Tag: ಎಕ್ಸ್‌ಪ್ರೆಸ್‌ ವೇ

  • ಎಕ್ಸ್‌ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ

    ಎಕ್ಸ್‌ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ

    ಮಂಡ್ಯ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟಿಪ್ಪರ್‌ನ (Tipper) ಚಕ್ರ ಬ್ಲಾಸ್ಟ್ (Tyre Blast) ಆಗಿದ್ದು, ಘಟನೆಯಿಂದ ಸಂಭವಿಸಬೇಕಿದ್ದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

    ಮಂಡ್ಯದ (Mandya) ಉಮ್ಮಡಹಳ್ಳಿ ಗೇಟ್ ಬಳಿ ಘಟನೆ ಸಂಭವಿಸಿದ್ದು, ಕಲ್ಲಿನ ಪುಡಿ ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದ ಟಿಪ್ಪರ್‌ನ ಚಕ್ರ ಬ್ಲಾಸ್ಟ್ ಆಗಿದೆ. ಘಟನೆಯ ಪರಿಣಾಮ ಟಿಪ್ಪರ್‌ನ ಟೈರ್‌ನ ಮಡ್‌ಗಾರ್ಡ್ (Mud Guard) ಹಿಂದೆ ಬರುತ್ತಿದ್ದ ಕಾರಿನ (Car) ಹಿಂಭಾಗಕ್ಕೆ ಹೋಗಿ ಬಿದ್ದಿದೆ. ಒಂದು ವೇಳೆ ಈ ಮಡ್‌ಗಾರ್ಡ್ ಏನಾದರೂ ಕಾರಿಗೆ ಬಡಿದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್‍ಗಿರಿ – ಆಟೋ ಚಾಲಕನಿಗೆ ಥಳಿಸಿದ ದುಷ್ಕರ್ಮಿಗಳು

    ಅದೃಷ್ಟವಶಾತ್ ಮಡ್‌ಗಾರ್ಡ್ ಕಾರಿನ ಹಿಂದೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಸದ್ಯ ಕೂದಲೆಳೆ ಅಂತರದಲ್ಲಿ ಡೆಡ್ಲಿ ಅಪಘಾತ ತಪ್ಪಿದ್ದು, ಅಪಘಾತ ತಪ್ಪಿದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಕ್ಸ್‌ಪ್ರೆಸ್ ವೇಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ದಂಡ

    ಎಕ್ಸ್‌ಪ್ರೆಸ್ ವೇಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ದಂಡ

    ರಾಮನಗರ: ದಶಪಥ ಹೆದ್ದಾರಿಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ನಿಷೇಧ ಹಿನ್ನೆಲೆ ಎಕ್ಸ್‌ಪ್ರೆಸ್ ಹೈವೇಯಲ್ಲಿ (Expressway) ಪೊಲೀಸರ ತಪಾಸಣೆ ಮುಂದುವರೆದಿದೆ.

    ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ವಾಹನಗಳ ಡೈವರ್ಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ಬೈಕ್ ಸಂಚಾರ ಬಹುತೇಕ ವಿರಳವಾಗಿದೆ. ಬೈಕ್, ಆಟೋ, ಟ್ರಾಕ್ಟರ್‌ಗಳು ಸರ್ವಿಸ್ ರಸ್ತೆಯಲ್ಲೇ ಸಂಚಾರ ಮಾಡುತ್ತಿವೆ. ಇನ್ನೂ ಹೆದ್ದಾರಿಯಲ್ಲಿ ನಿಯಮ ಉಲ್ಲಂಘನೆ (Violation Of Rules) ಮಾಡುತ್ತಿರುವ ವಾಹನಗಳಿಗೆ ಸ್ಥಳದಲ್ಲೇ ದಂಡ (Fine) ವಿಧಿಸಲಾಗುತ್ತಿದೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್

    ರಾಮನಗರದ (Ramanagara) ಸಂಘಬಸವನ ದೊಡ್ಡಿ ಎಂಟ್ರಿ ಬಳಿ ಪೊಲೀಸರು ತಪಾಸಣೆ ನಡೆಸಿ ಹಲವು ಬೈಕ್ ಸವಾರರಿಗೆ ದಂಡ ವಿಧಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಕೂಡಾ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 8ರಿಂದ 11ಗಂಟೆಯವರೆಗೆ ಬೈಕ್ ಸವಾರರಿಗೆ ಜಾಗೃತಿ ಮೂಡಿಸಿದ ಪೊಲೀಸರು ಬಳಿಕ ದಂಡಾಸ್ತ್ರ ಆರಂಭಿಸಿದ್ದಾರೆ. ಅಲ್ಲದೇ ಹೈವೇಯಲ್ಲಿ ಓವರ್ ಸ್ಪೀಡ್, ಲೇನ್ ಡಿಸಿಪ್ಲೀನ್ ಉಲ್ಲಂಘನೆ ಮಾಡಿದವರಿಗೂ ದಂಡ ಹಾಕಲಾಗಿದೆ. ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಪ್ರವಾಸ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೃತ್ಯುಕೂಪವಾಗುತ್ತಿದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ – ಅತಿ ವೇಗಕ್ಕಿಲ್ಲ ಕಡಿವಾಣ!

    ಮೃತ್ಯುಕೂಪವಾಗುತ್ತಿದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ – ಅತಿ ವೇಗಕ್ಕಿಲ್ಲ ಕಡಿವಾಣ!

    ರಾಮನಗರ: ಬೆಂಗಳೂರು-ಮೈಸೂರು (Bengaluru- Mysuru) ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ಎರಡು ಪ್ರಮುಖ ನಗರಗಳನ್ನ ಬೆಸೆಯುವ ಎಕ್ಸ್‌ಪ್ರೆಸ್‌ ಹೈವೇ (Expressway) ಇದೀಗ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಅವೈಜ್ಞಾನಿಕ ಕಾಮಗಾರಿ, ಸುರಕ್ಷತಾ ಕ್ರಮಗಳು ಹಾಗೂ ಅತಿವೇಗದಿಂದ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅಪಘಾತ ಸಂಭವಿಸಿ ಸಾವುನೋವುಗಳು ಸಂಭವಿಸುವ ಡೇಂಜರಸ್ ಹೆದ್ದಾರಿಯಾಗಿದೆ.

    ಮೈಸೂರು ಬೆಂಗಳೂರು ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬಹುಕೋಟಿ ವೆಚ್ಚದಲ್ಲಿ ದಶಪಥ ಹೆದ್ದಾರಿ ನಿರ್ಮಾಣವಾಗಿದೆ. ನೂತನವಾಗಿ ನಿರ್ಮಾಣಗೊಂಡಿರೋ ಹೆದ್ದಾರಿ ಉದ್ಘಾಟನೆಗೂ ಮೊದಲೇ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಿಂದ ಮೈಸೂರಿನವರೆಗೂ ಸುಮಾರು 130 ಕಿಲೋ ಮೀಟರ್ ದೂರದ ಹೆದ್ದಾರಿ ಈಗಾಗಲೇ ಶೇ.80ರಷ್ಟು ಕಾಮಗಾರಿ ಮುಗಿದಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಸುಂದರವಾದ ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಇದುವರೆಗೂ ಕಡಿವಾಣ ಬಿದ್ದಿಲ್ಲ. ಹೀಗಾಗಿ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ದಶಪಥ ಹೆದ್ದಾರಿಯಲ್ಲಿ 16 ಅಪಘಾತ ವಲಯಗಳಿವೆ, ಆದರೆ ಅಪಘಾತ ವಲಯಗಳು ಹಾಗೂ ತೀವ್ರ ತಿರುವುಗಳ ಬಗ್ಗೆ ವಾಹನ ಸವಾರರಿಗೆ ಮಾಹಿತಿ ನೀಡುವ ಫಲಕ ಅಳವಡಿಸಿಲ್ಲ, ಅಲ್ಲದೇ ಮಂದಗತಿ ವಾಹನಗಳು, ದ್ವಿಚಕ್ರ ವಾಹನಗಳು ಎಡಬದಿಯ ಟ್ರ್ಯಾಕ್‍ನಲ್ಲಿ ಚಲಿಸಬೇಕು ಎಂಬ ನಿಯಮವಿದೆ. ಆದರೆ ಯಾರೋಬ್ಬರೂ ಈ ನಿಯಮ ಪಾಲನೆ ಮಾಡದೇ ಇರೋದು ಅಪಘಾತಗಳಿಗೆ ಕಾರಣವಾಗ್ತಿದೆ. ಇತ್ತ ಕಾಮಗಾರಿ ಪೂರ್ಣಗೊಳ್ಳದೇ ಪೊಲೀಸ್ ಪೆಟ್ರೋಲಿಂಗ್ ಕೂಡಾ ಸಾಧ್ಯವಾಗದೇ ಅತಿವೇಗದ ವಾಹನಗಳಿಗೆ ಕಡಿವಾಣ ಇಲ್ಲದಂತಾಗಿದೆ.

    ಅಂದಹಾಗೆ ರಾಮನಗರ ಜಿಲ್ಲೆಯಲ್ಲಿ ವಿವಿಧ ಪೊಲೀಸ್ (Police) ಠಾಣಾ ವ್ಯಾಪ್ತಿಗಳಲ್ಲಿ ಈ ವರ್ಷದಲ್ಲಿ ಸುಮಾರು 1,262 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 302 ಜನರು ಸಾವನ್ನಪ್ಪಿದ್ರೆ, 1,272 ಜನರು ಗಾಯಗೊಂಡಿದ್ದಾರೆ. ನೂತನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಳೆದ ಆರು ತಿಂಗಳಲ್ಲಿ 77 ಅಪಘಾತ ಪ್ರಕರಣಗಳು ಸಂಭವಿಸಿದ್ದು, ಅದರಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಇನ್ನು 64 ಜನರಿಗೆ ಗಾಯಗಳಾಗಿವೆ. ಇದು ಕೂಡ ಆತಂಕಕ್ಕೆ ಕೂಡ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿ, ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ವಹಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಉತ್ತಮ ವರನಾಗಬಹುದು: ಮಗನ ನೋವಿನ ಕಥೆ ವಿವರಿಸಿದ ಕೇಂದ್ರ ಸಚಿವ

    ಒಟ್ಟಾರೆ ನೂತನ ಎಕ್ಸ್ ಪ್ರೆಸ್ ಹೈವೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕ್ರಮವಹಿಸಬೇಕಿದೆ. ಹೆದ್ದಾರಿ ಸುರಕ್ಷತಾ ಕ್ರಮಗಳ ತೆಗೆದುಕೊಳ್ಳುವುದು ಹೇಗೆ ಎಂಬುದೇ ತಲೆನೋವಾಗಿ ಪರಿಣಮಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಾಗ್ಪುರ- ಮುಂಬೈ ಎಕ್ಸ್‌ಪ್ರೆಸ್‌ವೇ ಶೀಘ್ರವೇ ಸಂಚಾರಕ್ಕೆ ಮುಕ್ತ – ವಾಹನಗಳಿಗೆ 120 kmph ವೇಗದ ಮಿತಿ ನಿಗದಿ

    ನಾಗ್ಪುರ- ಮುಂಬೈ ಎಕ್ಸ್‌ಪ್ರೆಸ್‌ವೇ ಶೀಘ್ರವೇ ಸಂಚಾರಕ್ಕೆ ಮುಕ್ತ – ವಾಹನಗಳಿಗೆ 120 kmph ವೇಗದ ಮಿತಿ ನಿಗದಿ

    ಮುಂಬೈ: ಮಹಾರಾಷ್ಟ್ರ ರಾಜ್ಯದ ಮಹತ್ವಾಕಾಂಕ್ಷೆಯ ಮುಂಬೈ- ನಾಗ್ಪುರ ಸಂಮೃದ್ಧಿ ಎಕ್ಸ್‌ಪ್ರೆಸ್‌ನಲ್ಲಿ(Mumbai-Nagpur Samruddhi Expressway) ಸಂಚರಿಸುವ ವಾಹನಗಳಿಗೆ ಗಂಟೆಗೆ 120 ಕಿ.ಮೀ(120 kmph) ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ.

    701 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಿಂದಿನ ಯೋಜನೆಯಂತೆ, ಈ ಹೆದ್ದಾರಿಯನ್ನು ಡಿಸೆಂಬರ್ 2021 ರಲ್ಲೇ ಲೋಕಾರ್ಪಣೆಯಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ಉದ್ಘಾಟನೆ ವಿಳಂಬವಾಗುತ್ತಿದೆ. ಇದೀಗ ಮಹಾರಾಷ್ಟ್ರ(Maharashtra) ಸರ್ಕಾರದಿಂದ ವೇಗದ ಮಿತಿ ನಿಗದಿ ಮಾಡಿದ್ದು, ಶೀಘ್ರವೇ ಈ ರಸ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

    ಈ ಹೆದ್ದಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ನಿರ್ಮಿಸಿದೆ. 150 kmph ವೇಗದ ಮಿತಿಯೊಂದಿಗೆ ಹೆದ್ದಾರಿಯ ಮಾನದಂಡಗಳ ಪ್ರಕಾರ, ಅವಶ್ಯಕತೆಗಳನ್ನು ಪೂರೈಸಲಾಗಿದೆ.

    ಹಾಲಿ ಉಪಮುಖ್ಯಮಂತ್ರಿ, ಮಾಜಿ ಸಿಎಂ ಆಗಿರುವ ದೇವೇಂದ್ರ ಫಡ್ನವೀಸ್‌ ಅವರ ಕನಸಿನ ಯೋಜನೆ ಇದಾಗಿದ್ದು, 2016ರ ಸಮಗ್ರ ಯೋಜನಾ ವರದಿ ಸಲ್ಲಿಕೆಯಾದ ಬಳಿಕ 2017ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿತ್ತು. 2018ರ ಡಿಸೆಂಬರ್‌ನಲ್ಲಿ ರಸ್ತೆ ನಿರ್ಮಾಣದ ಕೆಲಸ ಆರಂಭವಾಗಿತ್ತು. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

     

    ವಾಹನಗಳಿಗೆ ಮಿತಿ ಎಷ್ಟು?
    ಕಾರು ಸೇರಿದಂತೆ ಗರಿಷ್ಠ 8 ಪ್ರಯಾಣಿಕರನ್ನು ಸಾಗಿಸುವ ಪ್ರಯಾಣಿಕ ವಾಹನಗಳಿಗೆ ಸಮತಟ್ಟಾದ ರಸ್ತೆಯಲ್ಲಿ 120 kmph ವೇಗದ ಮಿತಿ. ಘಾಟ್‌ ಮತ್ತು ಸುರಂಗದಲ್ಲಿ  100 kmph.

    ವ್ಯಾನ್‌, ಬಸ್‌ ಸೇರಿದಂತೆ 9 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಸಮತಟ್ಟಾದ ರಸ್ತೆಯಲ್ಲಿ 100 kmph. ಘಾಟ್‌ ಮತ್ತು ಸುರಂಗದಲ್ಲಿ 80 kmph.

    ಟ್ರಕ್‌, ಲಾರಿ ಸರಕುಗಳನ್ನು ಸಾಗಿಸುವ ವಾಹನಗಳಿಗೆ ಸಮತಟ್ಟಾದ ರಸ್ತೆಯಲ್ಲಿ 80 kmph.

    ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳ ರಿಕ್ಷಾಗಳು ಮತ್ತು ತ್ರಿಚಕ್ರ ವಾಹನಗಳಿಗೆ ಈ ರಸ್ತೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    Live Tv
    [brid partner=56869869 player=32851 video=960834 autoplay=true]