Tag: ಎಕಾನಮಿ ಫೋರಂ

  • ದಾವೋಸ್‌ನಲ್ಲೂ ಆಪರೇಷನ್ ಕಮಲದ ಸದ್ದು- ಸಿಎಂಗೆ ನೀವು ಸ್ಟೇಬಲ್ ಇದ್ದೀರಾ ಎಂದ ಮಿತ್ತಲ್

    ದಾವೋಸ್‌ನಲ್ಲೂ ಆಪರೇಷನ್ ಕಮಲದ ಸದ್ದು- ಸಿಎಂಗೆ ನೀವು ಸ್ಟೇಬಲ್ ಇದ್ದೀರಾ ಎಂದ ಮಿತ್ತಲ್

    ಬರ್ನ್: ಸ್ವಿಟ್ಜರ್ಲೆಂಡಿನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕಾನಮಿ ಫೋರಂ ಸಮಾವೇಶದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಪರೇಷನ್ ಕಮಲದ ಬಗ್ಗೆ ಮಾತನಾಡಿರುವುದು ಕೇಳಿಬಂದಿದೆ.

    CM WITH MITTAl (1)

    ಉದ್ಯಮಿ ಲಕ್ಷ್ಮೀ ಮಿತ್ತಲ್ ಜೊತೆಗಿನ ಸಮಾಲೋಚನೆ ವೇಳೆ ಆಪರೇಷನ್ ಕಮಲದ ಕುರಿತು ಮಾತನಾಡಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಮಿತ್ತಲ್ ಮಾತುಕತೆ ನಡೆದಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿಎಂ ದಾವೋಸ್‌ಗೆ ಭೇಟಿ ನೀಡಿರುವ ಉದ್ದೇಶವೇನು? ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    ಸಿಎಂ ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಲು ಹೋಗಿದ್ದಾರಾ? ಅಥವಾ ಮತ್ತಷ್ಟು ಶಾಸಕರ ಖರೀದಿಗೆ ಪ್ಲಾನ್ ಮಾಡ್ತಿರಬಹುದಾ? ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಲೋಕ ಕಲ್ಯಾಣ, ವಿಶ್ವಶಾಂತಿಗಾಗಿ ಅಹಿಂಸಾ ಮಾರ್ಗ ಅನುಸರಿಸಿ: ಗೆಹ್ಲೋಟ್

    ವೀಡಿಯೋ ಮಾತುಕತೆ ಹೀಗಿದೆ..

    ಲಕ್ಷ್ಮೀ ಮಿತ್ತಲ್: ರಾಜ್ಯದಲ್ಲಿ ನಿಮ್ಮ ಶಾಸಕರ ಸಂಖ್ಯೆ ಎಷ್ಟು?
    ಸಿಎಂ: 119 ಶಾಸಕರು ಇದ್ದಾರೆ

    ಮಿತ್ತಲ್: ವಿಧಾನಸಭೆಯ ಸ್ಥಾನಗಳೆಷ್ಟು?
    ಸಿಎಂ: 224

    ಮಿತ್ತಲ್: ಹಾಗಿದ್ರೆ ಉಳಿದ 2-3 ಸೀಟ್‌ಗಳ ಚಿಂತೆ ಇಲ್ಲ ನಿಮಗೆ
    ಸಿಎಂ: ಅಷ್ಟಕ್ಕೂ ನಾವು ಗೆದ್ದಿದ್ದು 104 ಸೀಟ್‌ಗಳು. 17 ಜನ ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು. ಈ ಪೈಕಿ 15 ಜನ ಚುನಾವಣೆಯಲ್ಲಿ  ಮರು ಆಯ್ಕೆ ಆಗಿದ್ದಾರೆ. ಹೀಗಾಗಿ ನಾವು 119 ಇದ್ದೇವೆ.

    ಮಿತ್ತಲ್: ಈಗ ನೀವು ಸ್ಟೇಬಲ್ ಇದೀರಾ ತಾನೇ?
    ಸಿಎಂ: ಹೌದು, ನಾವು ಸ್ಟೇಬಲ್ ಇದ್ದೇವೆ.