Tag: ಎಚ್‌ಆರ್‌ ರಂಗನಾಥ್‌

  • ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

    ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

    ಬೆಂಗಳೂರು: ಜಗದೀಶ್‌ ಶೆಟ್ಟರ್ (Jagadish Shettar) ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಕರ್ನಾಟಕದ ರಾಜಕಾರಣಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಮುಖ್ಯಸ್ಥ ಎಚ್‌ಆರ್‌ ರಂಗನಾಥ್‌ (HR Ranganath) ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿ ನರೇಂದ್ರ ಮೋದಿ (Narendra Modi) ಕೆಳಗೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಯಾವುದೇ ಕಾರಣಕ್ಕೂ ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮಿತ್ರ ಶೆಟ್ಟರ್‌ ಅವರನ್ನು ಮನವೊಲಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ, ನಾವು ಬಹಳಷ್ಟು ಪ್ರಯತ್ನ ಪಟ್ಟೆವು. ಆದರೆ ಅವರು ಈ ಬಾರಿ ಚುನಾವಣೆಗೆ ನಿಲ್ಲಲೇಬೇಕು ಎಂದು ಹಠ ಹಿಡಿದಿದ್ದರು. ಯಾಕೆ ಅಷ್ಟೊಂದು ಹಠ ಹಿಡಿದಿದ್ದಾರೆ ಎಂಬುದನ್ನು ತಿಳಿಯಲು ನನಗೆ ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ ಸೋಲಿಸುವ ಹೊಣೆ ನನ್ನದು- ಯಡಿಯೂರಪ್ಪ

    ಶೆಟ್ಟರ್ ಈಗಲೂ ನನ್ನ ಒಳ್ಳೆಯ ಸ್ನೇಹಿತ. ರಾಜಕೀಯವಾಗಿ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಆದರೆ ಒಂದು ದಿನ ಶೆಟ್ಟರ್‌ ತಮ್ಮ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಮುಂದೆ ಲಿಂಗಾಯತ ಸಿಎಂ (Lingayat CM) ಎಂದು ಯಾಕೆ ಇನ್ನೂ ಘೋಷಣೆ ಮಾಡಿಲ್ಲ ಎಂಬ ಪ್ರಶ್ನೆಗೆ, ಅಧಿಕಾರ ಇದ್ದಾಗ ನಾವು ಎಲ್ಲಿಯೂ ಮುಂದಿನ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ನಾವು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಉತ್ತರಾಖಂಡದ ಚುನಾವಣೆಯ ಉಸ್ತುವಾರಿ ನನಗೆ ನೀಡಲಾಗಿತ್ತು. ಅಲ್ಲಿನ ಸಿಎಂ ಚುನಾವಣೆಯಲ್ಲಿ ಸೋತಿದ್ದರೂ ಮತ್ತೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದ್ದೇವೆ ಎಂದರು.

     

    ನನಗೆ ಲೋಕಸಭೆ ಚುನಾವಣೆ ಭಯ ಇಲ್ಲ. ಇಲ್ಲಿ ಬಿಜೆಪಿ, ಮೋದಿ ಫ್ಯಾಕ್ಟರ್ ಇದೆ. ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ನಮ್ಮ ನಾಯಕರು. ಈ ಬಾರಿ ನಾವು ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರುತ್ತೇವೆ. ಜೆಡಿಎಸ್‍ಗೆ 10-15 ಸೀಟ್ ಬರಬಹುದು. 2006ರ ನಂತರ ಜೆಡಿಎಸ್ ಜೊತೆ ಯಾವುದೇ ಸಂಬಂಧ ಇಲ್ಲ. ಸೆಕ್ಯುಲರ್‌ ಎಂದು ಹೇಳಿ ಕಾಂಗ್ರೆಸ್, ಜೆಡಿಎಸ್ ನಾಯಕರು ಸೇರುತ್ತಾರೆ ಎಂದು ಟಾಂಗ್‌ ನೀಡಿದರು.

  • ಪಬ್ಲಿಕ್‌ ಟಿವಿಯ 6 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

    ಪಬ್ಲಿಕ್‌ ಟಿವಿಯ 6 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

    ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy) ವತಿಯಿಂದ‌ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಪಬ್ಲಿಕ್‌ ಟಿವಿಯ ಪತ್ರಕರ್ತರು ಸೇರಿದಂತೆ ವಿವಿಧ ಮಾಧ್ಯಮಗಳ ಸಾಧಕರಿಗೆ  ಸೋಮವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಪ್ರಧಾನ ಸಂಪಾದಕ ದಿವಾಕರ್‌ಗೆ ಪ್ರಶಸ್ತಿ ಪ್ರದಾನ

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ (HR Ranganath) ಅವರಿಗೆ 2021ನೇ ಸಾಲಿನ ವಿಶೇಷ ಜೀವಮಾನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರದಾನ ಮಾಡಿ ಗೌರವಿಸಿದರು. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ

    ಎಕ್ಸಿಕ್ಯೂಟಿವ್ ಎಡಿಟರ್ ಆನಂದ್‌ಗೆ ಪ್ರಶಸ್ತಿ ಪ್ರದಾನ

    ಈ ಸಂದರ್ಭದಲ್ಲಿ 2019 ವಾರ್ಷಿಕ ಪ್ರಶಸ್ತಿಯನ್ನ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕರಾದ ದಿವಾಕರ್ ಅವರಿಗೆ, 2020ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನ ಪಬ್ಲಿಕ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಆನಂದ್ ವಿ ಅವರಿಗೆ, 2021 ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನ ಮೈಸೂರು ಜಿಲ್ಲಾ ವರದಿಗಾರರಾದ ಕೆ. ಪಿ. ನಾಗರಾಜ್ ಅವರಿಗೆ, ಹಾಗೂ 2022 ನೇ ವಾರ್ಷಿಕ ಪ್ರಶಸ್ತಿಯನ್ನ ಪಬ್ಲಿಕ್ ಟಿವಿಯ ‌ಬೆಳಗಾವಿ ಜಿಲ್ಲಾ ವರದಿಗಾರ ದಿಲೀಪ್ ಕುರಂದವಾಡೆ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದರು.

    ಮೈಸೂರು ಜಿಲ್ಲಾ ವರದಿಗಾರರಾದ ಕೆ. ಪಿ. ನಾಗರಾಜ್‌ಗೆ ಪ್ರಶಸ್ತಿ ಪ್ರದಾನ

    ಸಿನಿಮಾ ಕ್ಷೇತ್ರದ ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿಯನ್ನ ಪಬ್ಲಿಕ್‌ ‌ಟಿವಿ ಡಿಜಿಟಲ್ ವಿಭಾಗದ ಸಿನಿಮಾ ಬ್ಯೂರೋದ ಡಾ. ಶರಣು ಹುಲ್ಲೂರು ಪ್ರದಾನ ಮಾಡಲಾಯಿತು.

    ಬೆಳಗಾವಿ ಜಿಲ್ಲಾ ವರದಿಗಾರ ದಿಲೀಪ್ ಕುರಂದವಾಡೆಗೆ ಪ್ರಶಸ್ತಿ ಪ್ರದಾನ

    ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ನಾಲ್ಕು ವರ್ಷಗಳ ಸಾಲಿನ (2019, 2020, 2021, 2022ನೇ ಸಾಲು) ನಾಡಿನ ವಿವಿಧ ಪತ್ರಕರ್ತರನ್ನು ʼಮಾಧ್ಯಮ ವಾರ್ಷಿಕ ಪ್ರಶಸ್ತಿʼ ಮತ್ತು ʼದತ್ತಿ ಪ್ರಶಸ್ತಿʼಗೆ ಆಯ್ಕೆ ಮಾಡಲಾಗಿತ್ತು.

    ಡಿಜಿಟಲ್ ವಿಭಾಗದ ಸಿನಿಮಾ ಬ್ಯೂರೋದ ಡಾ. ಶರಣು ಹುಲ್ಲೂರುಗೆ ಪ್ರಶಸ್ತಿ ಪ್ರದಾನ

    ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ 50,000 ರೂ. ನಗದು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25,000 ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಹಾಗೆಯೇ ಒಟ್ಟು 21 ಮಂದಿ ಪತ್ರಕರ್ತರು ʼದತ್ತಿ ಪ್ರಶಸ್ತಿʼಗೆ ಆಯ್ಕೆಯಾಗಿದ್ದರು.

  • ಅಕ್ರಮ ಆಸ್ತಿ ಮಾಡಿದ್ದಾರೆಂಬ ವೈರಲ್ ಸುದ್ದಿ ವಿರುದ್ಧ ಹೆಚ್.ಆರ್.ರಂಗನಾಥ್ ದೂರು

    ಅಕ್ರಮ ಆಸ್ತಿ ಮಾಡಿದ್ದಾರೆಂಬ ವೈರಲ್ ಸುದ್ದಿ ವಿರುದ್ಧ ಹೆಚ್.ಆರ್.ರಂಗನಾಥ್ ದೂರು

    ಬೆಂಗಳೂರು: ಪತ್ರಕರ್ತರು ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಡಲಾಗಿದ್ದು, ಪಬ್ಲಿಕ್ ಟಿವಿಯ(PUBLiC TV) ಮುಖ್ಯಸ್ಥರಾದ ಎಚ್ ಆರ್ ರಂಗನಾಥ್(HR Ranganath) ಅವರು ದೂರು ನೀಡಿದ್ದಾರೆ.

    ಪತ್ರಕರ್ತರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಪಟ್ಟಿ ಮಾಡಿ ಹೆಚ್.ಆರ್.ರಂಗನಾಥ್ ಅವರ ಹೆಸರನ್ನು ಹಾಕಿ ಆರೋಪ ಮಾಡಲಾಗಿದೆ. ಹಕ್ಕಿಗೂಡು ಪತ್ರಿಕೆಯ ಸಂಪಾದಕ ನರೇಂದ್ರ ತೂದಳ್ಳಿ ಎಂಬ ಹೆಸರಿನಲ್ಲಿ ಪತ್ರ ಹರಿಬಿಟ್ಟು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಆಧಾರ ರಹಿತ ಆರೋಪ ಮಾಡಿ ವಾಟ್ಸಪ್(whatsapp) ಮತ್ತು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ

    ಹೀಗಾಗಿ ಪತ್ರ ಬರೆದವರು ಯಾರು? ವಾಟ್ಸಪ್‌ ಗ್ರೂಪ್‌ನಲ್ಲಿ ವೈರಲ್ ಮಾಡಿದ್ದು ಯಾರು? ಆಧಾರರಹಿತ ಸುದ್ದಿಯನ್ನು  ಹಬ್ಬಿಸಿ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಕಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ. ಯಶವಂತಪುರ(Yeshwanthpur) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ(Cyber Crime Police Station) ದೂರು ನೀಡಲಾಗಿದ್ದು, ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]