Tag: ಎಂಜಿನಿಯರಿಂಗ್

  • ಕಾಲೇಜ್  ಸೆಕ್ಯೂರಿಟಿಯಾಗಿ ಸೇರಿ 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನಗೈದ ಟೆಕ್ಕಿ ಅರೆಸ್ಟ್

    ಕಾಲೇಜ್ ಸೆಕ್ಯೂರಿಟಿಯಾಗಿ ಸೇರಿ 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನಗೈದ ಟೆಕ್ಕಿ ಅರೆಸ್ಟ್

    ಬೆಂಗಳೂರು: ಎಂಜಿನಿಯರಿಂಗ್ ಓದಿ ಸೆಕ್ಯೂರಿಟಿ ಕೆಲಸ ಮಾಡಿ ಕಂಪ್ಯೂಟರ್ ಸೇರಿದಂತೆ 35 ಲಕ್ಷಕ್ಕೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಓಡಿಶಾ ಮೂಲದ ರಾಜಪಾತ್ರ ಬಂಧಿತ ಆರೋಪಿ. ಬಾಗಲೂರು ಪೊಲೀಸರು ಈತನನನ್ನು ಬಂಧಿಸಿದ್ದು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

    ಓದುತ್ತಿರುವಾಗಲೇ ಕಳ್ಳತನ:
    ಒಡಿಶಾದ ಪ್ರತಿಷ್ಠಿತ ಬಿಜು ಲನಿರ್ಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಈತ ಓದಿನ ಸಮಯದಲ್ಲೇ ಕಳ್ಳತನಕ್ಕೆ ಇಳಿದಿದ್ದ. ಕಳ್ಳತನದ ಕೆಲಸ ಮಾಡುವುದು ಅಭ್ಯಾಸವಾಗಿದ್ದ ಕಾರಣ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ.

    ಎಂಜಿನಿಯರಿಂಗ್ ಮುಗಿಸುತ್ತಲೇ ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳು, ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಕಳವು ಮಾಡಿ, ಕೆಲವನ್ನು ಹ್ಯಾಕ್ ಮಾಡುವುದು ಸೇರಿದಂತೆ ಕೆಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ.

    ಸೆಕ್ಯೂರಿಟಿ ಉದ್ಯೋಗಿ:
    ಜೈಲಿನಿಂದ ಬಿಡುಗಡೆಯಾದ ರಾಜಪಾತ್ರ ನೇರವಾಗಿ ಬಂದಿದ್ದು ಬೆಂಗಳೂರಿಗೆ. ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ಆತ ಆ ಕಾಲೇಜುಗಳಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ.

    ಹಂತ ಹಂತವಾಗಿ ಸೆಕ್ಯೂರಿಟಿ ಕೆಲಸದಿಂದ ಕಚೇರಿ/ಲ್ಯಾಬ್ ಒಳಗೆ ಹೋಗುತ್ತಿದ್ದ ರಾಜಪಾತ್ರ ಕಂಪ್ಯೂಟರ್ ಬಿಡಿ ಭಾಗಗಳನ್ನು, ಲ್ಯಾಪ್ ಟಾಪ್‍ಗಳು, ಕಂಪ್ಯೂಟರ್‍ಗಳನ್ನು ಕಳವು ಮಾಡಿ ಅವುಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುತ್ತಿದ್ದ. ಇನ್ನು ಕೆಲವನ್ನು ಒಡಿಶಾದಲ್ಲಿ ಮಾರಾಟ ಮಾಡುತ್ತಿದ್ದ. ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಬೆಲ್ಲದ್

    ಲಿಂಕ್ಡ್ ಇನ್ ನಲ್ಲಿ ರಿವರ್ಕ್ ಎಂಡೆವರ್ ಪ್ರೈವೆಟ್ ಲಿಮಿಟೆಡ್ ಹೆಸರಿನ್ನು ಖಾತೆ ತೆರೆದಿದ್ದ. ಅಷ್ಟೇ ಅಲ್ಲದೇ ಈ ಕಂಪನಿಯ ಡೈರೆಕ್ಟರ್ ನಾನೇ ಎಂದು ಬಿಂಬಿಸಿಕೊಂಡಿದ್ದ. ಕಡಿಮೆ ಬೆಲೆಗೆ ಕಂಪ್ಯೂಟರ್, ಲ್ಯಾಪ್‍ಟಾಪ್, ಪ್ರೊಸೆಸರ್, ಹಾರ್ಡ್ ಡಿಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದ.

    ಎಂಜಿನಿಯರಿಂಗ್ ಕಾಲೇಜಿನ ಒಳಗಡೆ ಇದ್ದವರಿಂದಲೇ ಕೃತ್ಯ ನಡೆದಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್

    ಒಡಿಶಾದಲ್ಲಿ ಈ ಹಿಂದೆ ಏನೆಲ್ಲಾ ಕೆಲಸ ಮಾಡಿದ್ದ? ಯಾವೆಲ್ಲಾ ಕೇಸ್‍ಗಳಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಈಗ ಪೊಲೀಸರ ತನಿಖೆ ಸಾಗುತ್ತಿದೆ.

  • ಎಂಜಿನಿಯರಿಂಗ್ ಸೀಟು ಶುಲ್ಕ ಹೆಚ್ಚಳ ನಿರ್ಧಾರ ಆಗಿಲ್ಲ: ಅಶ್ವಥ್ ನಾರಾಯಣ

    ಎಂಜಿನಿಯರಿಂಗ್ ಸೀಟು ಶುಲ್ಕ ಹೆಚ್ಚಳ ನಿರ್ಧಾರ ಆಗಿಲ್ಲ: ಅಶ್ವಥ್ ನಾರಾಯಣ

    ಬೆಂಗಳೂರು: ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರವಾಗಿ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ವಿಚಾರವಾಗಿ ಇನ್ನು ಯಾವುದೇ ತೀರ್ಮಾನ ಸರ್ಕಾರ ಮಾಡಿಲ್ಲ. ವಿಟಿಯು ವಿಸಿ ನೇತೃತ್ವದಲ್ಲಿ ಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ. ಮ್ಯಾನೆಜ್‍ಮೆಂಟ್ ಕಾಲೇಜುಗಳ ಜೊತೆಯೂ ಸಭೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು. ಸಭೆ ಮಾಡುವವರೆಗೂ ಶುಲ್ಕ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಪ್ರತಿ ವರ್ಷ ಸರ್ಕಾರಕ್ಕೆ ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಡುತ್ತವೆ. ಸರ್ಕಾರ ಖಾಸಗಿ ಸಂಸ್ಥೆಗಳ ಜೊತೆ ಸಭೆ ನಡೆಸಿ ಶುಲ್ಕ ಹೆಚ್ಚಳದ ನಿರ್ಧಾರ ಮಾಡುತ್ತದೆ.

    ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಈ ವರ್ಷ ಶೇ.30ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳಿ ಬೇಡಿಕೆ ಇಟ್ಟಿವೆ ಎಂದು ಮೂಲಗಳು ಹೇಳಿವೆ.  ಇದನ್ನೂ ಓದಿ: ಹೋದಲ್ಲಿ, ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬೊಮ್ಮಾಯಿ

    ಪ್ರತಿ ವರ್ಷ ಶೇ.10 ರಿಂದ ಶೇ.15 ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅನುಮತಿ ಕೊಡುತ್ತಿತ್ತು. ಆದರೆ ಸರ್ಕಾರ ಈ ವರ್ಷ ಎಷ್ಟು ಹೆಚ್ಚಳಕ್ಕೆ ಅವಕಾಶ ಕೊಡುತ್ತದೆ ಕಾದು ನೋಡಬೇಕಿದೆ.

  • ಈ ಬಾರಿ ಸಿಇಟಿ ಅಂಕಗಳೇ ಮಾನದಂಡ – ಎಲ್ಲ ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ

    ಈ ಬಾರಿ ಸಿಇಟಿ ಅಂಕಗಳೇ ಮಾನದಂಡ – ಎಲ್ಲ ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ

    ಬೆಂಗಳೂರು: ವೃತ್ತಿಪರ ಕೋರ್ಸ್ ಸೀಟು ಹಂಚಿಕೆಗೆ ಈ ವರ್ಷ ಕೇವಲ ಸಿಇಟಿ ಪರೀಕ್ಷೆಯ ಅಂಕಗಳೇ ಮಾನದಂಡವನ್ನಾಗಿ ಪರಿಗಣಿಸಲು ಉನ್ನತ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಸಿಇಟಿ ಪರೀಕ್ಷೆ ಸಂಬಂಧ ಇಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಅಶ್ವತ್ಥನಾರಾಯಣ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು. ಸೀಟು ಹಂಚಿಕೆಗೆ ಈ ವರ್ಷ ಪಿಯುಸಿಯ ಶೇ.50 ಅಂಕ ಪರಿಗಣಿಸದೇ ಇರಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ನಿಗದಿಯಂತೆ ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಕೋವಿಡ್ ಪ್ರಕರಣಗಳು ಜಾಸ್ತಿಯಾದರೆ ಮಾತ್ರ ದಿನಾಂಕವನ್ನು ಮುಂದೂಡಲು ಇಲಾಖೆ ಮುಂದಾಗಿದೆ. ಇದನ್ನೂ ಓದಿ : ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಸಭೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಇದ್ದ ಅರ್ಹತೆ ಅಂಕಗಳ ಮಾನದಂಡ ಬದಲಾವಣೆಗೂ ನಿರ್ಧಾರ ಮಾಡಲಾಗಿದೆ. ಈ ವರ್ಷ ಗ್ರೇಡ್ ಆಧಾರದಲ್ಲಿ ಪಿಯುಸಿ ಫಲಿತಾಂಶ ನೀಡುತ್ತಿರುವ ಕನಿಷ್ಠ ಅಂಕಗಳ ಮಾನದಂಡ ನಿಯಮ ಸಡಿಲಿಕೆ ಮಾಡಲಾಗಿದ್ದು ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಸಿಇಟಿ ಬರೆಯಲು ಅವಕಾಶ ನೀಡಲಾಗಿದೆ.

    ಪಿಯುಸಿಯಲ್ಲಿ ಪಾಸ್ ಆದ ವಿದ್ಯಾರ್ಥಿಗಳು ಸಿಇಟಿ ಬರೆಯಲು ಕನಿಷ್ಠ ಶೇ.40-45 ಅಂಕ ಕಡ್ಡಾಯವಾಗಿ ಪಡೆಯಬೇಕಿತ್ತು. ಈ ಅಂಕಗಳನ್ನು ಪಡೆಯದೇ ಇದ್ದಲ್ಲಿ ಸಿಇಟಿ ಬರೆಯಲು ಅರ್ಹತೆ ಪಡೆಯುತ್ತಿರಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಸಾಮಾನ್ಯ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನಿಯಮ ನಿಗದಿ ಮಾಡಲಾಗಿತ್ತು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಆಯುಕ್ತ ಪ್ರದೀಪ್, ಕೆಇಎ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

    ಮೊದಲನೇ ವರ್ಷದ/ ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್‍ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್‍ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

  • 8ನೇ ಪರೀಕ್ಷೆಯಲ್ಲಿ ಪಾಸ್‌ – ಲೆಫ್ಟಿನೆಂಟ್‌ ಹುದ್ದೆಗೆ ಆಯ್ಕೆಯಾದ ಎಂಜಿನಿಯರ್‌

    8ನೇ ಪರೀಕ್ಷೆಯಲ್ಲಿ ಪಾಸ್‌ – ಲೆಫ್ಟಿನೆಂಟ್‌ ಹುದ್ದೆಗೆ ಆಯ್ಕೆಯಾದ ಎಂಜಿನಿಯರ್‌

    ಕಾರವಾರ: ಇಂದಿನ ಯುವ ಪೀಳಿಗೆಯವರು ನಾನು ಡಾಕ್ಟರ್, ಎಂಜಿನಿಯರ್, ಲಾಯರ್, ಟೀಚರ್ ಹೀಗೆ ಏನೇನೋ ಆಗಬೇಕು ಎಂಬ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ. ತಾನೊಬ್ಬ ಯೋಧನಾಗಬೇಕು ಎಂದು ಆಸೆ ಪಡುವವರ ಸಂಖ್ಯೆ ಕಡಿಮೆ. ಆದರೆ ಮುಂಡಗೋಡು ನಗರದ ಹಳೂರಿನ ನಿವಾಸಿ ಅಭಯ್ ಪಂಡಿತ್ ತಾನು ಯೋಧನಾಗಬೇಕು ಎಂದು ಸತತ ಎಂಟು ಬಾರಿ ಲೆಫ್ಟಿನೆಂಟ್‌ ಹುದ್ದೆಯ ಪರೀಕ್ಷೆ ಬರೆದು ಕೊನೆಗೂ ತನ್ನ ಗುರಿ ಸಾಧಿಸಿದ್ದಾರೆ.

    ಅಭಯ್ ಓದಿದ್ದು ಎಂಜಿಜಿನಿಯರಿಂಗ್. ಮನಸ್ಸು ಮಾಡಿದ್ರೆ ಕೈತುಂಬ ಸಂಬಳದ ಜೊತೆ ಐಷಾರಾಮಿ ಜೀವನ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಸೈನ್ಯ ಸೇರಿ ದೇಶಸೇವೆ ಮಾಡಬೇಕು ಎಂಬ ತುಡಿತವಿತ್ತು. ಈ ಕಾರಣಕ್ಕೆ ಎಂಜಿನಿಯರಿಂಗ್ ಓದಿ ಕೆಲಸ ಸಿಕ್ಕರೂ ಬಿಡುವಿನ ಸಮಯ ಸೈನ್ಯ ಸೇರಲು ದೇಹ ಹುರಿಗೊಳಿಸಿ ಸತತ ಅಭ್ಯಾಸದಲ್ಲಿ ನಿರತರಾಗಿದ್ದರು. ಪ್ರತಿ ಭಾರಿ ಸೈನಿಕ ಪರೀಕ್ಷೆ ಬರೆದಾಗಲೂ ಸೋಲು ಕಾಣುತಿದ್ದರು. ಆದರೆ ಛಲ ಬಿಡದ ಇವರು ಎಂಟನೇ  ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಆರು ಜನರಲ್ಲಿ ಲೆಫ್ಟಿನೆಂಟ್‌ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

    ಚೆನ್ನೈನಲ್ಲಿರುವ ಭಾರತೀಯ ಸೈನಿಕ ಅಕಾಡಮಿಯಲ್ಲಿ ತರಬೇತಿ ಮುಗಿಸಿರುವ ಇವರು ನ.21 ರಂದು ಲೆಫ್ಟಿನೆಂಟ್‌ ಆಗಿ ನಿಯುಕ್ತಿಗೊಂಡಿದ್ದು, ರಾಜಸ್ಥಾನದ ವೆಸ್ಟರ್ನ್‌ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಡಿ.10 ರಂದು ತೆರಳಲಿದ್ದಾರೆ.

    ಸಾಧನೆ ಇಲ್ಲದೇ ಜೀವನದಲ್ಲಿ ಏನೂ ಸಿಗುವುದಿಲ್ಲ. ನನಗೆ ಕೆಲಸ ಸಿಗಲಿಲ್ಲ ಎಂದುಕೊಳ್ಳುವ ಬದಲು ಆ ಕೆಲಸಕ್ಕೆ ನಾನು ಎಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಬ ಆತ್ಮಾವಲೋಕನ ಅಗತ್ಯ. ಸಾಧಿಸುವ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಲೆಫ್ಟಿನೆಂಟ್‌ ಅಭಯ್‌.

  • ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

    ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

    – ಸಂಘಟಕರ ವಿರುದ್ಧ ಪೋಷಕರು ಗಂಭೀರ ಆರೋಪ

    ಹೈದರಾಬಾದ್: ವಿದ್ಯಾರ್ಥಿನಿಯೊಬ್ಬಳ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಮೀರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರ್ರಾಮ್ ಗುಡಾದಲ್ಲಿರುವ ಗೋ-ಕಾರ್ಟಿಂಗ್ ಪ್ಲೇ ಝೋನ್ ನಲ್ಲಿ ಈ ಅವಘಡ ಸಂಭವಿಸಿದೆ.

    ಮೃತ ದುರ್ದೈವಿಯನ್ನು ವರ್ಷಿಣಿ ಎಂದು ಗುರುತಿಸಲಾಗಿದ್ದು, ಈಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗುರುವಾರ ಸಂಜೆ ಗುರ್ರಾಮ್ ಗುಡಾದ ಗೋ-ಕಾರ್ಟಿಂಗ್ ಪ್ಲೇ ಝೋನ್ ಗೆ ತೆರಳಿದ್ದಳು. ಅಲ್ಲದೆ ಗೋ-ಕಾರ್ಟಿಂಗ್ ಮಾಡುತ್ತಿದ್ದ ವೇಳೆ ಅದರ ಚಕ್ರಕ್ಕೆ ವರ್ಷಿಣಿ ಕೂದಲು ಸಿಲುಕಿಕೊಂಡು ತಲೆಗೆ ಗಂಭೀರ ಗಾಯಗಳಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ವರ್ಷಿಣಿ ಕೂದಲು ಚಕ್ರಕ್ಕೆ ಸಿಲುಕಿಕೊಂಡ ಕೂಡಲೇ ಗೋ-ಕಾರ್ಟ್ ಅಪಘಾತಕ್ಕೀಡಾಗಿದೆ. ಪರಿಣಾಮ ಆಕೆ ಧರಿಸಿದ್ದ ಹೆಲ್ಮೆಟ್ ಕೂಡ ಪುಡಿಯಾಗಿದೆ. ಘಟನೆ ನಡೆದ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಇತ್ತ ಘಟನೆಯಿಂದ ಮಗಳನ್ನು ಕಳೆದುಕೊಳ್ಳುತ್ತಿದ್ದಂತೆಯೇ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗೋ-ಕಾರ್ಟ್ ಪ್ಲೇ ಝೋನ್ ಸಂಘಟಕರ ನಿರ್ಲಕ್ಷ್ಯವೇ ನಮ್ಮ ಮಗಳ ಸಾವಿಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಹೈದರಾಬಾದ್ ನ ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಂಘಟಕರ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.

    ಈ ಹಿಂದೆ ಅಂದರೆ 2018ರಲ್ಲಿ ಹರಿಯಾಣದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. 29 ವರ್ಷದ ಪುನೀತ್ ಕೌರ್ ಎಂಬ ಮಹಿಳೆಯ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ಇದನ್ನೂ ಓದಿ: ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ 28ರ ಮಹಿಳೆ ದುರ್ಮರಣ

  • ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ – ಯುಜಿಸಿ ವಾದ ಎತ್ತಿಹಿಡಿದ ಸುಪ್ರೀಂಕೋರ್ಟ್

    ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ – ಯುಜಿಸಿ ವಾದ ಎತ್ತಿಹಿಡಿದ ಸುಪ್ರೀಂಕೋರ್ಟ್

    ನವದೆಹಲಿ : ವಿಶ್ವವಿದ್ಯಾನಿಲಯಗಳು ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿ‌ ನಿರ್ಧಾರವನ್ನು ಸುಪ್ರೀಂಕೋರ್ಟ್ ಪುನರ್ ಉಚ್ಚರಿಸಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

    ಅಂತಿಮ ವರ್ಷದ ಪದವಿ ಪರೀಕ್ಷೆಗಳ ರದ್ದುಕೋರಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಮಹತ್ವದ ತೀರ್ಪು ನೀಡಿರುವ ನ್ಯಾ. ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಅಂತಿಮ ವರ್ಷ ಪರೀಕ್ಷೆಗಳು ಕಡ್ಡಾಯ ಎಂದು ಅಭಿಪ್ರಾಯಪಟ್ಟಿದೆ.

    ಸೆಪ್ಟೆಂಬರ್ 30ರೊಳಗೆ ಅಂತಿಮ ವರ್ಷದಲ್ಲಿರುವ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಪೂರ್ಣಗೊಳಿಸಲು ಯುಜಿಸಿ ಸೂಚನೆ ನೀಡಿದೆ. ಆದರೆ ಇದು ಸಾಧ್ಯವಾಗದಿದ್ದರೇ ಈ ಡೆಡ್‌ಲೈನ್ ಬದಲಿಸಲು ರಾಜ್ಯ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಯುಜಿಸಿಗೆ ಮನವಿ ಮಾಡಿಕೊಳ್ಳಬಹುದು. ಆದೆರೆ ಪರೀಕ್ಷೆ ನಡೆಸುವುದೇ ಬೇಡ ಎನ್ನುವುದು ಸಮಂಜಸವಲ್ಲ ಎಂದಿದೆ.

    ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಖ್ಯ, ಪರೀಕ್ಷೆಗಳಿಗೆ ಉತ್ತೀರ್ಣ ಮಾಡುವ ಕ್ರಮವನ್ನು ನಾವು ವಿದ್ಯಾರ್ಥಿಗಳಲ್ಲಿ ಉತ್ತೇಜಿಸಬಾರದು. ಹೀಗಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಎಂದು ಆದೇಶ ನೀಡಿದೆ.

    ಹಿಂದಿನ ವಿಚಾರಣೆ ವೇಳೆ ಯುಜಿಸಿ, ಪದವಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಪರೀಕ್ಷೆಗಳು, ನಾವು ಅದನ್ನು ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಮಾಡುತ್ತಿದ್ದು ಮೊದಲ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಮೇಲೆ ಫಲಿತಾಂಶ ನೀಡಲಾಗುತ್ತಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಯುಜಿಸಿ ಪರೀಕ್ಷೆಗಳಿಲ್ಲದೇ ಅಂತಿಮ ವರ್ಷದ ಫಲಿತಾಂಶ ನೀಡುವ ಬಗ್ಗೆ ಸಜ್ಜುಗೊಂಡಿಲ್ಲ‌ ಪರೀಕ್ಷೆ ನಡೆಸುವುದು ಉತ್ತಮ ಎಂದು ಯುಜಿಸಿ ವಾದವನ್ನು ಕೇಂದ್ರ ಸರ್ಕಾರ ಪರ ವಕೀಲರು ಬೆಂಬಲಿಸಿದ್ದರು.

    ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಡೆಸುವುದು ಅಪಾಯಕಾರಿ. ವಿದ್ಯಾರ್ಥಿಯ ಹಿಂದಿನ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನ ಆಧರಿಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ನೀಡಲು ಹಲವು ರಾಜ್ಯ ಸರ್ಕಾರಗಳು, ಪೋಷಕರ ಒಕ್ಕೂಟ ಹಾಗೂ ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು.

    ಸುಪ್ರೀಂಕೋರ್ಟ್ ಈ ಮಹತ್ವ ತೀರ್ಪುನಿಂದ ಯುಜಿಸಿ ಹಳೆ ಆದೇಶದಂತೆ ಸೆಪ್ಟೆಂಬರ್ 30ರೊಳಗೆ ಪರೀಕ್ಷೆ ನಡೆಯಲಿದ್ದು ಪದವಿ, ಪಿಜಿ, ಡಿಪ್ಲೊಮಾ, ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

     

  • ಸಿಇಟಿ ಫಲಿತಾಂಶ ಪ್ರಕಟ – ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ವಿವರ ಇಲ್ಲಿದೆ

    ಸಿಇಟಿ ಫಲಿತಾಂಶ ಪ್ರಕಟ – ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ವಿವರ ಇಲ್ಲಿದೆ

    ಬೆಂಗಳೂರು: ಕೋವಿಡ್‌ 19 ಮಧ್ಯೆ ನಡೆದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ರಕ್ಷಿತ್‌ ಎಂ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಫಲಿತಾಂಶ ಪ್ರಕಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ್,‌ ಈ ಬಾರಿ ಆನ್ ಲೈನ್ ನಲ್ಲಿ ಕೌನ್ಸಿಲಿಂಗ್ ನಡೆಯುತ್ತದೆ. ವಿದ್ಯಾರ್ಥಿಗಳ ಆನ್ ಲೈನ್ ನಲ್ಲಿ ದಾಖಲಾತಿ ಅಪ್ ಲೋಡ್ ಮಾಡಬೇಕು. ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 2 ರಿಂದ ದಾಖಲಾತಿ ಸಲ್ಲಿಕೆ ಮತ್ತು ಕೌನ್ಸಿಲಿಂಗ್ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

    ರ‍್ಯಾಂಕ್ ವಿಜೇತರ ಪಟ್ಟಿ
    ಎಂಜಿನಿಯರಿಂಗ್‌ ವಿಭಾಗ
    1. ರಕ್ಷಿತ್‌ ಎಂ – ಆರ್‌ವಿ ಕಾಲೇಜ್‌ ಬೆಂಗಳೂರು
    2. ಶುಭನ – ಶ್ರೀ ಚೈತ್ಯನ್ಯ ಟೆಕ್ನೋ ಸ್ಕೂಲ್‌ ಬೆಂಗಳೂರು
    3. ಎಂ ಶಶಾಂಕ್‌ ಬಾಲಾಜಿ – ಬೇಸ್‌ ಪಿಯು ಕಾಲೇಜ್‌ ಹುಬ್ಬಳ್ಳಿ
    4. ಶಶಾಂಕ್‌ ಪಿ – ಎಕ್ಸ್‌ಪರ್ಟ್‌ ಪಿಯು ಕಾಲೇಜ್‌, ಮಂಗಳೂರು
    5. ಸಂದೀಪ್‌ ನಾಸ್ಕರ್‌ – ಹೊರ ರಾಜ್ಯದ ವಿದ್ಯಾರ್ಥಿ
    6. ನಕುಲ್‌ ಅಭಯ್‌ – ವಿದ್ಯಾನಿಕೇತನ ಕಾಲೇಜ್‌, ಹುಬ್ಬಳ್ಳಿ
    7. ಎಸ್‌.ಶ್ರೀನಿವಾಸ್‌ – ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ ಬೆಂಗಳೂರು
    8. ಅದ್ವೈತ್‌ ಪ್ರಸಾದ್‌ – ಏರ್‌ಫೋರ್ಸ್‌ ಸ್ಕೂಲ್‌ ಹೆಬ್ಬಾಳ, ಬೆಂಗಳೂರು
    9. ಗೌರೀಶ. ಕಜಂಪಾಡಿ – ವಿವೇಕಾನಂದ ಕಾಲೇಜ್‌, ಪುತ್ತೂರು
    10 ದೀಪ್ತೀ ಎಸ್‌. ಪಾಟೀಲ್‌ – ಬೇಸ್‌ ಪಿಯು ಕಾಲೇಜ್‌, ಬೆಂಗಳೂರು

    ಬಿಎಸ್‌ಸಿ ಆಗ್ರಿಕಲ್ಚರ್‌
    1. ವರುಣ್‌ ಗೌಡ- ಎಕ್ಸ್‌ಪರ್ಟ್‌ ಪಿಯು ಕಾಲೇಜ್‌ , ಮಂಗಳೂರು
    2. ಸಂಜನಾ ಕೆ – ಬೇಸ್‌ ಪಿಯು ಕಾಲೇಜ್‌ ಮೈಸೂರು
    3. ಲೋಕೇಶ್‌ ಜೋಗಿ ಬಿ ಜೋಗಿ- ರಾಮಕೃಷ್ಣ ವಿದ್ಯಾ ಶಾಲಾ ಪಿಯು ಕಾಲೇಜ್‌
    4. ಅರ್ಣವ್‌ ಅಯ್ಯಪ್ಪ – ಆಳ್ವಾಸ್‌ ಕಾಲೇಜ್‌, ಮೂಡಬಿದರೆ
    5. ಪ್ರಜ್ವಲ್‌ ಕಶ್ಯಪ್‌ – ವಿದ್ಯಾಮಂದಿರ ಇಂದು ಪಿಯು ಕಾಲೇಜ್‌, ಬೆಂಗಳೂರು
    6. ಚಿನ್ಮಯ್‌ ಎಸ್‌. ಭಾರಧ್ವಾಜ್‌ – ಸರ್‌ ಎಂವಿ ಪಿಯು ಕಾಲೇಜ್‌, ದಾವಣಗೆರೆ
    7. ಪವನ್‌ ಎಸ್‌ ಗೌಡ – ನಾರಾಯಣ ಕಾಲೇಜ್‌ ಬೆಂಗಳೂರು
    8. ಮಯೂರ್‌ ಎಸ್‌ – ಮಾಸ್ಟರ್ಸ್‌ ಪಿಯು ಕಾಲೇಜ್‌ ಹಾಸನ
    9. ಎಚ್‌. ಗೌರೀಶ್‌ – ಎಕ್ಸ್‌ಪರ್ಟ್‌ ಪಿಯು ಕಾಲೇಜ್‌ ಮಂಗಳೂರು
    10. ಜತೀನ್‌ ಎಲ್‌ ಡಿ – ಸಿಲ್ವರ್‌ ವ್ಯಾಲಿ ಪಬ್ಲಿಕ್‌ ಸ್ಕೂಲ್‌ ಬೆಂಗಳೂರು.

    ಪಶು ವೈದ್ಯಕೀಯ ವಿಭಾಗ
    1. ಸಾಯಿ ವಿವೇಕ್ ಪಿ – ನಾರಾಯಣ ಇ-ಟೆಕ್ನೋ ಸ್ಕೂಲ್, ಬೆಂಗಳೂರು
    2. ಅರ್ಯನ್ ಮಹಾಲಿಂಗಪ್ಪ ಚನ್ನಾಲ್ –  ಪ್ರಗತಿ ಪಬ್ಲಿಕ್ ಸೆಕಂಡರಿ ಸ್ಕೂಲ್, ಕೋಟಾ
    3. ಸಂಜನಾ ಕೆ –  ಬಿಎಎಸ್‍ಇ ಪಿಯು ಕಾಲೇಜ್, ಮೈಸೂರು
    4. ಪವನ್.ಎಸ್.ಗೌಡ -ನಾರಾಯಣ ಪಿಯು ಕಾಲೇಜ್, ಬೆಂಗಳೂರು
    5. ಅರ್ಣವ್ ಅಯ್ಯಪ್ಪ ಪಿ.ಪಿ – ಆಳ್ವಾಸ್ ಪಿಯು ಕಾಲೇಜ್, ಮೂಡುಬಿದ್ರೆ, ದಕ್ಷಿಣ ಕನ್ನಡ
    6. ಎಂಡಿ ಅರ್ಬಾಜ್ ಅಹ್ಮದ್ – ಶಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
    7. ವರುಣ್ ಗೌಡ ಎಬಿ – ಎಕ್ಸ್‌ಪರ್ಟ್‌ಪಿಯು ಕಾಲೇಜ್, ಮಂಗಳೂರು
    8. ಸುಮನ್ ಕೆ.ಎಸ್ – ನಾರಾಯಣ ಪಿಯು ಕಾಲೇಜ್, ಬೆಂಗಳೂರು
    9. ಕಾರ್ತಿಕ್ ರೆಡ್ಡಿ -ಶಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
    10. ತೇಜಸ್ ಭಟ್ ಕೆ – ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜ್, ದಕ್ಷಿಣ ಕನ್ನಡ

    ಬಿ ಫಾರ್ಮಾ
    1. ಸಾಯಿ ವಿವೇಕ್.ಪಿ – ನಾರಾಯಣ ಇ-ಟೆಕ್ನೋ ಶಾಲೆ, ಬೆಂಗಳೂರು
    2. ಸಂದೀಪನ್ ನಸ್ಕರ್ – ಹೊರ ರಾಜ್ಯ
    3. ಪವನ್ ಎಸ್. ಗೌಡ – ನಾರಾಯಣ ಪಿಯು ಕಾಲೇಜ್, ಬೆಂಗಳೂರು
    4. ಆರ್ಯನ್ ಮಹಲಿಂಗಪ್ಪ ಚನ್ನಲ್ – ಪ್ರಗತಿ ಪಬ್ಲಿಕ್ ಸೆಕ್ಟರ್ ಸ್ಕೂಲ್ ಕೋಟ
    5. ಸಂಜನಾ ಕೆ. – ಬಿಎಎಸ್‍ಇ ಪಿಯು ಕಾಲೇಜ್, ಮೈಸೂರು
    6. ಎಂ.ಶಶಾಂಕ್ ಬಾಲಾಜಿ – ಬಿಎಎಸ್‍ಇ ಪಿಯು ಕಾಲೇಜ್, ಹುಬ್ಬಳ್ಳಿ
    7. ಅರ್ನವ್ ಅಯ್ಯಪ್ಪ ಪಿ.ಪಿ. – ಆಳ್ವಾಸ್ ಪಿಯು ಕಾಲೇಜ್ ಮೂಡುಬಿದ್ರೆ, ದಕ್ಷಿಣ ಕನ್ನಡ
    8. ವರುಣ್ ಗೌಡ ಎ.ಬಿ. – ಎಕ್ಸ್‍ಪರ್ಟ್ ಪಿಯು ಕಾಲೇಜ್, ಮಂಗಳೂರು
    9. ಎಂ.ಡಿ. ಅರ್ಬಾಜ್ ಅಹ್ಮದ್ – ಶಾಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
    10. ಗೌರೀಶ್ ಕಜಂಪಡಿ – ವಿವೇಕಾನಂದ ಪಿಯು ಕಾಲೇಜ್ ಪುತ್ತೂರು, ದಕ್ಷಿಣ ಕನ್ನಡ

    ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್
    1. ಅರ್ಣವ್ ಅಯ್ಯಪ್ಪ ಪಿ.ಪಿ – ಆಳ್ವಾಸ್ ಪಿಯು ಕಾಲೇಜ್, ಮೂಡುಬಿದ್ರೆ, ದಕ್ಷಿಣ ಕನ್ನಡ
    2. ಸಂಜನಾ ಕೆ – ಬಿಎಎಸ್‍ಇ ಪಿಯು ಕಾಲೇಜ್, ಮೈಸೂರು
    3. ಸಾಯಿ ವಿವೇಕ್ ಪಿ- ನಾರಾಯಣ ಇ-ಟೆಕ್ನೋ ಸ್ಕೂಲ್, ಬೆಂಗಳೂರು
    4. ಕಾರ್ತಿಕ್ ರೆಡ್ಡಿ – ಶಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
    5. ವರುಣ್ ಗೌಡ ಎಬಿ – ಎಕ್ಸ್‌ಪರ್ಟ್‌ರ್ಟ್ ಪಿಯು ಕಾಲೇಜ್, ಮಂಗಳೂರು
    6. ಪವನ್.ಎಸ್.ಗೌಡ – ನಾರಾಯಣ ಪಿಯು ಕಾಲೇಜ್, ಬೆಂಗಳೂರು
    7. ಪ್ರಜ್ವಲ್ ಕಶ್ಯಪ್ – ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಬೆಂಗಳೂರು
    8. ಲೋಕೇಶ್ ಬಿ.ಜೋಗಿ – ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಲೇಜ್, ಮೈಸೂರು
    9. ಆರ್ಯನ್ ಮಹಾಲಿಂಗಪ್ಪ ಚನ್ನಾಲ್ – ಪ್ರಗತಿ ಪಬ್ಲಿಕ್ ಸೆಕಂಡರಿ ಸ್ಕೂಲ್, ಕೋಟಾ
    10. ಎಂಡಿ ಅರ್ಬಾಜ್ ಅಹ್ಮದ್ – ಶಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್

  • ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ – ಯಾವ ದಿನ ಯಾವ ಪರೀಕ್ಷೆ?

    ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ – ಯಾವ ದಿನ ಯಾವ ಪರೀಕ್ಷೆ?

    ಬೆಂಗಳೂರು: ಜುಲೈ 30, 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

    ಜುಲೈ 30 ಜೀವಶಾಸ್ತ್ರ, ಗಣಿತ ಪರೀಕ್ಷೆ ಇದ್ದರೆ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಆಗಸ್ಟ್ 1 ರಂದು ಹೊರನಾಡು – ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಇಟಿ, ನೀಟ್ ಪರೀಕ್ಷೆ- ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಲಾಸ್

    ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಈ ಮೊದಲು ಏಪ್ರಿಲ್ 22, 24 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿತ್ತು.

    ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇದ್ದು, ಶೀಘ್ರವೇ ಪಿಯುಸಿ ಬೋರ್ಡ್ ದಿನಾಂಕವನ್ನು ನಿಗದಿ ಮಾಡಲಿದೆ. ಡಿಗ್ರಿ ಕಾಲೇಜ್ ಗಳು ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಪರೀಕ್ಷೆ, ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಅಂತ ಸಚಿವರು ನೋಡಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ್ ಉತ್ತರಿಸಿದರು.

    ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಶುಲ್ಕ ಹೆಚ್ಚಳ ಮಾಡಬೇಕು ಅಂತ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡಿಲ್ಲ. ಕೊರೊನಾ ಇರುವ ಕಾರಣ ಈ ಬಾರಿ ಅಡ್ಮಿಷನ್ ಆಗುವುದೇ ದೊಡ್ಡ ವಿಷಯವಾಗಲಿದೆ. ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

  • ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭ

    ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭ

    ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸಿಇಟಿ ಪರೀಕ್ಷೆಗಳು ಜುಲೈ 30, 31ರಂದು ನಡೆಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವಥ್ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

    ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಈ ಮೊದಲು ಏಪ್ರಿಲ್ 22, 24 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿತ್ತು.

    ದ್ವೀತಿಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇದ್ದು, ಶೀಘ್ರವೇ ಪಿಯುಸಿ ಬೋರ್ಡ್ ದಿನಾಂಕವನ್ನು ನಿಗದಿ ಮಾಡಲಿದೆ. ಡಿಗ್ರಿ ಕಾಲೇಜ್ ಗಳು ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಪರೀಕ್ಷೆ, ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಅಂತ ಸಚಿವರು ನೋಡಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ್ ಉತ್ತರಿಸಿದರು.

    ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಶುಲ್ಕ ಹೆಚ್ಚಳ ಮಾಡಬೇಕು ಅಂತ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡಿಲ್ಲ. ಕೊರೊನಾ ಇರುವ ಕಾರಣ ಈ ಬಾರಿ ಅಡ್ಮಿಷನ್ ಆಗುವುದೇ ದೊಡ್ಡ ವಿಷಯವಾಗಲಿದೆ. ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

  • 2.5 ಲಕ್ಷದ ಕೆಲಸಕ್ಕೆ ಗುಡ್ ಬೈ- ಕನ್ನಡದಲ್ಲೇ IAS ಪರೀಕ್ಷೆ ಪಾಸ್ ಮಾಡಿದ ಗ್ರಾಮೀಣ ಪತ್ರಿಭೆ

    2.5 ಲಕ್ಷದ ಕೆಲಸಕ್ಕೆ ಗುಡ್ ಬೈ- ಕನ್ನಡದಲ್ಲೇ IAS ಪರೀಕ್ಷೆ ಪಾಸ್ ಮಾಡಿದ ಗ್ರಾಮೀಣ ಪತ್ರಿಭೆ

    ಹಾಸನ: ಪ್ರಾಥಮಿಕ ಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಜಿಲ್ಲೆಯ ಗ್ರಾಮೀಣ ಭಾಗದ ಯುವಕನೊಬ್ಬ ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

    ಅರಸೀಕೆರೆ ತಾಲೂಕಿನ ಹರಳಕಟ್ಟ ಗ್ರಾಮದ ದರ್ಶನ್ ಐಎಎಸ್ ಪಾಸ್ ಮಾಡಿರುವ ಯುವಕ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಅಮೆರಿಕಾದಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡಿದ್ದರು. ದರ್ಶನ್ ಐಎಎಸ್ ಮಾಡಬೇಕೆಂಬ ಕನಸು ಕಂಡಿದ್ದರು. ಅದಕ್ಕಾಗಿ ಎರಡೂವರೆ ಲಕ್ಷದ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿ ಊರಿಗೆ ವಾಪಸ್ಸಾಗಿದ್ದರು.

    ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್ ಕೂಡ ಪಡೆದಿದ್ದು, ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದಿರುವ ದರ್ಶನ್ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ಸಂದರ್ಶನ ನಡೆಯಲಿದೆ. ಐಎಎಸ್ ಫಲಿತಾಂಶ ಬಂದ ನಂತರ ದರ್ಶನ್ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿದ ದರ್ಶನ್ ಅವರಿಗೆ ಸಂಬಂಧಿಕರು ಮತ್ತು ಹಿತೈಷಿಗಳು ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ.