Tag: ಎಗ್ ರೋಲ್

  • ಎಗ್ ರೋಲ್ ಮಾಡಿ ನಾಲಿಗೆ ಚಪ್ಪರಿಸಿ ತಿನ್ನಿ

    ಎಗ್ ರೋಲ್ ಮಾಡಿ ನಾಲಿಗೆ ಚಪ್ಪರಿಸಿ ತಿನ್ನಿ

    ಬಾಯಿ ರುಚಿ ಹೆಚ್ಚಿಸುವ, ಹೊಟ್ಟೆ ತುಂಬಿಸುವ ಹೊಸ ರೆಸಿಪಿಗಳನ್ನು ಮಾಡಲು ನಾವು ಬಯಸುತ್ತೇವೆ. ರೋಡ್ ಸೈಡ್ ಸಿಗುವ ಚಾಟ್ಸ್‌ಗಳನ್ನು ತಿಂದು ನಾಲಿಗೆ ಚಪ್ಪರಿಸುತ್ತೇವೆ. ಆದರೆ ಹೊಟ್ಟೆ ಹಾಳುಗುತ್ತದೆ ಎನ್ನುವ ಭಯವು ನಮ್ಮಲ್ಲಿ ಇರುತ್ತದೆ. ಆದರೆ ನಾವೇ ಮನೆಯಲ್ಲಿ ವಿವಿಧ ಬಗೆಯ ತಿಂಡಿಗಳನ್ನು ಮಾಡಿ ನಾಲಿಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ನೀವು ಸರಳವಾಗಿ ಮನೆಯಲ್ಲಿ ಈ ಎಗ್ ರೋಲ್ ಮಾಡಲು ಟ್ರೈ ಮಾಡ ಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಮೊಟ್ಟೆ- 4
    * ಮೈದಾ- 2 ಕಪ್
    * ಈರುಳ್ಳಿ-2
    * ಹಸಿ ಮೆಣಸಿನಕಾಯಿ 2-3
    * ಖಾರದ ಪುಡಿ- 2 ಟೀ ಸ್ಪೂನ್
    * ಟೊಮೆಟೊ ಸಾಸ್
    * ಚಿಲ್ಲಿ ಸಾಸ್
    * ನಿಂಬೆ ರಸ
    * ಸೌತೆಕಾಯಿ (ಬೇಕಿದ್ದರೆ ಹಾಕಬಹುದು)
    * ಎಣ್ಣೆ- 1ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ. ನಂತರ ಅದರಿಂದ ಮೀಡಿಯಂ ಗಾತ್ರದ ಉಂಡೆಗಳನ್ನು ಮಾಡಿ, ಪರೋಟ ತಟ್ಟಿದಂತೆ ತಟ್ಟಿ.

    * ಈಗ ಬಟ್ಟಲಿಗೆ ಮೊಟ್ಟೆ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ.

    *ಮತ್ತೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಸೌತೆಕಾಯಿ, ಟೊಮೆಟೊ ಸಾಸ್, ಚಿಲ್ಲಿ ಸಾಸ್ ಮತ್ತು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇಡಿ.

    *ನಂತರ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ಪರೋಟದ ಎರಡೂ ಬದಿಯನ್ನು ಬೇಯಿಸಿ ಪೇಪರ್‌ನಲ್ಲಿ ಹಾಕಿಡಿ.

    * ನಂತರ ಅದೇ ತವಾಕ್ಕೆ ಸ್ವಲ್ಪ ಎಣ್ಣೆ ಹಾಕಿ ಆಮ್ಲೇಟ್ ಮಾಡಿ, ಆಮ್ಲೇಟ್ ಬಿಸಿಯಾಗಿರುವಾಗಲೇ ಅದನ್ನು ಬೇಯಿಸಿದ ಪರೋಟದ ಮೇಲೆ ಹಾಕಿ, ಮತ್ತೆ ತವಾದ ಮೇಲೆ 2-1 ನಿಮಿಷ ಬಿಸಿ ಮಾಡಿ, ಈಗ ಆಮ್ಲೇಟ್ ಇರುವ ಕಡೆ ಸಾಸ್ ಮಿಕ್ಸ್ ಮಾಡಿರುವ ತರಕಾರಿ ಹಾಕಿ, ಖಾರದ ಪುಡಿ ಚಿಮುಕಿಸಿ, ರೋಲ್ ರೀತಿ ಮಾಡಿ ಸಿಲ್ವರ್ ಪೇಪರ್ ನಿಂದ ಸುತ್ತಿದರೆ ಎಗ್ ರೋಲ್ ಅವಿಯಲು ಸಿದ್ಧವಾಗುತ್ತದೆ.

  • ಸಿಂಪಲ್ಲಾಗಿ ಸ್ಪೆಷಲ್ ಎಗ್ ರೋಲ್ ಮಾಡೋ ವಿಧಾನ

    ಸಿಂಪಲ್ಲಾಗಿ ಸ್ಪೆಷಲ್ ಎಗ್ ರೋಲ್ ಮಾಡೋ ವಿಧಾನ

    ಇತ್ತೀಚೆಗೆ ಮಳೆಯಾಗಿದ್ದರಿಂದ ಬೆಚ್ಚನೆಯ ವಾತಾವರಣವಿದೆ. ಇನ್ನೂ ರಜಾ ದಿನಗಳಲ್ಲಿ ಮನೆಯಲ್ಲಿದ್ದರೆ ಮಕ್ಕಳು, ಮನೆಯವರು ಖಾರವಾಗಿ ಏನಾದರೂ ತಿನ್ನಬೇಕು ಎಂದು ಕೇಳುತ್ತಿರುತ್ತಾರೆ. ಎಂದಿನಂತೆ ಎಗ್ ಫ್ರೈ, ಎಗ್ ಬುರ್ಜಿ ಮಾಡುತ್ತಿರುತ್ತೀರಿ. ಹೀಗಾಗಿ ನಿಮಗಾಗಿ ಸಿಂಪಲ್ ಆಗಿ ಸ್ಪೆಷಲ್ ಎಗ್ ರೋಲ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 4
    2. ಈರುಳ್ಳಿ -1
    3. ಹಸಿಮೆಣಸಿನಕಾಯಿ -4-5
    4. ಉಪ್ಪು – ರುಚಿಗೆ ತಕ್ಕಷ್ಟು
    5. ಕೊತ್ತಂಬರಿ – ಸ್ವಲ್ಪ
    6. ಮೈದಾ – 2 ಚಮಚ
    7. ಕಾರ್ನ್ ಫ್ಲೋರ್ – 2 ಚಮಚ
    8. ಎಣ್ಣೆ – ಕರಿಯಲು
    9. ನೀರು
    10. ಬ್ರೆಡ್ ಕ್ರಮ್ಸ್ – ಒಂದು ಬಟ್ಟಲು

    ಮಾಡುವ ವಿಧಾನ
    * ಮೊದಲು ಒಂದು ಮಿಕ್ಸಿ ಬೌಲ್‍ಗೆ ಮೊಟ್ಟೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೇರಿಸಿ ಬೀಟ್ ಮಾಡಿ.
    * ಒಂದು ಕೇಕ್ ಪ್ಯಾನ್‍ಗೆ ಎಣ್ಣೆ ಸವರಿ ಬೀಟ್ ಮಾಡಿದ ಮೊಟ್ಟೆ ಹಾಕಿ ಬೇಯಿಸಿ.
    * ಕೇಕ್ ಪ್ಯಾನ್ ಇಲ್ಲದಿದ್ದಲ್ಲಿ ಒಂದು ಸ್ಟೀಲ್ ಕುಕ್ಕರ್ ಪ್ಯಾನ್‍ಗೆ ಎಣ್ಣೆ ಸವರಿ ಬೇಯಿಸಬಹುದು
    * ಈಗ ಬೇಯಿಸಿದ ಮೊಟ್ಟೆಯನ್ನು ಪ್ಯಾನ್‍ನಿಂದ ಬೇರ್ಪಡಿಸಿ, ಸಣ್ಣಗೆ ಕಟ್ ಮಾಡಿಕೊಳ್ಳಿ.
    * ಈಗ ಒಂದು ಬೌಲ್‍ಗೆ ಮೈದಾ, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಸೇರಿಸಿ ತೆಳ್ಳಗೆ ಕಲಸಿಕೊಳ್ಳಿ
    * ಒಂದು ತಟ್ಟೆಗೆ ಬ್ರೆಡ್ ಕ್ರಮ್ಸ್ ಹಾಕಿ
    * ಈಗ ಸ್ಲೈಸ್ ಕಟ್ ಮಾಡಿದ ಮೊಟ್ಟೆಯನ್ನು ಮೈದಾ ಬ್ಯಾಟರ್ ನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ನಲ್ಲಿ ಹೊರಳಿಸಿ.
    * ಈಗ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರೋವರೆಗೆ ಫ್ರೈ ಮಾಡಿದರೆ ಸ್ಪೆಷಲ್ ಎಗ್ ರೋಲ್ ರೆಡಿ.