Tag: ಎಂ.ಮಂಜು

  • ಪೆನ್‍ಡ್ರೈವ್ ಕೇಸ್: ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ – ಎ.ಮಂಜು

    ಪೆನ್‍ಡ್ರೈವ್ ಕೇಸ್: ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ – ಎ.ಮಂಜು

    – ಪೆನ್‍ಡ್ರೈವ್ ಹಂಚಿಕೆ ಆರೋಪಿ ನವೀನ್‍ಗೌಡ ಆರೋಪ ತಳ್ಳಿಹಾಕಿದ ಶಾಸಕ

    ಮೈಸೂರು: ನವೀನ್‍ಗೌಡ (Naveen Gowda) ಆರೋಪದಲ್ಲಿ ನನ್ನನ್ನು ಹಾಗೂ ನನ್ನ ಪಕ್ಷದ ನಾಯಕರನ್ನು ಪೆನ್‍ಡ್ರೈವ್ ಪ್ರಕರಣದಲ್ಲಿ (Prajwal Revanna Pendrive cas) ಸಿಲುಕಿಸುವ ಪಿತೂರಿ ಇದೆ. ಸಂಪೂರ್ಣವಾಗಿ ಜೆಡಿಎಸ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ಶಾಸಕ ಎ.ಮಂಜು (A Manju) ಆರೋಪಿಸಿದ್ದಾರೆ.

    `ರಸ್ತೆಯಲ್ಲಿ ಸಿಕ್ಕ ಪೆನ್‍ಡ್ರೈವ್ ಅನ್ನು ಶಾಸಕ ಎ. ಮಂಜು ಅವರಿಗೆ ಕೊಟ್ಟಿದ್ದೆ’ ಎಂಬ ಪೆನ್‍ಡ್ರೈವ್ ಹಂಚಿಕೆ ಆರೋಪಿ ನವೀನ್‍ಗೌಡ ಫೇಸ್‍ಬುಕ್ ಪೋಸ್ಟ್ ಕುರಿತು ಮೈಸೂರಿನಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ ಎ.ಮಂಜುಗೆ ಕೊಟ್ಟಿದ್ದೆ; ಬಾಂಬ್ ಸಿಡಿಸಿದ ಆರೋಪಿ ನವೀನ್‌ಗೌಡ!

    ನನ್ನನು, ನಮ್ಮ ಪಕ್ಷದ ನಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಯುತ್ತಿದೆ. ನವೀನ್‍ಗೌಡ ಕಲ್ಯಾಣ ಮಂಟಪದಲ್ಲಿ ನನಗೆ ಪೆನ್‍ಡ್ರೈವ್ ತಂದು ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಅದೇ ಕಲ್ಯಾಣ ಮಂಟಪದಲ್ಲಿದ್ದೆ ಎಂದು ಆತನಿಗೆ ಹೇಗೆ ಗೊತ್ತಿತ್ತು? ನನಗೆ ನವೀನ್‍ಗೌಡ ಯಾರು ಎಂದು ಗೊತ್ತೇ ಇಲ್ಲ ಎಂದು ಅವರು ಹೇಳಿದ್ದಾರೆ.

    ನವೀನ್‍ಗೌಡ ನನ್ನ ಕ್ಷೇತ್ರದಲ್ಲಿ ಇರಬಹದು. ಪ್ರಕರಣದಿಂದ ಪಾರಾಗಲು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ. ಇಂತಹ ಹೀನ ಕೆಲಸ ಬಿಟ್ಟು ಸತ್ಯವನ್ನು ಬಹಿರಂಗ ಮಾಡಲಿ. ಇದು ನನ್ನ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

    ನವೀನ್ ಗೌಡ ಫೇಸ್‍ಬುಕ್ ಪೋಸ್ಟ್‌ನಲ್ಲಿ ಏನಿದೆ?
    ರಸ್ತೆಯಲ್ಲಿ ಸಿಕ್ಕ ಪೆನ್‍ಡ್ರೈವ್‍ನ್ನು ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಹೇಳಿದ ಹಾಗೇ ಪೆನ್‍ಡ್ರೈವ್ ವೀಡಿಯೋ ವೈರಲ್ ಹಿಂದೆ ಇರುವುದು ಅರಕಲಗೋಡು ಶಾಸಕರೇ ಇರಬಹುದೇ ಎಂದು ಬರೆದುಕೊಂಡಿದ್ದಾನೆ.

    ಹಾಸನ ಜಿಲ್ಲೆಯ ಬೇಲೂರಿನ ನವೀನ್ ಗೌಡ ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಆತ ಪೋಸ್ಟ್ ಮಾಡಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್ ಪೋಸ್ಟ್‍ನ ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದ. ಬಳಿಕ ನವೀನ್ ಗೌಡನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು.

    ಸದ್ಯ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ (SIT) ಅಧಿಕಾರಿಗಳು ಹಾಸನದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಕರಣದಲ್ಲಿ ಇದೀಗ ಅಧಿಕಾರಿಗಳು ಮಾಜಿ ಶಾಸಕ ಪ್ರೀತಂಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಅವರ ಆಪ್ತ ಲಿಖಿತ್‍ನನ್ನು ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ. ನವೀನ್ ಮತ್ತಿತರರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: SSLC ವಿದ್ಯಾರ್ಥಿನಿ ಹತ್ಯೆ; ಕೊಡವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು!

  • ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ

    ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ

    ಹಾಸನ: ಮಾಜಿ ಶಾಸಕ ಎ.ಮಂಜು (A.Manju) ಜೊತೆ ಅಡ್ಜಸ್ಟ್ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂದು ಶಾಸಕ ಎ.ಟಿ ರಾಮಸ್ವಾಮಿ (A.T.Ramaswamy) ಸಾಬೀತು ಪಡೆಸಿದರೆ ನಾನು ಅವರು ಹೇಳುವ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D.Revanna) ವಾಗ್ದಾಳಿ ನಡೆಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಟಿ ರಾಮಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮಗನ ಮೇಲೆ ಕೇಸ್ ದಾಖಲಿಸಿದವನ ಜೊತೆ ರಾಜಿ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಅವರು ಸೀನಿಯರ್ ಅಡ್ವಕೇಟ್ ಇಟ್ಟುಕೊಂಡರು ಸಹ ಹೈಕೋರ್ಟ್‍ನಲ್ಲಿ ನಮ್ಮ ಪರವೇ ಆಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ನಮ್ಮ ಅಡ್ವಕೇಟ್ ಬಾರದ ಕಾರಣ ರಿಮೆಂಟ್ ಆಯ್ತು. ಅದರ ಪ್ರತಿಯನ್ನು ರಾಮಸ್ವಾಮಿ ಓದಿಕೊಳ್ಳಲಿ. ನಮ್ಮ ಸಂಪೂರ್ಣ ಆಸ್ತಿಯನ್ನು ಐಟಿಗೆ ನೀಡಿದ್ದೇನೆ ಇಡಿ ಮೂಲಕ ತನಿಖೆ ನಡೆಸಿಕೊಳ್ಳಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

    ರಾಮಸ್ವಾಮಿಯವರು ಎರಡು ವರ್ಷದಿಂದ ಯಾವ್ಯಾವ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದರು ಎಂದು ಹೇಳಲಿ. ಹಾಸನ ಮತ್ತು ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೆ ಯಾಕೆ ಬರಲಿಲ್ಲ? ಅವರಿಗೆ ಸೀಟ್ ಕೊಡದೆ ಒದ್ದು ಓಡಿಸಿದ್ದಕ್ಕೆ ನಿಮ್ಮ ಹತ್ರ ಬಂದಿದ್ದಾರೆ ಎಂದು ಶಿವಲಿಂಗೇಗೌಡರು ಹೇಳಿದ್ರಾ? ಹಾಗಾದರೆ ಶಿವಲಿಂಗೇಗೌಡರು ಧರ್ಮಸ್ಥಳದ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು.

    ಎರಡು ವರ್ಷದಿಂದ ಕಾಂಗ್ರೆಸ್ ಕದ ತಟ್ಟುತ್ತಿದ್ದರು. ಅಲ್ಲಿ ಸೋಲ್ತಾರೆ ಎಂದ ಮೇಲೆ ನಮ್ಮ ಬಳಿ ಬಂದಿದ್ದಾರೆ. ನಾವು ಯಾರ ಹತ್ರವೂ ಅಡ್ಜಸ್ಟ್ ಆಗಿಲ್ಲ. ಎ. ಮಂಜು ಬರ್ತೀನಿ ಅಂದ್ರೆ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

    ಶಿವಲಿಂಗೇಗೌಡ (K.L.Shivalinge Gowda) ಪಕ್ಷ ತೊರೆದ ವಿಚಾರವಾಗಿ, ನಾವು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು. ಅವರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

    ದೇವರಾಣೆ ಪಕ್ಷ ಬಿಡಲ್ಲ ಎಂದು ಕೆ.ಎಂ ಶಿವಲಿಂಗೇಗೌಡ ಅಂದಿದ್ರು, ಆದರೂ ಪಕ್ಷ ತೊರೆದಿದ್ದಾರೆ. ಕುಮಾರಸ್ವಾಮಿಯವರ (H.D.Kumaraswamy) ಮನೆಯಲ್ಲಿ ಈ ಮಾತು ಹೇಳಿಲ್ಲ ಎಂದರೆ ಅವರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮೇಲೆ ಆಣೆಮಾಡಲಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸವಾಲು ಹಾಕಿದ್ದಾರೆ.

    ಶಿವಲಿಂಗೇಗೌಡರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟಿದ್ದೇವೆ. ಜೆಡಿಎಸ್ (JDS) ಗೆ ದುಡ್ಡು ಕೊಟ್ಟು ವೋಟು ತೆಗೆದುಕೊಳ್ಳುವ ಶಕ್ತಿ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬಳಿ ಖಜಾನೆಯಿದೆ ಎಂದಿದ್ದಾರೆ.

    ಅರಸಿಕೆರೆಯಲ್ಲಿ ಬಿಜೆಪಿಯವನು ನಿಂತರೆ ಸೋಲುತ್ತೇನೆ. ಲಿಂಗಾಯತರೆಲ್ಲ ಒಂದೇ ಕಡೆ ಓಟು ಹಾಕುತ್ತಾರೆ ಎಂದು ಶಿವಲಿಂಗೇಗೌಡರು ಹೇಳಿದ್ದರು. ಕಳೆದ ಬಾರಿ ಐದು ಶಾಸಕರು ಕಾಂಗ್ರೆಸ್ (Congress) ತೊರೆದಿದ್ದರು. ಅರಸಿಕೆರೆ ಜನ ದುಡ್ಡಿಗೆ ಮತ ಹಾಕುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

  • ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    ಹಾಸನ: ಜೆಡಿಎಸ್ ಹಾಗೂ ಬಿಜೆಪಿಯ ಹಲವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಸ್ಪಷ್ಟನೆಯನ್ನು ನೀಡಿದರು.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಟಿಕ್ಸ್ ನಲ್ಲಿ ಎಲ್ಲಾ ಚರ್ಚೆಗಳು ಬರುತ್ತಿರುತ್ತದೆ. ನಾನು ಹಾಗೂ ಸುರ್ಜೇವಾಲಾ ಅವರು ಎ.ಮಂಜು ಅವರೊಂದಿಗೆ ಮಾತನಾಡಿದ್ದು ನಿಜ. ಅವರೂ ನಮ್ಮ ಹತ್ತಿರ ಮಾತನಾಡಿದ್ದೂ ನಿಜ. ಜೆಡಿಎಸ್ (JDS) ನವರು ಸೀಟ್ ಅನೌನ್ಸ್ ಮಾಡುವ ಮೊದಲು ಎ.ಮಂಜು ಹಾಗೂ ಪ್ರಜ್ವಲ್ ಅವರ ನಡುವೆ ಕೇಸ್ ನಡೆಯುತ್ತಿರುವುದೂ ನಿಜ. ನಾನು ಅನೌನ್ಸ್ ಮಾಡಬೇಕು ಎಂದಾಗ ಅವರವರದ್ದೇ ದೊಡ್ಡಮಟ್ಟದಲ್ಲಿ ನಮ್ಮ ಪಾರ್ಟಿ ಬಿಟ್ಟು ನಾನು ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಬಿಜೆಪಿಗೆ ಹೋಗಿ ಎಂಪಿ ಚುನಾವಣೆಗೆ ನಿಂತು ಎಲೆಕ್ಷನ್ ಕೇಸ್ ಹಾಕಿರುವುದೂ ನಿಜ ಎಂದು ಹೇಳಿದರು.

    ಮತ್ತೆ ಜೆಡಿಎಸ್ ನಿಂದ ಎ.ಮಂಜು ಅವರ ಹೆಸರನ್ನು ಅನೌನ್ಸ್ ಮಾಡಿರುವುದು ಸತ್ಯ. ಈಗ ರೇವಣ್ಣ ಹಾಗೂ ಅವರ ಕುಟುಂಬದವರು ಮಂಜು ಅವರೊಂದಿಗೆ ಮಾತನಾಡುತ್ತಿರುವುದು ನಿಜ. ರಾಜಕಾರಣದಲ್ಲಿ ಇಟ್ ಇಸ್ ಆ್ಯನ್ ಆರ್ಟ್ ಆಫ್ ಪಾಸಿಬಿಲಿಟಿ ಎಂದರು. ಇದನ್ನೂ ಓದಿ: ಪ್ರತಿಯೊಬ್ಬರಿಗೆ 500 ರೂ. ಕೊಟ್ಟು ಕರ್ಕೊಂಡು ಬರಬೇಕು- ಸಿದ್ದರಾಮಯ್ಯ ಮಾತು ವೈರಲ್

    ಹಾಸನ ವಿಧಾನಸಭಾ ಕ್ಷೇತ್ರ (Hassan Vidhanasabha Constituency) ದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್‍ಗೆ ಗಾಳ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ತಿಳಿದ ಮಟ್ಟಿಗೆ ಸ್ವರೂಪ್ ಎಲ್ಲರ ಹತ್ತಿರ ಮಾತನಾಡುತ್ತಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ದಳದವರ ಹತ್ತಿರ ಕೂಡಾ ಅವರು ಮಾತನಾಡುತ್ತಾರೆ. ನನ್ನ ಹತ್ತಿರ ಅವರು ಮಾತನಾಡಲಿಲ್ಲ ಎಂದು ಹೇಳಿದರು.

    ಇದೇ ವೇಳೆ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (A.T Ramaswamy) ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿರುವ ಕುರಿತು ಮಾತನಾಡಿದ ಅವರು, ಇದು ಸ್ವಾಭಾವಿಕ. ಎಲ್ಲರೂ ಭೇಟಿ ಮಾಡಿಯೇ ಮಾಡುತ್ತಾರೆ. ಹಾಗೆಯೇ ಇವರೂ ಮಾತನಾಡಿದ್ದಾರೆ, ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಅದೆಲ್ಲಾ ಇದೆ. ನಾನೇನು ಇಲ್ಲ ಎಂದು ಹೇಳುತ್ತಿಲ್ಲ. ಕಾಂಗ್ರೆಸ್ ಪಾರ್ಟಿ ಇನ್ನೂ ತೀರ್ಮಾನ ಮಾಡಲಿಲ್ಲ. ಶಿವಲಿಂಗೇಗೌಡರು ತಾವಾಗಿಯೇ ಡಿಕ್ಲೇರ್ ಮಾಡಿಕೊಂಡಿದ್ದಾರೆ ಎಂದು ನುಡಿದರು.

    ಮಾರ್ಚ್ 5ರಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆಗೆ ಸಿದ್ದರಾಮಯ್ಯನವರು ಅರಸೀಕೆರೆಗೆ ಹೋಗುತ್ತಾರೆ. ರೇವಣ್ಣ, ಪ್ರಜ್ವಲ್ ಹಾಗೂ ಎಂ.ಮಂಜು ತಾವೇ ಎಲ್ಲಾ ಮಾಡಿ ಅವರ ಪರ ಎಂದು ಹೇಳುತ್ತಿದ್ದಾರೆ. ದಳದ ಕಾರ್ಯಕರ್ತರು ಒಪ್ಪುತ್ತಾರೋ ಬಿಡುತ್ತಾರೋ ನನಗೆ ಗೊತ್ತಿಲ್ಲ. ಲೀಡರ್‍ಗಳಿಗೆ ಒಪ್ಪಿಗೆ ಆಗಿದೆ. ಅವರು ಹಾಕಿರುವ ಕೇಸ್ ಜಡ್ಜ್‍ಮೆಂಟ್ ಬರುವ ಸ್ಟೇಜ್‍ನಲ್ಲಿದೆ. ಅಫೀಷಿಯಲೀ ಆ ಕೇಸನ್ನು ವಿತ್‍ಡ್ರಾ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.