Tag: ಎಐಎಂಐಎಂ ಮುಖ್ಯಸ್ಥ

  • ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ ಮುಸ್ಲಿಮರ ಹಿರಿಯಣ್ಣನಾಗುತ್ತೆ: ಓವೈಸಿ ಕಿಡಿ

    ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ ಮುಸ್ಲಿಮರ ಹಿರಿಯಣ್ಣನಾಗುತ್ತೆ: ಓವೈಸಿ ಕಿಡಿ

    ನವದೆಹಲಿ: ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ ಮುಸ್ಲಿಮರ ಹಿರಿಯಣ್ಣನಾಗುತ್ತೆ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

    ಲೋಕಸಭೆಯ ಅಧಿವೇಶನದಲ್ಲಿ ಕಾನೂನು ಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ ತಿದ್ದುಪಡೆ ಮಸೂದೆ ವೇಳೆ ಮಾತನಾಡಿದ ಅವರು, ಈ ಕಾನೂನು ಜಾರಿಗೆ ತಂದ ಕಾಂಗ್ರೆಸ್ಸನ್ನು ನಾನು ದೂಷಿಸುತ್ತೇನೆ. ಇಂತಹ ಕಾನೂನು ಜಾರಿಗೆ ತರುವ ಮೂಲಕ ಅಪರಾಧ ಎಸಗಿದರು. ಎಲ್ಲಾ ಕಠಿಣ ಕಾನೂನುಗಳನ್ನು ದಲಿತರು ಹಾಗೂ ಮುಸ್ಲಿಂ ವಿರುದ್ಧ ಬಳಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈಗಿನ ಬಿಜೆಪಿ ಸರ್ಕಾರಕ್ಕಿಂತ ಬಲಿಷ್ಠವಾಗಿತ್ತು. ಆದರೆ ಈಗ ಅಧಿಕಾರ ಕಳೆದುಕೊಂಡು ದಲಿತರು ಹಾಗೂ ಮುಸ್ಲಿಮರ ಬೆಂಬಲಕ್ಕೆ ಬರುತ್ತಿದೆ. ಈ ಮೂಲಕ ಮುಸ್ಲಿಮರ ಹಿರಿಯಣ್ಣನಾಗಲು ಮುಂದಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.