Tag: ಎಂ.ಸಿ.ಮನಗೂಳಿ

  • ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ: ದೇವೇಗೌಡ

    ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ: ದೇವೇಗೌಡ

    – ಎಂ ಸಿ ಮನಗೂಳಿ ನೆನೆದ ದೇವೇಗೌಡರು

    ವಿಜಯನಗರ: ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಿಡಿಕಾರಿದರು.

    ಸಿಂದಗಿ ಉಪಚುನಾವಣೆ ಹಿನ್ನೆಲೆ ಎಲ್ಲೆಡೆ ಪ್ರಚಾರ ಕೈಗೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಎಂ.ಸಿ ಮನಗೂಳಿ ನನ್ನ ಸಹಪಾಠಿಯಾಗಿ ಕೆಲಸ ಮಾಡಿದ್ದರು. ನನ್ನ ಜೊತೆ ಅವರು 1994 ರಿಂದ ಕೆಲಸ ಮಾಡಿದ್ದರು. ಅದು ಅಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರು. ಪ್ರಸ್ತುತ ಅವರು ನಮ್ಮನ್ನ ಅಗಲಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

    ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ. 2023 ರ ಚುನಾವಣೆಗೆ ಇಡೀ ರಾಜ್ಯ ಸುತ್ತುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುವೆ. ಯಾವ ಪಕ್ಷದ ಜೊತೆ ಚುನಾವಣೆ ಸಂಬಂಧವಿಲ್ಲ ಎಂದು ನಿಖರವಾಗಿ ಹೇಳಿದರು.

    ಸಿಂದಗಿ ಕ್ಷೇತ್ರದಲ್ಲಿ ಅಳಿಲು ಸೇವೆ ಮಾಡಿದ್ದೇವೆ. ಅದಕ್ಕೆ ಸಿಂದಗಿ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಒಂಭತ್ತು ಜನ ಅಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ನಾನು, ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲರೊಂದಿಗೆ ಎರಡು ದಿನ ಚರ್ಚೆ ಮಾಡಿದ್ದೆವು. ಎಲ್ಲರ ಒಮ್ಮತದಿಂದ ನಾಜಿಯಾ ಅಂಗಡಿಯವರನ್ನಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೇವೆ. ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ, ಸಿಎಂ, ಪಿಎಂ ಆಗಿ ಸೇವೆ ಮಾಡಿದ್ದೇನೆ. ಇಂತಹ ಇಳಿ ವಯಸ್ಸಿನ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.

    ಜಯ ಗಳಿಸೋ ದೃಢವಾದ ಸಂಕಲ್ಪದಿಂದ ಚುನಾವಣೆ ಎದುರಿಸುತ್ತಿದ್ದೇವೆ. ಕೇವಲ ಸಭೆ ಸಮಾರಂಭ ಮಾಡದೇ ಜನರ ಮನೆ ಬಾಗಿಲಿಗೆ ತೆರಳಿ, ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತೇವೆ. ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

    ಪ್ರಚಾರಕ್ಕೆ ಕುಮಾರಸ್ವಾಮಿ ಆಗಮಿಸುತ್ತಾರೆ. ಮತದಾರರ ತೀರ್ಪು ಅಂತಿಮವಾಗಿದ್ದು, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ನಾನು ಯಾರ ಬಗ್ಗೆಯೂ ಆಪಾದನೆ ಮಾಡಲ್ಲ. ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲ್ಲ. ಉಪಚುನಾವಣೆ ಫಲಿತಾಂಶ ಒಂದು ಪಕ್ಷದ ಅಳಿವು ಉಳಿವಿಗೆ ಕಾರಣವಾಗಲ್ಲ. ಜೆಡಿಎಸ್ ಪಕ್ಷವನ್ನು ಮುಗಿಸೋಕೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ ಪಟ್ಟವು, ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

    ಈ ಸುದ್ದಿಗೋಷ್ಠಿಯನ್ನು ದೇವೇಗೌಡರು ಪದಾಧಿಕಾರಿಗಳ ಜೊತೆಗೆ ನಡೆಸಿದ್ದು, ಸಭೆ ಬಳಿಕ ಇಂಡಿಗೆ ತೆರಳುತ್ತಿದ್ದಾರೆ.

  • ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನ ಕೆಳಗಿಳಿಸಲು RSS ಕಾರಣ: ಹೆಚ್‍ಡಿಕೆ

    ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನ ಕೆಳಗಿಳಿಸಲು RSS ಕಾರಣ: ಹೆಚ್‍ಡಿಕೆ

    – ರಾಜಕೀಯವಾಗಿ ಮತ ಪಡೆಯಲು ಕಾಂಗ್ರೆಸ್ ಕೀಳು ಮಟ್ಟಕ್ಕೆ ಇಳಿಯುತ್ತೆ

    ಹಾಸನ: ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಸಲು RSS ಕಾರಣ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹೇಳಿದರು.

    ಹಾಸನದ ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, RSS ಬಗ್ಗೆ ನಾನು ಈ ಹಿಂದೆ ಹೇಳಿದ್ದ ಹೇಳಿಕೆ, ಅದರ ಪ್ರಚಾರಕರು ಹೇಳಿದ್ದೇ ಆಗಿದೆ. ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲು RSS ಕಾರಣ ಎಂದು ಆರೋಪಿಸಿದರು.

    ಉಪಚುನಾವಣೆ ಕುರಿತು ಮಾತನಾಡಿದ ಅವರು, ಉಪಚುನಾವಣೆಯ ಎರಡೂ ಕ್ಷೇತ್ರಗಳನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಿಂದಗಿ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ ಎಂದು ಹೇಳುವವರು, ಅಭ್ಯರ್ಥಿ ಹಾಕಲು ಯೋಗ್ಯತೆ ಇಲ್ಲದೆ ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ:  ಅನಗತ್ಯವಾಗಿ ಖಾಸಗಿ ಆಸ್ಪತ್ರೆ ಶಿಫಾರಸು ಮಾಡಿದ್ರೆ ಸೂಕ್ತ ಕ್ರಮ: ವಿಕಾಸ್ ಕಿಶೋರ್

    ಬಹಳ ಅಚ್ಚರಿ ಮೂಡುವಂತದ್ದು, ಎಂದರೆ ದಿ.ಹಿರಿಯ ಶಾಸಕ, ಜೆಡಿಎಸ್ ನಾಯಕ ಎಂ.ಸಿ ಮನಗೂಳಿ ಸಾಯುವ 15 ದಿನ ಮುಂಚೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮಡಿಲಿಗೆ ಅವರ ಮಕ್ಕಳನ್ನ ಹಾಕಿ ನೋಡಿಕೊಳ್ಳಿ ಎಂದಿದ್ದರಂತೆ. ಮನಗೂಳಿ ಪಾಪ ಅವರು, ಅಸಡ್ಡೆಯಿಂದ ಕೋವಿಡ್ ಸಮಯದಲ್ಲಿ ಜನರ ಜೊತೆ ಕೆಲಸ ಮಾಡಲು ಹೋಗಿ ಸೀರಿಯಸ್ ಆಗಿ ಎಮರ್ಜೆನ್ಸಿ ಅಲ್ಲಿ ಇದ್ದರು. ನಾವು ಅವರನ್ನು ಅಪೋಲೊಗೆ ಸೇರಿಸಿದ್ವಿ. ನಾವೇ ಹೋಗಿ ಅವರನ್ನು ನೋಡೋಕೆ ಆಗ್ಲಿಲ್ಲ. ನೋಡಲು ಒಳಗೆ ಬಿಡ್ತಿಲ್ಲ, ದಯವಿಟ್ಟು ಒಂದು ಮಾತು ಹೇಳಿ ಎಂದು ಅವರ ಮಕ್ಕಳು ನನಗೆ ಫೋನ್ ಮಾಡ್ತಿದ್ರು ಎಂದು ನೆನಪಿಸಿಕೊಂಡರು.

    ಯಾವಾಗ ಮನಗುಳಿ ಅವರು ಎದ್ದು ಡಿಕೆಶಿಯವರ ಮನೆಗೆ ಹೋಗಿದ್ರು? ಇದಕ್ಕಿಂತ ಹಸೀಸುಳ್ಳು ಮತ್ತೊಂದಿಲ್ಲ. ಮನಗುಳಿ ಅವರು ಬದುಕಿದ್ದಾಗ ದೇವೇಗೌಡರ ಪ್ರತಿಮೆ ಮಾಡಿ ನಿಲ್ಲಿಸಿದ್ದಾರೆ. ಸಾಯುವವರೆಗೂ ದೇವೇಗೌಡರ ಸ್ವಂತ ತಮ್ಮನಿಗಿಂತ ಹೆಚ್ಚಾಗಿದ್ರು. ದೇವೇಗೌಡರಿಗಿಂತ ತನ್ನ ಮಕ್ಕಳನ್ನ ಡಿಕೆಶಿ ಚೆನ್ನಾಗಿ ನೋಡ್ಕೋತಾರೆ ಎಂದು ಮನಗುಳಿ ಅವರ ಮಡಿಲಿಗೆ ಹಾಕಲು ಹೋಗಿದ್ರಾ? ರಾಜಕೀಯವಾಗಿ ಮತ ಪಡೆಯಲು ಕಾಂಗ್ರೆಸ್ ಅವರು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗದಂತ ನೀಚ ಕೆಲಸ ಕಾಂಗ್ರೆಸ್ ಅವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ: ಹಾಲಪ್ಪ

  • ಸಿಂದಗಿಯಲ್ಲಿ ಆಪರೇಷನ್ ಕಾಂಗ್ರೆಸ್- ದಳ ತೊರೆದ ಎಂ.ಸಿ.ಮನಗೂಳಿ ಪುತ್ರ

    ಸಿಂದಗಿಯಲ್ಲಿ ಆಪರೇಷನ್ ಕಾಂಗ್ರೆಸ್- ದಳ ತೊರೆದ ಎಂ.ಸಿ.ಮನಗೂಳಿ ಪುತ್ರ

    ವಿಜಯಪುರ: ಜಿಲ್ಲೆಯ ಸಿಂದಗಿ ಉಪಚುನಾವಣಾ ಕಣ ರಂಗೇರಿದೆ. ದಿ.ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಉಪಚುನಾವಣೆಯ ದಿನಾಂಕ ಘೋಷಣೆಯ ಮುನ್ನವೇ ರಾಜಕೀಯ ಚಟುವಟಿಕೆ ಗರಿಗೆದರಿವೆ.

    ಜೆಡಿಎಸ್ ದಿ. ಶಾಸಕ ಎಂ ಸಿ ಮನಗೂಳಿ ಅವರ ಮಗ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇಂದು ಸಂಜೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದುಕೊಳ್ಳುವುದಾಗಿ ಅಶೋಕ್ ಮನಗೂಳಿ ಘೋಷಣೆ ಮಾಡಿದ್ದಾರೆ.

    ಒಂದು ವಾರದ ಬಳಿಕ ನನ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರ ಜೊತೆಗೆ ಚರ್ಚಿಸುತ್ತೇನೆ. ತದನಂತರ ಸಿಂದಗಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ನಾನು ಕಾಂಗ್ರೆಸ್ ಟಿಕೆಟ್ ಕೇಳಿಲ್ಲ. ಟಿಕೆಟ್ ಯಾರಿಗೇ ಕೊಟ್ರೂ ನಾನು ಅವರ ಪರವಾಗಿ ಕೆಲಸ ಮಾಡುತ್ತೇನೆ. ನಾನು ಮೊದಲು ಕಾಂಗ್ರೆಸ್ ಸದಸ್ಯತ್ವ ತೆಗೆದುಕೊಳ್ಳುತ್ತೇನೆ. ನಂತರ ಸಿಂದಗಿ ಕಾಂಗ್ರೆಸ್ ಟಿಕೆಟ್ ಕೇಳುತ್ತೇನೆ ಎಂದು ಅಶೋಕ್ ಮನಗೂಳಿ ಹೇಳಿದ್ದಾರೆ.

  • ಎಂ.ಸಿ ಮನಗೂಳಿ ನಿಧನಕ್ಕೆ ಜೆಡಿಎಸ್ ವರಿಷ್ಠ ಹೆಚ್‍ಡಿಡಿ ಸಂತಾಪ

    ಎಂ.ಸಿ ಮನಗೂಳಿ ನಿಧನಕ್ಕೆ ಜೆಡಿಎಸ್ ವರಿಷ್ಠ ಹೆಚ್‍ಡಿಡಿ ಸಂತಾಪ

    ಬೆಂಗಳೂರು: ಸಿಂದಗಿ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ(85) ನಿಧನರಾಗಿದ್ದು, ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಹೆಚ್‍ಡಿಡಿ, ರಾಜಕೀಯ ಮತ್ತು ವೈಯಕ್ತಿಕವಾಗಿ ನನ್ನ ಹಲವು ದಶಕಗಳ ಒಡನಾಡಿಯಾಗಿದ್ದ ಮಾಜಿ ಸಚಿವ, ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಭಗವಂತ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ.

    ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮನಗೂಳಿ ಅವರು 15 ದಿನದ ಹಿಂದೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. 1994ರಲ್ಲಿ ಸಚಿವರಾಗಿದ್ದ ಮನಗೂಳಿ 2018ರಲ್ಲಿ ತೋಟಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು. ಸಿಂದಗಿ ಕ್ಷೇತ್ರದಿಂದ 7 ಬಾರಿ ಸ್ಪರ್ಧೆ, 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

  • ಜೆಡಿಎಸ್ ಶಾಸಕ ಎಂ.ಸಿ ಮನಗೂಳಿ ನಿಧನ

    ಜೆಡಿಎಸ್ ಶಾಸಕ ಎಂ.ಸಿ ಮನಗೂಳಿ ನಿಧನ

    ಬೆಂಗಳೂರು/ವಿಜಯಪುರ: ಸಿಂದಗಿ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ(85) ನಿಧನರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನಗೂಳಿ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಉಸಿರಾಟದ ತೊಂದರೆಯಿಂದ ಬಳಲ್ತಿದ್ದ ಶಾಸಕರು 15 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

    1994ರಲ್ಲಿ ಸಚಿವರಾಗಿದ್ದ ಮನಗೂಳಿ 2018ರಲ್ಲಿ ತೋಟಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು. ಸಿಂದಗಿ ಕ್ಷೇತ್ರದಿಂದ 7 ಬಾರಿ ಸ್ಪರ್ಧೆ, 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

  • ಶಾಸಕ ಎಂ.ಸಿ.ಮನಗೂಳಿ ಅಸ್ವಸ್ಥ

    ಶಾಸಕ ಎಂ.ಸಿ.ಮನಗೂಳಿ ಅಸ್ವಸ್ಥ

    ವಿಜಯಪುರ: ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ ಆರೋಗ್ಯ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಲಬುರಗಿಯಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆದೊಯ್ದು ಕುಟುಂಬದವರು ಚಿಕಿತ್ಸೆ ಕೊಡಿಸುತ್ತಿದ್ದಾರೆ

    ತೀವ್ರತರವಾದ ಕಫ ಕಟ್ಟಿದ ಹಿನ್ನೆಲೆ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಕ್ಷೇತ್ರದ ಜನರು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಎಂ.ಸಿಮನಗೂಳಿ ಅವರ ಪುತ್ರ ಶಾಂತವೀರ ಮನಗೂಳಿ ಹೇಳಿದ್ದಾರೆ.

  • ವರ್ಗಾವಣೆ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ- ತೋಟಗಾರಿಕಾ ವಿವಿ ಸಿಬ್ಬಂದಿ ಆಕ್ರೋಶ

    ವರ್ಗಾವಣೆ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ- ತೋಟಗಾರಿಕಾ ವಿವಿ ಸಿಬ್ಬಂದಿ ಆಕ್ರೋಶ

    ಬಾಗಲಕೋಟೆ: ತೋಟಗಾರಿಕಾ ವಿಶ್ವವಿದ್ಯಾಲಯ ಅಧೀನ ಸಿಬ್ಬಂದಿಯ ವರ್ಗಾವಣೆ ವಿಚಾರದಲ್ಲಿ ತೋಟಗಾರಿಕಾ ಇಲಾಖೆಯ ಸಚಿವ ಎಂ.ಸಿ ಮನಗೂಳಿ ಮೂಗು ತೂರಿಸಿದ್ದಾರೆ. ವರ್ಗಾವಣೆಯ ಬಗ್ಗೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಚಿವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ನನ್ನ ಗಮನಕ್ಕೆ ಬಾರದೆ ವರ್ಗಾವಣೆ ಮಾಡಬಾರದೆಂದು ಎಂದು ಮನಗೂಳಿ ಅವರು ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಸಚಿವರ ಪತ್ರದ ಪ್ರತಿಯನ್ನು ತೋಟಗಾರಿಕೆ ವಿವಿ ಪ್ರಭಾರಿ ಉಪಕುಲಪತಿಗಳಿಗೆ ಕಾರ್ಯದರ್ಶಿಗಳು ಕಳುಹಿಸಿದ್ದಾರೆ. ಈ ಮೂಲಕ ವರ್ಗಾವಣೆ ಆದೇಶಕ್ಕೆ ತಡೆ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಕಾರ್ಯದರ್ಶಿಗಳ ಆದೇಶದ ಪ್ರಕಾರ ವರ್ಗಾವಣೆ ವಿಚಾರವನ್ನು ವಿವಿ ಆಡಳಿತ ಮಂಡಳಿ ತಡೆಹಿಡಿದಿದ್ದಾರೆ.

    ತೋಟಗಾರಿಕಾ ವಿವಿ ನಿಯಮಾವಳಿ ಪ್ರಕಾರ ಸಚಿವರು ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಮನಗೂಳಿಯವರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತೋಟಗಾರಿಕಾ ವಿಶ್ವವಿದ್ಯಾಲಯಗಳ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.

    ಸಚಿವರು ಈ ಕಾರ್ಯದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧ ಪ್ರತಿಭಟನೆಗೆ ಇಳಿಯೋದಾಗಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ. ಕೆ.ಎಂ ಇಂದಿರೇಶ್ ಬಾಗಲಕೋಟೆ ತೋಟಗಾರಿಕೆ ವಿವಿ ಪ್ರಭಾರ ಉಪಕುಲಪತಿ ಜೂನ್ 6ರಂದು ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಜೂನ್ 7ರಂದು ತಡೆ ನೀಡುವಂತೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಂದ ಆದೇಶ ಬಂದಿದೆ.

    ಜನರಲ್ ವರ್ಗಾವಣೆ, ಮುಚ್ಯುವಲ್ ವರ್ಗಾವಣೆ, ರಿಕ್ವೆಸ್ಟ್ ವರ್ಗಾವಣೆ ಅಡಿಯಲ್ಲಿ 45 ಸಿಬ್ಬಂದಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತು. ಹಾಗೆಯೇ ವಿವಿಯ ಇಬ್ಬರು ಡೀನ್, ಒಬ್ಬರು ರೆಜಿಸ್ಟ್ರಾರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಆದೇಶಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಸಚಿವರು ಹಸ್ತಕ್ಷೇಪ ಮಾಡಿರುವುದು ಸರಿಯಲ್ಲ ಎಂದು ಸಿಬ್ಬಂದಿ ಕಿಡಿಕಾರುತ್ತಿದ್ದಾರೆ.

  • ಸಚಿವ ಎಂ.ಸಿ.ಮನಗೂಳಿಗೆ ಮಹಿಳೆಯರಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

    ಸಚಿವ ಎಂ.ಸಿ.ಮನಗೂಳಿಗೆ ಮಹಿಳೆಯರಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

    -ಚುನಾವಣೆ ಮುಗಿತಲ್ಲ ಇನ್ಮುಂದೇ ನಾವೇ ನಿಮಗೆ ಕೈ ಮುಗಿಬೇಕು

    ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಸಿಂಧಗಿ ಪಟ್ಟಣದ ಮಹಿಳೆಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಿಂಧಗಿ ಪಟ್ಟಣಕ್ಕೆ ಇಂದು ಸಚಿವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಚಿವರ ಬಳಿ ಬಂದು ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಲತಿಬಾ ತಾಂಬೆ ಹಾಗೂ ಕೆಲವು ಮಹಿಳೆಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

    ಚುನಾವಣೆ ಇದ್ದಾಗ ನೀವು ಕೈಮುಗಿದುಕೊಂಡು ಬರತ್ತಿರಿ, ಈಗ ನಾವು ಕೈ ಮುಗಿದು ಕೆಲಸ ಕೇಳುವ ಪರಿಸ್ಥಿತಿ ಬಂದಿದೆ. ನಾವು ಮತ ಹಾಕುವವರಿಗೆ ಮಾತ್ರ ನಮ್ಮನ್ನು ಮಾತನಾಡಿಸುತ್ತೀರಾ ಆಮೇಲೆ ನಮ್ಮ ಸಮಸ್ಯೆ ಕೇಳುವುದಿಲ್ಲ. ಪಟ್ಟಣದಲ್ಲಿ ರಸ್ತೆಯ ಧೂಳು ಕುಡಿದು ತಿರುಗಾಡುತ್ತಿದ್ದೇವೆ. ಕುಡಿಯಲು ನೀರಿಲ್ಲ ಎಂದು ಲತಿಬಾ ತಾಂಬೆ ಕಿಡಿಕಾರಿದರು.

    ಸಚಿವರ ಪಕ್ಕದಲ್ಲಿಯೇ ನಿಂತಿದ್ದ ವ್ಯಕ್ತಿ ಉತ್ತರ ನೀಡುತ್ತಿದ್ದಂತೇ, ನೀವು ಸುಮ್ಮನೆ ನಿಲ್ಲಿ. ಸಚಿವರು ಉತ್ತರ ನೀಡಲಿ ಎಂದು ಮಹಿಳೆ ಗರಂ ಆಗಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಚಿವರು ಸರಿ ಮಾಡಿಸುತ್ತೇನೆ ಎನ್ನುತ್ತಲೇ ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.

    ಇದಕ್ಕೂ ಮುನ್ನ ದೇವರನೆದಲಗಿ ಗ್ರಾಮ ಪಂಚಾಯತ್‍ನಲ್ಲಿ ಹಗರಣ ನಡೆದಿದೆ ಎಂದು ಕೆಲವು ಸಿಂಧಗಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಸುಮಾರು 70ರಿಂದ 80 ಲಕ್ಷ ರೂ. ಕಳಪೆ ಕಾಮಗಾರಿಗಳು ನಡೆದಿವೆ. ಈ ಕುರಿತು ಸಂಪೂರ್ಣ ತನಿಖೆ ಆಗುವವರಗೂ ನಾನು ಪ್ರತಿಭಟನೆ ಮಾಡುತ್ತೇವೆ. ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಮ್ಮ ಮೇಲೆ ಅಧಿಕಾರಿಗಳು ಹಾಗೂ ನಾಯಕರು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಒಂದೇ ಜಿಲ್ಲೆಗೆ ಮೀಸಲಾಗಿಲ್ಲ. ನನಗೆ 30 ಜಿಲ್ಲೆಗಳ ಜವಾಬ್ದಾರಿಯಿದೆ. ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ- ಸಚಿವ ಎಂ.ಸಿ ಮನಗೂಳಿ

    ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ- ಸಚಿವ ಎಂ.ಸಿ ಮನಗೂಳಿ

    ಚಿಕ್ಕಬಳ್ಳಾಪುರ: ಯಡಿಯೂರಪ್ಪಗೆ ಈ ಮೊದಲು ಇದ್ದ ಹುರುಪು, ಉತ್ಸಾಹ ತಿರುಗಾಟ ಇಲ್ಲ. ಬಿಎಸ್‍ವೈ ಫೇಸ್ ವ್ಯಾಲ್ಯೂ ಕಡಿಮೆಯಾಗಿದೆ ಎಂದು ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ.

    ನಂದಿಗಿರಿಧಾಮಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 10-12 ಜನ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ ಬಿಜೆಪಿಯವರು ಕರೆದರೆ ಕಾಂಗ್ರೆಸ್‍ನವರು, ಜೆಡಿಎಸ್‍ನವರು ಯಾರೂ ಹೋಗಲಿಲ್ಲ ಎಂದರು.

    ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾವು ಯಾರೂ ಹೋಗುವುದಿಲ್ಲ. ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ. ಅವರು ಮೀಟಿಂಗ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅವರಿಗೆ ಹೈಕಮಾಂಡ್‍ಗಳಾದ ಮೋದಿ ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈಗ ಯಡಿಯೂರಪ್ಪ ಅವರ ಹೋರಾಟ ಕಡಿಮೆ ಆಗಿದೆ. ಸದ್ಯ ಈಗ ಯಾವೊಬ್ಬ ಶಾಸಕ ಬಿಜೆಪಿಗೆ ಹೋಗುತ್ತಿಲ್ಲ ಎಂದು ಸಚಿವ ಎಂ.ಸಿ ಮನಗೂಳಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ವಿಜಯಪುರ: ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರೂ ತೋಟಗಾರಿಕ ಸಚಿವ ಎಂ.ಸಿ ಮನಗೂಳಿ ಸುಮ್ಮನೆ ಕುಳಿತ್ತಿದ್ದಕ್ಕೆ ಟೀಕೆ ವ್ಯಕ್ತವಾಗಿದೆ.

    ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಮನಗೂಳಿ ಅವರು ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದೇಶಿ ಅಧಿಕಾರಿಗಳ ಜೊತೆಗೆ ಚರ್ಚೆ ಸಂದರ್ಭದಲ್ಲಿ ಟೇಬಲ್ ಮೇಲೆ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಇಡಲಾಗಿತ್ತು.

    ಚರ್ಚೆ ನಡೆಸುತ್ತಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಡವಟ್ಟಾಗಿದ್ದರೆ ಧ್ವಜವನ್ನು ಸರಿಪಡಿಸಬಹುದಾಗಿತ್ತು. ಆದರೆ ಕರ್ನಾಟಕದ ಅಧಿಕಾರಿಗಳು ಮತ್ತು ಸಚಿವರು ಯಾಕೆ ಗಮನ ನೀಡಿಲ್ಲ ಎಂದು ಜನರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv