Tag: ಎಐಎಂಐಎಂ

  • ಪಶ್ಚಿಮ ಬಂಗಾಳ ಚುನಾವಣೆ ಅಖಾಡಕ್ಕೆ ಓವೈಸಿ ಎಂಟ್ರಿ

    ಪಶ್ಚಿಮ ಬಂಗಾಳ ಚುನಾವಣೆ ಅಖಾಡಕ್ಕೆ ಓವೈಸಿ ಎಂಟ್ರಿ

    – ಧರ್ಮಗುರುಗಳನ್ನ ಭೇಟಿಯಾದ ಓವೈಸಿ

    ಕೋಲ್ಕತ್ತಾ: ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಸ್ಥಳೀಯ ಧಾರ್ಮಿಕ ಗುರುಗಳನ್ನ ಭೇಟಿಯಾಗಿ ಬೆಂಬಲ ಕೋರಿದ್ದಾರೆ.

    ಹೂಗ್ಲಿ ಜಿಲ್ಲೆಯ ಧಾರ್ಮಿಕ ಸ್ಥಳವಾದ ಫುರಫುರಾದ ಧರ್ಮಗುರು ಅಬ್ಬಾಸ್ ಸಿದ್ದಿಕಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಚುನಾವಣೆ ಪ್ರಚಾರದಲ್ಲಿ ಎಐಎಂಐಎಂ ಪಾರ್ಟಿಯ ಪ್ರಮುಖರಾಗಿ ಮುಂದಾಳತ್ವವನ್ನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮಾತುಕತೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಓವೈಸಿ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸೋದನ್ನ ಖಚಿತಪಡಿಸಿದರು.

    ಅಬ್ಬಾಸ್ ಸಿದ್ದಿಕಿ ನಮ್ಮ ಪಕ್ಷದ ಜೊತೆಯಲ್ಲಿರಲಿದ್ದಾರೆ. ನಾವೆಲ್ಲರೂ ಸಿದ್ದಿಕಿ ಅವರ ಮುಂದಾಳತ್ವದಲ್ಲಿ ಹೋಗಲಿದ್ದೇವೆ. ಎಷ್ಟು ಕ್ಷೇತ್ರ ಮತ್ತು ರಾಜ್ಯದ ಯಾವ ಭಾಗದಲ್ಲಿ ಎಐಎಂಐಎಂ ಸ್ಪರ್ಧೆ ಮಾಡಲಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

    ಅಬ್ಬಾಸ್ ಸಿದ್ದಿಕಿ ಸಿಎಂ ಮಮತಾ ಬ್ಯಾನರ್ಜಿ ಅವರ ರಾಜಕೀಯ ವಿರೋಧಿಗಳಾಗಿದ್ದು, ಟಿಎಂಸಿ ಮುಸ್ಲಿಂ ಮತಗಳನ್ನ ಕೇವಲ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತೆ ಎಂದು ಆರೋಪಿಸಿದ್ದಾರೆ. ಅಬ್ಬಾಸ್ ಸಿದ್ದಿಕಿ ಫುರಫುರಾದ ಕ್ಷೇತ್ರದ ಪ್ರಮುಖ ಧರ್ಮಗುರು ಆಗಿರುವ ತೋಹಾ ಸಿದ್ದಿಕಿಯವರ ಸೋದರಳಿಯ. ಆದ್ರೆ ತೋಹಾ ಸಿದ್ದಿಕಿ ಟಿಎಂಸಿಯ ಸಮರ್ಥಕರಾಗಿದ್ದು, ಹಾಗಾಗಿ ತಮ್ಮ ಪ್ರವಾಸದಲ್ಲಿ ಅಬ್ಬಾಸ್ ಅವರನ್ನ ಮಾತ್ರ ಓವೈಸಿ ಭೇಟಿಯಾಗಿದ್ದಾರೆ. ಅಬ್ಬಾಸ್ ಮುಂದಾಳತ್ವದಲ್ಲಿ ಹೂಗ್ಲಿ, ಮಾಲ್ದಾ, ಮುರ್ಶೀದಾಬಾದ್ ಮತ್ತು ದಿನಾಜಪುರ ಜಿಲ್ಲೆಗಳಲ್ಲಿ ಚುನಾವಣೆ ಎದುರಿಸಲು ಓವೈಸಿ ಪ್ಲಾನ್ ಮಾಡಿಕೊಂಡಿದ್ದಾರೆ.

  • ಬಿಹಾರದಲ್ಲಿ ಕ್ಲಿಕ್, ಪಶ್ಚಿಮ ಬಂಗಾಳದಲ್ಲೂ ಸ್ಪರ್ಧೆ – ಕಾಂಗ್ರೆಸ್‍ಗೆ ಓವೈಸಿ ತಿರುಗೇಟು

    ಬಿಹಾರದಲ್ಲಿ ಕ್ಲಿಕ್, ಪಶ್ಚಿಮ ಬಂಗಾಳದಲ್ಲೂ ಸ್ಪರ್ಧೆ – ಕಾಂಗ್ರೆಸ್‍ಗೆ ಓವೈಸಿ ತಿರುಗೇಟು

    – ಮಹಾರಾಷ್ಟ್ರದಲ್ಲಿ ನೀವು ಶಿವಸೇನೆಯ ತೊಡೆಯ ಮೇಲೆ ಕುಳಿತುಕೊಳ್ಳಬಹುದು
    – ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ನಿಮಗೆ ಏನು ಕಷ್ಟ?

    ಹೈದರಾಬಾದ್: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿ ಕೂಟ ಬಹುಮತ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಆದರೆ ಅಸಾದುದ್ದಿನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ 5 ಸ್ಥಾನಗಳಲ್ಲಿ ಜಯಗಳಿಸಿ ಕಾಂಗ್ರೆಸ್ ನಾಯಕರ ಹುಬ್ಬೇರುವಂತೆ ಮಾಡಿದೆ.

    ಬಿಹಾರ ಯಶಸ್ಸಿನ ಹಿನ್ನೆಲೆಯಲ್ಲಿ ಮಾತನಾಡಿರುವ ಓವೈಸಿ, ಮುಂದೆ ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ತೀರ್ಮಾನಿಸಿದ್ದೇವೆ. ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಅಸಾದುದ್ದಿನ್ ಓವೈಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಬಿಹಾರದ ಸೀಮಾಂಚಲ್ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಐಎಂಐಎಂ ಪಕ್ಷ ಬಿಜೆಪಿ ವಿರೋಧಿ ಮತಗಳನ್ನು ಒಡೆದಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರಾಜಕೀಯ ಪಕ್ಷವನ್ನು ನಡೆಸುತ್ತಿದ್ದೇವೆ. ಹೀಗಾಗಿ ನಮ್ಮ ಸ್ವಂತ ಬಲದಿಂದ ಚುನಾವಣೆಯನ್ನು ಎದುರಿಸುವುದೇ ಸರಿ ಎಂದು ಅಸಾದುದ್ದೀನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

    ನೀವು ಮಹಾರಾಷ್ಟ್ರದಲ್ಲಿ ಶಿವಸೇನೆ ತೊಡೆಯ ಮೇಲೆ ಹೋಗಿ ಕುಳಿತುಕೊಳ್ಳಬಹುದು. ಆದರೆ ನಾವು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಾರದೆ ಎಂದು ಕಾಂಗ್ರೆಸ್‍ನ್ನು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ನೀವು ಯಾಕೆ ಸ್ಪರ್ಧಿಸುತ್ತೀರಿ ಎಂದು ಯಾರಾದರೂ ಕೇಳಿದಿರಾ, ಇಲ್ಲ. ನಾವು ಪಶ್ಚಿಮ ಬಂಗಾಳದಲ್ಲೂ ಸ್ಪರ್ಧಿಸುತ್ತೇವೆ. ಉತ್ತರ ಪ್ರದೇಶದಲ್ಲೂ ಸ್ಪರ್ಧಿಸುತ್ತೇವೆ. ಅಲ್ಲದೆ ದೇಶದ ಪ್ರತಿ ಚುನಾವಣೆಯಲ್ಲಿಯೂ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಓವೈಸಿ ತಿಳಿಸಿದ್ದಾರೆ.

    ನಾನು ಚುನಾವಣೆಗೆ ಸ್ಪರ್ಧಿಸಲು ಯಾರದ್ದಾದರೂ ಅಪ್ಪಣೆ ಪಡೆಯಬೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇತರ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರಾ ಅಥವಾ ಕೇವಲ ನಿಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ. ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಹಿಳೆಯರಿಂದ ಬಿಹಾರ ಲೆಕ್ಕಾಚಾರ ಉಲ್ಟಾ – ಮತ್ತೆ ಅಧಿಕಾರಕ್ಕೆ ಎನ್‍ಡಿಎ

    ಎಐಎಂಐಎಂ ಬಿಹಾರ ಚುನಾವಣೆಯಲ್ಲಿ ‘ವೋಟ್ ಕಟ್ಟರ್’ ಆಗಿದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆಗೆ ತಿರುಗೇಟು ನೀಡಿದ ಓವೈಸಿ, ಮುಸ್ಲಿಮರ ಕಲ್ಯಾಣಕ್ಕಾಗಿ ನಿಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅಧೀರ್ ರಂಜನ್ ಚೌಧರಿ, ನನ್ನ ಕ್ಷೇತ್ರದಲ್ಲಿನ ಮುಸ್ಲಿಮರ ಸ್ಥಿತಿ ಏನಾಗಿದೆ, ಚೆನ್ನಾಗಿಯೇ ಇದೆ ಎಂದು ಉತ್ತರಿಸಿದ್ದಾರೆ.

    ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಸಾದುದ್ದೀನ್ ಹಾಗೂ ಎಐಎಂಐಎಂ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿವೆ. ಬಿಹಾರ ಚುನಾವಣೆಗಳಲ್ಲಿ ಆರ್‍ಜೆಡಿ ನೇತೃತ್ವದ ಮಹಾಘಟಬಂಧನ್ ಮತಗಳನ್ನು ಕಡಿತಗೊಳಿಸಿದೆ ಎಂದು ಕಿಡಿಕಾರಿವೆ. ಬಿಹಾರ ಚುನಾವಣೆಯಲ್ಲಿ ಒಟ್ಟು 20 ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಇದರಲ್ಲಿ ಐದು ಸ್ಥಾನಗಳಲ್ಲಿ ಪಕ್ಷ ಜಯಗಳಿಸಿದ್ದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿದೆ.

  • ಉಪಚುನಾವಣೆ ಗಲಾಟೆ- ಎಐಎಂಐಎಂ ಅಭ್ಯರ್ಥಿಯ ಬಟ್ಟೆ ಹರಿದು ಹಲ್ಲೆ

    ಉಪಚುನಾವಣೆ ಗಲಾಟೆ- ಎಐಎಂಐಎಂ ಅಭ್ಯರ್ಥಿಯ ಬಟ್ಟೆ ಹರಿದು ಹಲ್ಲೆ

    – ಪೊಲೀಸ್ ರಕ್ಷಣೆ ಕೇಳಿದ ಅಭ್ಯರ್ಥಿ

    ಲಕ್ನೋ: ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಎಐಎಂಐಎಂ ಅಭ್ಯರ್ಥಿಯ ಬಟ್ಟೆ ಹರಿದು ಹಲ್ಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಗಲಾಟೆ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬುಲಂದ್‍ಶಹರ್ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದೆ. ಎಲೆಕ್ಷನ್ ಅಖಾಡದಲ್ಲಿರುವ ಅಭ್ಯರ್ಥಿಗಳು ಮತ ಬೇಟೆಗೆ ಮುಂದಾಗಿದ್ದಾರೆ. ಭಾನುವಾರ ರಾತ್ರಿ ರೂಕನ್ ಸರಾಯ ಮೊಹಲ್ಲಾದಲ್ಲಿ ಪ್ರಚಾರ ನಡೆಸುತ್ತಿರುವ ವೇಳೆ ಎಐಎಂಐಎಂ ಅಭ್ಯರ್ಥಿ ದಿಲ್‍ಶಾದ್ ಅಹ್ಮದ್ ಮೇಲೆ ಹಲ್ಲೆ ನಡೆದಿದೆ. ಗಲಾಟೆಯಲ್ಲಿ ದಿಲ್‍ಶಾದ್ ಬಟ್ಟೆ ಹರಿಯಲಾಗಿದೆ. ದಿಲ್‍ಶಾದ್ ತಮ್ಮ ಮೇಲಾದ ಹಲ್ಲೆಯ ಸಂಬಂಧ ದೂರು ದಾಖಲಿಸಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ

    ಅಜಾದ್ ಸಮಾಜ ಪಾರ್ಟಿ (ಆಸಪಾ) ಅಭ್ಯರ್ಥಿ ಹಾಕಿ ಯಾಮೀನ್ ಮತ್ತು ಅವರ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಿಲ್ ಶಾದ್ ಆರೋಪಿಸಿದ್ದಾರೆ. ಆದ್ರೆ ಆಸಪಾ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ರಾವಣ್ ತಮ್ಮ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದ್ರೆ ಚಂದ್ರಶೇಖರ್ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. . ಇದನ್ನೂ ಓದಿ: ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು

    ಹಲ್ಲೆಯ ಬಳಿಕ ದೂರು ದಾಖಲಿಸಿರುವ ದಿಲ್‍ಶಾದ್ ತಮ್ಮ ಜೀವಕ್ಕೆ ಅಪಾಯವಿದ್ದು, ಭದ್ರತೆ ನೀಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಚಂದ್ರಶೇಖರ್ ಮೇಲೆ ನಡೆದಿದೆ ಎನ್ನಲಾದ ಗುಂಡಿನ ದಾಳಿ ಬಗ್ಗೆಯೂ ಪೊಲೀಸರಿಗೂ ಖಚಿತ ಮಾಹಿತಿ ಸಿಕ್ಕಿಲ್ಲ.

     

  • ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡ್ತಿದೆ: ಅಸಾದುದ್ದೀನ್ ಓವೈಸಿ

    ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡ್ತಿದೆ: ಅಸಾದುದ್ದೀನ್ ಓವೈಸಿ

    -ಚೀನಾ ಹೆಸ್ರು ಹೇಳಲು ಪ್ರಧಾನಿ ಧೈರ್ಯ ಮಾಡ್ತಿಲ್ಲ

    ನವದೆಹಲಿ: ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡುವ ಕೆಲಸವನ್ನು ಮಾಡುತ್ತಿದೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

    ಅಧಿವೇಶನ ಆರಂಭಕ್ಕೂ ಮುನ್ನ ಖಾಸಗಿ ವಾಹಿನಿ ಜೊತೆ ಮಾತನಾಡಿದ ಓವೈಸಿ, ದೇಶ ಕಷ್ಟ ಕಾಲದಲ್ಲಿದ್ದು, ಕೊರೊನಾದಿಂದ ಸಾವುಗಳು ಆಗುತ್ತಿವೆ. ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಚೀನಾ ದೇಶದೊಳಗೆ ನುಗ್ಗಿದೆ. ಈ ಎಲ್ಲ ವಿಷಯಗಳ ಮೇಲೆ ಚರ್ಚೆ ನಡೆಯಬೇಕು ಎಂಬುವುದು ನಮ್ಮೆಲ್ಲರ ಇಚ್ಛೆ. ಆದ್ರೆ ಸರ್ಕಾರ ಪ್ರಶ್ನಾವಳಿ ಸಮಯವನ್ನ ರದ್ದುಗೊಳಿಸುವ ಮೂಲಕ ವಿಪಕ್ಷಗಳ ಧ್ವನಿ ಅಡಗಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

    ಪ್ರಧಾನಿಗಳು ಚೀನಾದ ಹೆಸರು ಯಾಕೆ ಹೆದರುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಪ್ರಧಾನಿಗಳು ದೇಶದ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುವಲ್ಲಿ ನಿರತರಾಗಿದ್ದಾರೆ. ಯಾರು ದೇಶದ ಗಡಿ ಒಳ ಪ್ರವೇಶಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಚೀನಾ ಸೇನೆ ಸಾವಿರ ಕಿಲೋ ಮೀಟರ್ ನಷ್ಟು ಒಳಪ್ರವೇಶಿಸಿದೆ. ನಾವು ದೇಶದ ಸೇನೆಯ ಜೊತೆಯಲ್ಲಿದ್ದೇವೆ. ಚೀನಾ ವಿಷಯದಲ್ಲಿ ಸರ್ಕಾರ ದೇಶದ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

    ಸರ್ಕಾರ ಯಾವುದೇ ಪೂರ್ವಾಪರ ಯೋಚಿಸದೇ ಲಾಕ್‍ಡೌನ್ ಘೋಷಣೆ ಮಾಡಿತು. ಸದ್ಯದ ದೇಶದ ಪರಿಸ್ಥಿತಿಗೆ ಪ್ರಧಾನಿಗಳು ನೇರ ಕಾರಣ. ಸರ್ಕಾರ ಅಮೆರಿಕಾದ ಜೊತೆ ನಮ್ಮ ದೇಶವನ್ನು ಹೋಲಿಸಿಕೊಳ್ಳುತ್ತಿದೆ. ಅಲ್ಲಿ ಹಿರಿಯ ನಾಗರಿಕ ಸಂಖ್ಯೆ ಹೆಚ್ಚು, ಅಲ್ಲಿಯ ಕಾರಣಗಳು ಸಂಪೂರ್ಣ ಭಿನ್ನ. ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ನಮ್ಮಲ್ಲಿ ಕೊರೊನಾದಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂದರು.

  • ಅಲ್ಪಸಂಖ್ಯಾತ ಸೋದರರೇ ವ್ಯೂಹದಲ್ಲಿ ಸಿಲುಕಬೇಡಿ- ದೀದಿ ಹೇಳಿಕೆಗೆ ಓವೈಸಿ ತಿರುಗೇಟು

    ಅಲ್ಪಸಂಖ್ಯಾತ ಸೋದರರೇ ವ್ಯೂಹದಲ್ಲಿ ಸಿಲುಕಬೇಡಿ- ದೀದಿ ಹೇಳಿಕೆಗೆ ಓವೈಸಿ ತಿರುಗೇಟು

    -ಬಿಜೆಪಿಯಿಂದ ಹಣ ಪಡೆದ್ರಾ ಓವೈಸಿ!
    -42ರಲ್ಲಿ 18 ಬಿಜೆಪಿ ಗೆದ್ದಿದ್ದೇಗೆ?

    ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವೆ ಮಾತಿನ ಚಕಮಕಿ ಆರಂಭಗೊಂಡಿದೆ. ಸೋಮವಾರ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗೆ ಓವೈಸಿ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

    ಮಮತಾ ಬ್ಯಾನರ್ಜಿ ಹೇಳಿದ್ದೇನು?
    ಸೋಮವಾರ ಮಮತಾ ಬ್ಯಾನರ್ಜಿ ಕೂಚ್ ಬೆಹರ್ ನಲ್ಲಿರುವ ಮದನ ಮೋಹನ ದೇವಾಲಯಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಹೈದರಾಬಾದ್ ನಲ್ಲಿ ಹಿಂದೂ ವಿರೋಧಿ ಪಕ್ಷ ಒಂದಿದೆ. ಅವರು ಬಿಜೆಪಿಯಿಂದ ಹಣ ಪಡೆದು ಇಲ್ಲಿಗೆ ಬಂದು ಅಲ್ಪಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಹೇಳ್ತಾರೆ. ಅಲ್ಪಸಂಖ್ಯಾತ ಸೋದರರು ಅವರ ಮೋಸದ ವ್ಯೂಹದಲ್ಲಿ ಸಿಲುಕಬೇಡಿ ಎಂದು ಹೇಳಿದ್ದರು.

    ಓವೈಸಿ ತಿರುಗೇಟು:
    ಪಶ್ಚಿಮ ಬಂಗಾಳದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಸೂಚಂಕ್ಯ ಕಡಿಮೆ ಇದೆ ಎಂದು ಹೇಳುವುದು ಧರ್ಮಾಂಧತೆ ಅಲ್ಲ. ದೀದಿ ಹೈದರಾಬಾದಿಗಳ ಬಗ್ಗೆ ಚಿಂತಿತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೇಗೆ 42ರ ಪೈಕಿ 18 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು ಎಂಬುದಕ್ಕೆ ಉತ್ತರಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

  • ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    – ಎಐಎಂಐಎಂ ಸೋತ್ರೂ ಪರವಾಗಿಲ್ಲ ಬಿಜೆಪಿ ಗೆಲ್ಲಬಾರದು

    ಹೈದರಾಬಾದ್: ಮುಂಬರುವ ತೆಲಂಗಾಣ ಪುರಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ, ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತರೂ ಪರವಾಗಿಲ್ಲ ಬಿಜೆಪಿ ಗೆಲುವು ಸಾಧಿಸಬಾರದು. ಎಐಎಂಐಎಂ ಮುಖಂಡರು ನಿಜಾಮಾಬಾದ್‍ನ ಉಪಮೇಯರ್ ಆಗಿದ್ದ ಕಾಲವೊಂದಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ನಿಜಾಮಾಬಾದ್ ಕ್ಷೇತ್ರದಿಂದ ಬಿಜೆಪಿ ಆಯ್ಕೆಯಾಗಿದೆ. ಎಐಎಂಐಎಂ ಗೆಲ್ಲುವುದು ನಿಮಗೆ ಇಷ್ಟವಿಲ್ಲದಿದ್ದರೆ ಪರವಾಗಿಲ್ಲ, ಬಿಜೆಪಿಯನ್ನು ಸೋಲಿಸಿ ಎಂದು ಮುಸ್ಲಿಂ ಸಮುದಾಯದ ಜೊತೆ ಮನವಿ ಮಾಡಿಕೊಂಡಿದ್ದಾರೆ.

    ನಿಜಾಮಾಬಾದ್ ಸಂಸದೀಯ ಸ್ಥಾನವನ್ನು ಗೆದ್ದ ಬಿಜೆಪಿ ಮೇಯರ್ ಹುದ್ದೆಯನ್ನೂ ಅಲಂಕರಿಸುವ ಸಾಧ್ಯತೆ ಇದೆ. ಹೀಗಾಗಿ ನೀವು ಒಗ್ಗಟ್ಟಾಗಿ ನಿಲ್ಲಬೇಕಿದೆ. ಈ ಮೂಲಕ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಬೇಕು ಎಂದು ಮತದಾರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ ಜನರ ಆಶೀರ್ವಾದವನ್ನು ಬಯಸುತ್ತೇನೆ. ನೀವು ಒಗ್ಗಟ್ಟಿನಿಂದ ಇರುವುದನ್ನು ನೋಡಲು ಇಷ್ಟಪಡುತ್ತಿರುವೆ ಎಂದು ಮತದಾರರ ಮನವೊಲಿಸಲು ಪ್ರಯತ್ನಿಸಿದರು.

    ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಸಿಕಂದರಾಬಾದ್, ನಿಜಾಮಾಬಾದ್, ಕರೀಂನಗರ ಹಾಗೂ ಆದಿಲಾಬಾದ್ ಕ್ಷೇತ್ರಗಳಿಂದ ಗೆಲುವು ಸಾಧಿಸಿದೆ. ಆದರೆ ಎಐಎಂಐಎಂ ಕೇವಲ ಒಂದೇ ಒಂದು ಕ್ಷೇತ್ರವಾದ ಹೈದರಾಬಾದ್‍ನಿಂದ ಜಯಗಳಿಸಿದೆ.

  • ವಿಪಕ್ಷ ಸ್ಥಾನ ನಮಗೆ ಕೊಡಿ: ಸ್ಪೀಕರ್‌ಗೆ ಓವೈಸಿ ಮನವಿ

    ವಿಪಕ್ಷ ಸ್ಥಾನ ನಮಗೆ ಕೊಡಿ: ಸ್ಪೀಕರ್‌ಗೆ ಓವೈಸಿ ಮನವಿ

    ಹೈದರಾಬಾದ್: ಕಾಂಗ್ರೆಸ್‍ಗಿಂತ ನಾವು ಹೆಚ್ಚು ಸ್ಥಾನಗಳನ್ನು ಹೊಂದಿದ್ದೇವೆ ನಮಗೆ ವಿರೋಧ ಪಕ್ಷದ ಸ್ಥಾನ ಕಲ್ಪಿಸಿಕೊಡಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ತೆಲಂಗಾಣ ವಿಧಾನಸಭಾ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಐಎಂಐಎಂ ಎರಡನೇ ಬೃಹತ್ ಪಕ್ಷವಾಗಿದೆ. ಕಾಂಗ್ರೆಸ್‍ಗಿಂತ ಹೆಚ್ಚು ಸ್ಥಾನಗಳನ್ನು ನಾವು ಹೊಂದಿದ್ದೇವೆ. ಹೀಗಾಗಿ ನಮಗೆ ವಿರೋಧ ಪಕ್ಷದ ಸ್ಥಾನ ನೀಡುವಂತೆ ಸ್ಪೀಕರ್ ಪೊಚರಾಮ್ ಶ್ರೀನಿವಾಸ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

    119 ಸಂಖ್ಯಾಬಲವಿರುವ ತೆಲಂಗಾಣ ವಿಧಾನಸಭೆಯಲ್ಲಿ ಟಿಆರ್‌ಎಸ್‌ 103, ಕಾಂಗ್ರೆಸ್ 6, ಎಐಎಂಐಎಂ 7, ಟಿಡಿಪಿ, ಬಿಜೆಪಿ ಹಾಗೂ ಪಕ್ಷೇತರ ತಲಾ 1 ಸ್ಥಾನ ಹೊಂದಿವೆ. ಹೀಗಾಗಿ ಟಿಆರ್‌ಎಸ್‌ಗೆ ನೀಡಿರುವ ಬೆಂಬಲವನ್ನು ಎಐಎಂಐಎಂ ಹಿಂಪಡೆದು, ವಿರೋಧ ಪಕ್ಷದ ಜವಾಬ್ದಾರಿ ಹೊರಲು ಮುಂದಾಗಿದೆ.

    2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ ಶಾಸಕ ಉತ್ತಮ್ ಕುಮಾರ್ ರೆಡ್ಡಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್‍ಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿದಿತ್ತು. ಬಳಿಕ 12 ಶಾಸಕರು ಕಾಂಗ್ರೆಸ್ ಬಿಟ್ಟು ಟಿಆರ್‍ಎಸ್ ಸೇರಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಬಲ 6ಕ್ಕೆ ಕುಸಿದಿದೆ. ಈ ಮೂಲಕ 91 ಸ್ಥಾನಗಳನ್ನು ಹೊಂದಿದ್ದ ಟಿಆರ್‌ಎಸ್‌ ಈಗ 103 ಸಂಖ್ಯಾಬಲಕ್ಕೆ ಏರಿಕೆ ಕಂಡಿದೆ.

    ಒಟ್ಟು 2/3 ರಷ್ಟು ಶಾಸಕರು ಒಂದು ಪಕ್ಷವನ್ನು ತೊರೆದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ 12 ಮಂದಿ ಕೈ ಶಾಸಕರು ಕಾಂಗ್ರೆಸ್ ತೊರೆದರೂ ಅವರ ವಿರುದ್ಧ ಕ್ರಮ ಜರಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

  • ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    – ವಾಯು ಪಡೆ, ಕೇಂದ್ರ ಸರ್ಕಾರಕ್ಕೆ ಧನ್ಯವಾದ

    ಹೈದರಾಬಾದ್: ಪಾಕಿಸ್ತಾನ ಮೂರ್ಖ ನಿರ್ಧಾರಗಳನ್ನ ಕೈಗೊಂಡರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿರಬೇಕು ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಮಾತನಾಡಿದ ಅವರು, ನಾವು ಊಹಿಸಿದಂತೆ ಭಾರತ ಸರ್ಕಾರ ಹಾಗೂ ವಾಯು ಪಡೆ ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿದೆ. ವಾಯುಸೇನೆಗೆ ನಮ್ಮ ಅಭಿನಂದನೆ. ಕೇಂದ್ರ ಸರ್ಕಾರವು ದಿಟ್ಟ ನಿರ್ಧಾವನ್ನು ಕೈಗೊಂಡಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಓವೈಸಿ ತಿಳಿಸಿದರು.  ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ವಿಶ್ವಸಂಸ್ಥೆಯ ವಿಧಿ 51ರಂತೆ ಭಾರತವು ತನ್ನ ಗಡಿಯನ್ನು ಮತ್ತು ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ. ಸ್ವಯಂ ರಕ್ಷಣೆಗೆ ದಾಳಿ ಮಾಡುವ ಹಕ್ಕನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರವು ಉಗ್ರರಿಗೆ ತಕ್ಕ ಪಾಠ ಕಲಿಸಲು ಸೂಕ್ತ ದಾಳಿ ನಡೆಸಬೇಕೆಂದು ನಾವು ಬಹುದಿನಗಳಿಂದ ಕಾಯುತ್ತಿದ್ದೇವು. ದಾಳಿ ಮಾಡಿದವರು ಮಸೂದ್ ಅಜರ್, ಲಷ್ಕರ್ ಅದು ಯಾರೇ ಆಗಿರಲಿ ನಾನು ಅವುಗಳನ್ನು ತಾಲಿಬಾನ್‍ಗಳು ಎಂತಲೇ ಕರೆಯುತ್ತೇನೆ. ಇಂತಹ ಸೈತಾನ್‍ಗಳನ್ನು ಸರ್ಕಾರ ಹೊಡೆದು ಹಾಕಬೇಕು ಎಂದು ಕಿಡಿಕಾರಿದರು.

    ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಬಗ್ಗೆ ಪ್ರಶ್ನೆ ಮಾಡಲ್ಲ. ಉಗ್ರರನ್ನು ಹೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಸರ್ಜಿಕಲ್ ಸ್ಟ್ರೈಕ್‍ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಕಾಂಗ್ರೆಸ್ ಅಲ್ಲ, ಮುಸ್ಲಿಂ ಮುಕ್ತ ಭಾರತ ನಿರ್ಮಾಣ ಮಾಡುತ್ತಿದೆ: ಓವೈಸಿ

    ಬಿಜೆಪಿ ಕಾಂಗ್ರೆಸ್ ಅಲ್ಲ, ಮುಸ್ಲಿಂ ಮುಕ್ತ ಭಾರತ ನಿರ್ಮಾಣ ಮಾಡುತ್ತಿದೆ: ಓವೈಸಿ

    ಹೈದರಾಬಾರ್: ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ, ಬಿಜೆಪಿ ಭಾರತವನ್ನು ಮುಸ್ಲಿಂ ಮುಕ್ತ ಮಾಡಲು ಹೊರಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತೆಲಂಗಾಣದ ಬಹದ್ದೂರ್ ಪುರ್‍ನಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆ ನಡೆದಿತ್ತು. ಈ ವೇಳೆ ಮಾತನಾಡಿದ ಓವೈಸಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟಿಲ್ಲ. ಮುಸ್ಲಿಂ ಮುಕ್ತ ಮಾಡಲು ಹೊರಟಿದ್ದಾರೆ. ಅಷ್ಟೇ ಅಲ್ಲದೇ ದೇಶದ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಅಮಿತ್ ಶಾ ತೆಲಂಗಾಣಕ್ಕೆ ಬಂದಿದ್ದಾಗ ಮಜ್ಲಿಸ್ ಮುಕ್ತ ಹೈದರಾಬಾದ್ ಮಾಡುತ್ತೇನೆ ಅಂತಾ ಹೇಳಿದ್ದಕ್ಕೆ ಓವೈಸಿ, ಅಮಿತ್ ಶಾ ಅವರೇ ಯಾವುದನ್ನು ಮುಕ್ತ ಮಾಡುತ್ತೀರಾ? ಎಲ್ಲಿಂದ ಮುಕ್ತ ಮಾಡುತ್ತೀರಾ ಎಂದು ಪ್ರಶ್ನಿಸಿ ಕುಟುಕಿದರು. ನೀವು ಮಜ್ಲಿಸ್ ಮುಕ್ತ ಭಾರತ ಮಾಡುವ ಗುರಿ ಹೊಂದಿಲ್ಲ. ಹೊರತಾಗಿ ಮುಸ್ಲಿಂ ಮುಕ್ತ ಭಾರತಕ್ಕೆ ಮುಂದಾಗಿರುವಿರಿ ಎಂದು ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv