Tag: ಎಇ

  • PGCET: ಐದು ಎಂಟೆಕ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಇಲ್ಲ- ಕೆಇಎ

    PGCET: ಐದು ಎಂಟೆಕ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಇಲ್ಲ- ಕೆಇಎ

    ಬೆಂಗಳೂರು: ಲಭ್ಯವಿರುವ ಸೀಟುಗಳಿಗಿಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ಕಾರಣ ಎಂ.ಇ/ಎಂ.ಟೆಕ್‌ನ (M.E/M.Tech) ಈ ಕೆಳಗಿನ ಐದು ಕೋರ್ಸ್‌ಗಳಿಗೆ ಪಿಜಿಸಿಇಟಿ-25 (PGCET-25) ನಡೆಸದಿರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತೀರ್ಮಾನಿಸಿದೆ.

    ಬಯೊ- ಟೆಕ್ನಾಲಜಿ, ಕೆಮಿಕಲ್ ಎಂಜಿನಿಯರಿಂಗ್, ಎನ್ವಿರಾನ್ಮೆಂಟ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್ ಮತ್ತು ಟೆಕ್ಸ್‌ಟೈಲ್ ಟೆಕ್ನಾಲಜಿ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಲಭ್ಯವಿರುವ ಸೀಟುಗಳಿಗಿಂತ ಕಡಿಮೆ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಅರ್ಹದಾಯಕ ಪದವಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ, ಪ್ರಕಟಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಈ ಮೇಲಿನ ಕೋರ್ಸ್‌ಗಳನ್ನು ಹೊರತುಪಡಿಸಿ, ಸಿವಿಲ್ ಎಂಜಿನಿಯರಿಂಗ್, ಮೆಕಾನಿಕಲ್ ಸೈನ್ಸ್ ಮತ್ತು ಎಲೆಕ್ಟ್ರಿಕಲ್ ಸೈನ್ಸ್ ವಿಷಯಗಳಿಗೆ ಇದೇ 31ರಂದು ವೇಳಾಪಟ್ಟಿ ಪ್ರಕಾರ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಜೂನ್ 2ರಂದು ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

  • ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹರಿಹರದ ಬೆಸ್ಕಾಂ ಎಇ

    ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹರಿಹರದ ಬೆಸ್ಕಾಂ ಎಇ

    ದಾವಣಗೆರೆ: ಐಪಿ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡಲು ಪ್ರತಿಸಂಪರ್ಕಕ್ಕೆ 5 ಸಾವಿರ ರೂಪಾಯಿಯಂತೆ ಬೇಡಿಕೆ ಇಟ್ಟು, ಅಂತಿಮವಾಗಿ 1 ಸಾವಿರ ರೂ.ಗೆ ಒಪ್ಪಿ 6 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಸಹಾಯಕ ಅಭಿಯಂತರ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.

    ಹರಿಹರ ನಗರ ಬೆಸ್ಕಾಂ (BESCOM) ಕಚೇರಿಯ ಸಹಾಯಕ ಅಭಿಯಂತರ ಬಿ.ಎಂ. ಕರಿಬಸಯ್ಯ ಹಣದ ಸಮೇತ ಬೆಸ್ಕಾಂ ಕಚೇರಿಯಲ್ಲಿ ಹಣ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ. ಮಹೇಶ್ವರಪ್ಪ ಬೇವಿನಹಳ್ಳಿ ಇವರಿಂದ ಐಪಿ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡಲು ಮುಂಚೆಯೇ ಪ್ರತಿ ಸಂಪರ್ಕಕ್ಕೆ 5 ಸಾವಿರ ರೂ.ಗಳಿಗೆ ಆರೋಪಿ ಎಇಯಾದ ಕರಿಬಸಯ್ಯ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಿ ಪುಂಡಾಟ – 6 ಕಾರುಗಳಿಗೆ ಹಾನಿ

    ಅಂತಿಮವಾಗಿ ಪ್ರತಿ ಸಂಪರ್ಕಕ್ಕೆ 1 ಸಾವಿರದಂತೆ ಒಪ್ಪಿ 8 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಿರ್ಯಾದಿ ಬೇವಿನಹಳ್ಳಿ ಮಹೇಶ್ವರಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಂತರ ಹರಿಹರ ನಗರ ಬೆಸ್ಕಾಂ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಬಿ.ಎಂ. ಕರಿಬಸಯ್ಯ ಬೇವಿನಹಳ್ಳಿ ಮಹೇಶ್ವರಪ್ಪನಿಂದ 6 ಸಾವಿರ ರೂ. ಲಂಚ ಪಡೆಯುವಾಗ ಹಣದ ಸಮೇತ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

    ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಕೆ.ಜಿ.ರಾಮಕೃಷ್ಣ, ಇನ್ಸ್‍ಪೆಕ್ಟರ್‍ಗಳಾದ ಎಚ್.ಎಸ್. ರಾಷ್ಟ್ರಪತಿ, ಆಂಜನೇಯ, ಪ್ರಭು ನೇತೃತ್ವದ ತಂಡ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡು, ಆರೋಪಿ ಸಹಾಯಕ ಇಂಜಿನಿಯರ್ ಕರಿಬಸಯ್ಯನಿಗೆ ಬಂಧಿಸಿ, ತನಿಖೆ ಮುಂದುವರಿಸಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸವರ್ಷದ ಮೊದಲ ವಾರದಲ್ಲೇ KPTCL ಎಇ, ಜೆಇ ನೇಮಕ ಪರೀಕ್ಷೆ ಫಲಿತಾಂಶ: ಸುನೀಲ್ ಕುಮಾರ್

    ಹೊಸವರ್ಷದ ಮೊದಲ ವಾರದಲ್ಲೇ KPTCL ಎಇ, ಜೆಇ ನೇಮಕ ಪರೀಕ್ಷೆ ಫಲಿತಾಂಶ: ಸುನೀಲ್ ಕುಮಾರ್

    ಬೆಳಗಾವಿ: ಕೆಪಿಟಿಸಿಎಲ್ (KPTCL) ಸಹಾಯಕ ಎಂಜನಿಯರ್ (AE), ಕಿರಿಯ ಎಂಜನಿಯರ್ ಹಾಗೂ ಕಿರಿಯ ಸಹಾಯಕ ಎಂಜಿನಿಯರ್ (JE) ಹುದ್ದೆಗಳ ನೇಮಕ ಪರೀಕ್ಷೆಯ ಫಲಿತಾಂಶವನ್ನು ಜನವರಿ ಮೊದಲ ವಾರದಲ್ಲೇ ಪ್ರಕಟಿಸಲಾಗುವುದು. ಜೊತೆಗೆ ಕೀ ಉತ್ತರಗಳನ್ನು ವಾರದೊಳಗೆ ಪ್ರಕಟಿಸಲಾಗುವುದು ಎಂದು ಸಚಿವ ವಿ. ಸುನೀಲ್‌ಕುಮಾರ್ (V Sunil Kumar) ಅವರು ತಿಳಿಸಿದರು.

    ವಿಧಾನಸಭೆಯಲ್ಲಿಂದು ಶೂನ್ಯವೇಳೆಯಲ್ಲಿ ಶಾಸಕ ಸುರೇಶಕುಮಾರ್ (SureshKumar) ಅವರ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಗಳನ್ನು 5 ತಿಂಗಳ ಹಿಂದೆ ನಡೆಸಲಾಗಿದೆ. ಆದರೆ ಫಲಿತಾಂಶ ಪ್ರಕಟಿಸಿಲ್ಲ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಕೆಇಎ ಜೊತೆಗೆ ಫಾಲೋಅಫ್ ಮಾಡುತ್ತಿದ್ದೇವೆ. ಈ ವಾರದಲ್ಲಿ ಅಥವಾ ಅಧಿವೇಶನ ಮುಗಿಯುವುದರೊಳಗೆ ಕೀ ಉತ್ತರಗಳನ್ನು ಪ್ರಕಟಿಸಿ, ಜನವರಿ ಮೊದಲ ವಾರದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    ಶಾಸಕ ಸುರೇಶಕುಮಾರ್ ಅವರು, ಪರೀಕ್ಷೆ ಬರೆದು ಐದು ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಕೂಡಲೇ ಕ್ರಮವಹಿಸುವಂತೆ ಸಚಿವರಲ್ಲಿ ಕೋರಿದ್ದರು. ಇದನ್ನೂ ಓದಿ: ಆ ಒಂದು ಮಾತಿನಿಂದ ಮುರಿದು ಬಿತ್ತು ರೂಪೇಶ್ ಶೆಟ್ಟಿ- ರಾಜಣ್ಣ ಫ್ರೆಂಡ್‌ಶಿಪ್

    Live Tv
    [brid partner=56869869 player=32851 video=960834 autoplay=true]