Tag: ಎಂಎಸ್ ಧೋನಿ

  • ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಮುಂಬೈ: ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ (CSK) ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಆರ್‌ಸಿಬಿ (RCB) ತಂಡವನ್ನು ದಕ್ಷಿಣ ಆಫ್ರಿಕಾ ದಂತಕಥೆ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ (AB de Villiers) ಹಾಡಿಹೊಗಳಿಸಿದ್ದಾರೆ.

    ಐಪಿಎಲ್‌ 2025ರ ಋತುವಿನಲ್ಲಿ ಆರ್‌ಸಿಬಿ ಉತ್ತರ ಆರಂಭ ಪಡೆದುಕೊಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಂಡವು ಗಮನಾರ್ಹವಾಗಿ ಸುಧಾರಿಸಿದೆ ಎಂದು ಆರ್‌ಸಿಬಿ ಮಾಜಿ ಆಟಗಾರರೂ ಆದ ಡಿವಿಲಿಯರ್ಸ್‌ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

    ಶುಕ್ರವಾರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಆರ್‌ಸಿಬಿ 50 ರನ್‌ಗಳ ಅಂತರದ ಗೆಲುವು ಸಾಧಿಸಿದೆ. 2008 ರ ನಂತರ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ. ಈ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಎಬಿಡಿ, ಆರ್‌ಸಿಬಿ ತಂಡವನ್ನು ಮೆಚ್ಚಿ ಮಾತನಾಡಿದ್ದಾರೆ.

    ಹಿಂದಿನ ಋತುಗಳಿಗೆ ಹೋಲಿಸಿದರೆ ಆರ್‌ಸಿಬಿ ತಂಡದ ಸಮತೋಲನ 10 ಪಟ್ಟು ಉತ್ತಮವಾಗಿದೆ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. ಒಬ್ಬ ಆಟಗಾರನ ಸಾಧನೆ ಎಂಬುದು ಇಲ್ಲಿ ಕಾಣುತ್ತಿಲ್ಲ. ಒಟ್ಟಾರೆ, ತಂಡದ ಸಾಧನೆಯನ್ನು ಗುರುತಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

    ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ವೇಗಿ ಭುವನೇಶ್ವರ್‌ ಕುಮಾರ್‌ನನ್ನು ಕರೆತಂದ ಬಗ್ಗೆಯೂ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯಕ್ಕೆ ಭುವಿ ಇರಲಿಲ್ಲ. ಆದರೆ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆತನನ್ನು ಆಡಿಸಿದ್ದಾರೆ. ತಂಡಕ್ಕೆ ಬೇಕಿರುವುದು ಈ ರೀತಿಯ ಸಮತೋಲದ, ಸೂಕ್ಷ್ಮ ಆಲೋಚನೆಯ ನಿರ್ಧಾರ ಎಂದು ತಿಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಪ್ರಮುಖ ಬ್ಯಾಟರ್‌ ದೀಪಕ್ ಹೂಡಾ ಅವರನ್ನು ಬೇಗನೆ ಔಟ್ ಮಾಡಿದರು. ಪವರ್ ಪ್ಲೇನಲ್ಲಿ CSK ಅನ್ನು 26/3 ಕ್ಕೆ ಇಳಿಸಿದರು. ಇದು ಅಂತಿಮವಾಗಿ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆಯನ್ನು 146/8 ಕ್ಕೆ ಕಟ್ಟಿಹಾಕಲು ನೆರವಾಯಿತು. ಇದನ್ನೂ ಓದಿ: 17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ

  • ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಬ್ಯಾಟ್ ಬಳಸಲಿದ್ದಾರೆ ಧೋನಿ

    ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಬ್ಯಾಟ್ ಬಳಸಲಿದ್ದಾರೆ ಧೋನಿ

    ಮುಂಬೈ: ಮಾರ್ಚ್ 22ರಿಂದ ಆರಂಭವಾಗಲಿರುವ 2025ರ ಐಪಿಎಲ್ ಆವೃತ್ತಿಯಲ್ಲಿ ಎಂ.ಎಸ್ ಧೋನಿ (MS Dhoni) ಹೊಸ ಬ್ಯಾಟ್ ಬಳಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಮಹೇಂದ್ರ ಸಿಂಗ್ ಧೋನಿ ಹೊಸ ಬ್ಯಾಟ್ ಬಳಸಲಿದ್ದು, ಈ ಬ್ಯಾಟ್‌ನ ತೂಕದಲ್ಲಿ ಇಳಿಕೆಯಾಗಲಿದೆ. ಸದ್ಯ ಐಪಿಎಲ್‌ಗಾಗಿ ರಾಂಚಿಯಲ್ಲಿ ಧೋನಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.ಇದನ್ನೂ ಓದಿ: ಹಿರಿಯ ರಂಗ ಕಲಾವಿದೆ ವಿಮಲಾ ರಂಗಾಚಾರ್ ವಿಧಿವಶ

    ಸಾಮಾನ್ಯವಾಗಿ ಧೋನಿ 1,250 ರಿಂದ 1,300 ಗ್ರಾಂ ತೂಕದ ಬ್ಯಾಟ್‌ನ್ನು ಉಪಯೋಗಿಸುತ್ತಿದ್ದರು. ಆದರೆ ಇದೀಗ ಅದನ್ನು ಕನಿಷ್ಠ 10-20 ಗ್ರಾಂಗೆ ಕಡಿಮೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇತ್ತೀಚಿಗಷ್ಟೇ ಮೀರತ್‌ನ ಸ್ಯಾನ್ಸ್ಪೇರಿಲ್ಸ್ ಗ್ರೀನ್‌ಲ್ಯಾಂಡ್ಸ್ ಕ್ರಿಕೆಟ್ ಸಲಕರಣೆಗಳ ಕಂಪನಿ, ಧೋನಿಗೆ ನಾಲ್ಕು ಬ್ಯಾಟ್‌ಗಳನ್ನು ನೀಡಿದೆ ಎಂದು ತಿಳಿಸಿದೆ.

    ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶಿಬಿರವು ಮಾರ್ಚ್ 10ರ ಬಳಿಕ ಪ್ರಾರಂಭವಾಗಲಿದೆ. ಚೆನ್ನೈ ತಂಡ ಮಾರ್ಚ್ ಮೊದಲ ವಾರವೇ ಇಲ್ಲಿ ಅಭ್ಯಾಸ ನಡೆಸಲು ಮುಂದಾಗಿತ್ತು. ಆದರೆ ಬಿಸಿಸಿಐ ಅನುಮತಿ ನೀಡದ ಕಾರಣ ಸದ್ಯ ತಂಡ ರಾಂಚಿಯಲ್ಲಿ ಧೋನಿ ಅಭ್ಯಾಸ ಮಾಡುತ್ತಿದ್ದಾರೆ.ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಯತ್ನಾಳ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ – ಹೈಕಮಾಂಡ್ ಭೇಟಿಗೆ ತೀರ್ಮಾನ

     

  • ನಿರ್ಮಲಾ ಸೀತಾರಾಮನ್‌ ಪಿಎ ಹೆಸರು ಹೇಳಿ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ

    ನಿರ್ಮಲಾ ಸೀತಾರಾಮನ್‌ ಪಿಎ ಹೆಸರು ಹೇಳಿ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ

    ಬೆಂಗಳೂರು: ತಿರುಪತಿ ವಿಶೇಷ ದರ್ಶನದ (Tirupati Special Darshan) ಹೆಸರಿನಲ್ಲಿ ಟೀಂ ಇಂಡಿಯಾದ (Team India) ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಅವರ ಮ್ಯಾನೇಜರ್‌ ಅವರಿಗೆ ವಂಚನೆ ನಡೆಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ವರ್ಷ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರ ಪಿಎ ಹೆಸರು ಹೇಳಿಕೊಂಡು ವಂಚನೆ ನಡೆಸಿದ್ದು ಈ ಸಂಬಂಧ ಮ್ಯಾನೇಜರ್‌ ಸ್ವಾಮಿನಾಥನ್ ಶಂಕರ್‌ ಅವರು ಹೆಚ್‌ಎಸ್‌ಆರ್‌ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು  ಎಫ್‌ಐಆರ್‌ ದಾಖಲಾಗಿದೆ.  ಇದನ್ನೂ ಓದಿ: 29 ರೂ.ಗೆ ಸಿಗಲಿಗೆ ʻಭಾರತ್‌ ಅಕ್ಕಿʼ – ಎಲ್ಲೆಲ್ಲಿ ಮಾರಾಟ?

    ದೂರಿನಲ್ಲಿ ಏನಿದೆ?
    ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಮೊಬೈಲಿಗೆ ಕರೆ ಮಾಡಿ ನಾನು ನಕುಲ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಆಪ್ತ ಸಹಾಯಕ ಎಂದು ಪರಿಚಯ ಮಾಡಿ ನ್ಯಾಯಾಧೀಶ ಕೆಸಿ ಭಾನು ಅವರ ಮಗ ಸಂದೀಪ್‌ ಅವರು ಧೋನಿ ಅವರನ್ನು ಭೇಟಿ ಮಾಡಬೇಕು ಕೇಳಿದ್ದರು. ನಂತರ ಅಕ್ಟೋಬರ್‌ 29 ರಂದು ಸಂದೀಪ್‌ ಅವರು ಬಂಗಾಳದ ಹೋಟೆಲಿನಲ್ಲಿ ನಮ್ಮನ್ನು ಭೇಟಿಯಾಗಿದ್ದರು.

    ಈ ಭೇಟಿಯ ವೇಳೆ ನೀವು ಯಾವಾಗ ಕೇಳಿದರೂ ನು ತಿರುಪತಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ನವೆಂಬರ್‌ 30 ರಂದು ನನಗೆ ಕರೆ ಮಾಡಿ 12 ಮಂದಿಗೆ ವಿಶೇಷ ದರ್ಶನದ ಪಾಸ್‌ ನೀಡಲಾಗುವುದು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ನಾನು ದುಬೈನಲ್ಲಿ ಇದ್ದೇನೆ. ಬೇರೆಯವರಿಗೆ ಕೊಡಿ ಎಂದಾಗ ನೀವೇ ಯಾರಿಗಾದರೂ ಪ್ರೊಟೋಕಾಲ್‌ ಲೆಟರ್‌ ನೀಡಿ ಎಂದು ಹೇಳಿದ್ದರು. ಹೀಗಾಗಿ ನಾನು ಕೂಡ್ಲುಗೇಟ್‌ನಲ್ಲಿ ಶಾಲೆ ನಡೆಸುತ್ತಿದ್ದ ಸ್ನೇಹಿತನಾದ ವಿನೀತ್‌ ಚಂದ್ರಶೇಖರ್‌ಗೆ ಕರೆ ಮಾಡಿ ತಿಳಿಸಿದ್ದೆ.

    ನಂತರ ನಾಗೇಶ್ವರ್‌ ರಾವ್‌ ಎಂಬವರು ಕರೆ ಮಾಡಿ ಡೋನೆಷನ್‌ ಮಾಡಲು ಇಷ್ಟವಿದ್ದಲ್ಲಿ ಸಾಯಿ ಕ್ರಿಯೇಷನ್‌ಗೆ ಹಣ ಹಾಕಿ ಎಂದು ಹೇಳಿದ್ದಾರೆ. ಇದರ ಜೊತೆ ವಿಶೇಷ ದರ್ಶನ ರೂಮ್‌ ಇತ್ಯಾದಿ ಖರ್ಚುಗಳಿಗೆ 3 ಲಕ್ಷ ರೂ. ಹಣವನ್ನು ಹಾಕಿ ಎಂದು ತಿಳಿಸಿದ್ದಾರೆ . ಇದರಂತೆ ವಿನೀತ್‌ ಚಂದ್ರಶೇಖರ್‌ ಅವರು 3 ಲಕ್ಷ ರೂ. ಹಣವನ್ನು ಗೂಗಲ್‌ ಪೇ ಮಾಡಿದ್ದಾರೆ. ಹಣವನ್ನು ಕಳುಹಿಸಿದರೂ ತಿರುಪತಿ ದರ್ಶನ ಸಿಕ್ಕಿರಲಿಲ್ಲ. ನಂತರ ಹಣವನ್ನು ಕೊಡಿ ಎಂದಾಗ ಮರಳಿ ಪಾವತಿಸುತ್ತೇನೆ ಎಂದು ಹೇಳಿ ಇಲ್ಲಿಯವರೆಗೆ ಪಾವತಸಿದೇ  ಮೋಸ ಮಾಡಿದ್ದಾರೆ.

    ಒಟ್ಟು 6,33,333 ರೂ. ಹಣ ವರ್ಗಾವಣೆಯಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮ್ಯಾನೇಜರ್‌ ಸ್ವಾಮಿನಾಥನ್ ಶಂಕರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

     

  • ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ

    ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ

    ನವದೆಹಲಿ: ರಾಮಮಂದಿರದ (Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಕೇವಲ 7 ದಿನಗಳು ಬಾಕಿ ಉಳಿದಿದ್ದು, ಇಂದಿನಿಂದ ಪೂಜಾಕಾರ್ಯಗಳು ಆರಂಭಗೊಂಡಿದೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್  (CSK) ತಂಡದ ನಾಯಕನಾಗಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ.

    ಸೋಮವಾರ ರಾಂಚಿಯಲ್ಲಿರುವ (Ranchi) ಅವರ ನಿವಾಸದಲ್ಲಿ ಆಹ್ವಾನವನ್ನು ನೀಡಿದ್ದು, ಎಂಎಸ್ ಧೋನಿ ಭಕ್ತಿಪೂರ್ವಕವಾಗಿ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಧೋನಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಅವರು ಆಹ್ವಾನ ನೀಡಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆಗೆ ಧೋನಿಯನ್ನು ಆಹ್ವಾನಿಸಿದ ಸಂದರ್ಭ ಬಿಜೆಪಿ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕರ್ಮವೀರ್ ಸಿಂಗ್ ಸಹ ಉಪಸ್ಥಿತರಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?

    ಇತ್ತೀಚಿಗಷ್ಟೇ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ವಿರಾಟ್ ಕೊಹ್ಲಿ (Virat Kohli) ಅವರನ್ನೂ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದಾದ ಬಳಿಕ ಈಗ ಮತ್ತೊಬ್ಬ ಕ್ರಿಕೆಟರ್ ಎಂಎಸ್ ಧೋನಿ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಜನವರಿ 13 ರಂದು ಸಚಿನ್ ತೆಂಡೂಲ್ಕರ್ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಆಹ್ವಾನವನ್ನು ಸ್ವೀಕರಿಸಿದರು. ಇದನ್ನೂ ಓದಿ: ನನಗೆ ತುಂಬಾ ಖುಷಿಯಾಗಿದೆ: ಅಯೋಧ್ಯೆ ರಾಮಮಂದಿರಕ್ಕೆ ಮಗ ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿದ್ದಕ್ಕೆ ತಾಯಿ ಸಂತಸ

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ 6,000ಕ್ಕೂ ಹೆಚ್ಚು ಜನರಿಗೆ ಆಮಂತ್ರಣಗಳನ್ನು ನೀಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದೆ. ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಹಲವಾರು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ರಾಮ ನನ್ನ ಕನಸಲ್ಲಿ ಬಂದು ಅಯೋಧ್ಯೆಗೆ ಹೋಗಲ್ಲವೆಂದ: ತೇಜ್‌ ಪ್ರತಾಪ್‌ ಯಾದವ್

  • ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಮುಂಬೈ: ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈ ತಂಡದ ಆಟಗಾರರು ಇಂದು ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತೆಲಂಗಾಣ ರಾಜ್ಯದ ಅಧಿಕೃತ ಚಂದ್ರ-ವೀಕ್ಷಕ ಸಮಿತಿಯು ಮೇ 2, ಸೋಮವಾರ, ಈದ್-ಉಲ್-ಫಿತರ್ ಎಂದು ಘೋಷಿಸಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‍ನ 10 ನೇ ತಿಂಗಳಾಗಿರುವ ಶವ್ವಾಲ್‍ನ ಅರ್ಧಚಂದ್ರಾಕೃತಿಯು ಹೈದರಾಬಾದ್‍ನಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗೋಚರಿಸದ ಕಾರಣ ಮಂಗಳವಾರ ಆಚರಿಸಲಾಗುತ್ತಿದೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ

     

    View this post on Instagram

     

    A post shared by Chennai Super Kings (@chennaiipl)

    ಚೆನ್ನೈ ತಂಡದ ಆಟಗಾರರಾದ ಧೋನಿ, ರಾಬಿನ್ ಉತ್ತಪ್ಪ, ಶಿವಂ ದುಬೆ, ರುತುರಾಜ್ ಗಾಯಕ್‍ವಾಡ್, ಮೊಯಿನ್ ಅಲಿ ಸೇರಿದಂತೆ ಅನೇಕ ಆಟಗಾರರು ಕೆಲವು ಬಗೆ ಬಗೆಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದ್ದಾರೆ.

    ಐಪಿಎಲ್ 2022ರ ಆವೃತ್ತಿಯಲ್ಲಿ ಸಿಎಸ್‍ಕೆ ತಂಡವು ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ. ತಂಡದ ಪ್ಲೇ-ಆಫ್ ಕನಸು ಬಹುತೇಕ ಕಠಿಣವಾಗಿದ್ದರೂ ತಂಡದ ಆಟಗಾರರ ಮನಸ್ಥಿತಿಯು ಸಾಕಷ್ಟು ಲವಲವಿಕೆಯಿಂದ ಕೂಡಿದೆ. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಈಗಾಗಲೇ ತಂಡವು ಒಟ್ಟು 9 ಪಂದ್ಯಗಳನ್ನಾಡಿ 2 ಜಯ, 6 ಸೋಲುಗಳನ್ನೊಳಗೊಂಡಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಮಧ್ಯೆ, ರವೀಂದ್ರ ಜಡೇಜಾ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಧೋನಿಗೆ ನಾಯಕ ಪಟ್ಟ ನೀಡಿದ್ದರು.

    ಭಾನುವಾರ ಮೇ 1 ರಂದು ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಎಚ್ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್ ) ಅನ್ನು ಸೋಲಿಸಿದ ನಂತರ ಧೋನಿ ಬಳಗವು ಆತ್ಮವಿಶ್ವಾಸದಲ್ಲಿದೆ. ಸಿಎಸ್‍ಕೆ ಮುಂದಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಬುಧವಾರ ಸೆಣಸಲಿದೆ.

  • ವಿದ್ಯುತ್ ಬಿಕ್ಕಟ್ಟಿನಿಂದ ರೊಚ್ಚಿಗೆದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಾಕ್ಷಿ ಧೋನಿ

    ವಿದ್ಯುತ್ ಬಿಕ್ಕಟ್ಟಿನಿಂದ ರೊಚ್ಚಿಗೆದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಾಕ್ಷಿ ಧೋನಿ

    ಮುಂಬೈ: ಜಾರ್ಖಂಡ್‌ನಲ್ಲಿ ಆಗಾಗ ಎದುರಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನಿಂದ ಬೇಸತ್ತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಾಕ್ಷಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತೆರಿಗೆ ಪಾವತಿದಾರಳಾಗಿ ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಬಿಕ್ಕಟ್ಟು ಏಕೆ ಇದೆ ಎಂದು ತಿಳಿಯಲು ಬಯಸುತ್ತೇನೆ. ನಾವು ವಿದ್ಯುತ್ ಉಳಿತಾಯ ಮಾಡುವಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಗರಂ ಆಗಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ

    ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ತಾಪಮಾನ ಇರುವುದರಿಂದ ರಾಜ್ಯದ ಜನತೆ ಪದೇ ಪದೇ ಲೋಡ್ ಶೆಡ್ಡಿಂಗ್‍ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಪಶ್ಚಿಮ ಸಿಂಗ್ಭುಮ್, ಕೊಡೆರ್ಮಾ ಮತ್ತು ಗಿರಿದಿಹ್ ಜಿಲ್ಲೆಗಳನ್ನು ಬಿಸಿಗಾಳಿ ಆವರಿಸಿದ್ದು, ಏಪ್ರಿಲ್ 28 ರ ವೇಳೆಗೆ ರಾಂಚಿ, ಬೊಕಾರೊ, ಪೂರ್ವ ಸಿಂಗ್ಭುಮ್, ಗರ್ವಾ, ಪಲಾಮು ಮತ್ತು ಛತ್ರಕ್ಕೆ ಹರಡುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಇಂದು ಮುಂಜಾನೆ, ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಕೊರತೆಯಿಂದಾಗಿ ಹೆಚ್ಚುತ್ತಿರುವ ಇಂಧನ ಬಿಕ್ಕಟ್ಟಿನ ನಡುವೆ, ವಿದ್ಯುತ್ ಸಚಿವ ಆರ್ ಕೆ ಸಿಂಗ್ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರಗಳನ್ನು ರೂಪಿಸಲು ಚರ್ಚೆ ನಡೆಸಿದರು.

  • ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

    ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

    ಮುಂಬೈ: 2011ರ ವಿಶ್ವಕಪ್ ಅನ್ನು ಭಾರತ ಗೆಲ್ಲಲು ಎಂ ಎಸ್ ಧೋನಿಯೇ ಮುಖ್ಯ ಕಾರಣ ಎಂದು ಭಾವಿಸುವ ವ್ಯಕ್ತಿಗಳಿಗೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ.

    2011 ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರ್ಭಜನ್, ಭಾರತದ ಗಮನಾರ್ಹ ವಿಶ್ವಕಪ್ ಗೆಲುವಿಗೆ ಧೋನಿಗೆ ಮಾತ್ರ ಮನ್ನಣೆ ನೀಡುವುದು ಅಸಮರ್ಥನೀಯ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2022 ಪಂದ್ಯದ ಆರಂಭದ ಮೊದಲು ಮಾತನಾಡಿದ ಅವರು, ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತು ಎಂದು ಶೀರ್ಷಿಕೆ ಬರುತ್ತದೆ. ಆದರೆ 2011 ರ ವಿಶ್ವಕಪ್ ಜಯಿಸಿದ್ದಾಗ ಎಲ್ಲರೂ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಗೆಲ್ಲಿಸಿದ್ದಾರೆ ಎಂದು ಹೊಗಳುತ್ತಾರೆ. ಹಾಗಾದರೆ ಉಳಿದ 10 ಆಟಗಾರರು ಅಲ್ಲಿಗೆ ಲಸ್ಸಿ ಕುಡಿಯಲು ಹೋಗಿದ್ರಾ? ಹಾಗಾದರೆ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಏನು ಮಾಡಿದರು? ಕ್ರಿಕೆಟ್ ಒಂದು ಟೀಮ್ ಗೇಮ್. ಒಂದು ತಂಡದ 7-8 ಆಟಗಾರರು ಕೂಡಿ ಆಡಿದಾಗ ಮಾತ್ರ ಗೆಲ್ಲಲು ಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    2011ರಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು ಬಗ್ಗು ಬಡಿದು ವಿಶ್ವಕಪ್ ಗೆದ್ದಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 274 ರನ್ ಹೊಡೆದರೆ ಭಾರತ 48.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 277 ರನ್ ಹೊಡೆಯುವ ಮೂಲಕ 6 ವಿಕೆಟ್‍ಗಳ ಜಯ ಸಾಧಿಸಿತ್ತು.

  • ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಉತ್ತಮ ವಾಲಿಬಾಲ್ ಆಟಗಾರರು: ಅಶ್ವಲ್ ರೈ

    ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಉತ್ತಮ ವಾಲಿಬಾಲ್ ಆಟಗಾರರು: ಅಶ್ವಲ್ ರೈ

    ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ಮಾಜಿ ನಾಯಕ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಕ್ರಿಕೆಟ್ ಜೊತೆ ಉತ್ತಮ ವಾಲಿಬಾಲ್ ಆಟಗಾರರಾಗಿದ್ದಾರೆ ಎಂದು ಕೋಲ್ಕತ್ತಾ ಥಂಡರ್ಬೋಲ್ಟ್ಸ್ ನಾಯಕ ಅಶ್ವಲ್ ರೈ ಅಭಿಪ್ರಾಯಪಟ್ಟಿದ್ದಾರೆ.

    ಮುಂಬರುವ (ಪಿವಿಎಲ್) ಪ್ರೈಮ್ ವಾಲಿಬಾಲ್ ಲೀಗ್‍ನ ಪಂದ್ಯಾವಳಿಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲ್ಕತ್ತಾ ಥಂಡರ್ಬೋಲ್ಟ್ಸ್ (ಪಿವಿಎಲ್) ವಾಲಿಬಾಲ್ ಲೀಗ್ ಅಭಿಯಾನವನ್ನು ಮುಂದಿನ ವಾರ ಸೋಮವಾರದಿಂದ ಪ್ರಾರಂಭಿಸಲಿದೆ.

    ಧೋನಿ ಮತ್ತು ಪಾಂಡ್ಯ ಪಾಸಿಂಗ್‍ನಲ್ಲಿ ಉತ್ತಮವಾಗಿ ಕಾಣುತ್ತಾರೆ. ರಾಹುಲ್ ಉತ್ತಮ ಹೊಡೆತಗಾರನಾಗಿ ಕಾಣಿಸುತ್ತಾರೆ. ನಾನು ಈ ಹಿಂದೆ ಅವರು ದುಬೈನ ಬೀಚ್‍ವೊಂದರಲ್ಲಿ ವಾಲಿಬಾಲ್ ಆಡುವ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಅವರೊಂದಿಗೆ ವಾಲಿಬಾಲ್ ಆಡುವ ಅವಕಾಶ ನಮಗೆ ಸಿಕ್ಕರೆ ಅದು ನಮ್ಮ ಅದೃಷ್ಟ ನಾನು ಇದಕ್ಕಾಗಿ ಕಾತರನಾಗಿದ್ದೇನೆ ಎಂದರು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

    ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುರವರು ವಾಲಿಬಾಲ್ ಲೀಗ್‍ನ್ನು ಪ್ರಚಾರ ಮಾಡುತ್ತಿದ್ದು, ಅವರು ನಮ್ಮನ್ನು ಮೈದಾನದಲ್ಲಿ ಭೇಟಿಯಾಗಿ ಎಲ್ಲರೊಂದಿಗೆ ಮಾತನಾಡಿದರು. ವಾಲಿಬಾಲ್ ಆಟಕ್ಕೆ ಉತ್ತಮ ಗುಣಮಟ್ಟ ಮತ್ತು ಸರಿಯಾದ ರೀತಿಯ ಪ್ರಚಾರವನ್ನು ನೀಡಿದರೆ ಅದು ಕ್ರಿಕೆಟ್ ಮಟ್ಟಕ್ಕೆ ಬರಬಹುದು ಎಂದರು. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ

    ಎಲ್ಲಾ ಆಟಗಾರರಿಗೆ, ಅವರ ಕ್ರೀಡಾ ಕೌಶಲ್ಯ ಮತ್ತು ಪ್ರದರ್ಶನವನ್ನು ತೋರಿಸಲು ಇದು ಸರಿಯಾದ ವೇದಿಕೆಯಾಗಿದೆ. ಮೊದಲು, ನನಗೆ ಕ್ರೀಡೆಯ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ನಂತರ ನಾನು ಕ್ರಿಕೆಟ್ ಮತ್ತು ಫುಟ್‍ಬಾಲ್ ಅನ್ನು ಅನುಸರಿಸಲು ಪ್ರಾರಂಭಿಸಿದೆ. ನಾನು ಪ್ರತಿ ಬಾರಿ ಆಟದ ಮೈದಾನಕ್ಕೆ ಇಳಿದ ಬಳಿಕ ಶ್ರೇಷ್ಠ ಮಟ್ಟದ ಆಟವನ್ನು ಆಡಲು ಶ್ರಮಿಸುತ್ತೇನೆ ಎಂದರು.

    ಫೆಬ್ರವರಿ 5 ರಂದು ಪ್ರೈಮ್ ವಾಲಿಬಾಲ್ ಲೀಗ್‍ಗೆ ಚಾಲನೆ ದೊರೆಯಲಿದ್ದು, ಪಂದ್ಯಾವಳಿಯು ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಕೊಚ್ಚಿ ಬ್ಲೂ ಸ್ಪೈಕರ್ಸ್ ವಿರುದ್ಧ ಹೈದರಾಬಾದ್ ಬ್ಲಾಕ್ ಹಾಕ್ಸ್ ತಂಡವನ್ನು ಎದುರಿಸಲಿದೆ. ಸ್ಪರ್ಧೆಯ ಫೈನಲ್ ಫೆಬ್ರವರಿ 27 ರಂದು ನಡೆಯಲಿದೆ.

    ಪಂದ್ಯಾವಳಿಯು 23 ದಿನಗಳ ವರೆಗೆ ನಡೆಯಲಿದ್ದು, ಒಟ್ಟು 24 ಪಂದ್ಯಗಳು ಟೂರ್ನಿಯಲ್ಲಿ ಕಾಣಸಿಗಲಿದೆ. ಏಳು ಫ್ರಾಂಚೈಸಿಗಳಾದ- ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ಬೋಲ್ಟ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

  • ಧೋನಿ, ವಿಕ್ರಮ್ ಫೋಟೋ ವೈರಲ್

    ಧೋನಿ, ವಿಕ್ರಮ್ ಫೋಟೋ ವೈರಲ್

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ, ನಟ ವಿಕ್ರಮ್ ಅವರೊಂದಿಗೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಕ್ಲಬ್‍ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಫೋಟೋದಲ್ಲಿ ನಟ ವಿಕ್ರಮ್ ಹಾಗೂ ಎಂಎಸ್ ಧೋನಿ ಒಟ್ಟಿಗೆ ನಿಂತು ಪೋಸ್ ನೀಡುತ್ತಿದ್ದಾರೆ. ಈ ಫೋಟೋ ಭಾರೀ ವೈರಲ್ ಆಗಿದೆ.

    ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ವಿಕ್ರಮ್ ಅವರು ಬಾಲಿವುಡ್‍ನ ರಾವಣ ಚಿತ್ರದಲ್ಲಿ ನಟಿಸಿದ್ದರು. ವಿಕ್ರಮ್ ಅವರು ಮಹೇಂದ್ರಸಿಂಗ್ ಧೋನಿಯ ಅಭಿಮಾನಿಯಾಗಿದ್ದಾರೆ. ವಿಕ್ರಮ್ ಅವರ ಮಹಾನ್ ಚಿತ್ರದ ಟೀಸರ್ ಬಿಡುಗಡೆಯಾದ ದಿನದಂದು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಖ್ಯಾತ ಯೂಟ್ಯೂಬರ್ ಹಿಂದೂಸ್ತಾನಿ ಭಾವು ಅರೆಸ್ಟ್

    ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ 2022 ರ ಮೆಗಾ ಹರಾಜಿಗೆ ತಯಾರಿ ನಡೆಸಲು ಧೋನಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಈ ಬಾರಿಯ ಐಪಿಎಲ್ ಟೀಂನಲ್ಲಿ ಚೈನ್ನೈ ಸೂಪರ್‍ಕಿಂಗ್ಸ್ ಧೋನಿ, ರವೀಂದ್ರ ಜಡೇಜಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿದೆ. ಇದನ್ನೂ ಓದಿ: ಒಡಿಶಾದ ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಒಂದು ವಾರ ರಜೆ

  • 5 ಎಸೆತದಲ್ಲಿ 21 ರನ್ ಚಚ್ಚಿದ ಜಡೇಜಾ – ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಜಯ

    5 ಎಸೆತದಲ್ಲಿ 21 ರನ್ ಚಚ್ಚಿದ ಜಡೇಜಾ – ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಜಯ

    ಅಬುಧಾಬಿ: ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್‍ಗಳ ರೋಚಕ ಜಯ ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇ ಆಫ್‍ಗೆ ಬಹುತೇಕ ಲಗ್ಗೆ ಇಟ್ಟಿದೆ. ರವೀಂದ್ರ ಜಡೇಜಾರ ಅಮೋಘ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ನೀಡಿದ್ದ 172 ರನ್‍ಗಳ ಗುರಿ ಬೆನ್ನತ್ತಿ ಕೊನೆಯ ಬಾಲ್‍ನಲ್ಲಿ ಜಯ ತನ್ನದಾಗಿಸಿಕೊಂಡಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಕೆಕೆಆರ್ ತಂಡಕ್ಕೆ ಆರಂಭದಲ್ಲೆ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ರಾಹುಲ್ ತ್ರಿಪಾಠಿ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಜೊತೆಯಾಟ ಆಡಿದರು. 2ನೇ ವಿಕೆಟ್‍ಗೆ ಈ ಜೋಡಿ 40ರನ್‍ಗಳ ಜೊತೆಯಾಟವಾಡಿತು. ಇದನ್ನೂ ಓದಿ: ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್

    ಕೆಕೆಆರ್ ಪರ ತ್ರಿಪಾಠಿ 45ರನ್ (33 ಎಸೆತ 4 ಬೌಂಡರಿ 1 ಸಿಕ್ಸರ್)ಗಳಿಸಿದರೆ ನಿತೀಶ್ ರಾಣಾ 37ರನ್ (27 ಎಸೆತ 3 ಬೌಂಡರಿ 1 ಸಿಕ್ಸರ್) ಹೊಡೆದರು. ಇಬ್ಬರ ವಿಕೆಟ್ ಪತನದ ನಂತರ ಬಿರುಸಿನ ಆಟವಾಡಿದ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಸಿಎಸ್‍ಕೆ ಬೌಲರ್‍ಗಳನ್ನು ಬೆಂಡೆತ್ತಿದ್ದರು. ರಸೆಲ್ 20ರನ್ (15 ಎಸೆತ 2 ಬೌಂಡರಿ 1 ಸಿಕ್ಸರ್) ಗಳಿಸಿದರೆ ಕಾರ್ತಿಕ್ 26 ರನ್ (11 ಎಸೆತ 3 ಬೌಂಡರಿ 1 ಸಿಕ್ಸರ್) ಚಚ್ಚಿದರು. ಸಿಎಸ್‍ಕೆ ಪರ ಹೆಜೆಲ್‍ವುಡ್ ಹಾಗೂ ಠಾಕೂರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.ಇದನ್ನೂ ಓದಿ: ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ಕೆಕೆಆರ್ ಟಾರ್ಗೆಟ್ ಬೆನ್ನತ್ತಿದ ಸಿಎಸ್‍ಕೆಗೆ ಡು ಫ್ಲೆಸಿಸ್ ಹಾಗೂ ಗಾಯಕ್ವಾಡ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 8.2 ಓವರ್‍ಗಳಲ್ಲಿ 74 ರನ್‍ಗಳನ್ನು ಕಲೆ ಹಾಕಿತು. ಉತ್ತಮವಾಗಿ ಆಡುತ್ತಿದ್ದ ಗಾಯಕ್ವಾಡ್ 40ರನ್ (28 ಎಸೆತ 2 ಬೌಂಡರಿ 3 ಸಿಕ್ಸರ್) ಸಿಡಿಸಿ ರಸೆಲ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ 43 ರನ್ (30 ಎಸೆತ 7 ಬೌಂಡರಿ) ಗಳಿಸಿ ಫಾಫ್ ಡು ಪ್ಲೆಸಿಸ್ ಪ್ರಸಿದ್ಧಕೃಷ್ಣಗೆ ವಿಕೆಟ್ ಕೊಟ್ಟು ಹೊರ ನಡೆದರು. ನಂತರ ಜೊತೆಯದ ಮೊಯಿನ್ ಅಲಿ ಹಾಗೂ ರಾಯುಡು ಉತ್ತಮ ಆಟವಾಡುವ ಲಕ್ಷಣ ತೋರಿಸಿದರು, ರಾಯುಡು ಕೇವಲ 10 ರನ್ ಗಳಿಸಿ ನರೈನ್‍ಗೆ ವಿಕೆಟ್ ಒಪ್ಪಿಸಿದರು.

    ನಂತರ ಧೋನಿ ಹಾಗೂ ಸುರೇಶ್ ರೈನಾ ಗೆಲುವಿನ ದಡ ಸೇರಿಸಲು ವಿಫಲವಾದರು. ಇನ್ನೆನು ಚೆನ್ನೈ ಪಂದ್ಯವನ್ನು ಕೈಚೆಲ್ಲಿತ್ತು ಎನ್ನುವಾಗ ಜಡೇಜಾ ಪ್ರಸಿದ್ಧ ಕೃಷ್ಣ ಎಸೆದ 19ನೇ ಓವರ್‍ನಲ್ಲಿ 22 ರನ್ ಕೆಲೆಹಾಕಿ ಜಯದ ಹೊಸ್ತಿಲಲ್ಲಿ ನಿಲ್ಲಿಸಿದರು. ಈ ಓವರಿನಲ್ಲಿ ಮೊದಲ ಎರಡು ಎಸೆತದಲ್ಲಿ ಸಿಂಗಲ್ ರನ್ ಬಂದರೆ ನಂತರ ಎರಡು ಎಸೆತದಲ್ಲಿ ಸಿಕ್ಸರ್, ಕೊನೆತ ಎರಡು ಎಸೆತದಲ್ಲಿ ಜಡೇಜಾ ಬೌಂಡರಿ ಸಿಡಿಸಿದರು.

    ಕೊನೆಯ ಓವರ್‍ನಲ್ಲಿ ಗೆಲ್ಲಲು 4 ರನ್‍ಗಳ ಬೇಕಾಗಿತ್ತು. ನರೈನ್ ಎಸೆದ ಮೊದಲ ಎಸೆತದಲ್ಲೆ ಸ್ಯಾಮ್ ಕರ್ರ್‍ನ್ ವಿಕೆಟ್ ಒಪ್ಪಿಸಿದರು. ಎರಡನೇ ಎಸೆತವನ್ನು ಠಾಕೂರ್ ಡಾಟ್ ಮಾಡಿದರೇ ಮೂರನೇ ಎಸೆತದಲ್ಲಿ 3 ರನ್ ಗಳಿಸಿದರು 4 ನೇ ಡಾಟ್ ಆಯಿತು. 5ನೇ ಎಸೆತದಲ್ಲಿ ಜಡೇಜಾ ನರೈನ್‍ಗೆ ಎಲ್‍ಬಿ ಬಲೆಗೆ ಬಿದ್ದರು. ಕೊನೆಯ ಎಸೆದಲ್ಲಿ ಗೆಲ್ಲಲು ಒಂದು ರನ್ ಬೇಕಿತ್ತು. ದೀಪಕ್ ಚಹಾರ್ ರನ್ ಹೊಡೆಯುವ ಮೂಲಕ ಚೆನ್ನೈ ರೋಚಕ ಗೆಲುವು ಸಾಧಿಸಿತು. ಚೆನ್ನೈ ಪರ ಜಡೇಜಾ 22ರನ್ ( 8 ಎಸೆತ, 2 ಬೌಂಡರಿ 2 ಸಿಕ್ಸರ್ ) ಸಿಡಿಸಿ ಮಿಂಚಿದರು.