Tag: ಎಂಜಿನಿಯರಿಂಗ್

  • ತಂದೆ, ತಾಯಿಯ ಪಾದ ಪೂಜೆ ಮಾಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು

    ತಂದೆ, ತಾಯಿಯ ಪಾದ ಪೂಜೆ ಮಾಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು

    ಕಲಬುರಗಿ: ಶರಣ ಬಸವ ವಿಶ್ವವಿದ್ಯಾಲಯದಲ್ಲಿ(Sharana Basava University)ಶನಿವಾರ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು(Engineering Students)  ತಂದೆ ತಾಯಿಯ ಪಾದ ಪೂಜೆ(Pada-Puja) ಮಾಡಿದರು.

    ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಂದಿರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು.

    ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ಮಕ್ಕಳಿಗೆ ಪಾದ ಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು ಹಾಗೂ ತಾಯಿಗೆ ‘ಮಮ್ಮಿ’ ಎನ್ನದೇ ʼಅಮ್ಮಾʼ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಮಂಗಳಗೌರಿ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ವಿದ್ಯಾರ್ಥಿಗಳು ಮೊದಲಿಗೆ ತಮ್ಮ ತಂದೆ, ತಾಯಿಯವರ ಪಾದಗಳನ್ನು ತೊಳೆದು, ಕುಂಕುಮ ಹಚ್ಚಿ, ಪುಷ್ಪಗಳನ್ನಿಟ್ಟು, ಗಂಧದ ಕಡ್ಡಿಗಳಿಂದ ಬೆಳಗಿ, ಕರ್ಪೂರದಾರತಿ ಬೆಳಗಿ ಆಶೀರ್ವಾದ ಪಡೆದು ಪುನೀತರಾದರು.

    ಸತೀಶರವರು ಕ್ರಮವಾಗಿ ಮಂತ್ರ ಘೋಷಣೆ ಮಾಡಿ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

    ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ್ ಬಿಡವೆ, ಡೀನ್ ಡಾ.ಲಕ್ಷೀ ಪಾಟೀಲ್ ಮಾಕಾ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ಬೆಂಗಳೂರು: ಪುಲ್ವಾಮಾ ದಾಳಿಯನ್ನು(Pulwama Attack) ಸಂಭ್ರಮಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಬೆಂಗಳೂರಿನ(Bengaluru) ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನಿಗೆ ವಿಶೇಷ ಕೋರ್ಟ್‌(A Special Court ) 10 ಸಾವಿರ ರೂ. ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಕಚರಕನಹಳ್ಳಿ ನಿವಾಸಿ, ಮೂರನೇ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಫೈಜ್‌ ರಶೀದ್‌ ಶಿಕ್ಷೆಗೆ ಒಳಗಾದ ಅಪರಾಧಿ. 2019ರ ಫೆಬ್ರವರಿ 14 ರಂದು ಪುಲ್ವಾಮದಲ್ಲಿ ಉಗ್ರನ ಆತ್ಮಹುತಿ ದಾಳಿಗೆ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಶೀದ್‌ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದ. ಇದನ್ನೂ ಓದಿ: ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ಪೋಸ್ಟ್‌ ಪ್ರಕಟಗೊಂಡ ಬಳಿಕ ಸಿಸಿಬಿ ಪೊಲೀಸರು ಆತನನ್ನು 2019ರಲ್ಲಿ ಬಂಧಿಸಿದ್ದರು. ಆತನ ಜಾಮೀನು ಅರ್ಜಿ ವಜಾಗೊಂಡಿದ್ದು, ಈಗಲೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾನೆ.

    ಪೊಲೀಸರು ಆತನ ಮೊಬೈಲ್ ಫೋನ್‌ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಐಪಿಸಿ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 124 ಎ (ದೇಶದ್ರೋಹ) ಮತ್ತು 201 (ಅಪರಾಧದ ಸಾಕ್ಷ್ಯವನ್ನು ಕಣ್ಮರೆಯಾಗುವಂತೆ ಮಾಡುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

    ಅಂದು ಏನಾಗಿತ್ತು?
    2019ರ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಂಡೆ ಶ್ರೀಗೆ ಖೆಡ್ಡಾ ತೋಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅರೆಸ್ಟ್‌

    ಬಂಡೆ ಶ್ರೀಗೆ ಖೆಡ್ಡಾ ತೋಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅರೆಸ್ಟ್‌

    ರಾಮನಗರ: ಮಾಗಡಿ (Magadi) ತಾಲೂಕಿನ ಬಂಡೆ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Shree) ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಯುವತಿ ಎಂಜಿನಿಯರಿಂಗ್‌ ಓದುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕಾ ಅಲಿಯಾಸ್ ಚಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ರಜೆಯಲ್ಲಿ ತುಮಕೂರಿನಲ್ಲಿರುವ ಅಜ್ಜಿಯ ಮನೆಗೆ ಬರುತ್ತಿದ್ದಳು. ಈ ಸಂದರ್ಭದಲ್ಲಿ ಕಣ್ಣೂರು ಮೃತ್ಯಂಜಯ ಶ್ರೀಗಳ ಸಂಪರ್ಕಕ್ಕೆ ಯುವತಿ ಬಂದಿದ್ದಾಳೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಕೇಸ್ – ಕಣ್ಣೂರು ಶ್ರೀ, ಯುವತಿ ಅರೆಸ್ಟ್


    ಈಕೆ ತಾನು ಹೇಳಿದಂತೆ ಕೇಳುತ್ತಾಳೆ ಎನ್ನುವುದು ತಿಳಿಯುತ್ತಿದ್ದಂತೆ ಬಂಡೇ ಮಠದ ಶ್ರೀಗಳನ್ನು ಸಿಕ್ಕಿ ಹಾಕಿಸಲು ಕಣ್ಣೂರು ಶ್ರೀ ತಂತ್ರ ಹೂಡಿದ್ದಾರೆ. ಇದಾದ ಬಳಿಕ ಯುವತಿ ಬಂಡೇ ಮಠದ ಶ್ರೀಗಳ ಪರಿಚಯ ಮಾಡಿಕೊಂಡಿದ್ದಾಳೆ.

    ಸಲುಗೆ ಜಾಸ್ತಿ ಆಗುತ್ತಿದ್ದಂತೆ ಬಂಡೇ ಮಠದ ಶ್ರೀಗಳನ್ನು ತನ್ನ ತಾಳಕ್ಕೆ ತಕ್ಕಂತೆ ನೀಲಾಂಬಿಕಾ ಕುಣಿಸಿದ್ದಾಳೆ. ವೀಡಿಯೋ ಚಾಟ್ ಆರಂಭಿಸಿದ್ದು ಅಲ್ಲದೇ ಚಾಟಿಂಗ್‌ ವೇಳೆ ನಗ್ನವಾಗುವಂತೆ ಹೇಳಿದ್ದಾಳೆ. ಆಕೆಯ ವೈಯ್ಯಾರದ ಮಾತಿಗೆ ಮರುಳಾದ ಶ್ರೀ ನಗ್ನವಾಗಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೋ ಕರೆಗಳನ್ನು ಆಕೆ ರೆಕಾರ್ಡ್‌ ಮಾಡುತ್ತಿದ್ದಳು. ಆ ವೀಡಿಯೋ ಚಾಟಿಂಗ್ ರೆಕಾರ್ಡ್ ಅನ್ನು ಯುವತಿ ಮಹಾದೇವಯ್ಯನಿಗೆ ನೀಡುತ್ತಾಳೆ. ಮಹಾದೇವಯ್ಯ‌ ಆ ವೀಡಿಯೋವನ್ನು ಸಿಡಿ ಮಾಡಿ ಮುಖಂಡರಿಗೆ ಹಂಚಿದ್ದ ವಿಚಾರ ಈಗ ಪೊಲೀಸ್‌ ತನಿಖೆಯಿಂದ ಬಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಆನ್‌ಲೈನ್‌ ಜೂಜಾಟದಿಂದ ಬಂತು 11 ಕೋಟಿ – ಆ ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್‌ಗೈದವರು ಅರೆಸ್ಟ್‌

    ಆನ್‌ಲೈನ್‌ ಜೂಜಾಟದಿಂದ ಬಂತು 11 ಕೋಟಿ – ಆ ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್‌ಗೈದವರು ಅರೆಸ್ಟ್‌

    ಹುಬ್ಬಳ್ಳಿ: ಆನ್‌ಲೈನ್‌ ಜೂಜಾಟದಿಂದ 11 ಕೋಟಿ ಗೆದ್ದ ಸ್ನೇಹಿತನನ್ನೇ ಅಪಹರಣಗೈದ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಆನ್‌ಲೈನ್ ಜೂಜಾಟದ ಅಪ್ಲಿಕೇಶನ್‌ಗಳು ಹೆಚ್ಚಾಗಿದ್ದು, ಈ ಆಪ್‌ಗಳಲ್ಲಿ ದಿನಕ್ಕೆ ನೂರು ರೂಪಾಯಿಯಿಂದ ಕೋಟಿ ರೂಪಾಯಿ ಗೆಲ್ಲುವವರು ಇದ್ದಾರೆ. ಅದೇ ತರಹ ಸೋಲುವವರು ಇದ್ದಾರೆ. ಆದರೆ ಹುಬ್ಬಳ್ಳಿಯ ಗಿಲಾವರ್‌ಗೆ ಮಾತ್ರ ಅದೃಷ್ಟ ಫುಲ್ ಕುಲಾಯಿಸಿದೆ. ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್‌ನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ.

    ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಗಿವಾವರ್ ಗೆ ಆನ್ ಲೈನ್ ಜೂಜಾಟವಾಡುವ ಅಭ್ಯಾಸವಿದ್ದು, ಹಲವಾರು ದಿನಗಳಿಂದ ಆನ್ ಲೈನ್ ಕ್ಯಾಸಿನೋ ಜೂಜು ಆಡುತ್ತಿದ್ದ. ಕಳೆದ ತಿಂಗಳು ಗಿಲಾವರ್ ಅದೃಷ್ಟ ಕುಲಾಯಿಸಿ ಬರೊಬ್ಬರಿ 11 ಕೋಟಿ ಗೆದ್ದಿದ್ದ.

    ಹಣವನ್ನು ಬಿಡಿಸಿಕೊಳ್ಳಲು ಗಿಲಾವರ್‌ಗೆ ಬ್ಯಾಂಕ್ ಖಾತೆ ಇರಲಿಲ್ಲ. ಹೀಗಾಗಿ ಆತನ ಸ್ನೇಹಿತ ಗರೀಬ್ ಬಳಿ ಹಣ ತೆಗೆಯಲು ಸಹಾಯ ಕೇಳಿದ್ದು, ಗರೀಬ್ ತನ್ನ ಇನ್ನೊಬ್ಬ ಸ್ನೇಹಿತ ಮಹಮ್ಮದ್ ಎಂಬಾತನಗೆ ವಿಷಯ ತಿಳಿಸಿ, ಆತನ ಖಾತೆಗೆ 2 ಕೋಟಿ ಹಣ ವರ್ಗಾವಣೆ ಮಾಡಿಸಿದ್ದಾನೆ. ಹಣ ವರ್ಗಾವಣಾಗುತ್ತಿದ್ದಂತೆ, ಗರೀಬ್, ಗಿಲಾವರ್ ಮತ್ತು ಮಹಮ್ಮದ್ ಫುಲ್ ಮಜಾ ಮಾಡಿದ್ದಾರೆ. ಇದನ್ನೂ ಓದಿ: ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ

    ಸ್ವಲ್ಪ ದಿನವಾದ ಮೇಲೆ ಮಹಮ್ಮದ್‌ಗೆ ದುರಾಸೆ ಹುಟ್ಟಿಕೊಂಡಿದೆ. ಇವರ ಬಳಿ ಇನ್ನೂ ಹಣವಿದೆ ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕು ಎಂದು ಆಲೋಚಿಸಿ ಗಿಲಾವರ್‌ನನ್ನು ಕಿಡ್ನ್ಯಾಪ್‌ ಮಾಡುವ ಪ್ಲಾನ್ ಮಾಡಿದ್ದಾನೆ. ಈ ವಿಚಾರವನ್ನು ಸ್ನೇಹಿತರಿಗೆ ತಿಳಿಸಿದ್ದಾನೆ. ಸ್ನೇಹಿತರು ಈ ಕೆಲಸಕ್ಕೆ ಸಾಥ್‌ ನೀಡುತ್ತೇವೆ ಎಂದು ಹೇಳಿದ್ದಾರೆ.

    ಗಿಲಾವರ್‌ಗೆ ಕರೆ ಮಾಡಿದಾಗ ಆತ ಊರಿಗೆ ಹೋಗಿರುವ ವಿಚಾರ ತಿಳಿಯುತ್ತದೆ. ಗಿಲಾವರ್‌ ಇಲ್ಲದ ಹಿನ್ನೆಲೆಯಲ್ಲಿ ಗರೀಬ್‌ನನ್ನು ಅಪಹರಣ ಮಾಡಲು ಗ್ಯಾಂಗ್‌ ಮುಂದಾಗುತ್ತದೆ. ಆ.6 ರಂದು ಸ್ನೇಹಿತರ ಮೂಲಕ ಗರೀಬ್‌ಗೆ ಬಿವಿಬಿ ಕಾಲೇಜಿಗೆ ಬರುವಂತೆ ಕರೆ ಮಾಡಿದ್ದಾರೆ. ಗರೀಬ್‌ ಕಾಲೇಜಿಗೆ ಬರುತ್ತಿದ್ದಂತೆ ಗ್ಯಾಂಗ್‌ ಕಿಡ್ನ್ಯಾಪ್‌ ಮಾಡಿ, ಗಿಲಾವರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಗಾಬರಿಗೊಂಡ ಗಿಲಾವರ್, ಗರೀಬ್ ಮನೆಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಮನೆಯವರು ವಿವಿಧ ಕಡೆ ಗರೀಬ್‌ಗಾಗಿ ಹುಡುಕಿದ್ದಾರೆ. ಬಳಿಕ ಬೆಂಡಿಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಟ್ಟು ‌ಐದು ತಂಡಗಳನ್ನು ರಚಿಸಿಕೊಂಡು, ಶೀಘ್ರವಾಗಿ ಕಾರ್ಯೋನ್ಮುಖರಾಗಿದ್ದಾರೆ. ಮೊಬೈಲ್ ನೆಟ್‌ವರ್ಕ್‌ ಆಧರಿಸಿ ಕಿಡ್ನ್ಯಾಪ್‌ ಮಾಡಿ ಗರೀಬ್ ಬಚ್ಚಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಕಿಡ್ನ್ಯಾಪ್‌ ಮಾಡಿದ್ದ ಮಹಮ್ಮದ್ ಮತ್ತು ಆತನ 7 ಮಂದಿ ಸ್ನೇಹಿತರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆಗೆ ಹಾಜರಾಗದೆ ಹಾಸ್ಟೆಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಪರೀಕ್ಷೆಗೆ ಹಾಜರಾಗದೆ ಹಾಸ್ಟೆಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಬೆಂಗಳೂರು: ಕಾಲೇಜು ಹಾಸ್ಟೆಲ್‍ನಲ್ಲಿಯೇ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮೃತಳನ್ನು ಶಿವಾನಿ (21) ಎಂದು ಗುರುತಿಸಲಾಗಿದೆ. ಈಕೆ ಜೆಎಸ್‍ಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಈ ಘಟನೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.

    ಶಿವಾನಿ ಇಂದು ಪರೀಕ್ಷೆಗೆ ಹಾಜರಾಗದೆ ಹಾಸ್ಟೆಲ್‍ನ ಕೋಣೆಯಲ್ಲಿನ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಾಹ್ನ ಹಾಸ್ಟೆಲ್ ವಾರ್ಡನ್ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

    police (1)

    ಕೂಡಲೇ ವಾರ್ಡನ್ ಅವರು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾಲೇಜು ಪ್ರಿನ್ಸಿಪಾಲ್ ಭೀಮಾಸೇನ ಅವರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

    ಇದುವರೆಗೂ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಏರಿಕೆ ಕಂಡ ಪಾಸಿಟಿವ್ ಪ್ರಕರಣ – ರಾಜ್ಯದಲ್ಲಿ 1,478, ಬೆಂಗ್ಳೂರಲ್ಲಿ 1,251 ಕೇಸ್

    Live Tv
    [brid partner=56869869 player=32851 video=960834 autoplay=true]

  • ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್ – ಈ ವರ್ಷದಿಂದ ಶೇ.10ರಷ್ಟು ಶುಲ್ಕ ಏರಿಕೆ

    ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್ – ಈ ವರ್ಷದಿಂದ ಶೇ.10ರಷ್ಟು ಶುಲ್ಕ ಏರಿಕೆ

    ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಲ್ಕ 10% ಹೆಚ್ಚಳ ಮಾಡುವ ಮೂಲಕ ಸರ್ಕಾರ ಶಾಕ್ ನೀಡಿದೆ.

    ವಿಕಾಸಸೌಧದಲ್ಲಿ ಇಂದು ಸಚಿವ ಅಶ್ವಥ್ ನಾರಾಯಣ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷ ಸೇರುವ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಫೀಸ್ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. 45% ಲೋವರ್ ಫೀಸ್, 30% ಹೈಯರ್ ಫೀಸ್  25% ಮ್ಯಾನೇಜ್ಮೆಂಟ್ ಸೀಟ್ ಗೆ ಹೋಗಲಿದೆ ಎಂದು ಹೇಳಿದರು.

    MONEY

    ಎಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ಹಲವು ವಿಚಾರ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ದಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಆಗಿದೆ ಎಂದರು. ಇದನ್ನೂ ಓದಿ: ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನ್ಯೂ ರೂಲ್ಸ್

    ಈವರೆಗೂ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟುಗಳಿಗೆ ಕಾಮಿಡ್ ಕೆ ಸೀಟು ಮಾಡಲಾಗುತ್ತಿತ್ತು. ಇದೀಗ ಸಿಇಟಿ ಮತ್ತು ಕಾಮೆಡ್ ಕೆ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕು ಅಂತ ಚರ್ಚೆ ಮಾಡಿದ್ದೇವೆ. ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪ್ರತ್ಯೇಕ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ. ಕಾಮೆಡ್-ಕೆ, ಸಿಇಟಿ ಒಟ್ಟಿಗೆ ಏಕರೂಪದ ಸಿಇಟಿ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಒಡಂಬಡಿಕೆ ಆಗಲಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

    ಕೊರೊನಾ ಹಿನ್ನಲೆ ಎರಡು ವರ್ಷಗಳ ಕಾಲ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳು ಬೇಡಿಕೆ ಇಟ್ಟಿದ್ದರು. 20-25% ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ರು. ನಾವು 10% ಶುಲ್ಕ ಹೆಚ್ವಳಕ್ಕೆ ಅನುಮತಿ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ಕೋಟ್ಯಧಿಪತಿ ಜೈಲುಪಾಲು

    Live Tv

  • ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಐಒಎ ಆಸಕ್ತಿ: ಅಶ್ವಥ್ ನಾರಾಯಣ್

    ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಐಒಎ ಆಸಕ್ತಿ: ಅಶ್ವಥ್ ನಾರಾಯಣ್

    ಲಂಡನ್/ಬೆಂಗಳೂರು: ಕರ್ನಾಟಕದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಆಯ್ದ 1,000 ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಯನ್ನು ಒದಗಿಸಲು ಮತ್ತು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲು ಇಲ್ಲಿನ ಅನಲಿಟಿಕ್ಸ್ ಇನ್ಸ್ಟಿಟ್ಯೂಟ್(ಐಒಎ) ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.

    ವರ್ಲ್ಡ್ ಎಜುಕೇಷನ್ ಫೋರಂ ಸಮಾವೇಶದಲ್ಲಿ ಭಾಗವಹಿಸಿದ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ಭೇಟಿ ಮಾಡಿದ್ದು, ಸಂಸ್ಥೆಯ ಉನ್ನತಾಧಿಕಾರಿಗಳ ನಿಯೋಗ ಈ ವಿಚಾರವನ್ನು ಹಂಚಿಕೊಂಡಿದೆ. ಈ ವೇಳೆ ಅಶ್ವತ್ಥ ನಾರಾಯಣ್ ಅವರು, ಕರ್ನಾಟಕದ ಸಾವಿರಾರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ ಕುರಿತು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಸವಾರ ಸಾವು 

    ಅಶ್ವತ್ಥ ನಾರಾಯಣ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅನಲಿಟಿಕ್ಸ್ ಐಒಎ ಪ್ರತಿನಿಧಿ ಡಾ.ಕ್ಲೇರ್ ವಾಲ್ಶ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಈ ಕಾರ್ಯಕ್ರಮಗಳಿಗೆ ಸಂಸ್ಥೆಯು ವಿಶೇಷ ನಿಧಿಯನ್ನು ತಾನೇ ಹೊಂದಿಸಲಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರವು ಯಾವುದೇ ವೆಚ್ಚ ಮಾಡಬೇಕಾಗಿಲ್ಲ. ವಿದ್ಯಾರ್ಥಿಗಳ ಜೊತೆಗೆ ಸರ್ಕಾರದ ಮಾಹಿತಿ ತಂತ್ರಜ್ಞಾನ(ಐಟಿ) ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ನಮ್ಮ ಸಂಸ್ಥೆಯ ಸದಸ್ಯತ್ವ ನೀಡುವ ಮೂಲಕ, ಅವರೆಲ್ಲ ತಮ್ಮ ಅನಲಿಟಿಕ್ಸ್ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಡೇಟಾ ಸಾಕ್ಷರತೆ ಕಲಿಸುವುದು ನಮ್ಮ ಸದುದ್ದೇಶವಾಗಿದೆ ಎಂದರು.

    ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಅನಲಿಟಿಕ್ಸ್ ಜಾಣ್ಮೆ ಕಲಿಸುವುದು ಅಗತ್ಯವಾಗಿದೆ. ಈ ಮೂಲಕ ಐಒಎ ಸಾಮಾಜಿಕ ಜಾಲತಾಣಗಳಲ್ಲಿ ಹೇರಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ನಮ್ಮ ಸಂಸ್ಥೆಯು ವಿಶ್ವಾದ್ಯಂತ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಅಧ್ಯಯನ, ಅನ್ವಯಿಕತೆ ಮತ್ತು ವ್ಯಾಪಕ ಪ್ರಸಾರಕ್ಕೆ ಕಟಿಬದ್ಧವಾಗಿದೆ ಎಂದು ವಾಲ್ಶ್ ತಿಳಿಸಿದರು.

    ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಬಳಕೆಯನ್ನು ಕೇವಲ ಹೈ-ಟೆಕ್ ಉದ್ದಿಮೆಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬದಲಿಗೆ ಸರ್ಕಾರಿ ಇಲಾಖೆಗಳಲ್ಲಿಯೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಐಒಎ ಸಂಸ್ಥೆಯು ಕಾರ್ಪೊರೇಟ್ ಸದಸ್ಯತ್ವದ ಜೊತೆಗೆ ಕರ್ನಾಟಕ ಸರ್ಕಾರದ ಉದ್ಯೋಗಿಗಳಿಗೆ ಉಚಿತವಾಗಿ 100 ಸದಸ್ಯತ್ವ ಕೊಡಲು ಸಿದ್ಧವಿದೆ ಎಂದು ಮನದಟ್ಟು ಮಾಡಿಕೊಟ್ಟರು. ಇದನ್ನೂ ಓದಿ: ನಾಯಿ ಕಚ್ಚಿದಕ್ಕೆ 4 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ 

    What is Industrial Engineering? | NC State ISE

    ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಲು ಸಂಸ್ಥೆಯು ಹೊಂದಿರುವ ಆಸಕ್ತಿಯು 2022ರ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಆಶಯಗಳಿಗೆ ಸರಿಯಾಗಿದೆ. ಈ ಮೂಲಕ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಎರಡನ್ನೂ ಉಪಯೋಗಿಸುತ್ತಿರುವ ಐಟಿ, ಬಿಟಿ ಮತ್ತು ಡೀಪ್ ಟೆಕ್ ವಲಯದ ಅಗ್ರಗಣ್ಯ ಕಂಪನಿಗಳು ಮತ್ತು ನವೋದ್ಯಮಗಳನ್ನು ಬೆಸೆಯಬಹುದು. ಸಂಸ್ಥೆಯು ಭಾರತದಲ್ಲಿ ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದೊಂದಿಗೆ(ಐಎಸ್‌ಡಿಸಿ) ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

  • ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ

    ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ

    ನವದೆಹಲಿ: ಸರಿಯಾಗಿ ಮಾತನಾಡಲು ಅಥವಾ ಮಾತನಾಡಲು ಸಾಧ್ಯವಾಗದ ಜನರು ಸನ್ನೆ ಭಾಷೆ ಅರ್ಥವಾಗದ ವ್ಯಕ್ತಿಯ ಜೊತೆಗೆ ಸಂವಹನಿಸಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅಂತಹ ಮಾತುಬಾರದ ಜನರ ಜೊತೆ ಮಾತನಾಡಲು ಸಾಧ್ಯವಾಗಿಸುವ ಪ್ರಯತ್ನದಲ್ಲಿ, ದೆಹಲಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರಿಯಾಂಜಲಿ ಗುಪ್ತಾ ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಎಐ(ಅರ್ಟಿಫಿಶಿಯಲ್ ಇಂಟಲಿಜೆನ್ಸ್) ಮಾದರಿಯೊಂದನ್ನು ರಚಿಸಿದ್ದಾರೆ.

    ತಮಿಳುನಾಡಿನ ವೆಲ್ಲೂರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಜಲಿ ಪ್ರಸ್ತುತ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾರೆ. ಪ್ರಿಯಾಂಜಲಿಯ ತಾಯಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ಮತ್ತು ಆಕೆಯ ತಂದೆ ಸ್ಪೈಸ್ ಜೆಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಆವಿಷ್ಕಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ನನಗೆ ಚಿಕ್ಕಂದಿನಿಂದಲೂ ಎಂಜಿನಿಯರ್ ಆಗುವಂತೆ ಹೇಳುತ್ತಿದ್ದರು. ನೀನು ಎಂಜಿನಿಯರ್ ಆಗುವುದರ ಜೊತೆಗೆ ಎನಾದರೂ ಹೊಸ ಅನ್ವೇಷನೆಯೊಂದನ್ನು ಜನರಿಗೆ ಪರಿಚಯಿಸು. ಇತ್ತೀಚಿನ ದಿನಗಳಲ್ಲಿ ಜನರು ಹಲವಾರು ಸ್ಟಾರ್ಟಪ್‍ಗಳನ್ನು ಮಾಡುತ್ತಿದ್ದಾರೆ. ಹಾಗೇ ಹೊಸ ಹೊಸ ಆವಿಷ್ಕಾರಗಳನ್ನು ಸಹ ಮಾಡುತ್ತಿದ್ದಾರೆ. ನೀನು ಕೂಡಾ ಇಂಜಿನಿಯರಿಂಗ್ ವಿದ್ಯಾರ್ಥಿ, ನೀನು ಏನಾದರೂ ಮಾಡಬೇಕು ಎಂದು ದೆಹಲಿ ಮನೆಗೆ ಹೋದಾಗ ನನಗೆ ನನ್ನ ತಾಯಿ ಪ್ರೇರೆಪಿಸಿದ್ದರು. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಮೊಬೈಲ್ ಫೋನ್ ಬಳಕೆದಾರರು ಮಾತನಾಡುವಾಗ ಕಮಾಂಡ್‍ಗಳನ್ನು ತೆಗೆದುಕೊಳ್ಳುವ ಅಲೆಕ್ಸಾ ಸಾಧನವನ್ನು ನಾನು ಗಮನಿಸಿದ್ದೇನೆ. ಮಾತನಾಡಲು ಅಥವಾ ಕೇಳಲು ಸಾಧ್ಯವಾಗದವರಿಗೆ ಅಲೆಕ್ಸಾ ಯಾವುದೇ ಪ್ರಯೋಜನವಿಲ್ಲ ಅಂತ ನಾನು ಅರಿತುಕೊಂಡೆ. ಈ ವೇಳೆ ಅಲ್ಲಿಯೇ ಎಐ ಮಾದರಿಯನ್ನು ತಯಾರಿಸುವ ಕಲ್ಪನೆಯು ನನ್ನ ಮನಸ್ಸಿಗೆ ಬಂದಿತು. ನಾನು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದರು.

    ಟೆನ್ಸಾರ್‌ಫ್ಲೋ  ಆಬ್ಜೆಕ್ಟ್ ಡಿಟೆಕ್ಷನ್ ಎಪಿಐ ಬಳಸಿ ಈ ಮಾದರಿಯನ್ನು ತಯಾರಿಸಲಾಗಿದೆ. ಪೂರ್ವ ತರಬೇತಿ ಪಡೆದ ಎಸ್‍ಎಸ್‍ಡಿ ಮೊಬೈಲ್‍ನೆಟ್ ಮಾದರಿಯಿಂದ ಅನುವಾದಿಸುವ ಕಲಿಕೆಯನ್ನು ಬಳಸಿಕೊಂಡು ಕೆಲವು ಎಎಸ್‍ಎಲ್ ಚಿಹ್ನೆಗಳನ್ನು ಇಂಗ್ಲಿಷ್‍ಗೆ ಅನುವಾದಿಸುತ್ತದೆ ಎಂದು ತಿಳಿಸಿದರು.

    ಪ್ರಿಯಾಂಜಲಿ ಫೆಬ್ರವರಿ 2021 ರಲ್ಲಿ ಈ ಕಲ್ಪನೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕಳೆದ ವರ್ಷ ಡಿಸೆಂಬರ್‍ನಲ್ಲಿ ಕಂಪ್ಯೂಟರ್ ವಿಷನ್ ಬಗ್ಗೆ ಅವರ ಜ್ಞಾನದ ಆಧಾರದ ಮೇಲೆ ಮಾಡೆಲ್ ಅನ್ನು ತಯಾರಿಸಿದ್ದರು. ಆದರೆ ಅದು ಸರಿಯಾಗಿ ಕೆಲಸ ಮಾಡಲಿಲ್ಲ. ಆದರೂ ಅವರು ಈ ಆವಿಷ್ಕಾರವನ್ನು ಅಲ್ಲಿಗೆ ಬಿಡದೆ ಮತ್ತೆ ಜನವರಿಯಲ್ಲಿ ಪ್ರಯತ್ನಿಸಿದರು. ಎಐ ಮಾದರಿಯನ್ನು ಆವಿಷ್ಕರಿಸಲು ಅವರು ಇಂಟರ್ನೆಟ್‍ನಿಂದ ಸಹಾಯವನ್ನು ತೆಗೆದುಕೊಂಡಿದ್ದಾರೆ.

    ಇದನ್ನು ಮಾಡಲು ನಾನೇ ಎಲ್ಲಾ ಸಂಶೋಧನೆ ಮತ್ತು ಕಠಿಣ ಪರಿಶ್ರಮವನ್ನು ಮಾಡಿದ್ದೇನೆ. ಯಾವುದೇ ಮಾರ್ಗದರ್ಶನ ನನಗೆ ಸಿಗಲಿಲ್ಲ. ಆದರೆ ಇಂಟರ್ನೆಟ್ ಬಹಳಷ್ಟು ಸಹಾಯ ಮಾಡಿತು. ಈ ಮಾದರಿಯನ್ನು ಅಂತಿಮ ಹಂತಕ್ಕೆ ತರಲು ನಾನು ಸತತ ಮೂರು ರಾತ್ರಿಗಳವರೆಗೆ ನಿದ್ದೆ ಬಿಟ್ಟು ಕೆಲಸ ಮಾಡಿದ್ದೇನೆ ಎಂದರು.

  • ಫ್ಯೂಚರ್ ಡಿಜಿಟಲ್ ಜಾಬ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಶ್ವತ್ಥ್ ನಾರಾಯಣ್

    ಫ್ಯೂಚರ್ ಡಿಜಿಟಲ್ ಜಾಬ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಶ್ವತ್ಥ್ ನಾರಾಯಣ್

    ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‍ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮಹತ್ತ್ವಾಕಾಂಕ್ಷೆಯುಳ್ಳ ಫ್ಯೂಚರ್ ಡಿಜಿಟಲ್ ಜಾಬ್ಸ್ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಇಂದು ಚಾಲನೆ ನೀಡಿದರು.

    ಇದರ ಅಂಗವಾಗಿ ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದನ್ನೂ ಓದಿ: ನಾನು ಮಾಜಿ ಪ್ರಧಾನಿ ಈಗ ಮೇಕೆದಾಟು ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಎಚ್‍ಡಿಡಿ

    ವಿಧಾನಸೌಧದಲ್ಲಿ ಫ್ಯೂಚರ್ ಡಿಜಿಟಲ್ ಜಾಬ್ಸ್ ಉಪಕ್ರಮಕ್ಕೆ ಹಸಿರು ನಿಶಾನೆ ತೋರಿದ ಸಚಿವರು, ಈ ಕಾರ್ಯಕ್ರಮದಿಂದ ರಾಜ್ಯದ 92 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅವರ ಕನಸಿನ ಉದ್ಯೋಗ ಸಿಗಲಿದೆ. ಇನ್ನೊಂದೆಡೆಯಲ್ಲಿ, ಉದ್ಯಮರಂಗಕ್ಕೆ ಬೇಕಾದ ಸ್ವರೂಪದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ಇದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದರು.

    ಈ ನೂತನ ಕಾರ್ಯಕ್ರಮದ ಅನ್ವಯ ಸರ್ಕಾರಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಫ್ಯೂಚರ್ ಡಿಜಿಟಲ್ ಜಾಬ್ಸ್ ಯೋಜನೆಯನ್ನು ಒಂದು ವಿಶೇಷ ಆಂದೋಲನದಂತೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ಅರ್ಥಪೂರ್ಣ ಇಂಟರ್ನ್ ಶಿಪ್, ಪ್ರಾಜೆಕ್ಟುಗಳು ಮತ್ತು ಉದ್ಯೋಗ ನೇಮಕಾತಿ ಕನಸು ನನಸಾಗುವಂತೆ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪರಿಪೋಷಣೆ ಮತ್ತು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಉದ್ಯಮಗಳೊಂದಿಗೆ ಸೇರಿಕೊಂಡು ತಾಂತ್ರಿಕ ಶಿಕ್ಷಣದ ಪಠ್ಯಕ್ರಮವನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಪಡಿಸಿ, ಬೋಧನಾ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕೆಡಿಇಎಂ ನಡುವಿನ ಒಡಂಬಡಿಕೆಯು ಬೆಂಗಳೂರಿನಿಂದ ಹೊರಗಿರುವ ಕೈಗಾರಿಕೋದ್ಯಮಗಳಲ್ಲಿ ವಿದ್ಯಾರ್ಥಿಗಳು ಅಲ್ಲಿರುವ ಉದ್ಯೋಗಗಳನ್ನು ಕುರಿತು ಸಂಶೋಧನೆ ನಡೆಸಲು ಅನುವು ಮಾಡಿಕೊಡಲಿದೆ. ಜೊತೆಗೆ ಉದ್ಯಮಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಒದಗಿಸಲಿದ್ದು, ನಿಯಮಿತವಾಗಿ ವಿಚಾರ ಸಂಕಿರಣಗಳನ್ನು ಕೂಡ ಆಯೋಜಿಸಲಾಗುವುದು. ಇದರಿಂದ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದು ಸಚಿವರು ನುಡಿದರು.

    ಕೆಡಿಇಎಂ ಸಿಇಒ ಸಂಜೀವ್ ಗುಪ್ತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಇದನ್ನೂ ಓದಿ: ಯುಪಿ 3ನೇ ಸಚಿವ ರಾಜೀನಾಮೆ – ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 9ಕ್ಕೆ ಏರಿಕೆ

    ಟ್ಯಾಲೆನ್ಷಿಯಾ ಗ್ಲೋಬಲ್ ಕಂಪನಿಯ ಸಿಇಒ ಎಸ್.ಸುಬ್ರಹ್ಮಣಿಯನ್ ಮಾತನಾಡಿ, ಇದೊಂದು ಹೊಸ ಪ್ರಯತ್ನವಾಗಿದ್ದು ಇದರಿಂದ ಮಕ್ಕಳಿಗೆ ಅನುಕೂಲ ಆಗಲಿದೆ. ಸಾವಿರಕ್ಕೂ ಹೆಚ್ವು ಮಂದಿಗೆ ಈ ವರ್ಷ ಉದ್ಯೋಗ ಸಿಗುವ ಹಾಗೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗುವ ಹಾಗೆ ಮಾಡಲಾಗುವುದು ಎಂದರು.

    ಕಾರ್ಯಕ್ರಮದಲ್ಲಿ ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಮಂಜುನಾಥ್, ಉದ್ಯಮಿ ವಾದಿರಾಜ್ ಮತ್ತಿತರರು ಉಪಸ್ಥಿತರಿದ್ದರು.

  • ಗಮನಿಸಿ, ಡಿ.29ಕ್ಕೆ ಕೆಪಿಎಸ್‍ಸಿ ಮರುಪರೀಕ್ಷೆ – ಯಾವೆಲ್ಲ ದಾಖಲೆ ಸಲ್ಲಿಸಬೇಕು?

    ಗಮನಿಸಿ, ಡಿ.29ಕ್ಕೆ ಕೆಪಿಎಸ್‍ಸಿ ಮರುಪರೀಕ್ಷೆ – ಯಾವೆಲ್ಲ ದಾಖಲೆ ಸಲ್ಲಿಸಬೇಕು?

    ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರಿಂಗ್ ಹುದ್ದೆಯ ಸಾಮಾನ್ಯ ಪತ್ರಿಕೆಯ ಮರು ಪರೀಕ್ಷೆ ಡಿ.29ಕ್ಕೆ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಕೆಪಿಎಸ್‍ಸಿ ತಿಳಿಸಿದೆ.

    ಹಾಸನ-ಸೋಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲು ತಡವಾಗಿದ್ದರಿಂದ ಕಲಬುರಗಿ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ.

    ಈ ಕುರಿತು ಮಾಧ್ಯಮ ಪ್ರಕಟನೆಯನ್ನು ಹೊರಡಿಸಿದ್ದು, ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗಿನ ಅಧಿವೇಶನದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಅಧಿವೇಶನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪತ್ರಿಕೆ-1 ರ ಮರು ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ರೈಲು ವಿಳಂಬ – ಅಭ್ಯರ್ಥಿಗಳಿಗೆ ಟ್ರಾಫಿಕ್ ರಹಿತ ಸಾರಿಗೆ ವ್ಯವಸ್ಥೆ

    ದಾಖಲೆ ಸಲ್ಲಿಸಬೇಕು?
    ಈ ಪರೀಕ್ಷೆ ಬರೆಯಬೇಕಾದರೆ ಅಭ್ಯರ್ಥಿಗಳು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಮನವಿ ಪತ್ರ, ಹಾಸನ-ಸೋಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಸಂಬಂಧ ಟಿಕೆಟ್ ಪ್ರತಿ ಮತ್ತು ಆಯೋಗ ನೀಡಿರುವ ಪ್ರವೇಶ ಪತ್ರದ ಪ್ರತಿಯನ್ನು ಮಧ್ಯಾಹ್ನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಡಿ.22ರ ಒಳಗಡೆ ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರಿಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

    ಒಂದು ವೇಳೆ ಈ ದಾಖಲೆಗಳನ್ನು ಸಲ್ಲಿಸಲು ಅಭ್ಯರ್ಥಿಗಳು ವಿಫಲವಾದರೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮುಖಾಂತರ ಅಥವಾ ಖುದ್ದಾಗಿ ಕೇಂದ್ರ ಕಛೇರಿಗೆ ಬಂದು ಅಥವಾ ಇಮೇಲ್ ಮುಖಾಂತರ ಸಲ್ಲಿಸಬಹುದು

    ನಡೆದಿದ್ದೇನು?
    ಹಾಸನ-ಸೋಲಾಪುರ ಸೂಪರ್ ಫಾಸ್ಟ್, ಉದ್ಯಾನ್ ರೈಲು ಬೆಳಗ್ಗೆ 6 ಗಂಟೆಗೆ ಕಲಬುರಗಿ ನಗರಕ್ಕೆ ಬರಬೇಕಿತ್ತು. ಆದ್ರೆ ತಾಂತ್ರಿಕ ತೊಂದರೆಯಿಂದ ರೈಲುಗಳು ಬೆಳಗ್ಗೆ 6 ಗಂಟೆ ಬದಲಾಗಿ ಮಧ್ಯಾಹ್ನ 1:30ಕ್ಕೆ ಕಲಬುರಗಿ ತಲುಪಿತ್ತು. ಹೀಗಾಗಿ ಪಿಡಬ್ಲ್ಯೂಡಿ, ಎಹಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳು ಪರದಾಡಿದ್ದರು. ಇದರಿಂದ ಎಚ್ಚೆತ್ತ ಪರೀಕ್ಷೆ ಕೇಂದ್ರ ಕೆಪಿಎಸ್‍ಸಿ ರೈಲು ವಿಳಂಬವಾದ ಅಭ್ಯರ್ಥಿಗಳಿಗೆ ಪರೀಕ್ಷೆ ಸಮಯ ಬದಲಾವಣೆ ಮಾಡಿತ್ತು. ಬೆಳಗ್ಗೆ 11 ಗಂಟೆಯ ಪತ್ರಿಕೆ ಹಾಜರಾಗಲು ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲದ ಕಾರಣ ಮಧ್ಯಾಹ್ನ 2 ಗಂಟೆಗೆ ಎರಡನೇ ಪರೀಕ್ಷೆ ಹಾಜರಾಗಲು ಅಭ್ಯರ್ಥಿಗಳಿಗೆ ಕಲಬುರಗಿ ಪೊಲೀಸರು ವ್ಯವಸ್ಥೆ ಮಾಡಿಕೊಟ್ಟರು. ಇದನ್ನೂ ಓದಿ:  ಕ್ಯಾ. ವರುಣ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಸಿಎಂ