Tag: ಎಎಐಬಿ

  • Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    – ಪ್ರಾಥಮಿಕ ತನಿಖಾ ವರದಿಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
    – ಕೇಂದ್ರ ಮತ್ತು ಡಿಜಿಸಿಎ ಪ್ರತಿಕ್ರಿಯೆ ಕೇಳಿದ ಕೋರ್ಟ್

    ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash)ದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದ ಪ್ರಾಥಮಿಕ ವರದಿಯ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

    ದುರಂತದ ಬಗ್ಗೆ ಸ್ವತಂತ್ರ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಜುಲೈ 12 ರಂದು ಬಿಡುಗಡೆಯಾದ AAIB ಪ್ರಾಥಮಿಕ ವರದಿಯು ಪೈಲಟ್‌ಗಳ (Pilots) ಕಡೆಯಿಂದ ಲೋಪಗಳನ್ನು ಸೂಚಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಗಮನಿಸಿತು. ಈ ಅಂಶಗಳು ದುರದೃಷ್ಟಕರ, ಬೇಜವಾಬ್ದಾರಿ ಎಂದ ಪೀಠ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತು.

    ಈ ವರದಿಯ ಉಲ್ಲೇಖಗಳನ್ನು ಪ್ರಶ್ನಿಸಿ ವಿಮಾನಯಾನ ಸುರಕ್ಷತೆ ಎನ್‌ಜಿಒ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿತ್ತು. ಇಂಧನ-ಸ್ವಿಚ್ ದೋಷಗಳು ಮತ್ತು ವಿದ್ಯುತ್ ದೋಷಗಳಂತಹ ವ್ಯವಸ್ಥಿತ ವೈಪರೀತ್ಯಗಳನ್ನು ಕಡಿಮೆ ಮಾಡಿ, ಪೈಲಟ್ ದೋಷದ ನಿರೂಪಣೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಟೀಕಿಸಲಾಗಿತ್ತು. ಅಂತಾರಾಷ್ಟ್ರೀಯ ಪೈಲಟ್‌ ಒಕ್ಕೂಟ ಕೂಡ ಪ್ರಾಥಮಿಕ ತನಿಖಾ ವರದಿಯನ್ನು ಪ್ರಶ್ನಿಸಿತ್ತು.

    ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ದಿನಗಳು ಕಳೆದಿದೆ. ಆದರೆ ಇದುವರೆಗೂ ಕೇವಲ ಪ್ರಾಥಮಿಕ ವರದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೇ ವರದಿಯಲ್ಲಿ ಯಾವುದೇ ಅಪಘಾತಕ್ಕೆ ನಿಖರ ಕಾರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಉಲ್ಲೇಖ ಇರದಿರುವುದರಿಂದ, ಬೋಯಿಂಗ್ ವಿಮಾನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇಂದು ಅಪಾಯದಲ್ಲಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    ಅಪಘಾತದ ತನಿಖೆಗಾಗಿ ರಚಿಸಲಾದ ಐವರು ಸದಸ್ಯರ ತಂಡವು, ವಾಯುಯಾನ ನಿಯಂತ್ರಕ ಡಿಜಿಸಿಎಯ ಮೂವರು ಸದಸ್ಯರನ್ನು ಹೊಂದಿದ್ದು, ಗಂಭೀರ ಹಿತಾಸಕ್ತಿ ಸಂಘರ್ಷವನ್ನು ಸೃಷ್ಟಿಸುತ್ತದೆ. ಅಪಘಾತಕ್ಕೆ ಯಾವ ಸಂಸ್ಥೆಯನ್ನು ಪ್ರಶ್ನಿಸಲಾಗುತ್ತಿದೆಯೋ ಅದೇ ಸಂಸ್ಥೆಯ ಸದಸ್ಯರು ಹೇಗೆ ತನಿಖೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರಲ್ಲದೇ ಅಪಘಾತದ ನಿಜವಾದ ಕಾರಣ ಸ್ಪಷ್ಟಪಡಿಸಲು ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ನಿಂದ ಡೇಟಾವನ್ನು ಪಡೆಯಲು ಭೂಷಣ್ ಕೋರಿದರು.

    ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಅರ್ಜಿದಾರರ ವಾದ ಪುರಸ್ಕರಿಸಿತಾದರೂ, ಪ್ರಾಥಮಿಕ ತನಿಖೆಯ ಎಲ್ಲಾ ವರದಿಗಳನ್ನು ಸಾರ್ವಜನಿಕಗೊಳಿಸಿವುರಿಂದ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತು. ಆದ್ರೆ ಅಪಘಾತಕ್ಕೆ ಪೈಲಟ್‌ ದೋಷ ನಿರೂಪಣೆಯನ್ನು ದ್ವಿಸದಸ್ಯ ಪೀಠ ದುರದೃಷ್ಟಕರ ಎಂದು ಬಣ್ಣಿಸಿತು.

    ಅಲ್ಲದೇ ಕೆಲವು ಮಾಹಿತಿಯನ್ನು ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗಮನಿಸಿದ ಪೀಠವು ಡಿಜಿಸಿಎ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿಗೊಳಿಸಲು ಸೂಚನೆ ನೀಡಿತು. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

  • Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    – ಮುಂದುವರಿದಿದೆ ತನಿಖೆ; ಬೌಸರ್‌ಗಳ ಪರೀಕ್ಷೆ

    ಅಹಮದಾಬಾದ್‌: ಕಳೆದ ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ (Air India Crash) ಸಂಬಂಧಿಸಿದಂತೆ ಎಎಐಬಿ ಪ್ರಾಥಮಿಕ ವರದಿ (AAIB Initial Report) ಬಿಡುಗಡೆಯಾಗಿದೆ. 15 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಬ್ಲ್ಯಾಕ್ ಬಾಕ್ಸ್ ಸೇರಿ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ವಿಮಾನ ದುರಂತಕ್ಕೆ ಕಾರಣ ಕಂಡುಕೊಳ್ಳಲಾಗಿದೆ.

    ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್
    ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ತನಿಖಾ ವರದಿ ಬಿಡುಗಡೆಯಾಗಿದೆ. ವಿಮಾನ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್ (Fuel Cutoff) ಆಗಿದ್ದವು. ಇದಾದ ನಂತರ ಪೈಲಟ್‌ಗಳ ನಡುವೆ ಗೊಂದಲ ಉಂಟಾಯಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ವಿಮಾನ ಅಪಘಾತ ತನಿಖಾ ಬ್ಯೂರೋ ಈ ವರದಿಯನ್ನು ಬಿಡುಗಡೆ ಮಾಡಿದೆ. ಟೇಕ್-ಆಫ್ ಸಮಯದಲ್ಲಿ ಸಹ-ಪೈಲಟ್ ವಿಮಾನವನ್ನು ನಿಯಂತ್ರಿಸುತ್ತಿದ್ದರೆ, ಮುಖ್ಯ ಪೈಲಟ್ ಮೇಲ್ವಿಚಾರಣೆ ಮಾಡುತ್ತಿದ್ದರು. ವಿಮಾನವು ಗರಿಷ್ಠ 180 ನಾಟ್ಸ್ ವೇಗ ತಲುಪಿದ ತಕ್ಷಣ, ಇಂಧನ ಸ್ವಿಚ್‌ಗಳು ಒಂದರ ನಂತರ ಒಂದು ಆಫ್ ಆಗಿವೆ. ಇದರ ಪರಿಣಾಮವಾಗಿ, ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತು ಅವುಗಳ ಕಾರ್ಯಕ್ಷಮತೆ ಕುಸಿಯಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ – ದೂರು ದಾಖಲು

    ಕಾಕ್‌ಪಿಟ್ ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯೂ ರೆಕಾರ್ಡ್ ಆಗಿದ್ದು ಅದರಲ್ಲಿ ಒಬ್ಬ ಪೈಲಟ್ ಇಂಧನ ಆಫ್ ಮಾಡಿದ್ದು ಯಾಕೆ? ಎಂದು ಕೇಳಿದರೆ, ಇನ್ನೊಬ್ಬ ನಾನು ಮಾಡಿಲ್ಲ ಎಂದು ಉತ್ತರಿಸಿದ್ದಾನೆ. ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಆದಾಗ್ಯೂ, ರಾಮ್ ಏರ್ ಟರ್ಬೈನ್ ಅಂದರೆ, ತುರ್ತು ಫ್ಯಾನ್ ಮತ್ತು ಎಪಿಯುನಂತಹ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ ನಂತರವೂ, ವಿಮಾನವನ್ನು ಅಪಘಾತದಿಂದ ರಕ್ಷಿಸಲು ಪೈಟಲ್​ಗಳಿಗೆ ಸಾಧ್ಯವಾಗಲಿಲ್ಲ. ಈ ಸಂಭಾಷಣೆ ನಡುವೆಯೇ ಪೈಲಟ್‌ ಮೇ ಡೇ ಘೋಷಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ. ಇದನ್ನೂ ಓದಿ:  ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    ಮುಂದುವರಿದಿದೆ ತನಿಖೆ; ಬೌಸರ್‌ಗಳ ಪರೀಕ್ಷೆ
    ವಿಮಾನಕ್ಕೆ ಇಂಧನ ತುಂಬಲು ಬಳಸಿದ ವಾಹನಗಳು (ಬೌಸರ್‌ಗಳು) ಮತ್ತು ಟ್ಯಾಂಕ್‌ಗಳಿಂದ ಇಂಧನದ ಮಾದರಿಗಳನ್ನು ತೆಗೆದು, ಅವುಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ ಹೇಳಿದೆ. ಈ ಪರೀಕ್ಷೆಯ ನಂತರ, ಇಂಧನದ ಗುಣಮಟ್ಟವು ಯಾವುದೇ ದೋಷವಿಲ್ಲದೆ, ತೃಪ್ತಿಕರವಾಗಿತ್ತು ಎಂದು ದೃಢಪಡಿಸಲಾಗಿದೆ. ಆದ್ರೆ, ವಿಮಾನದ ಕೆಲವು ನಿರ್ದಿಷ್ಟ ಭಾಗಗಳಿಂದ (ಉದಾಹರಣೆಗೆ, ಎಪಿಯು ಫಿಲ್ಟರ್ ಮತ್ತು ಎಡ ರೆಕ್ಕೆಯ ರಿಫ್ಯೂಯಲ್/ಜೆಟ್ಟಿಸನ್ ವಾಲ್ವ್) ಬಹಳ ಕಡಿಮೆ ಪ್ರಮಾಣದ ಇಂಧನದ ಮಾದರಿಗಳು ಮಾತ್ರ ಸಿಕ್ಕಿವೆ. ಈ ಕಡಿಮೆ ಪ್ರಮಾಣದ ಮಾದರಿಗಳನ್ನು ಪರೀಕ್ಷಿಸಲು ವಿಶೇಷ ಸೌಲಭ್ಯಗಳಿರುವ ಬೇರೆ ಪ್ರಯೋಗಾಲಯದ ಅಗತ್ಯವಿದೆ.

    ಏರ್ ಇಂಡಿಯಾಕ್ಕೆ ಮೊದಲೇ ಎಚ್ಚರಿಸಿತ್ತು ಅಮೆರಿಕ
    ಬೋಯಿಂಗ್‌ ಡ್ರೀಮ್ ಲೈನರ್ ವಿಮಾನದಲ್ಲಿ ಇಂಧನ ಸ್ವಿಚ್‌ಗಳಲ್ಲಿ ಸಮಸ್ಯೆ ಇರುವ ಬಗ್ಗೆ ಈ ಹಿಂದೆ ಅಮೆರಿಕ ಗುರುತಿಸಿತ್ತು. ಇದರ ಬೆನ್ನಲೆ ಬೋಯಿಂಗ್‌ ಎಲ್ಲ ಏರ್‌ಲೈನ್‌ಗಳಿಗೆ ಎಚ್ಚರಿಕೆ ನೀಡಿತ್ತು. 7 ವರ್ಷಗಳ ಹಿಂದೆಯೇ ಯುಎಸ್‌ನ FAA ಸಂಸ್ಥೆ 737 ಜೆಟ್‌ಗಳ ಫ್ಯುಯೆಲ್ ಕಂಟ್ರೋಲ್ ಸ್ವಿಚ್ ಬಗ್ಗೆ ಎಚ್ಚರಿಕೆ ನೀಡಿತ್ತು. ಅದರ ಭಾಗವಾಗಿ ಏರ್ ಇಂಡಿಯಾಗೂ ಈ ಮಾಹಿತಿಯನ್ನು ನೀಡಿತ್ತು. ಈ ಸ್ವಿಚ್‌ಗಳ ಬಗ್ಗೆ ಗಮನ ಹರಿಸಲು ಹೇಳಿತ್ತು. ಹೀಗಾಗೀ ಇದರಲ್ಲಿ ನಿರ್ಲಕ್ಷ್ಯ ಯಾರದು ಎನ್ನುವ ಪ್ರಶ್ನೆಯೂ ಉದ್ಬವಿಸಿದೆ.

    ಸದ್ಯ ವಿಮಾನ ಅಪಘಾತ ತನಿಖಾ ಬ್ಯೂರೋ ತಂಡವು ಈಗ ಆರಂಭಿಕವಾಗಿ ಸಿಕ್ಕಿರುವ ಮಾಹಿತಿಗಳನ್ನು ಆಧರಿಸಿ, ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಜೊತೆಗೆ, ವಿಮಾನದಲ್ಲಿ ಅಳವಡಿಸಲಾಗಿರುವ ಫ್ಲೈಟ್ ರೆಕಾರ್ಡರ್‌ನಿಂದ ಡೇಟಾ ವಿಶ್ಲೇಷಿಸಲಾಗುತ್ತಿದೆ. ಈ ವಿಶ್ಲೇಷಣೆಯು ಅಪಘಾತಕ್ಕೆ ನಿಖರ ಕಾರಣವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

  • ಸ್ಪೈಸ್‌ಜೆಟ್‌ ಪೈಲಟ್‌ನ ಲೈಸನ್ಸ್ 6 ತಿಂಗಳು ಅಮಾನತು – DGCA ಆದೇಶ

    ಸ್ಪೈಸ್‌ಜೆಟ್‌ ಪೈಲಟ್‌ನ ಲೈಸನ್ಸ್ 6 ತಿಂಗಳು ಅಮಾನತು – DGCA ಆದೇಶ

    ನವದೆಹಲಿ: ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಸ್ಪೈಸ್‌ಜೆಟ್‌ ಪೈಲಟ್‌ನ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿರುವುದಾಗಿ ತಿಳಿಸಿದೆ.

    ಮುಂಬೈನಿಂದ ದುರ್ಗಾಪುರಕ್ಕೆ ತೆರಳುವ ಏರ್‌ಲೈನ್ಸ್ ವಿಮಾನವು ಕಳೆದ ಮೇ ತಿಂಗಳಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿತ್ತು. ಈ ಘಟನೆಯನ್ನಾಧರಿಸಿ ಡಿಜಿಸಿಎ, ಲೈಸನ್ಸ್ ಅಮಾನತು ಮಾಡಿದೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

    ಕಳೆದ ಮೇ 1 ರಂದು ನಡೆದ ಘಟನೆಯಲ್ಲಿ 14 ಪ್ರಯಾಣಿಕರು ಮತ್ತು 3 ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದರು. ಇದರೊಂದಿಗೆ ವಿವಿಧ ನಿಯಮ ಉಲ್ಲಂಘನೆಯ ಕಾರಣಗಳಿಂದಾಗಿ ಪೈಲಟ್‌ನ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಅಲ್ಲದೇ ಹವಾಮಾನ ಪರಿಸ್ಥಿತಿಯನ್ನು ಪೈಲಟ್ ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂದು ಹೇಳಿದ್ದಾರೆ. ಆದರೆ ಸ್ಪೈಸ್‌ಜೆಟ್‌ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ವಿಮಾನಗಳಲ್ಲಿ ತಾಂತ್ರಿಕ ದೋಷ – ಸ್ಪೈಸ್‌ಜೆಟ್‌ಗೆ ಶೋಕಾಸ್‌ ನೋಟಿಸ್‌

    ಇದು ಗಂಭೀರ ಘಟನೆಯಾಗಿರುವುದರಿಂದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ಕುರಿತು ತನಿಖೆ ನಡೆಸುತ್ತಿದೆ. ಘಟನೆ ನಡೆದಾಗ ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿ 195 ಮಂದಿ ಇದ್ದರು. ಅವರಲ್ಲಿ 14 ಪ್ರಯಾಣಿಕರು ಮತ್ತು 3 ಕ್ಯಾಬಿನ್ ಸಿಬ್ಬಂದಿಗೆ ತಲೆಯ ಭಾಗ, ಬೆನ್ನುಮೂಳೆ, ಭುಜ, ಹಣೆ ಮತ್ತು ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ಡಿಜಿಸಿಎ ತಿಳಿಸಿದೆ.

    ಇತ್ತೀಚೆಗೆ ಹಲವು ಸ್ಪೈಸ್‌ಜೆಟ್ ವಿಮಾನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ. ಅದಕ್ಕಾಗಿ ಗರಿಷ್ಠ 8 ವಾರಗಳ ವರೆಗೆ ತನ್ನ ಶೇ.50 ರಷ್ಟು ವಿಮಾನಗಳನ್ನು ಮಾತ್ರ ನಿರ್ವಹಿಸುವಂತೆ ಡಿಜಿಸಿಎ ಏರ್‌ಲೈನ್‌ಗೆ ಆದೇಶಿಸಿದೆ.

    Live Tv
    [brid partner=56869869 player=32851 video=960834 autoplay=true]