ಹಣ 150 ರಿಂದ 200 ಕೋಟಿ ಬರಬಹುದು ಅಂತ ಹೇಳಿದ್ರು.

    ಎರಡು ತಿಂಗಳಾದ್ರೂ ಅವಕಾಶ ಕೊಡಿ. ಈಗಾಗ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳಾಗಿದೆ ಅಷ್ಟೇ. ಹೀಗಾಗಿ ಎರಡು ತಿಂಗಳು ಅವಕಾಶ ಕೊಡಿ. ಆಮೇಲೆ ನಮ್ಮ ಕಾರ್ಯಕ್ರಮಗಳನ್ನು ನೊಡಿವಿರಿ ಎಂದು ವಿರೋಧ ಪಕ್ಷದ ಅಂದ್ರೆ ಬಿಜೆಪಿ ಸದಸ್ಯರಿಗೆ ಹೇಳಿದ್ದೆ. ಆದ್ರೆ ಪಾಪ ಅವರು ರೈತರ ಸಾಲಮನ್ನಾ, ರೈತರ ಸಾಲಮನ್ನಾ ಅಂತ ಹೇಳಿಕೊಂಡು ಬಂದ್ರು. ನಾವು ಸಾಲಮನ್ನಾ ಘೋಷಣೆ ಮಾಡಿರುವುದು ಅಷ್ಟೇ ಅಲ್ಲ. ನಾವೇನು ಯೋಜನೆಗಳನ್ನು ಮಾಡಿದ್ದೇವೆ ಅನ್ನೋದರ ಕಾಪಿನೂ ನಮ್ಮಲ್ಲಿದೆ ಅಂತ ಕಿಡಿಕಾರಿದ್ರು.

    ಪ್ರತೀ ರೈತ ಯಾರು ಹಿಂದೆ ಸಾಲ ತೀರಿಸಿ ಮತ್ತೆ ಹೊಸದಾಗಿ ಸಾಲ ತೆಗೆದುಕೊಂಡಿದ್ದಾರೋ ಅವನ ಖಾತೆಗೂ 25 ಸಾವಿರಗಳನ್ನು ಹಾಕಲು ಕಾರ್ಯಕ್ರಮ ಕೊಟ್ಟಿದ್ದೇವೆ. ಇದು ನಾವು ಹೇಳದೇ ಇರುವಂತಹ ವಿಚಾರವಾಗಿದೆ. ಇದು ಪಾಪ ಬಿಜೆಪಿ ನಾಯಕರುಗಳಿಗೆ ಗೊತ್ತಿಲ್ಲ. ಓದಬೇಕಾದ್ರೆ ಅವರಿಗೆ ಅರ್ಥ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಪಾಪ ಓದಬೇಕಾದ್ರೆ ಅವರು ಯಾವ ಲೋಕದಲ್ಲಿ ಇದ್ರೋ ಗೊತ್ತಿಲ್ಲ ಅಂತ ಬಿಜೆಪಿ ವಿರುದ್ಧ ಗರಂ ಆದ್ರು.

  • ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

    ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

    ಬೆಂಗಳೂರು: 2018-19ನೇ ಸಾಲಿನ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವನ್ನು ಜಿಎಸ್‍ಟಿ ನಷ್ಟ ಪರಿಹಾರ ಸೇರಿದಂತೆ 2017-2018ನೇ ಸಾಲಿನ ಪರಿಷ್ಕøತ ಅಂದಾಜು ಮೀರಿ ಶೇ.16.25 ರ ಹೆಚ್ಚಳದೊಂದಿಗೆ ಸಾಲಿನ ಪರಿಷ್ಕøತ ಅಂದಾಜು ಮೀರಿ ಶೇ. 16.25ರ ಹೆಚ್ಚಳದೊಂದಿಗೆ 1,06,621 ಕೋಟಿ ರೂ.ಗಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

    ತೆರಿಗೆಯೇತರ ರಾಜಸ್ವಗಳಿಂದ 8,181 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 36,215 ಕೋಟಿ ರೂ.ಗಳನ್ನು ಹಾಗೂ 15,379 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 47,134 ಕೋಟಿ ರೂ.ಗಳ ಒಟ್ಟು ಸಾಲಗಳು ಮತ್ತು 75 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 129 ಕೋಟಿ ರೂ.ಗಳ ಸಾಲಗಳ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ.

    ರಾಜ್ಯದ ಒಡೆತನದ ವಿವಿಧ ಮಂಡಳಿಗಳು, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲ ಸೃಜನೆಯ ಮೂಲಕ ಹಾಗೂ ತಮ್ಮ ಹಣಕಾಸು ಸಾಮಥ್ರ್ಯ ಮತ್ತು ಸ್ವಂತ ರಾಜಸ್ವಗಳ ಆಧಾರದ ಮೇಲೆ ಮಾಡಿದ ಸಾಲಗಳ ಮೂಲಕ 16,760 ಕೋಟಿ ರೂ.ಗಳನ್ನು ಕ್ರೋಢಿಕರಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ.

    ಒಂದು ರೂ. ಬಂದಿದ್ದು ಹೇಗೆ?
    ರಾಜ್ಯ ತೆರಿಗೆ- 49 ಪೈಸೆ
    ಸಾಲ- 21 ಪೈಸೆ
    ಕೇಂದ್ರ ತೆರಿಗೆ- 17 ಪೈಸೆ
    ಕೇಂದ್ರ ಸರ್ಕಾರದ ಅನುದಾನ – 7 ಪೈಸೆ
    ರಾಜ್ಯ ತೆರಿಗೆಯೇತರ ರಾಜಸ್ವ – 4 ಪೈಸೆ
    ಸಾರ್ವಜನಿಕ ಲೆಕ್ಕ – 2 ಪೈಸೆ

    ಒಂದು ರೂ. ಹೋಗಿದ್ದು ಹೇಗೆ?
    ಕೃಷಿ ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ -19 ಪೈಸೆ
    ಶಿಕ್ಷಣ -12 ಪೈಸೆ
    ಇತರ ಆರ್ಥಿಕ ಸೇವೆಗಳು -14 ಪೈಸೆ
    ಸಾಲ ತೀರಿಕೆ – 13 ಪೈಸೆ
    ಸಮಾಜ ಕಲ್ಯಾಣ -12 ಪೈಸೆ
    ಇತರ ಸಾಮಾಜಿಕ ಸೇವೆಗಳು- 5 ಪೈಸೆ
    ಆರೋಗ್ಯ -4 ಪೈಸೆ
    ನೀರು ಪೊರೈಕೆ ಮತ್ತು ನೈರ್ಮಲ್ಯ -3 ಪೈಸೆ
    ಇತರ ಸಾಮಾನ್ಯ ಸೇವೆಗಳು – 17 ಪೈಸೆ

  • ಕೊಳೆಯುವ ಹಣ್ಣುಗಳಿಗೆ ದಾಸ್ತಾನು ಕೇಂದ್ರ: ಬಜೆಟ್‍ನಲ್ಲಿ ತೋಟಗಾರಿಕೆ, ರೇಷ್ಮೆಗೆ ಸಿಕ್ಕಿದ್ದು ಏನು?

    ಕೊಳೆಯುವ ಹಣ್ಣುಗಳಿಗೆ ದಾಸ್ತಾನು ಕೇಂದ್ರ: ಬಜೆಟ್‍ನಲ್ಲಿ ತೋಟಗಾರಿಕೆ, ರೇಷ್ಮೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ದೋಸ್ತಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಕೃಷಿ ಮತ್ತು ತೋಟಗಾರಿಕೆಗೆ ಒಟ್ಟು 7,642 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.

    ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿ ಕ್ರಮಗಳನ್ನು ಅಳವಡಿಸಲು ಸಾಧ್ಯವಿರುತ್ತದೆ. ಈ ಹಿನ್ನೇಲೆಯಲ್ಲಿ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇಸ್ರರೇಲ್ ಮಾದರಿ ನೀರಾವರಿ ಒದಗಿಸಲು 150 ಕೋಟಿ ರೂ.ಗಳನ್ನು ನಿಗದಿಪಡಿಸಲಾಗುವುದು.

    ರಾಜ್ಯದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ, ರಸ್ತೆಗಳಲ್ಲಿ ಗುರುತಿಸಲಾಗುವ 10 ಸ್ಥಳಗಳಲ್ಲಿ ಎಪಿಎಂಸಿ ವತಿಯಿಂದ ಅಥವಾ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ಶುಲ್ಕ ಆದಾಯ ಹಂಚಿಕೆ ಮಾದರಿಯಲ್ಲಿ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ರೈತರು ತಾವು ಬೆಳೆದ ಸಿರಿಧಾನ್ಯಗಳು, ಸಾವಯವ ಉತ್ಪನ್ನಗಳು ಅಧಿಸೂಚಿತ ಮಾರಾಟ ಉತ್ಪನ್ನಗಳು (ಪ್ರಮುಖವಾಗಿ ಹಣ್ಣು ಮತ್ತು ತರಕಾರಿಗಳು) ನೇರವಾಗಿ ಗ್ರಾಹಕರಿಗೆ, ಮಾರಾಟಗಾರರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು.

    ಟೊಮಾಟೋ ಮತ್ತು ಮಾವಿನ ಹಣ್ಣಿನಂತಹ ಬೇಗನೆ ಕೊಳೆಯುವ ತೋಟಗಾರಿಕೆ ಬೆಳೆಗಳ ಮತ್ತು ಅವುಗಳ ಉಪ ಉತ್ಪನ್ನಗಳ ಸಂಸ್ಕರಣೆ ಮತ್ತು ದಾಸ್ತಾನು ಮಾಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

    ರಾಜ್ಯದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಇಂಡೋ-ಇಸ್ರೇಲ್ ಸಹಭಾಗಿತ್ವದಲ್ಲಿ ಆರು ಉತ್ಕøಷ್ಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಕೇಂದ್ರೀಕರಿಸಿ ಹೆಚ್ಚಿನ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು.

    ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಮಳೆ ಪ್ರಮಾಣ ತೀವ್ರತರವಾಗಿ ಕುಂಠಿತವಾಗಿದ್ದು, ತೆಂಗಿನ ಮರಗಳು ಒಣಗಿ ಹೋಗುತ್ತಿದ್ದು, ಅನುತ್ಪಾದಕವಾಗಿವೆ. ಅದರಲ್ಲೂ 2017 ನೇ ಸಾಲಿನ ಬೇಸಿಗೆಯಲ್ಲಿ ಬರಗಾಲದಿಂದ 44 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸಂಪೂರ್ಣ ಒಣಗಿ ಅನುತ್ಪಾದಕವಾಗಿವೆ. ಈ ಕಾರಣದಿಂದಾಗಿ ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ಒಂದು ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಉದ್ದೇಶಕ್ಕೆ 190 ಕೋಟಿ ರೂ.ಗಳನ್ನು ಒದಗಿಸಲಾಗುವುದು.

    ಸಂಪೂರ್ಣವಾಗಿ ಒಣಗಿರುವ ತೆಂಗಿನ ತೋಟಗಳಲ್ಲಿ ಪರ್ಯಾಯ ಬೆಳೆಗಳಾದ ಮಾವು, ಗೋಡಂಬಿ, ಹುಣಸೆ, ತೀತಾಫಲ, ನೇರಳೆ ಇತ್ಯಾದಿ ಬೆಳೆಗಳನ್ನು ಇಲಾಖೆಯ ವಿವಿಧ ಯೋಜನೆಯಡಿ ಬೆಳೆಯಲು ಪ್ರೋತ್ಸಾಹಿಸಲಾಗುವುದು.

    ರೇಷ್ಮೆಗೆ ಸಿಕ್ಕಿದ್ದು ಏನು?
    ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಲು ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಲಾಗುವುದು. ಇದಕ್ಕಾಗಿ 2018-19ನೇ ಸಾಲಿಗೆ ಒಂದು ಕೋಟಿ ರೂ. ಮೀಸಲು.

    ಕರ್ನಾಟಕ ರೇಷ್ಮೆ ನಾಡು. ವಿಶ್ವಬ್ಯಾಂಕ್ ನೆರವಿನೊಂದಿಗೆ 70ರ ದಶಕದಲ್ಲಿ ರೇಷ್ಮೆ ಕೃಷಿಗೆ ಪೂರಕವಾಗಲೆಂದು ಬೆಂಗಳೂರು ಸಮೀಪದ ತಲಘಟ್ಟಪುರದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಈ ಸಂಸ್ಥೆಯ ಪೂರ್ಣ ಪ್ರಮಾಣದ ಅನುಕೂಲ ಪಡೆಯಲು ತಜ್ಞರಿಂದ ಸಂಪೂರ್ಣ ಅಧ್ಯಯನ ನಡೆಸಿ ವರದಿ ಪಡೆದು ಈ ಸಂಸ್ಥೆಯ ಪುನಶ್ಚೇತನ ಮಾಡುವ ಉದ್ದೇಶಕ್ಕಾಗಿ 5 ಕೋಟಿ ರೂ.ಗಳನ್ನು ನೀಡಲಾಗುವುದು.

    ಸಾಂಪ್ರದಾಯಿಕ ರೇಷ್ಮೆ ವಸ್ತ್ರ ಉತ್ಪಾದನೆಯ ಜೊತೆಗೆ ರೇಷ್ಮೆ ಉಪ ಉತ್ನನ್ನಗಳಾದ ಉಗುರು ಪಾಲಿಷ್, ಲಿಪ್ ಸ್ಟಿಕ್ ಹಾಗೂ ರೇಷ್ಮೆ ಬಣ್ಣಗಳಿಗೆ ವಿಶ್ವವ್ಯಾಪಿ ಬೇಡಿಕೆಯಿದೆ. ಈ ಮಾರುಕಟ್ಟೆಯ ಅವಕಾಶವನ್ನು ಬಳಸಿಕೊಳ್ಳಲು ಅನುಕೂಲವಂತೆ ಕಾರ್ಯತಂತ್ರ ರೂಪಿಸಲು ಎರಡು ಕೋಟಿ ರೂ. ಗಳನ್ನು ನೀಡಲಾಗುವುದು.

    ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆ.ಎಸ್.ಐ.ಸಿ) ಘಟಕದ ಪುನಶ್ಚೇತನಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗುವುದು.

  • ಮೋದಿ ಫಿಟ್ನೆಸ್ ಚಾಲೆಂಜ್ ವಿಡಿಯೋಗೆ 35 ಲಕ್ಷ:  ತರೂರ್‌ಗೆ ತಿರುಗೇಟು ಕೊಟ್ಟ ರಾಥೋರ್

    ಮೋದಿ ಫಿಟ್ನೆಸ್ ಚಾಲೆಂಜ್ ವಿಡಿಯೋಗೆ 35 ಲಕ್ಷ: ತರೂರ್‌ಗೆ ತಿರುಗೇಟು ಕೊಟ್ಟ ರಾಥೋರ್

    ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಆರೋಪಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಪ್ರತಿಕ್ರಿಯಿಸಿ ಪ್ರಧಾನಿ ಅವರ ಫಿಟ್ನೆಸ್ ಚಾಲೆಂಜ್ ವಿಡಿಯೋ ಮಾಡಲು ಯಾವುದೇ ಹಣ ಖರ್ಚು ಮಾಡಿಲ್ಲ, ವಿಡಿಯೋವನ್ನು ಪ್ರಧಾನಿ ಕಚೇರಿಯ ವಿಡಿಯೋಗ್ರಾಫರ್ ಚಿತ್ರಿಸಿರುವುದು ಎಂದು ತಿರುಗೇಟು ನೀಡಿದ್ದಾರೆ.

    ಶಶಿ ತರೂರ್ ಅವರು, ಪ್ರಧಾನಿ ಮೋದಿ ಅವರ ಫಿಟ್ನೆಸ್ ಚಾಲೆಂಜ್ ವಿಡಿಯೋ ತಯಾರಿಸಲು ಸುಮಾರು 35 ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಸಚಿವ ರಾಥೋರ್ ಅವರು, ಶಶಿ ತರೂರ್ ಅವರೆ ನಿಮ್ಮ ಮಾತಿಗೆ ಆಶ್ಚರ್ಯವಾಗಿಲ್ಲ, ಸುಳ್ಳುತನ ನಿಮ್ಮ ಸತ್ಯದ ಬದಲಿ ಮುಖ. ಪ್ರಧಾನಿ ಅವರ ಫಿಟ್ನೆಸ್ ವಿಡಿಯೋಗೆ ಯಾವುದೇ ಹಣ ಖರ್ಚು ಮಾಡಿಲ್ಲ, ಅದನ್ನು ಪ್ರಧಾನಿ ಕಚೇರಿಯ ವಿಡಿಯೋಗ್ರಾಫರ್ ಚಿತ್ರಿಸಿದ್ದಾರೆ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಮೊದಲು ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಜಾಹಿರಾತಿಗೆ ಸುಮಾರು 20 ಕೋಟಿ ರೂ. ಖರ್ಚು ಮಾಡಿತ್ತು ಎಂದು ಟ್ವೀಟ್ ಮಾಡಿ ಆರೋಪಿಸಿದ್ದರು. ನಂತರ ಮೋದಿ ವಿಡಿಯೋಗೆ 35 ಲಕ್ಷ ಖರ್ಚು ಮಾಡಲಾಗಿದೆ ಎಂದು ಆರೋಪಿಸಿ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಹಾಕಿ ಟ್ವೀಟ್ ಮಾಡಿದ್ದರು.

    ಜೂನ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಹಾಗೂ ವ್ಯಾಯಾಮ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಮರುದಿನ ಮೋದಿಯವರು ಕರ್ನಾಟಕ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದರು. ಪ್ರಧಾನಿಯವರ ಫಿಟ್ನೆಸ್ ವಿಡಿಯೋ ಬಂದು ಬಹಳ ದಿನಗಳಾದ ಮೇಲೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಚಾಲೆಂಜ್‍ನನ್ನು ಮೋದಿಯವರು ಟ್ವಿಟ್ಟರ್ ನಲ್ಲಿ ಸ್ವೀಕರಿಸಿದ್ದರು.