ಗಾಂಧೀನಗರ: ಈ ಸರ್ಕಾರಕ್ಕೆ ಹಿಂಸಾಚಾರ ಬೇಕಾಗಿದೆ. ಅದಕ್ಕೆ ಗಲಭೆಗೆ ಸಹಕರಿಸಿದೆ ಎಂದು ರಾಮನವಮಿಯಂದು ನಡೆದ ಹಿಂಸಾಚಾರ ಖಂಡಿಸಿ ಗುಜರಾತ್ ಸರ್ಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಎಷ್ಟು ದಿನ ಹಳೆಯ ಕಥೆಗಳನ್ನು ಹೊರತರುತ್ತೀರಿ? ನಿಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಿ. ನೀವೇ ಜಟಿಲರು. ಭಜನೆ ಮಾಡಬೇಕು, ಆದರೆ ಯಾವ ರೀತಿಯ ಘೋಷಣೆಗಳು ಎದ್ದವು? 50-100 ಕತ್ತಿಗಳನ್ನು ಬೀಸಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಇದನ್ನು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಾರಣಾಸಿಯ ಸೀರೆ ಮಳಿಗೆಯಲ್ಲಿ ಅಗ್ನಿ ದುರಂತ: ನಾಲ್ವರು ಸಜೀವ ದಹನ
ಗುಪ್ತಚರ ಇಲಾಖೆ (IB) ವರದಿಯಿದ್ದರೆ ನೀವು ಏಕೆ ಮಲಗಿದ್ದೀರಿ? ನೀವು ಅದನ್ನು ಬಹಿರಂಗಪಡಿಸಬೇಕು. ಹೆಚ್ಚಿನ ಪೋಲಿಸ್ ಪಡೆಯನ್ನು ನಿಯೋಜಿಸಿ, ಹಿಂಸಾಚಾರವನ್ನು ನಿಲ್ಲಿಸಬೇಕು. ನಿಮ್ಮ ಜಟಿಲ ವರ್ತನೆಯನ್ನು ಮರೆಮಾಡಲು ಕಥೆಗಳನ್ನು ಹೇಳುತ್ತೀರಿ. ಅಂತಹ ಕಥೆಗಳು ಈಗ ಹಳೆಯದಾಗಿವೆ ಎಂದು ಚಾಟಿ ಬೀಸಿದ್ದಾರೆ.
ಯಾವುದೇ ಹಿಂಸಾಚಾರವೂ ಸರಿಯಲ್ಲ. ಹಿಂಸಾಚಾರ ಭುಗಿಲೆದ್ದರೆ ಅದರ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರಗಳು ಬಯಸದಿದ್ದರೆ, ಹಿಂಸಾಚಾರ ಭುಗಿಲೇಳುವುದಿಲ್ಲ ಎಂದು ತನಿಖಾ ಆಯೋಗದ ವರದಿಗಳು ಹೇಳಿವೆ ಎಂದು ತಿಳಿಸಿದ್ದಾರೆ.
ಹೈದರಾಬಾದ್: ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯ ಸರ್ಕಾರಗಳು ಸೋತಿವೆ ಎಂದು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ರಾಮನವಮಿ ಆಚರಣೆ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಹಿಂಸಾಚಾರಗಳಾಗಿವೆ. ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದ್ದು, ಅದನ್ನು ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ಅರ್ಹರಲ್ಲ: ನಿರ್ಭಯಾ ತಾಯಿ
ಇದು ಸ್ಪಷ್ಟವಾಗಿ ರಾಜ್ಯಗಳ ಸಹಭಾಗಿತ್ವದ ಹಿಂಸಾಚಾರವಾಗಿದೆ. ಜಿನೆವಾ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಓವೈಸಿ ಗಂಭೀರ ಆರೋಪ ಮಾಡಿದ್ದಾರೆ.
ಮುಂಬೈ: ಎಐಎಂಐಎಂ ಜೊತೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳಲು ಒಲವು ಹೊಂದಿಲ್ಲ ಎಂದು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಪುಣಾದಲ್ಲಿ ಸ್ಪಷ್ಟ ಪಡಿಸಿದರು.
ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ಶಿವಸೇನೆ ನೇತೃತ್ವದ ತ್ರಿಪಕ್ಷೀಯ ಮಹಾ ವಿಕಾಸ್ ಅಘಾಡಿ(ಎಂವಿಎ) ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾಪಿಸಿತ್ತು. ಈ ಬಗ್ಗೆ ಮಾತನಾಡಿ, ಮೈತ್ರಿಯ ಬಗ್ಗೆ ಇಮ್ತಿಯಾಜ್ ಜಲೀಲ್ ಅವರ ಸಲಹೆಯನ್ನು ಶಿವಸೇನೆ ಈಗಾಗಲೇ ತಿರಸ್ಕರಿಸಿದೆ ಎಂದು ಹೇಳಿದರು.
ಎಐಎಂಐಎಂ ಮೈತ್ರಿ ಬಗ್ಗೆ ಮಾತನಾಡಬಹುದು. ಆದರೆ ಅವರು ಮಾತನಾಡುತ್ತಿರುವ ಪಕ್ಷಗಳು ಅಂತಹ ಪ್ರಸ್ತಾಪವನ್ನು ಮೊದಲು ಒಪ್ಪಿಕೊಳ್ಳಬೇಕು. ಎಐಎಂಐಎಂ ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಲೂ ಪ್ರಸ್ತಾಪಿಸಿದ್ದರೂ, ಅಂತಹ ಮೈತ್ರಿ ರಚನೆಗೆ ರಾಜಕೀಯ ಪಕ್ಷಗಳ ರಾಷ್ಟ್ರೀಯ ಸಮಿತಿಯು ಅನುಮೋದನೆ ನೀಡಬೇಕು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!
ಎನ್‍ಸಿಪಿಯು ಶಿವಸೇನೆ ಮತ್ತು ಕಾಂಗ್ರೆಸ್‍ನೊಂದಿಗೆ ಆಡಳಿತಾರೂಢ ಒಕ್ಕೂಟದ ಭಾಗವಾಗಿರುವುದರಿಂದ, ಮೈತ್ರಿಯನ್ನು ವಿಸ್ತರಿಸುವ ಬಗ್ಗೆ ಅದರ ಅಸ್ತಿತ್ವದಲ್ಲಿರುವ ಪಾಲುದಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಪತ್ನಿ ಮಟನ್ ಕರಿ ಮಾಡ್ಲಿಲ್ಲ ಅಂತ ಪೊಲೀಸರಿಗೆ ಟಾರ್ಚರ್ ಕೊಟ್ಟ ವ್ಯಕ್ತಿ
ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಶಿವಸೇನೆ ನೇತೃತ್ವದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಸಮ್ಮಿಶ್ರದೊಂದಿಗೆ ತಮ್ಮ ಪಕ್ಷವು ಮೈತ್ರಿಮಾಡಿಕೊಳ್ಳಬಹುದು ಎಂದು ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದರು.
ಔರಂಗಬಾದ್: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ ಸಿದ್ಧವಾಗಿದೆ. ಆದರೆ ಅವರು ನಮ್ಮೊಂದಿಗೆ ಕೈಜೋಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
ರಾಜ್ಯ ಸಚಿವ ಮತ್ತು ಎನ್‍ಸಿಪಿ ನಾಯಕ ರಾಜೇಶ್ ಟೋಪೆ ಅವರ ನಿವಾಸಕ್ಕೆ ಭೇಟಿ ನೀಡಿದ ಜಲೀಲ್ ಎಐಎಂಐಎಂ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯೊಂದಿಗೆ ಎಐಎಂಐಎಂ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಗಳಿಗೆ ಮುಸ್ಲಿಮರ ಮತಗಳು ಬೇಕಿದೆ. ಕಾಂಗ್ರೆಸ್ ಸಹ ತಾನು ಜಾತ್ಯಾತೀತರು ಎನ್ನುತ್ತದೆ. ಹಾಗಾಗಿ ನಾವೂ ಅವರೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ. ಈಗಾಗಲೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‍ಗೆ ಗರಿಷ್ಠ ಹಾನಿಯನ್ನುಂಟು ಮಾಡಿದೆ. ಕಾಂಗ್ರೆಸ್ ಒಂದೇ ಒಂದು ಮತವನ್ನು ಗಳಿಸುವ ಮೂಲಕ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ ಸೋಲಿಸಲು ಸಿದ್ಧರಿದ್ದೇವೆ ಎಂದು ಜಲೀಲ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು: ಪ್ರತಾಪ್ ಸಿಂಹ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ (ಚುನಾವಣೆ) ಎಐಎಂಐಎಂ ಮಾತನಾಡಿದೆ, ಆದರೆ ಅವರಿಗೆ ಮುಸ್ಲಿಮರ ಮತಗಳು ಬೇಕೇ ಹೊರತು ನಮ್ಮ ಪಕ್ಷದ ಮುಖ್ಯಸ್ಥರು ಬೇಕಿಲ್ಲ ಎಂದಿದ್ದಾರೆ.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಮೈತ್ರಿ ಮಾಡಿಕೊಂಡರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಮಣಿಸಬಹುದು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಮುಸ್ಲಿಮರ ಮತಗಳು ಅವಶ್ಯವಿದ್ದು, ನಾವು ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಇಲ್ಲಿ ಯಾವುದೇ ಧರ್ಮವೂ ಕೆಟ್ಟದ್ದಲ್ಲ. ಅದನ್ನು ಅನುರಸರಿಸುವ ಜನರು ಒಳ್ಳೆಯವರು ಅಥವಾ ಕೆಟ್ಟವರು ಆಗಿರಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಜಲೀಲ್ ಸಲಹೆ ನೀಡಿದ್ದಾರೆ.
ನವದೆಹಲಿ: ಹಿಜಬ್ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹಿಜಬ್ ಸಂಬಂಧ ಹೈಕೋರ್ಟ್ ತೀರ್ಪು ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ. ಕೋರ್ಟ್ ತೀರ್ಪನ್ನು ವಿರೋಧಿಸುವುದು ನನ್ನ ಹಕ್ಕು. ಹಿಜಬ್ ಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಟ್ವೀಟ್‌ನಲ್ಲೇನಿದೆ?
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾವ್ ಬೋರ್ಡ್ ಮಾತ್ರವಲ್ಲ ಇತರೆ ಧಾರ್ಮಿಕ ಗುಂಪುಗಳ ಸಂಘಸಂಸ್ಥೆಗಳು ಸಹ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿವೆ ಎಂದು ಭಾವಿಸಿದ್ದೇನೆ.
1. I disagree with Karnataka High Court's judgement on #hijab. It’s my right to disagree with the judgement & I hope that petitioners appeal before SC
2. I also hope that not only @AIMPLB_Official but also organisations of other religious groups appeal this judgement…
ಏಕೆಂದರೆ ಅದು (ಕೋರ್ಟ್) ಧರ್ಮ, ಸಂಸ್ಕೃತಿ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದೆ. ಸಂವಿಧಾನದ ಪೀಠಿಕೆಯು ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದುವ ಹಕ್ಕಿದೆ ಎಂದು ಹೇಳುತ್ತದೆ.
… as it has suspended fundamental rights to freedom of religion, culture, freedom of speech and expression
3. Preamble to the Constitution says that one has LIBERTY of thought, EXPRESSION, belief faith, and WORSHIP….
ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ. ನಾನು ಸೂಕ್ತವೆಂದು ಭಾವಿಸಿದಂತೆ ಆ ನಂಬಿಕೆಯನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಬ್ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ.
…If it is MY belief & faith that covering my head is essential then I have a right to EXPRESS it as I deem fit. For a devout Muslim, Hijab is also an act of worship.
ಅಗತ್ಯವಾದ ಧಾರ್ಮಿಕ ಅಭ್ಯಾಸ ಪರೀಕ್ಷೆಯನ್ನು ಪರಿಶೀಲಿಸುವ ಸಮಯ ಇದು. ದರ್ಮನಿಷ್ಠ ವ್ಯಕ್ತಿಗೆ ಎಲ್ಲವೂ ಅತ್ಯಗತ್ಯ. ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ ಜನಿವಾರ ಅತ್ಯಗತ್ಯ. ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅಗತ್ಯವನ್ನು ನಿರ್ಧರಿಸಬಹುದು ಎಂಬುದು ಅಸಂಬದ್ಧವಾಗಿದೆ.
4. It’s time to review the essential religious practice test. For a devout person, everything is essential & for an atheist nothing is essential. For a devout Hindu Brahmin, janeu is essential but for a non-Brahmin it may not be. It is absurd that judges can decide essentiality
ಅದೇ ಧರ್ಮದ ಇತರ ಜನರು ಸಹ ಅಗತ್ಯವನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಇದು ವ್ಯಕ್ತಿ ಮತ್ತು ದೇವರ ನಡುವೆ ಇದೆ. ಇಂತಹ ಪೂಜಾ ಕಾರ್ಯಗಳು ಇತರರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ಹಿಜಬ್ ಯಾರಿಗೂ ಹಾನಿ ಮಾಡುವುದಿಲ್ಲ.
5. Not even other people of the same religion have the right to decide essentiality. It is between the individual & God. State should be allowed to interfere in religious rights only if such acts of worship harm others. Headscarf does not harm anyone.
ಹಿಜಬ್ ನಿಷೇಧಿಸುವುದರಿಂದ ಧಾರ್ಮಿಕ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿಯಾಗುತ್ತದೆ. ಅವರು ಶಿಕ್ಷಣ ಪಡೆಯುವುದಕ್ಕೆ ಅಡ್ಡಿಪಡಿಸಿದಂತಾಗುತ್ತದೆ.
6. Banning headscarf definitely harms devout Muslim women and their families as it prevents them from accessing education
7. The excuse being used is that uniform will ensure uniformity. How? Will kids not know who’s from a rich/poor family? Do caste names not denote background?
ಸಮವಸ್ತ್ರವು ಏಕರೂಪತೆಯನ್ನು ಖಚಿತಪಡಿಸುತ್ತದೆ ಎನ್ನಲಾಗುತ್ತದೆ. ಅದು ಹೇಗೆ? ಶ್ರೀಮಂತ/ಬಡ ಕುಟುಂಬದಿಂದ ಬಂದವರು ಯಾರೆಂದು ಮಕ್ಕಳಿಗೆ ತಿಳಿಯುವುದಿಲ್ಲವೇ? ಜಾತಿಯ ಹೆಸರುಗಳು ಹಿನ್ನೆಲೆಯನ್ನು ಸೂಚಿಸುವುದಿಲ್ಲವೇ? ಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಲು ಸಮವಸ್ತ್ರ ಸಹಕಾರಿಯಾಗಿದೆಯೇ?
8. What does uniform do to prevent teachers from discriminating? Globally, the experience has been that reasonable accommodations are made in school, police & army uniforms to reflect diversity.
ಐರ್ಲೆಂಡ್ ಸರ್ಕಾರವು ಹಿಜಬ್ ಮತ್ತು ಸಿಖ್ ಪೇಟವನ್ನು ಅನುಮತಿಸಲು ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಾಯಿಸಿದಾಗ ಮೋದಿ ಸರ್ಕಾರ ಅದನ್ನು ಸ್ವಾಗತಿಸಿತು. ಹಾಗಾದರೆ ಸ್ವದೇಶ ಮತ್ತು ವಿದೇಶ ವಿಚಾರವಾಗಿ ಏಕೆ ಎರಡು ಮಾನದಂಡಗಳು? ಸಮವಸ್ತ್ರದ ಬಣ್ಣಗಳಿಗೆ ಹೋಲುವ ಹಿಜಬ್ ಮತ್ತು ಪೇಟಗಳನ್ನು ಧರಿಸಲು ಅನುಮತಿಸಬಹುದು.
9. When Ireland’s govt changed the rules for police uniform to allow hijab and Sikh turban, Modi govt welcomed it. So why double standards at home & abroad? Hijab and turbans of the uniform’s colours can allowed to be worn
ಇದೆಲ್ಲದರ ಪರಿಣಾಮವೇನು? ಮೊದಲನೆಯದಾಗಿ, ಸರ್ಕಾರವು ಅಸ್ತಿತ್ವದಲ್ಲಿಲ್ಲದ ಸಮಸ್ಯೆಯನ್ನು ಸೃಷ್ಟಿಸಿತು. ಮಕ್ಕಳು ಹಿಜಬ್, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಲಾಯಿತು. ಕೇಸರಿ ಪೇಟಗಳೊಂದಿಗೆ ಪ್ರತಿಯಾಗಿ ಪ್ರತಿಭಟನೆಗಳನ್ನು ನಡೆಸಲಾಯಿತು.
10. What is the consequence of all of this? First, govt created a problem where none existed. Children were wearing hijab, bangles, etc & going to school. Second, violence was instigated and counter-protests were held with saffron turbans.
ಕೇಸರಿ ಪೇಟಗಳು ಅಗತ್ಯವೆ? ಅಥವಾ ಹಿಜಬ್‌ಗೆ ಪ್ರತಿಕ್ರಿಯೆ ಮಾತ್ರವೇ? ಸರ್ಕಾರ ಮತ್ತು ಹೈಕೋರ್ಟ್ ಆದೇಶವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ. ಹಿಜಬ್ ಧರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾಧ್ಯಮಗಳು, ಪೊಲೀಸರು ಮತ್ತು ನಿರ್ವಾಹಕರು ಕಿರುಕುಳ ನೀಡುವುದನ್ನು ನಾವು ನೋಡಿದ್ದೇವೆ. ಮಕ್ಕಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಸಾಮೂಹಿಕ ಉಲ್ಲಂಘನೆಯಾಗಿದೆ.
11. Are saffron turbans “essential”? Or only a “reaction” to hijab? Third, GO & HC order suspended fundamental rights. We saw media, police & admin harass hijab wearing students & even teachers. Kids have been even banned from writing exams. It’s a mass violation of civil rights
ಕೊನೆಯದಾಗಿ, ಇದರರ್ಥ ಒಂದು ಧರ್ಮವನ್ನು ಗುರಿಯಾಗಿಸಲಾಗಿದೆ. ಅದರ ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್ 15, ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಇದು ಅದೇ ಉಲ್ಲಂಘನೆಯಲ್ಲವೇ? ಸಂಕ್ಷಿಪ್ತವಾಗಿ ಹೈಕೋರ್ಟ್ ಆದೇಶವು ಮಕ್ಕಳನ್ನು ಶಿಕ್ಷಣ ಮತ್ತು ಅಲ್ಲಾನ ಆಜ್ಞೆಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸಿದೆ.
12. Lastly, this means that one religion has been targeted & its religious practice has been banned. Article 15 prohibits discrimination based on religion. Is this not a violation of the same? In short HC order has forced kids to choose between education & Allah’s commands
ಮುಸ್ಲಿಮರಿಗೆ ಶಿಕ್ಷಣ ಪಡೆಯುವುದು ಅಲ್ಲಾಹನ ಆಜ್ಞೆಯಾಗಿದೆ. ಅವನ ಕಟ್ಟುಪಾಡುಗಳನ್ನು (ಸಲಾಹ್, ಹಿಜಬ್, ರೋಜಾ ಇತ್ಯಾದಿ) ಅನುಸರಿಸುತ್ತದೆ. ಈಗ ಯಾವುದು ಬೇಕು ಅದನ್ನು ಆಯ್ಕೆ ಮಾಡಿ ಎಂದು ಸರ್ಕಾರ ಹುಡುಗಿಯರನ್ನು ಒತ್ತಾಯಿಸುತ್ತಿದೆ. ಇಲ್ಲಯವರೆಗೆ ನ್ಯಾಯಾಂಗವು ಗಡ್ಡವನ್ನು ಹೊಂದುವುದು ಮತ್ತು ಹಿಜಬ್ ಅನಿವಾರ್ಯವಲ್ಲ ಎಂದು ಘೋಷಿಸಿದೆ. ನಂಬಿಕೆಗಳ ಮುಕ್ತ ಅಭಿವ್ಯಕ್ತಿಯಿಂದ ಈಗ ಏನು ಉಳಿದಿದೆ?
13. For Muslims it’s Allah’s command to be educated while also following his strictures (salah, hijab, roza, etc). Now govt is forcing girls to choose. So far judiciary has declared masjids, keeping a beard & now hijab as non-essential. What is left of free expression of beliefs?
ಹಿಜಬ್ ಧರಿಸುವುದು ಮಹಿಳೆಯರಿಗೆ ಕಿರುಕುಳವನ್ನು ಕಾನೂನುಬದ್ಧಗೊಳಿಸಲು ಈ ತೀರ್ಪು ಬಳಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬ್ಯಾಂಕ್‌ಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಇತ್ಯಾದಿಗಳಲ್ಲಿ ಹಿಜಬ್ ಧರಿಸಿದ ಮಹಿಳೆಯರಿಗೆ ಇದು ಸಂಭವಿಸಿದಾಗ ನಿರಾಶೆಯಾಗಬಹುದು.
14. I hope this judgement will not be used to legitimise harassment of hijab wearing women. One can only hope and eventually be disappointed when this starts happening to hijab wearing women in banks, hospitals, public transport etc
ಪೂರ್ಣ ತೀರ್ಪು ಲಭ್ಯವಾದಾಗ ಒಬ್ಬರು ಹೆಚ್ಚು ವಿವರವಾಗಿ ಪ್ರತಿಕ್ರಿಯೆಯನ್ನು ನೀಡಬಹುದು ಎಂದು ಅಸಾದುದ್ದೀನ್ ಓವೈಸಿ ಸರಣಿ ಟ್ವೀಟ್ ಮಾಡಿದ್ದಾರೆ.
15. One can give a more detailed response whence the full judgement is made available. For now, this thread is based on the oral order dictated in court.
ಲಕ್ನೋ: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಚುನಾವಣೆ ಕುರಿತು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀದ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು ಇವಿಎಂ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ತಮ್ಮ ಸೋಲನ್ನು ಮರೆಮಾಚಲು ಪ್ರಯತ್ನಿಸುತ್ತಿವೆ. ಆದರೆ ಇದು ಇವಿಎಂ ಸಮಸ್ಯೆಯಲ್ಲ, ಜನರ ತಲೆಯಲ್ಲಿರುವ ಚಿಪ್ಪಿನ ಸಮಸ್ಯೆ. ಬಿಜೆಪಿ ಯಶಸ್ವಿಯಾಗಿರುವುದು 80-20. ನಾವು ನಾಳೆಯಿಂದಲೇ ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಮುಂದಿನ ಬಾರಿ ಉತ್ತಮ ಸಾಧನೆ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದು ಓವೈಸಿ ತಿಳಿಸಿದ್ದಾರೆ. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ
ಉತ್ತರ ಪ್ರದೇಶದ ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಲಖಿಂಪುರ್ ಖೇರಿಯಲ್ಲೂ ಬಿಜೆಪಿ ಗೆದ್ದಿದೆ. ಅದಕ್ಕಾಗಿಯೇ 80-20 ಗೆಲುವು ಎಂದು ಹೇಳುತ್ತಿದ್ದೇನೆ. ಈ 80-20 ಪರಿಸ್ಥಿತಿಯು ವರ್ಷಗಳವರೆಗೆ ಇರುತ್ತದೆ. ಅದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಉತ್ಸಾಹ ಇನ್ನೂ ಹೆಚ್ಚಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಅಧಿಕಾರ ನೀಡಲು ಯುಪಿ ಜನತೆ ನಿರ್ಧರಿಸಿದ್ದಾರೆ. ಜನತೆಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಐಎಂಐಎಂನ ರಾಜ್ಯಾಧ್ಯಕ್ಷರು, ಕಾರ್ಯಕರ್ತರು, ಸದಸ್ಯರು ಮತ್ತು ನಮಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಪ್ರಯತ್ನಗಳು ಸಾಕಷ್ಟಿತ್ತು. ಆದರೆ ಫಲಿತಾಂಶಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬರಲಿಲ್ಲ. ನಾವು ಮತ್ತೆ ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್
ಕಾಂಗ್ರೆಸ್ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಬಗ್ಗೆ ಮಾತನಾಡುವ ಮೂಲಕ ನಾನು ಯಾಕೆ ಅವರನ್ನು ಗೌರವಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಬಹುಜನ ಸಮಾಜ ಪಕ್ಷವನ್ನು ವಿಸರ್ಜಿಸಿದರೆ ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಲಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಬಿಎಸ್‌ಪಿ ದೊಡ್ಡ ಪಾತ್ರ ವಹಿಸಿದೆ. ಪಕ್ಷ ಗಟ್ಟಿಯಾಗಲಿ ಎಂದು ಹಾರೈಸುತ್ತೇವೆ. ಇಂದಿನ ಫಲಿತಾಂಶವು ಖಂಡಿತವಾಗಿಯೂ ದೌರ್ಬಲ್ಯವನ್ನು ತೋರಿಸುತ್ತದೆ. ಆದರೆ ಬಿಎಸ್‌ಪಿ ಅಗತ್ಯವಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ
ನವದೆಹಲಿ: 18ನೇ ವಯಸ್ಸಿಗೆ ಹೆಣ್ಣುಮಕ್ಕಳು ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದ ಮೇಲೆ, ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಯಾಕಿಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 20ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಮಾತನಾಡಿದ ಓವೈಸಿ, ಮದುವೆ ವಯಸ್ಸನ್ನು ಹೆಚ್ಚಿಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಲುವು ಪುರುಷ ಪ್ರಧಾನ ವ್ಯವಸ್ಥೆ ಬಗ್ಗೆ ಒಲವು ಹೊಂದಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ
ಭಾರತೀಯ ನಾಗರಿಕ ತನಗೆ 18 ವರ್ಷ ತುಂಬಿದ ಮೇಲೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಬಹುದು, ಉದ್ಯಮ ನಡೆಸಬಹುದು, ಪ್ರಧಾನಿ ಹಾಗೂ ಸಂಸದರು, ಶಾಸಕರನ್ನೂ ಆಯ್ಕೆ ಮಾಡಬಹುದು. ಆದ್ದರಿಂದ ಕಾನೂನಿನಲ್ಲಿ ಈಗ ಇರುವ ಪುರುಷರ ಮದುವೆಯ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಬಾಲ್ಯ ವಿವಾಹಗಳು ಕಡಿಮೆಯಾಗಿರುವುದು ಕ್ರಿಮಿನಲ್ ಕಾನೂನಿನಿಂದಲ್ಲ, ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯಿಂದಾಗಿ. ಹೀಗಿದ್ದೂ ಸುಮಾರು 1.2 ಕೋಟಿ ಮಕ್ಕಳ ಬಾಲ್ಯ ವಿವಾಹಗಳು ನಡೆದಿವೆ. ಈ ಸರ್ಕಾರ ಮಹಿಳೆಯರ ಏಳಿಗೆಗಾಗಿ ಏನನ್ನೂ ಮಾಡಿಲ್ಲ. 2005ರ ಹೊತ್ತಿಗೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ.26ರಷ್ಟು ಇದ್ದದ್ದು, 2020ರ ವೇಳೆಗೆ ಶೇ.16ಕ್ಕೆ ಕುಸಿದಿದೆ ಎಂದು ಟೀಕಿಸಿದ್ದಾರೆ.
ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆಯಲ್ಲಿ, ಮಾಹಿತಿಯನ್ನು ಹಂಚಿಕೊಳ್ಳಬಹುದಾದ ನಾಗರಿಕರಿಗೆ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವ ಹಕ್ಕಿಲ್ಲ. ಇದೆಂತಹ ಲಾಜಿಕ್? ಕೇಂದ್ರ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಎಂಬುದು ನನ್ನ ಭಾವನೆ. 21 ವರ್ಷ ದಾಟಿದ್ದರೆ ಅಂತಹವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಯಾರನ್ನು ಮದುವೆಯಾಗಬೇಕು, ಯಾವಾಗ ಮಗುವನ್ನು ಪಡೆಯಬೇಕು ಎಂಬುದು ಸಹ ಆಯ್ಕೆಯ ವಿಚಾರವಾಗಿದೆ. ಹೀಗಿದ್ದರೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ
ಅಮೆರಿಕದಲ್ಲಿ 14 ವಯಸ್ಸಿನವರೂ ಮದುವೆಯಾಗಲು ಅವಕಾಶ ಇದೆ. ಬ್ರಿಟನ್, ಕೆನಡಾ ದೇಶಗಳು ಮದುವೆ ಕನಿಷ್ಠ ವಯಸ್ಸನ್ನು 16 ವರ್ಷಕ್ಕೆ ನಿಗದಿಪಡಿಸಿವೆ ಎಂದು ಓವೈಸಿ ಉದಾಹರಣೆ ಸಹಿತ ವಿವರಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾನೇನು ಕಿಂಗ್ ಮೇಕರ್ ಮತ್ತು ಗೇಮ್ ಬ್ರೇಕರ್ ಅಲ್ಲವೇ ಅಲ್ಲ. ನಾನು ಬಂದಿರೋದು ಇಲ್ಲಿ ಮುಸ್ಲಿಂ ನಾಯಕತ್ವದ ಸ್ಥಾಪನೆಗೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಖಾಸಗಿ ವಾಹಿನಿಯ ಸಂವಾದದಲ್ಲಿ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶ ಚುನಾವಣೆ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಈ ಸಂವಾದದಲ್ಲಿ ಪತ್ರಕರ್ತರೊಬ್ಬರು, ನೀವು ಬಿಹಾರದ ಚುನಾವಣೆಯಲ್ಲಿ ಗೇಮ್ ಬ್ರೇಕರ್ ಅನ್ನೋದನ್ನ ವಿಪಕ್ಷಗಳಿಗೆ ಸಾಬೀತು ಮಾಡಿದ್ದೀರಿ. ಅದೇ ರೀತಿ ಆರ್‍ಜೆಡಿ ಆಟವನ್ನು ಬ್ರೇಕ್ ಮಾಡಿದ್ದು ನೀವೇ ಅಲ್ವಾ? ಬಿಹಾರದ ಚುನಾವಣೆಯಲ್ಲಿ ನಿಮ್ಮ ರಾಜಕೀಯದ ಚದುರಂಗದಾಟ ಮಹತ್ವಪೂರ್ಣವಾಗಿತ್ತು. ಅದೇ ರೀತಿಯ ತಂತ್ರಗಳು ಉತ್ತರ ಪ್ರದೇಶದಲ್ಲಿಯೂ ಪ್ರಯೋಗಿಸಿ ಕಿಂಗ್ ಮೇಕರ್ ಅಥವಾ ಗೇಮ್ ಬ್ರೇಕರ್ ಆಗ್ತೀರಾ ಎಂದು ಪ್ರಶ್ನಿಸಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಬಿಹಾರ ಚುನಾವಣೆಯನ್ನು ನೀವು ಹೇಗೆ ಬೇಕಾದ್ರೂ ವಿಶ್ಲೇಷನೆ ಮಾಡಬಹುದು. ಅಲ್ಲಿ ನಮಗೆ ಜನತೆಗೆ ಆಶೀರ್ವಾದ ಸಿಕ್ಕಿದೆ. ಆದ್ರೆ ಉತ್ತರ ಪ್ರದೇಶದಲ್ಲಿ ನನ್ನ ಗುರಿಯೇ ಬೇರೆಯಾಗಿದೆ. ಇಲ್ಲಿ ಮುಸ್ಲಿಂ ಸಮುದಾಯದಲ್ಲಿ ನಾಯಕತ್ವ ಸ್ಥಾಪನೆಗೆ ಬಂದಿದ್ದೇನೆ. ಇಲ್ಲಿ ನಾನು ಬಂದಿರೋದು ನಾಯಕನಾಗಲು ಅಲ್ಲ. ನಾವು ಕಳೆದ 65 ವರ್ಷಗಳಿಂದ ಸೆಕ್ಯೂಲರ್ ಹೆಸರಿನ ಪಾರ್ಟಿಯಲ್ಲಿ ಫುಟ್ಬಾಲ್ ಆಗಿದ್ದೇವೆ ಎಂದರು.
ಬಿಜೆಪಿಯವರು ಹಿಂದೂ ಸಹೋದರರಿಗೆ ನಮ್ಮ ಭಯ ತೋರಿಸುತ್ತಾರೆ. ಇದೇ ರೀತಿ ಹಲವರು ತಮ್ಮ ಲಾಭಕ್ಕಾಗಿ ರಾಜಕೀಯದಾಟ ಆಡುತ್ತಿದ್ದಾರೆ. ಹಾಗಾಗಿ ಇಲ್ಲಿ ನಮ್ಮ ಸಮುದಾಯಕ್ಕೆ ನಾಯಕತ್ವದ ಅಗತ್ಯವಿದೆ. ಯಾರು ಏನು ಬೇಕಾದ್ರೂ ರಾಜಕೀಯ ಮಾಡಲಿ, ಅದಕ್ಕೆ ನನಗೆ ಸಂಬಂಧವಿಲ್ಲ. ನಾನು ಮಾತ್ರ ನನ್ನ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 403ರಲ್ಲಿ 400 ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ: ಅಖಿಲೇಶ್ ಯಾದವ್
ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು, ಸ್ಥಳೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇತ್ತ ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲು ಎಐಎಂಐಎಂ ಸಹ ತಯಾರಿ ನಡೆಸಿದೆ. ಆದ್ರೆ ನಾವು ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದ್ರೆ, ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ಮಾಡುವ ಷರತ್ತನ್ನು ಒಪ್ಪಿದ್ರೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳಲು ಅಸಾದುದ್ದೀನ್ ಓವೈಸಿ ಮುಂದಾಗಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಈ ಎಲ್ಲ ಊಹಾಪೋಹಗಳಿಗೆ ಓವೈಸಿ ತೆರೆ ಎಳೆದಿದ್ದಾರೆ.
ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಕುರಿತು ನಾನು ಅಥವಾ ನಮ್ಮ ಪಕ್ಷದ ಯಾವ ಮುಖಂಡರು ಹೇಳಿಲ್ಲ. ಈ ಹಿಂದೆ ಶೇ.20ರಷ್ಟು ಮುಸ್ಲಿಂ ಮತಗಳನ್ನು ಅಖಿಲೇಶ್ ಯಾದವ್ ಪಡೆದುಕೊಂಡಿದ್ದರೂ ನಮ್ಮ ಸಮುದಾಯದವರನ್ನು ಡಿಸಿಎಂ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಸುಮಾರು 110 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಒವೈಸಿ ಮುಂದಾಗಿದ್ದಾರೆ. ಹೆಚ್ಚು ಮುಸ್ಲಿಂ ಮತಗಳಿರೋ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದಲ್ಲಿ 110 ಕ್ಷೇತ್ರಗಳಲ್ಲಿ ಶೇ.30-39 ರಷ್ಟು ಮುಸ್ಲಿಂ ಮತದಾರರಿದ್ದಾರೆ. 44 ಕ್ಷೇತ್ರಗಳಲ್ಲಿ ಶೇ.40-49, 11 ಕ್ಷೇತ್ರಗಳು ಶೇ.50-65 ರಷ್ಟು ಮತದಾರರನ್ನು ಹೊಂದಿವೆ. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ
ಹೈದರಾಬಾದ್: ಬುಧವಾರ ಆರ್‍ಎಸ್‍ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ಆರ್‍ಎಸ್‍ಎಸ್ ಬಳಿಯಲ್ಲಿರುವ ಬುದ್ಧಿ ಶೂನ್ಯ, ಆದ್ರೆ ಮುಸ್ಲಿಮರ ಮೇಲಿನ ಅವರ ದ್ವೇಷ ಮಾತ್ರ ಶೇ.100ರಷ್ಟು ಎಂದು ಟ್ವೀಟ್ ಮಾಡಿದ್ದಾರೆ.
ಮೋಹನ್ ಭಾಗವತ್ ಪ್ರಕಾರ, 1930ರಿಂದಲೇ ಮುಸ್ಲಿಮರ ಜನಸಂಖ್ಯೆಯನ್ನ ಹೆಚ್ಚಿಸುವ ಪ್ರಯತ್ನ ನಡೆದಿತ್ತು. ಒಂದು ವೇಳೆ ಎಲ್ಲರ ಡಿಎನ್‍ಎ ಒಂದೇ ಆಗಿದ್ರೆ ಈ ಎಣಿಕೆ ಏಕೆ? ಇನ್ನೂ ಎರಡನೇ ವಿಷಯ, 1950 ರಿಂದ 2011ರ ನಡುವೆ ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ದರ ಇಳಿಕೆಯಾಗಿದೆ. ಹಾಗಾಗಿ ಸಂಘದವರ ಬಳಿಯಲ್ಲಿರುವ ಬುದ್ಧಿ ಶೂನ್ಯವಾಗಿದ್ದು, ಶೇ.100ರಷ್ಟು ಮುಸ್ಲಿಮರ ವಿರುದ್ಧ ದ್ವೇಷವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡನೇ ಟ್ವೀಟ್ ನಲ್ಲಿ ಆರ್‍ಎಸ್‍ಎಸ್ ವಿರುದ್ಧ ಕಿಡಿಕಾರಿರುವ ಓವೈಸಿ, ಮುಸ್ಲಿಮರನ್ನು ದ್ವೇಷಿಸುವುದು ಸಂಘದವರ ಅಭ್ಯಾಸ. ನಿಧಾನವಾಗಿ ಸಮಾಜದಲ್ಲಿ ವಿಷ ಹರಡುವಿಕೆ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮೋಹನ್ ಭಾಗವತ್ ಎಲ್ಲರೂ ಒಂದು ಅಂತ ಹೇಳಿದ್ದರು. ಈ ಹೇಳಿಕೆ ಬಳಿಕ ಅವರ ಸಮರ್ಥಕರು ಭಾಗವತ್ ಅವರಿಗೆ ತೊಂದರೆ ಕೊಟ್ಟಿರಬಹುದು. ಹಾಗಾಗಿ ಮುಸ್ಲಿಮರು ಕಡಿಮೆ ಎಂದು ತೋರಿಸಲು ಭಾಗವತ್ ಮತ್ತೊಮ್ಮೆ ಸುಳ್ಳು ಹೇಳಲು ಮುಂದಾಗಿದ್ದಾರೆ. ಆಧುನಿಕ ಭಾರತದಲ್ಲಿ ಹಿಂದುತ್ವಕ್ಕೆ ಎಲ್ಲಿಯೂ ಸ್ಥಳ ಇರಬರಾದು ಅಂತ ಹೇಳಿದ್ದಾರೆ. ಇದನ್ನೂ ಓದಿ: ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂಗಳೇ: ಮೋಹನ್ ಭಾಗವತ್
Sangh is addicted to anti-Muslim hate & poisoned society with it. All of Bhagwat’s drama about “we are one” earlier this month must have discomfited his followers too much. So he had to get back to demonising Muslims & lying. Hindutva should have no place in modern India 2/2
ಮೋಹನ್ ಭಾಗವತ್ ಹೇಳಿದ್ದೇನು?:
1930ರಿಂದಲೇ ಸಂಘಟಿತ ರೂಪದಲ್ಲಿ ಮುಸ್ಲಿಮರ ಜನಸಂಖ್ಯೆಯನ್ನ ಹೆಚ್ಚಿಸುವ ಪ್ರಯತ್ನ ನಡೆದಿವೆ. ಈ ಮೂಲಕ ತಮ್ಮ ಸಾಮಾಥ್ರ್ಯ ಹೆಚ್ಚಿಸಿಕೊಳ್ಳುವುದು. ತಮ್ಮ ಸಮುದಾಯದ ಸಂಖ್ಯೆಯನ್ನು ವಿಸ್ತರಿಸಿಕೊಂಡು ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡುವುದು. ಪಂಜಾಬ್, ಸಿಂಧ್, ಅಸ್ಸಾಂ ಮತ್ತು ಬಂಗಾಳದ ಆಸುಪಾಸಿನಲ್ಲಿ ಈ ಕೆಲಸ ನಡೆಯುತ್ತಿದೆ. ಈ ಪ್ಲಾನ್ ನಲ್ಲಿ ಒಂದು ಹಂತದವರೆಗೆ ಅವರು ಸಫಲರಾಗಿದ್ದಾರೆ. ಪಂಜಾಬ್ ಮತ್ತು ಬಂಗಾಳದಲ್ಲಿ ಅರ್ಧ ಭಾಗ ಅವರಿಗೂ ಸಿಕ್ಕಿದ್ದು, ಅಸ್ಸಾಂ ಲಭ್ಯವಾಗಿಲ್ಲ. ಇಷ್ಟು ಆದ್ರೂ ಅವರು ತಮ್ಮ ಪ್ರಯತ್ನ ಬಿಟ್ಟಿಲ್ಲ ಎಂದು ಮೋಹನ್ ಭಾಗವತ್ ಬುಧವಾರ ಹೇಳಿದ್ದರು. ಇದನ್ನೂ ಓದಿ:ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡ್ತಿದೆ: ಅಸಾದುದ್ದೀನ್ ಓವೈಸಿ