Tag: ಎಂಕೆ ಸ್ಟಾಲಿನ್

  • ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ: ಡಿಎಂಕೆ ನಾಯಕ

    ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ: ಡಿಎಂಕೆ ನಾಯಕ

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ರಾಜ್ಯಪಾಲ ಆರ್. ಎನ್. ರವಿ ಅವರ ನಡುವೆ ನಡೆಯುತ್ತಿರುವ ಜಟಾಪಟಿ ಮಧ್ಯೆಯೇ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರು ತಮಿಳುನಾಡು ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ತಮಿಳುನಾಡಿನ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಡಿಎಂಕೆ (DMK) ಪಕ್ಷದ ನಾಯಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಜ್ಯಪಾಲರನ್ನು ನಿಂದಿಸಬೇಡಿ ಎಂದು ಸಿಎಂ ಕೇಳುತ್ತಿದ್ದಾರೆ. ಆದರೆ ರಾಜ್ಯಪಾಲರು ಸರಿಯಾಗಿ ಓದಿದ್ದರೆ ನಾನು ಅವರ ಕಾಲಿಗೆ ಹೂಗಳನ್ನು ಇಟ್ಟು ಕೈಮುಗಿದು ಧನ್ಯವಾದ ಹೇಳುತ್ತಿದ್ದೆ. ಆದರೆ ಅವರು ಅಂಬೇಡ್ಕರರ ಹೆಸರು ಹೇಳಲು ನಿರಾಕರಿಸಿದರೆ ಚಪ್ಪಲಿಯಿಂದ ಹೊಡೆಯುವ ಹಕ್ಕು ನನಗಿಲ್ಲವೇ? ನೀವು ಅವರ ಹೆಸರನ್ನು ನಿರಾಕರಿಸಿದರೆ, ನೀವು ಕಾಶ್ಮೀರಕ್ಕೆ ಹೋಗುತ್ತೀರಿ. ಆಗ ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ನಾವು ಓರ್ವ ಉಗ್ರನನ್ನು ಕಳುಹಿಸುತ್ತೇವೆ ಎಂದು ಸಭೆಯಲ್ಲಿ ತಿಳಿಸಿದರು.

    ಸದ್ಯ ಈ ಹೇಳಿಕೆಯು ವಿವಾದವನ್ನು ಸೃಷ್ಟಿಸಿದ್ದು, ಬಿಜೆಪಿ (BJP) ಸೇರಿದಂತೆ ಅನೇಕ ಪಕ್ಷಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಡಿಎಂಕೆಗೆ ಯಾವ ಉಗ್ರನ ಸಂಬಂಧವಿದೆ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಏಕೆಂದರೆ ಅವರು ಭಾಷಣದಲ್ಲಿ ನಾವು ರಾಜ್ಯಪಾಲರನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ. ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ನಾವು ಎಂದರೆ ಯಾರು? ಶಿವಾಜಿ ಕೃಷ್ಣಮೂರ್ತಿ ಮಾತ್ರ ಇಂತಹ ಹೊಲಸು ಭಾಷೆಯಲ್ಲಿ ಮಾತನಾಡಿಲ್ಲ. ಸಿಎಂ ಎಂ.ಕೆ ಸ್ಟಾಲಿನ್ ಅವರ ಆಶೀರ್ವಾದದಿಂದ, ಡಿಎಂಕೆ ಮುಖ್ಯಸ್ಥರ ಪ್ರಚೋದನೆಯಿಂದ ಅವರು ಮಾತನಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ನಾಯಕ ಕಿಡಿಕಾರಿದರು.

    ಏನಿದು ವಿವಾದ?: ಜ. 10ರಂದು ತಮಿಳುನಾಡಿನ ರಾಜ್ಯಪಾಲ (Tamil Nadu Governor) ಆರ್‌ಎನ್ ರವಿ (RN Ravi) ಅವರು ವಿಧಾನಸಭಾ ಅಧಿವೇಶನದ ವೇಳೆ ಗದ್ದಲ ಕೋಲಾಹಲದ ನಡುವೆ ವಿಧಾನಸಭೆಯಿಂದ (Assembly) ಹೊರನಡೆದಿದ್ದರು. ಇದನ್ನೂ ಓದಿ: ಗುಜರಾತ್ ಪ್ರವಾಸ ಮುಗಿಸಿ ಆರಗ ವಾಪಸ್ ಆಗ್ತಿದ್ದಂತೆ ಸ್ಯಾಂಟ್ರೋ ರವಿ ಅರೆಸ್ಟ್- ರಾಜ್ಯ ರಾಜಕೀಯದಲ್ಲಿ ಸಂಚಲನ

    ಈ ವೇಳೆ ಎಂ.ಕೆ. ಸ್ಟಾಲಿನ್ ಅವರು, ಜಾತ್ಯತೀತತೆ ಸೇರಿದಂತೆ ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನು ರಾಜ್ಯ ಸರ್ಕಾರ ಭಾಷಣದಲ್ಲಿ ಸಿದ್ಧಪಡಿಸಿತ್ತು. ಆದರೆ ಭಾಷಣದ ಆ ಭಾಗಗಳನ್ನು ಅವರು ಬಿಟ್ಟುಬಿಟ್ಟಿದ್ದಾರೆ. ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ದ್ರಾವಿಡ ಮಾದರಿಯ ಉಲ್ಲೇಖವನ್ನೂ ಅವರು ಓದಿಲ್ಲ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ಗದ್ದಲವು ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಟ್ವಿಟ್ಟರ್‌ನಲ್ಲಿ #GetOutRavi ಎಂಬ ಟ್ರೆಂಡಿಂಗ್‌ ಕೂಡ ಪ್ರಾರಂಭವಾಗಿತ್ತು.  ಇದನ್ನೂ ಓದಿ: ಪ್ರತಿಭಾವಂತ ಕ್ರಿಕೆಟರ್ ಸಿದ್ಧಾರ್ಥ್ ಶರ್ಮಾ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್‌ಎನ್ ರವಿ ಭಾಷಣಕ್ಕೆ ಸ್ಟಾಲಿನ್ ಆಕ್ಷೇಪ – ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ

    ಆರ್‌ಎನ್ ರವಿ ಭಾಷಣಕ್ಕೆ ಸ್ಟಾಲಿನ್ ಆಕ್ಷೇಪ – ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ

    ಚೆನ್ನೈ: ತಮಿಳುನಾಡಿನ ರಾಜ್ಯಪಾಲ (Tamil Nadu Governor) ಆರ್‌ಎನ್ ರವಿ (RN Ravi) ಅವರು ಸೋಮವಾರ ವಿಧಾನಸಭಾ ಅಧಿವೇಶನದ ವೇಳೆ ಗದ್ದಲ ಕೋಲಾಹಲದ ನಡುವೆ ವಿಧಾನಸಭೆಯಿಂದ (Assembly) ಹೊರನಡೆದಿದ್ದಾರೆ.

    ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಸ್ಪೀಕರ್‌ಗೆ ಹೇಳಿದ್ದು, ಈ ಬಳಿಕ ಗವರ್ನರ್ ಆರ್‌ಎನ್ ರವಿ ಸದನದಿಂದ ಹೊರ ನಡೆದರು. ಇದನ್ನೂ ಓದಿ: ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ – ಇಬ್ಬರಿಗೆ 25 ಸಾವಿರ ದಂಡ

    ಜಾತ್ಯತೀತತೆ ಸೇರಿದಂತೆ ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನು ರಾಜ್ಯ ಸರ್ಕಾರ ಭಾಷಣದಲ್ಲಿ ಸಿದ್ಧಪಡಿಸಿತ್ತು. ಆದರೆ ಭಾಷಣದ ಆ ಭಾಗಗಳನ್ನು ಅವರು ಬಿಟ್ಟುಬಿಟ್ಟಿದ್ದಾರೆ. ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ದ್ರಾವಿಡ ಮಾದರಿಯ ಉಲ್ಲೇಖವನ್ನೂ ಅವರು ಓದಿಲ್ಲ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಎಂಕೆ ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ನಡುವೆ ಆರ್‌ಎನ್ ರವಿ ಅವರು ತಮಿಳುನಾಡು ಹೆಸರು ಸರಿಯಾಗಿಲ್ಲ ಎಂದು ಹೇಳಿರುವುದಕ್ಕೆ ಕಿಡಿ ಕಾರಿದ ಡಿಎಂಕೆ ಶಾಸಕರು, ಇಲ್ಲಿ ನೀವು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗಳಂತಹ ಸಿದ್ಧಾಂತಗಳನ್ನು ಹೇರಬೇಡಿ. ಇದು ನಾಗಾಲ್ಯಾಂಡ್ ಅಲ್ಲ. ಇದು ನಮ್ಮ ಹೆಮ್ಮೆಯ ತಮಿಳುನಾಡು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುರಭವನದಲ್ಲಿ ಭಾರೀ ಹೈಡ್ರಾಮಾ – ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

    ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

    ಚೆನ್ನೈ: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಸಾವಿನ ಬಗ್ಗೆ ಕೆಲವು ಬಿಜೆಪಿ ನಾಯಕರು ಅರ್ಥವಿಲ್ಲದ ಕಾಮೆಂಟ್‍ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಾಗ್ದಾಳಿ ನಡೆಸಿದರು.

    ಉಕ್ರೇನ್‍ನಂತಹ ಸಣ್ಣ ದೇಶಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಏಕೆ ಹೋಗುತ್ತಾರೆ ಎಂದು ಕೇಳಲು ಬಿಜೆಪಿಗೆ ಇದು ಸರಿಯಾದ ಸಮಯವಲ್ಲ. ಖಾರ್ಕಿವ್ ಶೆಲ್ ದಾಳಿಗೆ ಬಲಿಯಾದ ಕರ್ನಾಟಕದ ವಿದ್ಯಾರ್ಥಿ ನವೀನ್ ವಿಚಾರವಾಗಿ ಮಾತನಾಡಿದ ಅವರು, ನವೀನ್ ಶೇಕಡಾ 97 ರಷ್ಟು ಅಂಕಗಳನ್ನು ಗಳಿಸಿದ್ದು, ನಂತರ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗದೇ ಒತ್ತಾಯದಿಂದ ಉಕ್ರೇನ್‍ನಲ್ಲಿ ಓದಲು ಹೋದ ವಿಚಾರ ನನಗೆ ಬೇಸರ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ಹೇಳಿಕೆಗಳು, ಕೆಲವು ಕೇಂದ್ರ ಸಚಿವರ ಸಂದರ್ಶನಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಬೆಂಬಲಿಸುವ ಪೋಸ್ಟ್‌ಗಳು ಗಾಯದ ಮೇಲೆ ಬರೆ ಎಳೆದಿದಂತಿದೆ. ಪ್ರಧಾನಿ ಮೋದಿ ಅವರು ಈ ವಿಚಾರವಾಗಿ ಕಟ್ಟುನಿಟ್ಟಿನ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ಎಲ್ಲರಿಗೂ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದಾರೆ.

    ನೀಟ್ ವಿದ್ಯಾರ್ಥಿಗಳಿಗೆ ಅಡ್ಡಿಯಾಗಿರುವುದು ಮತ್ತು ಬಡತನದ ಹಿನ್ನೆಲೆ ವೈದ್ಯಕೀಯ ಆಕಾಂಕ್ಷೆಗಳನ್ನು ಕಸಿದುಕೊಳ್ಳುತ್ತಿರುವುದೇ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಲು ಕಾರಣ. ಇದಕ್ಕೆ ಡಿಎಂಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನೀಟ್ ರದ್ದುಪಡಿಸಲು ಆದ್ಯತೆ ನೀಡಬೇಕು ಎಂದಿದ್ದಾರೆ. ಇದನ್ನೂ ಓದಿ: 25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕುಕ್ಕುತ್ತಿದೆ: ಉದ್ಧವ್ ಠಾಕ್ರೆ

  • ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

    ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

    – ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ

    ಚೆನ್ನೈ: ತಮಿಳು ತಾಯಿಗೆ ವಂದಿಸುವ (ತಮಿಳ್ ತಾಯ್ ವಾಳ್ತ್) ತಮಿಳು ತಾಯಿಯೇ ನಿನಗೆ ವಂದನೆ ಗೀತೆಯನ್ನು ತಮಿಳುನಾಡು ತನ್ನ ನಾಡಗೀತೆಯಾಗಿ ಫೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ.

    ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ತಮಿಳ್ ತಾಯ್ ವಾಳ್ತ್ ಕೇವಲ ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರ ಗೀತೆಯಲ್ಲ, ಹೀಗಾಗಿ ಈ ಹಾಡಿನ ವೇಳೆ ಯಾರೂ ಎದ್ದು ನಿಲ್ಲುವ ಅವಶ್ಯಕತೆ ಇಲ್ಲ ಎಂದಿತ್ತು. ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಹಾಡನ್ನು ನಾಡಗೀತೆಯಾಗಿ ಫೋಷಿಸಿ ಸರ್ಕಾರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

    55 ಸೆಕೆಂಡುಗಳಿರುವ ಈ ನಾಡಗೀತೆ ಹಾಡುವಾಗ ಅಂಗವಿಕಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಲ್ಲಬೇಕು ಹಾಗೂ ರಾಜ್ಯದ ಎಲ್ಲಾ ಶಾಲೆಗಳು, ವಿಶ್ವ ವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಸ್ಥೆತೆಗಳು ಯಾವುದೇ ಕಾರ್ಯಕ್ರಮಗಳು ಆರಂಭಿಸುವ ಮುನ್ನ ಈ ಗೀತೆಯನ್ನು ಹಾಡುವುದು ಕಡ್ಡಾಯ ಎಂದು ಸ್ಟಾಲಿನ್ ಆದೇಶಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ನಿರ್ಧಾರ ತಪ್ಪಿರಬಹುದು, ಉದ್ದೇಶವಲ್ಲ: ಅಮಿತ್‌ ಶಾ

    ತಮಿಳಿನ ಖ್ಯಾತ ವಿದ್ವಾಂಸ ಎಂ.ಎಸ್ ಪಿಳ್ಳೈ(1855-1897)ಗೀತೆ ಬರೆದಿದ್ದರು. ಎಂ.ಎಸ್ ವಿಶ್ವನಾಥನ್ ಸಂಗೀತ ನೀಡಿದ್ದಾರೆ. ಇದು 1970ರಿಂದ ಅಧಿಕೃತ ಗೀತೆ ಮಾನ್ಯತೆ ಹೊಂದಿತ್ತು. ಇದೀಗ ಇದಕ್ಕೆ ನಾಡಗೀತೆ ಸ್ಥಾನಮಾನ ದೊರಕಿದೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    2018ರಲ್ಲಿ ಈ ಗೀತಗಾಯನದ ವೇಳೆ ಕಂಚಿ ಕಾಮಕೋಟಿ ಶ್ರೀಗಳಾದ ವಿಜಯೇಂದ್ರ ಸರಸ್ವತಿಗಳು ಎದ್ದು ನಿಲ್ಲದೇ ಇರುವುದು ವಿವಾದಕ್ಕೀಡಾಗಿತ್ತು. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನಾಡಗೀತೆಯಿದೆ. ಜಯಭಾರತ ಜನನಿಯ ತನುಜಾತೆ ಕರ್ನಾಟಕದ ನಾಡಗೀತೆಯಾಗಿದೆ.

  • ಮತ್ತೆ ಶುರುವಾಯ್ತು ಮಳೆ – ತಮಿಳುನಾಡಿನ ಅನೇಕ ಪ್ರದೇಶ ಜಲಾವೃತ

    ಮತ್ತೆ ಶುರುವಾಯ್ತು ಮಳೆ – ತಮಿಳುನಾಡಿನ ಅನೇಕ ಪ್ರದೇಶ ಜಲಾವೃತ

    ಚೆನ್ನೈ: ಭಾರೀ ಮಳೆಯಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ಅನೇಕ ಪ್ರದೇಶಗಳು ಜಲಾವೃತಗೊಂಡಿದೆ. ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮನ್ಸೂನ್ ಮಳೆಯಾಗುತ್ತಿದೆ. ಇದರಿಂದಾಗಿ ಸಾಮಾನ್ಯಕ್ಕಿಂತ ಸುಮಾರು ಶೇ.75ರಷ್ಟು ಮಳೆ ದಾಖಲಾಗಿದೆ.

    ಜಲಾವೃತ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಸ್ಥಳೀಯ ಅಧಿಕಾರಿಗಳು ಪೊಲೀಸರು, ವಿವಿಧ ಇಲಾಖೆಯ ನೌಕರರು ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇವರ ಕಾರ್ಯಕ್ಕೆ ಶ್ಲಾಘನೀಯ ಎಂದರು. ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

    ಸತತ ಮಳೆಯಿಂದಾಗಿ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‍ಪೇಟ್, ಕಡಲೂರು, ನಾಗಪಟ್ಟಿಣಂ, ಪುದುಕೋಟೆ, ಟುಟಿಕೋರಿನ್, ಅರಿಯಾಲೂರ್, ಪೆರುಂಬಲೂರ್, ದಿಂಡಿಗಲ್, ರಾಣಿಪೇಟೆ, ತಿರುಪತ್ತೂರ್, ತಿರುವಣ್ಣಾಮಲೈ ಮತ್ತು ವೆಲ್ಲೂರು ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ

    ಕಳೆದ 200 ವರ್ಷಗಳಲ್ಲಿ ಚೆನ್ನೈನಲ್ಲಿ ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿಗೆ ಅಧಿಕ ಮಳೆ ದಾಖಲಾಗಿದೆ ಎಂದು ತಜ್ಞರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈನ ಆರು ಪರಿಹಾರ ಕೇಂದ್ರಗಳಲ್ಲಿ 653 ಜನರನ್ನು ಇರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

     

  • ಫಿಟ್ನೆಸ್‌ ರಹಸ್ಯ ಕೇಳಿದ ಮಹಿಳೆ- ನಾಚಿ ನೀರಾದ ಸಿಎಂ ಸ್ಟಾಲಿನ್

    ಫಿಟ್ನೆಸ್‌ ರಹಸ್ಯ ಕೇಳಿದ ಮಹಿಳೆ- ನಾಚಿ ನೀರಾದ ಸಿಎಂ ಸ್ಟಾಲಿನ್

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಮುಂಜಾನೆ ವಾಕಿಂಗ್‍ಗೆ ಹೋಗಿದ್ದಾಗ ಎದುರಲ್ಲಿ ಸಿಕ್ಕ ಜನರು ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ.

    ವಾಕಿಂಗ್ ಹೋಗುತ್ತಿದ್ದ ಮುಖ್ಯಮಂತ್ರಿ ಸ್ಟಾಲಿನ್ ಅವರ ಬಳಿ ಕೆಲವು ಮಹಿಳೆಯರು ರಸ್ತೆಯಲ್ಲಿ ಮಾತನಾಡಿದ್ದು, ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು? ಎಂದು ಕೇಳಿದ್ದಾರೆ. ಇದನ್ನು ಕೇಳಿ ಸಿಎಂ ಸ್ಟಾಲಿನ್ ನಾಚಿಕೊಂಡಿದ್ದಾರೆ. ಮಹಿಳೆ ಆ ಪ್ರಶ್ನೆ ಕೇಳುತ್ತಿದ್ದಂತೆ ಜೋರಾಗಿ ನಕ್ಕು, ನಾನು ಡಯಟ್ ಕಂಟ್ರೋಲ್ ಮಾಡುತ್ತೇನೆ. ಅದರಿಂದಲೇ ನಾನಿನ್ನೂ ಫಿಟ್ ಆಗಿದ್ದೇನೆ ಎಂದಿದ್ದಾರೆ. ಈ ವೀಡಿಯೋವನ್ನು ಡಿಎಂಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    ನನ್ನ ಬಿಡುವಿಲ್ಲದ ದಿನಚರಿಯ ನಡುವೆಯೇ ನನ್ನ ಆರೋಗ್ಯಕ್ಕೆಂದು ಸ್ವಲ್ಪ ಸಮಯವನ್ನು ಮೀಸಲಿಡುತ್ತೇನೆ. ಹಾಗೇ ನನ್ನ ಬಿಡುವಿನ ಸಮಯದಲ್ಲಿ ಮೊಮ್ಮಕ್ಕಳೊಂದಿಗೆ ಎಂಜಾಯ್ ಮಾಡಿ, ರಿಲ್ಯಾಕ್ಸ್ ಆಗುತ್ತೇನೆ. ಬೆಳಗ್ಗೆ ಬಹಳ ಬೇಗ ಏಳುವ ನಾನು ದಿನವೂ ವಾಕಿಂಗ್ ಹೋಗುತ್ತೇನೆ. ವಾಕಿಂಗ್ ಬಳಿಕ ಯೋಗ ಮಾಡುತ್ತೇನೆ. 10 ದಿನಗಳಿಗೆ ಒಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ನನ್ನ ದೇಹ ಫಿಟ್ ಆಗಿರುತ್ತದೆ. ಇದರಿಂದಲೇ ನಾನು ಎಷ್ಟೇ ಬ್ಯುಸಿಯಾಗಿದ್ದರೂ ಸುಸ್ತಾಗುವುದಿಲ್ಲ ಎಂದಿದ್ದಾರೆ.

    ಎಂ.ಕೆ. ಸ್ಟಾಲಿನ್ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದ ವೀಡಿಯೋವೊಂದನ್ನು ಇತ್ತೀಚೆಗೆ ಡಿಎಂಕೆ ಹಂಚಿಕೊಂಡಿತ್ತು. ಸ್ಟಾಲಿನ್ ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಫಿಟ್ನೆಸ್‌ ವೀಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಆಗಾಗ ಪೋಸ್ಟ್ ಮಾಡಲಾಗುತ್ತಿದೆ. ಸ್ಟಾಲಿನ್ ಫಿಟ್ನೆಸ್‌ ವೀಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

  • ಪ್ರತ್ಯೇಕ ದಕ್ಷಿಣ ರಾಷ್ಟ್ರ ರಚನೆಗೆ ನನ್ನ ಸ್ವಾಗತವಿದೆ: ಡಿಎಂಕೆ ನಾಯಕ ಎಂಕೆ ಸ್ಟಾಲಿನ್

    ಪ್ರತ್ಯೇಕ ದಕ್ಷಿಣ ರಾಷ್ಟ್ರ ರಚನೆಗೆ ನನ್ನ ಸ್ವಾಗತವಿದೆ: ಡಿಎಂಕೆ ನಾಯಕ ಎಂಕೆ ಸ್ಟಾಲಿನ್

    ಚೆನ್ನೈ: ಪ್ರತ್ಯೇಕ ದ್ರಾವಿಡ ರಾಷ್ಟ್ರ ಸಂಭವಿಸಿದಲ್ಲಿ ಇದಕ್ಕೆ ತಮ್ಮ ಸ್ವಾಗತವಿದ್ದು, ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ ಎಂದು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಹೇಳಿದ್ದಾರೆ.

    ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಪ್ರತ್ಯೇಕ ದ್ರಾವಿಡ ರಾಷ್ಟ್ರ ಬೇಡಿಕೆ ಪ್ರಶ್ನೆಗೆ ಉತ್ತರಿಸಿ ದಕ್ಷಿಣ ಐದು ರಾಜ್ಯಗಳನ್ನು ಒಳಗೊಂಡ ದ್ರಾವಿಡ ರಾಷ್ಟ್ರ ಸ್ಥಾಪನೆಗೆ ನಮ್ಮ ಬೆಂಬಲವಿದೆ, ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

    ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟದಿಂದ ಹೊರನಡೆದಿದ್ದಾರೆ. ಈ ವೇಳೆಯಲ್ಲೇ ಎಂಕೆ ಸ್ಟಾಲಿನ್ ಪ್ರತ್ಯೇಕ ದ್ರಾವಿಡ ನಾಡು ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.

    ಇದೇ ವೇಳೆ ತಮಿಳುನಾಡು ಸಿಎಂ ಹಾಗೂ ಎಐಎಂಡಿಕೆ ನಾಯಕ ಪಳನಿಸ್ವಾಮಿ ಅವರಿಗೆ ಪತ್ರ ಬರೆದಿರುವ ಕುರಿತು ತಿಳಿಸಿರುವ ಅವರು, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಲು ಮನವಿ ಮಾಡಿರುವುದಾಗಿ ತಿಳಿಸಿದರು. ಎಐಎಂಡಿಕೆ ಪಕ್ಷವು ಲೋಕಸಭೆಯಲ್ಲಿ ಮೂರನೇ ಅತೀ ದೊಡ್ಡ ಪಕ್ಷವಾಗಿದೆ.

    ದ್ರಾವಿಡ ನಾಡು ರಾಷ್ಟ್ರ ಕಲ್ಪನೆಯೂ ತಮಿಳು, ಮಲೆಯಾಳಂ, ತೆಲುಗು ಮತ್ತು ಕನ್ನಡ ಬಾಷೆ ಮಾತನಾಡುವ ರಾಷ್ಟ್ರಗಳ ಮಾತೃಭೂಮಿಯ ಕಲ್ಪನೆಯಾಗಿದೆ. 1940 ರಲ್ಲಿ ತಮಿಳುನಾಡಿನ ಇವಿ ರಾಮಸ್ವಾಮಿ ಪೆರಿಯಾರ್ ಅವರು ಈ ಕಲ್ಪನೆಯನ್ನು ರೂಪಿಸಿದರು. ಈ ವೇಳೆ ತಮಿಳರ ಆತ್ಮಾಭಿಮಾನ ಎಂಬ ಹೆಸರಿನಲ್ಲಿ ಆಂದೋಲನವನ್ನು ಮುನ್ನೆಡೆಸಿ `ದ್ರಾವಿಡ ಮುನೇತ್ರ ಕಳಗಂ'(ಡಿಎಂಕೆ) ಪಕ್ಷವನ್ನು ಸ್ಥಾಪಿಸಿದ್ದರು. ಡಿಎಂಕೆ ಪಕ್ಷದ ಸ್ಥಾಪಕ ತತ್ವಗಳಲ್ಲಿ ಪ್ರತ್ಯೇಕ ದ್ರಾವಿಡ ರಾಷ್ಟ್ರ ನಿರ್ಮಾಣವೂ ಮೂಲ ಅಂಶವಾಗಿದೆ.