Tag: ಎಂಪಿ ದೇವೇಂದ್ರಪ್ಪ

  • ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ಸಂತ್ರಸ್ತೆ

    ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ಸಂತ್ರಸ್ತೆ

    ಬೆಂಗಳೂರು: ಬಳ್ಳಾರಿ (Bellary) ಸಂಸದ ದೇವೇಂದ್ರಪ್ಪ (MP Devendrappa) ಪುತ್ರನಿಂದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ (Physical Contact) ಬೆಳೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ (Victim Woman) ಆರೋಪಿಸಿದ್ದಾರೆ.

    ಮದುವೆಯಾಗುವುದಾಗಿ ನಂಬಿಸಿ ನನಗೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಎಂಪಿ ದೇವೇಂದ್ರಪ್ಪ ಅವರ ಮಗ ರಂಗನಾಥ್ (Ranganath) ವಿರುದ್ಧ ಮಹಿಳೆ ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಾಗಿದೆ. ಒಂದೂವರೆ ವರ್ಷದ ಹಿಂದೆ ಉಪನ್ಯಾಸಕ ರಂಗನಾಥ್ ಅವರ ಪರಿಚಯವಾಗಿದ್ದು, ಲೈಂಗಿಕ ಸಂಪರ್ಕ ಬಳಿಕ ಮದುವೆ ಆಗಲ್ಲ ಅಂತ ವಂಚನೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಬೆಂಗಳೂರಿನ (Bengaluru) ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ಸಂತ್ರಸ್ತೆ ಪಬ್ಲಿಕ್ ಟಿವಿ ಜೊತೆ ನೇರ ಮಾತುಕತೆ ನಡೆಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂದು ಬಿಜೆಪಿ ಶಾಸಕಾಂಗ ಸಭೆ – ಕುತೂಹಲ ಮೂಡಿಸಿದ ಯತ್ನಾಳ್‌, ಬೆಲ್ಲದ್‌ ನಡೆ

    ಸಂತ್ರಸ್ತೆ ಹೇಳಿದ್ದೇನು?
    ನನ್ನ ಹಾಗೂ ರಂಗನಾಥ್ ಅವರ ಮೊದಲ ಭೇಟಿ ಜನವರಿಯಲ್ಲಿ ಆಗಿತ್ತು. ಅದಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲಿ ಹೋಟೆಲ್‌ವೊಂದರಲ್ಲಿ ಸ್ನೇಹಿತರ ಮೂಲಕ ನಮ್ಮಿಬರಿಗೆ ಪರಿಚಯವಾಗಿತ್ತು. ನಾನು ನಿನಗೆ ಜೀವನ ಕೊಡುತ್ತೇನೆ, ನಿನ್ನನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ, ನಾನು ಕೈತುಂಬಾ ಸಂಬಳ ತೆಗೆದುಕೊಳ್ಳುತ್ತೇನೆ. ನನಗೆ ಮಗು ಇಲ್ಲ. ನಾವಿಬ್ಬರು ರಹಸ್ಯವಾಗಿರೋಣ ಎಂದೆಲ್ಲಾ ಹೇಳಿದ್ದರು.

    ಅದಾದ ಬಳಿಕ ಒಂದು ಸಲ ಅಪ್ಪ ಅಮ್ಮನಿಗೆ ಪರಿಚಯ ಮಾಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ ನನ್ನನ್ನು ಭೇಟಿ ಮಾಡಿಸದೇ ಖಾಸಗಿ ಹೋಟೆಲ್ ಒಂದರಲ್ಲಿ ಉಳಿಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. ಬಳಿಕ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಎಷ್ಟು ಪೀಡಿಸಿದರೂ ಅವರು ಮದುವೆ ಮಾಡಿಕೊಳ್ಳದೇ ದುಡ್ಡುಕೊಟ್ಟು ಬಿಟ್ಟುಬಿಡು ಎಂದು ಹೇಳಿದ್ದರು. ಅದಾದ ಬಳಿಕವೂ 2-3 ಬಾರಿ ಕೂತು ಮಾತನಾಡಿದ್ದೇವೆ. 6 ತಿಂಗಳ ಬಳಿಕ ನಾನು ಬರುತ್ತೇನೆ, ದಸರಾ ಬಳಿಕ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಬೆಂಗಳೂರು, ಮೈಸೂರಿನಲ್ಲಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ, ಸೆಕ್ಸ್‌ ಹೆಸರಲ್ಲಿ ವಂಚನೆ

    ಅವರಿಗೆ ಮೊದಲೇ ಮದುವೆಯಾಗಿತ್ತು ಎನ್ನುವುದು ಗೊತ್ತಿರಲಿಲ್ಲ. ಜಾತಿ ನಿಂದನೆ ಆರೋಪ ಸುಳ್ಳು. ದುಡ್ಡು ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. 15 ಲಕ್ಷ ಹಣ ಕೇಳಿರುವುದು ಸತ್ಯ. ಆದರೆ ಅದು ಬ್ಲ್ಯಾಕ್‌ಮೇಲ್ ಅಲ್ಲ. ನಾನು ದುಡ್ಡಿಗಾಗಿ ಅವರ ಸ್ನೇಹ ಬೆಳೆಸಿಲ್ಲ. ಮನೆ ಬಾಡಿಗೆಗಾಗಿ ನಾನು ಹಣ ಕೇಳಿದ್ದೆ.

    ಮದುವೆಯಾಗುವುದಾಗಿ ಪ್ರಾಮಿಸ್ ಮಾಡಿದ್ದರು. ಅವರಿಗೆ ಮದುವೆಯಾಗಿದೆ ಅಂತ ಇತ್ತೀಚಿಗೆ ಗೊತ್ತಾಯಿತು. ವಂಚನೆ ಬಳಿಕ ರಂಗನಾಥ್ ತಂದೆ ದೇವೇಂದ್ರಪ್ಪರನ್ನು ಸಂಪರ್ಕಿಸಿದ್ದೆ. ಎಫ್‌ಐಆರ್ ಆದ ಬಳಿಕ ಅವರ ಬಳಿ ಮಾತನಾಡಿದ್ದೆ. ಅವರ ತಂದೆ ಕಾನೂನು ಹೋರಾಟ ಮಾಡಿ ಅಂತ ಹೇಳಿದರು. ಮೋಸ ಮಾಡುತ್ತಿರುವವರು ಅವರೇ. ಹನಿಟ್ರ್ಯಾಪ್ ಅಂತ ಆರೋಪ ಮಾಡಿದರು. ಅದಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

  • ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ, ಸೆಕ್ಸ್‌ ಹೆಸರಲ್ಲಿ ವಂಚನೆ

    ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ, ಸೆಕ್ಸ್‌ ಹೆಸರಲ್ಲಿ ವಂಚನೆ

    ಬೆಂಗಳೂರು: ಬಳ್ಳಾರಿಯ (Bellary) ಬಿಜೆಪಿ ಸಂಸದ ದೇವೇಂದ್ರಪ್ಪ (MP Devendrappa) ಪುತ್ರನಿಂದ ಪ್ರೀತಿ ಹೆಸರಲ್ಲಿ ವಂಚನೆಯ ಆರೋಪ ಕೇಳಿಬಂದಿದೆ. ಎಂಪಿ ದೇವೆಂದ್ರಪ್ಪ ಅವರ ಮಗನ ವಿರುದ್ಧ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.

    ಮೈಸೂರಿನಲ್ಲಿ (Mysuru) ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ (Ranganath) ಬೆಂಗಳೂರು (Bengaluru) ಮೂಲದ ಯುವತಿಗೆ ವಂಚಿಸಿರುವುದಾಗಿ (Fraud) ಆರೋಪಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ 42 ವರ್ಷದ ರಂಗನಾಥ್‌ಗೆ 24 ವರ್ಷದ ಯುವತಿಯ ಪರಿಚಯವಾಗಿತ್ತು. ನಂತರ ಯುವತಿಯೊಂದಿಗೆ ರಂಗನಾಥ್ ಲವ್ವಿಡವ್ವಿ ಶುರುಮಾಡಿದ್ದರು ಎಂಬ ಆರೋಪ ಬಂದಿದೆ.

    ಕಳೆದ ಜನವರಿಯಲ್ಲಿ ಮೈಸೂರಿನ ಖಾಸಗಿ ಹೋಟೇಲ್ ಒಂದರಲ್ಲಿ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಯುವತಿ ರಂಗನಾಥ್‌ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆದರೆ ಬಳಿಕ ರಂಗನಾಥ್ ಯುವತಿಯನ್ನು ಕಡೆಗಣಿಸಲು ಪ್ರಾರಂಭಿಸಿದ್ದರು. ನಿನ್ನನ್ನು ಮದುವೆ ಆಗಲ್ಲ, ಏನು ಮಾಡ್ತೀಯೋ ಮಾಡಿಕೋ ಎಂದು ರಂಗನಾಥ್ ಹೇಳಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಇದನ್ನೂ ಓದಿ: ಸೋಮಣ್ಣ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡ್ತೀನಿ: ಪರಮೇಶ್ವರ್‌

    ಇದೆಲ್ಲದರ ಬಳಿಕ ಯುವತಿ ರಂಗನಾಥ್ ವಿಚಾರವನ್ನು ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾಳೆ. ಆದರೆ ಯುವತಿಯ ವಿರುದ್ಧ ಎಂಪಿ ದೇವೇಂದ್ರಪ್ಪ ಗರಂ ಆಗಿದ್ದಾರೆ. ಕೊನೆಗೆ ಬೇರೆ ಯಾವ ದಾರಿಯೂ ಕಾಣದೆ ಸಂತ್ರಸ್ತೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.

    ಇದೀಗ ಎಂಪಿ ದೇವೇಂದ್ರಪ್ಪ ಅವರ ಮಗ ರಂಗನಾಥ್ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು