Tag: ಎಂ.ಎಸ್ ಧೋನಿ. ಜೀವಾ ಧೋನಿ

  • ಮಗಳು ಹೇಳಿದಂತೆ ಹೆಜ್ಜೆ ಹಾಕಿದ ಧೋನಿ- ವಿಡಿಯೋ ವೈರಲ್

    ಮಗಳು ಹೇಳಿದಂತೆ ಹೆಜ್ಜೆ ಹಾಕಿದ ಧೋನಿ- ವಿಡಿಯೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ತಮ್ಮ ಮಗಳು ಜೀವಾ ಧೋನಿ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಜೀವಾ ತನ್ನ ತಂದೆ ಧೋನಿಗೆ ಈ ಮೊದಲು ಎರಡು ಭಾಷೆಗಳನ್ನು ಹೇಳಿಕೊಟ್ಟಿದ್ದಳು. ಈಗ ಜೀವಾ ತನ್ನ ತಂದೆಗೆ ಡ್ಯಾನ್ಸ್ ಹೇಳಿ ಕೊಡುತ್ತಿರುವ ವಿಡಿಯೋವನ್ನು ಧೋನಿ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಧೋನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳ ಜೊತೆ ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿ ಅದಕ್ಕೆ, “ನಾವು ಡ್ಯಾನ್ಸ್ ಮಾಡುವಾಗ ಇನ್ನೂ ಉತ್ತಮವಾಗಿ ಕಾಣುತ್ತೇವೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಜೀವಾ ಸ್ಕೂಲ್‍ನಲ್ಲಿ ತನ್ನ ಸ್ನೇಹಿತರ ಜೊತೆ ರಂಗೋಲಿ ಬಿಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಫೋಟೋ ದೀಪಾವಳಿಯಲ್ಲಿ ಸೆರೆ ಹಿಡಿದಿದ್ದಾ ಅಥವಾ ಮೊದಲೇ ಕ್ಲಿಕ್ಕಿಸಲಾಗಿತ್ತಾ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆ ಫೋಟೋ ದೀಪಾವಳಿಯಂದು ವೈರಲ್ ಆಗಿತ್ತು.

     

    View this post on Instagram

     

    Even better when we are dancing @zivasinghdhoni006

    A post shared by M S Dhoni (@mahi7781) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv