Tag: ಎಕ್ತಾ ಕಪೂರ್

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ

    ಬಾಲಿವುಡ್ (Bollywood) ನಿರ್ದೇಶಕಿ ಕಮ್ ನಿರ್ಮಾಪಕಿ ಎಕ್ತಾ ಕಪೂರ್ (Ekta Kapoor) ಇದೀಗ ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ಕಟೀಲು ದುರ್ಗಾಪರಮೇಶ್ವರಿ (Kateel Sri Durgaparameshwari Temple) ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಎಕ್ತಾ ಕಪೂರ್, ಈಗ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಸಮಯ ದೇವಸ್ಥಾನದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಬಳಿಕ ದೇವಸ್ಥಾನದ ವತಿಯಿಂದ ದೇವರ ವಿಶೇಷ ವಸ್ತ್ರ ನೀಡಿ ಗೌರವಿದ್ದಾರೆ. ನಂತರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಎಕ್ತಾ ಕಪೂರ್ ಕುಟುಂಬ ಭೇಟಿ ಕೊಟ್ಟಿದ್ದಾರೆ.

    ಇನ್ನೂ ಹಿಂದಿ ಸಿನಿಮಾರಂಗದಲ್ಲಿ ಸೀರಿಯಲ್ ಮತ್ತು ಸಿನಿಮಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಎಕ್ ವಿಲನ್, ಬಿಗ್ ಬಿ ಮತ್ತು ರಶ್ಮಿಕಾ ನಟನೆಯ ‘ಗುಡ್ ಬೈ’ ಸಿನಿಮಾ, ಯೂ ಟರ್ನ್ ಚಿತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  • ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಕಂಗನಾ

    ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಕಂಗನಾ

    ಢಾಕಾ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ಝರಿನಾ ಎಕ್ತಾ ಕಪೂರ್ ಲಾಕ್ ಅಪ್ ಟ್ರೈಲರ್ ಬಿಡುಗಡೆ ದಿನದಂದು ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.

    ಕಂಗನಾ ರಣಾವತ್ ಮೊದಲ ಬಾರಿಗೆ ನಿರೀಕ್ಷಿತ ರಿಯಾಲಿಟಿ ಶೋ ಒಂದರ ಅತಿಥಿಯಾಗುತ್ತಿದ್ದು, ಲಾಕ್ ಅಪ್ ಅಂತಿಮವಾಗಿ ಬುಧವಾರ ದೆಹಲಿಯಲ್ಲಿ ತನ್ನ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿಸುವ ಸಲುವಾಗಿ, ಎಕ್ತಾ ಕಪೂರ್, ಕಂಗನಾ ಹಾಗೂ ರಿಯಾಲಿಟಿ ಶೋನ ತಮ್ಮ ತಂಡದೊಂದಿಗೆ ಗುರುದ್ವಾರ ಬಾಂಗ್ಲಾ ಸಾಹಿಬ್‍ಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

     

    View this post on Instagram

     

    A post shared by Kangana Ranaut (@kanganaranaut)

    ಅವರ ಮುಂಬರುವ ಫಿಯರ್ಲೆಸ್ ರಿಯಾಲಿಟಿ ಶೋ ಲಾಕ್ ಅಪ್ ಈಗಾಗಲೇ ಸಾಕಷ್ಟು ಜನರ ಗಮನ ಸೆಳೆದಿದ್ದು, ಅಭಿಮಾನಿಗಳ ಮನೆ ಮಾತಾಗಿದೆ. ಉದ್ಯಮಿ ಮಹಿಳೆ ಏಕ್ತಾ ಕಪೂರ್ ಯಾವಾಗಲೂ ಭಾರತೀಯ ದೂರದರ್ಶನ ಉದ್ಯಮಕ್ಕೆ ಹೊಸ ಮತ್ತು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಪರಿಚಯಿಸಿದ್ದಾರೆ. ಈಗ ಅವರು ಹೊಸ ರಿಯಾಲಿಟಿ ಶೋ ಆದ ಲಾಕ್ ಅಪ್‍ನಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?

    ಕಾರ್ಯಕ್ರಮವು ಇದೇ ಫೆಬ್ರವರಿ 27 ರಂದು ಆಲ್ಟ್ ಬಾಲಾಜಿ ಮತ್ತು ಎಮ್‍ಎಕ್ಸ್ ಪ್ಲೇಯರ್ ನಂತಹ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ.

  • ಶ್ರೀದೇವಿಯವರ ಪ್ರಾಣಕ್ಕೆ ವಿಪರೀತ ಶಸ್ತ್ರಚಿಕಿತ್ಸೆಯೇ ಮುಳುವಾಯ್ತಾ? ಜನ ಹೇಳೋದು ಏನು?

    ಶ್ರೀದೇವಿಯವರ ಪ್ರಾಣಕ್ಕೆ ವಿಪರೀತ ಶಸ್ತ್ರಚಿಕಿತ್ಸೆಯೇ ಮುಳುವಾಯ್ತಾ? ಜನ ಹೇಳೋದು ಏನು?

    ಮುಂಬೈ: ಬಹುಭಾಷಾ ನಟಿ ಶ್ರೀದೇವಿ ಅವರು ಹೆಚ್ಚು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದಲೇ ಮೃತಪಟ್ಟಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ.

    ಸೌಂದರ್ಯಕ್ಕೆ ಹೆಚ್ಚು ಗಮನಹರಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಶನಿವಾರ ರಾತ್ರಿ ದುಬೈಯಲ್ಲಿ ಹೃದಯ ಸ್ತಂಭನಗೊಂಡು ಶ್ರೀದೇವಿ ಮೃತಪಟ್ಟಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.

    ಜನ ಹೇಳೋದು ಏನು?
    ಚರ್ಮದ ಲೇಸರ್ ಶಸ್ತ್ರಚಿಕಿತ್ಸೆ, ಸಿಲಿಕಾನ್ ಸ್ತನ ಸರಿಪಡಿಸುವಿಕೆ, ಮುಖದ ಸೌಂದರ್ಯ ಹೆಚ್ಚಿಸಲು ಮಾಡಿಸಿಕೊಂಡ ಚಿಕಿತ್ಸೆಗಳು ಮತ್ತು ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಂಡ ಔಷಧಿಗಳ ಸೇವನೆ ದೇಹಕ್ಕೆ ಮಾರಕವಾಗಿ ಪರಿಣಮಿಸಿದೆ.

    ಈ ಎಲ್ಲಾ ಶಸ್ತ್ರಚಿಕಿತ್ಸೆಗಳಿಂದ ಅವರು ಇನ್ನಷ್ಟು ಯೌವನದಿಂದ ಕಾಣಬಹುದು ಆದರೆ, ತಮ್ಮ ದೇಹದ ಶಕ್ತಿಗೂ ಮೀರಿದ ಶ್ರಮವನ್ನ ಹಾಕಿದರೇ ಅದು ತಡೆದುಕೊಳ್ಳಲು ಸಾಧ್ಯವೇ? ನೈಜ್ಯ ಸೌಂದರ್ಯವನ್ನ ಗೌರವಿಸಿ. ನಿಮ್ಮ ದೇಹವನ್ನ ಗೌರವಿಸಿ. ಇದನ್ನೂ ಓದಿ: ಸಿನಿಮಾ ಕ್ಷೇತ್ರದಲ್ಲಿ ಗ್ಲಾಮರ್ ಗೆ ಪ್ರಾಮುಖ್ಯತೆ ಹೆಚ್ಚು ಯಾಕೆ: ರಕ್ಷಿತಾ ಪ್ರೇಮ್ ಪ್ರಶ್ನೆ

    ಯಾವುದೇ ಶಸ್ತ್ರಚಿಕಿತ್ಸೆಗಳನ್ನ ಮಾಡುವಾಗ ಅರವಳಿಕೆ ಮದ್ದು ನೀಡುತ್ತಾರೆ. ನಮ್ಮ ದೇಹದ ಮೇಲೆ ಈ ಮದ್ದಿನ ಪ್ರಭಾವ ಸುಮಾರು 5 ವರ್ಷದವರೆಗೂ ಇರುತ್ತದೆ. ಇದರಿಂದ ಹೃದಯಾಘಾತ ಸಹ ಉಂಟಾಗಬಹುದು.

    ಶ್ರೀದೇವಿಯವರು ಹೃದಯ ಸ್ತಂಭನದಿಂದ ಮೃತಪಟ್ಟರೇ? ಅವರ ಅಷ್ಟು ಫಿಟ್ ಆಗಿದ್ದರು ಇದು ಹೇಗೆ ಸಾಧ್ಯ? ಮೂಲಗಳ ಪ್ರಕಾರ ಶ್ರೀದೇವಿ ಅವರು ತುಟಿಯ ಸರ್ಜರಿಯನ್ನು ವಾರಗಳ ಹಿಂದೆ ಮಾಡಿಸಿಕೊಂಡಿದ್ದರು. ಪ್ಲಾಸ್ಟಿಕ್ ಸರ್ಜರಿ ಅವರ ಜೀವವನ್ನೇ ತೆಗೆದುಕೊಂಡಿದೆ.

    ಎಕ್ತಾ ಕಪೂರ್ ವಾಗ್ದಾಳಿ:
    ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಸಾವಿನ ಕುರಿತು ನಡೆಯುತ್ತಿರುವ ಚರ್ಚೆಗೆ ನಿರ್ಮಾಪಕಿ ಏಕ್ತಾ ಕಪೂರ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ದುಷ್ಟರೇ ನಿಮಗೆ ತಿಳಿದಿರಲಿ ಪ್ರಪಂಚದ 1% ಜನರಿಗೆ ಯಾವುದೇ ಕಾಯಿಲೆ ಮತ್ತು ಶಸ್ತ್ರಚಿಕಿತ್ಸೆ ಆಗದಿದ್ದರೂ ಹೃದಯಾಘಾತವಾಗುತ್ತದೆ. ಇದು ನನ್ನ ವೈದ್ಯರು ನೀಡಿದ ಮಾಹಿತಿ. ಶ್ರೀದೇವಿಯವರ ಸಾವು ಹಣೆಯಲ್ಲಿ ಬರೆದಿದ್ದು, ನಿಮ್ಮಂತವರ ಕೆಟ್ಟ ವದಂತಿಗಳಿಂದಲ್ಲ ಎಂದು ಕಿಡಿಕಾರಿದ್ದಾರೆ.