Tag: ಎಂಟು ವರ್ಷ

  • ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

    ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

    ನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ (Rangitaranga) ಸಿನಿಮಾ ಅಂದು ‘ಬಾಹುಬಲಿ’ ಚಿತ್ರದ ಎದುರು ಬಿಡುಗಡೆ ಆಗುತ್ತಿದೆ ಎಂದಾಗ ನಕ್ಕವರೇ ಹೆಚ್ಚು. ಬಹುಕೋಟಿ ವೆಚ್ಚದಲ್ಲಿ ತಯಾರಾದ ಬಾಹುಬಲಿ ಸಿನಿಮಾ ಎದುರು, ಹೆಸರೇ ಇಲ್ಲದ ಹುಡುಗರ ಟೀಮ್ ವೊಂದು ಹುಚ್ಚಾಟ ಮಾಡುತ್ತಿದೆ ಎಂದು ಹೇಳಿದ್ದೂ ಇದೆ. ಅನೂಪ್ ಭಂಡಾರಿ (Anoop Bhandari), ನಿರೂಪ್ ಭಂಡಾರಿ (Nirup Bhandari), ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಹೀಗೆ ಎಲ್ಲ ಹೊಸ ಹೆಸರುಗಳೆ.

    ರಾಜಮೌಳಿ ಎಂಬ ಅದ್ಭುತ ನಿರ್ದೇಶಕನ ಚಿತ್ರ ಬಾಹುಬಲಿ (Baahubali). ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಹೀಗೆ ಸ್ಟಾರ್ ಗಳ ಪಟ್ಟಿಯೇ ಹೊಂದಿರುವ ಸಿನಿಮಾದ ಎದುರು ಕನ್ನಡದ ರಂಗಿತರಂಗ ಬಿಡುಗಡೆ ಆಯಿತು. ಬಾಹುಬಲಿ ಅಬ್ಬರಕ್ಕೆ ಸಿನಿಮಾ ಬಲಿಯೇ ಆಗಲಿದೆ ಎಂದು ಆಡಿಕೊಂಡವರ ಬಾಯಿಗೆ ಬೀಗ ಹಾಕಿತ್ತು ರಂಗಿತರಂಗ. ಬಾಹುಬಲಿಯ ಯಶಸ್ಸಿನ ನಡುವೆಯೂ ಬರೋಬ್ಬರಿ ಒಂದು ವರ್ಷಗಳ ಕಾಲ ರಂಗಿತರಂಗ ಪ್ರದರ್ಶನ ಕಂಡಿತು. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ಯಾವೆಲ್ಲವೂ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೆಸರುಗಳು ಎಂದು ಕಾಣುತ್ತಿದ್ದವೋ, ಅವೆಲ್ಲವೂ ಕನ್ನಡ ಚಿತ್ರೋದ್ಯಮದಲ್ಲಿ ಚಿರಪರಿಚಿತ ಹೆಸರುಗಳಾದವು. ಮುಂದೆ ಆ ಎಲ್ಲ ಹೆಸರುಗಳೂ ಸ್ಟಾರ್ ನಟರ ಪಟ್ಟಿಯಲ್ಲೂ ಕಾಣಿಸಿಕೊಂಡವು. ಅಂತಹ ರಂಗಿತರಂಗ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಎಂಟು ವರ್ಷಗಳಾಗಿವೆ. ಆ ದಿನವನ್ನು ಚಿತ್ರತಂಡ ನೆನಪಿಸಿಕೊಂಡಿದೆ.

    ಹೌದು, ರಂಗಿತರಂಗ ಸಿನಿಮಾ ರಿಲೀಸ್ ಆಗಿ ಎಂಟು ವರ್ಷಗಳಾಗಿವೆ (Eight Years). ಈ ಸಂದರ್ಭದಲ್ಲಿ ನಿರೂಪ್ ಭಂಡಾರಿ ಸಿನಿಮಾದ ಪೋಸ್ಟರ್ ವೊಂದನ್ನು ಹಂಚಿಕೊಂಡು, ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿತ್ರದೊಂದಿಗೆ ನಿಂತವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ರಂಗಿತರಂಗದ ಗೆಲುವನ್ನೂ ಮತ್ತೆ ನೆನಪಿಸಿಕೊಂಡು ಸಂಭ್ರಮಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]