Tag: ಎಂಟಿಬಿ ನಾಗರಾಜ್

  • ಇಷ್ಟು ದಿನ ಏಕೆ ಸುಮ್ಮನಿದ್ದರು?- ಸುಧಾಕರ್ ವಿರುದ್ಧವೇ ತಿರುಗಿ ಬಿದ್ದ ಎಂಟಿಬಿ

    ಇಷ್ಟು ದಿನ ಏಕೆ ಸುಮ್ಮನಿದ್ದರು?- ಸುಧಾಕರ್ ವಿರುದ್ಧವೇ ತಿರುಗಿ ಬಿದ್ದ ಎಂಟಿಬಿ

    ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಮಾಜಿ ಶಿಷ್ಯಂದಿರಲ್ಲಿಯೇ ಇದೀಗ ಒಡಕು ಮೂಡಿದೆ. ಸಿದ್ದರಾಮಯ್ಯ ಪರ ಎಂಟಿಬಿ ನಾಗರಾಜ್ (MTB Nagaraj) ಬ್ಯಾಟಿಂಗ್ ಮಾಡಿದ್ದಾರೆ.

    ಬಿಜೆಪಿಗೆ ಸಿದ್ದರಾಮಯ್ಯ ಪ್ರೇರಣೆ ಎಂಬ ಡಾ.ಕೆ.ಸುಧಾಕರ್ (K Sudhakar), ಎಸ್ ಟಿ ಸೋಮಶೇಖರ್ (ST Somashekhar) ಟ್ವೀಟ್ ಹಿನ್ನೆಲೆಯಲ್ಲಿ ಇದೀಗ ಎಂಟಿಬಿ ಅವರು ಸುಧಾಕರ್ ಗೆ ಕೌಂಟರ್ ನೀಡಿದ್ದಾರೆ. ಸುಧಾಕರ್ ಟ್ವೀಟ್ ಗೆ ಎಂಟಿಬಿ ವಿರೋಧ ವ್ಯಕ್ತಪಡಿಸಿದ್ದು, ಸುಧಾಕರ್ ಸುಳ್ಳು ಹೇಳ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ

    ಮನೆ ದೇವರ ಮೇಲೆ ಆಣೆ ಮಾಡಿ ಸುಧಾಕರ್ ಈ ಮಾತು ಹೇಳಲಿ ಎಂದು ಎಂಟಿಬಿ ಸವಾಲು ಎಸೆದಿದ್ದಾರೆ. ಸಿದ್ದರಾಮಯ್ಯರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿದ್ದೇನೆ. ಈ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ. ಆದರೆ ಮಾಜಿ ಸಚಿವರಾದ ಸುಧಾಕರ್ ರವರು ಇಂದು ಸಿದ್ದರಾಮಯ್ಯರವರ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ ಇಷ್ಟು ದಿನ ಏಕೆ ಸುಮ್ಮನಿದ್ದರು? ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ? ಇಷ್ಟು ದಿನ ಮೌನವಾಗಿದ್ದು ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

  • ಸರ್ಕಾರ ರಚಿಸುವ ಮೊದಲೇ ಕಾಂಗ್ರೆಸ್ಸಿನಿಂದ ಹತ್ಯೆಯ ಗ್ಯಾರಂಟಿ – ಬಿಜೆಪಿ ಕಾರ್ಯಕರ್ತನ ಕೊಲೆಗೆ ಅಶ್ವಥ್ ನಾರಾಯಣ ಆಕ್ರೋಶ

    ಸರ್ಕಾರ ರಚಿಸುವ ಮೊದಲೇ ಕಾಂಗ್ರೆಸ್ಸಿನಿಂದ ಹತ್ಯೆಯ ಗ್ಯಾರಂಟಿ – ಬಿಜೆಪಿ ಕಾರ್ಯಕರ್ತನ ಕೊಲೆಗೆ ಅಶ್ವಥ್ ನಾರಾಯಣ ಆಕ್ರೋಶ

    ಬೆಂಗಳೂರು: ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Election Results) ಪ್ರಕಟಗೊಂಡ ಕೆಲವೇ ಗಂಟೆಗಳ ಬಳಿಕ ಬಿಜೆಪಿ ಕಾರ್ಯಕರ್ತರೊಬ್ಬರ (BJP Worker) ಹತ್ಯೆಯಾಗಿದೆ. ಸರ್ಕಾರ ರಚಿಸುವ ಮೊದಲೇ ಬಿಜೆಪಿ ಕಾರ್ಯಕರ್ತರ ಹತ್ಯೆಯ ಗ್ಯಾರಂಟಿ ಈಡೇರಿಸಿದ್ದಾರೆ ಎಂದು ಅಶ್ವಥ್ ನಾರಾಯಣ (Ashwath Narayan) ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನಾರಾಯಣ, ಸರ್ಕಾರ ರಚಿಸುವ ಮೊದಲೇ ಬಿಜೆಪಿ ಕಾರ್ಯಕರ್ತರ ಹತ್ಯೆಯ ಗ್ಯಾರಂಟಿಯನ್ನು ಈಡೇರಿಸಿದ ಕಾಂಗ್ರೆಸ್ಸಿಗರು ದ್ವೇಷದ ಹಾಗೂ ದರ್ಪದ ರಾಜಕಾರಣವನ್ನು ಅವರ ಎಂದಿನ ಚಾಳಿಯಂತೆ ಮುಂದುವರಿಸಿದ್ದಾರೆ.

    ಹೊಸಕೋಟೆಯ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿರುವುದು ಖಂಡನೀಯ. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಬರೆದಿದ್ದಾರೆ.

    ಘಟನೆಯೇನು?
    ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ಬೆಂಬಲಿಗನ ಕೊಲೆ ನಡೆದಿದೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ವೇಳೆ ಆರಂಭವಾದ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ.

    ಎಂಟಿಬಿ ನಾಗರಾಜ್ ಅವರ ಬೆಂಬಲಿಗ ಕೃಷ್ಣಪ್ಪ (56) ಕೊಲೆಯಾದ ವ್ಯಕ್ತಿ. ಕಾಂಗ್ರೆಸ್ ಬೆಂಬಲಿಗ ಆದಿತ್ಯ ತನ್ನ ದೊಡ್ಡಪ್ಪನನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನನ್ನ ಶ್ರಮಕ್ಕೆ ಫಲ ಕೇಳುತ್ತಿದ್ದೇನೆ ಅಷ್ಟೇ: ಸಿಎಂ ಹುದ್ದೆಗೆ ಡಿಕೆಶಿ ಪಟ್ಟು

    ಕೃಷ್ಣಪ್ಪ ಹಾಗೂ ಅವರ ಸಹೋದರ ಗಣೇಶಪ್ಪನ ನಡುವೆ ಚುನಾವಣೆ ಸೋಲಿನ ವಿಚಾರವಾಗಿ ಗಲಾಟೆ ಪ್ರಾರಂಭವಾಗಿದ್ದು, ಬಳಿಕ ಗಣೇಶಪ್ಪನ ಮಗ ಆದಿತ್ಯ ಚಾಕುವಿನಿಂದ ಇರಿದು ಕೃಷ್ಣಪ್ಪ ಅವರ ಹತ್ಯೆ ನಡೆಸಿದ್ದಾನೆ. ನಂದನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.

    ಹತ್ಯೆಯ ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪೊಲೀಸ್ ಠಾಣೆಯ ಮುಂಭಾಗ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ದ್ವೇಶದಿಂದ ನಡೆದಿರುವ ಕೊಲೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು ಆರೋಪಿಯನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿರುವ ಪಕ್ಷೇತರ ಅಭ್ಯರ್ಥಿ

  • ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

    ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

    ಬೆಂಗಳೂರು: ವಿಧಾನಸಭೆ ಚುನಾವಣೆಗೆ (Assembly Election) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು (Candidates) ಈಗಾಗಲೇ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದೆ.

    ರಾಜಕೀಯ ಕುಬೇರರು:
    ಎಂಟಿಬಿ ನಾಗರಾಜ್, ಹೊಸಕೋಟೆ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂ.
    * ಚರಾಸ್ತಿ ಮೌಲ್ಯ 372 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ 792 ಕೋಟಿ ರೂ.
    * ಪತ್ನಿ ಹೆಸರಲ್ಲಿ 437 ಕೋಟಿ ಮೌಲ್ಯದ ಆಸ್ತಿ
    * ಸಾಲ 71 ಕೋಟಿ ರೂ.
    * ಕಾರುಗಳ ಮೌಲ್ಯ 1.72 ಕೋಟಿ ರೂ.

    ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ – 46.57 ಕೋಟಿ ರೂ.
    * 750 ಗ್ರಾಂ ಚಿನ್ನ, ಸಾಲ 17 ಕೋಟಿ
    * ಪತ್ನಿ ಹೆಸರಲ್ಲಿ 124 ಕೋಟಿ ಮೌಲ್ಯದ ಆಸ್ತಿ, 3.8 ಕೆಜಿ ಚಿನ್ನ
    * ಕುಮಾರಸ್ವಾಮಿ ವಿರುದ್ಧ 5 ಕ್ರಿಮಿನಲ್ ಕೇಸ್

    ಹೆಚ್‌ಡಿ ರೇವಣ್ಣ, ಹೊಳೆನರಸೀಪುರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ – 43.37 ಕೋಟಿ ರೂ.
    * 9 ಕೋಟಿ ರೂ. ಸಾಲ ಮಾಡಿರುವ ರೇವಣ್ಣ
    * ಪತ್ನಿ ಹೆಸರಲ್ಲಿ 38 ಕೋಟಿ ರೂ. ಮೌಲ್ಯದ ಆಸ್ತಿ (5 ಕೋಟಿ ಸಾಲ)
    * 3 ಕೆಜಿ ಚಿನ್ನ, 45 ಕೆಜಿ ಬೆಳ್ಳಿ, 25 ಕ್ಯಾರೆಟ್ ವಜ್ರ

    ವಿಜಯೇಂದ್ರ, ಶಿಕಾರಿಪುರ ಅಭ್ಯರ್ಥಿ:
    * 103 ಕೋಟಿ ರೂ. ಮೌಲ್ಯದ ಆಸ್ತಿ
    * ಒಂದು ಟ್ರ್ಯಾಕ್ಟರ್, ಒಂದು ಟಿಲ್ಲರ್
    * ಪತ್ನಿ ಹೆಸರಲ್ಲಿ 21 ಕೋಟಿ ರೂ. ಮೌಲ್ಯ ಆಸ್ತಿ

    ಎಂಬಿ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ:
    * 105 ಕೋಟಿ ರೂ. ಮೌಲ್ಯದ ಆಸ್ತಿ ಇದೆ
    * 34 ಕೋಟಿ ರೂ. ಸಾಲ ಹೊಂದಿದ್ದಾರೆ
    * 5 ಕ್ರಿಮಿನಲ್ ಕೇಸ್ ಇದೆ

    ಆರ್ ಅಶೋಕ್, ಪದ್ಮನಾಭನಗರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ.
    * ಒಟ್ಟು ಸಾಲ 97.78 ಲಕ್ಷ ರೂ.
    * ಪತ್ನಿಯಿಂದಲೇ 42 ಲಕ್ಷ ರೂ. ಸಾಲ

    ಮುನಿರತ್ನ, ಆರ್‌ಆರ್ ನಗರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 270 ಕೋಟಿ ರೂ.
    * ಚರಾಸ್ತಿ ಮೌಲ್ಯ – 31.34 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ – 239.29 ಕೋಟಿ ರೂ.
    * ಸಾಲದ ಮೊತ್ತ – 93.48 ಕೋಟಿ ರೂ.
    * ಪತ್ನಿ ಹೆಸರಲ್ಲಿ 22 ಕೋಟಿ ರೂ. ಮೌಲ್ಯದ ಆಸ್ತಿ ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಹೊಸಬರಿಗೆ ಮಣೆ – ಕರ್ನಾಟಕ ಬಿಜೆಪಿಯಿಂದ ಗುಜರಾತ್‌ ದಾಖಲೆ ಬ್ರೇಕ್‌

    ಉದಯ್ ಗರುಡಾಚಾರ್, ಚಿಕ್ಕಪೇಟೆ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ರೂ.
    * 22 ಕೆಜಿ ಚಿನ್ನಾಭರಣ ಹೊಂದಿದ್ದಾರೆ
    * ಸಾಲದ ಪ್ರಮಾಣ – 47.63 ಕೋಟಿ ರೂ.

    ಅರುಣಾಲಕ್ಷ್ಮಿ, ಬಳ್ಳಾರಿ ನಗರ ಅಭ್ಯರ್ಥಿ:
    * 200 ಕೋಟಿ ರೂ. ಮೌಲ್ಯದ ಆಸ್ತಿ
    * ಚರಾಸ್ತಿ ಮೌಲ್ಯ – 96.23 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ – 104.38 ಕೋಟಿ ರೂ.
    * 16.44 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದನ್ನೂ ಓದಿ: ಲಿಂಬಾವಳಿ, ರಾಮದಾಸ್‌ಗೆ ಟಿಕೆಟ್‌ ಮಿಸ್‌- ಬಿಜೆಪಿಯ10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

  • ಎಂಟಿಬಿಯಿಂದ ಕವ್ವಾಲಿ ಆಯೋಜನೆ – ಹಣದ ಮಳೆ ಸುರಿಸಿದ ಮುಸ್ಲಿಂ ಮುಖಂಡರು

    ಎಂಟಿಬಿಯಿಂದ ಕವ್ವಾಲಿ ಆಯೋಜನೆ – ಹಣದ ಮಳೆ ಸುರಿಸಿದ ಮುಸ್ಲಿಂ ಮುಖಂಡರು

    ಬೆಂಗಳೂರು: ನಗರದ ಹೊರವಲಯದ ಹೊಸಕೋಟೆ ಮಾಜಿ ಶಾಸಕ ಹಾಗೂ ಹಾಲಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಅವರು ಕವ್ವಾಲಿ ಕಾರ್ಯಕ್ರಮವನ್ನು (Qawwali Program) ಆಯೋಜನೆ ಮಾಡಿ ಭಾಗಿಯಾಗಿದ್ದಾರೆ.

    ಪ್ರತಿ ವರ್ಷದಂತೆ ಸಚಿವ ಎಂಟಿಬಿ ನಾಗರಾಜ್ ಕವ್ವಾಲಿ ಕಾರ್ಯಕ್ರಮವನ್ನು ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ. ಕಾರ್ಯಕ್ರಮವನ್ನು ತಾವೇ ಏರ್ಪಡಿಸಿದ್ದು, ಅವರ ಜೊತೆ ಮಗ ನಿತೀಶ್ ಪುರುಷೋತ್ತಮ್ ಕೂಡಾ ಭಾಗಿಯಾಗಿದ್ದರು. ಸೋಮವಾರ ಮಧ್ಯರಾತ್ರಿಯವರೆಗೆ ಈ ಕಾರ್ಯಕ್ರಮ ನಡೆದಿದೆ.

    ಮುಸಲ್ಮಾನರಿಗಾಗಿ (Muslims) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗರಾಜ್ ಹಾಗೂ ಅವರ ಪುತ್ರ ನಿತೀಶ್ ಟೊಪಿ ಧರಿಸಿದ್ದರು. ನಾಗರಾಜ್ ಭಾಷಣವನ್ನು ಕೂಡಾ ಉರ್ದು ಭಾಷೆಯಲ್ಲಿಯೇ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಎಲೆಕ್ಷನ್ ‘ಲಕ್ಷ್ಮಿ’ ಕಟಾಕ್ಷ – ಇದು ಯುಪಿ ಮಾಡೆಲ್?

    ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಈ ಕಾರ್ಯಕ್ರಮವನ್ನು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ನಿತೀಶ್, ನಾವು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ. ನಾವು ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜಿಸಿಲ್ಲ. ಎಲ್ಲ ಧರ್ಮದವರು ಬಾಂಧವ್ಯದಿಂದ ಇರಬೇಕು ಎನ್ನುವುದು ನಮ್ಮ ಬಯಕೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ‘ಗೃಹಲಕ್ಷ್ಮಿ’ಗೆ ಬೊಮ್ಮಾಯಿ ಬಜೆಟ್ ಕೌಂಟರ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೇದಿಕೆಯಲ್ಲೇ ಎಂಟಿಬಿ, ಶರತ್ ಬಚ್ಚೇಗೌಡ ಮಧ್ಯೆ ಟಾಕ್‌ ಫೈಟ್‌

    ವೇದಿಕೆಯಲ್ಲೇ ಎಂಟಿಬಿ, ಶರತ್ ಬಚ್ಚೇಗೌಡ ಮಧ್ಯೆ ಟಾಕ್‌ ಫೈಟ್‌

    ಆನೇಕಲ್‌: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ(Sharath Bachegowda) ಹಾಗೂ ಸಚಿವ ಎಂಟಿಬಿ ನಾಗರಾಜ್(MTB Nagaraj) ವೇದಿಕೆಯಲ್ಲಿ ಪರಸ್ಪರ ಮಾತಿನ ಚಕಮಕಿಯನ್ನು ನಡೆಸಿದ್ದಾರೆ.

    ಹೊಸಕೋಟೆ(Hosakote) ತಾಲೂಕಿನ ಮುತ್ಸಂದ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಸಚಿವರು ಭಾಷಣ ಮಾಡಿ ವೇದಿಕೆಯಿಂದ ಹೊರಡುತ್ತಿದ್ದ ವೇಳೆಯಲ್ಲಿ ಶಾಸಕರಾದ ಶರತ್ ಬಚ್ಚೇಗೌಡ ಹೊಸಕೋಟೆ ಸಮಸ್ಯೆಗಳನ್ನು ನಾನು ಹೇಳುತ್ತೇನೆ ಕೇಳಿಸಿಕೊಂಡು ಹೋಗಬೇಕು. ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಇದನ್ನು ಹೇಳಿ ಬಗೆಹರಿಸಿ ಕೊಡಿ ಎಂದು ಹೇಳಿದ್ದಾರೆ. ಈ ವೇಳೆಯಲ್ಲಿ ಸಚಿವರು ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ವೇದಿಕೆಯ ಮೇಲೆ ವಾಕ್ ಸಮರ ನಡೆಯಿತು. ಇದನ್ನೂ ಓದಿ: ಸಿಟಿ ರವಿಗಿಂತ ಹೆಚ್ಚಿನ ಹಿಂದೂ ನಾನು – ಕರಾವಳಿಯಲ್ಲಿ ಸಿದ್ದರಾಮಯ್ಯ ಹಿಂದೂ ಜಪ

    ನಿಮ್ಮ ಭಾಷಣ ಕೇಳಿದ್ದೇನೆ. ನನ್ನ ಭಾಷಣದಲ್ಲಿ ಸಮಸ್ಯೆಗಳ ಪಟ್ಟಿಯನ್ನು ಓದುತ್ತೇನೆ ಕೇಳಿಸಿಕೊಂಡು ಸಿಎಂ ಸಭೆಯಲ್ಲಿಟ್ಟು ಪರಿಹರಿಸಿ ಅಂತಾ ಎಂಟಿಬಿಗೆ ವೇದಿಕೆಯಲ್ಲೇ ಠಕ್ಕರ್‌ ಕೊಟ್ಟಿದ್ದಾರೆ. ಇದಕ್ಕೆ ಮತ್ತೊಂದು ಮೈಕ್‌ನಲ್ಲಿ ಸಮಸ್ಯೆಗಳ ಪಟ್ಟಿಕೊಡಿ ಎಂದು ಹೇಳಿ ಎಂಟಿಬಿ ವೇದಿಕೆಯಿಂದ ಇಳಿದಿದ್ದಾರೆ.

    ಎಂಟಿಬಿ ಇಳಿಯತ್ತಿದ್ದಂತೆ ವೇದಿಕೆ ಮೇಲೆಯಿಂದಲೇ ಸಚಿವರಿಗೆ ಶರತ್ ಬಚ್ಚೇಗೌಡ ಧಿಕ್ಕಾರ ಕೂಗಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಸಭೆಗೆ ಬಂದಿದ್ದ ಜನರ ಬಳಿ ಸಮಸ್ಯೆ ಹೇಳಿಕೊಳ್ಳಬಾರದೇ? ಸಿಎಂ ಹತ್ರ ಇವರು ಕೆಲಸ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.


    ಕಂದಾಯ ಇಲಾಖೆ ವತಿಯಿಂದ ನಡೆಸುವ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗೈರಾಗಿದ್ದರೂ ಕನಿಷ್ಠಪಕ್ಷ ಶಾಸಕರು ಹಾಗೂ ಸಚಿವರು ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಮನವಿ ಮಾಡಲು ಸ್ಥಳಕ್ಕೆ ಬಂದಿದ್ದರು. ಆದರೆ ಕಿತ್ತಾಟವನ್ನು ನೋಡಿದ ಸಾರ್ವಜನಿಕರು ಬೇಸರದಿಂದ ವಾಪಸ್ ತೆರಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವನಾಥ್ ಮನಸ್ಥಿತಿ ಗೊತ್ತಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ: ಎಂಟಿಬಿ

    ವಿಶ್ವನಾಥ್ ಮನಸ್ಥಿತಿ ಗೊತ್ತಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ: ಎಂಟಿಬಿ

    ರಾಯಚೂರು: ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಮನಸ್ಥಿತಿ ಗೊತ್ತಿಲ್ಲ, ಆದರೆ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ (MTB Nagaraj) ಹೇಳಿದರು.

    ರಾಯಚೂರು (Raichur) ತಾಲೂಕಿನ ಗಾಣದಾಳದಲ್ಲಿ ನಡೆದ ಕನಕದಾಸ ಪುತ್ಥಳಿ ಅನಾವರಣ ಹಾಗೂ ಕನಕ ಭವನ ಭೂಮಿ ಪೂಜೆ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು, ಹೆಚ್. ವಿಶ್ವನಾಥ್ (H Vishwanath) ಅವರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಹೋಗಿದ್ದರು, ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋದಾಗ ಅಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಅವರು ಕಾಂಗ್ರೆಸ್‍ಗೆ (Congress) ಹೋಗುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

    ಈ ಬಾರಿಯ ರಾಜ್ಯದ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲು ಶ್ರಮಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ತೆರುವುದೊಂದೇ ಗುರಿಯಾಗಿದೆ. ವರಿಷ್ಠರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಹೇಳಿದರೇ ಹೊಸಕೋಟೆಯಿಂದ ಸ್ಪರ್ಧಿಸುತ್ತೇನೆ. ಮಗ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದರೆ ಮಗನನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತೇನೆ. ಆದರೆ ಬಿಜೆಪಿ ಬಿಟ್ಟು ಹೋಗಲ್ಲ ಎಂದರು.

    ಜನಾರ್ದನ ರೆಡ್ಡಿ ಹೊಸ ಪಕ್ಷಕ್ಕೆ ಆಹ್ವಾನ ನೀಡಿರುವ ಗುಮಾನಿ ವಿಚಾರದ ಬಗ್ಗೆ ಮಾತನಾಡಿ, ನಾನು ಯಾವ ಪ್ರಾದೇಶಿಕ ಪಕ್ಷಕ್ಕೂ ಹೋಗಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದರು. ಇನ್ನೂ ಸಿದ್ದರಾಮಯ್ಯಗೆ ಸಿದ್ರಾಮುಲ್ಲಾಖಾನ್ ಅಂತ ಬಿಂಬಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಹಾಗೇ ಕರೆಯುತ್ತಾರೋ ಅವರವರ ವೈಯಕ್ತಿಕ ವಿಚಾರ ಅಷ್ಟೇ ಎಂದು ಹೇಳಿದರು.

    ಸಮುದಾಯದ ಎರಡನೇ ಹಂತದ ನಾಯಕನ ಪಟ್ಟಕ್ಕೆ ಓಡಾಡುತ್ತಿದ್ದಾರೆ ಎನ್ನುವ ವಿಚಾರವನ್ನು ತಳ್ಳಿಹಾಕಿದ ಅವರು, ಮೊದಲನೇ ಹಂತ, ಎರಡನೇ ಹಂತದ ನಾಯಕನಾಗಬೇಕು ಎನ್ನುವ ಮನಸ್ಥಿತಿಯಿಲ್ಲ. ನಮ್ಮಂಥ ಶಕ್ತಿ ಇರುವವರು ಸಮುದಾಯದ ಸಂಘಟನೆ ಮಾಡಬೇಕು ಎಂದರು. ಇದನ್ನೂ ಓದಿ: ಸೈನಿಕರ ಕಲ್ಯಾಣ, ಸೇನೆಯ ಸಬಲೀಕರಣಕ್ಕೆ ಸರ್ಕಾರ ಬದ್ಧ: ಗೆಹ್ಲೋಟ್

    ರಾಜ್ಯ ಹಾಗೂ ಮಹಾರಾಷ್ಟ್ರದ ಮಧ್ಯೆ ಗಡಿ ವಿವಾದ ಮತ್ತೆ ಶುರುವಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರು ಬಹಳ ಕ್ಯಾತೆ ತೆಗೆದಿದ್ದಾರೆ. ಕನ್ನಡ ಸಂಘಟನೆ ಹೋರಾಟಗಾರರು ಪ್ರತಿಭಟಿಸುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನ ಸಾಮರಸ್ಯವಾಗಿ ಬಗೆಹರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ದೆಹಲಿ ಅಭಿವೃದ್ಧಿಗೆ ಮೋದಿ ಆಶೀರ್ವಾದ ಬೇಕು: ಕೇಜ್ರಿವಾಲ್

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

    ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

    ಚಿಕ್ಕಬಳ್ಳಾಪುರ: ಕಳೆದ ಬಾರಿಯ ಉಪಚುನಾವಣೆ (By Election) ವೇಳೆ ಕಾಂಗ್ರೆಸ್ (Congress) ಬಿಟ್ಟು ಬಿಜೆಪಿಗೆ (BJP) ಬಂದಿದ್ದಕ್ಕೆ ಜನ ನನ್ನನ್ನು ಸೋಲಿಸಿಬಿಟ್ಟರು ಎಂದು ಪೌರಾಡಳಿತ ಇಲಾಖೆ ಸಚಿವ ಎಂಟಿಬಿ ನಾಗರಾಜ್ (MTB Nagaraj) ತಮ್ಮ ಸೋಲಿನ ಕಹಿ ನೆನಪನ್ನು ಮಾಡಿಕೊಂಡಿದ್ದಾರೆ.

    ಚಿಕ್ಕಬಳ್ಳಾಪುರದ (Chikkaballapura) ಜರಬಂಡಹಳ್ಳಿ (Jarabandahalli) ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಶಾಸಕರು, ಸಚಿವರು ಸರ್ಕಾರ ಕೆಲಸ ಮಾಡಿದೆ ಅಂತ ಜನರೇ ನೆನೆಪಿಟ್ಟುಕೊಳ್ಳಿ. ಯಾಕೆಂದರೆ ಚುನಾವಣೆ ಬಂದ ನಾಲ್ಕೈದು ದಿನದಲ್ಲೇ ಮೆರೆತು ಬಿಡುತ್ತೀರಾ. ನಿದ್ದೆ ಮಂಪರು ಬಂದ ಹಾಗೆ ತೂಕಡಿಸಿಬಿಡುತ್ತೀರಾ. ಮೊನ್ನೆ ನಡೆದ ಬೈ ಎಲೆಕ್ಷನ್‍ನಲ್ಲಿ ನಾನು ಸೋಲಬೇಕಿತ್ತಾ? ಆದರೆ ಸೋಲಿಸಿಬಿಟ್ಟಿದ್ದೀರಾ ಎಂದಿದ್ದಾರೆ. ಇದನ್ನೂ ಓದಿ: ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನ

    ಈ ವಿಚಾರದಲ್ಲಿ ನನ್ನದು ಒಂದು ತಪ್ಪಿದೆ. ಸುಧಾಕರ್ ಜೊತೆಗೆ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದನಲ್ಲ ಅದಕ್ಕೆ ಸೋಲಿಸಿಬಿಟ್ಟಿದ್ದೀರಾ. ಆದರೆ ಸುಧಾಕರ್‌ನನ್ನು ಗೆಲ್ಲಿಸಿದ್ದೀರಾ. ಇದೇ ನನಗೆ ನೋವು ತರಿಸಿದೆ. ಸೋಲಿನಿಂದ ನನಗೆ ಏನೂ ಕಷ್ಟವಾಗಲಿಲ್ಲ. ಆದರೆ ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆ ಆಯಿತು. ಹೊಸಕೋಟೆ ಜನರ ಸೇವೆ ಮಾಡಲು ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ವೈಷ್ಣವಿ ಹಾಗೂ ವಿದ್ಯಾಭರಣ್ ಪರಿಚಯವಾಗಿದ್ದು 2017ರಲ್ಲಿ: ಚಾಕೋಲೇಟ್ ಬಾಯ್ ಸ್ಟೋರಿ

    Live Tv
    [brid partner=56869869 player=32851 video=960834 autoplay=true]

  • ನಿಮಿಷದಲ್ಲೇ 35 ಲಕ್ಷ ರೂ. ದಾನ ಮಾಡಿದ ಎಂಟಿಬಿ ನಾಗರಾಜ್

    ನಿಮಿಷದಲ್ಲೇ 35 ಲಕ್ಷ ರೂ. ದಾನ ಮಾಡಿದ ಎಂಟಿಬಿ ನಾಗರಾಜ್

    ಚಿಕ್ಕಬಳ್ಳಾಪುರ: ರಾಜ್ಯ ಪೌರಾಡಳಿತ ಇಲಾಖಾ ಸಚಿವ ಹಾಗೂ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಕೇವಲ ಒಂದೇ ನಿಮಿಷದಲ್ಲಿ ಹಿಂದೆ ಮುಂದೆ ನೋಡದೇ 35 ಲಕ್ಷ ರೂಪಾಯಿ ದಾನ ಮಾಡಿದ್ದಾರೆ.

    ಅಂದಹಾಗೆ ಚಿಕ್ಕಬಳ್ಳಾಪುರ ಹೊರವಲಯದ ಜೈನ್ ಆಸ್ಪತ್ರೆ ಅವರಣದಲ್ಲಿ ದಿವಂಗತ ಮಂಗಿಶೆಟ್ಟಿ ನರಸಿಂಹಯ್ಯ ರಂಗಮ್ಮ ಟ್ರಸ್ಟ್ ಹಾಗೂ ಜೈನ್ ಮಿಷನ್ ಆಸ್ಪತ್ರೆ ನೇತೃತ್ವದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರದೊಂದಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂಟಿಬಿ ನಾಗರಾಜ್ ಅವರು ಆಗಮಿಸಿದ್ದರು. ಇದನ್ನೂ ಓದಿ: ‘ಕರ್ನಾಟಕ ರತ್ನ’ದ ಅರ್ಥನೇ ಪುನೀತ್ ರಾಜ್ ಕುಮಾರ್ : ಜ್ಯೂನಿಯರ್ ಎನ್.ಟಿ.ಆರ್

    ಕಾಲಿಲ್ಲದ ವಿಶೇಷಚೇತನರಿಗೆ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್ ವತಿಯಿಂದ ಉಚಿತವಾಗಿ ಕೃತಕ ಕಾಲು ಜೋಡಣೆ ಶಿಬಿರ ಇದಾಗಿತ್ತು. ಸರಿಸುಮಾರು 200 ಮಂದಿ ಕಾಲಿಲ್ಲದ ಕೈ ಇಲ್ಲದ ವಿಶೇಷಚೇನತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾಲು ಜೋಡಣೆ ಮಾಡಿಕೊಳ್ಳಲು ಆಗಮಿಸಿದ್ದರು. ಇವರನ್ನು ಕಂಡು ಎಂಟಿಬಿ ನಾಗರಾಜ್‍ರವರ ಮನಸ್ಸು ಕರಗಿದೆ. ಇದನ್ನೂ ಓದಿ: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಭಾವುಕರಾಗಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ

    ವೇದಿಕೆ ಮೇಲೆ ಭಾಷಣ ಮಾಡಿದ ಎಂಟಿಬಿ ನಾಗರಾಜ್ ಅವರು, ದಿವಂಗತ ಮಂಗಿ ಶೆಟ್ಟಿ ನರಸಿಂಹಯ್ಯನವರ ಸಮಾಜಮುಖಿ ಕಾಯಕಗಳನ್ನು ಕೊಂಡಾಡಿದರು. ಅಂದಹಾಗೆ ದಿವಂಗತ ಮಂಗಶೆಟ್ಟಿ ನರಸಿಂಹಯ್ಯನವರು ಚಿಕ್ಕಬಳ್ಳಾಪುರ ನಗರದಲ್ಲಿ 1881ರಲ್ಲಿ ಜನಿಸಿ, ಕೂಲಿ ಕೆಲಸ ಮಾಡುತ್ತಾ ಆದರ್ಶದ ಜೀವನ ನಡೆಸಿದವರು. ತಮ್ಮ ಸ್ವಂತ ಪರಿಶ್ರಮದಿಂದ ದುಡಿದು ಆಸ್ತಿ ಮಾಡಿದರೂ 1961ರಲ್ಲಿ ತಮ್ಮ ಎಲ್ಲ ಆಸ್ತಿಯನ್ನು ಟ್ರಸ್ಟ್‌ಗೆ ಸೇರಿಸಿ ಅದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದರು. ಇದೇ ಟ್ರಸ್ಟ್ ಮೂಲಕ ಅವರ ನಿಧನದ ತರುವಾಯ ಟ್ರಸ್ಟ್‌ನ ಸದಸ್ಯರು ಸಮಾಜಮುಖಿ ಕಾಯಕಗಳು ಮುಂದುವರೆಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಟ್ರಸ್ಟ್‌ನ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡ ಎಂಟಿಬಿ ನಾಗರಾಜ್ ಟ್ರಸ್ಟ್‌ನವರು ಮನವಿ ಮಾಡದಿದ್ದರೂ, ಅವರ ಸಮಾಜಮುಖಿ ಕಾಯಕಗಳಿಗೆ ಮನಸೋತು ವೇದಿಕೆ ಮೇಕೆ 10 ಲಕ್ಷ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

    ಇದೇ ವೇಳೆ ಜೈನ್ ಮಿಷನ್ ಆಸ್ಪತ್ರೆಯವರು ಸಹ ಮನವಿ ಮಾಡಿಕೊಂಡಾಗ ಅವರಿಗೂ ಸಹ 25 ಲಕ್ಷ ರೂ. ಹಣ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು. ಸಂಸ್ಥೆಯವರು ಮನವಿ ಮಾಡದಿದ್ದರೂ ಸಮಾಜಮುಖಿ ಸೇವೆಗಳನ್ನು ನೋಡಿ ಹಿಂದೆ, ಮುಂದೆ ನೋಡದೇ ಕೇವಲ ಒಂದೇ ನಿಮಿಷದಲ್ಲಿ 35 ರೂ. ಲಕ್ಷ ದೇಣಿಗೆ ನೀಡುವ ಮೂಲಕ ನೆರೆದಿದ್ದವರಿಗೆ ದಾನವೀರ ಶೂರ ಕರ್ಣ ಎಂಬಂತೆ ಕಂಡರು. ಇನ್ನೂ ಈ ಬಗ್ಗೆ ಮಾತನಾಡಿದ ನಾನು ದುಡಿದಿರೋ ಹಣದಲ್ಲಿ ಪ್ರತಿನಿತ್ಯ ಹತ್ತು ಹಲವು ಮಂದಿಗೆ ಸಹಾಯ ಮಾಡುತ್ತಿದ್ದೇನೆ. ಅದೇ ರೀತಿ ಇವರ ಸಮಾಜಮುಖಿ ಕಾಯಕಗಳು ನನಗೆ ಸಂತೋಷ ತಂದಿವೆ. ಹೀಗಾಗಿ ಬಹಳ ಸಂತೋಷದಿಂದ ಸಹಾಯ ಮಾಡಿದ್ದೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB

    ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB

    ಬೆಂಗಳೂರು: `ಒಬ್ಬ ಇನ್ಸ್ಪೆಕ್ಟರ್ (Police Inspector) ಆಗಿರೋನು ತಾಲ್ಲೂಕಲ್ಲಿ 70, 80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ?’ ಅನ್ನೋ ಹೇಳಿಕೆ ನನ್ನದಲ್ಲ. ಯಾರೋ ಹೇಳಿದ್ದನ್ನ ನಾನು ಹೇಳಿಕೊಂಡು ಹೋದೆ ಅಷ್ಟೇ. ಅದನ್ನೇ ಯಾರೋ ರೆಕಾರ್ಡ್ ಮಾಡಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ (MTB Nagaraj) ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದೀಶ್ ಸಾವನ್ನಪ್ಪಿದ್ದಾರೆ ಅಂತಾ ಹಿಂದಿನ ಇನ್ಸ್ಪೆಕ್ಟರ್‌ ನನಗೆ ತಿಳಿಸಿದ್ರು. ಅಲ್ಲಿ ನೋಡಲು ಹೋದಾಗ ಕಾರ್ಯಕರ್ತರು 70-80 ಲಕ್ಷ ಕೊಟ್ಟು ಪೋಸ್ಟಿಂಗ್‌ಗೆ ಬಂದಿದ್ದ, ಈಗ ಹೃದಯಾಘಾತ (Heart Attack) ಆಗಿದೆ ಅಂತಾ ಹೇಳ್ತಿದ್ರು. ನಾನು 70-80 ಲಕ್ಷ ಕೊಟ್ಟು ಬಾಯಿಬಡಿದುಕೊಳ್ಳಲು ಬಂದಿದ್ನಾ? ಅಂತ ಕೇಳಿದ್ದೆ ಅಷ್ಟೇ ಹೊರತು, ಹಣ ಕೊಟ್ಟು ಬಂದಿದ್ದಾನೆ ಅಂತ ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಗಿಫ್ಟ್ – ನಾಳೆಯಿಂದ ಮೊಬೈಲ್‌ನಲ್ಲೇ ಮೆಟ್ರೋ ಟಿಕೆಟ್ ಖರೀಸಿದಿ

    ನಾನು ಎಂದೂ ಸರ್ಕಾರಕ್ಕೆ (Government) ಹಣ ಕೊಟ್ಟಿದ್ದಾರೆ ಅಂತ ಹೇಳಿಲ್ಲ. ಈ ಬಗ್ಗೆ ಸಿಎಂ (CM Basavaraj Bommai) ತನಿಖೆ ಮಾಡೋದಾಗಿ ಹೇಳಿದ್ದಾರೆ. ಸಿಎಂ, ಗೃಹಸಚಿವ ರಾಜೀನಾಮೆ ಕೊಡಬೇಕು ಅಂತ ಹೇಳ್ತಿದ್ದಾರೆ. ತಪ್ಪಿತಸ್ಥರು ಯಾರು ಅಂತ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ತನಿಖೆಗೆ (Investigation) ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿಗಳಿಂದಾದ ಸಾವನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ: ಕಾಂಗ್ರೆಸ್

    ರಾಜೀನಾಮೆ ಯಾಕೆ ಕೊಡಬೇಕು?
    ರಾಜೀನಾಮೆ ಕೊಡುವ ಕೆಲಸ ನಾವು ಏನೂ ಮಾಡಿಲ್ಲ. ಹಣ ಕೊಟ್ಟಿರೋದು, ತೆಗೆದುಕೊಂಡಿರೋದ್ರ ಬಗ್ಗೆ ಸಿದ್ದರಾಮಯ್ಯ (Siddaramaiah), ಡಿಕೆಶಿ (Dk Shivakumar) ಸಾಕ್ಷಿ ಕೊಡಲಿ. ಒಬ್ಬ ಇನ್ಸ್ಪೆಕ್ಟರ್ ಆಗಿರೋನು ತಾಲ್ಲೂಕಲ್ಲಿ 70, 80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ? ಅಂತಾ ಯಾರೋ ಹೇಳಿರೋದನ್ನಷ್ಟೇ ನಾನು ಹೇಳಿಕೊಂಡು ಹೋದೆ. ಅದನ್ನೇ ಯಾರೋ ರೆಕಾರ್ಡ್ ಮಾಡಿದ್ದಾರೆ. ಅದಕ್ಕೆ ರಾಜೀನಾಮೆ ಯಾಕೆ ಕೊಡಬೇಕು. ಬೇಕಿದ್ದರೆ ತನಿಖೆ ನಡೆಯಲಿ, ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಸವಾಲ್ ಹಾಕಿದ್ದಾರೆ.

    ನಮ್ಮ ಸರ್ಕಾರದಲ್ಲಿ ಯಾವುದೇ ಹಣ ಪಡೆದು ಪೋಸ್ಟಿಂಗ್ ನೀಡಿಲ್ಲ. ಉಚಿತವಾಗಿಯೇ ಪೋಸ್ಟಿಂಗ್ ಮಾಡ್ತಿದ್ದೀವಿ. ಯಾರೂ ಯಾರಿಗೂ ಹಣ ಕೊಡಬೇಕಿಲ್ಲ ಎಂದು ಮುಗುಳ್ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ಸ್‌ಪೆಕ್ಟರ್‌ ನಂದೀಶ್ ತೆಗೆದುಕೊಂಡ ತೀರ್ಮಾನ ರಾಂಗ್ – ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ

    ಇನ್ಸ್‌ಪೆಕ್ಟರ್‌ ನಂದೀಶ್ ತೆಗೆದುಕೊಂಡ ತೀರ್ಮಾನ ರಾಂಗ್ – ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ

    ರಾಯಚೂರು: ಇನ್ಸ್‌ಪೆಕ್ಟರ್‌ ನಂದೀಶ್ (Inspector Nandish) ಸಾವು ಪ್ರಕರಣ ಹಿನ್ನೆಲೆ ಪೋಸ್ಟಿಂಗ್‍ಗೆ 70-80 ಲಕ್ಷ ಹಣ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ಧ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ (M.T.B Nagaraj) ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಆತ ತೆಗೆದುಕೊಂಡ ತೀರ್ಮಾನ ರಾಂಗ್, ಸಣ್ಣ ವಿಷಯಕ್ಕೆ ಕಮಿಷನರ್ ಸಸ್ಪೆಂಡ್ ಮಾಡಿದ್ದು ತಪ್ಪು. ಹೆಂಡತಿ ಮಕ್ಕಳು ಇದ್ದಾರೆ. ಆ ಕಮಿಷನರ್ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

    ರಾಯಚೂರಿನಲ್ಲಿ ಕನಕದಾಸ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿನ ಬಳಿಕ ನಾನು ನೋಡಲು ಹೋಗುವಾಗ ಹಿಂದೆ ಕಾರ್ಯಕರ್ತರು ಬರುತ್ತಿದ್ದರು. ಯಾಕೆ ಇಂತಹ ತೀರ್ಮಾನ ತಗೊಂಡ ಅಂತ ಹೇಳುತ್ತಾ ಬರುತ್ತಿದ್ದರು. 70-80 ಲಕ್ಷ ಖರ್ಚು ಮಾಡಿಬಿಟ್ಟೆ ಅಂತ ಟೆನ್ಷನ್‍ನಲ್ಲಿ ಇದ್ದೆ ಅಂತ ಹೇಳ್ತಿದ್ನಂತೆ. ಇಲ್ಲಿ ಏನ್ ಮಾಡಬೇಕು ಅಂತ ಖರ್ಚು ಮಾಡ್ದ, ಅಂತ ಹೇಳ್ದೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ನಂದೀಶ್ ಸಾವಿಗೆ ಪೋಸ್ಟಿಂಗ್ ಲಂಚ ಕಾರಣನಾ? – ಸಂಚಲನ ಮೂಡಿಸಿದ ಎಂಟಿಬಿ ಮಾತು

    ಆತ ತೆಗೆದುಕೊಂಡ ತೀರ್ಮಾನ ರಾಂಗ್, ಸಣ್ಣ ವಿಷಯಕ್ಕೆ ಕಮಿಷನರ್ ಸಸ್ಪೆಂಡ್ ಮಾಡಿದ್ದು ತಪ್ಪು. ಹೆಂಡತಿ ಮಕ್ಕಳು ಇದ್ದಾರೆ. ಆ ಕಮಿಷನರ್ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಪರಿಹಾರ ಕೊಡಿಸುತ್ತೇವೆ. ಆ ಮಹಿಳೆಗೆ ಉದ್ಯೋಗವನ್ನು ಕೊಡಿಸುತ್ತೇವೆ. ನಿನ್ನೆ ಮುಖ್ಯಮಂತ್ರಿಗಳ ಬಳಿ ನಾನು ಮಾತನಾಡಿದ್ದೇನೆ. ಅವರು ಒಪ್ಪಿದ್ದಾರೆ. ಅನ್ಯಾಯ ಆಗಿದೆ ಅದನ್ನು ಸರಿಪಡಿಸೋಣ ಅಂತ ಸಿಎಂ (CM) ಹೇಳಿದ್ದಾರೆ. ನಾವು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರು ಮಾಯ – ಸಚಿವರಿದ್ದ ವೇದಿಕೆ ಏರಿ ಅಭಿಮಾನಿಗಳಿಂದ ಗಲಾಟೆ

    Live Tv
    [brid partner=56869869 player=32851 video=960834 autoplay=true]