Tag: ಎಂ.ಎನ್.ವೆಂಕಟಾಚಲಯ್ಯ

  • ಎಸ್.ಎಂ.ಕೃಷ್ಣಗೆ ಬರೋಬ್ಬರಿ 97 ಹುಡುಗಿಯರ ವೋಟು

    ಎಸ್.ಎಂ.ಕೃಷ್ಣಗೆ ಬರೋಬ್ಬರಿ 97 ಹುಡುಗಿಯರ ವೋಟು

    ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನ ಶುರುವಾಗಿದ್ದೆ ವಿದ್ಯಾರ್ಥಿ ದೆಸೆಯಿಂದ. ಅಮೆರಿಕಾಗೆ ಹೋಗಿ ಬಂದ ನಂತರ ರಾಜಕೀಯಕ್ಕೆ ಬರಲ್ಲ ಅಂದುಕೊಂಡಿದ್ದವರಿಗೆ ಶಾಕ್ ಕೊಟ್ಟಿದ್ರಂತೆ ಎಸ್.ಎಂ.ಕೃಷ್ಣ. ಅದಕಕ್ಕೆ ಕಾರಣ ಕಾಲೇಜು ದಿನಗಳಿಂದ ಯೂನಿಯನ್ ಚುನಾವಣೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದು.

    ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುವಾಗಲೇ ಕಾಲೇಜ್ ಯೂನಿಯನ್ ಗೆ ಎಸ್.ಎಂ.ಕೃಷ್ಣ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ರಂತೆ. ಆ ಯೂನಿಯನ್ ಚುನಾವಣೆಯಲ್ಲಿ 18 ಮತಗಳ ಅಂತರದಿಂದ ಎಸ್.ಎಂ.ಕೃಷ್ಣ ಸೋತು ಬಿಟ್ಟರಂತೆ. ಆ ಚುನಾವಣೆಯಲ್ಲಿ ಎಸ್‍ಎಂಕೆ ಸೋತರೂ ಒಂದು ಸಮಾಧಾನ ಸಿಕ್ಕಿತ್ತಂತೆ. 101 ಹುಡುಗಿಯರ ಮತಗಳು ಇದ್ವಂತೆ. ಇದರಲ್ಲಿ ಎಸ್ ಎಂಕೆಗೆ ಬರೋಬ್ಬರಿ 97 ಮತಗಳು ಬಿದ್ದಿದ್ವಂತೆ.

    ಈ ಸ್ವಾರಸ್ಯಕರ ಘಟನೆ ಹೇಳಿದವರು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ. ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಎಸ್ ಎಂಕೆ ಕುರಿತ 5 ಪುಸ್ತಕಗಳು ಬಿಡುಗಡೆಯಾದವು. ಈ ಸಮಾರಂಭದಲ್ಲಿ ಮಾತನಾಡಿದ ವೆಂಕಟಾಚಲಯ್ಯ ಅವರು ಎಸ್.ಎಂ. ಕೃಷ್ಣರ ಆಕರ್ಷಣೆಯ ಬಗ್ಗೆ ಮೆಲಕು ಹಾಕಿದರು. ಆಗಿನಿಂದಲೂ ಎಸ್ ಎಂಕೆ ಹುಡುಗಿಯರ ಕಣ್ಮಣಿ. ಮಹಾರಾಜ ಕಾಲೇಜಿನ ಎಲೆಕ್ಷನ್ ನಲ್ಲಿ ಸೋತ್ರೂ 97 ಹುಡುಗಿಯರ ಮತ ಬಿದ್ದಿದ್ವು ಅಂದ್ರೆ ಅರ್ಥ ಮಾಡಿಕೊಳ್ಳಿ ಅಂತಾ ಹಾಸ್ಯ ಮಾಡಿದ್ರು. ಇದನ್ನೂ ಓದಿ: ಎಸ್. ಎಂ.ಕೃಷ್ಣ ಹಿಂದೆ ರೂಪವತಿಯರ ಕ್ಯೂ

    ಅಷ್ಟೇ ಅಲ್ಲ ಎಸ್.ಎಂ. ಕೃಷ್ಣ ಚಾರ್ಮಿಂಗ್ ಮ್ಯಾನ್. 125 ವರ್ಷ ಬದುಕಿರಲಿ. ಎಲೆಕ್ಷನ್ ಗೆ ನಿಲ್ಲಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕ್ತಾರೆ ಅಂತೇಳಿದ್ರು. ಆಗ ಇಡೀ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಗು ನಗು.

  • ಎಸ್. ಎಂ.ಕೃಷ್ಣ ಹಿಂದೆ ರೂಪವತಿಯರ ಕ್ಯೂ

    ಎಸ್. ಎಂ.ಕೃಷ್ಣ ಹಿಂದೆ ರೂಪವತಿಯರ ಕ್ಯೂ

    ಬೆಂಗಳೂರು: ಇವತ್ತು ಎಸ್.ಎಂ.ಕೃಷ್ಣ ಅವರ ಕುರಿತ ಗ್ರಂಥಗಳು ಬಿಡುಗಡೆ ಮಾಡಲಾಯ್ತು. ಬಿಡುಗಡೆ ಸಮಾರಂಭದಲ್ಲಿ ಮಾತ್ರ ಸಾಕಷ್ಟು ಸ್ವಾರಸ್ಯಕರ ವಿಚಾರಗಳು ಹೊರ ಬಂದವು. ಗ್ರಂಥಗಳನ್ನ ಬಿಡುಗಡೆಗೊಳಿಸಿ ಮಾತನಾಡಿದ ಸುಪ್ರೀಂಕೋರ್ಟ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಎಸ್ ಎಂಕೆ ವ್ಯಕ್ತಿತ್ವ, ಆಕರ್ಷಣೆಯ ಬಗ್ಗೆ ವರ್ಣಿಸಿದ್ದು ವಿಶೇಷವಾಗಿತ್ತು. ಅದೇ ಕೃಷ್ಣ ಹಿಂದೆ ರೂಪವತಿಯರ ಕ್ಯೂ ಸ್ಟೋರಿ.

    ಅಂದಹಾಗೆ ಎಸ್ ಎಂಕೆ ಹ್ಯಾಂಡ್ಸಮ್ ಆಂಡ್ ಚಾರ್ಮಿಂಗ್ ಹುಡುಗ. ಬಹಳಷ್ಟು ಹೆಣ್ಮಕ್ಕಳು ಎಸ್ ಎಂಕೆ ಹಿಂದೆ ಬೀಳೋದು ಸಾಮಾನ್ಯವಾಗಿತ್ತಂತೆ. ಒಂದು ಬಾರಿ ಅಮೆರಿಕದಲ್ಲಿ ಇದ್ದಾಗ ಸಾಕಷ್ಟು ರೂಪವತಿಯರು ಹಿಂದೆ ಬೀಳ್ತಿದ್ರಂತೆ. ಸ್ವತಃ ಎಸ್ ಎಂಕೆ ಪುಸ್ತಕದಲ್ಲಿ ಹೇಳಿಕೊಳ್ಳುವ ಪ್ರಕಾರ ಅಷ್ಟು ರೂಪವತಿಯರು ಹಿಂದೆ ಬಿದ್ದಿದ್ರೂ ಲಕ್ಷ್ಮಣ ರೇಖೆ ದಾಟುತ್ತಿರಲಿಲ್ಲ ಅಂದಿದ್ದಾರೆ.

    ಆದ್ರೆ ಎಸ್ ಎಂಕೆ ಜಾಣ್ಮೆಯ ಮಾತನ್ನ ಸಮಾರಂಭದಲ್ಲಿ ವೆಂಕಟಾಚಲಯ್ಯ ಅವರು ಬಹಳ ಸೊಗಸಾಗಿ ವರ್ಣಿಸಿದ್ರು. ರೂಪವತಿಯರು ಹಿಂದೆ ಬೀಳ್ತಿದ್ರೂ ನಾನು ಲಕ್ಷ್ಮಣ ರೇಖೆ ದಾಟುತ್ತಿರಲಿಲ್ಲ ಅಂತೇಳಿದ್ದಾರೆ ಸರಿ. ಆದ್ರೆ ಎಸ್ ಎಂಕೆ ಬಹಳ ಇಂಟಲಿಜೆಟ್. ಹಿಂದೆ ಬೀಳುತ್ತಿದ್ದ ಆ ರೂಪವತಿಯರು ಲಕ್ಷ್ಮಣ ರೇಖೆ ದಾಟಿಲ್ಲ ಅಂತಾ ಹೇಳಿಲ್ಲ ಅವರು ಅಂತಾ ಹಾಸ್ಯಭರಿತ ಮಾತುಗಳನ್ನಾಡಿದರು. ವೆಂಕಟಾಚಲಯ್ಯ ಅವರ ಮಾತಿಗೆ ಎಸ್ ಎಂಕೆ, ಪ್ರೇಮಾ ಕೃಷ್ಣ ಸೇರಿದಂತೆ ಇಡೀ ಸಭಾಂಗಣ ನಗೆಗಡಲಿಲ್ಲಿ ತೇಲಿದ್ದು ವಿಶೇಷವಾಗಿತ್ತು.