Tag: ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆ

  • ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಬಳ್ಳಾರಿಯಲ್ಲಿ ರಾಹುಲ್ ಮತದಾನ

    ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಬಳ್ಳಾರಿಯಲ್ಲಿ ರಾಹುಲ್ ಮತದಾನ

    ಬಳ್ಳಾರಿ: ಕನ್ಯಾಕುಮಾರಿಯಿಂದ (Kanyakumari) ಕಾಶ್ಮೀರಕ್ಕೆ (Kashmir) ಪಾದಯಾತ್ರೆ ಆರಂಭ ಮಾಡಿರುವ ರಾಹುಲ್ ಗಾಂಧಿ (Rahul Gandhi) ಇಂದು ಬಳ್ಳಾರಿಯ (Bellary) ಹೊರವಲಯದಲ್ಲಿ ಕ್ಯಾಂಪ್‍ನಲ್ಲಿ ಮತದಾನ ಮಾಡಿದ್ದಾರೆ.

    ಎಐಸಿಸಿ (AICC) ಚುನಾವಣೆ ನಿಮಿತ್ತವಾಗಿ ಇಂದು ನಡೆದ ಚುನಾವಣೆಯಲ್ಲಿ ಸರತಿ ಸಾಲಿನಲ್ಲಿ ನಿಂತು ರಾಹುಲ್ ಗಾಂಧಿ ಅವರು ಮತದಾನ ಮಾಡಿದ್ದಾರೆ. ಕಳೆದ 22 ವರ್ಷದ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (Congress Presidential Polls) ನಡೆಯುತ್ತಿದ್ದು, ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಗುಂಡಿ ಮುಚ್ಚೋದು ಬಿಟ್ಟು ವಸೂಲಿಗೆ ಇಳಿದಿದೆ: ಕುಮಾರಸ್ವಾಮಿ

    ಈಗಾಗಲೇ ಆಂಧ್ರಪ್ರದೇಶದ ಗಡಿ ತಲುಪಿರುವ ರಾಹುಲ್ ಗಾಂಧಿ ಅವರ ಪಾದಯಾತ್ರೆ ನಾಳೆ ಆಂಧ್ರದ ನೆಲ್ಲೂರಿನಿಂದ ಮತ್ತೆ ಆರಂಭವಾಗಲಿದೆ. ಇಂದು ಚುನಾವಣೆ ಹಿನ್ನೆಲೆ ಪಾದಯಾತ್ರೆಗೆ ಬ್ರೇಕ್ ನೀಡಲಾಗಿತ್ತು, ರಾಹುಲ್ ಗಾಂಧಿ ಅವರ ಜೊತೆಯಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾದ 41 ಜನರು ಸಹ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಇನ್ನು ಮತದಾನಕ್ಕೆ ಬಳ್ಳಾರಿಯ ಸಂಗನಕಲ್ಲು ಗ್ರಾಮದ ಹೊರವಲಯದ ಕ್ಯಾಂಪ್‍ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಮಳಲಿಯಲ್ಲಿರುವುದು ಮಂದಿರವೋ? ಮಸೀದಿಯೋ – ನ.9ಕ್ಕೆ ಆದೇಶ ಪ್ರಕಟ

    Live Tv
    [brid partner=56869869 player=32851 video=960834 autoplay=true]