Tag: ಎಂ.ಪಿ.ರೇಣುಕಾಚಾರ್ಯ

  • ಡಿಕೆಶಿಯವರನ್ನು ಕಾಂಗ್ರೆಸ್ಸಿನವ್ರೇ ಬಲಿ ಕೊಟ್ಟರು: ರೇಣುಕಾಚಾರ್ಯ

    ಡಿಕೆಶಿಯವರನ್ನು ಕಾಂಗ್ರೆಸ್ಸಿನವ್ರೇ ಬಲಿ ಕೊಟ್ಟರು: ರೇಣುಕಾಚಾರ್ಯ

    ದಾವಣಗೆರೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ಸಿನವರೇ ಬಲಿಕೊಟ್ಟಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರೇ ಡಿ.ಕೆ.ಶಿವಕುಮಾರ್ ಅವರನ್ನು ಮಾರಿ ಮುಂದೆ ಕೋಣ ಕಡಿಯುವ ರೀತಿಯಲ್ಲಿ ಕಡಿಯುತ್ತಾರೆ ಎಂದು ಕುಂದಗೋಳ ಚುನಾವಣೆ ಪ್ರಚಾರದ ವೇಳೆ ಹೇಳಿದ್ದೆ. ಅಷ್ಟೇ ಅಲ್ಲದೆ ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದೂ ತಿಳಿಸಿದ್ದೆ. ಆಗ ಕೆಲವರು ನನ್ನ ಬಗ್ಗೆ ಅಪಹಾಸ್ಯ ಮಾಡಿದ್ದರು. ಆದರೆ ಆ ಮಾತುಗಳು ಈಗ ಸತ್ಯವಾಗಿವೆ ಎಂದು ಹೇಳಿದರು.

    ಕಾಂಗ್ರೆಸ್ಸಿನಲ್ಲಿ ಇರುವ ಉತ್ತಮ ನಾಯಕನೆಂದರೆ ಡಿ.ಕೆ.ಶಿವಕುಮಾರ್. ಅವರು ಪಕ್ಷದಲ್ಲಿ ಬೆಳೆಯುತ್ತಾರೆ ಎಂದು ಅವರನ್ನು ತುಳಿಯುವ ಕೆಲಸ ನಡೆದಿದೆ. ಮಾಜಿ ಸಚಿವರು ಜೈಲಿಗೆ ಹೋಗಲು ಬಿಜೆಪಿ ಕಾರಣವಲ್ಲ. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋದಾಗ ಪಟಾಕಿ ಸಿಡಿದಿದ್ದು, ಸಿಹಿ ಹಂಚಿದ್ದು ಕಾಂಗ್ರೆಸ್ಸಿನವರು ಎಂದರು.

    ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಹತಾಶರಾಗಿ ಸರ್ಕಾರ ನಾಲ್ಕು ತಿಂಗಳಲ್ಲಿ ಬೀಳುತ್ತದೆ ಅಂತ ಹೇಳುತ್ತಿದ್ದಾರೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಪೂರ್ಣಾವಧಿ ಮುಗಿಸಲಿದೆ. ಅಷ್ಟೇ ಅಲ್ಲದೆ 2023ರ ಚುನಾವಣೆ ಬಹುಮತ ಪಡೆದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅನ್ನಭಾಗ್ಯ, ಕೃಷಿ ಭಾಗ್ಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಈ ಕುರಿತು ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೇಂಥಿಲ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

  • ಸಂತೋಷ್ ಹೆಗ್ಡೆ ವಿಕೃತ ಮನಸ್ಸಿನ ವ್ಯಕ್ತಿ: ರೇಣುಕಾಚಾರ್ಯ

    ಸಂತೋಷ್ ಹೆಗ್ಡೆ ವಿಕೃತ ಮನಸ್ಸಿನ ವ್ಯಕ್ತಿ: ರೇಣುಕಾಚಾರ್ಯ

    ದಾವಣಗೆರೆ: ಮಾಜಿ ಲೋಕಾಯುಕ್ತ  ಸಂತೋಷ್ ಹೆಗ್ಡೆ ಅವರು ವಿಕೃತ ಮನಸ್ಸಿನ ವ್ಯಕ್ತಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.

    ನ್ಯಾಮತಿ ತಾಲೂಕಿನ ರಾಮತೀರ್ಥದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಮಾಜಿ ರಾಜ್ಯಪಾಲ ಹಂಸರಾಜ್ ಅಲ್ಲ, ಅವರು ಧ್ವಂಸರಾಜ್. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ ವರದಿಗೆ ಅನುಮತಿ ಕೊಟ್ಟರು. ಈ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮೇಲೆ ದುರುದ್ದೇಶದಿಂದ ಕೇಸ್ ಹಾಕಿ, ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಆರೋಪಿಸಿದರು.

    ಬಿ.ಎಸ್.ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿಲ್ಲ, ಲೂಟಿ ಮಾಡಲಿಲ್ಲ. ಅವರನ್ನು ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಕಳುಹಿಸಲಾಯಿತು. ಯಡಿಯೂರಪ್ಪನವರು ಜೈಲಿಗೆ ಹೋದಾಗ ಬಿಜೆಪಿಯವರು ಯಾವುದೇ ಗಲಾಟೆ ಮಾಡಲಿಲ್ಲ. ಆದರೆ ಮಾಜಿ ಸಚಿವ ಡಿ.ಕೆ.ಸಚಿವ ಡಿ.ಕೆ.ಶಿವಕುಮಾರ್ ಬಂಧನವಾಗಿದ್ದಕ್ಕೆ ಕಾಂಗ್ರೆಸ್‍ನವರು ಪ್ರತಿಭಟನೆ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ ಎಂದು ದೂರಿದರು.

    ಕಾಂಗ್ರೆಸ್‍ನವರು ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಈಗ ಕೇಂದ್ರ ಮಾಜಿ ಗೃಹ ಸಚಿವ ಪಿ.ಚಿದಂಬರಂ ಜೈಲಿಗೆ ಹೋಗಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನನಗೆ ಸ್ನೇಹಿತರು. ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದಕ್ಕೆ ನಾನು ಖುಷಿಪಡುವುದಿಲ್ಲ ಎಂದು ಹೇಳಿದರು.

    ರಾಜಕಾರಣಿಗಳ ಹೇಳಿಕೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು. ಅದನ್ನು ವೈಭವೀಕರಣ ಮಾಡುವುದು ಸರಿಯಲ್ಲ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪಕ್ಷದ ಹಿರಿಯರು. ಅವರು ಉದ್ಧಟತನದ ಹೇಳಿಕೆ ನೀಡುವವರಲ್ಲ. ಮಾಧ್ಯಮದವರು ಎಡವಿದ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಅವರ ಮನಸ್ಸನ್ನ ಪರಿವರ್ತನೆ ಮಾಡಬೇಕು. ನಾನು ಅನರ್ಹರು ಬಿಜೆಪಿ ಸೇರಿದ್ದಾರೆಂದು ಹೇಳಿಲ್ಲ. ಆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ ಹೇಳಿದ್ದೇನೆ ಎಂದರು.

  • ಬಿಎಸ್‍ವೈರನ್ನ ಹಾಡಿ ಹೊಗಳಿದ ಶಾಸಕ ರೇಣುಕಾಚಾರ್ಯ

    ಬಿಎಸ್‍ವೈರನ್ನ ಹಾಡಿ ಹೊಗಳಿದ ಶಾಸಕ ರೇಣುಕಾಚಾರ್ಯ

    – ಲಕ್ಷ್ಮಣ ಸವದಿಗೆ ಈಗ ಸಚಿವ ಸ್ಥಾನ ಕೊಟ್ಟಿದ್ದು ಸರಿಯಲ್ಲ

    ತುಮಕೂರು: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಇದ್ದರು. 21ನೇ ಶತಮಾನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇದ್ದಾರೆ. ಅವರು ಆಧುನಿಕ ಬಸವಣ್ಣನವರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

    ಸಿದ್ದಗಂಗಾ ಮಠಕ್ಕೆ ಭೇಟಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಅವರು ಧರ್ಮವನ್ನು ನಂಬಿದವರು. ಬಿಎಸ್‍ವೈರ ಮೇಲೆ ನಾಡಿನ ಮಠಾಧೀಶರ ಹಾಗೂ ಜನರ ಆಶೀರ್ವಾದ ಇದೆ. ಯಡಿಯೂರಪ್ಪನವರು ಮೂರು ವರ್ಷ ಹತ್ತು ತಿಂಗಳು ಆಡಳಿತ ನೀಡಲಿ, ಅವರ ಆರೋಗ್ಯ ಚೆನ್ನಾಗಿರಲಿ. 2023ರ ಚುನಾವಣೆ ಬಳಿಕ ಅವರೇ ಮುಖ್ಯಮಂತ್ರಿ ಆಗಬೇಕು ಎಂದರು.

    ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರನ್ನ ಸಿಎಂ ಮಾಡಬೇಕು ಅಂತ ಗುರಿಯಿತ್ತು. ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ಒಬ್ಬ ರೈತ ನಾಯಕನನ್ನ ಸಿಎಂ ಆಗಿ ಮಾಡಲಾಗಿದೆ. ನಾನ್ಯಾಕೆ ಕುಮಾರಸ್ವಾಮಿ ಅವರ ಮನೆಗೆ ಹೋಗಲಿ? ಯಡಿಯೂರಪ್ಪನವರೇ ನಮ್ಮ ನಾಯಕ. ನಾನು ಪಕ್ಷ ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಲಕ್ಷ್ಮಣ ಸವದಿ ಅವರು ನನ್ನ ಆತ್ಮೀಯ ಸ್ನೇಹಿತರು. ಅವರು ಶಾಸಕರಲ್ಲದೆ ಇದ್ದರೂ ಈಗ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಈ ಸಂದರ್ಭದಲ್ಲಿ ಮಂತ್ರಿಗಿರಿ ಕೊಟ್ಟಿದ್ದು ಸರಿಯಲ್ಲ ಎಂಬುದು ನನ್ನ ಭಾವನೆ ಅಷ್ಟೇ. ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ನನ್ನಂತೆ ಪಕ್ಷದ ಅನೇಕರಿಗೆ ಬೇಸರವಿದೆ. ಆದರೆ ನಾನು ಇದನ್ನು ಬಹಿರಂಗವಾಗಿ ಹೇಳಿದ್ದೇನೆ. ಈ ಕುರಿತು ಬುಧವಾರ ಸಿಎಂ ಯಡಿಯೂರಪ್ಪ ಅವರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದರು.

  • ದಡ ಸೇರಿದ್ದ ತೆಪ್ಪಕ್ಕೆ ಹುಟ್ಟು ಹಾಕಿ ಪೋಸ್- ರೇಣುಕಾಚಾರ್ಯ ಟ್ರೋಲ್

    ದಡ ಸೇರಿದ್ದ ತೆಪ್ಪಕ್ಕೆ ಹುಟ್ಟು ಹಾಕಿ ಪೋಸ್- ರೇಣುಕಾಚಾರ್ಯ ಟ್ರೋಲ್

    – ಪೋಸ್‍ಗಾಗಿ ಮಾಡಿಲ್ಲ, ಉದ್ಘಾಟನೆ ಮಾಡಿದೆ ಅಷ್ಟೇ
    – ತೆಪ್ಪದಲ್ಲಿ ಬರಬೇಕು ಅಂತ ಜನರೇ ಹೇಳಿದ್ರು
    – ಸ್ಪಷ್ಟನೆ ನೀಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಶಾಸಕ

    ದಾವಣಗೆರೆ: ದಡ ಸೇರಿದ್ದ ತೆಪ್ಪದಲ್ಲಿ ನಿಂತು ಹುಟ್ಟು ಹಾಕಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು  ನೆಟ್ಟಿಗರು, ಸ್ಥಳೀಯರು ಶಾಸಕರ ವಿರುದ್ಧ ಅಸಮಾಧಾನ ಹೊರ  ಹಾಕಿದ್ದಾರೆ.

    ತುಂಗಾಭದ್ರಾ ನದಿಯು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ದಾವಣಗೆರೆಯ ಹೊನ್ನಾಳಿಯ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಮುಳುಗಡೆಯಾದ ಪ್ರದೇಶಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ಈ ವೇಳೆ ದಡಕ್ಕೆ ಸೇರಿದ್ದ ದೋಣಿಯಲ್ಲಿ ನಿಂತು ಹುಟ್ಟು ಹಾಕಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಫೋಟೋ ಚೆನ್ನಾಗಿ ಹೊಡಿರೀ, ವಿಡಿಯೋ ಮಾಡಿ. ಪಾಪ ಶಾಸಕರು ಪ್ರವಾಹದಲ್ಲಿ ತೇಲಿ ಹೋಗಿದ್ದ ಜನರನ್ನು ತೆಪ್ಪದಲ್ಲಿ ಕರೆದುಕೊಂಡು ಬಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ರೇಣುಕಾಚಾರ್ಯ ಅವರು ಹುಟ್ಟು ಹಾಕುತ್ತಿರುವ ದೃಶ್ಯವನ್ನು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಮೊಬೈಲ್ ನಲ್ಲಿ  ಸೆರೆ ಹಿಡಿದಿದ್ದಾರೆ. ಈ ವೇಳೆ ಸ್ಥಳೀಯರು ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾತುಗಳು ವಿಡಿಯೋದಲ್ಲಿ ಕೇಳಿ ಬಂದಿದೆ.

    ವಿಡಿಯೋ ವೈರಲ್ ಆಗಿರುವ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ತೆಪ್ಪದಲ್ಲಿ ಬರಬೇಕು ಅಂತ ಸ್ಥಳೀಯರು ಒತ್ತಾಯ ಮಾಡಿದರು. ಉದ್ಘಾಟನೆ ಮಾಡಲು ತೆಪ್ಪದಲ್ಲಿ ನಿಂತಿದ್ದೆ. ನಾನು ಪ್ರಚಾರಕ್ಕೆ ಹಾಗೆ ಮಾಡಿಲ್ಲ. ಬೆಳಗ್ಗೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಹಾಯ ಮಾಡುತ್ತಿದ್ದೇನೆ. ಗಂಜಿ ಕೇಂದ್ರಗಳನ್ನು ತೆರೆದು, ಸಂತ್ರಸ್ತರಿಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

    ಹೊನ್ನಾಳಿಯ ಬಂಬೂ ಬಜಾರ್, ಬಾಲ್ ರಾಜ್ ಘಾಟ್, ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಅಲ್ಲದೇ ತುಂಗಾಭದ್ರಾ ಹೊಳೆಯ ಪಕ್ಕದಲ್ಲೇ ಇರುವ ಬೇಲಿ ಮಲ್ಲೂರು, ಕೋಟೆ ಮಲ್ಲೂರು ಗ್ರಾಮಗಳಲ್ಲಿ ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ.

    ಈ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಶಾಸಕರು, ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ನೀಡಲಾಗುತ್ತದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಸ್ವಕ್ಷೇತ್ರ ಬದಾಮಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ. ದೆಹಲಿಗೆ ಹೋಗಿ ಸಭೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

  • ಎಂಟಿಬಿ, ಬಿಸಿ ಪಾಟೀಲ್ ಪ್ರಳಯವಾದ್ರೂ ಕಾಂಗ್ರೆಸ್‍ಗೆ ಹೋಗಲ್ಲ: ರೇಣುಕಾಚಾರ್ಯ

    ಎಂಟಿಬಿ, ಬಿಸಿ ಪಾಟೀಲ್ ಪ್ರಳಯವಾದ್ರೂ ಕಾಂಗ್ರೆಸ್‍ಗೆ ಹೋಗಲ್ಲ: ರೇಣುಕಾಚಾರ್ಯ

    -ಇಬ್ಬರು ಜೆಡಿಎಸ್ ಶಾಸಕರಿಂದ ಬಿಜೆಪಿಗೆ ಬೆಂಬಲ

    ಬೆಂಗಳೂರು: ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಬಿ.ಸಿ.ಪಾಟೀಲ್ ಪ್ರಳವಾದರೂ ಕಾಂಗ್ರೆಸ್‍ಗೆ ಹೋಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

    ಸಿಎಂ ನಿವಾಸ ಧವಳಗಿರಿಯ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರೆಬೆಲ್ ಶಾಸಕರ ಧೈರ್ಯವನ್ನು ಮೆಚ್ಚಲೇಬೇಕು. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕರು ಅತೃಪ್ತ ಶಾಸಕರಿಗೆ ಅಧಿಕಾರದ ಆಸೆ ತೋರಿಸಿದರು. ಆದರೆ ಅವರು ಮಾತ್ರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೊಸ ಸರ್ಕಾರ ರಚನೆಯಾಗುವವರೆಗೂ ನಾವು ಬೆಂಗಳೂರಿಗೆ ಮರಳುವುದಿಲ್ಲ ಎಂದು ರೆಬೆಲ್ ಶಾಸಕರು ಹೇಳಿದ್ದಾರೆ. ಅವರೆಲ್ಲರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಸದನಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗುತ್ತಾರೆ ಅಂತ ಈ ಹಿಂದೆಯೇ ಹೇಳಿದ್ದೆ. ಆ ಮಾತು ಈಗ ಸತ್ಯವಾಯಿತು ಎಂದು ಹೇಳಿದರು.

    ಜೆಡಿಎಸ್ ಶಾಸಕರು ಕಾಂಗ್ರೆಸ್ ಸಹವಾಸ ಮಾಡಿ ಹಾಳಾಗಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿತಗೊಳಿಸಬೇಕು ಅಂತ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹೀಗಾಗಿ ಸದನದಲ್ಲಿ ಬಿಜೆಪಿಗೆ ಬ್ಯಾಹ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ಶಾಸಕರೊಬ್ಬರು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಇಬ್ಬರು ಜೆಡಿಎಸ್ ಶಾಸಕರು ಬಾಹ್ಯ ಬೆಂಬಲ ಸೂಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಬಾಂಬ್ ಸಿಡಿಸಿದರು.

  • ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

    ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

    ದಾವಣಗೆರೆ: ಸೂರ್ಯ-ಚಂದ್ರರು ಇರೋದು ಎಷ್ಟು ಸತ್ಯನೋ, ಮತ್ತೆ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

    ಲೋಕಸಭಾ ಚುನಾವಣೆ ಮೋದಿ ವರ್ಸಸ್ ಮಹಾಘಟಬಂಧನ್ ನಡುವೆ ನಡೆಯುತ್ತೆ. ಏಕೆಂದರೆ ಮಹಾಘಟ್ ಬಂಧನ್‍ಗೆ ಯಾರು ನಾಯಕರು ಎನ್ನುವುದೇ ಗೊತ್ತಿಲ್ಲ. ದೇಶಾದ್ಯಂತ ಮೋದಿ ಪರ ಅಲೆ ಹಾಗೂ ಮೋದಿ ಆಡಳಿತ ಇಡೀ ಜಗತ್ತು ಮೆಚ್ಚಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬಳಿಕ ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ನೀಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬ ಅಂಬರೀಶ್ ಕೈ-ಕಾಲು ಹಿಡಿದು ಮಂಡ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅಂಬರೀಶ್ ಕುಟುಂಬದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬದುಕಿದ್ದಾಗ ಅಂಬರೀಶ್ ಅವರನ್ನು ಹೇಗೆ ಬಳಸಿಕೊಂಡರೋ, ಮರಣ ನಂತರ ಅವರಿಗೆ ಗೌರವ ಕೊಡಲಿಲ್ಲ. ಸುಮಲತಾಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಕುಮಾರಸ್ವಾಮಿ ತಾಕತ್ ಇದ್ದರೆ ರೇವಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದರು.

    ಸಚಿವ ಸಂಪುಟದಿಂದ ಕೈಬಿಡದಿದ್ದರೆ ಜಿಡಿಎಸ್ ಸರ್ವನಾಶ ಶತಸಿದ್ಧ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ. ಅವರಿಗೆ ನಾಟಕ ಆಡುವುದು ಚನ್ನಾಗಿ ಗೊತ್ತು. ನಿಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ರೆ ನಿಮ್ಮ ಕುಟುಂಬದವರು ಒಂದೇ ವಾರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಎಚ್.ಡಿ ರೇವಣ್ಣಗೆ ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದರು. ಈ ವೇಳೆ ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶೀಘ್ರವೇ ಬಿಎಸ್‍ವೈ ಸಿಎಂ ಆಗ್ತಾರೆ, ಬಿಜೆಪಿಯ ಯಾವೊಬ್ಬ ಶಾಸಕರನ್ನ ಟಚ್ ಮಾಡೋಕ್ಕಾಗಲ್ಲ: ರೇಣುಕಾಚಾರ್ಯ

    ಶೀಘ್ರವೇ ಬಿಎಸ್‍ವೈ ಸಿಎಂ ಆಗ್ತಾರೆ, ಬಿಜೆಪಿಯ ಯಾವೊಬ್ಬ ಶಾಸಕರನ್ನ ಟಚ್ ಮಾಡೋಕ್ಕಾಗಲ್ಲ: ರೇಣುಕಾಚಾರ್ಯ

    ಬೆಂಗಳೂರು: ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮುಂದಿನ ಮುಖ್ಯಮಂತ್ರಿಗಳಾಗುತ್ತಾರೆ. ಅಲ್ಲದೇ ಬಿಜೆಪಿಯ ಯಾವೊಬ್ಬ ಶಾಸಕರನ್ನು ಸಹ ಕಾಂಗ್ರೆಸ್ಸಿನವರು ಟಚ್ ಮಾಡಲು ಸಾಧ್ಯವಾಗಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

    ಡಾಲರ್ಸ್ ಕಾಲೋನಿಯ ಬಿಎಸ್‍ವೈ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿ ಎಂದು ಜನರು ಆಶೀರ್ವಾದ ಮಾಡಿದ್ದಾರೆ. ಅಂತೆಯೇ ಶೀಘ್ರವೇ ಅವರು ಮುಖ್ಯಮಂತ್ರಿಗಳಾಗಲಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಮಾತನಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ. ಯಡಿಯೂರಪ್ಪನವರಿಗೆ ಜನರ ಹಾಗೂ ಮಠಾಧೀಶರ ಆಶೀರ್ವಾದವಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ಬಿಜೆಪಿಯ ಯಾವೊಬ್ಬ ಶಾಸಕರನ್ನು ಸಹ ಕಾಂಗ್ರೆಸ್ಸಿನವರೇ ಆಗಲಿ, ಜೆಡಿಎಸ್ ನವರೇ ಆಗಲಿ ಮುಟ್ಟಲು ಸಾಧ್ಯವಿಲ್ಲವೆಂದು ಹೇಳಿದರು.

    ತಮ್ಮ ನಿವಾಸದಲ್ಲಿ ಎರಡನೇ ದಿನವೂ ಸಹ ಸಭೆಯನ್ನು ಮುಂದುವರಿಸಿರುವ ಬಿಎಸ್‍ವೈಯವರ ನಡೆಯಿಂದಾಗಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಬುಧವಾರವೂ ಸಹ ಹೊನ್ನಾಳ್ಳಿ ರೇಣುಕಾಚಾರ್ಯ ಸೇರಿದಂತೆ ತರೀಕೆರೆಯ ಸುರೇಶ್, ಮಾಯಕೊಂಡದ ಲಿಂಗಣ್ಣ, ಕಡೂರಿನ ಬೆಳ್ಳಿ ಪ್ರಕಾಶ್, ಧಾರವಾಡ ಪಶ್ಚಿಮದ ಅರವಿಂದ ಬೆಲ್ಲದ್, ಯಲಹಂಕದ ಎಸ್ ಆರ್. ವಿಶ್ವನಾಥ್, ಹಾಸನದ ಪ್ರೀತಮ್ ಗೌಡ, ಗೋವಿಂದ ಕಾರಜೋಳ, ಸಿದ್ದು ಸವದಿ ಹಾಗೂ ಸುಕುಮಾರ್ ಶೆಟ್ಟಿ ಸೇರಿದಂತೆ ಹಲವು ಶಾಸಕರ ದಂಡೆ ಬಿಎಸ್‍ವೈ ನಿವಾಸದಲ್ಲಿ ಬೀಡುಬಿಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭ್ಯರ್ಥಿಗಳನ್ನು ಕುಳ್ಳಿರಿಸಿ ಆಟೋ ಓಡಿಸಿದ ಶಾಸಕ ರೇಣುಕಾಚಾರ್ಯ

    ಅಭ್ಯರ್ಥಿಗಳನ್ನು ಕುಳ್ಳಿರಿಸಿ ಆಟೋ ಓಡಿಸಿದ ಶಾಸಕ ರೇಣುಕಾಚಾರ್ಯ

    ದಾವಣಗೆರೆ: ಸ್ಥಳೀಯ ಸಂಸ್ಥೆ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಗಳ ಪ್ರಚಾರದ ಭರಾಟೆಯು ಜೋರಾಗಿದ್ದು, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಖುದ್ದು ಆಟೋ ಓಡಿಸುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ.

    ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ರಂಗೇರಿದ್ದು, ಶಾಸಕ ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ವಿಭಿನ್ನವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಖುದ್ದು ಆಟೋ ಓಡಿಸುತ್ತಾ ಹೊನ್ನಾಳಿ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಮಾಡುತ್ತಿರುವ ಅವರು, ಆಟೋದಲ್ಲಿ ಆಯಾ ವಾರ್ಡಿನ ಅಭ್ಯರ್ಥಿಗಳನ್ನು ಕೂರಿಸಿಕೊಂಡು ಏರಿಯಾಗಳ ತುಂಬೆಲ್ಲಾ ಪ್ರಚಾರ ನಡೆಸುತ್ತಿದ್ದಾರೆ.

    ಈ ಬಾರಿ ಹೊನ್ನಾಳಿ ಪಟ್ಟಣ ಪಂಚಾಯಿತಿ ಗದ್ದುಗೆಯನ್ನ ಬಿಜೆಪಿಯೇ ಹಿಡಿಯಲೇಬೇಕೆಂದು ಹೊಣೆ ಹೊತ್ತಿರುವ ಅವರು ಪ್ರತಿ ದಿನ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv