Tag: ಎಂಜಿನಿಯರಿಂಗ್ ವಿದ್ಯಾರ್ಥಿನಿ

  • ಮಧು ಪತ್ತಾರ್ ತಂದೆ ಆಸ್ಪತ್ರೆಗೆ ದಾಖಲು

    ಮಧು ಪತ್ತಾರ್ ತಂದೆ ಆಸ್ಪತ್ರೆಗೆ ದಾಖಲು

    ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇತ್ತ ಮಗಳನ್ನು ಕಳೆದುಕೊಂಡ ಮಧು ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪ್ರಕರಣ ಸಂಬಂಧ ಎಸ್‍ಪಿಯವರನ್ನು ಭೇಟಿ ಮಾಡಲು ಹೋಗಿದ್ದ ವೇಳೆ ಮಧು ತಂದೆ ನಾಗರಾಜ್ ಪತ್ತಾರ್ ಕುಸಿದು ಬಿದ್ದಿದ್ದಾರೆ. ಲೋ ಬಿಪಿಯಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸುದ್ದಿಗೋಷ್ಠಿ:
    ವಿಶ್ವಕರ್ಮ ಸಮಾಜ ಮತ್ತು ಮಧು ಪೋಷಕರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಏ.25ರಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ನಮ್ಮ ಮಗಳಿಗೆ ಅನ್ಯಾಯವಾಗಿದೆ. ಪೊಲೀಸರು ಕಂಪ್ಲೆಂಟ್ ಕೊಟ್ಟರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ರು. ಇದನ್ನೂ ಓದಿ: #Justice4Madhu – ಆಕೆಯದ್ದು ಆತ್ಮಹತ್ಯೆಯಲ್ಲ ರೇಪ್ & ಮರ್ಡರ್?

    ಆರೋಪಿ ಸುದರ್ಶನ್ ಯಾದವ್ ಮಾವ ಆಂಜನೇಯ, ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಮೊಬೈಲ್ ಸಿಕ್ಕಿದೆ. ಮಹಿಳಾ ಠಾಣೆಯಲ್ಲಿ ದೂರು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಿದರು. ಕಾಲೇಜು ಲೈಬ್ರರಿ ಬಳಿ ಮಧು ಗಾಡಿ ಇತ್ತು. ಆರೋಪಿ ಯುವಕ ಟಾರ್ಚರ್ ಕೊಡುತ್ತಿದ್ದನು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

    ಆಂಜನೇಯ ಸದರ್ ಬಜಾರ್ ಠಾಣೆಯ ರೈಟರ್ ಆಗಿದ್ದಾನೆ. ಅವನ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಾಪತ್ತೆ ದೂರು ತೆಗೆದುಕೊಳ್ಳಲು ಎರಡು ದಿನ ತಡ ಮಾಡಿದ್ದಾರೆ. ಸುದರ್ಶನ್ ತೋಟದಲ್ಲಿ ಕೊಲೆ ನಡೆದಿದೆ. ವಿಜಯ್ ಎನ್ನುವ ವ್ಯಕ್ತಿ ಕೂಡ ಇದರಲ್ಲಿ ಭಾಗವಹಿಸಿದ್ದಾನೆ. ಇದು ಒಬ್ಬರಿಂದ ಆದ ಕೊಲೆ ಅಲ್ಲ. ಡೆತ್ ನೋಟ್ ಬರೆದ ಅಕ್ಷರ ನಮ್ಮ ಹುಡಿಗೆಯದ್ದೇ ಆಗಿದೆ. ಆಕೆಗೆ ಸರಿಯಾಗಿ ಕನ್ನಡ ಬರೆಯಲು ಬರಲ್ಲ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಇದ್ರೆ ಆಕೆ ಆರೋಪಿ ಹೊಲಕ್ಕೆ ಯಾಕೆ ಹೋಗಬೇಕಿತ್ತು. ಈಗ ರಿಪೋರ್ಟ್ ಬರೋವರೆಗೂ ಕಾಯಬೇಕು ಎಂದು ಎಸ್.ಪಿ ಹೇಳಿದ್ದಾರೆ. ಒಟಿನಲ್ಲಿ ಆರೋಪಿ ಸಂಬಂಧಿ ಆಂಜನೇಯನಿಗೆ ಶಿಕ್ಷೆಯಾಗಬೇಕು ಎಂದು ಹೆತ್ತವರು ಆಗ್ರಹಿಸಿದರು. ಇದನ್ನೂ ಓದಿ: ಎಲ್ಲವನ್ನೂ ಸಹಿಸಿಕೊಂಡಿದ್ದರಿಂದ ನನ್ನ ಮಗಳಿಗೆ ಈ ಗತಿ ಬಂದಿದೆ – ಮಧು ತಾಯಿ ಕಣ್ಣೀರು

    https://www.youtube.com/watch?v=iL0SAdDIdlQ

  • 6 ಮಂದಿ, 2 ದಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‍ರೇಪ್

    6 ಮಂದಿ, 2 ದಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‍ರೇಪ್

    ರಾಂಚಿ: 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕಾಮುಕರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಚಕ್ರಧರ್ಪುರದಲ್ಲಿ ನಡೆದಿದೆ.

    ಸಂತ್ರಸ್ತೆ ಒಡಿಶಾದ ರೌರ್ಕೆಲಾದ ಮೂಲದವಳಾಗಿದ್ದು, ಆಕೆಯ ಸಹೋದರನ ಸ್ನೇಹಿತ ಆಕೆಯನ್ನು ಅಪಹರಿಸಿ ಚಕ್ರಧರ್ಪುರದ ಲೋಟಪಹಾರ್ ಪ್ರದೇಶದ ಒಂದು ಮನೆಯಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಆತನೊಂದಿಗೆ ಐವರು ಸೇರಿಕೊಂಡು ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ನಂತರ ಜನವರಿ 1ರಂದು ವಿದ್ಯಾರ್ಥಿನಿಯನ್ನು ಸಮೀಪದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ.

    ಘಟನೆ ವಿವರ:
    ಸಂತ್ರಸ್ತೆ ಡಿಸೆಂಬರ್ 30 ರಂದು ಜಾರ್ಸಗುಡದಲ್ಲಿರುವ ತನ್ನ ಮನೆಗೆ ತೆರಳಲೆಂದು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಈ ವೇಳೆ ಸಹೋದರನ ಸ್ನೇಹಿತ ಸಂತ್ರಸ್ತೆಯನ್ನು ಭೇಟಿಯಾಗಿ ಮಾತನಾಡಿಸಿ ಮನೆಗೆ ಹೋಗಲು ತನ್ನೊಂದಿಗೆ ಬೇರೆ ರೈಲು ಹತ್ತುವಂತೆ ಹೇಳಿದ್ದಾನೆ. ಅದರಂತೆಯೇ ಸಂತ್ರಸ್ತೆ ಆತನ ಜೊತೆ ರೈಲು ಹತ್ತಿದ್ದಾಳೆ. ಆದ್ರೆ ತಾನು ಹೋಗುತ್ತಿರುವ ರೈಲು ತನ್ನ ಮನೆಯ ಚಕ್ರಧರ್ಪುರದ ಕಡೆಗೆ ಹೋಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆಗ ಆರೋಪಿ ಸ್ನೇಹಿತ ಜಾರ್ಖಂಡ್‍ನ ಲೋಟಪಹಾರ್ ರೈಲ್ವೆ ನಿಲ್ದಾಣದಲ್ಲಿ ಕೆಳಗಿಳಿದು ಅಲ್ಲಿಂದ ಬಸ್ಸಿನಲ್ಲಿ ಮನೆಗೆ ಹೋಗಬೇಕೆಂದು ಹೇಳಿದ್ದಾನೆ ಎಂದು ರೌರ್ಕೆಲಾ ಎಸ್‍ಪಿ ಅಜಯ್ ಪ್ರತಾಪ್ ಸ್ವೈನ್ ಅವರು ಹೇಳಿದ್ದಾರೆ.

    ಸಂತ್ರಸ್ತೆ ಲೋಟಪಾಹಾರ್ ತಲುಪಿದ ನಂತರ ಆರೋಪಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಈತನ ಜೊತೆ ಐದು ಮಂದಿ ಸೇರಿಕೊಂಡು ಎರಡು ದಿನಗಳ ಕಾಲ ಕೂಡಿಹಾಕಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆಯನ್ನು ಸಮೀಪದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ. ಬಳಿಕ ಎಚ್ಚರಗೊಂಡ ಸಂತ್ರಸ್ತೆ ಸ್ಥಳೀಯ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಸಂತ್ರಸ್ತೆ ರೂರ್ಕೆಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ತನಿಖೆ ಮಾಡಲು ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಇದುವರೆಗೂ ಯಾರನ್ನು ಕೂಡ ಬಂಧಿಸಿಲ್ಲ ಎಂದು ಎಸ್‍ಪಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ಸ್ ಪೆಕ್ಟರ್ ಮಗ್ಳ ಮೇಲೆ ಗ್ಯಾಂಗ್‍ರೇಪ್

    ಇನ್ಸ್ ಪೆಕ್ಟರ್ ಮಗ್ಳ ಮೇಲೆ ಗ್ಯಾಂಗ್‍ರೇಪ್

    – ಸಂತ್ರಸ್ತೆಯನ್ನು ಪೊಲೀಸ್ ಠಾಣೆ ಮುಂದೆ ಎಸೆದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

    ಲಕ್ನೋ: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು 11ನೇ ತರಗತಿಯ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಪೊಲೀಸ್ ಠಾಣೆಯ ಮುಂದೆಯೇ ಸಂತ್ರಸ್ತೆಯನ್ನು ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ನಡೆದಿದೆ.

    ಆರೋಪಿಗಳು ಕಾನ್ಪುರದ ಬಾಬುಪುರ್ವಾ ಪೊಲೀಸ್ ಠಾಣೆಯ ಬಳಿ ಸಂತ್ರಸ್ತೆಯನ್ನು ಎಸೆದು ಎಸ್ಕೇಪ್ ಆಗಿದ್ದಾರೆ. ಸಂತ್ರಸ್ತೆಯ ತಂದೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದು, ಆರೋಪಿಗಳನ್ನು ಅನುರಾಗ್ ಯಾದವ್ ಮತ್ತು ಆತನ ಸ್ನೇಹಿತರಾದ ಜಾಕಿ, ಶುಭಮ್ ಮತ್ತು ಅಭಿಷೇಕ್ ಎಂದು ಗುರುತಿಸಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ.

    ನಾಲ್ವರು ಆರೋಪಿಗಳು ಬೇರೆ ಬೇರೆ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಗುರುತಿಸಿದ್ದು, ಆತ ಮಂಗಳವಾರ ಸಂಜೆ ಕಕಡಿಯೋ ಪಟ್ಟಣದಲ್ಲಿರುವ ತನ್ನ ಫ್ಲಾಟ್‍ ಗೆ ಕರೆದುಕೊಂಡು ಹೋಗಿ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಎಸ್‍ಪಿ ಸಂಜೀವ್ ಹೇಳಿದ್ದಾರೆ.

    ಆರೋಪಿಗಳು ಅತ್ಯಾಚಾರ ಮಾಡಿದ ಬಳಿಕ ಕಾರಿನಲ್ಲಿ ಕರೆದುಕೊಂಡು ಬಂದು ಬಾಬುಪುರ್ವಾ ಪೊಲೀಸ್ ಠಾಣೆಯ ಮುಂದೆಯೇ ಎಸೆದು ಹೋಗಿದ್ದರು. ನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸಂತ್ರಸ್ತೆಗೆ ಪ್ರಜ್ಞೆ ಬಂದಾಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ.

    ಸದ್ಯಕ್ಕೆ ನಾವು ವಿಚಾರಣೆಗಾಗಿ ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ವಿಚಾರಣೆ ಮುಗಿದ ಬಳಿಕ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಅನಂತ್ ಡಿಯೋ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬುದ್ಧಿ ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ..!

    ಬುದ್ಧಿ ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ..!

    ಮಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ನಗರದ ಸುರತ್ಕಲ್‍ನ ಎನ್‍ಐಟಿಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿವಾಸಿ, ಬಿಟೆಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ತೃತೀಯ ವರ್ಷದಲ್ಲಿದ್ದ ಆನಂದ್ ಪಾಠಕ್ (21) ಮೃತ ವಿದ್ಯಾರ್ಥಿ.

    ತರಗತಿಗೆ ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ಸೋಮವಾರದ ಸೆಮಿಸ್ಟರ್ ಪರೀಕ್ಷೆಗೆ ಕಾಲೇಜಿನ ಉಪನ್ಯಾಸಕರು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ವಿದ್ಯಾರ್ಥಿಯನ್ನು ಕರೆದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಆನಂದ್ ಪಾಠಕ್, ಆರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಘಟನೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ರಾತ್ರಿ ವರೆಗೂ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿತ ಉಪನ್ಯಾಸಕರನ್ನು ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಾಲೇಜು ಕ್ಯಾಂಪಸ್ ನಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಲೇಜಿನ ಆಡಳಿತ ವರ್ಗ ವಿಚಾರ ಹೊರಬರದಂತೆ ಮುಚ್ಚಿ ಹಾಕಿದೆಯೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

    ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

    – 2020ರ ವೇಳೆ ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡೋ ಗುರಿ

    ಹೈದ್ರಾಬಾದ್: ಟ್ಯೂಷನ್ ಪಡೆಯುವ ವಯಸ್ಸಿನಲ್ಲಿಯೇ 11 ವರ್ಷದ ಬಾಲಕನೊಬ್ಬ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ.

    ಹೌದು, ಹೈದ್ರಾಬಾದ್‍ನ ಬಾಲಕ ಮಹಮ್ಮದ್ ಹಸನ್ ಅಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಯಲ್ಲಿ ನೀಡಿದ, ಮನೆಗೆಲಸವನ್ನು ಸಂಜೆ 6ಗಂಟೆಗೆ ಪೂರ್ಣಗೊಳಿಸಿ, ಬಳಿಕ ಬಿ.ಟೆಕ್ ಹಾಗೂ ಎಂ.ಟೆಕ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ. ಬಾಲಕನ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹಣ ಗಳಿಕೆಗಾಗಿ ಬೋಧನೆ ಮಾಡುತ್ತಿಲ್ಲ. ಹೊರತಾಗಿ 2020ರ ವೇಳೆ ತಾನು ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎನ್ನುವ ಗುರಿಯನ್ನು ಅಲಿ ಹೊಂದಿದ್ದಾನೆ.

    ನಾನು ಕಳೆದ ವರ್ಷದಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದೆ. ಬೆಳಗ್ಗೆ ಶಾಲೆಗೆ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳುತ್ತೇನೆ. ಆಟವಾಡಿ ಹಾಗೂ ನನ್ನ ವಿದ್ಯಾಭ್ಯಾಸ ಮುಗಿಸುತ್ತೇನೆ. 6 ಗಂಟೆಗೆ ತರಬೇತಿ ಶಾಲೆಗೆ ಹೋಗಿ ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತೇನೆ ಎಂದು ಮಹಮ್ಮದ್ ಹಸನ್ ಅಲಿ ತಿಳಿಸಿದ್ದಾರೆ.

    ನಾನು ಇಂಟರ್ ನೆಟ್‍ನಲ್ಲಿ ಕೆಲವು ವಿಡಿಯೋ ನೋಡಿದ್ದೆ. ಅದರಲ್ಲಿ ನಮ್ಮ ದೇಶದ ಅನೇಕ ಎಂಜಿನಿಯರಿಂಗ್ ಪದವಿಧರರು ನಮ್ಮ ವೃತ್ತಿಗೆ ಹೊರತಾದ ಕೆಲಸ ಮಾಡುತ್ತಿದ್ದಾರೆ ಎನ್ನವ ಮಾಹಿತಿ ಸಿಕ್ಕಿತು. ಇಂತಹ ಪರಿಸ್ಥಿತಿಗೆ ಸಂವಹನದ ಕೊರತೆಯೇ ಪ್ರಮುಖ ಕಾರಣ ಅಂತಾ ನನಗೆ ಅರ್ಥವಾಯಿತು. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಆರಂಭಿಸಿದೆ ಎಂದು ಅಲಿ ಹೇಳಿಕೊಂಡಿದ್ದಾನೆ.

    ನನ್ನ ಅಜ್ಜ ಶಿಕ್ಷಕರು, ತಂದೆ, ಚಿಕ್ಕಪ್ಪ, ಅತ್ತೆಯಂದಿರು ಶಿಕ್ಷಕರು. ಹೀಗಾಗಿ ಬೋಧನೆ ರಕ್ತಗತವಾಗಿಯೇ ನನಗೆ ಬಂದಿದೆ. ಕಲಿಸಲು ಹಾಗೂ ಕಲಿಯಲು ನನಗೆ ಯಾವುದೇ ಅಂಜಿಕೆಯಿಲ್ಲ ಎಂದು ಅಲಿ ತಿಳಿಸಿದ್ದಾನೆ.

    ಕಳೆದ ತಿಂಗಳಿನಿಂದ ನಾನು ಅಲಿ ಬಳಿಗೆ ಸಿವಿಲ್ ಎಂಜಿನಿಯರಿಂಗ್ ಸಾಫ್ಟ್‍ವೇರ್ ಪಾಠ ಹೇಳಿಕೊಳ್ಳಲು ಬರುತ್ತಿರುವೆ. ಆತನು ನಮಗಿಂತ ಕಿರಿಯನಾಗಿದ್ದರೂ, ನಮ್ಮ ಮಟ್ಟಕ್ಕೆ ಇಳಿದು ವಿಷಯವನ್ನು ಸರಳಗೊಳಿಸಿ ಬೋಧನೆ ಮಾಡುತ್ತಾನೆ ಎಂದು ಎಂಜಿನಿಯರ್ ವಿದ್ಯಾರ್ಥಿನಿ ಜಿ.ಸುಷ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂ.ಟೆಕ್ ವಿದ್ಯಾರ್ಥಿನಿ ಸಾಯಿ ರೇವತಿ ಕೂಡ ಮಹಮ್ಮದ ಹಸನ್ ಅಲಿ ಬಳಿ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಕರ ಜೊತೆ ಮಾತನಾಡಿದ್ದಕ್ಕೆ ಬಾಲಕಿಯ ಕತ್ತು ಕೊಯ್ದ ಎಂಜಿನಿಯರಿಂಗ್ ವಿದ್ಯಾರ್ಥಿ

    ಬಾಲಕರ ಜೊತೆ ಮಾತನಾಡಿದ್ದಕ್ಕೆ ಬಾಲಕಿಯ ಕತ್ತು ಕೊಯ್ದ ಎಂಜಿನಿಯರಿಂಗ್ ವಿದ್ಯಾರ್ಥಿ

    ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿನಿ ಬೇರೆ ಬಾಲಕರ ಜೊತೆಗೆ ಮಾತನಾಡುತ್ತಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ತೆಲಂಗಾಣ ಸಂಗ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಮಹಾರಾಷ್ಟ್ರದ ನ್ಯಾಂಡೆಡ್ ನಗರದ ಎಂಜಿನಿಯರಿಂಗ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಅರವಿಂದ್ (20) ಕೊಲೆ ಮಾಡಿದ ಆರೋಪಿ. ಕೆಲವು ದಿನಗಳಿಂದ ಆಕೆಯನ್ನು ಅರವಿಂದ್ ಚುಡಾಯಿಸುತ್ತಿದ್ದ ಎಂದು ವರದಿಯಾಗಿದೆ.

    ಗುರುವಾರ ಚಾಕು ಹಿಡಿದು ಅರವಿಂದ್ ವಿದ್ಯಾರ್ಥಿನಿ ಮನೆಗೆ ಬಂದಿದ್ದನು. ಕೆಲ ಹೊತ್ತು ಆಕೆಯೊಂದಿಗೆ ಮಾತಿನ ಚಕಮಕಿ ನಡೆಸಿ, ಬಳಿಕ ಆಕೆಯ ಕತ್ತಿಗೆ ಚಾಕು ಹಾಕಿದ್ದಾನೆ. ವಿದ್ಯಾರ್ಥಿನಿ ಕಿರುಚಿದ್ದ ಧ್ವನಿ ಕೇಳಿದ ಸ್ಥಳೀಯರು ಬರುತ್ತಿದ್ದಂತೆ, ಆಕೆಯು ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾಳೆ. ತಕ್ಷಣವೇ ಕುಕ್ಕಟಪಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಆರೋಪಿ ಅರವಿಂದ್‍ನನ್ನು ಸ್ಥಳೀಯರು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿನಿ ಬೇರೆ ಬಾಲಕರ ಜೊತೆ ಮಾತನಾಡುತ್ತಿದ್ದಳು, ಇದರಿಂದ ಕೊಪಗೊಂಡು ನಾನು ಕೊಲೆ ಮಾಡಿದ್ದೇನೆ ಎಂದು ತನಿಖೆಯ ವೇಳೆ ಅರವಿಂದ್ ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿ ಸತೀಶ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ರಾಮನಗರ: ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿಯ ಬಳಿ ನಡೆದಿದೆ.

    ಬೆಂಗಳೂರಿನ ವೈಟ್ ಫಿಲ್ಡ್ ಸಮೀಪದ ಬೋಜನ ಹೊಸಹಳ್ಳಿಯ ಚೇತನ್(24) ಮೃತ ವಿದ್ಯಾರ್ಥಿ. ಶನಿವಾರ ಪ್ರವಾಸಿ ಹಾಗೂ ಪುರಾಣ ಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟಕ್ಕೆ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು.

    ಮಧ್ಯಾಹ್ನದ ನಂತರ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆಯಲ್ಲಿ ಈಜಲು 8 ಜನ ಸ್ನೇಹಿತರು ಹೋಗಿದ್ದಾರೆ. ಆದರೆ ಕೆರೆಯಲ್ಲಿ ಇಳಿದ ಚೇತನ್ ಮುಳುಗಿ ಸಾವನ್ನಪ್ಪಿದ್ದಾನೆ. ನಂತರ ಚೇತನ್ ನ ಶವಕ್ಕಾಗಿ ಸ್ನೇಹಿತರೇ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಸಾಯಂಕಾಲದ ವೇಳೆಗೆ ಆರಂಭವಾದ ಮಳೆಯಿಂದ ಕೆರೆಯ ಬಳಿ ಕಾಲ ಕಳೆಯುವಂತಾಗಿತ್ತು.

    ಸ್ನೇಹಿತರು ರಾತ್ರಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಂದು ಬೆಳಗ್ಗೆಯೇ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳಿಂದ ಹುಟುಕಾಟ ನಡೆಸುತ್ತಿದ್ದಾರೆ.

  • ಐಐಟಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಚಿನ್ನದ ಸರ ಗಿಫ್ಟ್!

    ಐಐಟಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಚಿನ್ನದ ಸರ ಗಿಫ್ಟ್!

    ನವದೆಹಲಿ: ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಜಾರ್ಖಂಡ್ ಧನ್‍ಬಾದ್ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿನಿಯರಿಂಗ್ ಓದುತ್ತಿರುವ ರಬೆಶ್ ಕುಮಾರ್ ಅವರಿಗೆ ಮೋದಿ ಚಿನ್ನದ ಸರವನ್ನು ಗಿಫ್ಟ್ ನೀಡಿದ್ದಾರೆ.

    ಮಧ್ಯಪ್ರದೇಶದ ಸಾರ್ವಜನಿಕ ಜಾಥಾದ ವೇಳೆ ಮೋದಿ ಭಾಷಣ ಮಾಡಿದ್ದರು. ಆ ಸಮಯದಲ್ಲಿ ಮೋದಿ ಅವರು ಚಿನ್ನದ ಸರವೊಂದನ್ನು ತನ್ನ ಕೊರಳಲ್ಲಿ ಹಾಕಿಕೊಂಡಿದ್ದರು. ಇದನ್ನು ವಿದ್ಯಾರ್ಥಿ ಗಮನಿಸಿದ್ದಾರೆ.

    ಕೆಲ ದಿನಗಳ ಬಳಿಕ ವಿದ್ಯಾರ್ಥಿ `ಕಳೆದ ತಿಂಗಳಿನಲ್ಲಿ ಮಧ್ಯಪ್ರದೇಶದಲ್ಲಿ ನಡೆಸಿದ ಜಾಥಾದ ಸಂದರ್ಭದಲ್ಲಿ ವೇಳೆ ತಾವು ಧರಿಸಿದ್ದ ಸರವನ್ನು ತನಗೆ ನೀಡುವಂತೆ ಮನವಿ ಮಾಡಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದು ಮೋದಿಗೆ ಟ್ಯಾಗ್ ಮಾಡಿದ್ದಾರೆ.

    ಟ್ವೀಟ್ ನಲ್ಲಿ `ಪಂಚಾಯತ್ ರಾಜ್ ದಿನದಂದು ನೀವು ಮಾಡಿದ ಭಾಷಣವನ್ನು ಕೇಳಿದ್ದೇನೆ. ನಿಮ್ಮ ಭಾಷಣ ಉತ್ತಮವಾಗಿತ್ತು. ಆ ಸಂದರ್ಭದಲ್ಲಿ ನೀವು ಧರಿಸಿದ್ದ ಚಿನ್ನದ ಬಣ್ಣ ಇರೋ ಸರ ನನಗೆ ತುಂಬಾ ಇಷ್ಟವಾಯಿತು. ಆ ಸರವನ್ನು ನನಗೆ ಕೊಡುತ್ತೀರಾ?’ ಅಂತ ಸಿಂಗ್ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸಿಂಗ್ ಟ್ವೀಟ್ ಮಾಡಿದ ಮರಿದಿನವೇ, ಪ್ರಧಾನಿಯವರ ಹೆಸರಿನಲ್ಲಿ ಚಿನ್ನದ ಸರದ ಜೊತೆ ಪತ್ರವೊಂದು ವಿದ್ಯಾರ್ಥಿಯ ಕೈ ಸೇರಿದೆ. `ಟ್ವಿಟ್ಟರ್ ನಲ್ಲಿ ನೀನು ಬರೆದ ಮೆಸೇಜ್ ಓದಿದ್ದೇನೆ. ನಾನು ಧರಿಸಿದ್ದ ಚಿನ್ನದ ಸರ ನಿನಗೆ ಇಷ್ಟವಾಗಿರುವುದಾಗಿ ಬರೆದಿದ್ದೆ. ಹೀಗಾಗಿ ಪತ್ರದ ಜೊತೆಗೆ ಸರವನ್ನೂ ಕೂಡ ಕಳುಹಿಸಿದ್ದೇನೆ. ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಅಂತ ಪತ್ರದಲ್ಲಿ ತಿಳಿಸಲಾಗಿತ್ತು.

    ಚಿನ್ನದ ಸರ ಕೈ ಸೇರಿದ ಕೂಡಲೇ ಸಿಂಗ್ ಮತ್ತೆ ಟ್ವೀಟ್ ಮಾಡಿದ್ದು, ಚಿನ್ನದ ಸರ ಹಾಗೂ ಪತ್ರ ನನ್ನ ಕೈ ಸೇರಿದ ಬಳಿಕ ನನಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಒಂದು ಸುಂದರವಾದ ಉಡುಗೊರೆ ನೀಡಿದ್ದಕ್ಕೆ ಹಾಗೂ ನಿಮ್ಮ ಗುಡ್ ಲಕ್ ಮೆಸೇಜ್ ಗೆ ಧನ್ಯವಾದಗಳು ಅಂತ ಸಂತಸ ಹಂಚಿಕೊಂಡಿದ್ದಾರೆ.

  • ಬಿಬಿಎಂಪಿ ಕಸದ ಲಾರಿ ಡಿಕ್ಕಿ – ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

    ಬಿಬಿಎಂಪಿ ಕಸದ ಲಾರಿ ಡಿಕ್ಕಿ – ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

    ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ.

    ರಾಜಾಜಿನಗರ ನಿವಾಸಿಯಾದ ಸಾಹಿತ್ಯ(24) ಸಾವನ್ನಪಿದ್ದ ಯುವತಿ. ರಾಜಾಜಿನಗರದ ನಿವಾಸಿಯಾದ ಅವರು ಪ್ರಿಂಟಿಂಗ್ ಪ್ರೆಸ್ ಮಾಲೀಕ ನರಸರಾಜ್ ಮಗಳಾದ ಸಾಹಿತ್ಯ ಹೆಸರುಘಟ್ಟ ಬಳಿಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ಓದುತ್ತಿದ್ದರು.

    ಕನ್ನಿಂಗ್‍ಹ್ಯಾಮ್ ರಸ್ತೆಯ ಖಾಸಗಿ ಕಂಪನಿಯಲ್ಲಿ ತರಬೇತಿಗೆಂದು ಹೋಗುತ್ತಿದ್ದ ವೇಳೆ ಬಿಬಿಎಂಪಿ ಲಾರಿ ಚಾಲಕ ಅಡ್ಡಾದಿಡ್ಡಿ ವಾಹನ ಚಲಿಸಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಬಗ್ಗೆ ಹೈಗೌಂಡ್ಸ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.