Tag: ಎಂ.ಎಂ.ಕಲಬುರ್ಗಿ

  • ಎಂ.ಎಂ ಕಲಬುರ್ಗಿ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರ್ – ನಾವು ಅಮಾಯಕರು ಎಂದ ಆರೋಪಿ

    ಎಂ.ಎಂ ಕಲಬುರ್ಗಿ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರ್ – ನಾವು ಅಮಾಯಕರು ಎಂದ ಆರೋಪಿ

    ಧಾರವಾಡ: 2015ರ ಆಗಸ್ಟ್‌ನಲ್ಲಿ ಹಂತಕರ ಗುಂಡಿಗೆ ಬಲಿಯಾಗಿದ್ದ ಹಿರಿಯ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಕೊಲೆ ಆರೋಪಿಗಳನ್ನು ಇಂದು ಧಾರವಾಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿಯೋರ್ವ ನಾವು ಅಮಾಯಕರು ಎಂದು ಹೇಳಿಕೊಂಡಿದ್ದಾನೆ.

    6 ಕೊಲೆ ಆರೋಪಿಗಳಲ್ಲಿ ನಾಲ್ವರನ್ನು ಕರೆ ತಂದಿದ್ದ ಪೊಲೀಸರು, ಧಾರವಾಡ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹುಬ್ಬಳ್ಳಿಯ ಅಮೀತ್ ಬದ್ದಿ, ಧಾರವಾಡದ ಗಣೇಶ್ ಮಿಸ್ಕಿನ್, ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ ಹಾಗೂ ಬೆಳಗಾವಿಯ ಪ್ರವೀಣ್ ಚತೂರನನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಡಿಸೆಂಬರ್ 21 ಹಾಗೂ 22 ರಂದು ಕಲಬುರ್ಗಿ ಅವರ ಕೊಲೆ ಆರೋಪಿಗಳ ಸಾಕ್ಷಿ ವಿಚಾರಣೆ ಆರಂಭವಾಗಲಿದೆ. ಹೀಗಾಗಿ ನ್ಯಾಯಾಲಯ 21 ಹಾಗೂ 22 ರಂದು ಮತ್ತೇ ಆರೋಪಿಗಳನ್ನು ಹಾಜರು ಪಡಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು

    ಆರೋಪಿ ಅಮೀತ್ ಬದ್ದಿ, ನಾವು ಅಮಾಯಕರು ಎಂದು ಹೇಳುತ್ತ ಪೊಲೀಸರ ವಾಹನ ಹತ್ತಿದರೆ, ಮತ್ತೋರ್ವ ಆರೋಪಿ ವಾಸುದೇವ, ನಾವು ಅಮಾಯಕರು, ಬಡ ಹಿಂದೂಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೇ ನಮಗೆ ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಇದೆ, ಎಸ್‍ಐಟಿ ನಮ್ಮನ್ನು ಇದರಲ್ಲಿ ಸಿಲುಕಿಸಿದೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಈಗಾಗಲೇ ಇದೇ ಆರೋಪಿಗಳು ಮಹಾರಾಷ್ಟ್ರದ ಚಿಂತಕ ಪನ್ಸಾರೆ ಹಾಗೂ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿದ್ದಾರೆ. ನ್ಯಾಯಾಲಯದ ಒಳಗೆ ಪ್ರಶ್ನೆಗಳಿಗೆ ಮರಾಠಿಯಲ್ಲಿ ಉತ್ತರಿಸುತ್ತಿದ್ದ ಆರೋಪಿಗಳಿಗೆ ನ್ಯಾಯಾಧೀಶರು ಬೆಳಗಾವಿಯವರಾದ ನೀವು ಕನ್ನಡ ಯಾಕೆ ಮಾತನಾಡಲ್ಲ ಎಂದು ಪ್ರಶ್ನೆ ಮಾಡಿದ ಪ್ರಸಂಗವು ವಿಚಾರಣೆ ವೇಳೆ ನಡೆಯಿತು.

  • ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು

    ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು

    ಧಾರವಾಡ: ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ವಿಚಾರಣೆಗೆ ಆಗಮಿಸಿದ್ದ ಆರೋಪಿಗಳು ಕೋರ್ಟ್ ಆವರಣದಲ್ಲಿ ನಾವು ತಪ್ಪು ಮಾಡಿಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಕೂಗಿದ್ದಾರೆ.

    ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ. ಬೆಳಗಾವಿ, ಧಾರವಾಡ ಮತ್ತು ಮುಂಬೈನಲ್ಲಿದ್ದ ಐವರು ಆರೋಪಿಗಳನ್ನು ಇಂದು 3ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

    ಅಮೋಲ್ ಕಾಳೆ ಹೊರತುಪಡಿಸಿ ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್, ಪ್ರವೀಣ್ ಚತುರ, ವಾಸುದೇವ ಸೂರ್ಯವಂಶಿ ಹಾಗೂ ಶರದ್ ಬಾಹು ಸಾಹೇಬರನ್ನು ಪೊಲೀಸರು ವಿಚಾರಣೆಗೆ ಹಾಜರುಪಡಿಸಿದ್ದರು. ಆದರೆ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಅನಾರೋಗ್ಯದ ಹಿನ್ನೆಲೆ ಮೈಸೂರು ಕಾರಾಗೃಹದಿಂದ ಕರೆ ತಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳನ್ನು ಅಕ್ಟೋಬರ್ 24ರಂದು ಹಾಜರುಪಡಿಸಲೇಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದರು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಶಂಕಿತ ಹಂತಕರಿಂದ ಸ್ಫೋಟಕ ಮಾಹಿತಿ-ಮಾಧ್ಯಮಗಳ ಜೊತೆ ಮಾತನಾಡಿದ ಪರಶುರಾಮ್ ವಾಗ್ಮೋರೆ ಮತ್ತು ಮನೋಹರ್ ಯಡವೆ

    ಬೆಳಗ್ಗೆ ನ್ಯಾಯಾಲಯ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ನಾವು ಏನೂ ಮಾಡಿಲ್ಲ. ನಾವು ಅಮಾಯಕರಿದ್ದೇವೆ. ನಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ, ನಮಗೆ ನ್ಯಾಯ ಕೊಡಿಸಿ ಎಂದು ಗೊಣಗುತ್ತಲೇ ಒಳಪ್ರವೇಶಿಸಿದ್ದರು.

    ಅಲ್ಲದೆ ಸಂಜೆ ಕೋರ್ಟ್ ನಿಂದ ತೆರಳುತ್ತಿದ್ದಾಗಲೂ ಅಮಿತ್ ಬದ್ದಿ ಹಾಗೂ ಇತರರು, ನಾವು ಅಮಾಯಕರಿದ್ದೇವೆ. ನಾವು ಏನೂ ಮಾಡಿಯೇ ಇಲ್ಲ. ಎಲ್ಲರೂ ನಮ್ಮನ್ನು ಈ ಪ್ರಕರಣದಲ್ಲಿ ಸಿಲಕಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ನ್ಯಾಯ ಬೇಕು, ನ್ಯಾಯ ಕೊಡಿಸಿ ಎಂದು ಕೂಗಾಡುತ್ತಲೇ ಪೊಲೀಸ್ ವಾಹನ ಏರಿದರು.

    https://youtu.be/oKmyWQuoB5M

  • ಪತಿಗೆ ಗುಂಡಿಕ್ಕಿದ ಆರೋಪಿಯನ್ನು ಗುರುತಿಸಿದ ಎಂ.ಎಂ ಕಲಬುರ್ಗಿ ಪತ್ನಿ

    ಪತಿಗೆ ಗುಂಡಿಕ್ಕಿದ ಆರೋಪಿಯನ್ನು ಗುರುತಿಸಿದ ಎಂ.ಎಂ ಕಲಬುರ್ಗಿ ಪತ್ನಿ

    ಧಾರವಾಡ: ಸಾಹಿತಿ ಮತ್ತು ವಿಚಾರವಾದಿ ಎಂ.ಎಂ ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಯನ್ನು ಕಲಬುರ್ಗಿ ಅವರ ಧರ್ಮಪತ್ನಿ ಉಮಾದೇವಿ ಗುರುತಿಸಿದ್ದಾರೆ.

    ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಎಂದು ಸಾಬೀತು ಆಗಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದ ಗುರುತು ಪತ್ತೆ ಕಾರ್ಯದಲ್ಲಿ ಉಮಾದೇವಿ ಅವರು ಆರೋಪಿ ಗಣೇಶ್ ಮಿಸ್ಕಿನ್‍ನನ್ನು ಗುರುತಿಸಿದ್ದಾರೆ.

    ಧಾರವಾಡ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಗುರುತುಪತ್ತೆ ಕಾರ್ಯದಲ್ಲಿ, ಎಸ್‍ಐಟಿ ಅಧಿಕಾರಿಗಳು ಗಣೇಶ್ ಮಿಸ್ಕಿನ್ ಸೇರಿದಂತೆ ಹತ್ತು ಜನರನ್ನು ನಿಲ್ಲಿಸಿ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ. ಮೂರು ಸುತ್ತಿನಲ್ಲಿ ನಡೆದ ಈ ಗುರುತು ಪತ್ತೆಯಲ್ಲಿ ಮೂರು ಬಾರಿಯೂ ಮಿಸ್ಕಿನ್‍ನನ್ನೇ ಉಮಾದೇವಿ ಅವರು ಗುರುತಿಸಿದ್ದಾರೆ.

    2015ರ ಅಗಸ್ಟ್ 30ರಂದು ಎಂ.ಎಂ ಕಲಬುರ್ಗಿ ನಿವಾಸಕ್ಕೆ ಬೈಕ್‍ನಲ್ಲಿ ಬಂದ ಆರೋಪಿಗಳು ಗುಂಡಿಕ್ಕಿ ಕಲಬುರ್ಗಿಯವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. 4 ವರ್ಷಗಳ ಸುದೀರ್ಘ ತನಿಖೆ ಬಳಿಕ ಇದೀಗ ಪ್ರಕರಣ ಕೊನೆ ಹಂತ ತಲುಪಿದೆ.

  • ವಾಲ್ಮೀಕಿ ರಾಮಾಯಣದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಓದಿಲ್ಲ: ಚಂಪಾ

    ವಾಲ್ಮೀಕಿ ರಾಮಾಯಣದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಓದಿಲ್ಲ: ಚಂಪಾ

    – ಸರ್ಕಾರ ತಮಗೆ ಭದ್ರತೆ ನೀಡಿದ್ಯಾಕೆ? ಚಂಪಾ ಸ್ಪಷ್ಟನೆ

    ಬೆಳಗಾವಿ(ಚಿಕ್ಕೋಡಿ): ವಾಲ್ಮೀಕಿ ರಾಮಾಯಣದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅದನ್ನು ಓದಿಲ್ಲ ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದ ಕನ್ನಡ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಹಿತಿ ಚಂಪಾ, ನಾನು ನಾಸ್ತಿಕ, ದೇವರ ಬಗ್ಗೆ ನನಗೆ ನಂಬಿಕೆಯಿಲ್ಲ. ಜಗತ್ತಿನಲ್ಲಿ 300 ರಾಮಾಯಣಗಳಿವೆ. ಯಾವುದನ್ನೂ ನಾನು ಓದಿಲ್ಲ ಎಂದ ಅವರು, ನಾನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವನು, ಕನ್ನಡ ಭಾಷೆ ಬಗ್ಗೆ ಗೊತ್ತು. ಸಂಸ್ಕೃತದ ಕುರಿತು ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಭಗವಾನ್ ಭದ್ರತೆಗೆ ಅರ್ಧ ಕೋಟಿಗೂ ಹೆಚ್ಚು ಖರ್ಚು ಮಾಡ್ತಿದೆ ಸರ್ಕಾರ..!

    ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಚಂಪಾ, ಎಂ.ಎಂ.ಕಲಬುರ್ಗಿ ನನ್ನ ಸ್ನೇಹಿತರು. ಅವರ ಕೊಲೆಯಾಗಿ ಮೂರು ವರ್ಷ ಕಳೆಯುತ್ತ ಬಂದರೂ ಎಸ್‍ಐಟಿ ಅವರು ತನಿಖೆ ಪೂರ್ಣಗೊಳಿಸಿಲ್ಲ ಎಂದ ಅವರು, ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ನಮಗ್ಯಾಕೆ ಕೆಲ ಶಕ್ತಿಗಳು ಕೊಲೆ ಬೆದರಿಕೆ ಹಾಕುತ್ತಿವೆ? ಕೊಲೆ ಬೆದರಿಕೆ ನಾವು ಹೆದರಿಲ್ಲ. ನಮಗಿಂತ ಹೆಚ್ಚು ಆತಂಕ ಸರ್ಕಾರಕ್ಕಿದೆ. ಹೀಗಾಗಿಯೇ ನಮಗೆ ಸೆಕ್ಯುರಿಟಿ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv