Tag: ಎಕ್ಸ್ ಪ್ರೆಸ್

  • ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಭುವನೇಶ್ವರ್: ಒಡಿಶಾ ರೈಲು ದುರಂತ (Train Tragedy in Odisha) ಕ್ಕೆ ಸಿಗ್ನಲ್ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ಬಳಿಕ ಪ್ರಾಥಮಿಕ ವರದಿ ಸಲ್ಲಿಸಿದರು. ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ದುರಂತ: ಯಶ್, ಸುಮಲತಾ ಸೇರಿದಂತೆ ಹಲವರ ಸಂತಾಪ

    ಏನಾಯಿತು..?: ಕೋರಮಂಡಲ್ ಎಕ್ಸ್ ಪ್ರೆಸ್‍ (Coromandel Express) ಗೆ ಗೊತ್ತುಪಡಿಸಿದ ಮುಖ್ಯ ಮಾರ್ಗದಲ್ಲಿ ಚಲಿಸಲು ಹಸಿರು ನಿಶಾನೆ ತೋರಲಾಗಿತ್ತು. ಆ ಬಳಿಕ ಹಸಿರು ನಿಶಾನೆ ಹಿಂದೆ ಪಡೆಯಲಾಗಿದೆ. ಈ ವೇಳೆಗೆ ರೈಲು ಲೂಪ್ ಲೈನ್ ಅನ್ನು ಪ್ರವೇಶಿಸಿ, ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿತು. ಅಷ್ಟರಲ್ಲಿ ಡೌನ್ ಲೈನ್ ನಲ್ಲಿ ಯಶವಂತಪುರ (Yeshwanthpura) ದಿಂದ ಬಂದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದವು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ದುರಂತಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 233 ಕ್ಕೆ ಏರಿದೆ. ಅಲ್ಲದೇ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚೆನ್ನೈ-ಕೊರಮಂಡಲ್ ಎಕ್ಸ್‍ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತು. 12841 ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ.

  • ಶಿವಮೊಗ್ಗ ಟು ಬೆಂಗಳೂರು ರೈಲು ಓಡಾಟ ಸ್ಥಗಿತ – ಡಬ್ಲಿಂಗ್ ಕಾಮಗಾರಿ ಆರಂಭ

    ಶಿವಮೊಗ್ಗ ಟು ಬೆಂಗಳೂರು ರೈಲು ಓಡಾಟ ಸ್ಥಗಿತ – ಡಬ್ಲಿಂಗ್ ಕಾಮಗಾರಿ ಆರಂಭ

    ಶಿವಮೊಗ್ಗ: ತುಮಕೂರಿನಲ್ಲಿ ರೈಲ್ವೇ ಹಳಿ ಡಬ್ಲಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ಮಧ್ಯೆ ಒಂದು ವಾರ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದೇ ತಿಂಗಳ ಮೇ 22ರಿಂದ 29ರವರೆಗೆ ತುಮಕೂರು-ಗುಬ್ಬಿ ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹಳಿ ಡಬ್ಲಿಂಗ್ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ರೈಲುಗಳು ಮತ್ತು ತಾಳಗುಪ್ಪಾದಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗ ಅಭಿವೃದ್ಧಿ ಹಿನ್ನೆಲೆಯಲ್ಲಿ ತಾಳಗುಪ್ಪ ಬೆಂಗಳೂರು ಇಂಟರ್ ಸಿಟಿ ರೈಲಿನ ಸಮಯವನ್ನು ಬದಲಾಯಿಸಿ ಬೆಳಗ್ಗೆ 7.40 ಕ್ಕೆ ಹೊರಡುವಂತೆ ಆದೇಶ ನೀಡಲಾಗಿತ್ತು. ಆದರೆ ಈ ಆದೇಶ ಇದೀಗ ಹಿಂಪಡೆಯಲಾಗಿದ್ದು ಎಂದಿನಂತೆ ಈ ರೈಲು ಬೆಳಗ್ಗೆ 6.40ಕ್ಕೆ ಹೊರಡಲಿದ್ದು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.

    ಸ್ಥಗಿತಗೊಳಿಸಿರುವ ರೈಲುಗಳ ವಿವರ

    1. ಗಾಡಿ ನಂ. 56227 – ಬೆಂಗಳೂರು, ಶಿವಮೊಗ್ಗ ಟೌನ್ ಪ್ಯಾಸೇಂಜರ್- ರೈಲು, ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    2. ಗಾಡಿ ನಂ. 56228 – ಶಿವಮೊಗ್ಗ, ಬೆಂಗಳೂರು ಪ್ಯಾಸೆಂಜರ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    3. ಗಾಡಿ ನಂ. 20651 – ಬೆಂಗಳೂರು, ತಾಳಗುಪ್ಪ ಎಕ್ಸ್ ಪ್ರೆಸ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    4. ಗಾಡಿ ನಂ. 20652 – ತಾಳಗುಪ್ಪ, ಬೆಂಗಳೂರು ಎಕ್ಸ್ ಪ್ರೆಸ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    5. ಗಾಡಿ ನಂ. 16579 – ಯಶವಂತಪುರ, ಶಿವಮೊಗ್ಗ ಟೌನ್ ರೈಲು- ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.
    6. ಗಾಡಿ ನಂ. 16580 – ಶಿವಮೊಗ್ಗ ಟೌನ್, ಯಶವಂತಪುರ ರೈಲು- ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.

  • ಬೆಂಗ್ಳೂರಿಂದ ಪಾಟ್ನಾಗೆ ತೆರಳ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಗಂಡು ಮಗು ಜನನ

    ಬೆಂಗ್ಳೂರಿಂದ ಪಾಟ್ನಾಗೆ ತೆರಳ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಗಂಡು ಮಗು ಜನನ

    ಕೋಲಾರ: ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲೇ ತಾಯಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ನಡೆದಿದೆ.

    ಬೆಂಗಳೂರಿನಿಂದ-ಪಾಟ್ನಾಗೆ ತೆರಳುತ್ತಿದ್ದ ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲಿ ಮಹಿಳೆಗೆ ಮಾಲೂರು ಬಳಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಟೇಕಲ್ ಬಳಿ ಪ್ರಸವ ಆಗಿದೆ. ತಮಿಳುನಾಡು ಕಾಟ್ ಪಡಿ ಮೂಲದ 25 ವರ್ಷದ ಮಾಲತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಮಾಲತಿ ಹಾಗೂ ಮುನಿಸ್ವಾಮಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಹೆರಿಗೆಗಾಗಿ ಬೆಂಗಳೂರಿನಿಂದ ಕಾಟ್ ಪಡಿಗೆ ತೆರಳುತ್ತಿದ್ದ ವೇಳೆ ಟೇಕಲ್ ಬಳಿ ರೈಲಿನಲ್ಲೇ ಹೆರಿಗೆಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದು, ಕೂಡಲೇ ಸಹ ಪ್ರಯಾಣಿಕರು 108 ಗೆ ಕರೆ ಮಾಡಿ ತಾಯಿ ಮಗು ಇಬ್ಬರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews