Tag: ಎಂ.ಪಿ.ಕುಮಾರಸ್ವಾಮಿ

  • ದೊಡ್ಡಗೌಡರ ಆಶೀರ್ವಾದ ಪಡೆದ ಎಂಪಿ ಕುಮಾರಸ್ವಾಮಿ

    ದೊಡ್ಡಗೌಡರ ಆಶೀರ್ವಾದ ಪಡೆದ ಎಂಪಿ ಕುಮಾರಸ್ವಾಮಿ

    ಬೆಂಗಳೂರು: ಮೂಡಿಗೆರೆ (Mudigere) ಜೆಡಿಎಸ್ (JDS) ಅಭ್ಯರ್ಥಿ ಎಂ.ಪಿ ಕುಮಾರಸ್ವಾಮಿ (M.P Kumaraswamy) ಮಾಜಿ ಪ್ರಧಾನಿ ದೇವೇಗೌಡ (H.D Deve Gowda) ಅವರನ್ನು ಬುಧವಾರ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಬಿ ನಿಂಗಯ್ಯ ಅವರು ಸ್ವಯಂಪ್ರೇರಿತರಾಗಿ ನಾಮಪತ್ರ ಹಿಂಪಡೆದಿದ್ದಾರೆ. ಅವರೂ ಕೂಡ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಈ ಬಾರಿ ಮತದಾರರು ನನ್ನ ಪರವಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ (Election) ಗೆಲ್ಲುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: ರಕ್ತದಲ್ಲಿ ಬರೆದು ಕೊಡ್ತೀನಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ – ಡಿಕೆಶಿ

    ಜೆಡಿಎಸ್‍ನಲ್ಲಿ ನಿಂತು ಗೆಲ್ತೀರಾ ಎಂಬ ಬಿಜೆಪಿ (BJP) ಮುಖಂಡ ಸಿ.ಟಿ ರವಿ (C.T Ravi) ಹೇಳಿಕೆ ವಿಚಾರವಾಗಿ, ಯಾರನ್ನು ಸೋಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎಂದು ಜನ ತೀರ್ಮಾನಿಸಲಿದ್ದಾರೆ. ಚುನಾವಣೆಯ ನಂತರ ಎಲ್ಲವೂ ತಿಳಿಯಲಿದೆ ಎಂದು ಕುಟುಕಿದ್ದಾರೆ.

    ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಸಚಿವ ಸೋಮಣ್ಣ ಆಮಿಷ ಒಡ್ಡಿದ ವಿಚಾರವಾಗಿ, ಸೋಮಣ್ಣ ದೊಡ್ಡವರು. ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ ಅವರು ಈ ಬಗ್ಗೆ ಮಾತಾಡುತ್ತಾರೆ ಎಂದಿದ್ದಾರೆ.

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D Kumaraswamy) ಈಗಾಗಲೇ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ದೇವೇಗೌಡರು ಪ್ರಚಾರಕ್ಕೆ ಬರಲಿದ್ದಾರೆ. ಈ ಬಾರಿ ಮತದಾರರಲ್ಲಿ ಜೆಡಿಎಸ್ ಪರ ಒಲವಿದೆ ಎಂದಿದ್ದಾರೆ. ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ

  • ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡ್ತಾರೆ: ಸಿ.ಟಿ ರವಿ

    ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡ್ತಾರೆ: ಸಿ.ಟಿ ರವಿ

    ಚಿಕ್ಕಮಗಳೂರು: ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ಬಿಜೆಪಿಯಲ್ಲಿ ಯಾರೂ ಸಿ.ಟಿ.ರವಿಯನ್ನು ನೆಚ್ಚಿಕೊಂಡಿಲ್ಲ, ಬಿಜೆಪಿ ಸಿದ್ಧಾಂತವನ್ನು ನೆಚ್ಚಿಕೊಂಡಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಿಡಿಕಾರಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದೆ ಬಿಜೆಪಿ (BJP) ಎಂ.ಪಿ ಕುಮಾರಸ್ವಾಮಿ (MP Kumaraswamy) ಅವರಿಗೆ 5 ಬಾರಿ ಟಿಕೆಟ್ ನೀಡಿದೆ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗುವುದರಿಂದ ಈ ರೀತಿ ಹೇಳುತ್ತಾರೆ. ಪಾರ್ಟಿ ಟಿಕೆಟ್ ವಿಥ್ ಡ್ರಾ ಮಾಡುವುದು ಮಾತ್ರ ಕೆಲಸವಲ್ಲ, ಪಾರ್ಟಿ ತುಂಬಬೇಕು ಎಂದರು.

    ಕುಮಾರಸ್ವಾಮಿ, ಜೀವರಾಜ್, ನನ್ನನ್ನು ಸೈದ್ಧಾಂತಿಕ ಬದ್ಧತೆ ಕಾರಣಕ್ಕೆ ಗೆಲ್ಲಿಸಿದರು. ಮೂಡಿಗೆರೆಯಲ್ಲಿ ಬಿಜೆಪಿ ಬಲವಾಗಿದೆ ಗೆಲ್ಲಿಸುತ್ತೇವೆ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ನಿನ್ನೆ ನನ್ನ ಮನೆಗೆ ಬಂದು ಹೊಗಳಿ ಹೋಗಿದ್ದರು. ಈಗ ಹೀಗೆ ಮಾತನಾಡ್ತಾರೆ. ನಾಳೆ ಏನ್ ಮಾತನಾಡ್ತಾರೆ ನೋಡೋಣ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ

    ಬಿಜೆಪಿಯು ಸಿದ್ಧಾಂತಕ್ಕೆ ಬದ್ಧತೆ ಇಟ್ಟುಕೊಂಡಿರುವವರು ಯಾರೂ ಕೆಟ್ಟಿಲ್ಲ. ಸಿದ್ಧಾಂತವನ್ನು ಸ್ವಾರ್ಥ ಹಾಗೂ ಸಂದರ್ಭಕ್ಕೆ ಬಳಸಿಕೊಂಡಿರುವವರು ಮಾತ್ರ ಕೆಟ್ಟಿದ್ದಾರೆ. ಸಿದ್ಧಾಂತಕ್ಕೆ ಬದ್ಧತೆ ಇಟ್ಟುಕೊಂಡಿರುವವರು ಕೆಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಹುಕಾಲ ಮುಗಿದ ಬಳಿಕ ಬಿ ಫಾರಂ ವಿತರಿಸಿದ ಡಿಕೆಶಿ

  • ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?

    ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?

    ಚಿಕ್ಕಮಗಳೂರು: ಅದ್ಯಾಕೋ ಏನೋ.. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ (MP Kumaraswamy) ಗೆ ಟೈಮೇ ಸರಿ ಇಲ್ಲ ಅನ್ಸತ್ತೆ. ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಟಿಕೆಟ್ ಕೊಡಬೇಕು ಅಂತ ಒಂದು ತಂಡ ಬೀದಿಗಳಿದು ಹೋರಾಡಿದರೆ, ಅವರಿಗೆ ಟಿಕೆಟ್ ಬೇಡವೇ ಬೇಡ ಅಂತ ಮತ್ತೊಂದು ತಂಡ ಕೂಡ ರಸ್ತೆಗಿಳಿದು ಹೋರಾಡುತ್ತಿದೆ. ಇದೇ ಹೊತ್ತಿನಲ್ಲಿ ಚೆಕ್‍ಬೌನ್ಸ್ (Checkbounce) ಕೇಸೊಂದು ಕುಮಾರಸ್ವಾಮಿಗೆ ಕೊರಳಿಗೆ ಉರುಳಾಗಿ ಬಂಧನವಾಗುತ್ತಾರಾ ಎಂಬ ಸುದ್ದಿಯೊಂದು ಮೂಡಿಗೆರೆ ತಾಲೂಕಿನಾದ್ಯಂತ ಸಂಚಲನ ಹುಟ್ಟಿಸಿದ್ದು ಎಂ.ಎಲ್.ಎ ಅರೆಸ್ಟ್ ಆಗ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಕುಮಾರಸ್ವಾಮಿಯ ಪರ-ವಿರೋಧ ಗುಂಪು ಒಂದು ದಿನ ಶಾಸಕ ಸಿ.ಟಿ.ರವಿ ಮನೆಗೂ ಬರ್ತಾರೆ, ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮನೆಗೂ ಹೋಗ್ತಾರೆ. ಮೂಡಿಗೆರೆಯಲ್ಲೂ ಅಪ ಪ್ರಚಾರ ಮಾಡುತ್ತಿದ್ದರು. ಈ ಮಧ್ಯೆ ಚೆಕ್‍ಬೌನ್ಸ್ ಕೇಸ್‍ನಿಂದ ಕುಮಾರಸ್ವಾಮಿಗೆ ಬಂಧನ ಭೀತಿ ಕೂಡ ಎದುರಾಗಿದೆ.

    ಈಗಾಗಲೇ ವಿಧಾನಸಭಾ ಚುನಾವಣೆ (Vidhanasabha Election) ಗೆ ಚುನಾವಣಾ ಆಯೋಗ ಕೂಡ ಕಹಳೆ ಊದಿದೆ. ರಾಜಕೀಯ ಪಕ್ಷಗಳು ಗೆಲ್ಲೋ ಕುದುರೆ ಬಾಲಕ್ಕೆ ಬಾಜಿ ಕಟ್ಟಲು ಮುಂದಾಗಿವೆ. ಇನ್ನೇನು ಒಂದೆರಡು ವಾರದಲ್ಲಿ ಬಿಜೆಪಿಯ ಕದನ ಕಲಿಗಳು ಕೂಡ ಅಖಾಡದಲ್ಲಿ ತೊಡೆ ತಟ್ಟಲಿದ್ದಾರೆ. ಆದರೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೂಡಿಗೆರೆಯಲ್ಲಿ ನಡೆಯುತ್ತಿರುವ ಬೆಳೆವಣಿಗೆಯಿಂದ ಹಾಲಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ಕುಮಾರಸ್ವಾಮಿ ಕೂಡ ಟೆನ್ಷನ್ ಆಗಿದ್ದಾರೆ. ಇಷ್ಟು ದಿನ ಕಾರ್ಯಕರ್ತರನ್ನ ಫೇಸ್ ಮಾಡುವ ಸವಾಲು ಎದುರಿಸುತ್ತಿದ್ದ ಕುಮಾರಸ್ವಾಮಿಗೆ ಈಗ ನ್ಯಾಯಾಲಯವನ್ನ ಎದುರಿಸುವ ಸ್ಥಿತಿ ಬಂದಿದ್ದು, ಚೆಕ್ ಬೌನ್ಸ್ ಕೇಸಲ್ಲಿ ಕುಮಾರಸ್ವಾಮಿಗೆ ಬಂಧನ ಭೀತಿ ಕೂಡ ಎದುರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಕುಮಾರಸ್ವಾಮಿ ವಿರುದ್ಧ ನಾನ್ ಬೇಲೇಬಲ್ ವಾರಂಟ್ ಜಾರಿ ಮಾಡಿರೋದು ಕುಮಾರಸ್ವಾಮಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಎಂ.ಎಲ್.ಎ. ವಿರುದ್ಧ ಎನ್.ಬಿ.ಡಬ್ಲ್ಯೂ ಆದೇಶ ಜಾರಿ ಮಾಡಿರುವ ಕೋರ್ಟ್ ಖುದ್ದು ಎಸ್‍ಪಿ ಅವರಿಗೆ ಕುಮಾರಸ್ವಾಮಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸೂಚಿಸಿದೆ. ಆದೇಶದ ಪ್ರತಿ ಎಸ್ಪಿ ಕೈಗೆ ಸಿಕ್ಕ ಕೂಡಲೇ ಕುಮಾರಸ್ವಾಮಿ ಬಂಧನವಾಗ್ತಾರೆ ಎಂಬ ಮಾತುಗಳು ಮೂಡಿಗೆರೆ ತಾಲೂಕಿನಲ್ಲಿ ಫುಲ್ ಗುಲ್ ಎದ್ದಿದೆ. ಇದನ್ನೂ ಓದಿ: ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದಿದ್ದ ಡಿಕೆಶಿ ವಿರುದ್ಧ ದೂರು

    ಶಾಸಕ ಕುಮಾರಸ್ವಾಮಿ ಸಾಲದ ರೂಪದಲ್ಲಿ ನನ್ನ ಬಳಿ ಹಣ ಪಡೆದುಕೊಂಡು ಹಣವನ್ನ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಹೂವಪ್ಪಗೌಡ ಎಂಬವರು ಜನಪ್ರತಿನಿಧಿಗಳ ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟಿನಲ್ಲಿ ಮೂರು ವರ್ಷಗಳಿಂದ ಕೇಸ್ ಕೂಡ ನಡೆಯುತ್ತಿತ್ತು. ಶಾಸಕರ ಹಣ ವಾಪಸ್ ನೀಡದ ಹಿನ್ನೆಲೆ ವಾದ-ವಿವಾದಗಳನ್ನ ಆಲಿಸಿದ ನ್ಯಾಯಾಲಯ ಒಂದು ತಿಂಗಳಲ್ಲಿ 1 ಕೋಟಿ, 38 ಲಕ್ಷದ 65 ಸಾವಿರ ಹಣ ನೀಡಬೇಕು. ಇಲ್ಲವಾದರೆ ನಾಲ್ಕು ವರ್ಷಗಳ ಸಾದ ಶಿಕ್ಷೆ ಅಂತ ತೀರ್ಪು ನೀಡಿತ್ತು. ಪ್ರಕರಣ ಸಂಬಂಧ ಕುಮಾರಸ್ವಾಮಿ ಮೇಲ್ಮನವಿ ಕೂಡ ಹೋಗಿದ್ರು. ಆದರೆ ಅಲ್ಲಿ ಸ್ಟೇ ಸಿಕ್ಕಿಲ್ಲ. ಕನ್ವಿಕ್ಷನ್‍ಗೂ ಸ್ಟೇ ಸಿಕ್ಕಿಲ್ಲ. ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಗುಡುವು ಮುಗಿದ ಹಿನ್ನೆಲೆ ನ್ಯಾಯಾಲಯ ಕುಮಾರಸ್ವಾಮಿ ಬಂಧನಕ್ಕೆ ನಾನ್ ಬೇಲೇಬಲ್ ವಾರಂಟ್ ಇಶ್ಯು ಮಾಡಿದೆ. ಆದೇಶದ ಪ್ರತಿ ಚಿಕ್ಕಮಗಳೂರು ಎಸ್‍ಪಿ ಕೈಸೇರಿದ ಕೂಡಲೇ ಎಸ್‍ಪಿ ಕುಮಾರಸ್ವಾಮಿಯನ್ನ ಕೋರ್ಟ್‍ಗೆ ಹಾಜರುಪಡಿಸಬೇಕಿದೆ.

  • ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗ್ತಿದ್ದು, ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ: ಸಿಟಿ ರವಿ

    ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗ್ತಿದ್ದು, ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ: ಸಿಟಿ ರವಿ

    ನವದೆಹಲಿ: ಹಿಂದುಗಳ ಗುರುತಿನಲ್ಲಿ ಸ್ಫೋಟ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೇ ಆಧರಿಸಿ ಕೆಲವು ರಾಜಕಾರಣಿಗಳು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದು ಬಿಟ್ಟಿತ್ತು. ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದರು.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವರು ನಮ್ಮ ಕಡೆಗೆ ಇದ್ದಾನೆ. ಹಿಂದೆಯೂ ಹಿಂದೂಗಳ ವಿರುದ್ಧ ಕ್ರಿಶ್ಚಿಯನ್‍ರನ್ನ ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಈಗ ಕೊಯಮತ್ತೂರು ಬಳಿಕ ಕರ್ನಾಟಕದಲ್ಲಿ ಸ್ಫೋಟ ವಿಫಲವಾಗಿದೆ ಎಂದರು.

    ಹಿಂದುಗಳು ಗುರುತಿನಲ್ಲಿ ಸ್ಫೋಟ ನಡೆಸಲು ಪ್ಲಾನ್ ಮಾಡಿದ್ದಾರೆ. ಇದನ್ನೇ ಆಧರಿಸಿ ಕೆಲವು ರಾಜಕಾರಣಿಗಳು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದು ಬಿಟ್ಟಿತ್ತು. ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

    ನಾನು ಸಿಎಂ ಜೊತೆಗೆ ವೈಯಕ್ತಿಕವಾಗಿ ಮಾತನಾಡಿ ಎನ್‍ಐಎಗೆ ನೀಡಲು ಆಗ್ರಹಿಸಿದ್ದೇನೆ. ಇದನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿಂದೆ ಜಿಹಾದಿ ಮಾನಸಿಕತೆ ಇದೆ. ದೊಡ್ಡ ಷಡ್ಯಂತ್ರ ನಡೆದಿರುವ ಸಾಧ್ಯತೆ ಇದೆ. ಸ್ಫೋಟಕ್ಕೆ ಖಚ್ಚಾ ವಸ್ತುಗಳನ್ನು ಯಾರು ನೀಡುತ್ತಿದ್ದಾರೆ ಎನ್ನುವುದು ಪತ್ತೆಯಾಗಬೇಕಿದೆ ಎಂದರು. ಇದನ್ನೂ ಓದಿ: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಚುನಾವಣೆಯ ಬಗ್ಗೆ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಗುಜರಾತ್‌ (Gujrat) ನಲ್ಲಿ ಓಡಾಡುತ್ತಿದ್ದೇನೆ. ಗುಜರಾತ್ ನಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ಮೋದಿ ನಾಯಕತ್ವ ಗುಜರಾತ್ ಮೇಲೆ ಅಗಾಧ ಪ್ರಭಾವ ಬೀರಿದೆ. ಈ ಬಾರಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ನರೇಂದ್ರ ದಾಖಲೆಯನ್ನು ಭೂಪೇಂದ್ರ ಮುರಿಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಆಪ್ ಸೌಂಡ್ ಜಾಸ್ತಿ ಗ್ರೌಂಡ್ ನಲ್ಲಿ ಬಿಗ್ ಜಿರೋ. ಗಂಟು ಮೂಟೆ ಕಟ್ಟು ಕೊಂಡು ಹೋಗಲಿದೆ. ಅದರ ಮುಖವಾಡ ಕಳಚಿ ಬಿದ್ದಿದೆ. ಕಾಂಗ್ರೆಸ್ (Congress) ಯಾರ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತಿದೆ ಗೊತ್ತಿಲ್ಲ. ಅದೊಂದು ಅಳಿದುಳಿದ ಪಳಿಯುಳಿಕೆಯಾಗಿದೆ ಎಂದು ಹೇಳಿದರು.

    ಇದೇ ವೇಳೆ ಮತದಾರರ ಮಾಹಿತಿಗೆ ಕನ್ನ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಆರೋಪ ಮಾಡಲು ಇದೆ. ಕಾಂಗ್ರೆಸ್‍ಗಿಂತ ಮುಂಚೆ ಬಿಜೆಪಿ ದೂರು ನೀಡಿದೆ. ಚಿಲುಮೆಗೆ ಅವಕಾಶ ನೀಡಿದ್ದೆ ಸಿದ್ದರಾಮಯ್ಯ ಸರ್ಕಾರ ಎನ್ನುವ ಆರೋಪ ಇದೆ. ಈ ಬಗ್ಗೆ ತನಿಖೆಯಾಗಲಿ ಬಿಡಿ. ಆಯೋಗ ಜನರಿಗೂ ಮತದಾರರ ಪಟ್ಟಿ ಅಪ್ಡೇಟ್ ಮಾಡಲು ಅನುಮತಿ ನೀಡಿದೆ. ಸಂಘ ಸಂಸ್ಥೆಗಳಿಗೂ ಈ ಅನುಮತಿ ನೀಡಿದೆ. ಕರಡು ಪಟ್ಟಿಯಲ್ಲಿ ನಿರ್ದಿಷ್ಟವಾಗಿ ಹೆಸರು ತಪ್ಪಿದ್ರೆ ದೂರು ನೀಡಬಹುದು. ಬಿಎಲ್‍ಓ ಇದಕ್ಕೆ ಉತ್ತರದಾಯಿ. ಬಿಎಲ್‍ಓಗೆ ಅಂತಿಮ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರ ಇದೆ ಎಂದರು.

    ಮೂಡಿಗೇರೆ ಶಾಸಕ ಕುಮಾರಸ್ವಾಮಿ (MP Kumaraswamy) ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟಕರ. ನಾನು ಅವರ ಜೊತೆಗೆ ಮಾತುಕತೆ ಮಾತನಾಡಿದ್ದೇನೆ. ಕಾರಣ ಏನು ಎನ್ನುವುದು ತನಿಖೆ ಬಳಿಕ ಗೊತ್ತಾಗಬೇಕು. ನನ್ನ ಹಾಗೇ ಅವರು ಜನ ಪ್ರತಿನಿಧಿ, ನಾನು ಹಲ್ಲೆಯನ್ನು ಸಮರ್ಥಿಸುವುದಿಲ್ಲ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ನಿನ್ನೆ ರಾತ್ರಿ ಬಟ್ಟೆ ಹರಿದ ಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (M.P Kumaraswamy) ತಮ್ಮ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆದಿದೆ, ಕಳ್ಳ ಹುಚ್ಚು ನಾಯಿಯಂತೆ ನನ್ನನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ್ರು ಎಂದು ಆರೋಪಿಸಿದ್ರು. ಆದ್ರೆ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಪೊಲೀಸರು ಘಟನಾ ಸ್ಥಳದಿಂದ ಶಾಸಕರನ್ನು ಕರೆದೊಯ್ಯುವ ವೇಳೆ, ಅವರ ಮೈಮೇಲಿನ ಬಟ್ಟೆಗಳು ಹರಿದ ಸ್ಥಿತಿಯಲ್ಲಿ ಕಂಡುಬಂದಿರಲಿಲ್ಲ. ಈ ಬಗ್ಗೆ ಇಂದು ಸ್ಪಷ್ಟನೆ ನೀಡಿದ ಎಂ.ಪಿ ಕುಮಾರಸ್ವಾಮಿ, ಆಗ ವೈಟ್ ಬನಿಯನ್ ಇತ್ತು ಅದಕ್ಕೆ ಹರಿದಿದ್ದು ಸರಿಯಾಗಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ ಅಂದಿದ್ದಾರೆ. ಆದ್ರೆ, ಶರ್ಟ್ ಹರಿದಿರೋ ವೀಡಿಯೋದಲ್ಲಿಯೂ ಅವರು ಬನಿಯನ್ ಧರಿಸಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದ್ರೂ, ಎಂಪಿ ಕುಮಾರಸ್ವಾಮಿ, ನನ್ನನ್ನು ಚಪ್ಪಲಿಯಿಂದ ಹೊಡೆದ್ರು. ಕಳ್ಳ ಹುಚ್ಚುನಾಯಿಯಂತೆ ನನ್ನನ್ನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ್ರು. ಇದು ಆನೆ ದಾಳಿಯಲ್ಲ. ರಾಜಕೀಯ ದಾಳಿ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ನನಗೆ ಚಪ್ಪಲಿಯಲ್ಲಿ ಹೊಡೆದರು, ಎಲ್ಲರ ಕೈನಲ್ಲೂ ದೊಣ್ಣೆ ಇತ್ತು ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿದರು ನಾನೇ ಓಡಿ ಬಂದು ಕಾರಲ್ಲಿ ಕೂತೆ, ಜೀಪಿನ ಮೇಲೆ ಕಲ್ಲು ಹೊಡೆದರು. ಇದು ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿ. ಬನಿಯನ್ ಇತ್ತು ಬಟ್ಟೆ ಹರಿದದ್ದು ಕಾಣಲಿಲ್ಲ. ಬನಿಯನ್ ತೆಗೆದರೆ ಹರಿದದ್ದು ಕಾಣುತ್ತೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ರೆ? ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ. ರಾಜಕೀಯವಾಗಿ ಚುನಾವಣೆಗೆ ನಿಲ್ಲಬಾರದು ಅಂತ ವ್ಯವಸ್ಥಿತ ಹಲ್ಲೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ವರಿಷ್ಠರಿಗೆ ದೂರು ಕೊಡೋದಾಗಿ ಹೇಳಿದ್ದಾರೆ. ಆದ್ರೆ ತಮ್ಮ ಮೇಲಿನ ದಾಳಿ ಬಗ್ಗೆ ಎಂ.ಪಿ ಕುಮಾರಸ್ವಾಮಿ ಪೊಲೀಸರಿಗೆ ದೂರು ಕೂಡ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಕಾಫಿನಾಡಿನ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವಕನ ವಿರುದ್ಧ ಯುವತಿ ದೂರು

    Live Tv
    [brid partner=56869869 player=32851 video=960834 autoplay=true]

  • ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ (Elephant Attack) ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಹಿಳೆಯ ಶವವಿಟ್ಟು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೃತದೇಹ ನೋಡಲು ಬಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.

    ಜನಪ್ರತಿನಿಧಿ ಎಂಬುದನ್ನೂ ನೋಡದೆ, ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹಿಗ್ಗಾಮುಗ್ಗ ಥಳಿಸಿ ಬಟ್ಟೆಯನ್ನೂ ಹರಿದುಹಾಕಿದ್ದಾರೆ. ಬಳಿಕ ಹರಿದ ಬಟ್ಟೆಯಲ್ಲೇ ಹೇಳಿಕೆ ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು ಮಾಡಿಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು. ನನ್ನನ್ನು ರಕ್ಷಿಸುವಲ್ಲಿ ಪೊಲೀಸರು (Police) ವಿಫಲರಾಗಿದ್ದಾರೆ. ನಾನು ಅಲ್ಲೇ ಇರ್ತಿದ್ದೆ ಪೊಲೀಸರು ಮಿಸ್‌ಗೈಡ್ ಮಾಡಿ ಹೊರಗೆ ಕಳುಹಿಸಿದ್ರು. ಸಾರ್ವಜನಿಕರ ಸೇವೆ ಮಾಡಲು ಇರೋರು ನಾವು. ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ. ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BJP ಎಸ್ಟಿ ಸಮಾವೇಶಕ್ಕೆ ತೆರಳಿದ್ದ 26ರ ಯುವಕ ನೀರುಪಾಲು

    ಏನಿದು ಘಟನೆ?
    ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಮಹಿಳೆ ಶೋಭಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು, ಕಾಫಿ ಬೆಳೆಗಾರರು, ರೈತ ಮುಖಂಡರು (Farmers) ಸ್ಥಳದಲ್ಲಿ ಜಮಾಯಿಸಿದ್ದರು. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್‌ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್‌ ಫ್ಯಾನ್ಸ್‌

    ಈ ವೇಳೆ ಮೃತ ಮಹಿಳೆಯ ಶವ ಮುಂದಿಟ್ಟುಕೊಂಡು ಸರ್ಕಾರ (Government of Karnataka) ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಕಾಡಾನೆ ದಾಳಿಗಳಿಗೆ ರಾಜ್ಯ ಸರ್ಕಾರ, ಅರಣ್ಯ ಇಲಾಖೆಯೇ (Forest Department) ಹೊಣೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟ ಹಿಡಿದರು.

    ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಜನರ ಆಕ್ರೋಶ ಕಡಿಮೆಯಾಗಲಿಲ್ಲ. ಘಟನೆ ನಡೆದು ಸುಮಾರು 2 ಗಂಟೆ ಬಳಿಕ ಸ್ಥಳಕ್ಕೆ ಚಿಕ್ಕಮಗಳೂರು ಅರಣ್ಯ ವಿಭಾಗದ ಡಿಎಫ್‌ಒ ಕ್ರಾಂತಿ ತೆರಳಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಚೆಕ್ ಬೌನ್ಸ್ ಪ್ರಕರಣ – ಶಾಸಕ ಎಂ.ಪಿ ಕುಮಾರಸ್ವಾಮಿಗೆ ಜಾಮೀನು ರಹಿತ ವಾರೆಂಟ್

    ಚೆಕ್ ಬೌನ್ಸ್ ಪ್ರಕರಣ – ಶಾಸಕ ಎಂ.ಪಿ ಕುಮಾರಸ್ವಾಮಿಗೆ ಜಾಮೀನು ರಹಿತ ವಾರೆಂಟ್

    ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (M.P. Kumaraswamy) ವಿರುದ್ಧ ಜಾಮೀನು (Bail) ರಹಿತ ವಾರೆಂಟ್ (Warrant) ಜಾರಿ ಆಗಿದೆ.

    ಚೆಕ್ ಬೌನ್ಸ್ ಪ್ರಕರಣದ (Check Bounce Case) ವಿಚಾರಣೆಗೆ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದ ಕುಮಾರಸ್ವಾಮಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ 42ನೇ ಎಸಿಎಂಎಂ ಕೋರ್ಟ್ (ACMM Court) ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದನ್ನೂ ಓದಿ: CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಈ ಬಗ್ಗೆ ಕೋರ್ಟ್‍ಗೆ ಪತ್ರಿಕಾ ವರದಿಯನ್ನು ದೂರುದಾರ ಹೂವಪ್ಪಗೌಡ ಸಲ್ಲಿಸಿದ್ದರು. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಕೋರ್ಟ್ ನಕಾರ ಮಾಡಿದೆ. ಅಕ್ಟೋಬರ್ 10ರಂದು ಎಂ.ಪಿ. ಕುಮಾರಸ್ವಾಮಿ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    Live Tv
    [brid partner=56869869 player=32851 video=960834 autoplay=true]

  • ಏಳು ದಶಕದ ಹಳ್ಳದ ಬದುಕಿಗೆ ಮುಕ್ತಿ – ಪಬ್ಲಿಕ್ ಟಿವಿಗೆ ಋಣಿ ಎಂದ ಮಲೆನಾಡಿಗರು

    ಏಳು ದಶಕದ ಹಳ್ಳದ ಬದುಕಿಗೆ ಮುಕ್ತಿ – ಪಬ್ಲಿಕ್ ಟಿವಿಗೆ ಋಣಿ ಎಂದ ಮಲೆನಾಡಿಗರು

    ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದಾಗಿನಿಂದಲೂ ಓಡಾಡೋದಕ್ಕೆ ರಸ್ತೆ ಇಲ್ಲದೆ ಹಳ್ಳದಲ್ಲೇ ಓಡಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಪಬ್ಲಿಕ್ ಟಿವಿಯ ವರದಿಯಿಂದ ಸೇತುವೆ ನಿರ್ಮಾಣವಾಗುತ್ತಿದ್ದ ಹಿನ್ನೆಲೆ ಮಲೆನಾಡಿಗರು ವಾಹಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಸೇರಿದಂತೆ ದುರ್ಗಾ, ಬೆಟ್ಟದಹಳ್ಳಿ, ಗಡಬನಹಳ್ಳಿ, ನರೂಡಿ ಗ್ರಾಮಕ್ಕೆ ಸೂಕ್ತವಾದ ರಸ್ತೆ ಇರಲಿಲ್ಲ. ರಸ್ತೆ ಇದ್ದರೂ ಅರ್ಧ-ಒಂದು ಕಿ.ಮೀ. ದೂರದ ರಾಜ್ಯ ಹೆದ್ದಾರಿ ರಸ್ತೆಗೆ ಸುಮಾರು ಐದಾರು ಕಿ.ಮೀ. ಸುತ್ತಿಬಳಸಿ ಬರಬೇಕಿತ್ತು. ಹಾಗಾಗಿ, ಈ ಗ್ರಾಮಗಳ ಜನರು ಕಣತಿ ಸಮೀಪದ ಆನೆಬಿದ್ದ ಹಳ್ಳವನ್ನೇ ಆಶ್ರಯಿಸಿಕೊಂಡಿದ್ದರು. ಮಳೆಗಾಲದಲ್ಲಿ ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಪರದಾಡುತ್ತಿದ್ದರು. ಮಳೆಗಾಲದಲ್ಲಿ ಮಕ್ಕಳು ತಿಂಗಳುಗಟ್ಟಲೇ ಶಾಲೆಗೆ ಹೋಗುತ್ತಿರಲಿಲ್ಲ. ಮಳೆಗಾದಲ್ಲಿ ಹಳ್ಳ ಕಡಿಮೆ ಇದ್ದರೆ ದೊಡ್ಡವರು ಬರುವವರೆಗೂ ಮಕ್ಕಳು ದಡದಲ್ಲಿ ನಿಂತು ಕಾಯುತ್ತಿದ್ದರು. ಇದನ್ನೂ ಓದಿ: ‘ತವಾ ಮಸಾಲಾ ಬೆಂಡೆಕಾಯಿ’ ಮಾಡುವ ಸೂಪರ್ ರೆಸಿಪಿ 

    ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಇದ್ದರೆ ಮಕ್ಕಳೇ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಹಳ್ಳ ದಾಟುತ್ತಿದ್ದರು. ಕೆಲ ಯುವಕರು ನೀರಿನ ಅಬ್ಬರ ಹೆಚ್ಚಾಗಿದ್ದಾಗಲೂ ದಾಟಲು ಹೋಗಿ ಕೊಚ್ಚಿ ಹೋಗಿ ಮರದ ಟೊಂಗೆ, ಕಲ್ಲು ಹಿಡಿದು ಬದುಕಿದ್ದಾರೆ. ಕೆಲವರು ಈಜಿ ದಡ ಸೇರಿದ್ದಾರೆ. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಎನ್ನುವಂತಿಲ್ಲ. ಹಳ್ಳಿಯಲ್ಲಿ ಯಾರದ್ದಾದರೂ ಆರೋಗ್ಯ ಹದಗೆಟ್ಟರೆ ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡು ಬರಬೇಕಿತ್ತು. ಇಲ್ಲಿನ ಜನ ಕಳೆದ ಎರಡು, ಮೂರು ದಶಕಗಳಿಂದ ಆನೆಬಿದ್ದ ಹಳ್ಳಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಹಾಗೂ ಜನನಾಯಕರು ಹಳ್ಳಿಗರಿಗೆ ಅಂಗೈಯಲ್ಲಿ ಆಕಾಶ ತೋರಿಸಿದ್ದೇ ಹೆಚ್ಚು. ಇದನ್ನೂ ಓದಿ: ದಿನಗೂಲಿ ಮಕ್ಕಳಿಗಾಗಿ ಬಿಬಿಎಂಪಿಯಿಂದ ರಾತ್ರಿ ಸ್ಕೂಲ್

    ಆಧುನಿಕ ಪ್ರಪಂಚದಲ್ಲೂ ಇಲ್ಲಿನ ಜನ ಅನಾಗರಿಕರಂತೆ ಬದುಕುತ್ತಿದ್ದರು. ಈ ಗ್ರಾಮಗಳ ಸಮಸ್ಯೆಗಳ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಮಾಡಿತ್ತು. ಪಬ್ಲಿಕ್ ಟಿವಿಯ ಸುದ್ದಿ ನೋಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಳ್ಳಿಗೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದೀಗ ಸರ್ಕಾರದಿಂದ 90 ಲಕ್ಷ ಹಣ ಬಿಡುಗಡೆ ಮಾಡಿಸಿ ಕೆಲಸ ಕೂಡ ಆರಂಭವಾಗಿದೆ. ಈಗಾಗಲೇ ಸುಮಾರು ಐದಾರು ಅಡಿಯಷ್ಟು ಪಿಲ್ಲರ್ ನಿರ್ಮಾಣವಾಗಿದ್ದು ಒಂದೂವರೆ ಅಥವಾ ಎರಡು ತಿಂಗಳಲ್ಲಿ ಈ ಗ್ರಾಮಗಳಿಗೆ ಸೇತುವೆ ನಿರ್ಮಾಣವಾಗಲಿದೆ. ಕಳೆದ ಏಳೆಂಟು ದಶಕದ ಹಳ್ಳದ ಬದುಕಿಗೆ ಮುಕ್ತಿ ಸಿಗಲಿದೆ. ಹಾಗಾಗಿ, ಮಲೆನಾಡಿಗರು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಪಬ್ಲಿಕ್ ಟಿವಿಗೆ ನಾವು ಋಣಿ ಎಂದಿದ್ದಾರೆ.

  • ಎಂಎಲ್‍ಎ ಉದ್ಘಾಟನೆ ಮಾಡೋವರೆಗೂ ರೋಡ್ ಬಂದ್ ಮಾಡಿದ ಬಿಜೆಪಿ ಸದಸ್ಯರು

    ಎಂಎಲ್‍ಎ ಉದ್ಘಾಟನೆ ಮಾಡೋವರೆಗೂ ರೋಡ್ ಬಂದ್ ಮಾಡಿದ ಬಿಜೆಪಿ ಸದಸ್ಯರು

    ಚಿಕ್ಕಮಗಳೂರು: ಶಾಸಕರೇ ಬಂದು ಉದ್ಘಾಟನೆ ಮಾಡಬೇಕು ಎಂದು ಮೂರು ಕೋಟಿ ರೂ. ವೆಚ್ಚದ ನೂತನ ಕಾಂಕ್ರೀಟ್ ರಸ್ತೆಗೆ ಸ್ಥಳೀಯ ಬಿಜೆಪಿ ಸದಸ್ಯರು ಬೇಲಿ ಹಾಕಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮಾವಿನಹೊಲ, ಮಣ್ಣಿನಪಾಲ್ ಗ್ರಾಮದಲ್ಲಿ ನಡೆದಿದೆ.

    ಕಳಸ ತಾಲೂಕಿನ ಮಾವಿನಹೊಲ ಹಾಗೂ ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶ. ಇಲ್ಲಿನ ರಸ್ತೆ ತುಂಬಾ ಹಾಳಾಗಿತ್ತು ಎಂದು 2018ರಲ್ಲಿ ರೇವಣ್ಣ ಲೋಕೋಪಯೋಗಿ ಸಚಿವ ಆದ ಸಂದರ್ಭದಲ್ಲಿ 3.20 ಕೋಟಿ ವೆಚ್ಚದಲ್ಲಿ 4 ಕಿ.ಮೀ ಕಾಂಕ್ರೀಟ್ ರಸ್ತೆ ಮಂಜೂರಾಗಿತ್ತು. ಅದಾದ ನಂತರ ರಸ್ತೆಯೂ ನಿರ್ಮಾಣವಾಗಿದೆ.

    ಈ ರಸ್ತೆ ಮುಗಿದು ಮುಗಿದು ಸುಮಾರು ತಿಂಗಳೇ ಕಳೆದಿದೆ. ಆದರೆ, ಆ ರಸ್ತೆ ಉದ್ಘಾಟನೆಗೆ ಶಾಸಕ ಎಂ.ಪಿ. ಕುಮಾರಸ್ವಾಮಿಯೇ ಬರಬೇಕು ಎಂದು ಇಲ್ಲಿನ ಬಿಜೆಪಿ ಸದಸ್ಯರು ರಸ್ತೆಗೆ ಬೇಲಿ ಹಾಕಿದ್ದಾರೆ. ರಸ್ತೆಗೆ ತಂತಿ ಬೇಲಿ ಹಾಕಿರುವ ಸದಸ್ಯರು ಜೆಸಿಬಿ ತರಿಸಿ ರಸ್ತೆ ಮೇಲೆ ಬಂಡೆಯಂತಹ ದೊಡ್ಡ-ದೊಡ್ಡ ಕಲ್ಲುಗಳನ್ನು ನಿಲ್ಲಿಸಿದ್ದಾರೆ. ರಸ್ತೆಯ ಆರಂಭದಲ್ಲಿ ಪೊಲೀಸ್ ಇಲಾಖೆಯ ಬ್ಯಾರೀಕೇಡ್ ಇಟ್ಟು ಬೀಗ ಹಾಕಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆಗಳು ಬಂದಾಗ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು: ಹೊರಟ್ಟಿ

    ಆದರೆ ಈ ರಸ್ತೆಯು ಬಹುಪಯೋಗಿ ಮಾರ್ಗವಾಗಿದ್ದು, ಈ ರಸ್ತೆಯ ಮೇಲೆ ಸ್ಥಳೀಯರು, ಪ್ರವಾಸಿಗರು ಅವಲಂಬಿರಾಗಿದ್ದಾರೆ. ಈ ಮಾರ್ಗ ಬಸರೀಕಟ್ಟೆ ಹಾಗೂ ಬಾಳೆಹೊನ್ನೂರಿಗೂ ಸಂಪರ್ಕ ಕಲ್ಪಿಸಿದೆ. ಈ ಮಾರ್ಗ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಜೊತೆಗೆ ಈ ಮಾರ್ಗದಿಂದ ಶಾರ್ಟ್‍ಕಟ್ ಎಂದು ಪ್ರವಾಸಿಗರು ಹೆಚ್ಚಾಗಿ ಓಡಾಡುತ್ತಾರೆ. ಇದನ್ನೂ ಓದಿ: ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ಏನೂ ಪ್ರಯೋಜನವಿಲ್ಲ: ಬಿಜೆಪಿ

    ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೂ ಈ ಮಾರ್ಗ ಹತ್ತಿರದ ದಾರಿಯಾಗಿದೆ. ಆದರೆ, ನಿರ್ಮಾಣವಾಗಿ ಸಂಚಾರಕ್ಕೆ ಸಿದ್ಧವಾಗಿರುವ ಈ ರಸ್ತೆ ಉದ್ಘಾಟನೆಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿಯೇ ಬರಬೇಕು ಎಂದು ಕಾದು ರಸ್ತೆಗೆ ಬೇಲಿ ಹಾಕಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಗೆ ಹಣ ಕೊಟ್ಟಿರುವುದು ಸರ್ಕಾರವೋ ಅಥವಾ ಶಾಸಕರೋ ಎಂದು ಸ್ಥಳೀಯರು ಬೇಲಿ ಹಾಕಿರುವರ ವಿರುದ್ಧ ಕಿಡಿಕಾರಿದ್ದಾರೆ.

  • ಯಾವನಿಗೂ ಕ್ಷಮೆ ಕೇಳಲ್ಲ, ಜಾಗ ಖಾಲಿ ಮಾಡಬೇಕಷ್ಟೆ: ಎಂ.ಪಿ.ಕುಮಾರಸ್ವಾಮಿ

    ಯಾವನಿಗೂ ಕ್ಷಮೆ ಕೇಳಲ್ಲ, ಜಾಗ ಖಾಲಿ ಮಾಡಬೇಕಷ್ಟೆ: ಎಂ.ಪಿ.ಕುಮಾರಸ್ವಾಮಿ

    ಚಿಕ್ಕಮಗಳೂರು: ಯಾರ್ರೀ ಐಜಿ. ಐಜಿ ದೊಡ್ಡವನು ಎಂದು ನಾನು ಒಪ್ಪುವುದಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ವಿರುದ್ಧ ಆಕ್ರೋಶ ಹೊರಹಾಕಿದರು.

    ಶಾಸಕ ಕುಮಾರಸ್ವಾಮಿ, ಪಿಎಸ್‍ಐಗೆ ಫೋನ್ ಮಾಡಿ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆ ಬಳಿಕ ಮಾಧ್ಯಮದ ಜೊತೆ ಅವರು ಮಾತನಾಡಿದರು. ಯಾರ್ರೀ ಐಜಿ? ಐಜಿ ಸೀಮೆಗಿಲ್ಲದವರಾ? ಐಜಿ ದೊಡ್ಡ ವ್ಯಕ್ತಿ ಎಂದು ನಾನು ಒಪ್ಪುವುದಿಲ್ಲ. ಐಜಿಗೆ ನನ್ನ ಕ್ಷೇತ್ರಕ್ಕೆ ಬಲವಂತ ಮಾಡುವಂತಹಾ ಹಠ ಏಕೆ ಎಂದು ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೈಲಿಗೆ ಹೋಗಿಬಂದವ್ರಿಂದ ನೀತಿ ಪಾಠ ಕೇಳುವ ದರ್ದು ಬಿಜೆಪಿಗಿಲ್ಲ: ಕಾರಜೋಳ

    JDS to counter Congress' Mekedatu rally, to launch 'Jaladhaare' rally from  Jan 26

    ಐಜಿ ದುಡ್ಡು ತಗೊಂಡು ಅವನನ್ನು ಮಲ್ಲಂದೂರು ಠಾಣೆಗೆ ಹಾಕಿರಬಹುದು. ಅದು ಅವನ ಬಾಯಲ್ಲೇ ಬಂದಿದೆ. ಐಜಿಗೆ 50 ಸಾವಿರ ರೂ. ನೀಡಬೇಕು ಎಂದು ಹಲವರ ಬಾಯಿಂದಲೇ ಬಂದಿದೆ. ಯಾವ್ಯಾವ ಪೊಲೀಸರು ಯಾವ್ಯಾವ ಬಾರಲ್ಲಿ ಎಷ್ಟು ಹಣ ವಸೂಲಿ ಮಾಡುತ್ತಾರೆ ಎಂದು ಗೊತ್ತು. ಪೊಲೀಸರ ಬಣ್ಣ ಬಯಲು ಮಾಡ್ತೀನಿ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

    ನಾನು ಆವಾಜ್ ಹಾಕಿರೋದು ನಿಜ. ಯಾವನಿಗೂ ಕ್ಷಮೆ ಕೇಳಲ್ಲ. ಜಾಗ ಖಾಲಿ ಮಾಡಬೇಕಷ್ಟೆ. ಆತ ನನ್ನ ಅನುಮತಿ ಇಲ್ಲದೆ ನನ್ನ ಕ್ಷೇತ್ರಕ್ಕೆ ಬಂದಿದ್ದಾನೆ. ಇದು ಚುನಾವಣೆ ವರ್ಷ. ರಾಜ್ಯದ ಎಲ್ಲ ಶಾಸಕರು ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುತ್ತಾರೆ. ನೀನು ಬೇಡ, ಬರಬೇಡ ಎಂದಿದ್ದೆ. ಐಜಿ ಹೇಳಿದ್ದಾರೆ ಎಂದು ರಾತ್ರಿ ಕದ್ದು ಚಾರ್ಜ್ ತಗೆದುಕೊಂಡಿದ್ದಾನೆ. ಏಕೆ ಬಂದಿದ್ದೀಯಾ ಹೋಗು ಎಂದಿದ್ದಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು ಎಂದು ವಿವರಿಸಿದರು.

    ನಾನು ಕ್ರಿಮಿನಲ್ ಅಲ್ಲ. ಅವನು ಕ್ರಿಮಿನಲ್ ಅಲ್ಲ. ನನ್ನ ಮೊಬೈಲ್ ಟ್ರ್ಯಾಪ್ ಮಾಡಿದ್ದಾನೆ. ಅವನೇ ಕ್ರಿಮಿನಲ್. ಈ ಕುರಿತು ಸದನ ಸಮಿತಿಯಲ್ಲಿ ಪ್ರಕರಣ ದಾಖಲಿಸುತ್ತೇನೆ ತನಿಖೆಯಾಗಲಿ. ಭ್ರಷ್ಟಾಚಾರ ಆಗುತ್ತೆ ಎಂದು ನಾನು ಯಾವುದೇ ಪೊಲೀಸರ ಬಳಿ ಅರ್ಧ ಟೀ ಕುಡಿಯುವುದಿಲ್ಲ. ಏಕವಚನ ಎಲ್ಲರೂ ಬಳಸುತ್ತಾರೆ ಎಂದರು. ಇದನ್ನೂ ಓದಿ:  ಕೇಂದ್ರವು ಧ್ವನಿವರ್ಧಕಗಳ ಬಗ್ಗೆ ನೀತಿಯನ್ನು ತರಬೇಕು: ಮಹಾರಾಷ್ಟ್ರ ಗೃಹ ಸಚಿವ 

    ನೀವು ಶಾಸಕ… ಶಾಸಕ… ಅಂತೀರಾ. ಶಾಸಕರು ಎಂದು ಹೇಳಬೇಕು ಎಂದು ಮಾಧ್ಯಮದವರಿಗೂ ಬಹುವಚನದ ಪಾಠ ಮಾಡಿದ್ದಾರೆ. ನನ್ನಷ್ಟು ನಿಷ್ಟೆ-ಲಾಯಲ್ಟಿ ಯಾರಿಗೂ ಇಲ್ಲ ಎಂದು ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ನನಗೆ ಬೇಕಾದವರನ್ನ ಹಾಕಿಸಿಕೊಳ್ಳುವುದು ಎಂದರೆ ಲಂಚ ತೆಗೆದುಕೊಳ್ಳುವುದಕ್ಕಲ್ಲ. ಲಂಚ ತೆಗೆದುಕೊಳ್ಳುವವರು ಯಾರು ಅಂತ ಗೊತ್ತು. ನಾನು ತೆಗೆದುಕೊಳ್ಳುವುದಿಲ್ಲ ಎಂದು ಆರೋಪಿ ಮಾಡಿದರು.