Tag: ಋಷಿಕೇಶ್

  • ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು

    ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು

    ಕೊಪ್ಪಳ: ಕೇದಾರನಾಥ (Kedarnath) ಯಾತ್ರೆಗೆ ತೆರಳಿದ್ದ ಕೊಪ್ಪಳದ (Koppal) ಅರ್ಚಕರೊಬ್ಬರು ಹೃದಯಾಘಾತದಿಂದ (Heart Attack) ಸಾವಿಗೀಡಾದ ಘಟನೆ ಋಷಿಕೇಶ್‍ನಲ್ಲಿ ನಡೆದಿದೆ.

    ಮೃತರನ್ನು ಸಿದ್ದಯ್ಯ ಹಿರೇಮಠ (32) ಎಂದು ಗುರುತಿಸಲಾಗಿದೆ. ಜೂ.10 ರಂದು ಅವರು ಕೇದಾರನಾಥ ಯಾತ್ರೆಗೆ ತೆರಳಿದ್ದರು. ಕಳೆದ ಹತ್ತು ದಿನಗಳಿಂದ ವಿವಿಧ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುತ್ತಿದ್ದರು. ಇಂದು (ಗುರುವಾರ) ಕೇದಾರನಾಥ್ ದರ್ಶನ ಮುಗಿಸಿಕೊಂಡು ಋಷಿಕೇಶ್‍ಗೆ ಬಂದಿದ್ದ ವೇಳೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

    ಸಿದ್ದಯ್ಯ ಅವರು ಮೊದಲು ಗವಿಸಿದ್ದೇಶ್ವರ ಮಠದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಹಾಸನದಲ್ಲಿ ಹಾಡಹಗಲೇ ಶೂಟೌಟ್‌- ಇಬ್ಬರು ಬಲಿ

  • ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಯಾದಗಿರಿ: ಪೊಲೀಸರೇನು ಹುಚ್ಚರಾ ಎಂದು ಪ್ರತಿಭಟನಾ ನಿರತರರಿಗೆ ಸಿನಿಮಾ ಸ್ಟೈಲ್‍ನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಗರಂ ಆಗಿದ್ದಾರೆ.

    ಇಂದು ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರ ಸಹಿತ ನಾಮಫಲಕ ಹಾಕುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂರ್ಘಷ ಏರ್ಪಟಿತ್ತು. ಹೀಗಾಗಿ ಸ್ಥಳಕ್ಕೆ ಎಸ್.ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಪೊಲೀಸರ ವಿರುದ್ಧ ಘೋಷಣೆ ಕೂಗಲು ಮುಂದಾದರು. ಇದರಿಂದ ಸಿಡಿಮಿಡಿಗೊಂಡ ಎಸ್.ಪಿ ಋಷಿಕೇಶ್ ಪೊಲೀಸರು ನಿಮಗೆ ಹಚ್ಚಾರ ತರ ಕಾಣುತ್ತೇವಾ? ನಾವು ಏನ್ ಮಾಡಿದ್ದೀವಿ ನಿಮಗೆ ಎಂದು ಪ್ರತಿಭಟನಾಕಾರರ ವಿರುದ್ಧ ಗರಂ ಆದರು.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರದಲ್ಲಿ ಪೊಲೀಸರಿಗೆ ಕುರುಬ ಸಮುದಾಯದ ಕುಮ್ಮಕ್ಕಿದೆ. ಅದ್ದರಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ.