Tag: ಎಂ.ವೈ.ಪಾಟೀಲ್

  • ಕಾಂಗ್ರೆಸ್ ಶಾಸಕ ಎಂ.ವೈ‌ ಪಾಟೀಲ್ ಕಾರು ಅಪಘಾತ

    ಕಾಂಗ್ರೆಸ್ ಶಾಸಕ ಎಂ.ವೈ‌ ಪಾಟೀಲ್ ಕಾರು ಅಪಘಾತ

    ಕಲಬುರಗಿ : ಕಾಂಗ್ರೆಸ್ ಶಾಸಕ (Congress MLA) ಎಂ.ವೈ‌ ಪಾಟೀಲ್ (MY Patil) ಅವರು ಕಾರು ಅಪಘಾತಕ್ಕೀಡಾದ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.

    ಶಾಸಕರ ಕಾರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಬಳಿ ಶುಕ್ರವಾರ ಅಪಘಾತಕ್ಕೀಡಾಗಿದೆ. ಘಟನೆಯಿಂದ ಅದೃಷ್ಟವಶಾತ್ ಶಾಸಕರು ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ವೀಡಿಯೋ: ಪೊಲೀಸ್‌ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಶಾಸಕ 

    ಜೇವರ್ಗಿ (ಬಿ) ಗ್ರಾಮದ ಹೊರವಲಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ತಗ್ಗುಗುಂಡಿಗೆ ಬಿದ್ದಿದೆ. ಶಾಸಕ ಎಂ. ವೈ ಪಾಟೀಲ್‌ ಹಾಗೂ ಚಾಲಕ ಮೋಬಿನ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೂಡಲೇ ಗಾಯಾಳು ಮತ್ತು ಶಾಸಕರನ್ನು ಅವರ ಪುತ್ರ ಡಾ. ಸಂಜೀವ್‌ ಪಾಟೀಲ್ ಅವರ ಶಾಂತಾಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    ಕಲಬುರಗಿ: ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್‍ (Congress) ನಿಂದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ಕೂಡ ಹೊರಬಿದ್ದಿದೆ. ಈ ಮಧ್ಯೆ ಶಾಸಕರೊಬ್ಬರು ಪದೇ ಪದೇ ನನಗೆ ಟಿಕೆಟ್ ಬೇಡ ಎನ್ನುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

    ಹೌದು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಾರ್ಯಕ್ರಮವೊಂದರಲ್ಲಿ ವಿದಾಯ ಭಾಷಣ ಮಾಡಿದ ಎಂ.ವೈ ಪಾಟೀಲ್ (M Y Patil), ನನಗೆ ಮತ್ತೆ ಟಿಕೆಟ್ ನೀಡಿದ್ರೆ ಉಪಚುನಾವಣೆ ಎದುರಿಸಬೇಕಾಗುತ್ತೆ. ಆದ್ದರಿಂದ ನನ್ನ ಬದಲಿಗೆ ಯುವಕರಿಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್‍ನಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

    ಈ ಮೂಲಕ 83 ವರ್ಷ ವಯಸ್ಸಿನ ಶಾಸಕ ಎಂವೈ ಪಾಟೀಲ್ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರಿದ್ದಾರೆ. ತಮ್ಮ ಬದಲಿಗೆ ಪುತ್ರ ಅರುಣ್ ಕುಮಾರ್ ಪಾಟೀಲ್‍ಗೆ ಟಿಕೆಟ್ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: Karnataka Election 2023- ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ

    ತನಗೆ ವಯಸ್ಸಾಗಿದೆ ಎಂದು ಪದೇ ಪದೇ ಟಿಕೆಟ್ ಬೇಡ ಎಂದು ಶಾಸಕರು ಹೇಳುತ್ತಿದ್ದಾರೆ. ಸದ್ಯ ಇದೀಗ ಅಫಜಲಪುರ ಕ್ಷೇತ್ರದ 8 ಜನ ಟಿಕೆಟ್ ಆಕಾಂಕ್ಷಿಗಳ ಪೈಕಿ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೊ ಕೂತುಹಲ ಎದ್ದಿದೆ.

  • PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಜಲ್‌ಪುರ ಎಂಎಲ್‌ಎ ಎಂ.ವೈ.ಪಾಟೀಲ್ ಗನ್‌ಮ್ಯಾನ್‌ನನ್ನು ಬಂಧಿಸಲಾಗಿದೆ.

    ಶಾಸಕ ಎಂ.ವೈ.ಪಾಟೀಲ್ ಅವರು ಪರಿಚಯಸ್ಥರ ಮದುವೆಗೆ ತೆರಳುತ್ತಿದ್ದ ವೇಳೆ, ಕಲಬುರಗಿ ನಗರದ ರಾಮಮಂದಿರ ಬಳಿ ಗನ್‌ಮ್ಯಾನ್ ಅಣ್ಣಯ್ಯ ದೇಸಾಯಿಯನ್ನು ಬಂಧಿಸಲಾಗಿದೆ. ಶಾಸಕರನ್ನು ಕಾರಿನಿಂದ ಇಳಿಸಿದ ಪೊಲೀಸರು, ಅವರ ಮುಂದೆಯೇ ಬಂಧಿಸಿದ್ದಾರೆ. ಬಳಿಕ ಶಾಸಕರಿಗೆ ಮತ್ತೊಬ್ಬ ಗನ್‌ಮ್ಯಾನ್‌ನನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

    MLA

    ಪಿಎಸ್‌ಐ ಪರೀಕ್ಷೆ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಈವರೆಗೆ ಮೂವರು ಕೊಠಡಿ ಮೇಲ್ವಿಚಾರಕರು, ನಾಲ್ವರು ಅಭ್ಯರ್ಥಿಗಳು ಹಾಗೂ ಜ್ಞಾನಜೋತಿ ಇಂಗ್ಲಿಷ್ ಶಾಲೆ ಅಧ್ಯಕ್ಷ ರಾಜೇಶ್ ಹಾಗರಗಿ ಸೇರಿ 8 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪೈಕಿ 6 ಆರೋಪಿಗಳನ್ನು 3 ದಿನಗಳ ಕಾಲ ವಿಚಾರಣೆ ನಡೆಸಲಾಗಿದೆ. ಆದರೂ ಅಭ್ಯರ್ಥಿಗಳು ಸತ್ಯ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    Karnataka PSI exam scam (3)

    ತಮಗೇನೂ ಗೊತ್ತಿಲ್ಲ, ತಾವು ಅಕ್ರಮ ಮಾಡಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವೀರೇಶ್ ಎಂಬ ಅಭ್ಯರ್ಥಿ ಹಣ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ. ಕಿಂಗ್‌ಪಿನ್ ಮಂಜುನಾಥ ಎಂಬವನಿಗೆ 39 ಲಕ್ಷ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಅಕ್ರಮದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧಿತ ಅಭ್ಯರ್ಥಿಗಳ ಬ್ಯಾಂಕ್ ಡಿಟೈಲ್ಸ್, ಹಣದ ವರ್ಗಾವಣೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

  • ರಮೇಶ್ ಜಾರಕಿಹೊಳಿಯನ್ನು ನಾನು ಭೇಟಿಯಾಗಿದ್ದು ಯಾಕೆ: ಎಂ.ವೈ ಪಾಟೀಲ್ ವಿವರಿಸಿದ್ರು

    ರಮೇಶ್ ಜಾರಕಿಹೊಳಿಯನ್ನು ನಾನು ಭೇಟಿಯಾಗಿದ್ದು ಯಾಕೆ: ಎಂ.ವೈ ಪಾಟೀಲ್ ವಿವರಿಸಿದ್ರು

    ಕಲಬುರಗಿ: ಬಿಜೆಪಿಯವರು ನನ್ನ ಮರ್ಯಾದೆಯನ್ನು ಹಾಳುಮಾಡಿ ಬಿಟ್ಟಿದ್ದಾರೆ. ಆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಕೈ ಹಿಡಿದಿದ್ದಾರೆ. ಹೀಗಾಗಿ ನಾನು ಬಿಜೆಪಿಯನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಸ್ಟಷ್ಟನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದೇ ತಿಂಗಳು 15ಕ್ಕೆ ಪುರಸಭೆ ಚುನಾವಣೆ ಇದೆ. ಕೆಲವು ಕಡೆ ಹೈಕೋರ್ಟ್ ನಿಂದ ಸ್ಟೇ ಬಂದಿದ್ದರಿಂದ ಚುನಾವಣೆ ಆಗುತ್ತದೆಯೇ ಇಲ್ಲವೇ ಎಂದು ಕೇಳಲು ಹೋಗಿದ್ದೆ. ರಮೇಶ್ ಜಾರಕಿಹೊಳಿ ಸಚಿವರಾದ ಹಿನ್ನೆಲೆ ಅಭಿವೃದ್ಧಿ ಕೆಲಸಕ್ಕೆ ಭೇಟಿಯಾಗಿದ್ದೆ ಹೊರತು ಬೇರೆ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಬಿಜೆಪಿ ಸೇರುವಂತೆ ಯಾರು ಕರೆ ಮಾಡಿಲ್ಲ. ಇದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ ಎಂದು ಹೇಳಿದರು.

    ನಾನು ಬಿಜೆಪಿಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ಬಿಜೆಪಿ ನನ್ನ ಮರ್ಯಾದೆಯನ್ನು ಹಾಳು ಮಾಡಿದೆ. 12 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿ ಸಾಧನೆ ಮಾಡಿದರೂ ಕೊನೆ ಗಳಿಗೆಯಲ್ಲಿ ನನ್ನನ್ನು ಕೈಬಿಟ್ಟರು. ಅದೇ ಸಂದರ್ಭದಲ್ಲಿ ಕಾಂಗ್ರೆಸಿನ ಮುಖಂಡರಾದಂತಹ ಮಲ್ಲಿಕಾರ್ಜುನ ಖರ್ಗೆ ಕೈ ಹಿಡಿದರು. ನನ್ನ ಇಳಿ ವಯಸ್ಸಿನಲ್ಲಿ ಶಾಸಕನಾಗಿ ಅವಕಾಶವನ್ನು ಕೊಟ್ಟಿದ್ದಕ್ಕೆ ನನಗೆ ತೃಪ್ತಿ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಕಡೆಗೆ ಮುಖಮಾಡಿ ನೋಡುವುದಿಲ್ಲ ಎಂದರು.

    ಅವರು ಬರ್ತಾರೆ ಇವರು ಬರ್ತಾರೆ ಎಂದು ಬಿಜೆಪಿ ಗೊಂದಲವನ್ನು ಉಂಟು ಮಾಡುತ್ತಿದ್ದು, ಇದಕ್ಕೆ ಮಾಧ್ಯಮಗಳು ಬೆಂಕಿಗೆ ಉಪ್ಪು ಬೆರೆಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

    ಈ ಇಳಿ ವಯಸ್ಸಿನಲ್ಲಿ ಪಕ್ಷಾಂತರ ಮಾಡಿ ಹೋರಾಟ ಮಾಡುವುದಕ್ಕೆ ಶಕ್ತಿ ಇಲ್ಲ. ಜನರು ಆಶೀರ್ವಾದ ಮಾಡಿ ತನಗೆ ಈ ಅವಕಾಶವನ್ನು ನೀಡಿದ್ದಾರೆ. ಹೀಗಾಗಿ ಎಂದಿಗೂ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಗುತ್ತೆದಾರ್ ಕಾಡು ಪ್ರಾಣಿಗಳನ್ನು ಬೆಳೆಸುತ್ತಿದ್ದಾರೆ ಎಂದು ಬಿಜೆಪಿ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ನೀಡಿದ್ರೆ ನಿಬಾಯಿಸ್ತೇನೆ: ಎಂ.ವೈ.ಪಾಟೀಲ್

    ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ನೀಡಿದ್ರೆ ನಿಬಾಯಿಸ್ತೇನೆ: ಎಂ.ವೈ.ಪಾಟೀಲ್

    ಕಲಬುರಗಿ: ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ಹಿರಿಯ ಶಾಸಕನೆಂದು ನೀಡಿದರೆ ನಿಬಾಯಿಸುತ್ತೇನೆ ಎಂದು ಅಫ್ಜಲಪುರ ಶಾಸಕ ಎಂ.ವೈ.ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಟ್ಟರೆ ಸಮರ್ಪಕವಾಗಿ ನಿಬಾಯಿಸುತ್ತೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವ ಕಾರಣದಿಂದ ನಾನು ಸಚಿವ ಸ್ಥಾನಕ್ಕೆ ಒತ್ತಡ ಹೇರುವುದಿಲ್ಲ ಎಂದು ತಿಳಿಸಿದ್ದಾರೆ.

    ನಾನು ದಶಕಗಳ ಕಾಲ ಬಿಜೆಪಿಗಾಗಿ ಶ್ರಮಿಸಿದ್ದೆ, ನನಗೆ ಗೊತ್ತಾಗದಂತೆ ರಾತ್ರೋ ರಾತ್ರಿ ಮಾಲೀಕಯ್ಯ ಗುತ್ತೇದಾರ್‍ಗೆ ಟಿಕೆಟ್ ನೀಡಿದ್ರು. ಬಿಜೆಪಿಗೆ ಹಾಗೂ ಮಾಲೀಕಯ್ಯ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ನಾನು ಬಿಜೆಪಿಗೆ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ, ಮತ್ತೇ ಅವರು ನನ್ನನ್ನು ಸಂಪರ್ಕಿಸಲು ಬಂದರೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಮಾಲೀಕಯ್ಯ ಪ್ರಚಾರಕ್ಕೆ ಹೋಗಿರುವಲ್ಲಿ ಬಿಜೆಪಿ ಸೋತಿದೆ, ಅವರು ದುರಂಹಕಾರ ಬಿಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಿದ್ದಾರೆ.

  • ತಾಲೂಕಿನಲ್ಲಿ ದುಷ್ಟ ರಾಕ್ಷಸರಿದ್ದಾರೆ, ಕೋಣದ ರೀತಿ ಶಾಸಕನನ್ನು ಕಡೀಬೇಕು: ಮಾಲೀಕಯ್ಯ ವಿರುದ್ಧ ಎಂ.ವೈ.ಪಾಟೀಲ್ ಪುತ್ರ ಗುಡುಗು

    ತಾಲೂಕಿನಲ್ಲಿ ದುಷ್ಟ ರಾಕ್ಷಸರಿದ್ದಾರೆ, ಕೋಣದ ರೀತಿ ಶಾಸಕನನ್ನು ಕಡೀಬೇಕು: ಮಾಲೀಕಯ್ಯ ವಿರುದ್ಧ ಎಂ.ವೈ.ಪಾಟೀಲ್ ಪುತ್ರ ಗುಡುಗು

    ಕಲಬುರಗಿ: ಸರಣಿ ಕೊಲೆಗಳನ್ನು ಮಾಡಿಸಿ ಜೈಲಿನಲ್ಲಿ ಇರಬೇಕಾದ ಕೋಣ ಇವತ್ತು ನಮ್ಮ ಶಾಸಕನಾಗಿದ್ದಾನೆ. ಆ ಈಳಿಗೆರ್ ಕೋಣವನ್ನು ನಾವು ಕಡಿಯಲೇಬೇಕು ಅಂತಾ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ವಿರುದ್ಧ ಮಾಜಿ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ ಪಾಟೀಲ್ ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

    ತಮ್ಮ ಭಾಷಣದಲ್ಲಿ ಆ ಈಳೀಗನ ಶರ್ಟ್ ಹಿಡಿದು ಬಾರಿಸುವ ತನಕ ಸಮಾಧಾನವಿಲ್ಲ. ಆ ಈಳಿಗೇರ ಕೋಣ ಮುಂದೆ ಬರಬಾರದು. ಐದು ಬಾರಿ ಶಾಸಕನಾದ ಇವನು ನಮ್ಮ ತಂದೆಗೆ ಎಂಎಲ್‍ಸಿ ಆಗುವಂತೆ ಹೇಳ್ತಾನೆ. ಹಾಗಾಗಿ ನೀವೆಲ್ಲರೂ ನಮ್ಮ ತಂದೆಗೆ ಮತ ನೀಡಬೇಕು ಅಂತಾ ಕಾರ್ಯಕರ್ತರ ಸಭೆಯಲ್ಲಿ ಅರುಣ್ ಪಾಟೀಲ್ ಗುಡುಗಿದ್ದಾರೆ.

    ಅಫ್‍ಜಲ್‍ಪುರ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೆದಾರ್ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇತ್ತ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ವೈ.ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಮಧ್ಯೆ ಚುನಾವಣಾ ಯುದ್ಧ ಆರಂಭವಾಗಿದೆ.