Tag: ಎಐಎಡಿಎಂಕೆ

  • ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ: ಅಮಿತ್ ಶಾ ಘೋಷಣೆ

    ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ: ಅಮಿತ್ ಶಾ ಘೋಷಣೆ

    – 2026ರ ತಮಿಳುನಾಡು ಚುನಾವಣೆಗೆ ಪಿಚ್ ತಯಾರಿ

    ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Polls) ಬಿಜೆಪಿ ಮತ್ತು ಎಐಎಡಿಎಂಕೆ (AIADMK-BJP Alliance) ಒಟ್ಟಾಗಿ ಹೋರಾಡಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಆ ಮೂಲಕ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂದು ಘೋಷಿಸಿದ್ದಾರೆ.

    ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ ಅಮಿತ್‌ ಶಾ (Amit Shah), ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಚುನಾವಣೆ ಎದುರಿಸಲಿದೆ ಎಂದು ತಿಳಿಸಿದ್ದಾರೆ. ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೂಡ ಅಮಿತ್‌ ಶಾ ಮತ್ತು ಪಳನಿಸ್ವಾಮಿ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೈನಾರ್‌ ನಾಗೇಂದ್ರನ್‌ ಅವಿರೋಧ ಆಯ್ಕೆ

    ಎಐಎಡಿಎಂಕೆ, ಬಿಜೆಪಿ ಮತ್ತು ಎಲ್ಲಾ ಮೈತ್ರಿ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎನ್‌ಡಿಎಯಾಗಿ ಸ್ಪರ್ಧಿಸಲಿವೆ ಎಂದು ಅಮಿತ್‌ ಶಾ ಹೇಳಿದ್ದಾರೆ.

    ಎಐಎಡಿಎಂಕೆಯಿಂದ ಡಿಮ್ಯಾಂಡೂ ಇಲ್ಲ, ಕಂಡೀಷನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ಎನ್‌ಡಿಎಗೆ ಬಹುಮತ ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. 2026ರ ತಮಿಳುನಾಡು ಚುನಾವಣೆಗೆ ಪಿಚ್ ತಯಾರಾಗಿದ್ದು, ಅಣ್ಣಾಮಲೈಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕ ನೈನಾರ್ ನಾಗೇಂದ್ರನ್‌ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

  • ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೈನಾರ್‌ ನಾಗೇಂದ್ರನ್‌ ಅವಿರೋಧ ಆಯ್ಕೆ

    ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೈನಾರ್‌ ನಾಗೇಂದ್ರನ್‌ ಅವಿರೋಧ ಆಯ್ಕೆ

    ಚೆನ್ನೈ: ತಮಿಳುನಾಡಿನ (Tamil Nadu) ತಿರುನಲ್ವೇಲಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ (Nainar Nagendran) ಅವರು ಪಕ್ಷದ ರಾಜ್ಯಾಧ್ಯಕ್ಷ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಪ್ರಸ್ತುತ ರಾಜ್ಯ ಉಪಾಧ್ಯಕ್ಷರಾಗಿರುವ ನಾಗೇಂದ್ರನ್ ಅವರು ಈ ಹಿಂದೆ ಎಐಎಡಿಎಂಕೆಯಲ್ಲಿದ್ದರು. ಟಿ.ನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಕಮಲಾಲಯದಲ್ಲಿ ನಾಪಪತ್ರ ಸಲ್ಲಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

    ಅವರ ನಾಮನಿರ್ದೇಶನವು ಪಕ್ಷದ ಹಾಲಿ ಅಧ್ಯಕ್ಷ ಕೆ.ಅಣ್ಣಾಮಲೈ, ಕೇಂದ್ರ ಸಚಿವ ಎಲ್.ಮುರುಗನ್, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಮತ್ತು ಬಿಜೆಪಿ ಶಾಸಕಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ಸೇರಿದಂತೆ ಪ್ರಮುಖ ನಾಯಕರಿಂದ ಅನುಮೋದನೆ ಪಡೆದಿದೆ ಎಂದು ಪಕ್ಷ ದೃಢಪಡಿಸಿದೆ.

    ನಾಗೇಂದ್ರನ್ ಅವರು ಅಣ್ಣಾಮಲೈ ಅವರ ಉತ್ತರಾಧಿಕಾರಿಯಾಗಿ ನೂತನ ರಾಜ್ಯಾಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಎಐಎಡಿಎಂಕೆ ಜೊತೆಗಿನ ಅವರ ಹಿಂದಿನ ಮೈತ್ರಿ ಬಿಜೆಪಿಗೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ

  • ಎಐಎಡಿಎಂಕೆ ಕಿತ್ತಾಟ – ಪಳನಿಸ್ವಾಮಿ ತಾತ್ಕಾಲಿಕ ಬಾಸ್‌, ಪನ್ನೀರ್‌ಸೆಲ್ವಂ ಉಚ್ಛಾಟನೆ

    ಎಐಎಡಿಎಂಕೆ ಕಿತ್ತಾಟ – ಪಳನಿಸ್ವಾಮಿ ತಾತ್ಕಾಲಿಕ ಬಾಸ್‌, ಪನ್ನೀರ್‌ಸೆಲ್ವಂ ಉಚ್ಛಾಟನೆ

    ಚೆನ್ನೈ: ನೆರೆಯ ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷದ ಅಧಿಪತ್ಯಕ್ಕಾಗಿ ನಡೆಯುತ್ತಿದ್ದ ಸಮರದಲ್ಲಿ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಕೈ ಮೇಲಾಗಿದೆ.

    ಇಂದು ನಡೆದ ಸರ್ವಸದಸ್ಯರ ಸಮಾವೇಶದಲ್ಲಿ ಪಕ್ಷದ ತಾತ್ಕಾಲಿಕ ಪ್ರಧಾನಕಾರ್ಯದರ್ಶಿಯಾಗಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ಇದೇ ಸಭೆಯಲ್ಲಿ ಪನ್ನೀರ್‌ಸೆಲ್ವಂರನ್ನು ಪಕ್ಷದಿಂದ ಉಚ್ಛಾಟಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಓಪಿಎಸ್ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕಲಾಗಿದೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ

    ಉಚ್ಛಾಟನೆ ವಿರೋಧಿಸಿ ಪನ್ನೀರ್‌ಸೆಲ್ವಂ ಬೆಂಬಲಿಗರು ಸಭೆ ಸ್ಥಳದಲ್ಲಿ ಭಾರೀ ಗಲಾಟೆ ಮಾಡಿದ್ದಾರೆ. ಈ ವೇಳೆ ಓಪಿಎಸ್ ಮತ್ತು ಇಪಿಎಸ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ.

    ಕಲ್ಲು ತೂರಾಟ ಕೂಡ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ವಾಹನಗಳು ಕೂಡ ಜಖಂ ಆಗಿವೆ. ಈ ಮಧ್ಯೆ, ಓಪಿಎಸ್ ಬೆಂಬಲಕ್ಕೆ ಶಶಿಕಲಾ ಧಾವಿಸಿದ್ದಾರೆ. ಪಳನಿಸ್ವಾಮಿಗೆ ಅಧಿಕಾರ ನೀಡುವುದನ್ನು ಒಪ್ಪುವುದಿಲ್ಲ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುದುಚೇರಿ ಕಳೆದುಕೊಂಡ ಕಾಂಗ್ರೆಸ್ – ಅರಳಿದ ಕಮಲ

    ಪುದುಚೇರಿ ಕಳೆದುಕೊಂಡ ಕಾಂಗ್ರೆಸ್ – ಅರಳಿದ ಕಮಲ

    ನವದೆಹಲಿ: ನಾಲ್ಕು ರಾಜ್ಯಗಳ ಜೊತೆಯಲ್ಲಿ ಒಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಬಹುಮತ ಸಾಬೀತು ಮಾಡುವಲ್ಲಿ ವಿಫಲವಾದ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಈಗ ನಡೆದ ಚುನಾವಣೆಯಲ್ಲಿ ಪುದುಚೇರಿಯನ್ನ ಬಿಜೆಪಿ ತನ್ನ ತೆಕ್ಕಗೆ ತೆಗೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ.

    ವಿಶ್ವಾಸಮತ ಸಾಬೀತುಪಡಿಸುವಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಡಿಎಂಕೆ ಜೊತೆ ಎದುರಿಸಿತ್ತು. ಆದ್ರೆ ತಮಿಳುನಾಡಿನಲ್ಲಿ ವರ್ಕೌಟ್ ಆದ ತಂತ್ರ ಇಲ್ಲಿ ಯಶಸ್ಸು ಕಂಡಿಲ್ಲ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪ್ರಮುಖ ನಾಯಕರು ಕಮಲ ಹಿಡಿದಿದ್ದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಯಾರಿಗೆ ಎಷ್ಟು ಕ್ಷೇತ್ರ: ಒಟ್ಟು ವಿಧಾನಸಭಾ ಕ್ಷೇತ್ರಗಳು-30

    ಇಂಡಿಯಾ ಟುಡೇ-ಆಕ್ಸಿನ್ ಮೈ ಇಂಡಿಯಾ
    ಕಾಂಗ್ರೆಸ್+: 6-10
    ಬಿಜೆಪಿ+: 20-24
    ಇತರೆ: 0-1

    ಟೈಮ್ಸ್ ನೌ-ಸಿ ವೋಟರ್
    ಕಾಂಗ್ರೆಸ್+: 6-10
    ಬಿಜೆಪಿ+: 19-23
    ಇತರೆ: 1-2

    ಸಿಎನ್‍ಎಕ್ಸ್
    ಕಾಂಗ್ರೆಸ್+: 11-13
    ಬಿಜೆಪಿ+: 16-20
    ಇತರೆ: 0

    ಜನ್ ಕಿ ಬಾತ್
    ಕಾಂಗ್ರೆಸ್+: 6-11
    ಬಿಜೆಪಿ+: 19-24
    ಇತರೆ: 0

    ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

    2016ರ ಫಲಿತಾಂಶ: 2016ರಲ್ಲಿ 30 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಅಣ್ಣಾಡಿಎಂಕೆ- 04, ಡಿಎಂಕೆ- 02 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು. 33 ಸದಸ್ಯರ ಪುದುಚೇರಿಯ ವಿಧಾನಸಭೆಯಲ್ಲಿ ಮೂವರು ಕೇಂದ್ರ ಸರ್ಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ.ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ

    ಇದನ್ನೂ ಓದಿ: ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

    ಇದನ್ನೂ ಓದಿ: ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ

  • ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ

    ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ

    – ಬಿಜೆಪಿ ಜೊತೆಗೆ ಕಣಕ್ಕಿಳಿದಿದ್ದ ಎಐಡಿಎಂಕೆಗೆ ಸೋಲು

    ಚೆನ್ನೈ: ಪ್ರತಿ ಚುನಾವಣೆಯಂತೆ ತಮಿಳುನಾಡಿನಲ್ಲಿ ಒಂದೇ ಪಕ್ಷವನ್ನ ಬೆಂಬಲಿಸ್ತಾರೆ ಅನ್ನೋ ಮಾತು ಈ ಬಾರಿ ಸತ್ಯ ಆಗಿದೆ. ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದ ಮೊದಲ ಚುನಾವಣೆ ಇದಾಗಿದ್ದು, ಜನರು ಕಾಂಗ್ರೆಸ್ ಮೈತ್ರಿಯನ್ನ ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹಿನ್ನೆಲೆ ಎರಡೂ ರಾಷ್ಟ್ರೀಯ ಪಕ್ಷಗಳ ನೇರವಾಗಿ ಕಣಕ್ಕಿಳಿದಿರಲಿಲ್ಲ.

    ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಜೋಡಿಯನ್ನ ಜನ ಒಪ್ಪಿ ಮತ ನೀಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳದಲ್ಲಿ ನಿರಾಸೆ ಕಂಡಿದ್ದ ಕಾಂಗ್ರೆಸ್ ಗೆ ತಮಿಳುನಾಡಿನ ಗೆಲುವು ಮುಂದಿನ ರಾಜಕಾರಣಕ್ಕೆ ಆಸರೆ ಸಿಕ್ಕಂತಾಗಿದೆ. ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ

    ಯಾರಿಗೆ ಎಷ್ಟು ಕ್ಷೇತ್ರ?: ತಮಿಳುನಾಡು ಒಟ್ಟು ವಿಧಾನಸಭಾ ಕ್ಷೇತ್ರಗಳು – 232

    ಇಂಡಿಯಾ ಟುಡೇ-ಆಕ್ಸಿನ್ ಮೈ ಇಂಡಿಯಾ
    ಎಐಎಡಿಎಂಕೆ+ಬಿಜೆಪಿ: 38-54
    ಡಿಎಂಕೆ+ಕಾಂಗ್ರೆಸ್: 175-195
    ಎಎಂಎಂಕೆ+: 1-2
    ಎಂಎನ್‍ಎಂ+: 0-2

    ಟೈಮ್ಸ್ ನೌ-ಸಿ ವೋಟರ್
    ಎಐಎಡಿಎಂಕೆ+ಬಿಜೆಪಿ: 64
    ಡಿಎಂಕೆ+ಕಾಂಗ್ರೆಸ್: 166
    ಎಎಂಎಂಕೆ+: 1
    ಎಂಎನ್‍ಎಂ+: 1

    ಟುಡೇಸ್ ಚಾಣಕ್ಯ
    ಎಐಎಡಿಎಂಕೆ+ಬಿಜೆಪಿ: 46-68
    ಡಿಎಂಕೆ+ಕಾಂಗ್ರೆಸ್: 164-186
    ಎಎಂಎಂಕೆ+: 0
    ಇತರೆ: 0-8

    ಸಿಎನ್‍ಎಕ್ಸ್
    ಎಐಎಡಿಎಂಕೆ+ಬಿಜೆಪಿ: 58-68
    ಡಿಎಂಕೆ+ಕಾಂಗ್ರೆಸ್: 160-170
    ಎಎಂಎಂಕೆ+: 4-6
    ಎಂಎನ್‍ಎಂ+: 0-2

    ಜನ್ ಕೀ ಬಾತ್:
    ಎಐಎಡಿಎಂಕೆ+ಬಿಜೆಪಿ: 102-123
    ಡಿಎಂಕೆ+ಕಾಂಗ್ರೆಸ್: 110-130
    ಎಎಂಎಂಕೆ+: 0
    ಇತರೆ: 1-2

    ರಾಹುಲ್ ಗಾಂಧಿ ಸಾಲು ಸಾಲು ಸಮಾವೇಶ, ವಿದ್ಯಾರ್ಥಿಗಳ ಸಂವಾದ, ಗ್ರಾಮೀಣ ಭಾಗದಲ್ಲಿ ಮಿಂಚಿನ ಸಂಚಾರ ತಮಿಳುನಾಡಿನಲ್ಲಿ ಕಾಂಗ್ರೆಸ್ ಕೈ ಹಿಡಿದೆ. ಆಡಳಿತ ವಿರೋಧಿ ಅಲೆ ಜೊತೆ ಬಿಜೆಪಿಯೊಂದಿಗಿನ ಮೈತ್ರಿ ಅಣ್ಣಾಡಿಎಂಕೆಗೆ ಶಾಕ್ ನೀಡಿದೆ. ಇತ್ತ ಮೊದಲ ಬಾರಿಗೆ ಎಂಎನ್‍ಎಂ ಪಕ್ಷ ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದ ನಟ ಕಮಲ್ ಹಾಸನ್ ಮತ್ತು ಟಿಟಿವಿ ದಿನಕರನ್ ಎಎಂಎಂಕೆ ಖಾತೆ ತರೆಯಲು ಹರಸಾಹಸ ಪಟ್ಟಿವೆ.  ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

    2016ರ ಫಲಿತಾಂಶ: ಒಟ್ಟು 232 ಕ್ಷೇತ್ರಗಳಲ್ಲಿ ಅಣ್ಣಾಡಿಎಂಕೆ 134ರಲ್ಲಿ ಗೆದ್ದು ಅಧಿಕಾರ ರಚಿಸಿತ್ತು. ಡಿಎಂಕೆ 89, ಕಾಂಗ್ರೆಸ್ 08 ಮತ್ತು ಇತರರು ಒಂದರಲ್ಲಿ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಇದನ್ನೂ ಓದಿ: ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

  • ಮತದಾರರನ್ನ ಸೆಳೆಯಲು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಾಲನೆ

    ಮತದಾರರನ್ನ ಸೆಳೆಯಲು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಾಲನೆ

    – ಬೆಂಬಲಿಗನ ಪ್ರಚಾರಕ್ಕೆ ಜನರು ಶಾಕ್

    ಚೆನ್ನೈ: ಎಐಎಡಿಎಂಕೆ ಅಭ್ಯರ್ಥಿ ಎಸ್.ಪಿ.ವೇಲುಮನಿ ಪರವಾಗಿ ಬೆಂಬಲಿಗನೋರ್ವ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಲಾಯಿಸಿ ಪ್ರಚಾರ ಮಾಡಿದ್ದಾರೆ. ವಿಚಿತ್ರ ಪ್ರಚಾರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಯುಎಂಟಿ ರಾಜಾ ವಿಚಿತ್ರವಾಗಿ ಪ್ರಚಾರ ನಡೆಸಿದ ವೇಲುಮನಿ ಅವರ ಬೆಂಬಲಿಗ. ಕಣ್ಣಿಗೆ ಕಪ್ಪು ಬಣ್ಣದ ಪಟ್ಟಿ ಕಟ್ಟಿಕೊಂಡಿದ್ದರು. ನಂತರ ಮತ್ತೊಂದು ಕಪ್ಪು ಬಟ್ಟೆಯಿಂದ ಇಡೀ ಮುಖವನ್ನ ಮುಚ್ಚಿಕೊಂಡು ಜನಸಂದಣಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿದರು. ಈ ವೇಳೆ ರಾಜಾ ಅವರಿಗೆ ಪಕ್ಷದ ಕೆಲ ಮುಖಂಡರು ಸೇರಿದಂತೆ ಕಾರ್ಯಕರ್ತರು ಸಾಥ್ ನೀಡಿದರು. ಈ ರೀತಿ ಸ್ಕೂಟಿ ಚಲಾಯಿಸುವ ಮೂಲಕ ವೇಲುಮನಿ ಅವರ ಕೆಲಸವನ್ನ ಜನರಿಗೆ ತಿಳಿಸಲು ಮುಂದಾಗಿದ್ದರು.

    ಸ್ಕೂಟಿ ಚಾಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಜಾ, ಮೊದಲಿಗೆ ಕಣ್ಣು ಬಿಟ್ಟುಕೊಂಡು ರಸ್ತೆಯಲ್ಲಿ ತಿರುಗಾಡೋದು ಕಷ್ಟವಾಗಿತ್ತು. ಆದ್ರೆ ಇಂದು ಕಣ್ಮುಚ್ಚಿ ಸ್ಕೂಟಿ ಚಲಾಯಿಸಬಹುದಾಗಿದೆ. ವೇಲುಮನಿ ತಮ್ಮ ಅವಧಿಯಲ್ಲಿ ಒಳ್ಳೆಯ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ನೀಡಿದ್ದಾರೆ. ಹಾಗಾಗಿ ಕ್ಷೇತ್ರದ ಪ್ರತಿ ಮತದಾರರು ವೇಲುಮನಿ ಅವರಿಗೆ ವೋಟ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ಅಖಾಡ ರಂಗೇರುತ್ತಿದೆ. ಅಭ್ಯರ್ಥಿಗಳು ಹೊಸ ಹೊಸ ಟೆಕ್ನಿಕ್ ಬಳಸಿ ಮತದಾರರನ್ನು ಸೆಳೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಹೋಟೆಲ್ ನಲ್ಲಿ ದೋಸೆ ಹಾಕಿದ್ದರು. ಡಿಎಂಕೆ ಅಭ್ಯರ್ಥಿ ಬಟ್ಟೆ ತೊಳೆದಿದ್ದರು. ಮತ್ತೋರ್ವ ಕ್ಯಾಂಡಿಡೇಟ್ ನಡು ರಸ್ತೆಯಲ್ಲಿ ಮಾರ್ಷಲ್ ಆರ್ಟ್ಸ್ ಪ್ರದರ್ಶಿಸಿದ್ದರು.

  • ತಮಿಳುನಾಡು ರಾಜಕಾರಣದಲ್ಲಿ ಅದ್ಭುತ ನಡೆಯಲಿದೆ- ರಜನಿಕಾಂತ್

    ತಮಿಳುನಾಡು ರಾಜಕಾರಣದಲ್ಲಿ ಅದ್ಭುತ ನಡೆಯಲಿದೆ- ರಜನಿಕಾಂತ್

    – ಕಮಲ್ ಹಸನ್ ಮೈತ್ರಿ ಹೇಳಿಕೆಗೆ ರಜನಿ ಪ್ರತಿಕ್ರಿಯೆ

    ಚೆನ್ನೈ: 2021ರ ವಿಧಾನಸಭೆ ಚುನಾವಣೆ ವೇಳೆ ತಮಿಳುನಾಡು ರಾಜಕಾರಣದಲ್ಲಿ ಮಹಾ ಅದ್ಭುತ ನಡೆಯಲಿದೆ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಚೆನ್ನೈನಲ್ಲಿ ಮಾತನಾಡಿದ ಅವರು, ಅಧ್ಯಾತ್ಮಿಕ ರಾಜಕಾರಣಕ್ಕೆ ತಮಿಳುನಾಡು ಜನತೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸವಿದೆ. 2021ರ ಚುನಾವಣೆಯಲ್ಲಿ ಶೇ.100 ತಮಿಳು ಜನತೆ ರಾಜಕೀಯದಲ್ಲಿ ದೊಡ್ಡ ಅದ್ಭುತ ಸೃಷ್ಟಿಸಲಿದ್ದಾರೆ ಎಂದರು.

    ನೀವು ಹಾಗೂ ಕಮಲ್ ಹಾಸನ್ ಇಬ್ಬರೂ ಕೈ ಜೋಡಿಸಿದಲ್ಲಿ ಯಾರು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ಇದನ್ನು ನಿರ್ಧರಿಸಲಾಗುವುದು. ಚುನಾವಣೆ ಸಮೀಪಿಸುತ್ತಿರುವಾಗ ಪರಿಸ್ಥಿತಿಯನ್ನು ಅವಲಂಬಿಸಿ ಸಿಎಂ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

    ತಮಿಳುನಾಡಿನ ಕಲ್ಯಾಣಕ್ಕಾಗಿ ಸುಪರ್‍ಸ್ಟಾರ್ ರಜನಿಕಾಂತ್ ಜೊತೆಗೆ ಕೈ ಜೋಡಿಸುವುದಾಗಿ ನಟ ಕಮಲ್ ಹಾಸನ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ರಜನಿಕಾಂತ್ ಹೇಳಿಕೆ ಹೊರ ಬಿದ್ದಿದೆ. ಇಬ್ಬರೂ ಒಟ್ಟಿಗೆ ಸೇರುವ ಸಂದರ್ಭ ಎದುರಾದರೆ ಒಟ್ಟಿಗೆ ಸೇರುತ್ತೇವೆ ಎಂದು ಸ್ಪಷ್ಟಪಡಿಸಿದರು.

    2021ರಲ್ಲಿ ಅದ್ಭುತ ನಡೆಯಲಿದೆ ಎಂದು ರಜನಿಕಾಂತ್ ಯಾವ ಆಧಾರದ ಮೇಲೆ ಹೇಳುತ್ತಾರೆ ಎಂದುದೇ ಅರ್ಥವಾಗುತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ರಜನಿಕಾಂತ್ ಹೇಳಿಕೆಗೆ ತಿರುಗೇಟು ನೀಡಿದರು. ಅಲ್ಲದೆ ಹಲವು ಎಐಎಡಿಎಂಕೆ ನಾಯಕರು ಈ ಕುರಿತು ಕಿಡಿಕಾರಿದ್ದು, ಇಬ್ಬರು ನಟರು ಒಟ್ಟುಗೂಡಿದರೆ ಅದ್ಭುತ, ಪವಾಡ ನಡೆಯುತ್ತದೆ ಎನ್ನುವುದೆಲ್ಲ ಭ್ರಮೆ ಎಂದು ಟೀಕಿಸಿದ್ದಾರೆ.

  • ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

    ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

    ಚೆನ್ನೈ: ತಮಿಳು ಭಾಷಾ ಸಿನಿಮಾ ನಟ, ಮಾಜಿ ಸಂಸದ, ಎಐಎಡಿಎಂಕೆ ನಾಯಕ ಜೆ.ಕೆ.ರಿತೇಶ್ (46) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಜೆ.ಕೆ.ರಿತೇಶ್ ಅವರು ಗುರುವಾರ ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು. ಆಗ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಪಕ್ಷದ ನಾಯಕರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

    ಜೆ.ಕೆ.ರಿತೇಶ್ ಅವರು ಡಿಎಂಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು ಜಲಸಂಪನ್ಮೂಲ ಸಮಿತಿಯ ಸದಸ್ಯರಾಗಿದ್ದರು. ಆದರೆ 2014ರ ಏಪ್ರಿಲ್‍ನಲ್ಲಿ ಡಿಎಂಕೆ ಬಿಟ್ಟು ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು.

    ಹಾಸ್ಯನಟ ಚಿನ್ನಿ ಜಯಂತ್ ನಿರ್ದೇಶನದ ‘ಕಾನಾಲ್ ನೀರ್’ ಸಿನಿಮಾದ ಮೂಲಕ ಜೆ.ಕೆ.ರಿತೇಶ್ ಅವರು 2007ರಲ್ಲಿ ಕಾಲಿವುಡ್ ಪ್ರವೇಶಿಸಿದ್ದರು. 2008ರಲ್ಲಿ ‘ನಾಯಗನ್’, 2010ರಲ್ಲಿ ‘ಪೆನ್ ಸಿಂಗಮ್’ ಸಿನಿಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ‘ಎಲ್‍ಕೆಜಿ’ ಯಲ್ಲಿ ಕಾಣಿಸಿಕೊಂಡಿದ್ದರು.

  • ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಆಡಳಿತ ಪಕ್ಷ ಆಲ್ ಇಂಡಿಯಾ ಅಣ್ಣ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಡ್ಯಾಡಿ (ತಂದೆ) ಎಂದು ಡೈರಿ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂತಿರ ಬಾಲಾಜಿ ಹೇಳಿದ್ದಾರೆ.

    ವಿರುದುನಗರ್ ಜಿಲ್ಲೆಯ ಶ್ರೀವಿಲ್ಲಿಪುತುರ್‍ನಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅಮ್ಮ (ಎಐಎಡಿಎಂಕೆ ನಾಯಕಿ ಜಯಲಲಿತಾ) ಅವರ ಮೃತರಾದ ಬಳಿಕ ಪ್ರಧಾನಿ ಮೋದಿ ಅವರು ಎಐಎಡಿಎಂಕೆಗೆ ತಂದೆಯಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೊಗಳಿದರು.

    ಪ್ರಧಾನಿ ನರೇಂದ್ರ ಮೋದಿ ನಮ್ಮ ತಂದೆ. ಜಯಲಲಿತಾ ಅವರನ್ನು ಕಳೆದುಕೊಂಡ ಬಳಿಕ ನಮಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ನಮಗಷ್ಟೇ ತಂದೆಯಲ್ಲ, ಇಡೀ ದೇಶಕ್ಕೆ ತಂದೆಯಾಗಿದ್ದಾರೆ. ಇದೇ ಕಾರಣಕ್ಕೆ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದರು.

    ಎಐಎಡಿಎಂಕೆ 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಒಟ್ಟು 39 ಸೀಟುಗಳಲ್ಲಿ 37 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಎಐಎಡಿಎಂಕೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ 39 ಸೀಟುಗಳ ಪೈಕಿ, ಐದು ಸ್ಥಾನಗಳನ್ನು ಬಿಜೆಪಿಗೆ ನೀಡಲಾಗಿದೆ.

    ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ “ತಮಿಳುನಾಡಿನ ಮಹಿಳೆಯೋ ಅಥವಾ ಗುಜರಾತಿನ ಮೋದಿಯೋ?” ಎಂಬ ಘೋಷವಾಕ್ಯದ ಭಾರೀ ಪ್ರಚಾರ ಮಾಡಿದ್ದರು. ಈ ಘೋಷಣೆ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದರು.

    ನನ್ನ ನೇತೃತ್ವದ ತಮಿಳುನಾಡು ಸರ್ಕಾರವು ಗುಜರಾತ್‍ನ ನರೇಂದ್ರ ಮೋದಿ ಸರ್ಕಾರಕ್ಕಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡಿನ ಮಹಿಳೆ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯವಾಡಿದ್ದರು.

    ಇತ್ತ ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ರಾಜೀನಾಮೆ ನೀಡಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವ ಇಚ್ಛೇ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv