Tag: ಎಂಎನ್‍ಎಸ್ ಕಾರ್ಯಕರ್ತರು

  • ಕೋಮು ಉದ್ವಿಗ್ನತೆ ಸೃಷ್ಟಿ – 150 MNS ಕಾರ್ಯಕರ್ತರು ಅರೆಸ್ಟ್

    ಕೋಮು ಉದ್ವಿಗ್ನತೆ ಸೃಷ್ಟಿ – 150 MNS ಕಾರ್ಯಕರ್ತರು ಅರೆಸ್ಟ್

    ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಪಕ್ಷದ 150 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

    ಮಸೀದಿಗಳ ಹೊರಗೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಎಚ್ಚರಿಕೆ ನೀಡಿದ್ದರಿಂದ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಪೊಲೀಸರು ಈ ಕ್ರಮವನ್ನು ಕೈಗೊಳ್ಳಬೇಕಾಯಿತು. ಇದನ್ನೂ ಓದಿ: ಇಲ್ಲಿ 1 ಮಾವಿನ ಹಣ್ಣಿಗೆ 2 ಸಾವಿರ – ತಿಂಗಳಿಗೆ ಮುಂಚೆಯೇ ಶುರುವಾಗಿದೆ ಬುಕ್ಕಿಂಗ್

    Raj Thackeray

    ನಾಸಿಕ್‍ನಲ್ಲಿ ಕೋಮುಗಲಭೆ ಸೃಷ್ಟಿಸಿದ್ದಕ್ಕಾಗಿ 150 ಎಂಎನ್‍ಎಸ್ ಕಾರ್ಯಕರ್ತರನ್ನು ಇದುವರೆಗೆ ಬಂಧಿಸಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಾಸಿಕ್‍ನ ಪೊಲೀಸ್ ಮಹಾನಿರೀಕ್ಷಕ ಬಿ.ಜಿ.ಶೇಖರ್ ಪಾಟೀಲ್ ಹೇಳಿದ್ದಾರೆ.

    loudspeakers

    ಅಕ್ರಮ ಧ್ವನಿವರ್ಧಕಗಳ ತೆರವು ವಿಚಾರವಾಗಿ ಮಾತನಾಡಿದ ಐಜಿಪಿ ಅವರು, ಕಾನೂನು ರೂಪಿಸಿರುವ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಅಧಿಕಾರಿಗಳ ಅನುಮತಿಯಿಲ್ಲದೇ ಧ್ವನಿವರ್ಧಕ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಈ ಬಾರಿಯಾದ್ರೂ ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

    ಈ ಮುನ್ನ ಬುಧವಾರ ರಾಜ್ ಠಾಕ್ರೆ ಅವರು, ಧ್ವನಿವರ್ಧಕಗಳನ್ನು ತೆರವುಗೊಳಿಸದೇ ಇದ್ದರೆ, ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದರು. ಧ್ವನಿವರ್ಧಕಗಳ ಕುರಿತ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಪರಿಹರಿಸುವವರೆಗೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ನೀಡಿದ್ದರು.