Tag: ಎಂ.ರಾಮಚಂದ್ರನ್

  • ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ: ಕೇರಳ ಕೈ ನಾಯಕ

    ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ: ಕೇರಳ ಕೈ ನಾಯಕ

    ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಎಂ. ರಾಮಚಂದ್ರನ್ ಅವರು ಹೇಳಿದ್ದಾರೆ.

    ಶುಕ್ರವಾರ ಮಾತನಾಡಿದ್ದ ರಾಮಚಂದ್ರನ್, ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಇದಾದ ನಂತರ ಕೈ ನಾಯಕನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿ ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಲಾಗಿತ್ತು.

    ಈಗ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ ರಾಮಚಂದ್ರನ್, ನಾನು ಏನು ಹೇಳಿದ್ದೇನೆ ಅದು ಸರಿ. ನಾನು ಯಾರನ್ನೂ ಅವಮಾನ ಮಾಡಿಲ್ಲ. ನಾನು ಹೇಳಿದ್ದರ ಪರವಾಗಿ ನಾನು ನಿಲ್ಲುತ್ತೇನೆ. ನಾನು ಯಾರನ್ನೂ ಕ್ಷಮೆ ಕೇಳಲು ಹೋಗುವುದಿಲ್ಲ. ಕೆಲ ವಿದೇಶಿ ಮಾಧ್ಯಮಗಳು ಅವರನ್ನು ‘ರಾಕ್‍ಸ್ಟಾರ್’ ಮತ್ತು ಕೊರೊನಾವನ್ನು ಕೊಂದವರು ಎಂದು ಬಣ್ಣಿಸುತ್ತಾರೆ. ಹಾಗೆಯೇ ನಾನು ಕೂಡ ರಾಣಿಗೆ ಹೊಲಿಸಿದ್ದೇನೆ ಅದರಲ್ಲೇನು ತಪ್ಪಿದೆ ಎಂದು ಪ್ರಶ್ನೆ ಮಾಡಿದ್ದಾರೆ.

    ನಾನು ಒಂದು ಹೆಣ್ಣಿನ ವಿರುದ್ಧ ಹೇಳಿಕೆಯನ್ನು ನೀಡುವ ವ್ಯಕ್ತಿಯಲ್ಲ. ನಾನು ಯಾವಾಗಲೂ ಮಹಿಳೆಯರ ಕಲ್ಯಾಣ ಮತ್ತು ಗೌರವಕ್ಕಾಗಿ ಮುಂದೆ ನಿಲ್ಲುವಂತಹ ವ್ಯಕ್ತಿ. ಹೀಗಾಗಿ ನಾನು ಕ್ಷಮೆ ಕೇಳಲ್ಲ ಎಂದು ರಾಮಚಂದ್ರನ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಕೈ ನಾಯಕ ಈ ಹೇಳಿಕೆ ಸರಿಯಿಲ್ಲ. ಒಂದು ಪಕ್ಷದ ನಾಯಕನಾಗಿ ಒಂದು ಮಹಿಳೆಯ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಬಾರದು. ಅವರು ಕ್ಷಮೆ ಕೇಳಲೇ ಬೇಕು ಎಂದು ಕೇರಳದ ಕೆಲ ನಾಯಕರು ಆಗ್ರಹಿಸಿದ್ದರು.

    ಎಂ.ರಾಮಚಂದ್ರನ್ ಹೇಳಿದ್ದೇನು?
    ಆರೋಗ್ಯ ಸಚಿವೆ ಶೈಲಜಾ ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ. ಈ ಹಿಂದೆ ರಾಮಚಂದ್ರನ್, ನಿಫಾ ವೈರಸ್ ವೇಳೆಯೂ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ ನಲ್ಲಿ `ಅತಿಥಿ ಕಲಾವಿಧೆ’ ಆಗಿದ್ದರು. ನಿಫಾ ರಾಜಕುಮಾರಿ ಆಗಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

  • ಕೇರಳದ ಆರೋಗ್ಯ ಮಂತ್ರಿಯನ್ನು ‘ಕೋವಿಡ್ ರಾಣಿ’ ಎಂದ ಕಾಂಗ್ರೆಸ್ ಮುಖಂಡ

    ಕೇರಳದ ಆರೋಗ್ಯ ಮಂತ್ರಿಯನ್ನು ‘ಕೋವಿಡ್ ರಾಣಿ’ ಎಂದ ಕಾಂಗ್ರೆಸ್ ಮುಖಂಡ

    – ಕ್ಷಮೆ ಕೇಳುವಂತೆ ಆಗ್ರಹ

    ತಿರುವನಂತಪುರ: ಕೇರಳದ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್ ವಿವಾದಾತ್ಮಹ ಹೇಳಿಕೆ ನೀಡಿದ್ದು, ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಎಂ.ರಾಮಚಂದ್ರನ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಎಂ.ರಾಮಚಂದ್ರನ್ ಹೇಳಿಕೆಯನ್ನು ಖಂಡಿಸಿರುವ ಸಿಪಿಐ(ಎಂ) ಲಿಂಗ ಅಸಮಾನತೆಯಿಂದ ಕೂಡಿದೆ. ಹಾಗಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

    ಈ ಹಿಂದೆ ರಾಮಚಂದ್ರನ್, ನಿಫಾ ವೈರಸ್ ವೇಳೆಯೂ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ ನಲ್ಲಿ ‘ಅತಿಥಿ ಕಲಾವಿಧೆ’ ಆಗಿದ್ದರು. ನಿಫಾ ರಾಜಕುಮಾರಿ ಆಗಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಈ ಕುರಿತು ಪ್ರತಿಕ್ರಿಯಸಿದ್ದು, ಕೇರಳದ ಕೆಪಿಸಿಸಿ ಅಧ್ಯಕ್ಷರು ಆರೋಗ್ಯ ಮಂತ್ರಿ ಶೈಲಜಾ ಅವರನ್ನು ನಿಫಾ ರಾಜಕುಮಾರಿ ಮತ್ತು ಕೋವಿಡ್ ರಾಣಿ ಮಾಡಲು ಹೊರಟಿದ್ದಾರೆ. ಒಬ್ಬ ನಾಯಕ ಇಷ್ಟು ಕೆಳ ಮಟ್ಟಕ್ಕೆ ಇಳಿಯಲು ಸಾಧ್ಯನಾ? ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ಸರ್ಕಾರ ಮತ್ತು ಶೈಲಜಾ ಟೀಚರ್ ಅವರಿಗೆ ಸಿಗುವ ಗೌರವ ಕಡಿಮೆ ಆಗಲ್ಲ. ಮಹಾಮಾರಿ ಕೊರೊನಾ ನಿಯಂತ್ರಿಸಿದ್ದಕ್ಕೆ ಶೈಲಜಾ ಅವರಿಗೆ ಕಾಂಗ್ರೆಸ್ ನಿಂದ ಇಂತಹ ಮಾತುಗಳು ಕೇಳುವಂತಾಗಿದೆ ಎಂದು ಕಿಡಿ ಕಾರಿದ್ದಾರೆ.