Tag: ಎಂ.ಜಿ.ಶ್ರೀನಿವಾಸ್

  • ‘ಬೀರ್‌ಬಲ್ 2’ ಸಿನಿಮಾ ಅನೌನ್ಸ್ ಮಾಡಿದ ‘ಘೋಸ್ಟ್’ ನಿರ್ದೇಶಕ ಶ್ರೀನಿ

    ‘ಬೀರ್‌ಬಲ್ 2’ ಸಿನಿಮಾ ಅನೌನ್ಸ್ ಮಾಡಿದ ‘ಘೋಸ್ಟ್’ ನಿರ್ದೇಶಕ ಶ್ರೀನಿ

    ಶಿವಣ್ಣ ನಟನೆಯ ‘ಘೋಸ್ಟ್’ (Ghost) ಸಿನಿಮಾದ ಡೈರೆಕ್ಟರ್ ಎಂ.ಜಿ ಶ್ರೀನಿವಾಸ್ ಇದೀಗ ‘ಬೀರ್‌ಬಲ್ 2’ (Birbal 2) ಚಿತ್ರ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಹೊಸ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊರ್ವಶಿ ರೌಟೇಲಾಗೆ ಏಟು- ಆಸ್ಪತ್ರೆಗೆ ದಾಖಲು

    ‘ಘೋಸ್ಟ್’ ಚಿತ್ರದ ನಂತರ ಎಂ.ಜಿ ಶ್ರೀನಿವಾಸ್ ನಿರ್ದೇಶನದ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಈ ಹಿಂದೆ ತೆರೆಕಂಡ ‘ಬೀರ್‌ಬಲ್’ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಇದರ ಸೀಕ್ವೆಲ್ ಮಾಡಲು ರೆಡಿಯಾಗಿದ್ದಾರೆ.

    ‘ಬೀರ್‌ಬಲ್ 2’ ಸಿನಿಮಾದ ಪೋಸ್ಟರ್ ಅನಾವರಣ ಮಾಡಿದ್ದು, ‘ಅವ್ರನ್ ಬಿಟ್ ಇವ್ರನ್ ಬಿಟ್ ಅವ್ರ ಯಾರು’ ಎಂದು ಚಿತ್ರಕ್ಕೆ ಅಡಿಬರಹ ನೀಡಿದ್ದಾರೆ. ಈ ಸಿನಿಮಾದ ತಯಾರಿ ಕೂಡ ಜೋರಾಗಿದೆ. ಸ್ಕ್ರಿಪ್ಟ್ ಹಂತ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಶೂಟಿಂಗ್‌ಗೆ ಹೋಗೋ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್‌ನಿಂದ ಶೂಟಿಂಗ್‌ಗೆ ಚಾಲನೆ ಸಿಗಲಿದೆ. ಇದನ್ನೂ ಓದಿ:ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

    ಇನ್ನೂ 2019ರಲ್ಲಿ ‘ಬೀರ್‌ಬಲ್’ ಸಿನಿಮಾದಲ್ಲಿ ಶ್ರೀನಿ, ರುಕ್ಮಿಣಿ ವಸಂತ್ ಜೋಡಿಯಾಗಿ ನಟಿಸಿದ್ದರು. ‘ಬೀರ್‌ಬಲ್ 2’ ಅದರ ಮುಂದುವರೆದ ಭಾಗವಾಗಿರುವ ಕಾರಣ ಈ ಚಿತ್ರದಲ್ಲಿ ರುಕ್ಮಿಣಿ ನಟಿಸುತ್ತಾರಾ ಕಾಯಬೇಕಿದೆ.


    ಅಂದಹಾಗೆ, ಈ ಸಿನಿಮಾದ ನಂತರ ಶಿವಣ್ಣ ನಟನೆಯ ‘ಘೋಸ್ಟ್’ ಸೀಕ್ವೆಲ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಶಿವಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಒಪ್ಪಿಕೊಂಡಿರುವ ಸಿನಿಮಾ ಮುಕ್ತಾಯವಾದ್ಮೇಲೆ ‘ಘೋಸ್ಟ್ 2’ಗೆ ಸಾಥ್ ನೀಡಲಿದ್ದಾರೆ,

  • ‘ಬೀರ್ ಬಲ್ 2’ ಸಿನಿಮಾ ಘೋಷಿಸಿದ ನಿರ್ದೇಶಕ, ನಟ ಶ್ರೀನಿ

    ‘ಬೀರ್ ಬಲ್ 2’ ಸಿನಿಮಾ ಘೋಷಿಸಿದ ನಿರ್ದೇಶಕ, ನಟ ಶ್ರೀನಿ

    ನಿರ್ದೇಶಕ, ನಟ ಎಂ.ಜಿ. ಶ್ರೀನಿವಾಸ್ ಈಗಾಗಲೇ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾವನ್ನು ಈಗ ಘೋಷಣೆ ಮಾಡಿದ್ದರೂ, ಅದು ಸೆಟ್ಟೇರುವುದು 2023ರಲ್ಲಿ ಎಂದು ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    2017ರಲ್ಲಿ ಶ್ರೀನಿ ಬೀರ್ ಬಲ್ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡಿ, ಹೀರೋ ಆಗಿಯೂ ನಟಿಸಿದ್ದರು. ಬೀರ್ ಬಲ್ ಹೆಸರಿನ ಲಾಯರ್ ಕಥೆಯನ್ನು ಹೇಳಿದ್ದರು. ಇದೇ ಸಿನಿಮಾ ಇದೀಗ ಭಾಗ 2 ಆಗಿ ನಿರ್ಮಾಣಗೊಳ್ಳಲಿದೆ. ಇಂದು ಶ್ರೀನಿ ಅವರ ಹುಟ್ಟು ಹಬ್ಬವಾಗಿದ್ದರಿಂದ, ಅದರ ಸಂಭ್ರಮಕ್ಕಾಗಿ ಬೀರ್ ಬಲ್ 2 ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಿರ್ದೇಶಕರು. ಬೀರ್ ಬಲ್ 1 ರಲ್ಲಿ ಫೈಂಡಿಂಗ್ ವಜ್ರಮುನಿ ಕಥೆಯನ್ನು ಹೇಳಿದ್ದರು. ಇಲ್ಲಿ ಮತ್ತೊಂದು ಕೇಸ್ ಇರಲಿದೆಯಂತೆ.

    ಬೀರ್ ಬಲ್ ಮೊದಲ ಭಾಗದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಯಾರಿಗೆ ಲಭಿಸಲಿದೆ ಎನ್ನುವುದನ್ನು ಕಾದು ನೋಡಬೇಕು. ಇನ್ನೂ ಒಂದು ವರ್ಷದ ನಂತರ ಈ ಚಿತ್ರ ಸೆಟ್ಟೇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಷಯಗಳು ಹೊರಬರಹುದು. ಬೀರ್ ಬಲ್ ಟ್ರಯಾಲಜಿ ಸಿನಿಮಾ ಆಗಿರುವುದರಿಂದ, ಇನ್ನೊಂದು ಭಾಗದಲ್ಲೂ ಈ ಸಿನಿಮಾ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಖಡಕ್ ಟ್ರೈಲರ್‌ನೊಂದಿಗೆ ಪ್ರತ್ಯಕ್ಷನಾದ ಬೀರ್‌ಬಲ್!

    ಖಡಕ್ ಟ್ರೈಲರ್‌ನೊಂದಿಗೆ ಪ್ರತ್ಯಕ್ಷನಾದ ಬೀರ್‌ಬಲ್!

    ಈ ಹಿಂದೆ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನಿರ್ದೇಶನ ಮಾಡಿ ನಟಿಸಿದ್ದವರು ಎಂ ಜಿ ಶ್ರೀನಿವಾಸ್ ಅವರೀಗ ಬೀರ್‌ಬಲ್ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಾವೇ ನಾಯಕನಾಗಿಯೂ ನಟಿಸಿದ್ದಾರೆ. ಇದರ ಟ್ರೈಲರ್ ಅನ್ನು ಇದೀಗ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

    ಒಂದು ಮರ್ಡರ್ ಮಿಸ್ಟರಿಯ ಸೂಚನೆ ಕೊಡುವಂಥಾ ವೇಗದ ಟ್ರೈಲರ್ ಅನ್ನು ಬಹುವಾಗಿ ಮೆಚ್ಚಿಕೊಂಡೇ ಉಪ್ಪಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಕೆಲ ಹೊತ್ತಲ್ಲಿಯೇ ಈ ಟ್ರೈಲರ್ ಗೆ ಎಲ್ಲೆಡೆಯಿಂದಲೂ ಅದ್ಭುತ ಪ್ರತಿಕ್ರಿಯೆ ಕೇಳಿ ಬರಲಾರಂಭಿಸಿವೆ.

    ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಕಾಮಿಡಿ ಟ್ರ್ಯಾಕಿನಲ್ಲಿಯೇ ಭಿನ್ನವಾದೊಂದು ಕಥೆ ಹೇಳಿದ್ದವರು ಶ್ರೀನಿವಾಸ್. ಅದರ ಮೂಲಕ ನಟನಾಗಿ ನಿರ್ದೇಶಕನಾಗಿಯೂ ಅವರು ಗೆದ್ದಿದ್ದರು. ಆದರೆ ಎರಡನೇ ಪ್ರಯತ್ನವಾದ ಬೀರ್‌ಬಲ್ ಚಿತ್ರದಲ್ಲವರು ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆರಿಸಿಕೊಂಡಿರುವಂತಿದೆ. ಇದೆಲ್ಲ ಏನೇ ಇದ್ದರೂ ಈ ಟ್ರೈಲರ್ ಅಂತೂ ಎಲ್ಲೆಡೆ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv