Tag: ಎಗ್ ಪೆಪ್ಪರ್ ಮಸಾಲಾ

  • ಖಾರವಾದ ಎಗ್ ಪೆಪ್ಪರ್ ಮಸಾಲಾ ರೆಸಿಪಿ

    ಖಾರವಾದ ಎಗ್ ಪೆಪ್ಪರ್ ಮಸಾಲಾ ರೆಸಿಪಿ

    ಗಾಗ ಏನಾದರೂ ಖಾರವಾದ ಖಾದ್ಯ ತಿನ್ನಬೇಕು ಎಂದು ಎಲ್ಲರಿಗೂ ಎನಿಸುತ್ತದೆ. ಆದರೆ ಪ್ರತಿ ಬಾರಿ ಒಂದೇ ರೀತಿಯ ಅಡುಗೆ ಮಾಡಿ ನಿಮ್ಮ ನಾಲಿಗೆಗೆ ಬೋರ್ ಹಿಡಿಸುವಂತೆ ಮಾಡುವುದು ಎಷ್ಟು ಸರಿ? ನಾವಿಂದು ಖಾರವಾದ ಅಷ್ಟೇ ರುಚಿರುಚಿಯಾದ ಎಗ್ ಪೆಪ್ಪರ್ ಮಸಾಲಾ (Egg Pepper Masala) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಪ್ರತಿ ಬಾರಿ ಇದೇ ರೀತಿ ಹೊಸ ಹೊಸ ರೆಸಿಪಿ ಮಾಡಿ, ನಿಮ್ಮ ನಾಲಿಗೆಗೂ ಹೊಸದಾದ ರುಚಿಯ ಅನುಭವ ನೀಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಮೊಟ್ಟೆ – 3
    ಎಣ್ಣೆ – 5 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸೀಳಿದ ಹಸಿಮೆಣಸಿನಕಾಯಿ – 2
    ಹೆಚ್ಚಿದ ಈರುಳ್ಳಿ – 4
    ಟೊಮೆಟೊ – 3 (ಪೇಸ್ಟ್ ಮಾಡಿಟ್ಟುಕೊಳ್ಳಿ)
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಕರಿಬೇವಿನ ಸೊಪ್ಪು – 2 ಗರಿ
    ಕೊತ್ತಂಬರಿ ಬೀಜದ ಪುಡಿ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ – ಕಾಲು ಟೀಸ್ಪೂನ್
    ಜೀರಿಗೆ ಪುಡಿ – ಕಾಲು ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಬಾಯಲ್ಲಿ ನೀರೂರಿಸುತ್ತೆ ಬೋಟಿ ಕಬಾಬ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಜೀರಿಗೆ ಹಾಗೂ ಹಸಿಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ.
    * ಈಗ ಈರುಳ್ಳಿ ಹಾಕಿ, ಉಪ್ಪು ಸೇರಿಸಿ, ಫ್ರೈ ಮಾಡಿಕೊಳ್ಳಿ.
    * ಈರುಳ್ಳಿ ಮೆತ್ತಗಾದ ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಕರಿಬೇವಿನ ಸೊಪ್ಪು ಸೇರಿಸಿ.
    * ಈಗ ಟೊಮೆಟೊ ಪ್ಯೂರಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
    * ಬಳಿಕ ಕರಿಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ, ಹಾಗೂ ಗರಂ ಮಸಾಲಾ ಸೇರಿಸಿ ಮಿಶ್ರಣ ಮಾಡಿ.
    * ಮಸಾಲೆ ಬೇಯಲು ಸ್ವಲ್ಪ ನೀರು ಸೇರಿಸಿ, ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ.
    * ಈಗ ಬೇಯಿಸಿದ ಮೊಟ್ಟೆಗಳನ್ನು ಅರ್ಧಕ್ಕೆ ಅಥವಾ 4 ಭಾಗಗಳನ್ನಾಗಿ ಕತ್ತರಿಸಿಕೊಂಡು, ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ.
    * 2 ನಿಮಿಷ ಮುಚ್ಚಿ ಬೇಯಿಸಿ, ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
    * ಇದೀಗ ಎಗ್ ಪೆಪ್ಪರ್ ಮಸಾಲಾ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k