Tag: ಎಗ್

  • ʼಎಗ್ ಬಿರಿಯಾನಿʼ ಮಾಡುವ ಸುಲಭ ವಿಧಾನ

    ʼಎಗ್ ಬಿರಿಯಾನಿʼ ಮಾಡುವ ಸುಲಭ ವಿಧಾನ

    ಗ್ ಬಿರಿಯಾನಿ ಎಂದರೇ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟ. ಅದರಲ್ಲಿಯೂ ರೆಸ್ಟೋರೆಂಟ್ ಶೈಲಿಯಲ್ಲಿ ಮಾಡುವ ಎಗ್ ಬಿರಿಯಾನಿ ಬಾಯಲ್ಲಿ ನೀರು ಬರುತ್ತೆ. ಅದಕ್ಕೆ ಇಂದು ಸರಳ ವಿಧಾನದಲ್ಲಿ ಹೇಗೆ ಎಗ್ ಬಿರಿಯಾನಿ ಮಾಡಬೇಕು ಎಂದು ಟಿಪ್ಸ್ ಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಬಾಸುಮತಿ ಅಕ್ಕಿ -2 ಕಪ್
    * ಮೊಟ್ಟೆಗಳು – 6
    * ಕಟ್ ಮಾಡಿದ ಈರುಳ್ಳಿ – 1
    * ಕತ್ತರಿಸಿದ ಹಸಿರು ಮೆಣಸಿನಕಾಯಿಗಳು – 10
    * ಪಲಾವ್ ಎಲೆ – 2
    * ಲವಂಗ – 4
    * ಕಾಳುಮೆಣಸು – 1/2 ಟೀಸ್ಪೂನ್

    * ದಾಲ್ಚಿನ್ನಿ – 1 ಇಂಚು
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಪಲಾವ್ ಮಸಾಲಾ – 1 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಆರು ಮೊಟ್ಟೆಗಳಲ್ಲಿ ನಾಲ್ಕನ್ನು ಬೇಯಿಸಿಕೊಳ್ಳಿ.
    * ದೊಡ್ಡ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ದಾಲ್ಚಿನ್ನಿ, ಪಲಾವ್ ಎಲೆ, ಕಾಳುಮೆಣಸು, ಲವಂಗ ಹಾಕಿ ಹುರಿಯಿರಿ.
    * ಕೆಲವು ಸೆಕೆಂಡುಗಳ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಜೊತೆಗೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಉಳಿದ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಅಕ್ಕಿಯನ್ನು ಸೇರಿಸಿ, ಒಂದು ನಿಮಿಷ ಫ್ರೈ ಮಾಡಿ. ಉಪ್ಪಿನೊಂದಿಗೆ ಪಲಾವ್ ಮಸಾಲಾ ಹಾಕಿ ಚೆನ್ನಾಗಿ ಫ್ರೈ ಮಾಡಿ.

    * ಈಗ ಬೇಯಿಸಿದ ಮೊಟ್ಟೆಗಳನ್ನು ಹಾಕಿ. ನಾಲ್ಕು ಕಪ್ ನೀರು ಹಾಕಿ ಅಕ್ಕಿಯನ್ನು ಬೇಯಿಸಿ.
    * ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿರುವಾಗಲ್ಲೇ ಬಡಿಸಿ.

  • ಮನೆಯಲ್ಲಿ ಮಾಡಿ ರುಚಿಕರವಾದ ಮಸಾಲಾ ಎಗ್ ಭುರ್ಜಿ

    ಮನೆಯಲ್ಲಿ ಮಾಡಿ ರುಚಿಕರವಾದ ಮಸಾಲಾ ಎಗ್ ಭುರ್ಜಿ

    ತಂಪಾದ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಎನಿಸುತ್ತೆ. ಎಗ್ ಪ್ರಿಯರಿಗೆ ಇಲ್ಲೊಂದು ಸೂಪರ್ ರೆಸಿಪಿ ಇದೆ. ಎಗ್‍ನಲ್ಲಿ ಮಾಡುವ ಎಲ್ಲ ರೆಸಿಪಿಗಳು ಸಿಂಪಲ್. ಅದರಂತೆ ಇಂದು ನಾವು ಮಸಾಲಾ ಎಗ್ ಭುರ್ಜಿ ಮಾಡುವುದು ಹೇಗೆ ಎಂಬ ಉಪಾಯವನ್ನು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಎಣ್ಣೆ – 2 ಟೀಸ್ಪೂನ್
    * ಬೆಣ್ಣೆ – 3 ಟೀಸ್ಪೂನ್
    * ಬೆಳ್ಳುಳ್ಳಿ – 1 ಟೀಸ್ಪೂನ್
    * ಹಸಿರು ಮೆಣಸಿನಕಾಯಿಗಳು – 2 ಟೀಸ್ಪೂನ್
    * ಶುಂಠಿ – 2 ಟೀಸ್ಪೂನ್
    * ಕರಿಬೇವಿನ ಎಲೆ – 6-7
    * ಕಟ್ ಮಾಡಿದ ಈರುಳ್ಳಿ – 1/2 ಕಪ್


    * ಉಪ್ಪು – 3 ಟೀಸ್ಪೂನ್
    * ಅರಿಶಿನ ಪುಡಿ – 2 ಟೀಸ್ಪೂನ್
    * ಮೆಣಸಿನ ಪುಡಿ – 2 ಟೀಸ್ಪೂನ್
    * ಪಾವ್ ಭಾಜಿ ಮಸಾಲಾ – 1 1/2 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್

    ಮಾಡುವ ವಿಧಾನ:
    * ಎಗ್‌ ಬೇಯಿಸಿ ಅವುಗಳನ್ನು ಚಿಕ್ಕ-ಚಿಕ್ಕದಾಗಿ ಕಟ್‌ ಮಾಡಿ.
    * ಬಾಣಲೆಗೆ ಎಣ್ಣೆಯನ್ನು ಹಾಕಿ ಅದಕ್ಕೆ ಬೆಣ್ಣೆ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿ.
    * ಈಗ ಕರಿಬೇವಿನ ಎಲೆಗಳು ಮತ್ತು ಕತ್ತರಿಸಿದ ಈರುಳ್ಳಿಯನ್ನು ಬಾಣಲೆಗೆ ಮಿಶ್ರಣ ಮಾಡಿ ಒಟ್ಟಿಗೆ ಹುರಿಯಿರಿ.


    * ಉಪ್ಪು, ಅರಿಶಿನ ಪುಡಿ, ಮೆಣಸಿನ ಪುಡಿ, ಪಾವ್ ಭಾಜಿ ಮಸಾಲಾ ಮಿಶ್ರಣ ಮಾಡಿ. ಕೊನೆಗೆ ಕಟ್‌ ಮಾಡಿದ ಎಗ್‌, ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಟೊಮೆಟೊ ಹಾಕಿ ಫ್ರೈ ಮಾಡಿ. ಕೊನೆಗೆ ಸ್ವಲ್ಪ ಬೆಣ್ಣೆಯನ್ನು ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

    – ಮಸಾಲಾ ಎಗ್ ಭುರ್ಜಿಯನ್ನು ಬ್ರೇಡ್ ಅಥವಾ ಚಪಾತಿಗೆ ಹಾಕಿಕೊಂಡು ಸವಿಯಬಹುದು.

  • ‘ಎಗ್ 65’ ಮಾಡುವ ಸಿಂಪಲ್ ವಿಧಾನ

    ‘ಎಗ್ 65’ ಮಾಡುವ ಸಿಂಪಲ್ ವಿಧಾನ

    ವಿವಾರ ಬಂತು ಎಂದರೆ ನಾನ್‍ವೆಜ್ ಪ್ರಿಯರಿಗೆ ಹಬ್ಬ. ಈ ಚಳಿ ಸಮಯದಲ್ಲಿ ಎಲ್ಲರಿಗೂ ಬೋಂಡ, ಬಜ್ಜಿ ತಿನ್ನಬೇಕು ಅನ್ನಿಸುತ್ತೆ. ಅದೇ ರೀತಿ ಇಂದು ನಾನ್‍ವೆಜ್ ಪ್ರಿಯರಿಗಾಗಿ ಎಗ್ 65 ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗುತ್ತಿದೆ. ಈ ರೆಸಿಪಿ ತುಂಬಾ ಸುಲಭ ಮತ್ತು ತಿನ್ನಲು ಸಖತ್ ಆಗಿರುತ್ತೆ.

    ಬೇಕಾಗಿರುವ ವಿಧಾನ:
    * ಮೊಟ್ಟೆಯ ಬಿಳಿಭಾಗ(ಬೇಯಿಸಿ ಕತ್ತರಿಸಬೇಕು) – 1 ಕಪ್
    * ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಚಮಚ
    * ಕೆಂಪು ಮೆಣಸಿನ ಪುಡಿ – 1/4 ಚಮಚ
    * ಗರಂ ಮಸಾಲಾ ಪುಡಿ – 1/4 ಚಮಚ
    * ಬ್ರೆಡ್ ತುಂಡುಗಳು – 1/2 ಕಪ್
    * ಮೈದಾ ಹಿಟ್ಟು – 1 ಕಪ್


    * ಮೊಟ್ಟೆಯ ಬಿಳಿ – 1 ಚಮಚ
    * ಹಸಿರು ಮೆಣಸಿನಕಾಯಿಗಳು – 1 ಚಮಚ
    * ಕರಿಬೇವಿನ ಎಲೆಗಳು – 1 ಚಮಚ
    * ಮೊಸರು – 1/4 ಕಪ್
    * ರೆಡ್ ಚಿಲ್ಲಿ ಸಾಸ್ – 1 ಚಮಚ
    * ಸಕ್ಕರೆ – 1 ಚಿಟಿಕೆ
    * ಕೊತ್ತಂಬರಿ ಸೊಪ್ಪು – 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಂದು ಬಟ್ಟಲಿನಲ್ಲಿ ಬೇಯಿಸಿ ಕಟ್ ಮಾಡಿದ ಮೊಟ್ಟೆಯ ಬಿಳಿ ತುಂಡುಗಳನ್ನು ಹಾಕಿ. ಅದಕ್ಕೆ ಬೆಳ್ಳುಳ್ಳಿ – ಶುಂಠಿ ಪೇಸ್ಟ್, ಗರಂ ಮಸಾಲಾ ಪುಡಿ, ಕೆಂಪು ಮೆಣಸಿನ ಪುಡಿ, ಬ್ರೆಡ್ ತುಂಡುಗಳು, ಮೈದಾ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಾಣಲಿಯನ್ನು ಬಿಸಿ ಮಾಡಿ ಎಗ್ ಮಿಶ್ರಣವನ್ನು ಬೊಂಡದ ರೀತಿ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿ.

    * ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಮೊಸರು, ಕೆಂಪು ಮೆಣಸಿನಕಾಯಿ ಸಾಸ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಒಂದು ಚಿಟಿಕೆ ಸಕ್ಕರೆ, ಕಟ್ ಮಾಡಿದ ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಹುರಿಯಿರಿ.
    * ಈ ಫ್ರೈಗೆ ಹುರಿದ ಮೊಟ್ಟೆಯ ಸೇರಿಸಿ. ಚಿಟಿಕೆ ಉಪ್ಪು ಸೇರಿಸಿ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ. ಈಗ ಎಗ್ 65 ರೆಡಿ.

  • ಎಗ್ ಘೀ ರೋಸ್ಟ್ ಮಾಡುವ ಸರಳ ವಿಧಾನ ನಿಮಗಾಗಿ

    ಎಗ್ ಘೀ ರೋಸ್ಟ್ ಮಾಡುವ ಸರಳ ವಿಧಾನ ನಿಮಗಾಗಿ

    ಬೇಕಾಗುವ ಸಾಮಗ್ರಿಗಳು:
    * ಬೇಯಿಸಿದ ಮೊಟ್ಟೆ – 4
    * ಟೊಮೆಟೊ 3
    * ಈರುಳ್ಳಿ 2
    * ಒಣಮೆಣಸು – 6 ರಿಂದ 7
    * ಕಾಳುಮೆಣಸು – 1 ಚಮಚ
    * ದನಿಯಾ ಪೌಡರ್ – 1 ಚಮಚ
    * ಜೀರಿಗೆ – 1 ಚಮಚ
    * ಬೆಳ್ಳುಳ್ಳಿ – 6 ಎಸಳು
    * ದಾಲ್ಚಿನ್ನಿ ಎಲೆ- 1
    * ಶುಂಠಿ ಪೇಸ್ಟ್- 1ಚಮಚ
    * ಅರಿಸಿಣ ಪುಡಿ – ಅರ್ಧ ಚಮಚ
    * ಕರಿಬೇವು – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬಾಣಲೆಗೆ ಒಣಮೆಣಸು, ಕಾಳುಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಾಗೂ ದಾಲ್ಚಿನ್ನಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೂ ಓದಿ:  ರಷ್ಯಾ-ಉಕ್ರೇನ್ ವಾರ್ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೈನಿಕ

    * ನಂತರ ಪಾತ್ರೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಕರಿಬೇವು ಹಾಗೂ ಈರುಳ್ಳಿ, ಈರುಳ್ಳಿ, ಅರಿಸಿನ, ಉಪ್ಪು ಹಾಗೂ ಈಗಾಲೇ ರುಬ್ಬಿಕೊಂಡ ಮಸಾಲೆ ಹಾಕಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಅದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಟೊಮೆಟೊ ಸೇರಿಸಿ ಹದಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ. ಈ ಮಿಶ್ರಣ ಕುದಿಯಲು ಆರಂಭಿಸಿದ ಮೇಲೆ ಬೇಯಿಸಿದ ಮೊಟ್ಟೆಯನ್ನು ಅರ್ಧ ಮಾಡಿ ಹಾಕಿ. ಮಿಶ್ರಣ ದಪ್ಪಕ್ಕೆ ಆಗುವವರೆಗೂ ಕುದಿಸಿದರೆ ಎಗ್ ಘೀ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು