Tag: ಎಎಸ್ ಪೊನ್ನಣ್ಣ

  • ಕಾನೂನು ಪೊನ್ನಣ್ಣನಿಗೂ ಒಂದೇ, ಮಂಥರ್ ಗೌಡಗೂ ಒಂದೇ: ಪರಮೇಶ್ವರ್

    ಕಾನೂನು ಪೊನ್ನಣ್ಣನಿಗೂ ಒಂದೇ, ಮಂಥರ್ ಗೌಡಗೂ ಒಂದೇ: ಪರಮೇಶ್ವರ್

    – ಬಿಜೆಪಿಯರು ಎಲ್ಲದ್ರಲ್ಲೂ ರಾಜಕೀಯ ಮಾಡ್ತಾರೆ; ಗೃಹಸಚಿವ ಕಿಡಿ

    ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ. ಪೊನ್ನಣ್ಣನಿಗೂ(Ponnanna) ಒಂದೇ, ಮಂಥರ್ ಗೌಡನಿಗೂ(Manthar Gowda) ಒಂದೇ. ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್(G Parameshwar) ಸ್ಪಷ್ಟನೆ ನೀಡಿದರು.

    ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ವಿನಯ್ ಸೋಮಯ್ಯ(Vinay Somaiah) ಡೆತ್‌ನೋಟ್‌ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಬಗ್ಗೆ ಮಾತನಾಡಿದರು. ಕಾನೂನು ಎಲ್ಲರಿಗೂ ಒಂದೇ. ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಿಬಿಐಗೆ(CBI) ನೀಡುವ ವಿಚಾರದ ಬಗ್ಗೆ ನಿರ್ಧಾರ ಇಲ್ಲ. ಅಗತ್ಯವಿದ್ದರೆ ನೋಡೋಣ ಎಂದರು. ಇದನ್ನೂ ಓದಿ: ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ, ನಮ್ಮ ಸಿಟ್ಟು ಜಾಸ್ತಿ ಮಾಡಬೇಡ: ಪ್ರತಾಪ್ ಸಿಂಹ ವಾಗ್ದಾಳಿ

    ʻ

    ಈ ಹಿಂದೆ ಫೆಬ್ರವರಿಯಲ್ಲಿ ನಡೆದಿರುವ ಘಟನೆಯಿಂದ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ತನಿಖೆ ಮಾಡಲಾಗುತ್ತದೆ. ವಾಟ್ಸಪ್‌ನಲ್ಲಿ ಹಾಕಿರುವ ಸಂದೇಶದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲೂ ಎಫ್‌ಐಆರ್ ಆಗಿದೆ. ಇಲ್ಲೂ ಎಫ್‌ಐಆರ್ ಆಗಿದೆ. ಎಲ್ಲವೂ ಸಮಗ್ರ ತನಿಖೆ ಆಗುತ್ತದೆ. ತನಿಖೆ ಆದಮೇಲೆ ಇವರಿಬ್ಬರೂ, ವಿನಯ್ ಆತ್ಮಹತ್ಯೆಗೆ ಕಾರಣರಾಗಿದ್ರಾ ಎಂದು ತಿಳಿದುಬಂದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್ – ಡಿವೈಎಸ್‌ಪಿ ಕಚೇರಿಗೆ ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನ

    ಡೆತ್‌ನೋಟ್ ಎನ್ನುವುದೇ ಇಲ್ಲ ಎಂದು ಹೇಳುತ್ತಾರೆ. ವಾಟ್ಸಪ್‌ನಲ್ಲಿ ಅವರು ಮಾಡಿದ್ದಾರೆ ಎಂದು ಮೊದಲು ಸಾಬೀತು ಆಗಬೇಕಲ್ಲ. ಡೆತ್‌ನೋಟ್ ಅಥವಾ ವಾಟ್ಸಪ್ ಡೆತ್‌ನೋಟ್ ಎಂದು ತಗೆದುಕೊಳ್ಳಬಹುದಾ ಎಂದು ಗೊಂದಲವಿದೆ. ಇದರಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡೋಕೆ ಅವಕಾಶ ಇಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗಾಗಿ ಸಂಪೂರ್ಣ ತನಿಖೆ ಮಾಡಿ ವರದಿ ಕೊಡಬೇಕು ಎಂದು ನಾನು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.

    ಸೋಶಿಯಲ್ ಮೀಡಿಯಾವನ್ನು ಸಾಕ್ಷಿಯಾಗಿ ಗಣನೆಗೆ ತೆಗೆದುಕೊಳ್ಳಬಹುದು ಎಂದು ಕಾನೂನಿನಲ್ಲಿ ಇದ್ದರೆ ಅದನ್ನ ಕನ್ಸಿಡರ್ ಮಾಡುತ್ತೇವೆ. ಹಿಂದೆ ವೀಡಿಯೊ ರೆಕಾರ್ಡ್ ಮಾಡಿದ್ದನ್ನ ಗಣನೆಗೆ ತೆಗೆದುಕೊಂಡಿದ್ದರು. ಈಗ ವಾಟ್ಸಪ್ ಅನ್ನು ಗಣನೆಗೆ ತಗೆದುಕೊಳ್ಳಬಹುದು ಎಂದರೆ ಗಣನೆಗೆ ತಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ – ಶಾಸಕ ಪೊನ್ನಣ್ಣ & ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ನಲ್ಲೇನಿದೆ?

    ಶಾಸಕರ ಹೆಸರು ಹೇಳಿದ ಕೂಡಲೇ ಅದನ್ನ ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ವಾಟ್ಸಪ್ ಅನ್ನು ಪರಿಶೀಲನೆ ಮಾಡಿದಾಗ ಏನಾದರು ಪಾತ್ರ ಇದೆ ಎಂದು ಕಂಡರೆ ಕ್ರಮ ತಗೆದುಕೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಡಿಕೇರಿಯ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

    ಬಿಜೆಪಿಯವರು ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾರೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಫೆಬ್ರವರಿಯಲ್ಲಿ ಆಗಿರುವ ಘಟನೆ ಅವರು ಸತ್ತ ಮೇಲೆ ಬೆಳಕಿಗೆ ಬಂದಿದೆ. ಅದರ ತನಿಖೆಯಾದರೂ ಆಗಬೇಕಲ್ಲ. ಅದಕ್ಕೂ ರಾಜಕಾರಣ ಬೆರೆಸುವುದು ಸರಿ ಕಾಣಿಸಲ್ಲ ಎಂದು ಕಿಡಿಕಾರಿದರು.

  • ರಾಜಕೀಯ ಕಿರುಕುಳಕ್ಕೆ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಸೀಕ್ರೆಟ್ ಬಯಲು

    ರಾಜಕೀಯ ಕಿರುಕುಳಕ್ಕೆ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಸೀಕ್ರೆಟ್ ಬಯಲು

    – ಮಡಿಕೇರಿಯಲ್ಲೂ ದೂರು ದಾಖಲು

    ಮಡಿಕೇರಿ: ರಾಜ್ಯದಲ್ಲಿ ಮತ್ತೆ ಡೆತ್ ಪಾಲಿಟಿಕ್ಸ್ ಮುನ್ನಲೆಗೆ ಬಂದಿದೆ. ಕಾಂಗ್ರೆಸ್(Congress) ಮುಖಂಡರ ವಿರುದ್ಧ ರಾಜಕೀಯ ಕಿರುಕುಳ ಆರೋಪ ಮಾಡಿ ಕೊಡಗಿನ(Kodagu) ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ(Vinay Somaiah) ಬೆಂಗಳೂರಿನಲ್ಲಿ (Bengaluru) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಾವಿಗೂ ಮುನ್ನ ವಾಟ್ಸಪ್‌ನಲ್ಲಿ ಡೆತ್‌ನೋಟ್ ಹಾಕಿದ್ದಾರೆ. ಇದರಲ್ಲಿ ಕಾಂಗ್ರೆಸ್ ಶಾಸಕರಾದ ಪೊನ್ನಣ್ಣ(Ponanna), ಮಂಥರ್ ಗೌಡ ಹೆಸರು ಉಲ್ಲೇಖಿಸಿದ್ದಾರೆ. ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ನೊಂದು ಸಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಮೃತ ವಿನಯ್ ಅಡ್ಮಿನ್ ಆಗಿದ್ದ, ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳ ಹೆಸರಿನ ವಾಟ್ಸಪ್ ಗ್ರೂಪ್‌ನಲ್ಲಿ ಶಾಸಕ ಪೊನ್ನಣ್ಣ ಬಗ್ಗೆ ಅಪಹಾಸ್ಯದ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ವಿನಯ್ ವಿರುದ್ಧ ಪೊನ್ನಣ್ಣ ಆಪ್ತ ತೆನ್ನೀರ ಮಹೀನಾ ದೂರು ಕೊಟ್ಟಿದ್ದರು. ವಿನಯ್ ಬೇಲ್ ಪಡೆದಿದ್ದರೂ ರಾಜಕೀಯ ಕಿರುಕುಳ ಮುಂದುವರೆದಿತ್ತು ಎನ್ನಲಾಗಿದೆ. ಆದರೆ ಆತ ಯಾರು ಎಂದು ನನಗೇ ಗೊತ್ತೇ ಇಲ್ಲ ಎಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ. ದೂರು ಕೊಟ್ಟಿದ್ದನ್ನು ತಪ್ಪು ಎನ್ನಲಾಗಲ್ಲ, ತನಿಖೆಯಾಗಲಿ ಎಂದು ತೆನ್ನೀರ ಮಹೀನಾ ಹೇಳಿದ್ದಾರೆ. ಶಾಸಕರ ಹೆಸರನ್ನು ಸೇರಿಸಿ ವಿನಯ್ ಸಹೋದರ ಹೆಣ್ಣೂರು ಠಾಣೆಗೆ(Hennur Police Station) ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಚಿನ್ನ ತರಲು 5 ಸ್ಟೆಪ್ ಕೋಡ್‌ವರ್ಡ್ ಬಳಕೆ – ಚಿನ್ನದ ಚೋರಿಯ ನಾಟಕ ಬಯಲು

    ಪೊಲೀಸರು ಪೊನ್ನಣ್ಣ, ಮಂಥರ್‌ಗೌಡ ಹೆಸರು ಕೈಬಿಟ್ಟು ಎಫ್‌ಐಆರ್ ದಾಖಲಿಸಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಕಡೆಗೆ ಶಾಸಕರ ಹೆಸರು ಸೇರ್ಪಡೆಗೆ ಪೊಲೀಸ್ ಇಲಾಖೆ ಒಪ್ಪಿದ ಕಾರಣ, ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು. ಈ ಪ್ರಕರಣ ಸಂಬAಧ ಮಡಿಕೇರಿಯಲ್ಲೂ ದೂರು ದಾಖಲಾಗಿದೆ. ಇದನ್ನೂ ಓದಿ: ಹಾಯ್ ಎಂದವರಿಗೆ ರಾಜಣ್ಣನೂ ಹಾಯ್ ಎಂದಿರಬಹುದು: ಸತೀಶ್ ಜಾರಕಿಹೊಳಿ

    ವಿನಯ್ ಡೆತ್‌ನೋಟ್‌ನಲ್ಲಿ ಏನಿದೆ?
    * ರಾಜಕೀಯ ಷಡ್ಯಂತ್ರಕ್ಕೆ ನನ್ನ ಮೇಲೆ ಎಫ್‌ಐಆರ್
    * ಬೇಲ್ ಸಿಕ್ಕ ನಂತರವೂ ಬಂಧಿಸಲು ಹುಡುಕಾಟ
    * ನನ್ನ ಮೇಲೆ ರೌಡಿಶೀಟ್ ಓಪನ್ ಮಾಡಲು ಹುನ್ನಾರ
    * ಎಂಎಲ್‌ಎ ಪೊನ್ನಣ್ಣ ಆದೇಶದಂತೆ ಕ್ರಮ ಎಂದು ಓರ್ವ ಪಿಸಿ ಹೇಳಿದ್ದಾರೆ
    * ಮಂಥರ್‌ಗೌಡ ಫೋನ್ ಮಾಡಿ, ಯಾಕೆ ಮೆಸೇಜ್ ಹಾಕ್ತೀಯಾ ಅಂದ್ರು
    * ಏನಿದ್ರೂ ನನಗೆ ಹೇಳು. ಗ್ರೂಪ್‌ನಲ್ಲಿ ಹಾಕಿದ್ರೆ ಸರಿ ಇರಲ್ಲ ಅಂದ್ರು
    * ನನ್ನ ಸಾವಿಗೆ ತೆನ್ನೀರ ಮಹೀನಾ ಅವರೇ ಹೊಣೆ
    * ಎಫ್‌ಐಆರ್ ಹಾಕಿಸಿ ಕೊಡಗಿನಲ್ಲಿ ವೈರಲ್ ಮಾಡಿದ್ರು
    * ತೆನ್ನೀರ್ ಕಿರುಕುಳಕ್ಕೆ ಸಾಯ್ತಿರೋದು ನಾನೇ ಮೊದಲಲ್ಲ
    * ಆತ್ಮಹತ್ಯೆ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು

  • ವಿನಯ್‌ ಸೋಮಯ್ಯ ಯಾರು ಅನ್ನೋದೆ ಗೊತ್ತಿಲ್ಲ: ಶಾಸಕ ಪೊನ್ನಣ್ಣ

    ವಿನಯ್‌ ಸೋಮಯ್ಯ ಯಾರು ಅನ್ನೋದೆ ಗೊತ್ತಿಲ್ಲ: ಶಾಸಕ ಪೊನ್ನಣ್ಣ

    ಬೆಂಗಳೂರು: ನನಗೂ ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ (Ponnanna) ಹೇಳಿದ್ದಾರೆ.

    ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಣ್ಣ (Vinay Somaiah) ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಮೃತ ವ್ಯಕ್ತಿ ಯಾರು ಎನ್ನುವುದೇ ಗೊತ್ತಿಲ್ಲ. ನಾನು ಯಾವುದೇ ಕಿರುಕುಳ ನೀಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ ನೇಣಿಗೆ ಶರಣು

    ಬಿಜೆಪಿಯವರಿಗೆ (BJP) ಮಾಡಲು ಕೆಲಸ ಇಲ್ಲ. ಬಿಜೆಪಿಯವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ವಿಚಾರ ಇಲ್ಲ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಾಗುತ್ತಿದ್ದು ಬಿಜೆಪಿಯವರು ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾವುದೇ ಟೀಕೆ ಬಂದರೂ ನಾನು ದೂರು ನೀಡಿಲ್ಲ. ದೂರು ನೀಡುವಂತೆ ಯಾರಿಗೂ ಹೇಳಿಲ್ಲ ಎಂದು ತಿಳಿಸಿದರು.

    ಡೆತ್‌ನೋಟ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿದೆ ಎಂಬ ಪ್ರಶ್ನೆಗೆ, ವಾಟ್ಸಪ್‌ನಲ್ಲಿ ಬಂದಿರುವುದನ್ನು ನಂಬಲು ಸಾಧ್ಯವಿಲ್ಲ. ನಾನು ಪೊಲೀಸ್‌ ಪೇದೆಗೆ ಹೇಳಲು ಆಗುತ್ತಾ? ಯಾರಿಗೂ ನಾನು ಹೇಳಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು

    ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದಕ್ಕೆ ಮನನೊಂದು ವಿನಯ್‌ ಸೋಮಯ್ಯ ಬೆಂಗಳೂರಿನಲ್ಲಿ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಎ ಎಸ್ ಪೊನ್ನಣ್ಣ, ಮಡಿಕೇರಿಯ ಶಾಸಕ ಮಂಥರ್‌ ಗೌಡ ಮತ್ತು ತೆನ್ನೀರ ಮಹೀನಾ ಹೆಸರನ್ನು ಉಲ್ಲೇಖಿಸಿದ್ದಾರೆ.

     

  • ಮುಡಾ ಕೇಸ್‌ನಲ್ಲಿ ಇಡಿ ತನಿಖೆಯೇ ಕಾನೂನುಬಾಹಿರ – ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

    ಮುಡಾ ಕೇಸ್‌ನಲ್ಲಿ ಇಡಿ ತನಿಖೆಯೇ ಕಾನೂನುಬಾಹಿರ – ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

    ಬೆಂಗಳೂರು: ಮುಡಾ ಕೇಸ್‌ನಲ್ಲಿ ಇಡಿ ತನಿಖೆ ಮಾಡುತ್ತಿರುವುದು ಕಾನೂನುಬಾಹಿರ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ (AS Ponnanna) ಆರೋಪಿಸಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಕೇಸ್‌ನಲ್ಲಿ (MUDA Scam) ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‌ಗೆ (Byrathi Suresh) ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ತನಿಖೆ ಮಾಡುವಾಗ ಇಡಿ ಕೇಸ್ ತೆಗೆದುಕೊಂಡಿದ್ದೆ ಕಾನೂನುಬಾಹಿರ. ಹೀಗಿದ್ದರೂ ಇಡಿ ತನಿಖೆ ಮಾಡಿ, ನೋಟಿಸ್ ಕೊಡುತ್ತಿದೆ, ಇದು ಸರಿಯಲ್ಲ. ಲೋಕಾಯುಕ್ತ ಈಗಾಗಲೇ ತನಿಖೆ ಮಾಡಿ, ಕೋರ್ಟ್ಗೆ ವರದಿ ಕೊಡುತ್ತಿದೆ. ಹೈಕೋರ್ಟ್ ಲೋಕಾಯುಕ್ತ ತನಿಖೆಯನ್ನು ನೋಡುತ್ತಿದೆ. ಈಗ ಇಡಿ ನೋಟಿಸ್ ಕೊಟ್ಟಿರುವುದು, ತನಿಖೆ ಮಾಡುತ್ತಿರುವುದು ಕಾನೂನು ವಿರುದ್ಧ ಎಂದು ಕಿಡಿಕಾರಿದರು.ಇದನ್ನೂ ಓದಿ: ಚಾಮರಾಜನಗರ: ಬೋನಿಗೆ ಬಿದ್ದ ಚಿರತೆ – ಜನ ನಿಟ್ಟುಸಿರು

    ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ನೋಟಿಸ್ ಕೊಟ್ಟಿತ್ತು. ಹೈಕೋರ್ಟ್ ನಟೇಶ್ ಕೊಟ್ಟಿದ್ದ ನೋಟಿಸ್‌ನ್ನು ರದ್ದು ಮಾಡಿದೆ. ಇದೇ ವೇಳೆ ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್‌ಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಿದ್ದರು. ಈ ಹಿಂದೆ ಇಡಿ ಕೊಟ್ಟಿದ್ದ ಮೊದಲ ನೋಟಿಸ್‌ಗೆ ಪಾರ್ವತಿ ಅವರು ಕಾಲಾವಕಾಶ ಕೊಡಿ ಎಂದು ಇಡಿಗೆ ಕೇಳಿದ್ದರು. ಈ ನಡುವೆ ಎರಡನೇ ನೋಟಿಸ್ ಇಡಿಯವರು ಕೊಟ್ಟಿದ್ದಾರೆ. ಇಡಿ ಪಾರ್ವತಿ ಅವರು ಕುಟುಂಬದ ಎಲ್ಲಾ ಮಾಹಿತಿ ಕೇಳ್ತಿದ್ದಾರೆ. ಹೀಗಾಗಿ ನಾವು ಹೈಕೋರ್ಟ್ಗೆ ಅರ್ಜಿ ಹಾಕಿದ್ದೀವಿ. ಕೋರ್ಟ್ ನೋಟಿಸ್‌ಗೆ ತಡೆ ನೀಡಿದೆ. ಇಡಿಯನ್ನ ರಾಜಕೀಯವಾಗಿ ಕೇಂದ್ರ ಸರ್ಕಾರ ಬಳಸುತ್ತಿದೆ ಎಂದು ಕೋರ್ಟ್ಗೆ ಮನವಿ ಮಾಡಿದ್ದೀವಿ. ಫೆ.10ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ ಎಂದು ತಿಳಿಸಿದರು.

    ಮುಡಾ ಕೇಸ್ ಸಿಬಿಐಗೆ ಕೇಸ್ ಕೊಡುವ ಬಗ್ಗೆ ನಿನ್ನೆ ವಾದ-ಪ್ರತಿವಾದ ಮುಗಿದಿದೆ. ಲೋಕಾಯುಕ್ತ ಕೂಡಾ ಕೋರ್ಟ್ಗೆ ತನಿಖಾ ವರದಿ ಕೊಟ್ಟಿದೆ. ಹೈಕೋರ್ಟ್ ಏನು ತೀರ್ಪು ಕೊಡುತ್ತದೆ ನೋಡೋಣ. ಸಿಬಿಐಗೆ ಕೊಡಬೇಡಿ ಎಂದು ನಮ್ಮ ವಾದ ಇದೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆ. ಹೀಗಾಗಿ ಸಿಬಿಐಗೆ ಬೇಡ ಅಂತ ನಾವು ಹೇಳಿದ್ದೇವೆ. ಎಫ್‌ಆರ್‌ಐ ದಾಖಲು ಮಾಡುವ ಮುಂಚೆಯೇ ಸಿಬಿಐಗೆ ಕೊಡಿ ಎಂದು ಅವರು ಬಂದಿದ್ದಾರೆ. ಲೋಕಾಯುಕ್ತ ತನಿಖೆ ಪಾರದರ್ಶಕವಾಗಿ ತನಿಖೆ ಮಾಡ್ತಿದೆ. ಹೀಗಾಗಿ ಸಿಬಿಐಗೆ ಕೇಸ್ ಕೊಡುವ ಅವಶ್ಯಕತೆ ಇದೆ ಎಂದು ನಮಗೆ ಅನ್ನಿಸಿಲ್ಲ. ಕೋರ್ಟ್ ಏನು ತೀರ್ಪು ಕೊಡುತ್ತದೆ ನೋಡೋಣ ಎಂದರು.

    ಇಡಿ ತನಿಖೆಯೇ ರಾಜಕೀಯ ಪ್ರೇರಿತ. ವಾಲ್ಮೀಕಿ ಕೇಸ್‌ನಿಂದ ಈ ಕೇಸ್ ಕೂಡಾ ರಾಜಕೀಯ ಪ್ರೇರಿತವೇ. ಮುಡಾದಲ್ಲಿ 14 ಸೈಟ್ ಎಲ್ಲಿ ಹೋಗಿದೆ? ಅಲ್ಲೇ ಇದೆ. ಸೈಟ್ ಕೂಡಾ ವಾಪಸ್ ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ಮುಡಾ ಅಕ್ರಮ ಆಗಿದೆ. ಬೈರತಿ ಸುರೇಶ್‌ಗೆ ಯಾಕೆ ನೋಟಿಸ್ ಕೊಡುತ್ತಾರೆ. ವಾಲ್ಮೀಕಿ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಮಾಡಿದೆ. ಅದರಲ್ಲಿ ನಾಗೇಂದ್ರ ಪಾತ್ರ ಇಲ್ಲ ಎಂದು ಹೇಳಿದೆ. ವಿಶ್ವದಲ್ಲೇ ಇರುವ ಎಲ್ಲಾ ಕೇಸ್ ತನಿಖೆ ಮಾಡಬೇಕು ಎಂದು ಎಲ್ಲೂ ಇಲ್ಲ. ಇಡಿ ತನಿಖೆಯೇ ರಾಜಕೀಯ ಪ್ರೇರಿತ. ಇಡಿ ರಾಜಕೀಯ ಮಾಡ್ತಿದ್ದಾರೆ. ಮುಡಾ ಸೈಟ್ ವಾಪಸ್ ಕೊಟ್ಟ ಮೇಲೆ ಮನಿಲ್ಯಾಂಡ್‌ರಿಂಗ್ ಕೇಸ್ ಮುಗಿದಿದೆ. ಇಡಿ ಈ ರಾಜಕೀಯ ಪ್ರೇರಿತ ದಾಳಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: Coldplay | ಭಾರತದಲ್ಲಿ ಸಂಗೀತ ಕಚೇರಿ ಆರ್ಥಿಕತೆಗೆ ವಿಶಾಲವಾದ ಅವಕಾಶಗಳಿವೆ, ಉದ್ಯೋಗ ಸೃಷ್ಟಿಸುತ್ತೆ: ಮೋದಿ

     

  • ಚನ್ನಪಟ್ಟಣ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತೆ: ಪೊನ್ನಣ್ಣ

    ಚನ್ನಪಟ್ಟಣ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತೆ: ಪೊನ್ನಣ್ಣ

    ಮಡಿಕೇರಿ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By Election) ಕುಟುಂಬ ರಾಜಕಾರಣಕ್ಕೆ ಈ ಚುನಾವಣೆ ಅಂತ್ಯ ಹಾಡಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ (AS Ponnanna) ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕುಟುಂಬ ರಾಜಕಾರಣ ಇದೆ ಅಲ್ಲ. ಸ್ವಾರ್ಥದ ಕಡೆಗೆ ಹೋದಾಗ ಅದು ಅಂತ್ಯವಾಗುತ್ತದೆ. ಇದರ ಅಂತ್ಯವನ್ನು ನಾವು ಚನ್ನಪಟ್ಟಣದಲ್ಲಿ ಕಾಣುತ್ತೇವೆ. ಯೋಗೇಶ್ವರ್ (CP Yogeshwar) ಅವರು ತಳಮಟ್ಟದಿಂದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ಅಲ್ಲಿನ ಜನರ ಬಾಂಧವ್ಯ ಇಟ್ಟುಕೊಂಡಿರುವ ರಾಜಕಾರಣಿ. ಅವರು ಅವಕಾಶವಾದಿ ಅಲ್ಲ. ಅವರು ಅವಕಾಶಕ್ಕಾಗಿ ರಾಜಕಾರಣ ಮಾಡುತ್ತಿರುವ ವ್ಯಕ್ತಿಯೂ ಅಲ್ಲ. ಯಾರು ಅವಕಾಶದ ರಾಜಕಾರಣ ಮಾಡುತ್ತಿದ್ದಾರೆ ಅಂತ ಅಲ್ಲಿನ ಜನರು ಗಮನಿಸುತ್ತಿದ್ದಾರೆ. ಈಗಾಗಲೇ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ ಗ್ಲೈಡರ್ – ಪ್ರವಾಸಿಗ ದುರ್ಮರಣ

    ಎಲ್ಲೋ ಒಂದು ಕಡೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪ್ರಯತ್ನಗಳು ನಡೆದು ಕೆಲವು ಸಂದರ್ಭದಲ್ಲಿ ಯಶಸ್ಸು ಆದರೂ ಕೂಡ ಈ ಚುನಾವಣೆಯಲ್ಲಿ ಇದು ಮುಗಿಯುತ್ತದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಮತ್ತಷ್ಟು ಬಲವಾಗಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ಕೆಲಸವನ್ನು ಮಾಡುತ್ತದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು ಖಚಿತ. ನಿಖಿಲ್ ಕುಮಾರಸ್ವಾಮಿ ಒಬ್ಬ ಅಭ್ಯರ್ಥಿ ಅಷ್ಟೇ. ಜೆಡಿಎಸ್‌ನ ರಾಜಕಾರಣವನ್ನು ಅಲ್ಲಿನ ಜನರು ಗುರುತಿಸಿ ಅವರನ್ನು ಸೋಲಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ: ಆರ್.ಅಶೋಕ್