Tag: ಎಂಬಿಎ ವಿದ್ಯಾರ್ಥಿ

  • ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆರೋಪದಡಿ ಹಿರಿಯ ಮ್ಯಾನೇಜರ್ ಮತ್ತು ಎಂಬಿಎ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

    ಮೇ 3 ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಜೆನ್‍ಪ್ಯಾಕ್ಟ್‍ನ ಹಿರಿಯ ವ್ಯವಸ್ಥಾಪಕ ಲವ್ ಬಗ್ಗಾ ಎಂದು ಗುರುತಿಸಲಾಗಿದೆ. ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ತನಗೆ ಕಿರುಕುಳ ನೀಡುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಈ ಕುರಿತಂತೆ ಟ್ವೀಟ್ ಕೂಡ ಮಾಡಿದ್ದರು. ಇದನ್ನೂ ಓದಿ: ಕತ್ತು, ಮರ್ಮಾಂಗ ಹಿಸುಕಿ ಕೊಲೆಗೈದು ದತ್ತುಮಗನ ಶವ ಚೀಲದಲ್ಲಿ ತುಂಬಿ ಕಥೆ ಕಟ್ಟಿದ್ಳು!

    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ ನಂತರ ಆರೋಪಿ ಬಗ್ಗೆ ಮಾಹಿತಿ ಕಲೆಹಾಕಲು ಪ್ರಾರಂಭಿಸಿದರು. ಮೊದಲಿಗೆ ಮೆಟ್ರೋ ನಿಲ್ದಾಣಕ್ಕೆ ವ್ಯಕ್ತಿ ಆಗಮಿಸಿದ್ದನ್ನು ಸಿಸಿಟಿವಿ ದೃಶ್ಯದಲ್ಲಿ ಗಮನಿಸಿದ ಪೊಲೀಸರು, ಬಳಿಕ ಆರೋಪಿ ಪ್ರಯಾಣಿಸಲು ಬಳಸುತ್ತಿದ್ದ ಮೆಟ್ರೋ ಕಾರ್ಡ್‍ನಿಂದ ಆತನ ವಿವರವನ್ನು ಸಂಗ್ರಹಿಸಿದ್ದಾರೆ.

    CNG CRIME

    ಮೂರು ತಿಂಗಳ ತನಿಖೆಯ ನಂತರ ಪ್ರಮುಖ ಆರೋಪಿಯನ್ನು 38 ವರ್ಷದ ಲುವ್ ಬಗ್ಗಾ ಎಂದು ಗುರುತಿಸಿದ ಪೊಲೀಸರು ಆತನನ್ನು ದೆಹಲಿಯ ಪಾಂಡವ್ ನಗರದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ ಮತ್ತು ಪ್ರಕರಣದ ಎರಡನೇ ಆರೋಪಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವಿದ್ಯಾರ್ಥಿಯಾಗಿರುವ 24 ವರ್ಷದ ಶಿವ ಓಂ ಗುಪ್ತಾ ಎಂದು ಗುರುತಿಸಿ ಬಂಧಿಸಿದ್ದಾರೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ತನಿಖೆಯ ವೇಳೆ ಇಬ್ಬರು ಆರೋಪಿಗಳು ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದು ತಿಳಿದುಬಂದಿದೆ. ಜೆನ್‍ಪ್ಯಾಕ್ಟ್‍ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿರುವ ಲವ್ ಬಗ್ಗಾ ಅವರಿಗೆ ಮದುವೆಯಾಗಿದ್ದು, ಮಗು ಕೂಡ ಇದೆ.

    Live Tv
    [brid partner=56869869 player=32851 video=960834 autoplay=true]

  • ಹಾಸ್ಟೆಲ್‍ನಲ್ಲಿ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡ ಎಂಬಿಎ ವಿದ್ಯಾರ್ಥಿ

    ಹಾಸ್ಟೆಲ್‍ನಲ್ಲಿ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡ ಎಂಬಿಎ ವಿದ್ಯಾರ್ಥಿ

    ಚಂಡಿಗಢ: ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹಾಸ್ಟೆಲ್‍ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಪಂಜಾಬ್‍ನ ಲವ್ಲಿ ಪ್ರೋಫೆಷನಲ್ ಯೂನಿರ್ವಸಿಟಿಯಲ್ಲಿ ನಡೆದಿದೆ.

    ಜೈಂಬಲಿ ಮುನೀಶ್ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜೈಂಬಲಿ ಮುನೀಶ್ ಮೂಲತಃ ಆಂಧ್ರ ಪ್ರದೇಶದ ವಿಶಾಕಪಟ್ಟಣದವನು ಎಂದು ಸತ್ನಾಂಪುರ ಎಸ್‍ಎಚ್‍ಒ ಇನ್ಸ್ ಪೆಕ್ಟರ್ ಓಂಕಾರ್ ಸಿಂಗ್ ಬ್ರಾರ್ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಮುನೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲೋಕಲ್ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಬಗ್ಗೆ ಮುನೀಶ್ ಪೋಷಕರು ಮಾಹಿತಿ ನೀಡಲಾಗಿದೆ.

    2ನೇ ವರ್ಷದ ವಿದ್ಯಾರ್ಥಿಯಾಗಿರುವ ಮುನೀಶ್ ತನ್ನ ರೂಮಿನಲ್ಲಿ ಫ್ಯಾನಿಗೆ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುನೀಶ್ ಒತ್ತಡದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.