Tag: ಎಂ

  • ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ

    ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ

    ವಕಾಶ ಸಿಕ್ಕರೆ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ ನಟಿ ಚಾಂದನಿ. ಹಲವಾರು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದ ನಟಿ, ಇದೀಗ ಅವರ ನಟನೆಯ ‘ಎ’ ಸಿನಿಮಾ ಬಿಡುಗಡೆ ಆಗುವ ಹೊತ್ತಿನಲ್ಲಿ ಮತ್ತೆ ವಾಪಸ್ಸು ಸಿನಿಮಾಗೆ ಬರುವ ಮಾತುಗಳನ್ನು ಆಡಿದ್ದಾರೆ. ಜೊತೆಗೆ ತಮ್ಮ ‘ಎ’ ಚಿತ್ರದ ನೆನಪುಗಳನ್ನೂ ಹಂಚಿಕೊಂಡಿದ್ದಾರೆ.

    ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ ‘A’.  ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. 2024 ರ ಮೇ 17 ರಂದು ‘A’ ಚಿತ್ರ ರೀ ರಿಲೀಸ್ ಆಗುತ್ತಿದೆ.

    ಇದು ನಾಯಕಿ ಚಾಂದಿನಿ ಜೀವನವೆನ್ನೇ ಬದಲಿಸಿದ ಒಂದು ಸಿನಿಮಾ. ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಅಂದರೆ ತಪ್ಪಾಗಲಾರದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಅಂತ ಸಿನಿಮಾ ಜಗತ್ತಿಗೆ ಉಪೇಂದ್ರ ರವರು ತೋರಿಸಿಕೊಟ್ಟರು. ಈ ಸಿನಿಮಾ ಆ ಕಾಲಕ್ಕೆ ಹೇಗೆ ಪ್ರಸ್ತುತವೋ, ಈ ಕಾಲಕ್ಕೂ ಕೂಡ ಈ ಸಿನಿಮಾ ಸಲ್ಲುತ್ತದೆ.

    ನಾಯಕಿ ಚಾಂದಿನಿ ‘A’ ಸಿನಿಮಾದಲ್ಲಿ ಹೇಗಿದ್ದರೋ, ಈಗಲು ಹಾಗೆ ಇದ್ದಾರೆ. ಅದಕ್ಕೆ ಅವರು ನೀಡುವ ಕಾರಣ, ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗು ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ “GOD IS GREAT” ಅನ್ನುವ ಹಾಗೆ, ಈ ಎರೆಡರ ಆಶೀರ್ವಾದದಿಂದ ನಾನು ಇವತ್ತಿಗೂ ‘A’ ಚಾಂದಿನಿ ರೀತಿಯಲ್ಲೆ ಇದ್ದೀನಿ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ A ಅಂತಾರೆ ನಾಯಕಿ.

     

    ಪ್ರಬುದ್ಧ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ‌. ಅಂದಿಗು ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ ಅವರು. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ A ಚಿತ್ರದ ಹಾಡುಗಳು ಈಗಲೂ ಜನಪ್ರಿಯ.  ಕನ್ನಡಿಗರು A ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರ ಋಣಿ. ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎನ್ನುತ್ತಾರೆ.

  • ನನ್ನ ಬಿಟ್ಟು ಬೇರೆ ಯಾರೂ CM ಆಗಲು ಸಾಧ್ಯವಿಲ್ಲ: ಹೆಚ್‌ಡಿಕೆ ಗುಡುಗು

    ನನ್ನ ಬಿಟ್ಟು ಬೇರೆ ಯಾರೂ CM ಆಗಲು ಸಾಧ್ಯವಿಲ್ಲ: ಹೆಚ್‌ಡಿಕೆ ಗುಡುಗು

    ಶಿವಮೊಗ್ಗ: 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ದೇವರ ಆಶೀರ್ವಾದ ಜೆಡಿಎಸ್ ಪಕ್ಷದ ಮೇಲಿದೆ. ಹೀಗಾಗಿ ಈ ಬಾರಿ ನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಭವಿಷ್ಯ ನುಡಿದಿದ್ದಾರೆ.

    ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ನಡೆದ ಜೆಡಿಎಸ್ (JDS) ಚುನಾವಣಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮದಲ್ಲಿ ಪ್ರತಿನಿತ್ಯ ಒಂದೊಂದು ಸರ್ವೆ ವರದಿ‌ ಬರುತ್ತಿದೆ. ಈ ಬಾರಿ ಜೆಡಿಎಸ್ 30 ರಿಂದ 35 ಸ್ಥಾನ ಬರದೇ ಇದ್ದರೆ ಆಗ ಪ್ರಶ್ನೆ ಮಾಡಿ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ

    ನನ್ನ ಸರ್ಕಾರದ ಅವಧಿಯಲ್ಲಿ ನಾನು ಕ್ಷೇತ್ರಗಳಿಗೆ ಕೊಟ್ಟ ಹಣದಿಂದ ಅಭಿವೃದ್ಧಿ ಆಗಿದೆ. ನಾನು ಅಭಿವೃದ್ಧಿಗೆ ಹಣ ಕೊಡದೇ 40 ಪರ್ಸೆಂಟ್‌ ಕಮೀಷನ್ ಹೊಡೆದಿದ್ದರೆ, 10 ಸಾವಿರ ಕೋಟಿ ರೂ. ಹೊಡೆಯಬಹುದಿತ್ತು. ಆದ್ರೆ ನಾನು ಲೂಟಿ ಹೊಡೆಯುವ ಕೆಲಸ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸಿಎಫ್‌ ಆಯ್ಕೆ ಮುಸುಕಿನ ಗುದ್ದಾಟ – ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ

    ಈ ಹಿಂದೆ ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಲಂಚದ ಹಣವನ್ನು ಕೈಯಲ್ಲಿ ಗೋರುತ್ತಿದ್ದರು. ಆದರೆ ಬಿಜೆಪಿಯವರು ಜೆಸಿಬಿ, ಇಟಾಚಿ ಹಾಕಿಕೊಂಡು ಗೋರುತ್ತಿದ್ದಾರೆ. ಸಾಕು ರಾಜ್ಯದ ಜನರು ಅವರಿಗೆ ಇನ್ನೆಷ್ಟು ಗೋರಲು ಬಿಡುತ್ತೀರಾ. ನಮಗೆ 5 ವರ್ಷದ ಸ್ಪಷ್ಟ ಬಹುಮತದ ಸರ್ಕಾರ ನಡೆಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

  • ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ನವದೆಹಲಿ: ಕಾಲಿಗೆ ಗಾಯವಾಗಿ ಲಂಡನ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಬೌಲರ್ ಶಾರ್ದೂಲ್ ಠಾಕೂರ್ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಹೋಗಿ ಟೀಂ ಇಂಡಿಯಾಗೆ ಶುಭಾಶಯ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅಡಿದ ಶಾರ್ದೂಲ್ ಠಾಕೂರ್ ಅವರು ಬೌಲಿಂಗ್ ಮಾಡುವ ಸಮಯದಲ್ಲಿ ಬಲಗಾಲಿಗೆ ಪೆಟ್ಟು ಬಿದ್ದಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಲಂಡನ್‍ನ ಕಾರ್ಡಿಫ್ ಹೋಗಿದ್ದರು.

    ಈ ನಡುವೆ ಊರುಗೋಲು ಸಹಾಯದಿಂದಲೇ ಭಾರತ ತಂಡದ ಆಟಗಾರರು ಇರುವ ಹೋಟೆಲಿಗೆ ತೆರಳಿದ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದ ಎಲ್ಲಾ ಆಟಗಾರರನ್ನು ಭೇಟಿಯಾಗಿ ವಿಶ್ವಕಪ್ ಗೆದ್ದು ತರುವಂತೆ ಶುಭಾಶಯ ತಿಳಿಸಿ ಬಂದಿದ್ದಾರೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರನ್ನು ಭೇಟಿಯಾಗಿ ಕೆಲ ಸಮಯ ಸಮಲೋಚನೆ ನಡೆಸಿದರು. ಈ ಸಮಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಅವರು ಶಾರ್ದೂಲ್ ಠಾಕೂರ್ ಅವರ ಅರೋಗ್ಯದ ಬಗ್ಗೆ ವಿಚಾರಿಸಿ ಲಂಡನ್‍ನಿನಲ್ಲೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

    https://www.instagram.com/p/Bx7E1xoA6BL/?utm_source=ig_embed

    ಗಾಯದ ಸಮಸ್ಯೆ ನಡುವೆಯೂ ನಮ್ಮನ್ನು ನೋಡಲು ಬಂದ ಶಾರ್ದುಲ್ ಠಾಕೂರ್ ಅವರು ಬೇಗ ಗುಣವಾಗಲಿ ಎಂದು ಟೀಂ ಇಂಡಿಯಾ ಆಟಗಾರರು ದೇವರಲ್ಲಿ ಕೇಳಿಕೊಂಡಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ಮೇ 30ಕ್ಕೆ ಅರಂಭವಾಗಲಿದ್ದು, ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಭಾರತ ಮುಂದಿನ ಅಭ್ಯಾಸ ಪಂದ್ಯವನ್ನು ಮೇ 28ಕ್ಕೆ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಜೂನ್ 6 ರಂದು ಲೀಗ್ ಹಂತದ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.