Tag: ಎಕ್ಸಾಂ

  • ಎಕ್ಸಾಂ ನಡೆಯುತ್ತಿದ್ದ ಸ್ಕೂಲ್‍ಗೆ ನುಗ್ಗಿದ ಹಿಂದೂ ಮುನ್ನಾನಿ ಸದಸ್ಯರು – ಶಾಲೆ ಮುಚ್ಚುವಂತೆ ಒತ್ತಾಯ

    ಎಕ್ಸಾಂ ನಡೆಯುತ್ತಿದ್ದ ಸ್ಕೂಲ್‍ಗೆ ನುಗ್ಗಿದ ಹಿಂದೂ ಮುನ್ನಾನಿ ಸದಸ್ಯರು – ಶಾಲೆ ಮುಚ್ಚುವಂತೆ ಒತ್ತಾಯ

    ಪುದುಚೇರಿ: ಪುದುಚೇರಿಯ (Puducherry) ಬಾಲಕಿಯರ ಶಾಲೆಗೆ ನುಗ್ಗಿದ ಹಿಂದೂ ಮುನ್ನಾನಿ ಸದಸ್ಯರು ವಿದ್ಯಾರ್ಥಿನಿಯರು ತಮ್ಮ ತ್ರೈ ಮಾಸಿಕ ಪರೀಕ್ಷೆಯನ್ನು ಬರೆಯುತ್ತಿದ್ದರೂ ಶಾಲೆಯನ್ನು ಮುಚ್ಚುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಹಿಂದೂ ಮುನ್ನಾನಿ ಸದಸ್ಯರನ್ನು ಚದುರಿಸಿದ್ದಾರೆ.

    ಹಿಂದೂ ಮುನ್ನಾನಿ (Hindu Munnani) ನೇತೃತ್ವದಲ್ಲಿ ಐದು ಹಿಂದೂಪರ ಸಂಘಟನೆಗಳು ಸೇರಿಕೊಂಡು ಮಂಗಳವಾರ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ (Union Territory of Puducherry) ಬಂದ್‍ಗೆ ಕರೆ ನೀಡಿದ್ದವು. ಇದರಿಂದಾಗಿ ಅಂಗಡಿಗಳನ್ನು ಮುಚ್ಚಲಾಯಿತು ಮತ್ತು ಹಲವಾರು ಖಾಸಗಿ ಶಾಲೆಗಳಿಗೆ ಸೆಪ್ಟೆಂಬರ್ 27 ರಂದು ರಜೆ ಘೋಷಿಸಲಾಗಿದೆ. ಆದರೆ ತ್ರೈಮಾಸಿಕ ಪರೀಕ್ಷೆ ನಡೆಯುತ್ತಿರುವುದರಿಂದ 600 ಬಾಲಕಿಯರು ಓದುತ್ತಿರುವ ಉಪ್ಪಳಂನಲ್ಲಿರುವ (Uppallam) ಇಮ್ಯಾಕ್ಯುಲೇಟ್ ಗರ್ಲ್ಸ್‌  ಹೈಯರ್ ಸೆಕೆಂಡರಿ ಶಾಲೆಗೆ (Girls Higher Secondary School) ರಜೆ ಘೋಷಿಸಲಾಗಿರಲಿಲ್ಲ.

    Puducherry

    ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿರುವುದನ್ನು ಕಂಡ ಹಿಂದೂ ಮುನ್ನಾನಿ ಕಾರ್ಯಕರ್ತರು ಶಾಲೆಯನ್ನು ಮುಚ್ಚುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ಈ ವಿಚಾರ ತಿಳಿದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದನ್ನೂ ಓದಿ: ಪ್ರತಿಷ್ಠಾಪನೆಯಾಗಿದ್ದ ದುರ್ಗಾ ದೇವಿಯ ವಿಗ್ರಹ ವಿರೂಪ – ಇಬ್ಬರು ಮಹಿಳೆಯರು ಅರೆಸ್ಟ್

    ತಂಥೈ ಪೆರಿಯಾರ್ ದ್ರಾವಿಡರ್ ಕಳಗಂನ (Thanthai Periyar Dravidar Kazhagam) ಕಾರ್ಯಕರ್ತರು ಕೂಡ ಶಾಲೆಗೆ ಜಮಾಯಿಸಿ ತೀವ್ರ ವಾಗ್ವಾದ ನಡೆಸಿದರು. ಕೊನೆಯದಾಗಿ ಪುದುಚೇರಿ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದರು ಮತ್ತು ಹಿಂದೂ ಮುನ್ನಾನಿ ಕಾರ್ಯಕರ್ತರನ್ನು ಚದುರಿಸಿದರು. ನಂತರ ಪರೀಕ್ಷೆಗಳನ್ನು ನಿಗದಿತ ಸಮಯದಲ್ಲಿಯೇ ನಡೆಸಲಾಯಿತು. ಇದನ್ನೂ ಓದಿ: ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು

    Live Tv
    [brid partner=56869869 player=32851 video=960834 autoplay=true]

  • ನಾಳೆ ನನಗೆ ಎಕ್ಸಾಂ ಇದೆ ಅದಕ್ಕಿಂತ ಮುಖ್ಯ ಕೊಹ್ಲಿ ಆಟ ನೋಡುವುದು: ಬಾಲಕನ ಪೋಸ್ಟರ್ ವೈರಲ್

    ನಾಳೆ ನನಗೆ ಎಕ್ಸಾಂ ಇದೆ ಅದಕ್ಕಿಂತ ಮುಖ್ಯ ಕೊಹ್ಲಿ ಆಟ ನೋಡುವುದು: ಬಾಲಕನ ಪೋಸ್ಟರ್ ವೈರಲ್

    ಮುಂಬೈ: ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಅವರ ಆಟ ನೋಡುವುದೆ ಹಬ್ಬ. ಇದೀಗ ಐಪಿಎಲ್‍ನಲ್ಲಿ ಆರ್​ಸಿಬಿ ಪರ ಆಡುತ್ತಿರುವ ಕೊಹ್ಲಿ ಆಟ ನೋಡಲು ಒಬ್ಬ ಬಾಲಕ ಮರುದಿನ ಇದ್ದ ಪರೀಕ್ಷೆ ಬಿಟ್ಟು ಬಂದು ಸ್ಟೇಡಿಯಂನಲ್ಲಿ ಪೋಸ್ಟರ್ ಹಿಡಿದು ವೈರಲ್ ಆಗಿದ್ದಾನೆ.

    ನಿನ್ನೆ ಬೆಂಗಳೂರು ಮತ್ತು ಪಂಜಾಬ್ ನಡುವೆ ಮುಂಬೈನಲ್ಲಿ ಪಂದ್ಯ ನಡೆಯುತ್ತಿತ್ತು. ಈ ಪಂದ್ಯ ನೋಡಲು ಮೈದಾನಕ್ಕೆ ಬಂದಿದ್ದ ಬಾಲನೋರ್ವ ಹಿಡಿದಿದ್ದ ಪೋಸ್ಟರ್ ಒಂದು ಗಮನಸೆಳೆಯಿತು. ಈ ಪೋಸ್ಟರ್‌ನಲ್ಲಿ ನನಗೆ ನಾಳೆ ಎಕ್ಸಾಂ ಇದೆ. ಆದರೆ ಕಿಂಗ್ ಕೊಹ್ಲಿ ಆಟ ನೋಡುವುದು ತುಂಬಾ ಮುಖ್ಯ ಎಂದು ಬರೆದುಕೊಂಡ ಪೋಸ್ಟರ್‌ ಹಿಡಿದು ಬಾಲಕ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್​ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು

    ನಿನ್ನೆ ಪಂಜಾಬ್ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದರು ಆರ್​ಸಿಬಿ ಸೋಲು ಕಂಡಿತ್ತು. ಆದರೆ ಪಂದ್ಯದಲ್ಲಿ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್ ಸಿಡಿಸಲು ಮುಂದಾದರು ಅದರಲ್ಲೂ ನಾಯಕ ಡು ಪ್ಲೆಸಿಸ್ ಸಿಕ್ಸರ್‌ಗಳ ಸುರಿಮಳೆ ಗೈದರು. ಈ ಜೋಡಿ 2ನೇ ವಿಕೆಟ್‍ಗೆ 118 ರನ್ (61 ಎಸೆತ) ಜೊತೆಯಾಟವಾಡಿತು. ಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ನೋಡುತ್ತಿದ್ದಂತೆ ಅಭಿಮಾನಿಗಳು ಸಂತಸ ಪಟ್ಟರು ಆದರೆ ಅವರ ಆಟ 88 ರನ್ (57 ಎಸೆತ, 3 ಬೌಂಡರಿ, 7 ಸಿಕ್ಸ್)ಗೆ ಕೊನೆಗೊಂಡಿತು. ಬಳಿಕ ಬಂದ ದಿನೇಶ್ ಕಾರ್ತಿಕ್ ಸ್ಲಾಗ್ ಓವರ್‌ಗಳಲ್ಲಿ ಕೊಹ್ಲಿ ಜೊತೆಗೂಡಿ ರನ್ ಮಳೆ ಸುರಿಸಿದರು. ಕೊಹ್ಲಿ ಅಜೇಯ 41 ರನ್ (29 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಮಿಂಚಿದರು. ಇದನ್ನೂ ಓದಿ: ಹೊಸ ತಂಡಗಳಿಗಿಂದು ಮೊದಲ ಪಂದ್ಯ – ಗೆಲುವು ಯಾರಿಗೆಂಬುದೇ ಕುತೂಹಲ?

    ಆರ್‌ಸಿಬಿಯ 205 ರನ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಬಿಗ್ ಹಿಟ್ಟರ್‌ಗಳಾದ ಶಾರೂಖ್ ಖಾನ್ ಮತ್ತು ಓಡೆನ್ ಸ್ಮಿತ್ ಸೇರಿ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿ 5 ವಿಕೆಟ್‍ಗಳ ಅಂತರದ ಗೆಲುವು ಸಾಧಿಸಿತು.

  • ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ವಾಪಸ್ ಕಳುಹಿಸಿದ ಬಿಇಓ

    ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ವಾಪಸ್ ಕಳುಹಿಸಿದ ಬಿಇಓ

    ಬೆಂಗಳೂರು: ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ವಾಪಸ್ ಕಳಿಸಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

    ರಾಜಾಜಿನಗರದ ಶಾಲಾ ಕೇಂದ್ರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿತ್ತು. ಹಿಜಬ್ ಧರಿಸಿ ಪರೀಕ್ಷಾ ಕೆಲಸಕ್ಕೆ ಹಾಜರಾಗಿದ್ದ ಶಿಕ್ಷಕಿಯನ್ನು ಬಿಇಓ ವಾಪಸ್ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಜೊತೆಗೆ ಮಾತನಾಡಿದ ಬಿಇಓ ರಮೇಶ್, ಶಿಕ್ಷಕಿಯೊಬ್ಬರು ಹಿಜಬ್ ಧರಿಸಿಕೊಂಡು ಬಂದ ಹಿನ್ನೆಲೆ ಪರೀಕ್ಷಾ ಕೆಲಸದಿಂದ ಬಿಡುಗಡೆ ಮಾಡಿ ಕಳಿಸಿಸಲಾಗಿದೆ. ಶಿಕ್ಷಕಿಯನ್ನ ಅಮಾನತು ಮಾಡಿಲ್ಲ. ಪರೀಕ್ಷಾ ಕೆಲಸದಿಂದ ಬಿಡುಗಡೆ ಮಾಡಿ ಕಳಿಸಲಾಗಿದೆ ಎಂದು ಹೇಳಿದ್ದಾರೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸರ್ಕಾರ ಸಮವಸ್ತ್ರ ನಿಯಮ ಕಡ್ಡಾಯ ಮಾಡಿದೆ. ಎಕ್ಸಾಂಗೆ ಹಿಜಬ್ ನಿಷೇಧ ಮಾಡಿದೆ. ಹೈಕೋರ್ಟ್ ಆದೇಶದ ಮೇಲೆ ಹಿಜಬ್ ಸೇರಿದಂತೆ ಯಾವುದೇ ಧಾರ್ಮಿಕ ಭಾವನೆ ವಸ್ತ್ರಗಳಿಗೆ ಅವಕಾಶ ಇಲ್ಲ. ಸರ್ಕಾರಿ ಶಾಲಾ ಮಕ್ಕಳು ಸರ್ಕಾರ ನಿಗದಿ ಮಾಡಿದ ಸಮವಸ್ತ್ರ ಧರಿಸೋದು ಕಡ್ಡಾಯ ಮಾಡಿದೆ.

    ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಆಯಾ ಶಾಲಾ ಆಡಳಿತ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಿಕೊಂಡು ಬರೋದು ಕಡ್ಡಾಯವಾಗಿದೆ. ಹಿಜಬ್ ಧರಿಸಿ ಬಂದ್ರೆ ಎಕ್ಸಾಂ ಬರೆಯಲು ಅವಕಾಶ ಇಲ್ಲ. ಇದೇ ಕಾರಣಕ್ಕೆ ಎಕ್ಸಾಂ ಗೈರಾದ್ರೆ ವಿಶೇಷ ಪರೀಕ್ಷೆಗೆ ಅವಕಾಶ ಇಲ್ಲ. ಮತ್ತೆ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಆದರೆ ಕೆಲವು ವಿದ್ಯಾರ್ಥಿಗಳು ಮಾತ್ರ ಹಿಜಬ್ ತೆಗೆದು ಪರೀಕ್ಷೆಗೆ ಹಾಜರಾದರೆ ಇನ್ನು ಕೆಲವರು ಪರೀಕ್ಷಾ ಕೇಂದ್ರದಿಂದ ಮನೆಗೆ ವಾಪಸ್ ಆಗಿರುವ ಘಟನೆಗಳು ಕೇಳಿಬಂದಿದೆ.

  • ಅಪ್ಪ, ಅಮ್ಮನ ಜೊತೆ ಹೇಳಿ ನನ್ನನ್ನು ಪಾಸ್ ಮಾಡಿಸಿ: ನಿಂತಿದ್ದ ಮಕ್ಕಳ ಜೊತೆ ಸುಮಲತಾ ಮನವಿ

    ಅಪ್ಪ, ಅಮ್ಮನ ಜೊತೆ ಹೇಳಿ ನನ್ನನ್ನು ಪಾಸ್ ಮಾಡಿಸಿ: ನಿಂತಿದ್ದ ಮಕ್ಕಳ ಜೊತೆ ಸುಮಲತಾ ಮನವಿ

    ಮಂಡ್ಯ: ನಿಮ್ಮ ಪರೀಕ್ಷೆ ಮುಗಿದಿದೆ, ಇದೀಗ ನನ್ನ ಎಕ್ಸಾಂ ಇದೆ. ನಾನು ಪರೀಕ್ಷೆ ಬರೀಬೇಕು, ನಿಮ್ಮ ಅಪ್ಪ-ಅಮ್ಮನಿಗೆ ಹೇಳಿ ಪಾಸ್ ಮಾಡಿಸಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಮಕ್ಕಳ ಜೊತೆ ಮಾತನಾಡಿದ್ದಾರೆ.

    ರಾಯಸಮುದ್ರ ಗ್ರಾಮದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿ ನಿಂತಿದ್ದ ಚಿಕ್ಕ ಚಿಕ್ಕ ಮಕ್ಕಳು “ಕ್ರಮ ಸಂಖ್ಯೆ ಇಪ್ಪತ್ತು, ಕುಮಾರಸ್ವಾಮಿಗೆ ಆಪತ್ತು”, “ಗೆಲ್ತಾರಪ್ಪೊ ಗೆಲ್ತಾರೆ, ಸುಮಲತಾ ಗೆಲ್ತಾರೆ” ಘೋಷಣೆ ಕೂಗಿದರು.

    ಮಕ್ಕಳು ಈ ರೀತಿ ಘೋಷಣೆ ಕೂಗಿದ್ದನ್ನು ಕಂಡು ಸುಮಲತಾ, “ನೀವೆಲ್ಲಾ ಚೆನ್ನಾಗಿ ಓದಿ ಪರೀಕ್ಷೆ ಬರೆದ್ರಾ?” ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು, “ಹಃ ಚೆನ್ನಾಗಿ ಬರೆದು ಪಾಸ್ ಆಗಿದ್ದೇವೆ” ಎಂದು ಉತ್ತರಿಸಿದರು. ಮತ್ತೆ ಸುಮಲತಾ ಅವರು, “ನಿಮ್ಮ ಎಕ್ಸಾಂ ಮುಗಿದಿದೆ, ಇದೀಗ ನನ್ನ ಎಕ್ಸಾಂ ಇದೆ. ನಾನು ಪರೀಕ್ಷೆ ಬರೆಯಬೇಕು, ನಿಮ್ಮಪ್ಪ ಅಮ್ಮನಿಗೆ ಹೇಳಿ ಪಾಸ್ ಮಾಡಿಸಿ. ಕ್ರಮಸಂಖ್ಯೆ, ಚಿಹ್ನೆ ಬಗ್ಗೆ ನಿಮ್ಮಪ್ಪ ಅಮ್ಮನಿಗೆ ಹೇಳಿಕೊಡಿ” ಎಂದ ಸುಮಲತಾ ಮಕ್ಕಳ ಜೊತೆ ಮನವಿ ಮಾಡಿದರು.

    ಸುಮಲತಾ ಅವರು ಕೆಆರ್ ಪೇಟೆಯ ತೆಂಡೆಕೆರೆ, ಶೀಳನೆರೆ, ರಾಯಸಮುದ್ರ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ರಾಯಸಮುದ್ರದ ಗ್ರಾಮಸ್ಥೆಯೊಬ್ಬರು ಸುಮಲತಾ ಅವರಿಗೆ ರವಿಕೆ, ಬೆಲ್ಲ, ಅಕ್ಕಿ, ತೆಂಗಿನ ಕಾಯಿ, ಎಲೆ, ಅಡಿಕೆ ಸಮೇತ ಮಡಿಲು ತುಂಬಿ ಆಶೀರ್ವದಿಸಿದರು.

  • ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ- ಡೆತ್‍ನೋಟ್ ಬರೆದು 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ- ಡೆತ್‍ನೋಟ್ ಬರೆದು 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಫೀಸ್ ಕಟ್ಟದ ಕಾರಣ ಪರೀಕ್ಷೆ ನಡೆಯುತ್ತಿದ್ದ ವೇಳೆಯೇ ಕ್ಲಾಸ್ ರೂಮಿನಿಂದ ಹೊರಹಾಕಿದ್ದಕ್ಕೆ ಮನನೊಂದು 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ ನಲ್ಲಿ ನಡೆದಿದೆ.

    ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿ ಬಾಲಕಿಯನ್ನ ಕ್ಲಾಸ್‍ನಿಂದ ಹೊರಹಾಕಿ ಎಲ್ಲರ ಮುಂದೆ ಅವಮಾನಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿಯ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದ್ದು, “ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿ 2 ಸಾವಿರ ರೂ. ಫೀಸ್ ಕಟ್ಟುವುದು ಬಾಕಿ ಇತ್ತು ಎಂದು ಪೊಲೀಸರು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಶಾಲೆಯವರು ನನ್ನ ಹೆಸರು ಕರೆದು ಕ್ಲಾಸ್‍ನಿಂದ ಹೊರಹಾಕಿದಾಗ ನನಗೆ ಅವಮಾನವಾಯಿತು ಎಂದು ಬಾಲಕಿ ಮನೆಗೆ ಬಂದ ನಂತರ ತನ್ನ ಸಹೋದರಿಯೊಂದಿಗೆ ಹೇಳಿಕೊಂಡಿದ್ದಳು. ಆದ್ರೆ ಬಳಿಕ ಮಲ್ಕಜ್ಗಿರಿಯ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಕುಟುಂಬಸ್ಥರ ದೂರಿನನ್ವಯ ಪೊಲೀಸರು ಶಾಲೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.