ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಅವರ ಎಕ್ಸ್ ಖಾತೆಯನ್ನು (X Account) ಹ್ಯಾಕ್ ಮಾಡಿದ್ದು, ಹ್ಯಾಕರ್‌ಗಳು ಅವರ ಖಾತೆಯಿಂದ ಪಾಕಿಸ್ತಾನ (Pakistan) ಮತ್ತು ಟರ್ಕಿಯ (Turkey) ಧ್ವಜಗಳನ್ನು ಪೋಸ್ಟ್ ಮಾಡಿದ್ದಾರೆ.
ಖಾತೆ ಹ್ಯಾಕ್ ಆಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸೈಬರ್ ಅಪರಾಧ ಪೊಲೀಸರ ಗಮನಕ್ಕೆ ತಂದಿದ್ದೇವೆ. ಹ್ಯಾಕ್ ಆದ ಬಳಿಕ ಸುಮಾರು 30-45 ನಿಮಿಷಗಳ ಒಳಗಾಗಿ ಖಾತೆಯನ್ನು ಮರುಸ್ಥಾಪಿಸಲಾಗಿದೆ. ಅಲ್ಲದೇ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲಾರ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಟ ಧ್ರುವ ಸರ್ಜಾ ವಿಶೇಷ ಪೂಜೆ
ಕಠ್ಮಂಡು: ಭ್ರಷ್ಟಾಚಾರ ಹಾಗೂ ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಸರ್ಕಾರದ ವಿರುದ್ಧ ನೇಪಾಳದ (Nepal) ಜನತೆಗೆ ತಿರುಗಿಬಿದ್ದಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾಕಾರರು ಬೀದಿಗಿಳಿದಾಗ ನಡೆದ ಹಿಂಸಾತ್ಮಕ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಕೋಪಗೊಂಡ ಪ್ರತಿಭಟನಾಕಾರರು ಕರ್ಫ್ಯೂ ನಿರ್ಬಂಧಗಳನ್ನು ಮುರಿದು ಸಂಸತ್ತಿನ ಬಳಿಯ ನಿರ್ಬಂಧಿತ ವಲಯಗಳನ್ನು ಪ್ರವೇಶಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನೇಪಾಳ ರಾಜಧಾನಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ
ಪ್ರತಿಭಟನಾಕಾರರು ಮರದ ಕೊಂಬೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದು ಸರ್ಕಾರದ ವಿರೋಧಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡು ಸಿಡಿಸಿದರು. ಕೆಲವು ಪ್ರತಿಭಟನಾಕಾರರು ಸಂಸತ್ತಿನ ಆವರಣವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು, ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ಮುಖ್ಯ ಜಿಲ್ಲಾ ಅಧಿಕಾರಿ ಛಬಿಲಾಲ್ ರಿಜಾಲ್ ಪ್ರಕಾರ, ಕರ್ಫ್ಯೂ ಮಧ್ಯಾಹ್ನ 12:30 ರಿಂದ ರಾತ್ರಿ 10:00 ರವರೆಗೆ (ಸ್ಥಳೀಯ ಸಮಯ) ಜಾರಿಯಲ್ಲಿದೆ. ಈ ವಲಯಗಳಲ್ಲಿ ಸಾರ್ವಜನಿಕರ ಓಡಾಟ, ಸಭೆ ಸೇರುವುದು, ಪ್ರತಿಭಟನೆಗಳು ಅಥವಾ ಸುತ್ತುವರಿದ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಇಸ್ರೇಲಿನ ಜೆರುಸಲೇಂನಲ್ಲಿ ಉಗ್ರರ ದಾಳಿ – ಕನಿಷ್ಠ 5 ಬಲಿ, ಹಲವು ಮಂದಿಗೆ ಗಾಯ
ನೇಪಾಳ ಸರ್ಕಾರ ನೋಂದಾಯಿತ 26 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿದೆ. ಇಲ್ಲಿನ ಜನತೆಗೆ ಯೂಟ್ಯೂಬ್, ಎಕ್ಸ್, ಫೇಸ್‌ಬುಕ್ ಸೈಟ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದು ಬಳಕೆದಾರರ ಆಕ್ರೋಶ ಕಾರಣವಾಗಿದೆ. ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳು ನೇಪಾಳದಲ್ಲಿ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ.
ಸರ್ಕಾರದ ಕ್ರಮವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿರಾರು ಯುವ ನೇಪಾಳಿಗಳು ಕಠ್ಮಂಡುವಿನಲ್ಲಿ ಮೆರವಣಿಗೆ ನಡೆಸಿ, ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು. ದೇಶವನ್ನು ವ್ಯಾಪಿಸಿರುವ ಭ್ರಷ್ಟಾಚಾರದ ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಕಠ್ಮಂಡು: ನೇಪಾಳದಲ್ಲಿ (Nepal) ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ ವಿಧಿಸಲಾಗಿದೆ.
ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.
ಸ್ಥಳೀಯ ಮಟ್ಟದಲ್ಲಿ ನೋಂದಣಿಯಾಗಿರಲಿಲ್ಲ. ಜಾಹೀರಾತುಗಳ ಮೇಲೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಸ್ಥಳೀಯ ನೋಂದಣಿವರೆಗೂ ಬಳಕೆಗೆ ತಡೆ ಹಾಕುವಂತೆ ಕೋರ್ಟ್ ಸೂಚಿಸಿತ್ತು.
ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.
ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ʻಎಕ್ಸ್ʼನಲ್ಲಿ (Social media X) ಇಂದು (ಸೋಮವಾರ) ಮಧ್ಯಾಹ್ನ ಸರ್ವರ್ ಸಮಸ್ಯೆಯಾಗಿತ್ತು. ಭಾರತ, ಅಮೆರಿಕ, ಯುಕೆ ಸೇರಿದಂತೆ ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಇಂದು ಮಧ್ಯಾಹ್ನ 3:15ರ ಹೊತ್ತಿಗೆ ಡೌನ್ ಡಿಟೆಕ್ಟರ್‌ನಲ್ಲಿ ಭಾರತದಲ್ಲಿ 2,000ಕ್ಕೂ ಹೆಚ್ಚು ಸೇರಿ ಜಾಗತಿಕವಾಗು 21,000ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ವರದಿಯಾಗಿದೆ. ಸ್ಥಗಿತಗೊಂಡ ಕನಿಷ್ಠ 30-40 ನಿಮಿಷಗಳ ಬಳಿಕ ಕೆಲವು ಬಳಕೆದಾರರಿಗೆ ಇದು ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಪ್ಲಾಟ್‌ಫಾರ್ಮ್ ಸ್ಥಗಿತ ಟ್ರ್ಯಾಕಿಂಗ್ ವೇದಿಕೆ ಡೌನ್‌ಡೆಕ್ಟರ್ ವರದಿ ಮಾಡಿದೆ.
ಭಾರತದ ಅರವಿಂದ್ ಕೇಜ್ರಿವಾಲ್ (Aravind Kejriwal) ಮತ್ತು ರಾಹುಲ್ ಗಾಂಧಿ (Rahul Gandhi) ಅವರಿಗೆ ಹೋಲಿಸಿದರೆ ಮೋದಿ ಫಾಲೋರ್ವಸ್‌ಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು2.75 ಕೋಟಿ ಮಂದಿ ಫಾಲೋ ಮಾಡುತ್ತಿದ್ದರೆ ರಾಹುಲ್ ಗಾಂಧಿ ಅವರನ್ನು 2.64 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.
ಸದ್ಯ ಅಧಿಕಾರದಲ್ಲಿರುವ ಮುಖ್ಯಸ್ಥರ ಪೈಕಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ 3.81 ಕೋಟಿ, ಟರ್ಕಿಯ ಅಧ್ಯಕ್ಷ ಎರ್ಡೊಗನ್ 2.15 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.
ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗಲೇ ಟ್ವಿಟ್ಟರ್‌ನಲ್ಲಿ ಖಾತೆ ತೆರೆದಿದ್ದು 15 ವರ್ಷಗಳಿಂದ ಈ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಜನವರಿ 2009 ರಲ್ಲಿ ಮೋದಿ ಅವರು ಟ್ವಿಟ್ಟರ್‌ಗೆ ಎಂಟ್ರಿಯಾಗಿದ್ದು ಇಲ್ಲಿಯವರೆಗೆ 2,671 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.
ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಟೆಸ್ಲಾ ಸಂಸ್ಥಾಪಕ, ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅವರಿಗಿದೆ. ಮಸ್ಕ್ ಅವರಿಗೆ 18.96 ಕೋಟಿ ಫಾಲೋವರ್ಸ್ ಇದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ 13.17 ಕೋಟಿ ಮಂದಿ, ಹಾಡುಗಾರ ಜಸ್ಟಿನ್ ಬೈಬರ್ ಅವರಿಗೆ 11.10 ಕೋಟಿ ಫಾಲೋರ್ಸ್‌ಗಳಿದ್ದಾರೆ.
ನವದೆಹಲಿ: ಕನ್ನಡದ (Kannada) ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ಪ್ರಧಾನಿ ಮೋದಿ (Narendra Modi) ಫಿದಾ ಆಗಿದ್ದಾರೆ. ಖ್ಯಾತ ಗಾಯಕಿಯೊಬ್ಬರು ಹಾಡಿದ ಈ ಹಾಡಿನ ತುಣುಕನ್ನು ಮೋದಿ ಎಕ್ಸ್‌ನಲ್ಲಿ (X) ಹಂಚಿಕೊಂಡಿದ್ದಾರೆ.
ಶಿವಶ್ರೀ ಸ್ಕಂದ ಪ್ರಸಾದ್ (Sivasri Skandaprasad) ಹಾಡಿರುವ ವಿಡಿಯೋವನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಶೇರ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಶಕ್ತಿಯನ್ನು ಬಿಂಬಿಸುವ, ಎತ್ತಿಹಿಡಿಯುವ ಅದ್ಭುತ ಹಾಡಿದು. ಇಂತಹ ಪ್ರಯತ್ನಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುತ್ತದೆ ಎಂದು ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೇಳಿದ ಹಾಗೆ ಕೇಳಿದ್ರೆ ನಾವು ಆಡಳಿತ ಮಾಡೋಕಾಗಲ್ಲ: ಪರಮೇಶ್ವರ್
ಇದೇ ಜ.22 ರಂದು ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಲಿದೆ. ಈ ಐತಿಹಾಸಿಕ ದಿನಕ್ಕಾಗಿ ಸಮಸ್ತ ರಾಮಭಕ್ತರು ಕಾದು ಕುಳಿತಿದ್ದಾರೆ. ದೇಶದೆಲ್ಲೆಡೆ ರಾಮಭಕ್ತಿ, ರಾಮಭಜನೆ, ಶ್ರೀರಾಮ ಸ್ಮರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನ ಸ್ಮರಿಸುವ ಕನ್ನಡದ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ
ವಾಷಿಂಗ್ಟನ್: ವಿಶ್ವದ ನಂಬರ್ ಒನ್ ಶ್ರೀಮಂತ ಎಲನ್ ಮಸ್ಕ್ (Elon Musk) ಮಾಲೀಕತ್ವದ ಎಕ್ಸ್‌ನ (X) ಸುರಕ್ಷತಾ ತಂಡದಿಂದ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.
ನಿಂದನೀಯ ಭಾಷೆ, ದ್ವೇಷ ಪೂರಿತ ವಿಷಯಗಳನ್ನು ಗಮನಿಸುತ್ತಿದ್ದ ಸುರಕ್ಷತಾ ತಂಡದಿಂದ (Safety Team) ಸುಮಾರು 1 ಸಾವಿರ ಉದ್ಯೋಗಿಗಳನ್ನುಎಕ್ಸ್ ಹೊರ ಹಾಕಿದೆ ಎಂದು ಆಸ್ಟ್ರೇಲಿಯಾದ (Australia) ಇ-ಸೇಫ್ಟಿ ಕಮಿಷನ್ ತಿಳಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸಿಗನಿಗೆ ಅಯೋಧ್ಯೆಯ ಮಂತ್ರಾಕ್ಷತೆ ಹಂಚಿದ ಮಲೆನಾಡಿಗರು
ಆಸ್ಟ್ರೇಲಿಯಾದ ಆನ್‌ಲೈನ್ ವಾಚ್‌ಡಾಗ್ ಇ-ಸೇಫ್ಟಿ ಕಮಿಷನ್ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ ಹೊಸ ಅಂಕಿಅಂಶಗಳ ಪ್ರಕಾರ, ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ತಂಡದಲ್ಲಿ ಸಾವಿರ ಉದ್ಯೋಗ ಕಡಿತಗಳನ್ನು ಮಾಡಲಾಗಿದೆ. ಇದು ವೇದಿಕೆಯಲ್ಲಿ ದ್ವೇಷಪೂರಿತ ವಿಷಯಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದಿದೆ.
ಸುರಕ್ಷತಾ ತಂಡದಲ್ಲಿದ್ದ 80% ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ. ಇಷ್ಟು ಪ್ರಮಾಣದಲ್ಲಿ ಉದ್ಯೋಗಿಗಳನ್ನು ತೆಗೆದ ಪರಿಣಾಮ ಎಕ್ಸ್‌ನಲ್ಲಿ ದ್ವೇಷಪೂರಿತ ವಿಷಯಗಳು ಹೆಚ್ಚಾಗಿವೆ ಎಂದಿದೆ.
ಮಕ್ಕಳ ಅಶ್ಲೀಲ ಚಿತ್ರಗಳನ್ನು ವೇದಿಕೆಯಿಂದ ತೆಗೆಯದ್ದಕ್ಕೆ ಇ-ಸೇಫ್ಟಿ ಕಮಿಷನ್ ಎಕ್ಸ್ ಕಂಪನಿಗೆ 3,88,000 ಡಾಲರ್ ದಂಡವನ್ನು ವಿಧಿಸಿತ್ತು. ದಂಡವನ್ನು ಪಾವತಿಸಲು ನೀಡಿದ್ದ ಗಡುವನ್ನು ಎಕ್ಸ್ ಮೀರಿದ್ದು ಈಗ ಈ ದಂಡವನ್ನು ರದ್ದು ಪಡಿಸಲು ಕಾನೂನಿನ ಮೊರೆ ಹೋಗಿದೆ.
ವಾಷಿಂಗ್ಟನ್: ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ’ಎಕ್ಸ್’ (ಟ್ವಿಟ್ಟರ್) ತನ್ನ ದೈನಂದಿನ ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ ಎಂದು ಸಿಇಒ ಲಿಂಡಾ ಯಾಕರಿನೊ (Linda Yaccarino) ತಿಳಿಸಿದ್ದಾರೆ.
ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಲಿಂಡಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಳಕೆದಾರರಿಗೆ ಸಂಬಂಧಿಸಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಕಂಪನಿಯು ಪ್ರಸ್ತುತ 225 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆದೆ ಎಲೋನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ವಹಿಸಿಕೊಂಡ ನಂತರ 11.06% ಬಳಕೆದಾರರ ಸಂಖ್ಯೆ ಕುಸಿತ ಕಂಡಿದೆ ಎಂದಿದ್ದಾರೆ. ಇದನ್ನೂ ಓದಿ: 25 ವರ್ಷ ಪೂರೈಸಿದ ಸಂಭ್ರಮದಲ್ಲಿ ಗೂಗಲ್
ಕಳೆದ ವರ್ಷ ಎಲೋನ್ ಮಸ್ಕ್ ಅವರು ಟ್ವಿಟ್ಟರ್ ವಹಿಸಿಕೊಳ್ಳುವುದಕ್ಕೂ ಮುನ್ನ ಮೊದಲು 254.5 ಮಿಲಿಯನ್ ಬಳಕೆದಾರರಿದ್ದರು. 2022 ರ ನವೆಂಬರ್ ಮಧ್ಯದಲ್ಲಿ ಟ್ವಿಟ್ಟರ್ 259.4 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. X ಸುಮಾರು 1.5 ಕೋಟಿ ಬಳಕೆದಾರರನ್ನು ಕಳೆದುಕೊಂಡಿದೆ. ಆ ಮೂಲಕ ಸರಿಸುಮಾರು 5.6% ರಷ್ಟು ಕುಸಿತ ಕಂಡಿದೆ.
ವಾಷಿಂಗ್ಟನ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ (Twitter) ಲೋಗೋ (Logo) ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ವರ್ಷಗಳ ಐಕಾನಿಕ್ ನೀಲಿ ಬಣ್ಣದ ಹಕ್ಕಿ (Blue Bird) ಇದೀಗ ಮಾಯವಾಗಿದ್ದು, ಎಕ್ಸ್ (X) ಲೋಗೋ ಇದೀಗ ಕಾಣಿಸಿಕೊಳ್ಳುತ್ತಿದೆ.
ಟ್ವಿಟ್ಟರ್ ಅನ್ನು ಖರೀದಿಸಿರುವ ಎಲೋನ್ ಮಸ್ಕ್ (Elon Musk) ಅಪ್ಲಿಕೇಶನ್ ಅನ್ನು ರೀಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅದರ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ನ ಪ್ರಧಾನ ಕಚೇರಿಯಲ್ಲಿ ಎಕ್ಸ್ ಬ್ರ್ಯಾಂಡಿಂಗ್ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಎಲೋನ್ ಮಸ್ಕ್ ಭಾನುವಾರ ಟ್ವಿಟ್ಟರ್‌ನ ಲೋಗೋ ಬದಲಾವಣೆ ಬಗ್ಗೆ ಸುಳಿವು ನೀಡಿದ್ದರು. ನಾವು ಶೀಘ್ರವೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಹಾಗೂ ಎಲ್ಲಾ ಹಕ್ಕಿಗಳಿಗೂ ವಿದಾಯ ಹೇಳಬೇಕಿದೆ ಎಂದು ತಿಳಿಸಿ ದೊಡ್ಡ ಬಾಂಬ್ ಇಟ್ಟಿದ್ದರು. ಇದನ್ನೂ ಓದಿ: ಟ್ವಿಟ್ಟರ್‌ನ ನೀಲಿ ಹಕ್ಕಿಗೆ ಗುಡ್‌ಬೈ? – ಮಸ್ಕ್ ಹೊಸ ಬಾಂಬ್
ಮಸ್ಕ್ ಟ್ವಿಟ್ಟರ್‌ನ ನೀಲಿ ಹಕ್ಕಿಗೆ ಗುಡ್‌ಬೈ ಹೇಳುವ ಬಗೆಗಿನ ಟ್ವೀಟ್ನಿಂದಾಗಿ ಅವರು ಆ್ಯಪ್ ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದು ದೃಢಪಟ್ಟಿತು. ಈ ಹಿಂದೆಯೇ Twitter Inc. ಅನ್ನು X Corp. ನೊಂದಿಗೆ ವಿಲೀನ ಮಾಡಲಾಗಿದೆ. ಇದೀಗ ಟ್ವಿಟ್ಟರ್‌ನ ಲೋಗೋ ಬದಲಾಗಿದೆ. ಮಂದೆ ಟ್ವಿಟ್ಟರ್ ಎಕ್ಸ್ ಹೆಸರಿನಲ್ಲಿಯೇ ಮುಂದುವರಿಯಲಿದೆ. ಇದನ್ನೂ ಓದಿ: Twitter Monetisation: ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಹಣ – ಹೇಗೆ ಅಂತೀರಾ..?
ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಕಳೆದ ವರ್ಷ ಸ್ವಾಧೀನಪಡಿಸಿಕೊಂಡ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟ್ವಿಟ್ಟರ್ (Twitter) ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಮಸ್ಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಎಲೋನ್ ಮಸ್ಕ್ ಚೀನಾದ ವೀ ಚ್ಯಾಟ್ (WeChat) ರೀತಿಯ ಆ್ಯಪ್ ಅನ್ನು ಸೃಷ್ಟಿಸುವ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು. ಅದರಂತೆ ತಮ್ಮ ಕನಸಿನ ಎಕ್ಸ್ (X) ಆ್ಯಪ್ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಟ್ವಿಟ್ಟರ್ ಅನ್ನು ಎಕ್ಸ್ ಅಪ್ಲಿಕೇಶನ್‌ನೊಂದಿಗೆ ಕಾನೂನುಬದ್ಧವಾಗಿ ವಿಲೀನಗೊಳಿಸಲಾಗಿದೆ. ಇದೀಗ ಟ್ವೀಟ್ ಮಾಡಿರುವ ಮಸ್ಕ್ ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಹಾಗೂ ಎಲ್ಲಾ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ ಎಂದು ಬರೆದಿದ್ದಾರೆ. ಈ ಮೂಲಕ ಟ್ವಿಟ್ಟರ್ ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದಾಗಿ ತಿಳಿಸಿದ್ದಾರೆ.
And soon we shall bid adieu to the twitter brand and, gradually, all the birds
ಮಸ್ಕ್ ಟ್ವಿಟ್ಟರ್‌ನ ನೀಲಿ ಹಕ್ಕಿಗೆ (Blue Bird) ಗುಡ್‌ಬೈ ಹೇಳುವ ಬಗೆಗಿನ ಟ್ವೀಟ್ ಮಾಡುತ್ತಲೇ ಟ್ವಿಟ್ಟರ್ ಸ್ಥಗಿತಗೊಳ್ಳುತ್ತಿದೆಯೇ ಎಂಬ ಗೊಂದಲ ಬಳಕೆದಾರರಲ್ಲಿ ಮೂಡಿದೆ. ಆದರೆ ಮಸ್ಕ್ ಸರಳವಾಗಿ ಆ್ಯಪ್ ಅನ್ನು ರೀಬ್ರ್ಯಾಂಡ್ ಮಾಡುವ ಬಗ್ಗೆ ತಿಳಿಸಿದ್ದಾರೆ. ಇದರರ್ಥ ಮುಂದೆಯೂ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗಲಿದೆ. ಆದರೆ ಅದರ ಐಕಾನಿಕ್ ನೀಲಿ ಬಣ್ಣದ ಹಕ್ಕಿಯ ಲೋಗೋ ಮುಂದೆ ಕಾಣಿಸಿಕೊಳ್ಳುವುದಿಲ್ಲ.
ಮಸ್ಕ್ ಇನ್ನೊಂದು ಟ್ವೀಟ್ ಮಾಡಿ ಎಕ್ಸ್ ಆ್ಯಪ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಎಕ್ಸ್ನ ಲೋಗೋವನ್ನು ಶೀಘ್ರವೇ ಪೋಸ್ಟ್ ಮಾಡಿ ಅದನ್ನು ವಿಶ್ವದಾದ್ಯಂತ ಪ್ರಸಾರ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: Netflixː ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಬಂದ್
ಏನಿದು ಎಕ್ಸ್ ಅಪ್ಲಿಕೇಶನ್?
ಎಕ್ಸ್ ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮ ಆಲೋಚನೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವ ಪ್ಲಾಟ್‌ಪಾರ್ಮ್‌ಗಿಂತಲೂ ಹೆಚ್ಚಿನ ಕೆಲಸ ಮಾಡುವ ಸಾಧ್ಯತೆಯಿದೆ. ಈ ಅಪ್ಲಿಕೇಶನ್ ಬಗ್ಗೆ ಮಸ್ಕ್ ಹಲವು ಬಾರಿ ಚರ್ಚಿಸಿದ್ದಾರೆ. ಇದರಲ್ಲಿ ಜನರು ಸಂಪರ್ಕಿಸಬಹುದು, ಹಣಕಾಸಿನ ವ್ಯವಹಾರ ಮಾಡಿಕೊಳ್ಳಬಹುದು, ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳಿರುವ ಸಾಧ್ಯತೆಯಿದೆ.