Tag: ಎಚ್ ಡಿ ಕುಮಾರಸ್ವಾಮಿ

  • ಮುಡಾ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು: ಜಿಟಿಡಿ

    ಮುಡಾ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು: ಜಿಟಿಡಿ

    ಮಂಗಳೂರು: ಮುಡಾ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿ (Mangaluru) ಅವರು ಮಾಧ್ಯಮಗಳೊಂದಿಗೆ  ಮಾತನಾಡಿದರು.  ಈ ವೇಳೆ ಮುಡಾದಲ್ಲಿ ದೇವೇಗೌಡರ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ನೇಹಮಯಿ ಕೃಷ್ಣ ಬುದ್ಧಿವಂತ, ಅವನಲ್ಲಿ ಶಕ್ತಿ ಇದೆ. ಒಂದು ಎಕರೆ ಭೂಮಿ ಸ್ವಾಧೀನ ಪಡಿಸಿ ದುಡ್ಡಿನ ಪರಿಹಾರ ನೀಡಿದ್ರೆ ಒಂದು ಸೈಟ್ ಕೊಡ್ತಾರೆ. ಆ ಜಮೀನಿಗೆ ಪರಿಹಾರ ಕೊಡದೇ ಇದ್ರೆ 50:50 ನಲ್ಲಿ ಸೈಟ್ ಕೊಡಬೇಕು. ರೈತರ ಜಮೀನಿಗೆ ಇದನ್ನು ಕಾನೂನು ಬದ್ಧವಾಗಿ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಬೈಡನ್ ರೀತಿ ಮೋದಿ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

    ಮುಡಾ ಪಡೆದಿರುವ ಜಮೀನಿಗೆ 50:50 ಸೈಟ್ ಕೊಡಲೇಬೇಕು. ಕೊಡುವ ಪ್ರಕ್ರಿಯೆಯಲ್ಲಿ ತಪ್ಪಾಗಿದ್ರೆ ಶಿಕ್ಷೆ ಅನುಭವಿಸುತ್ತಾರೆ. ನನ್ನ ಸಂಬಂಧಿಯೇ ಆಗಲಿ, ಯಾರೇ ಆಗಲಿ ಶಿಕ್ಷೆಯಾಗಬೇಕು. ಭೂಮಿ ನೀಡಿದ ರೈತನಿಗೆ 50:50ನಲ್ಲಿ ಸೈಟ್ ಕೊಡಲೇಬೇಕು. ಹೀಗೆ ಮಾಡುವ ಸಂದರ್ಭದಲ್ಲಿ ಕೆಲವು ನ್ಯೂನತೆಗಳಾಗಿದೆ. ರೈತರಿಗೆ ಅಧಿಕೃತವಾಗಿ 50:50 ಕೊಡೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ. 50:50 ಕೊಡೋದ್ರಲ್ಲಿ ದುರುಪಯೋಗ ಆಗಿದ್ರೆ ಅವರಿಗೆ ಶಿಕ್ಷೆಯಾಗಬೇಕು. ಕಾನೂನು ಉಲ್ಲಂಘನೆ ಆಗಿದ್ರೆ ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

    ವಿರೋಧ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ಕೋರ್ ಕಮಿಟಿ ಮೀಟಿಂಗ್ ಕರೆದಿದ್ದರು. ನಾನೂ ಪಬ್ಲಿಕ್ ಅಕೌಂಟ್ಸ್ ಕಮಿಟಿ ಟೂರ್ ಹೋಗಿದ್ದೆ. ಆ ಸಂದರ್ಭದಲ್ಲಿ ಮೀಟಿಂಗ್ ಕರೆದು ನನ್ನ ಬಿಟ್ಟು ನಾಯಕನ ಆಯ್ಕೆ ಮಾಡಿದ್ರು. ನಿಖಿಲ್ ಕುಮಾರಸ್ವಾಮಿ ಮೈಸೂರಿಗೆ ಬಂದಾಗ ಕರೆದಿದ್ದರು. ಆ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಸಾ.ರಾ ಮಹೇಶ್ ಇನ್ನು ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ದೇವೆಗೌಡ್ರು ಇಲ್ಲ. ಇನ್ನು ನಾನೇ ಬಿ.ಫಾರಂ ಕೊಡೋದೆಂದು ಭಾಷಣ ಮಾಡಿದ್ದರು. ಆಗ ನಿಖಿಲ್ ಕುಮಾರಸ್ವಾಮಿ ಬಂದು ಕ್ಷಮಿಸಿ ತಪ್ಪಾಗಿ ಭಾಷಣ ಮಾಡಿದ್ದಾರೆ ಎಂದು ಹೇಳಿದರು. ನಾನು ಪಕ್ಷ ಕಟ್ಟುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ಯಾಕೇ ನನ್ನನ್ನು ಬಿಟ್ಟಿದ್ದಾರೆಂದು ಅವರೇ ಹೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ತಿಮ್ಮಸಂದ್ರ ವಕ್ಫ್‌ ಆಸ್ತಿ ಪ್ರಕರಣ – ರೈತರಿಗೆ ಭೂಮಿ ಮಂಜೂರು ಆಗಿರೋ ದಾಖಲೆಗಳಿಲ್ಲ ಎಂದ ಡಿಸಿ

    ಚನ್ನಪಟ್ಟಣ (Channapatna) ಉಪಚುನಾವಣಾ ಪ್ರಚಾರದಲ್ಲಿ ತಾವು ಹೊರಗುಳಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಸಹ ನನ್ನನ್ನು ಚುನಾವಣೆಗೆ ಬನ್ನಿ ಎಂದು ಕರೆದಿಲ್ಲ. ಕೋರ್ ಕಮಿಟಿ ಅಧ್ಯಕ್ಷನಾಗಿದ್ದರು ಸಹ ಪ್ರಚಾರದ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದಿದ್ದಾರೆ. ದೂರವಾಣಿ ಮೂಲಕನೂ ನನ್ನ ಕರೆದಿಲ್ಲ, ಹಾಗಾಗಿ ನಾನು ಭಾಗವಹಿಸಿಲ್ಲ. ಕೋರ್ ಕಮಿಟಿ ಅಧ್ಯಕ್ಷನನ್ನು ಬಿಟ್ಟೇ ಮೀಟಿಂಗ್ ಮಾಡಿದ್ದಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆಂದು ಅವರೇ ಹೇಳಬೇಕು. ಚಾಮುಂಡಿ ಬೆಟ್ಟದಲ್ಲಿ ಅಂತದ್ದೇನು ತಪ್ಪು ಮಾತನಾಡಿಲ್ಲ. ಸಿದ್ದರಾಮಯ್ಯನವರು 135 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಎಚ್.ಡಿ ಕುಮಾರಸ್ವಾಮಿ 2ಲಕ್ಷ ಲೀಡ್‌ನಲ್ಲಿ ಗೆದ್ದು ಎಂಪಿ ಆಗಿದ್ದಾರೆ. ಅಶೋಕ್ ಅವರು ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ತಿಳಿಸಿದರು.

    ಕೇಂದ್ರದಲ್ಲೂ ಕೆಲವರ ಮೇಲೆ ಎಫ್‌ಐಆರ್ ಆಗಿದೆ. ಇಲ್ಲಿ ಯಾರ ಮೇಲೆ ಎಫ್ಐಆರ್ ಆಗಿದೆ ಎಂದು ಗೊತ್ತು. ನ್ಯಾಯಾಲಯದ ತೀರ್ಪು ಬಂದು ತಪ್ಪಿತಸ್ಥ ಅಂದ ಮೇಲೆ ಅವರಿಗೆ ಶಿಕ್ಷೆ ಆಗುತ್ತೋ, ರಾಜೀನಾಮೆ ಕೊಡಬೇಕೋ, ಜೈಲಿಗೆ ಹಾಕಬೇಕೋ ಅದನ್ನ ಮಾಡಬೇಕು. ಅದು ಬಿಟ್ಟು ಕಾಂಗ್ರೆಸ್ ಮಂತ್ರಿಗಳು ಪ್ರತೀ ದಿವಸ ಕುಮಾರಸ್ವಾಮಿ ರಾಜೀನಾಮೆ ಕೊಡಿ ಎಂದು ಕೇಳೋದು, ಬಿಜೆಪಿ ದಳದವರು ಸೇರಿ ಸಿದ್ದರಾಮಯ್ಯ (Siddaramaih) ರಾಜೀನಾಮೆ ಕೊಡಿ ಎಂದು ಕೇಳೋದು ಇದು ಯಾವುದು ಸರಿಯಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೆ ಯಾರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಕೊಟ್ರೆ ಇಡೀ ವಿಧಾನಸೌಧದಲ್ಲಿರುವ 75% ಶೇಕಡಾ ರಾಜೀನಾಮೆ ಕೊಡಬೇಕಾಗುತ್ತದೆ. ಕೇಂದ್ರ ರಾಜ್ಯದಲ್ಲಿ ಬಹಳಷ್ಟು ಜನ ಇದ್ದಾರೆ. ಇಷ್ಟು ಹೇಳಿದ್ದೆ ದೊಡ್ಡ ಅಪರಾಧ ಎಂದು ತಿಳ್ಕೊಂಡ್ರೆ ನಾನೇನು ಮಾಡೋಕೆ ಆಗುತ್ತೆ ಇಷ್ಟು ಹೇಳಿದ್ದೆ ದೊಡ್ಡ ಅಪರಾಧ ಅಂತಾ ತಿಳ್ಕೊಂಡ್ರೆ ನಾನೇನು ಮಾಡೋಕೆ ಆಗುತ್ತೆ ಎಂದು ಹರಿಹಾಯ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 2,021 ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಮಾರ್ಪಾಡು

    ಕೇಂದ್ರ ಸಚಿವ ಕುಮಾರಸ್ವಾಮಿ (HDKumaraswamy) ಅವರನ್ನು ಕರಿಯಾ ಎಂದು ಸಚಿವ ಜಮೀರ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿ, ಜಮೀರ್ ಕುಮಾಸ್ವಾಮಿಗೆ ಆ ರೀತಿ ಮಾತನಾಡಬಾರದಿತ್ತು ಎಂಬ ಅರಿವಾಗಿದೆ ಹೀಗಾಗಿ ಕ್ಷಮೆಯನ್ನು ಸಹ ಕೇಳಿದ್ದಾರೆ. ಯಾವುದೇ ವ್ಯಕ್ತಿ ಸಚಿವರಾದ ಮೇಲೆ ಆ ಸಚಿವ ಸ್ಥಾನದ ಗೌರವವನ್ನು ಕಾಪಾಡೋದು ಅವರೆಲ್ಲರ ಕರ್ತವ್ಯ ಯಾರೂ ಕೂಡಾ ಆ ರೀತಿ ಮಾತನಾಡಬಾರದು ಎಂದರು. ಇದನ್ನೂ ಓದಿ: ಸಚಿವ ಕೆ.ಜೆ ಜಾರ್ಜ್ ಪುತ್ರನ ಅರಣ್ಯದೊಳಗಿನ ಜಮೀನಿಗೆ ದಾರಿ ಬಂದ್‌ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

  • ಬಡತನ, ನಿರುದ್ಯೋಗ, ಸಂಪತ್ತಿನ ಅಸಮಾನತೆ ಅಪಾಯಕಾರಿಯಾಗುತ್ತಿದೆ – RSS ಬೇಸರ

    ಬಡತನ, ನಿರುದ್ಯೋಗ, ಸಂಪತ್ತಿನ ಅಸಮಾನತೆ ಅಪಾಯಕಾರಿಯಾಗುತ್ತಿದೆ – RSS ಬೇಸರ

    ನವದೆಹಲಿ/ಬೆಂಗಳೂರು: ದೇಶದ ಆರ್ಥಿಕ ಸ್ಥಿತಿಗೆ ಸ್ವತಃ ಆರ್‌ಎಸ್‌ಎಸ್ (RSS) ಕಳವಳ ವ್ಯಕ್ತಪಡಿಸಿದೆ.

    ದೆಹಲಿಯಲ್ಲಿ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಎಸ್‌ಎಸ್ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಹೊಸಬಾಳೆ, ದೇಶದಲ್ಲಿ ಇಂದಿಗೂ 20 ಕೋಟಿಗೂ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. 4 ಕೋಟಿ ನಿರುದ್ಯೋಗ (Unemployment) ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ಕ್ಯಾನ್‌ಮಾಡಿ `ಸಿದ್ರಾಮುಲ್ಲನ ಉಗ್ರಭಾಗ್ಯ’ ಲೀಲೆ ನೋಡಿ – PayCM ಅಭಿಯಾನಕ್ಕೆ ಬಿಜೆಪಿ ಟಕ್ಕರ್

    ದೇಶದ ಶೇ.20ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿದೆ. ದೇಶದ ಶೇ.50ರಷ್ಟು ಮಂದಿ ಕೈಯಲ್ಲಿರೋದು ಶೇ.13ರಷ್ಟು ಸಂಪತ್ತು ಅಷ್ಟೇ. ದೇಶದ ಪಾಲಿಗೆ ಈ ಬಡತನ, ನಿರುದ್ಯೋಗ, ಸಂಪತ್ತಿನ ಅಸಮಾನತೆ ಅಪಾಯಕಾರಿಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಹೊಸಬಾಳೆಯವರ ಈ ಮಾತು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ರೆ, ವಿಪಕ್ಷಗಳಿಗೆ ಅಸ್ತ್ರ ಒದಗಿಸಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್ (Digvijaya Singh), ಇದು ಭಾರತ್ ಜೋಡೋ ಯಾತ್ರೆಯ ಪರಿಣಾಮ ಎಂದು ಕುಟುಕಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿ, ಇದೇ ಭಾರತದ ಸದ್ಯದ ಸ್ಥಿತಿ ಗರಿ. ಈಗ ಅಚ್ಚೇದಿನದ ಅಸಲಿಯತ್ತಿನ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಬಿಜೆಪಿ ಸರ್ಕಾರ ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದಿದ್ದಾರೆ. ಆದರೆ ಬಿಜೆಪಿ ಮಾತ್ರ ಹೊಸಬಾಳೆಯವರ ಮಾತನ್ನು ಸಮರ್ಥಿಸಿದೆ. ಬಿಜೆಪಿಯ ಮೂಲ ಉದ್ದೇಶವೇ ಅಂತ್ಯೋದಯ. ಹಿಂದಿನ ಸರ್ಕಾರಗಳಿಂದ ಅಭಿವೃದ್ಧಿ ಕುಂಠಿತವಾಗಿತ್ತು. ನಮ್ಮ ಸರ್ಕಾರ ಅದನ್ನು ಹೋಗಲಾಡಿಸಿದೆ. ಮಧ್ಯವರ್ತಿಗಳ ಕಾಟ ತಪ್ಪಿಸಿದೆ ಎಂದು ಶಾಸಕ ಪಿ.ರಾಜೀವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್‌ ವೇಳೆ ಅಬ್ಬರಿಸಿ ಬೊಬ್ಬಿರಿದ ಸರ್ಕಾರದ ಆಕ್ಸಿಜನ್ ಘಟಕ, ವೆಂಟಿಲೇಟರ್ ಧೂಳು ತಿನ್ನುತ್ತಿದೆ: ಎಚ್‍ಡಿಕೆ

    ಕೋವಿಡ್‌ ವೇಳೆ ಅಬ್ಬರಿಸಿ ಬೊಬ್ಬಿರಿದ ಸರ್ಕಾರದ ಆಕ್ಸಿಜನ್ ಘಟಕ, ವೆಂಟಿಲೇಟರ್ ಧೂಳು ತಿನ್ನುತ್ತಿದೆ: ಎಚ್‍ಡಿಕೆ

    ಬೆಂಗಳೂರು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ ಮತ್ತು ಹೋರಾಟದಲ್ಲಿ ನಮ್ಮ ಪಕ್ಷವೂ ನಿಲ್ಲುತ್ತದೆ. ವರ್ಷಗಳ ಕಾಲದ ನ್ಯಾಯಯುತವಾದ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಬೇಕು ಎಂದು ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಅಭಿಯಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಬೆಂಬಲ ವ್ಯಕ್ತ ಪಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕೋವಿಡ್ ವೇಳೆ ಎಲ್ಲ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದ ಸರ್ಕಾರ, ಕೋವಿಡ್ ಇಳಿದ ಮೇಲೆ ತಣ್ಣಗಾಗಿದೆ. ಆಕ್ಸಿಜನ್ ಘಟಕ, ವೆಂಟಿಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆ ಧೂಳು ತಿನ್ನುತ್ತಿವೆ. ಕೆಲವೆಡೆ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂಥ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಸುಧಾಕರ್ ಅವರೇ ಖುದ್ದು ಕ್ರಮ ವಹಿಸಬೇಕು ಎಂಬುದು ನನ್ನ ಆಗ್ರಹ. ಇದನ್ನೂ ಓದಿ: ಜಮೀರ್ ಅಹ್ಮದ್‍ಖಾನ್ ಸಿಎಂ ಆಗ್ತಾರೆ – ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳಿಂದ ಭವಿಷ್ಯ

    ರಾಜ್ಯದಲ್ಲಿ ಇನ್ನೆಷ್ಟು ಅಂಬುಲೆನ್ಸ್ ದುರಂತಗಳು ಆಗಬೇಕು? ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು? ಶಿರೂರು ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಿಂದ ರಾಜ್ಯ ಬಿಜೆಪಿ ಸರ್ಕಾರ ಕಣ್ತೆರೆಯಲೇಬೇಕು. ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಇರುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಸರ್ಕಾರದ ಹೊಣೆ. ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಟ್ವೀಟ್ ಮಾಡಿ ಯಾವ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲವೋ ಕೂಡಲೇ ಅಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಎಚ್‍ಡಿಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ – ಸುಪ್ರೀಂಕೋರ್ಟ್‍ನಲ್ಲಿ ಇಂದು ವಿಚಾರಣೆ

    Live Tv
    [brid partner=56869869 player=32851 video=960834 autoplay=true]

  • ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿ – ಶಾಸಕರು ರೆಸಾರ್ಟ್‌ಗೆ ಶಿಫ್ಟ್?

    ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿ – ಶಾಸಕರು ರೆಸಾರ್ಟ್‌ಗೆ ಶಿಫ್ಟ್?

    ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ ತಲುಪಿದೆ. ಇದೇ ತಿಂಗಳ ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಜೆಡಿಎಸ್ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.

    ಸಾಂದರ್ಭಿಕ ಚಿತ್ರ

    ಜೆಡಿಎಸ್‌ನ ಎಲ್ಲ ಶಾಸಕರನ್ನು ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಮಾಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ವೇಳೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ರೆಸಾರ್ಟ್‌ಗೆ ಬರಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಕೈ, ದಳದಲ್ಲಿ ಗೊಂದಲ – ಇಬ್ಬರ ಜಗಳದ ಲಾಭ ಪಡೆಯುವ ನಿರೀಕ್ಷೆಯಲ್ಲಿ BJP

    ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಇಂದು ಮತ್ತು ನಾಳೆ ಎರಡು ದಿನ ರೆಸಾರ್ಟ್‌ನಲ್ಲೇ ಉಳಿಯಲಿದ್ದು, ರಾಜ್ಯಸಭೆ ಚುನಾವಣೆ ದಿನದಂದು ನೇರವಾಗಿ ಮತದಾನಕ್ಕೆ ಹಾಜರಾಗಲು ನಿರ್ಧಾರಿಸಲಾಗಿದೆ.

    ರಾಜ್ಯಸಭೆ ಚುನಾವಣೆಯಲ್ಲಿ 4ನೇ ಅಭ್ಯರ್ಥಿಯ ಗೆಲುವಿಗೆ ಮೂರು ಪಕ್ಷಗಳೂ ಕಸರತ್ತು ನಡೆಸುತ್ತಿವೆ. ಬಿಜೆಪಿ ಸಹ ಜೆಡಿಎಸ್, ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ. ಇದನ್ನೂ ಓದಿ: ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್

    HDD AND SIDDU

    ಜೆಡಿಎಸ್‌ ಪಾಳಯದಲ್ಲೂ ಆತಂಕ ಮುಂದುವರಿದಿದ್ದು, ಶತಾಯಗತಾಯ ಕಾಂಗ್ರೆಸ್ ಬೆಂಬಲ ಪಡೆದು ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕೆಂದು ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರ ಮನವೊಲಿಸುವ ಪ್ರಯತ್ನಗಳೂ ನಡೆದಿತ್ತು. ಇದೀಗ ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿ ಶುರುವಾಗಿದ್ದು, ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ವರಿಷ್ಠರು ಮುಂದಾಗಿದ್ದಾರೆ.

  • ರಾಜ್ಯಸಭೆ ಚುನಾವಣೆ: ಕೈ, ದಳದಲ್ಲಿ ಗೊಂದಲ – ಇಬ್ಬರ ಜಗಳದ ಲಾಭ ಪಡೆಯುವ ನಿರೀಕ್ಷೆಯಲ್ಲಿ BJP

    ರಾಜ್ಯಸಭೆ ಚುನಾವಣೆ: ಕೈ, ದಳದಲ್ಲಿ ಗೊಂದಲ – ಇಬ್ಬರ ಜಗಳದ ಲಾಭ ಪಡೆಯುವ ನಿರೀಕ್ಷೆಯಲ್ಲಿ BJP

    ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ ಬಂದು ನಿಂತಿದೆ. 4ನೇ ಅಭ್ಯರ್ಥಿಯ ಗೆಲುವಿಗೆ ಮೂರೂ ಪಕ್ಷಗಳಲ್ಲೂ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ಈ ನಡುವೆ ಜೆಡಿಎಸ್‌ನ ಕೆಲ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಚುನಾಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೇಳಿಕೊಂಡಿರುವುದು ಕುತೂಹಲ ಮೂಡಿಸಿದೆ.

    HDD AND SIDDU

    ರಾಜ್ಯಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳೂ 4ನೇ ಅಭ್ಯರ್ಥಿಯ ಗೆಲುವಿಗೆ ರಣತಂತ್ರ ರೂಪಿಸುತ್ತಿವೆ. ಜೆಡಿಎಸ್ ಪಾಳಯದಲ್ಲಿ ಆತಂಕ, ಗೊಂದಲ ಮುಂದುವರಿದಿದೆ. ಶತಾಯಗತಾಯ ಕಾಂಗ್ರೆಸ್ ಬೆಂಬಲ ಪಡೆದು ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕೆಂದು ಜೆಡಿಎಸ್ ಕಸರತ್ತು ನಡೆಸ್ತಿದೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲವನ್ನೂ ಕೋರಲಾಗಿದೆ. ನಿಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಪಡೆದು ನಮ್ಮ ಅಭ್ಯರ್ಥಿಗೆ ಗೆಲುವಿಗೆ ಸಹಕಾರ ಕೊಡುವಂತೆ ಜೆಡಿಎಸ್ ನಾಯಕರಾದ ಟಿ.ಎ.ಶರವಣ ಮತ್ತು ಬಿ.ಎಂ.ಫಾರೂಕ್ ಮನವಿ ಮಾಡಿಕೊಂಡಿದಾರೆ. ಆದ್ರೆ ಸಿದ್ದರಾಮಯ್ಯ ಯಾವುದೇ ಭರವಸೆ ಕೊಡದೇ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತಿಳಿಸೋದಾಗಿ ಹೇಳಿ ಕಳಿಸಿದ್ದಾರೆ. ಇದನ್ನೂ ಓದಿ: ನಮಗೆ ಬೆಂಬಲ ನೀಡಿ – ಸಿದ್ದು ಬಳಿ JDS ನಾಯಕರ ಮನವಿ

    ಇತ್ತ ಮೂರೂ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯದಿದ್ರೆ ಜೆಡಿಎಸ್‌ಗೆ ಅಡ್ಡ ಮತದಾನದ ಆತಂಕವೂ ಕಾಡ್ತಿದೆ. ಕಾಂಗ್ರೆಸ್ ಸಂಪರ್ಕದಲ್ಲಿರುವ ಜೆಡಿಎಸ್ ನ ಕೆಲ ಶಾಸಕರು ಅಡ್ಡ ಮತದಾನ ಮಾಡೋ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗ್ತಿದೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ನಾಳೆ ರಾತ್ರಿ ಸಿಂಗಾಪುರದಿಂದ ವಾಪಸ್ಸಾಗ್ತಿದ್ದಾರೆ. ಎಚ್‌ಡಿಕೆ ವಾಪಸ್ಸಾದ ಬಳಿಕ ಯಾವ ರಣತಂತ್ರ ಹೆಣೀತಾರೆ, ತಮ್ಮಪಕ್ಷದ ಶಾಸಕರನ್ನ ಹೇಗೆ ಕಟ್ಟಿಹಾಕ್ತಾರೆ ಅನ್ನೋ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ಬೇಸತ್ತಿದ್ದಾರೆ – ಎಚ್ಚರ ಡಿಕೆಶಿ ಎಚ್ಚರ: ಬಿಜೆಪಿ

    ಬಿಜೆಪಿ ಪಾಳಯದ ಲೆಕ್ಕಾಚಾರಗಳೇ ಬೇರೆ. ಕಾಂಗ್ರೆಸ್ ಪ್ರತಿಷ್ಠೆಗೆ ಎದಿರೇಟು ಕೊಡಲು ಮೂರನೇ ಅಭ್ಯರ್ಥಿ ಇಳಿಸಿದ ಬಿಜೆಪಿ ಈಗ ತನ್ನ ತಂತ್ರ ಬದಲಾಯಿಸಿಕೊಂಡಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮಧ್ಯೆ ಮೈತ್ರಿ ಆಗಲಿ, ಆಗದಿರಲಿ ತನ್ನ ಅಭ್ಯರ್ಥಿಯನ್ನ ಕಣದಿಂದ ಹಿಂದಕ್ಕೆ ತೆಗೆಯದಿರಲು ಬಿಜೆಪಿ ನಿರ್ಧರಿಸಿದೆ. ಕಾಂಗ್ರೆಸ್ – ಜೆಡಿಎಸ್ ಜಟಾಪಟಿ ನಡುವೆ ತನ್ನ 3ನೇ ಅಭ್ಯರ್ಥಿ ಗೆಲ್ಲುವ ವಿಶ್ವಾಸದಲ್ಲಿದೆ ಬಿಜೆಪಿ.

    ಮೂರೂ ಪಕ್ಷಗಳಲ್ಲಿ ನಾಳೆಯೂ ಒಂದಷ್ಟು ವಿದ್ಯಮಾನಗಳು ನಡೆಯಲಿದ್ದು, ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಸಲ ರಾಜ್ಯಸಭೆ ಚುನಾವಣಾ ಕಣ ಸಾಕಷ್ಟು ರೋಚಕತೆ ಪಡೆದುಕೊಂಡಿದೆ.

  • ಡಿಕೆಶಿ ಸಾಮಾನ್ಯ ವ್ಯಕ್ತಿಯಲ್ಲ – KPSCಯಲ್ಲಿ ಕಾಂಗ್ರೆಸ್‍ನಿಂದ ದೊಡ್ಡ ಭ್ರಷ್ಟಾಚಾರ: ಎಚ್‍ಡಿಕೆ ಬಾಂಬ್

    ಡಿಕೆಶಿ ಸಾಮಾನ್ಯ ವ್ಯಕ್ತಿಯಲ್ಲ – KPSCಯಲ್ಲಿ ಕಾಂಗ್ರೆಸ್‍ನಿಂದ ದೊಡ್ಡ ಭ್ರಷ್ಟಾಚಾರ: ಎಚ್‍ಡಿಕೆ ಬಾಂಬ್

    ಬೆಂಗಳೂರು: ಸರ್ಕಾರವನ್ನು ಪಿಎಸ್‍ಐ ಹಗರಣದಲ್ಲಿ ಇಕ್ಕಟಿಗೆ ಸಿಲುಕಿಸುತ್ತಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಾಮಾನ್ಯ ವ್ಯಕ್ತಿಯಲ್ಲ. ಬೇರೆ ಅವರ ಮೇಲೆ ಆರೋಪ ಮಾಡುವ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್‍ನದ್ದು ದೊಡ್ಡ ಭ್ರಷ್ಟಾಚಾರವೇ ಇದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮತ್ತು ಕುಟುಂಬ ಸಾಮಾನ್ಯ ಅಲ್ಲ. ಅವರು ಮಾಡಿರುವ ಹಣ ಮಾಧ್ಯಮಗಳು ಹೇಳ್ತಿರೋದು ಅಲ್ಪಪ್ರಮಾಣದಲ್ಲಿ ಮಾತ್ರ. ಯಾರೋ ಪುಣ್ಯಾತ್ಮರು ಈಗ ಹೊರಗೆ ಬಂದು ಆರೋಪ ಮಾಡಿದ್ದಾರೆ. ಅವ್ರ ಭ್ರಷ್ಟಾಚಾರ ದೊಡ್ಡದಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನರ್ಸ್ ಸರ್ಟಿಫಿಕೇಟ್ ದಂಧೆಯಲ್ಲಿ ಅಶ್ವಥ್ ನಾರಾಯಣ್ ಭಾಗಿಯಾಗಿದ್ದಾರೆ: ಕುಮಾರಸ್ವಾಮಿ

    ಕಾಂಗ್ರೆಸ್ ಸರ್ಕಾರ ಕೆಪಿಎಸ್‍ಸಿಯಲ್ಲಿ ದೊಡ್ಡ ದೊಡ್ಡ ಹಗರಣ ನಡೆದಿದೆ. ಸದಸ್ಯರ ನೇಮಕಾತಿ ಯಲ್ಲಿ ಅಕ್ರಮ ಆಗಿದೆ. ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್‍ಸಿಯನ್ನು ಓಪನ್ ಮಾರ್ಕೆಟ್ ಮಾಡಿದ್ದರು. ಎಸಿ, ಡಿವೈಎಸ್‍ಪಿಗೆ ಇಷ್ಟು ಹಣ ಅಂತ ನಿಗದಿ ಮಾಡಿ ಓಪನ್ ಆಗಿ ಭ್ರಷ್ಟಾಚಾರ ಮಾಡುತ್ತಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್‍ಸಿ ಅಧ್ಯಕ್ಷರ ನೇಮಕದಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಅಧ್ಯಕ್ಷರು, ಸದಸ್ಯರು ಅಭ್ಯರ್ಥಿಗಳ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಇವತ್ತು ಆ ಹಣ ವಾಪಸ್ ಆಗಿಲ್ಲ. ನನ್ನ ಬಳಿ ಬಂದು ಹಣ ಕೊಡಿಸಿ ಅಂತ ಅನೇಕರು ಕೇಳಿಕೊಂಡಿದ್ದಾರೆ ಅಂತ ಆರೋಪ ಹೊರಿಸಿದರು.

    ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಹೀಗಿರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ. ಕಾಂಗ್ರೆಸ್‍ನ ಭ್ರಷ್ಟಾಚಾರವನ್ನು ಬಿಜೆಪಿ ಮುಂದುವರೆಸಿಕೊಂಡು ಬಂದಿದೆ. ಡ್ರಗ್ಸ್ ಕೇಸ್, ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ಎಲ್ಲದರಲ್ಲೂ ಅಕ್ರಮ ಆಗಿದೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ತಾಕತ್ತಿದ್ರೆ ನನ್ನನ್ನು ಅರೆಸ್ಟ್ ಮಾಡಲಿ: ಪ್ರಿಯಾಂಕ್ ಖರ್ಗೆ

  • JDS ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?: BJP ಪ್ರಶ್ನೆ

    JDS ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?: BJP ಪ್ರಶ್ನೆ

    ಬೆಂಗಳೂರು: ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಈ ಕುರಿತಾಗಿ ಆಢಳಿತ ಸರ್ಕಾರ ಖಾರವಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?: ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಿದ್ದ ಎಂದು ಮಾಜಿ ಲಕ್ಕಿಡಿಪ್ ಸಿಎಂ ಎಚ್‍ಡಿಕೆ ಘೋಷಿಸಿದ್ದಾರೆ. ಜಿಲ್ಲಾಪಂಚಾಯತ್, ವಿಧಾನ ಪರಿಷತ್ ಚುನಾವಣೆಗೂ ಕುಟುಂಬಸ್ಥರನ್ನೇ ಆಯ್ಕೆ ಮಾಡುವ ಜೆಡಿಎಸ್, ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುವ ಮಾತು ಕಾರ್ಯಸಾಧುವೇ? ಕುಮಾರಸ್ವಾಮಿ ಅವರಲ್ಲಿ, ಕಣ್ಣೀರು ಮತ್ತು ಸುಳ್ಳು ಇದಕ್ಕೆ ಬರವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ 

    ಮಾಜಿ ಲಕ್ಕಿಡಿಪ್ ಸಿಎಂ ಎಚ್‍ಡಿಕೆ ಅವರೇ, ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾರೆ, ಯಾವ ಪಕ್ಷದಿಂದ ಎಂದು ಮೊದಲು ಸ್ಪಷ್ಟಪಡಿಸಿಬಿಡಿ. ಏಕೆಂದರೆ ನೀವೇ ಅತಂತ್ರದ ಆಕಾಂಕ್ಷಿ ಜೆಡಿಎಸ್ ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ. ಇದನ್ನೂ ಓದಿ:  ಗೃಹ ಸಚಿವರು ವಿಲನ್ ರೋಲ್ ಮಾಡ್ತಿದ್ದಾರೋ, ಕಾಮಿಡಿ ರೋಲ್ ಮಾಡ್ತಿದ್ದಾರೋ ಗೊತ್ತಿಲ್ಲ: ಹೆಚ್‌ಡಿಕೆ

    ಜೆಡಿಎಸ್ ಪಕ್ಷದಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಮಾಜಿ ಲಕ್ಕಿ ಡಿಪ್ ಸಿಎಂ ಎಚ್‍ಡಿಕೆ ಅವರು ಸ್ಪಷ್ಟನೆ ನೀಡಬಹುದು. ಅದು ಹೆಸರಿಗೆ ಮಾತ್ರ ಎಂದು ಎಲ್ಲರಿಗೂ ತಿಳಿದಿದೆ. ನಿರ್ಧಾರ ಬರುವುದೆಲ್ಲಾ ಪದ್ಮನಾಭನಗರ ಹಾಗೂ ಬಿಡದಿ ತೋಟದ ಮನೆಯಿಂದ ಎಂಬುದು ಲೋಕ ಸತ್ಯ ರಬ್ಬರ್ ಸ್ಟ್ಯಾಂಪ್‍ಗಳ ಸೃಷ್ಟಿಯಲ್ಲಿ ನೀವು ಎತ್ತಿದ ಕೈ ಅಲ್ಲವೇ ? ಕುಮಾರಸ್ವಾಮಿ ವಿರುದ್ದ ಬಿಜೆಪಿ ಕಿಡಿಕಾರಿದೆ.

  • ಎಚ್‍ಡಿಕೆ ರಾಜಕೀಯ ಜೀವನವೇ ಒಂದು ಡ್ರಾಮಾ, ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ: ಬಿಜೆಪಿ ಕಿಡಿ

    ಎಚ್‍ಡಿಕೆ ರಾಜಕೀಯ ಜೀವನವೇ ಒಂದು ಡ್ರಾಮಾ, ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ: ಬಿಜೆಪಿ ಕಿಡಿ

    ಬೆಂಗಳೂರು: ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಕಿಡಿ ಕಾರಿದೆ.

    ಟ್ವೀಟ್‍ನಲ್ಲಿ ಏನಿದೆ?
    ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ವರಸೆ. ಯಾವ ವಿಚಾರದಲ್ಲಿ ತನ್ನ ಮತಬ್ಯಾಂಕ್ ಗಟ್ಟಿಯಾಗುತ್ತದೋ ಆ ವಿಚಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಜಾಯಮಾನ. ಕುಮಾರಸ್ವಾಮಿ ಅವರೇ, ಗಂಡಸ್ತನದ ಬಗ್ಗೆ ಮಾತನಾಡುವುದರಲ್ಲಿ “ಪುರುಷಾರ್ಥ” ಅಡಗಿದೆಯೇ? ಮಾನ್ಯ ಕುಮಾರಸ್ವಾಮಿ ಅವರೇ. ಇದನ್ನೂ ಓದಿ: ಯುಗಾದಿ ನಿಮ್ಮ ಜೀವನದಲ್ಲಿ ಉತ್ಸಾಹ, ಸ್ಪೂರ್ತಿ ತರಲಿ – ದೇಶದ ಜನತೆಗೆ ಮೋದಿ ವಿಶ್

    ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತು ನೆನಪಿಸಿಕೊಳ್ಳಿ. ನಿಮ್ಮ ಜಾತ್ಯತೀತ ನಡೆ ಎಂಬುದು ಅವಕಾಶವಾದದ ಪರಿಷ್ಕೃತ ರೂಪ. ಅಧಿಕಾರ ಅನುಭವಿಸಲು ಏನೂ ಬೇಕಾದರೂ ಮಾಡಲು ಸಿದ್ದವಾಗಿರುವವರು ನೀವು. ನಿಮ್ಮಿಂದ ಯಾವ ವ್ಯಕ್ತಿಯೂ, ಯಾವ ಸಂಘಟನೆಯೂ ಪಾಠ ಕಲಿಯಬೇಕಾಗಿಲ್ಲ. ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಇದನ್ನೂ ಓದಿ: ಕರ್ನಾಟಕ ನಮ್ಮದು, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ: ಎಚ್‌ಡಿಕೆ

    https://twitter.com/BJP4Karnataka/status/1510188538758938624

    ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ. ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್‍ಡಿಕೆ ಸರ್ಕಸ್ ಮಾಡುತ್ತಿದ್ದಾರೆ. ಕುರ್ಚಿಗಾಗಿ ಮಾತುಮುರಿದು ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ?.

  • ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

    ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

    ರಾಮನಗರ: ಯುಗಾದಿ ಹಬ್ಬದ ಸಂದರ್ಭದಲ್ಲಿ ಹಳ್ಳಿ ಜನರು ಇಸ್ಪೀಟು ಆಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಅವರಿಗೆ ಪೊಲೀಸರು ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳ್ಳಿಗಾಡಿನಲ್ಲಿ ಯುಗಾದಿ ಹಬ್ಬದ ವೇಳೆ ಎಲ್ಲರೂ ಮನೆಯಲ್ಲೇ ಇರುತ್ತಾರೆ. ರೈತರು ಹಬ್ಬದ ಮಾರನೇ ದಿನದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ಆ ಎರಡು ದಿನ ಇಸ್ಪೀಟು ಆಡಿ ಸಂತಸ ಪಡುತ್ತಾರೆ. ಇದು ಸಂಪ್ರದಾಯವಾದ್ದರಿಂದ ಪೊಲೀಸರು ಜನರಿಗೆ ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ವಿಚಾರವಾಗಿ ʼಸುಳ್ಳಿನಯಾತ್ರೆʼ ಹೊರಟವರ ಜಾತಕ ಬೆತ್ತಲಾಗ್ತಿದೆ: ಹೆಚ್‌ಡಿಕೆ 

    HDK

    ಇದೇ ವೇಳೆ ಹಲಾಲ್ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಇನ್ನಾವುದೇ ಸಮಾಜವು ಪರಸ್ಪರ ಬಾಂಧವ್ಯದಿಂದ ಇರುವ ವಾತಾವರಣ ಇತ್ತು. ಕರಾವಳಿ ಭಾಗದಲ್ಲಿ ಮಾತ್ರ ಕೆಲವರು ಅವರೇ ವಿವಾದ ಹುಟ್ಟುಹಾಕಿಕೊಂಡಿದ್ದರು. ಆದರೆ ಇಂದು ಪ್ರತಿದಿನ ಹಿಂದುತ್ವದ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ ಸಮಾಜದ ಶಾಂತಿ ಕದಡುವ ಕೆಲಸವಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’ 

    HDK

    ಹಬ್ಬದ ಹೊಸತೊಡಕು ಮಾಡುವ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಮಾಡುವವರು ಹಲಾಲ್ ಮಾಡಿದ್ದಾರೋ ಇಲ್ಲವೋ ಎಂದು ನೋಡುವುದಿಲ್ಲ. ಹಾಗೇ ತಂದು ಹಬ್ಬದ ಅಡುಗೆ ಮಾಡುತ್ತಾರೆ. ಇಲ್ಲಿಯವರೆಗೆ ಇಲ್ಲದ ಹಲಾಲ್ ಕಟ್ ವಿಚಾರ ಈಗ ಮಾತನಾಡಿದ್ದೇಕೆ? ಇದಕ್ಕಾಗಿಯೇ ಇವರು ಸದನದಲ್ಲಿ ಕುಳಿತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

  • ತುಮಕೂರು ಬಸ್ ದುರಂತ- ಸರಣಿ ಟ್ವೀಟ್ ಮಾಡಿ ಕಂಬನಿ ಮಿಡಿದ ಎಚ್‍ಡಿಕೆ

    ತುಮಕೂರು ಬಸ್ ದುರಂತ- ಸರಣಿ ಟ್ವೀಟ್ ಮಾಡಿ ಕಂಬನಿ ಮಿಡಿದ ಎಚ್‍ಡಿಕೆ

    ಬೆಂಗಳೂರು: ಖಾಸಗಿ ಬಸ್ ಪಲ್ಟಿಯಾಗಿ 8 ಮಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಪಳವಳ್ಳಿ ಕಟ್ಟೆ ಮೇಲೆ ನಡೆದಿದೆ. ಈ ಬಸ್ ದುರಂತಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

    ತುಮಕೂರು ಜಿಲ್ಲೆಯ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ದುರಂತದಲ್ಲಿ ಸಾವನ್ನಪ್ಪಿದವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರಿಗೂ ಪರಿಹಾರ ಕೊಡಬೇಕು.

    ಖಾಸಗಿ ಬಸ್‍ಗಳ ಗುಣಮಟ್ಟ, ಪರವಾನಗಿ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರವಾಗಿ ದೂರು ಬರುತ್ತಲೇ ಇದ್ದರೂ ಸರ್ಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರ್ಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ಸಿನ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಟ್ವೀಟ್ ಮಾಡಿದ್ದಾರೆ. ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಇದು ಸಾರಿಗೆ ಇಲಾಖೆ ನಿರ್ಲಕ್ಷ್ಯದ ಪರಮಾವಧಿ. ಈ ಬಗ್ಗೆ ಸರಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.