Tag: ಎಂ.ಕೃಷ್ಣಪ್ಪ

  • ಮೇರುನಟ ಡಾ.ವಿಷ್ಣು ಅವರ 52ನೇ ಪುತ್ಥಳಿ ಅನಾವರಣ

    ಮೇರುನಟ ಡಾ.ವಿಷ್ಣು ಅವರ 52ನೇ ಪುತ್ಥಳಿ ಅನಾವರಣ

    ನ್ನಡದ ಮೇರುನಟ ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗಳು ರಾಜ್ಯಾದ್ಯಂತ ತಲೆಯೆತ್ತಿವೆ. ವಿಷ್ಣು ಅಭಿಮಾನಿಗಳು ರಾಜ್ಯದ ನಾನಾ ಕಡೆ ಅವರ ಪುತ್ಥಳಿಯನ್ನು (Putthali) ಪ್ರತಿಷ್ಠಾಪಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ (Bangalore) ಕರುನಾಡ  ತಿಲಕ ಡಾ.ವಿಷ್ಣು ಕನ್ನಡ ಅಭಿಮಾನಿಗಳ‌ ಸಂಘದ ವತಿಯಿಂದ ಗಿರಿನಗರ ಹಿರಣ್ಣನ ಗುಟ್ಟೆ ಸರ್ಕಲ್ ನಲ್ಲಿ  ಡಾ‌.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರ  ಉಪಸ್ಥಿತಿಯಲ್ಲಿ ಶಾಸಕ ಎಂ ಕೃಷ್ಣಪ್ಪ (M. Krishnappa) ಅಮೃತ ಹಸ್ತದಿಂದ ಪುತ್ಥಳಿ ಅನಾವರಣವಾಯಿತು

    ವಿಶೇಷ ಏನಂದ್ರೆ ಇದು ವೀರಕಪುತ್ರ ಶ್ರೀನಿವಾಸ್ ಅವರು ವೈಯಕ್ತಿಕವಾಗಿ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಕೊಡುಗೆಯಾಗಿ ನೀಡುತ್ತಿರುವ 52 ನೇ ಪುತ್ಥಳಿ ಆಗಿರುವುದು ವಿಶೇಷ. ವಿಷ್ಣು ಅವರ ಹೆಸರಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾ ಬಂದಿರುವ ವೀರಕಪುತ್ರ ಶ್ರೀನಿವಾಸ್ ಸಾಕಷ್ಟು ಕಡೆ ಪುತ್ಥಳಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಮೊನ್ನೆಯಷ್ಟೇ ವಿಷ್ಣುವರ್ಧನ್ (Dr. Vishnuvardhan) ಹೆಸರಿನಲ್ಲಿ ದಾಖಲೆ (Record) ಯೊಂದು  ಸೃಷ್ಟಿಯಾಗಿತ್ತು. ವೀರಕಪುತ್ರ ಶ್ರೀನಿವಾಸ್ ಮತ್ತು ವಿಷ್ಣು ಸೇನಾನಿಗಳು ವಿಷ್ಣುವರ್ಧನ್ ಹುಟ್ಟು ಹಬ್ಬದಂದು ಕಟೌಟ್ ಜಾತ್ರೆ ಮಾಡಿದ್ದರು. ನೆಚ್ಚಿನ ನಟನ 52 ಕಟೌಟ್‌ಗಳನ್ನು ಅಂದು ಬೆಂಗಳೂರಿನ ಬಾಲಣ್ಣ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಮುಂದೆ ನಿಲ್ಲಿಸಿದ್ದರು. ಇದನ್ನು ಪರಿಗಣಿಸಿ ಏಷ್ಯಾ ಬುಕ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅದು ದಾಖಲಾಗಿತ್ತು.

    ಡಾ. ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ ‘ಕಟೌಟ್‌ ಜಾತ್ರೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು.

     

    ಅಂದೇ ಈ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಯು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದರು. ನಂತರ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ‌ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ.

  • ನಿಖಿಲ್‍ಗೆ ಕೂಡಿ ಬಂತು ಕಂಕಣ – ಕೈ ಶಾಸಕರ ಸೋದರನ ಮೊಮ್ಮಗಳೊಂದಿಗೆ ಅಭಿಮನ್ಯು ಕಲ್ಯಾಣ

    ನಿಖಿಲ್‍ಗೆ ಕೂಡಿ ಬಂತು ಕಂಕಣ – ಕೈ ಶಾಸಕರ ಸೋದರನ ಮೊಮ್ಮಗಳೊಂದಿಗೆ ಅಭಿಮನ್ಯು ಕಲ್ಯಾಣ

    ಬೆಂಗಳೂರು: ಮಾಜಿ ಸಿಎಂ ಮಗ ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯದಲ್ಲೇ ತಮ್ಮ ವಿವಾಹವನ್ನು ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.

    ಕಾಂಗ್ರೆಸ್ ಶಾಸಕರ ಅಣ್ಣನ ಮೊಮ್ಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಮದುವೆಯಾಗಲಿದ್ದಾರೆ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಈ ಜೋಡಿಯ ಕಲ್ಯಾಣ ಮೇ 17 ಮತ್ತು 18 ರಂದು ನಡೆಯಲಿದೆ. ಇದನ್ನೂ ಓದಿ: ಸದ್ಯದಲ್ಲೇ ಮದುವೆ ಬಗ್ಗೆ ಅನೌನ್ಸ್ ಮಾಡ್ತೇನೆ: ನಿಖಿಲ್

    ಇಂದು ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ದೇವೇಗೌಡರ ಕುಟುಂಬದವರು ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರಾದ ಅನುಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದಾರೆ.

  • ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

    ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

    ತುಮಕೂರು: ಕಳೆದ ಬಾರಿ ಲೋಕಸಭೆ ಚುನಾವಣೆಯ ವೇಳೆ ಪಕ್ಷದ ಅಭ್ಯರ್ಥಿಯಾಗಿದ್ದ ಎ. ಕೃಷ್ಣಪ್ಪನವರನ್ನು ಗೆಲ್ಲಿಸ್ತೀವಿ ಅಂತ ಕರೆದುಕೊಂಡು ಬಂದು ಅವರನ್ನ ಜೆಡಿಎಸ್‍ನವರು ಸಾಯಿಸಿದರು ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಒಕ್ಕಲಿಗ ಮುಖಂಡರ ಕುತಂತ್ರದಿಂದ ಎ.ಕೃಷ್ಣಪ್ಪ ಪ್ರಾಣ ಬಿಟ್ಟರು. ಕೃಷ್ಣಪ್ಪ ಅವರನ್ನು ಗೆಲ್ಲಿಸುತ್ತೇವೆ ಅಂತ ಹೇಳಿ ಜೆಡಿಎಸ್‍ನ ಎಲ್ಲಾ ಮುಖಂಡರೂ ಮುದ್ದಹನುಮೇಗೌಡ ಪರ ಕೆಲಸ ಮಾಡಿದರು. ಹಾಗಾಗಿ ಯಾದವ ಸಮುದಾಯದ ಕೃಷ್ಣಪ್ಪ ಆ ನೋವಿನಿಂದ ಸಾವನ್ನಪ್ಪಿದರು. ‘ಅಂದು ಲಕ್ಕಪ್ಪ, ಇಂದು ಮುದ್ದಹನುಮೇಗೌಡ’ ಎಂದು ಜೆಡಿಎಸ್‍ನ ಒಕ್ಕಲಿಗ ಮುಖಂಡರು ಕರಪತ್ರ ಹಂಚಿದ್ದರು. ಹಾಗಾಗಿ ಜಾತಿಪ್ರೇಮ ಮೆರೆದರು ಎಂದು ಹರಿಹಾಯ್ದಿದ್ದಾರೆ.

    ಜೆಡಿಎಸ್ ಅವರ ಕರಪತ್ರ ಅಂದು ಸುಂಟರಗಾಳಿ ಬೀಸಿದ ಹಾಗೆ ಬೀಸಿತ್ತು. ಈ ರೀತಿ ಸಂಚುಮಾಡಿ ಹಿಂದುಳಿದ ಮುಖಂಡನನ್ನ ಜೆಡಿಎಸ್‍ನವರು ಕೊಂದರು. ಚುನಾವಣಾ ದಿನ ಸ್ವತಃ ಎ.ಕೃಷ್ಣಪ್ಪ ನನಗೆ ಫೋನ್ ಮಾಡಿ, ಬಳಿಕ ಏನಾದರು ಹೊಟ್ಟೆಗೆ ಹಾಕ್ತಿರ ಅಂತ ಕೇಳಿ ನನ್ನ ಮನೆಗೆ ಬಂದಿದ್ದರು. ಆಗ ನಾನು ತಿಂಡಿಕೊಟ್ಟು ಅವರನ್ನು ಸಮಾಧಾನ ಮಾಡಿದ್ದೆ. ಯಾವ ಜೆಡಿಎಸ್ ಶಾಸಕರೂ ನನ್ನ ಜೊತೆಗಿಲ್ಲ, ನನ್ನನ್ನ ಪರದೇಶಿ ಮಾಡಿದ್ದಾರೆ ಅಂತ ಕೃಷ್ಣಪ್ಪ ಕಣ್ಣೀರು ಸುರಿಸಿದ್ದರು. ಅದಾದ ಮಾರನೇ ದಿನವೇ ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಬಸವರಾಜು ಅವರು ಕಿಡಿಕಾರಿದ್ದಾರೆ.

    ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾದ ತಮಗೆ ಟಿಕೆಟ್ ಕೈ ತಪ್ಪುತ್ತೆ ಅನ್ನುವ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ಹೊಲ ಉಳುಮೆ ಮಾಡಿ ಮಾಡಿ ನಮಗೆ ಅನುಭವ ಬಂದಿದೆ. ನಾವು ಹಳೆಯ ಎತ್ತುಗಳು. ಎಷ್ಟು ಏರಿ ಇದ್ದರು ಎಳೀತಿವಿ. ಅದಕ್ಕೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಹಾಯಲ್ಲಾ ಒದೆಯಲ್ಲ ತೆಪ್ಪಗಿರ್ತಿವಿ. ಬಾರದು ಬಪ್ಪದು -ಬಪ್ಪದು ತಪ್ಪದು, ಹಾಗಾಗಿಯೇ ನಾನು ತೆಪ್ಪಗಿದ್ದೇನೆ. ನಾನು ಟಿಕೆಟ್‍ಗಾಗಿ ಅರ್ಜಿ ಹಾಕಿಲ್ಲ. ಪಕ್ಷದ ಆಂತರಿಕ ಸಮೀಕ್ಷಯಂತೆ ಟಿಕೆಟ್ ಕೊಡುತ್ತಾರೆ. ಹೀಗಾಗಿ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಮುಂದೆ ನಿಂತು ಪೂಜೆ ಮಾಡುವ ವಿಷಯಕ್ಕೆ ಜಗಳ- ಸಚಿವ ಕೃಷ್ಣಪ್ಪ ಮುಂದೆಯೇ ಎಂಎಲ್‍ಎ, ಜಿ.ಪಂ ಸದಸ್ಯರ ಫೈಟ್

    ಮುಂದೆ ನಿಂತು ಪೂಜೆ ಮಾಡುವ ವಿಷಯಕ್ಕೆ ಜಗಳ- ಸಚಿವ ಕೃಷ್ಣಪ್ಪ ಮುಂದೆಯೇ ಎಂಎಲ್‍ಎ, ಜಿ.ಪಂ ಸದಸ್ಯರ ಫೈಟ್

    ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಜೋರಾಗಿಯೇ ನಡೆಯುತ್ತಿದೆ. ಈ ವೇಳೆ ಮುಂದೆ ನಿಂತು ಪೂಜೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಸಚಿವರ ಮುಂದಯೇ ಪರಸ್ಪರ ಕಿತ್ತಾಡುತ್ತ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಕಿಕ್ಕೇರಿಯ ಅಮಾನಿಕೆರೆಯ ಕಾಮಗಾರಿಗೆ ಸಂಬಂಧಿಸಿದಂತೆ ಗುದ್ದಲಿ ಪೂಜೆ ನೆರವೇರಿಸಲು ಬಂದಿದ್ರು. ಈ ವೇಳೆ ಕೆಆರ್ ಪೇಟೆ ಕ್ಷೇತ್ರದ ಶಾಸಕ, ಜೆಡಿಎಸ್‍ನ ನಾರಾಯಣಗೌಡ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಿಂತು ಪೂಜೆ ಸಲ್ಲಿಸಲು ಮುಂದಾದ್ರು. ಇದೇ ವೇಳೆ ಕಿಕ್ಕೇರಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ, ಕಾಂಗ್ರೆಸ್ ಮುಖಂಡ ದೇವರಾಜು ಕೂಡ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಿಲ್ಲಲು ಬಂದಿದ್ದಾರೆ. ಜೊತೆಗೆ ಸ್ಥಳದಲ್ಲಿ ನೂರಾರು ಜನ ಸೇರಿದ್ದರಿಂದ ಸ್ವಲ್ಪ ನೂಗುನುಗ್ಗಲಾಗಿದೆ.

    ಇದ್ರಿಂದ ಕೆರಳಿದ ಶಾಸಕ ನಾರಾಯಣಗೌಡ, ಪಕ್ಕದಲ್ಲಿದ್ದ ಜಿಲ್ಲಾಪಂಚಾಯ್ತಿ ಸದಸ್ಯ ದೇವರಾಜುಗೆ ನಾನು ಮೂರು ಗಂಟೆಯಿಂದ ಕಾಯುತ್ತಿದ್ದೇನೆ. ನಾನೊಬ್ಬ ಶಾಸಕ, ನನ್ನನ್ನೇ ತಳ್ಳುತ್ತೀರಾ. ಬೇಕಾದ್ರೆ ನೀವೇ ಪೂಜೆ ಮಾಡಿಕೊಳ್ಳಿ, ನಾನು ಹೋಗುತ್ತೇನೆ ಎಂದು ಹರಿಹಾಯ್ದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ದೇವರಾಜು ಕೂಡ ನಾನೇನು ನಿಮ್ಮನ್ನು ತಳ್ಳಿಲ್ಲ ಎಂದು ಜೋರು ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

    ಈ ವೇಳೆ ಇಬ್ಬರ ಮಧ್ಯೆ ನಿಂತುಕೊಂಡ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಇಬ್ಬರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಸ್ಥಳೀಯ ಮುಖಂಡರು ಕೂಡ ಶಾಸಕ ನಾರಾಯಣಗೌಡ ಮತ್ತು ದೇವರಾಜುರನ್ನು ಹಿಡಿದುಕೊಂಡು ಜಗಳವಾಡದಂತೆ ಸಮಾಧಾನ ಮಾಡಿದರು.