Tag: ಎಂ.ಕೆ ಮಠ

  • ಅಧಿಪತ್ರದ ವಿಲಕ್ಷಣ ಪಾತ್ರಧಾರಿ ಎಂ.ಕೆ ಮಠ!

    ಅಧಿಪತ್ರದ ವಿಲಕ್ಷಣ ಪಾತ್ರಧಾರಿ ಎಂ.ಕೆ ಮಠ!

    ಯನ್ ಶೆಟ್ಟಿ ನಿರ್ದೇಶನದ ‘ಅಧಿಪತ್ರ’ ಚಿತ್ರ ಫೆ. 7ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ 9ರ ವಿನ್ನರ್ ಆದ ಬಳಿಕ ನಾಯಕನಾಗಿ ನಟಿಸಿರುವ ಮೊದಲ ಕನ್ನಡ ಚಿತ್ರವಾಗಿಯೂ ‘ಅಧಿಪತ್ರ’ ಗಮನ ಸೆಳೆದುಕೊಂಡಿದೆ. ಈವರೆಗೂ ಟೈಟಲ್‌ನಿಂದಲೇ ಪ್ರೇಕ್ಷಕರನ್ನು ಆವರಿಸಿಕೊಂಡು ಗೆದ್ದು ಬೀಗಿದ ಸಿನಿಮಾಗಳ ಸಂಖ್ಯೆ ಸಾಕಷ್ಟಿದೆ. ‘ಅಧಿಪತ್ರ’ (Adhipatra) ಕೂಡ ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಯಾಕೆಂದರೆ, ಈ ಸಿನಿಮಾ ಆರಂಭದ ಹಂತದಲ್ಲಿ ಸದ್ದು ಮಾಡಿದ್ದದ್ದು ಟೈಟಲ್‌ನ ಕಾರಣದಿಂದಲೇ. ಆಂಗ್ಲ ಭಾಷೆಯ ಟೈಟಲ್ ಇಡುವ ಟ್ರೆಂಡು ಚಾಲ್ತಿಯಲ್ಲಿರುವಾಗಲೇ, ಅರ್ಥವತ್ತಾದ, ಇಡೀ ಕಥೆಯ ಸಾರ ಬಚ್ಚಿಟ್ಟುಕೊಂಡಿರುವ ಟೈಟಲ್ ಅನ್ನು ನಿರ್ದೇಶಕರು ಅನ್ವೇಷಿಸಿದ್ದಾರೆ. ಈ ಚಿತ್ರದಲ್ಲಿ ಅನುಭವಿ ನಟರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ, ಥರ ಥರದ ಪಾತ್ರಗಳನ್ನು ನಿರ್ವಹಿಸಿರುವ ಎಂ.ಕೆ ಮಠ ಕೂಡ ಇಲ್ಲಿ ವಿಶೇಷ, ವಿಲಕ್ಷಣ ಚಹರೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ನಿರ್ದೇಶಕ ಚಯನ್ ಶೆಟ್ಟಿ ಕಥೆ ಸೃಷ್ಟಿಸುವ ಹಂತದಲ್ಲಿಯೇ ಈ ಪಾತ್ರಕ್ಕೆ ಎಂ.ಕೆ ಮಠ (M. K Mata) ಸೂಕ್ತ ಎಂಬಂಥಾ ನಿರ್ಧಾರಕ್ಕೆ ಬಂದಿದ್ದರು. ಕಥೆಯೆಲ್ಲ ಸಿದ್ಧವಾದ ನಂತರ ಎಂ.ಕೆ ಮಠ ಅವರನ್ನು ಸಂಪರ್ಕಿಸಿದ್ದ ಚಯನ್ ಶೆಟ್ಟಿ ಎಲ್ಲವನ್ನೂ ವಿವರಿಸಿದ್ದರು. ಸದಾ ಹೊಸತನದ ಪಾತ್ರಗಳಿಗಷ್ಟೇ ತುಡಿಯುವ ಮನಃಸ್ಥಿತಿ ಹೊಂದಿರುವವರು ಮಠ. ಇಂಥಾದ್ದೇ ಪಾತ್ರವಿರಬೇಕು, ಅದಕ್ಕೆ ಪ್ರಾಧಾನ್ಯತೆ ಇರಲೇಬೇಕು ಎಂಬಂಥಾ ಯಾವ ಬೇಡಿಕೆಗಳೂ ಇಲ್ಲದೇ, ಪಾತ್ರ ಯಾವುದಿದ್ದರೂ ಪ್ರೇಕ್ಷಕರ ಮನಸಲ್ಲುಳಿಯುವಂತಿರಬೇಕು ಎಂಬುದು ಎಂ.ಕೆ ಮಠರ ಮೊದಲ ಆದ್ಯತೆ. ಅವರ ಪಾಲಿಗೆ ಚಯನ್ ವಿವರಿಸಿದ್ದ ಆ ಪಾತ್ರ ಒಂದೇ ಸಲಕ್ಕೆ ಇಷ್ಟವಾಗಿ ಹೋಗಿತ್ತು. ಈ ಕಾರಣದಿಂದಲೇ ಮರು ಮಾತಿಲ್ಲದೆ ಒಪ್ಪಿಗೆ ಸೂಚಿಸಿದ್ದರು. ಇದನ್ನೂ ಓದಿ:ಅಧಿಪತ್ರಕ್ಕಾಗಿ ಟಿಪಿಕಲ್ ಪತ್ರಕರ್ತರಾದ್ರು ಪ್ರಶಾಂತ್ ನಟನಾ!

    ಆ ನಂತರದಲ್ಲಿ ಕಡಲ ತಡಿಯಲ್ಲಿ ನಡೆದ ಚಿತ್ರೀಕರಣದ ಅಷ್ಟೂ ಅನುಭವ ಮಠ ಅವರ ಪಾಲಿಗೆ ಹೊಸಾ ಜಗತ್ತನ್ನೇ ತರೆದಿಟ್ಟಿತ್ತು. ಇಲ್ಲಿ ಕಡಲ ಕಿನಾರೆಯ ಕಥನವಿದೆ. ಈವರೆಗೂ ಕಡಲೂರಿನಿಂದ ಕದಲಿಕೊಳ್ಳುವ ಒಂದಷ್ಟು ಸಿನಿಮಾಗಳು ಬಂದಿವೆ. ಸ್ವತಃ ಎಂ.ಕೆ ಮಠ ಅಂಥಾ ಸಿನಿಮಾಗಳಲ್ಲಿ ಪಾತ್ರವಾಗಿದ್ದಾರೆ. ಆದರೆ, ನವ ನಿರ್ದೇಶಕ ಚಯನ್ ಶೆಟ್ಟಿ ಈ ಕಥೆಯನ್ನು ರೂಪಿಸಿರುವ ರೀತಿ, ಸೃಷ್ಟಿಸಿರುವ ಪಾತ್ರಗಳು, ಕಲಾವಿದರಿಂದ ಕೆಲಸ ತೆಗೆಸಿಕೊಳ್ಳುವ ಬಗೆ, ಹೊಸಬರೆಂಬುದನ್ನೇ ಮರೆಸುವಂಥಾ ಕಸುಬುದಾರಿಕೆಯೆಲ್ಲ ಮಠ ಅವರ ಮನಸೆಳೆದಿದೆ. ಜೊತೆಗೆ ಈ ಸಿನಿಮಾದ ನಾಯಕ ರೂಪೇಶ್ ಶೆಟ್ಟಿಯವರ ಸ್ನೇಹಶೀಲ ಗುಣವೂ ಎಂ.ಕೆ ಮಠರನ್ನು ಮತ್ತೆ ತಾಕಿದೆ. ಈ ಚಿತ್ರದಲ್ಲಿ ವಿಲಕ್ಷಣ ಛಾಯೆಯಿರುವ ಪಾತ್ರ ಮಠರಿಗೆ ಸಿಕ್ಕಿದೆ. ಆ ಪಾತ್ರದ ಗುಣಲಕ್ಷಣಗಳೇನೆಂಬುದು ದಿನದೊಪ್ಪತ್ತಿನಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

    ಹೀಗೆ ಸಿದ್ಧಗೊಂಡಿರುವ ಈ ಸಿನಿಮಾ ಒಂದು ಅಪರೂಪದ ಅನುಭೂತಿಯನ್ನು ಪ್ರೇಕ್ಷಕರಿಗೆಲ್ಲ ಕೊಡಮಾಡಲಿದೆ ಎಂಬ ತುಂಬು ನಂಬಿಕೆ ಎಂ.ಕೆ ಮಠ ಅವರಲ್ಲಿದೆ. ಹೀಗೆ ಪಾತ್ರವಾದ ಪ್ರತೀ ಕಲಾವಿದರೊಳಗೂ ಭಿನ್ನ ಅನುಭವ, ಗೆಲುವಿನ ಭರವಸೆ ತುಂಬಿರುವ ಈ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

  • ಸಿನಿಮಾ ಆಡಿಷನ್ ವಿಚಾರದಲ್ಲಿ ಯುವತಿಯರಿಗೆ ಮೋಸ: ಕಹಿ ಘಟನೆ ಹಂಚಿಕೊಂಡ ನಟ ಎಂ.ಕೆ.ಮಠ

    ಸಿನಿಮಾ ಆಡಿಷನ್ ವಿಚಾರದಲ್ಲಿ ಯುವತಿಯರಿಗೆ ಮೋಸ: ಕಹಿ ಘಟನೆ ಹಂಚಿಕೊಂಡ ನಟ ಎಂ.ಕೆ.ಮಠ

    ತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಧಾರಾವಾಹಿ ಆಡಿಷನ್ ವಿಚಾರಲ್ಲಿ ಭಾರೀ ಮೋಸಗಳು ನಡೆಯುತ್ತಿರುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹಣ ಮಾಡುವುದಕ್ಕಾಗಿ ಮತ್ತು ಹುಡುಗಿಯರ ಸಂಗ ಬಯಸುವುದಕ್ಕಾಗಿಯೇ ಕೆಲ ಗುಂಪುಗಳು  ನಿರಂತರವಾಗಿ ಆಡಿಷನ್ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿವೆ ಎಂದು ಹಿರಿಯ ನಟ ಎಂ.ಕೆ.ಮಠ ಬಹಿರಂಗ ಹೇಳಿಕೆ ನೀಡಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಂ.ಕೆ.ಮಠ, “ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕದ ಹುಡುಗಿಯೊಬ್ಬಳು ನನಗೆ ಕರೆ ಮಾಡಿ, ಆಡಿಷನ್ ಗೆ ಕರೆದಿದ್ದಾರೆ ಎಂದಳು. ಅಲ್ಲದೇ ಒಬ್ಬಳೇ ಬರುವಂತೆ ಹೇಳಿದ್ದಾರೆ ಎಂದೂ ತಿಳಿಸಿದಳು. ಒಬ್ಬಳನ್ನೇ ಕರೆದಿದ್ದಾರೆ ಅಂದರೆ ಅಲ್ಲಿ ಏನೋ ಮೋಸ ಇದೆ ಎಂದು ಅರಿತುಕೊಂಡೆ. ಅವರ ವಿಳಾಸ ಕಳುಹಿಸುವಂತೆ ಆ ಹುಡುಗಿಯನ್ನು ಕೇಳಿದೆ. ಆದರೆ ಅವರು ವಿಳಾಸ ಕೊಟ್ಟಿರಲಿಲ್ಲ. ಮತ್ತೊಂದು ಸಲ ಆ ಗುಂಪಿನಿಂದ ಕರೆ ಬಂದರೆ, ನಾನು ಎಂ.ಕೆ.ಮಠ ಅವರ ಮಗಳು ಅಂತ ಹೇಳುವುದಕ್ಕೆ ಆ ಹುಡುಗಿಗೆ ಹೇಳಿದೆ. ಅವರು ಕಾಲ್ ಮಾಡಿದಾಗ ಆ ಹುಡುಗಿ ನನ್ನ ಹೆಸರು ಹೇಳಿದ್ದಾಳೆ. ನಂತರ ಆ ಗುಂಪಿನಿಂದ ಅವಳಿಗೆ ಕರೆ ಬಂದಿಲ್ಲ” ಎಂದಿದ್ದಾರೆ.  ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಆ ಹುಡುಗಿ ನನಗೆ ವಿಷಯ ತಿಳಿಸದೇ ಹಾಗೆಯೇ ಹೋಗಿದ್ದರೆ, ಪಾಪ  ಆ ಹುಡುಗಿಗೆ ಅದೇನು ಅನಾಹುತ ಆಗುತ್ತಿತ್ತೋ ಎಂದು ಆತಂಕ ವ್ಯಕ್ತ ಪಡಿಸುತ್ತಾರೆ ಮಠ. ಹಾಗಾಗಿ ಆಡಿಷನ್ ಹೆಸರಿನಲ್ಲಿ ಮೋಸ ಮಾಡಿದವರನ್ನು ಹಿಡಿದು ಹೆಡೆಮುರಿ ಕಟ್ಟಬೇಕು ಎನ್ನುವುದು ಅವರ ಆಗ್ರಹ. ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಗತ್ಯ ಕ್ರಮ ತಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

  • ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ನ್ನೇರಿ’ಸ್ಯಾಂಡಲ್‍ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರ. ಮಾರ್ಚ್ 4ರಂದು ಪ್ರೇಕ್ಷಕರೆದುರು ಬರಲು ಸಜ್ಜಾಗಿರುವ ಈ ಚಿತ್ರ ಈಗಾಗಲೇ ಪ್ರೇಕ್ಷಕರನ್ನು ಸಾಕಷ್ಟು ವಿಚಾರಗಳಿಂದ ತನ್ನತ್ತ ಸೆಳೆದುಕೊಂಡಿದೆ.

    ಹಾಡು, ಟ್ರೇಲರ್, ಮನಸ್ಸಿಗೆ ನಾಟಿವೆ. ಏನೋ ವಿಶೇಷತೆ ಇದೆ ಅನ್ನೋದನ್ನು ಸಾರಿ ಹೇಳಿವೆ. ಬಿಡುಗಡೆಯಾಗಿರುವ ಟೀಸರ್ ಕೂಡ ಅಷ್ಟೇ ಕುತೂಹಲ ಹುಟ್ಟು ಹಾಕಿದೆ. ಹೀಗೆ ಸಿನಿರಸಿಕರ ಮನಸೆಳೆದ ಈ ಚಿತ್ರದಲ್ಲಿ ಸ್ಯಾಂಡಲ್‍ವುಡ್ ಅಂಗಳದ ಹೆಮ್ಮೆಯ ಹಿರಿಯ ನಟ ಎಂ.ಕೆ ಮಠ ಕೂಡ ಬಣ್ಣಹಚ್ಚಿದ್ದಾರೆ.  ಇದನ್ನೂ ಓದಿ: ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ತಮ್ಮ ಅಮೋಘ ಅಭಿನಯದ ಮೂಲಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಎಂ.ಕೆ.ಮಠ ಕನ್ನೇರಿ ಚಿತ್ರದಲ್ಲಿ ಬಹು ಮುಖ್ಯ ಪಾತ್ರವೊಂದಕ್ಕೆ ಜೀವತುಂಬಿದ್ದಾರೆ. ಈಗಾಗಲೇ ಗೊತ್ತಿರುವ ಹಾಗೆ ಕನ್ನೇರಿ ನೆಲೆ ಕಳೆದುಕೊಂಡು ನಿರ್ವಸತಿಗರಾದ ಕಾಡಿನ ಜನರ ಸುತ್ತ ನೈಜ ಘಟನೆಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಹೆಣೆದ ಚಿತ್ರ. ಇಂತಹ ಚಿತ್ರದಲ್ಲಿ ಎಂ.ಕೆ ಮಠ ಅವ್ರು ಕಾಡಿನ ಜನರ ಹಾಡಿಯ ನಾಯಕನಾಗಿ ಬಣ್ಣಹಚ್ಚಿದ್ದಾರೆ. ಕೇವಲ ಬಣ್ಣಹಚ್ಚಿಲ್ಲ ಅದನ್ನು ಜೀವಿಸಿದ್ದಾರೆ. ಚಿತ್ರದ ಸ್ಯಾಂಪಲ್‍ಗಳಲ್ಲೂ ಅದನ್ನು ಕಾಣಬಹುದಾಗಿದೆ. ತಮ್ಮ ಪಾತ್ರದ ಬಗ್ಗೆ ಹಾಗೂ ನೀನಾಸಂ ಮಂಜು ಆಯ್ದುಕೊಂಡ ಕಥೆ ಬಗ್ಗೆ ಬಹಳ ಸಂತಸ ವ್ಯಕ್ತಪಡಿಸಿರುವ ಇವ್ರು ಈ ಸಿನಿಮಾ ಖಂಡಿತ ಪ್ರೇಕ್ಷಕರ ಮನಮುಟ್ಟಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೂ ಇಷ್ಟವಾಯ್ತು ‘ಕನ್ನೇರಿ’ ಚಿತ್ರದ ‘ಈ ಗಾಳಿ ತಂಗಾಳಿ’ ಹಾಡು!

    ನೀನಾಸಂ ಮಂಜು ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಕೊಟಿಗಾನಹಳ್ಳಿ ರಾಮಯ್ಯ ಕಥೆ ಬರೆದಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಮತ್ತು ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಕದ್ರಿ ಮಣಿಕಾಂತ್ ಅದ್ಭುತ ಸಂಗೀತ ಸಂಯೋಜನೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ‘ಕನ್ನೇರಿ’ ಒಡಲೊಳಗಿದೆ ಬೇರೆಯದ್ದೇ ಲೋಕ – ಟ್ರೇಲರ್ ನೋಡಿ ಮೆಚ್ಚಿದ ಪ್ರೇಕ್ಷಕ ಮಹಾಶಯರು

    ನೈಜ ಘಟನೆಯೊಂದಿಗೆ ಮಹಿಳಾ ಪ್ರಧಾನ ಚಿತ್ರವಾಗಿರುವ ಕನ್ನೇರಿಯಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಅರುಣ್ ಸಾಗರ್, ಕರಿ ಸುಬ್ಬು, ಸರ್ದಾರ್ ಸತ್ಯ,ಅನಿತ ಭಟ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.