Tag: ಎಂಐಎಂ

  • ಭಾರತ್‌ ಮಾತಾ ಅನ್ನೋದು ಅವೈಜ್ಞಾನಿಕ: ಉಸ್ಮಾನ್‌ ಘನಿ ವಿವಾದಾತ್ಮಕ ಹೇಳಿಕೆ

    ಭಾರತ್‌ ಮಾತಾ ಅನ್ನೋದು ಅವೈಜ್ಞಾನಿಕ: ಉಸ್ಮಾನ್‌ ಘನಿ ವಿವಾದಾತ್ಮಕ ಹೇಳಿಕೆ

    ಬಾಗಲಕೋಟೆ: ಭಾರತ್‌ ಮಾತಾ ಎನ್ನುವುದು ಅವೈಜ್ಞಾನಿಕ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನ್‌ ಘನಿ ಹುಮ್ನಾಬಾದ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬಾಗಲಕೋಟೆಯ ಇಳಕಲ್‌ನಲ್ಲಿ ಭಾಷಣ ಮಾಡುವಾಗ, ಒಂದು ಮಗುವಿಗೆ ಜನ್ಮ ಕೊಡಲು ಎಷ್ಟು ತಾಯಂದಿರು ಬೇಕು? ಒಬ್ಬರು ತಾಯಿ ಸಾಕಲ್ವಾ? ಹೀಗಿದ್ಮೇಲೆ ಭಾರತ ಮಾತಾ, ಗಂಗಾಮಾತಾ, ಗೋಮಾತಾ, ಎಲ್ಲಿಂದ ಬರ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    ಕಂಡ ಕಂಡವರನ್ನು ತಾಯಿ ಎನ್ನುತ್ತಾ ಹೋದರೆ ಮುಂದೆ ದೇಶದ ಗತಿ ಏನು ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಉಸ್ಮಾನ್‌ ಘನಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮೀಟೂ ಕೇಸಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್

  • ಚೌಕಿದಾರನಿಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕ್ತೀನಿ: ಅಕ್ಬರುದ್ದೀನ್ ಓವೈಸಿ

    ಚೌಕಿದಾರನಿಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕ್ತೀನಿ: ಅಕ್ಬರುದ್ದೀನ್ ಓವೈಸಿ

    ಹೈದರಾಬಾದ್: ವಿವಾದತ್ಮಕ ಹೇಳಿಕೆಯಿಂದಲೇ ಸುದ್ದಿಯಾಗಿ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿಯವರ ಚೌಕಿದಾರ ಹೇಳಿಕೆ ತಿರುಗೇಟು ನೀಡಿದ್ದಾರೆ. ಚೌಕಿದಾರ್ ಎಂದು ಹೇಳುವ ಮೋದಿ ತಲೆಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕಿ ನಿಲ್ಲಿಸುತ್ತೇನೆ ಎಂಬ ಹೇಳಿಕೆ ನೀಡಿದ್ದು ಬಿಜೆಪಿ ನಾಯಕರ ಕೆಂಗಣ್ಣಿಗೆ ಅಕ್ಬರುದ್ದೀನ್ ಗುರಿಯಾಗಿದ್ದಾರೆ.

    ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸೋದರನಾಗಿರುವ ಅಕ್ಬರುದ್ದೀನ್ ಓವೈಸಿ, ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಲವೊಮ್ಮೆ ಚಾಯ್‍ವಾಲ್ ಅಂತಾರೆ, ಮತ್ತೊಮ್ಮೆ ನಾನೊಬ್ಬ ಫಕೀರ್ ಎಂದು ಹೇಳಿಕೊಳ್ಳುತ್ತಾರೆ. ಕೆಲವೊಂದು ಚರಂಡಿಯಿಂದ ಗ್ಯಾಸ್ ತಯಾರಿಸುವಂತೆ ಹೇಳಿದ್ರೆ, ಇದೀಗ ನಾನೊಬ್ಬ ಚೌಕಿದಾರ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂತಹ ವ್ಯಕ್ತಿಗೆ ನೀವು ವೋಟ್ ಹಾಕುತ್ತಿದ್ದೀರಿ ಎಂಬುದನ್ನು ಮತದಾರರು ತಿಳಿದುಕೊಳ್ಳಬೇಕಿದೆ ಎಂದರು.

    ಚಾಯ್‍ವಾಲ್ ಆದ್ರೆ ಚಾಯ್ ಕಿಟಲಿ, ಒಲೆ ನೀಡುತ್ತೇನೆ. ಬೇಕಾದರೆ ಚಹಾ ತಯಾರಿಸಲು ಟೀ ಪುಡಿಯನ್ನು ಕೊಡುತ್ತೇನೆ. ಈಗ ಚಾಯ್‍ವಾಲ್ ನಿಂದ ಚೌಕಿದಾರನಾಗಿ ಬದಲಾಗಿದ್ದರಿಂದ ಅವರ ಇಚ್ಛೆಯಂತೆ ತಲೆಗೊಂಡು ಟೋಪಿ, ಕೊರಳಲ್ಲಿ ಸೀಟಿ ಹಾಕುತ್ತೇನೆ ಎಂದು ಮೋದಿ ವಿರುದ್ಧ ಅಕ್ಬರುದ್ದೀನ್ ಗುಡುಗಿದ್ದಾರೆ.

  • ರಾಜ್ಯಕ್ಕೆ ಬರ್ತಾರಾ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ- ಯಾವ ಪಕ್ಷಕ್ಕೆ ಕಂಟಕ? ಯಾರಿಗೆ ಲಾಭ?

    ರಾಜ್ಯಕ್ಕೆ ಬರ್ತಾರಾ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ- ಯಾವ ಪಕ್ಷಕ್ಕೆ ಕಂಟಕ? ಯಾರಿಗೆ ಲಾಭ?

    ಬೆಂಗಳೂರು: ಕರ್ನಾಟಕ ಸದ್ಯ ಚುನಾವಣೆಯ ಹೊಸ್ತಿಲಿನಲ್ಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣೆಗಾಗಿ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿವೆ. ಚುನಾವಣಾ ರಂಗ ಕಾವೇರಿತ್ತಲೇ ಸದ್ಯ ಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಚುನಾವಾಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    2018ರ ಚುನಾವಣೆಗೆ ರಾಜ್ಯದ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಸ್ಪರ್ಧೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಓವೈಸಿ ಅವರು ಪ್ರಮುಖವಾಗಿ ನಗರ ಕೇಂದ್ರಿಕೃತ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಸಾಧ್ಯತೆಗಳಿವೆ. ಕಲಬುರಗಿ, ರಾಯಚೂರು, ಮಂಗಳೂರು, ಕೊಪ್ಪಳ ಮತ್ತು ಬೆಂಗಳೂರಿನ ಶಿವಾಜಿನಗರ, ಶಾಂತಿನಗರ, ಹೆಬ್ಬಾಳ, ಸರ್ವಜ್ಞನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.

    ಮಂಗಳೂರು, ಮಂಗಳೂರು ಉತ್ತರ ಕ್ಷೇತ್ರ, ಕಲಬುರಗಿ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರ, ರಾಯಚೂರು ನಗರ ವಿಧಾನಸಭಾ ಕ್ಷೇತ್ರ, ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರ ಪ್ರದೇಶಗಳ ಮೇಲೆ ಓವೈಸಿ ಕಣ್ಣಿಟ್ಟಿದ್ದಾರೆ.

    ಯಾರಿಗೆ ಲಾಭ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಂಐಎಂ ಪಕ್ಷ ಕಣಕ್ಕಿಳಿದಿತ್ತು. 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ವಿರುದ್ಧ ಬಣಗಳ ಆಭ್ಯರ್ಥಿಗಳ ಗೆಲುವಿಗೆ ಎಂಐಎಂ ಬ್ರೇಕ್ ಹಾಕಿತ್ತು. ಎಂಐಎಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಗೆಲುವನ್ನು ಕಂಡಿತ್ತು.

    ಯಾರಿಗೆ ನಷ್ಟ: ಎಂಐಎಂ ಕರ್ನಾಟಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಅಲ್ಪಸಂಖ್ಯಾತ ನಾಯಕರಲ್ಲಿ ಸೋಲಿನ ಭಯ ಕಾಣಿಸಿಕೊಳ್ಳಬಹುದು. ಸಚಿವ ಕೆ.ಜೆ.ಜಾರ್ಜ್, ರೋಷನ್ ಬೇಗ್, ಶಾಸಕರಾದ ಜಮೀರ್ ಅಹಮದ್, ಹ್ಯಾರಿಸ್ ಅವರಿಗೂ ಎಂಐಎಂ ಕಂಟಕವಾಗಬಹುದು ಎಂದು ಹೇಳಲಾಗುತ್ತಿದೆ.

    ಎಂಐಎಂ ಸ್ಪರ್ಧೆಯಿಂದ ಬಿಜೆಪಿ 10ರಿಂದ 15 ಕ್ಷೇತ್ರಗಳಲ್ಲಿ ಸರಳವಾಗಿ ಗೆಲುವನ್ನು ಸಾಧಿಸುತ್ತಾ? ಅಲ್ಪಸಂಖ್ಯಾತ ಮತಗಳು ವಿಭಜನೆಯಾದರೆ ಇದು ಕಾಂಗ್ರೆಸ್ ಗೆ ಭಾರೀ ಹೊಡೆತವಾಗುತ್ತಾ? ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಓವೈಸಿ ಸಫಲರಾಗ್ತಾರಾ? ಓವೈಸಿ ಹೊಡೆತಕ್ಕೆ ನಲುಗುವವರು ಯಾರು? ಲಾಭ ಪಡೆಯುವರು ಯಾರು? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.