Tag: ಎಂಜಿನ್

  • ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಹೈದರಾಬಾದ್: ರೈಲು ಎಂಜಿನ್ ತನ್ನ ಬೋಗಿಗಳಿಂದ ಬೇರ್ಪಟ್ಟು ಸುಮಾರು 10 ಕಿ.ಮೀ. ದೂರದವರೆಗೂ ಹೋಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಭುವನೇಶ್ವರ-ಸಿಕಂದರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ವಿಶಾಖ ಎಕ್ಸ್ ಪ್ರೆಸ್‍ಗೆ ಸೇರಿದ ಎಂಜಿನ್ ಇದಾಗಿದೆ. ಎಂಜಿನ್ ಮತ್ತು ಬೋಗಿಗಳ ನಡುವಿನ ರಾಡ್‍ಗಳು ಮುರಿದುಹೋಗಿದೆ. ಪರಿಣಾಮ ಅದು ನರಸಿಪಟ್ನಮ್ ಮತ್ತು ಟುನಿ ರೈಲ್ವೆ ನಿಲ್ದಾಣಗಳ ನಡುವೆ ಎಂಜಿನ್ ತನ್ನ ಬೋಗಿಯಿಂದ ಬೇರ್ಪಟ್ಟು ಮುಂದೆ ಹೋಗಿದೆ. ತಕ್ಷಣ ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ರೈಲ್ವೆ ಅಧಿಕಾರಿಗಳು ತಂತ್ರಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಿಂದ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಇತರ ಕೆಲವು ರೈಲುಗಳು ತಡವಾಗಿದೆ ಹೋಗಿವೆ. ಆದರೆ ಇದರಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ರೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಂಜಿನ್ ರೈಲು ಬೋಗಿಗಳನ್ನು ಬಿಟ್ಟು ಚಲಿಸುತ್ತಿದ್ದುದ್ದನ್ನು ನೋಡಿ ಸಾರ್ವಜನಿಕರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ರೈಲ್ವೆ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.

  • ದ್ವಿಚಕ್ರ ವಾಹನದ ಎಂಜಿನ್ ಒಳಗೆ ಅವಿತಿದ್ದ ನಾಗರಹಾವು

    ದ್ವಿಚಕ್ರ ವಾಹನದ ಎಂಜಿನ್ ಒಳಗೆ ಅವಿತಿದ್ದ ನಾಗರಹಾವು

    ಬೆಂಗಳೂರು: ದ್ವಿಚಕ್ರ ವಾಹನದ ಎಂಜಿನ್ ಒಳಗೆ ನಾಗರಹಾವೊಂದು ಅವಿತು ಕುಳಿತ್ತಿದ್ದ ದೃಶ್ಯ ಕಂಡು ಬಂದಿದೆ.

    ನೆಲಮಂಗಲ ಪಟ್ಟಣದ ಗೋವಿಂದಪ್ಪ ಬಡಾವಣೆಯಲ್ಲಿ ಈ ದೃಶ್ಯ ಕಂಡುಬಂದಿದ್ದು, ವಾಹನದ ಎಂಜಿನ್ ಒಳಗೆ ನಾಗರಹಾವು ಅವಿತು ಕುಳಿತ್ತಿತ್ತು. ಈ ವೇಳೆ ವಾಹನದ ಮಾಲೀಕ ಮೋಹನ್ ತಮ್ಮ ಬೈಕ್ ಹತ್ತಲು ಮುಂದಾಗಿದ್ದಾರೆ.

    ಬೈಕ್ ಹತ್ತುವಾಗ ಮೋಹನ್ ನಾಗರಹಾವನ್ನು ಕಂಡು ಬೆಚ್ಚಿಬಿದಿದ್ದಾರೆ. ಹಾವನ್ನು ಕಂಡ ತಕ್ಷಣ ಉರಗ ರಕ್ಷಕ ಅರುಣ್ ರಾಜ್ ಅವರನ್ನು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಅರುಣ್ ರಾಜ್ ಕೂಡಲೇ ಸ್ಥಳಕ್ಕೆ ಆಗಮಿಸಿ ಎಂಜಿನ್ ನಲ್ಲಿ ಅಡಗಿದ್ದ ಹಾವನ್ನು ರಕ್ಷಿಸಿದ್ದಾರೆ.

    ನಾಗರಹಾವನ್ನು ರಕ್ಷಿಸುವ ವೇಳೆ ಸ್ಥಳೀಯರು ಅಲ್ಲಿಯೇ ನಿಂತುಕೊಂಡು ನೋಡುತ್ತಿದ್ದರು.

  • ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ಕಲಬುರಗಿ: ರೈಲ್ವೇ ಎಂಜಿನ್ ಪ್ಲಾಟ್‍ಫಾರ್ಮ್ ಗೋಡೆಗೆ ತಗುಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಇಂದು ಮುಂಜಾನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಸೊಲ್ಲಾಪುರದಿಂದ ವಾಡಿ ಮಾರ್ಗವಾಗಿ ಗುಂತಕಲ್ ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಪ್ಲಾಟ್‍ಫಾರ್ಮ ಗೋಡೆಗೆ ತಗುಲಿದೆ. ಹೀಗಾಗಿ ಗೋಡೆ ಕಲ್ಲುಗಳು ಹಳಿ ಮೇಲೆ ಬಂದು ಬಿದ್ದಿವೆ. ಜೊತೆಗೆ ದೊಡ್ಡ ಸದ್ದು ಕೂಡಾ ಬಂದಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಜಿಗದಿದ್ದಾರೆ.

    ಪ್ಲಾಟ್‍ಫಾರ್ಮ್ ಗೋಡೆಯ ಹೊರಚಾಚಿಕೊಂಡ ಕಲ್ಲು ಎಂಜಿನ್ ಗೆ ತಗುಲಿದೆ. ವಾಡಿ ಪ್ಲಾಟ್‍ಫಾರ್ಮ್ ಹಳೆಯದಾಗಿದ್ದು, ಹೊಸ ಮಾದರಿಯ ರೈಲು ಎಂಜಿನ್ ಇಂದು ಬಂದಿದ್ದರಿಂದ ಈ ಘಟನೆ ನಡೆದಿದೆ ಅಂತ ಹೇಳಲಾಗಿದೆ. ಘಟನೆ ನಂತರ ಪ್ಲಾಟ್‍ಫಾರ್ಮ್ ಸರಿಗೊಳಿಸಿ ರೈಲು ಹೋಗಲು ಗ್ಯಾಂಗ್ ಮನ್ ಗಳು ಅವಕಾಶ ಮಾಡಿಕೊಟ್ಟಿದ್ದಾರೆ.

  • ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ರಾಂಚಿ: ಮಳೆ ಬಂದಾಗ ಮನೆಯ ಛಾವಣಿ ಸೋರಿಕೆಯಾಗೋದನ್ನ ಕೇಳಿರ್ತೀವಿ. ಹಾಗೇ ಕೆಲವು ಬಸ್‍ಗಳಲ್ಲೂ ಮಳೆ ನೀರು ಸೋರಿಕೆಯಾಗುತ್ತೆ. ಆದ್ರೆ ರೈಲಿನಲ್ಲಿ ಹೀಗಾದ್ರೆ ಏನ್ ಮಾಡೋದು? ಅದರಲ್ಲೂ ರೈಲು ಚಾಲನೆ ಮಾಡೋ ಚಾಲಕರೇ ಸೋರೋ ಮಳೆನೀರಿನಿಂದ ರಕ್ಷಿಸಿಕೊಳ್ಳೋಕೆ ಛತ್ರಿ ಹಿಡಿದು ಕೂತ್ರೆ? ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರೈಲು ಚಾಲಕ ಛತ್ರಿ ಹಿಡಿದು ರೈಲು ಚಾಲನೆ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ರೈಲಿನ ಛಾವಣಿಯಿಂದ ನೀರು ಸೋರಿಕೆಯಾಗ್ತಿದ್ದು, ಇದರಿಂದ ಕಂಟ್ರೋಲ್ ಪ್ಯಾನಲ್‍ಗೆ ಹಾನಿಯಾಗದಂತೆ ರಕ್ಷಿಸಲು ಚಾಲಕ ಛತ್ರಿ ಹಿಡಿದು ಕೂತಿದ್ದಾರೆ. ಅಲ್ಲದೆ ನೆಲದ ಮೇಲೆ ದಿನಪತ್ರಿಕೆಗಳನ್ನ ಹಾಸಲಾಗಿದ್ದು ಅವೂ ಕೂಡ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ.

    ಇದನ್ನೂ ಓದಿ: ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

    ರೈಲು ಚಾಲಕ ತನ್ನ ಕರ್ತವ್ಯವನ್ನ ನಿರ್ವಹಿಸಿದ್ರೆ ಸ್ಪೀಕರ್ ಮತ್ತು ಕ್ಯಾಮೆರಾ ಹಿಂದಿದ್ದ ಮತ್ತೋರ್ವ ವ್ಯಕ್ತಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ವರ್ಷಗಳಿಂದ ಈ ಸೋರಿಕೆ ಸಮಸ್ಯೆಯನ್ನ ಎದುರಿಸುತ್ತಿದ್ದೇವೆ. ಎಲ್ಲಾ ಸಮಯದಲ್ಲೂ ನಾವು ಹೆಚ್ಚಾಗೇ ಜಾಗರೂಕರಾಗಿರಬೇಕು ಅಂತ ಹೇಳಿದ್ದಾರೆ.

    ಜಾಗರೂಕತೆಯಿಂದ ಇರೋಕೆ ನಮಗೇನೂ ತೊಂದರೆಯಿಲ್ಲ. ಆದ್ರೆ ಕೆಲಸದಲ್ಲಿ ಸಾಕಷ್ಟು ಅನಾನುಕೂಲಗಳು ಹಾಗೂ ತೊಂದರೆಗಳಿವೆ ಅಂತ ಅವರು ಹೇಳಿದ್ದಾರೆ.

    ತಮ್ಮ ಸಂಕಷ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲು ಈ ವಿಡಿಯೋವನ್ನ ಸಾಧ್ಯವಾದಷ್ಟು ಹಂಚಿಕೊಳ್ಳಿ ಅಂತ ವ್ಯಕ್ತಿ ಕೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಜಾರ್ಖಂಡ್‍ನಲ್ಲಿ ಚಿತ್ರೀಕರಿಸಲಾಗಿದೆ ಆದ್ರೆ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಆದ್ರೆ ಈ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. ನಮಗೆ ಈ ಬಗ್ಗೆ ಕಾಳಜಿ ಇದೆ. ತನಿಖೆ ಮಾಡಲಾಗಿದೆ. ಇದು ಕಾರ್ಯನಿರ್ವಹಿಸದ ಎಂಜಿನ್ ಆಗಿದ್ದು ಮುಂದಿನಿಂದ ಮತ್ತೊಂದು ಎಂಜಿನ್ ಅದನ್ನ ಎಳೆದೊಯ್ಯೋದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿದೆ.

  • ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ- ಪ್ರಯಾಣಿಕರು ಸೇಫ್

    ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ- ಪ್ರಯಾಣಿಕರು ಸೇಫ್

    ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನೆಲಮಂಗಲ ಪಟ್ಟಣದ ಸೊಂಡೇಕುಪ್ಪ ಬೈಪಾಸ್ ಬಳಿ ನಡೆದಿದೆ.

    ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಡ್ರೈವರ್ ಎಂಜಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿಗೆ ನೀರು ಹಾಕಿ ನಂದಿಸಿದ್ರು. ಹೀಗಾಗಿ ಆತಂಕಗೊಂಡ ಪ್ರಯಾಣಿಕರು ಬಸ್‍ನಿಂದ ಕೆಳಗೆ ಇಳಿದರು.

    ಎರಡು ತಿಂಗಳ ಹಿಂದೆ ಇದೇ ರಸ್ತೆಯಲ್ಲಿ ಬಸ್‍ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಪ್ರಯಾಣಿಕರು ದಾರುಣವಾಗಿ ಸಾವನಪ್ಪಿದ್ದರು.