Tag: ಊವರ್ಶಿ ರೌಟೇಲಾ

  • ಸನ್ನಿ ಡಿಯೋಲ್ ಸಿನಿಮಾದಲ್ಲಿ ಸೊಂಟ ಬಳುಕಿಸಿದ ‘ಐರಾವತ’ ನಟಿ ಊರ್ವಶಿ

    ಸನ್ನಿ ಡಿಯೋಲ್ ಸಿನಿಮಾದಲ್ಲಿ ಸೊಂಟ ಬಳುಕಿಸಿದ ‘ಐರಾವತ’ ನಟಿ ಊರ್ವಶಿ

    ನ್ನಡದ ‘ಐರಾವತ’ ನಟಿ ಊರ್ವಶಿ ರೌಟೇಲಾ (Urvashi Rautela) ಮತ್ತೆ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ಹೆಜ್ಜೆ ಹಾಕುವ ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಸಿನಿಮಾದಲ್ಲಿ ನಟಿ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಬದುಕು ಕೊಟ್ಟ ರೆಸ್ಟೋರೆಂಟ್‌ಗೆ ಶೈನ್ ಶೆಟ್ಟಿ ಗುಡ್ ಬೈ- ಫ್ಯಾನ್ಸ್‌ಗೆ ಬಹಿರಂಗ ಪತ್ರ ಬರೆದ ನಟ

    ನಾಯಕಿಯಾಗಿ ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ಐಟಂ ಹಾಡಿಗೆ ಊರ್ವಶಿ ಡ್ಯಾನ್ಸ್ ಮಾಡಿದ್ದಾರೆ. ಸನ್ನಿ ಡಿಯೋಲ್ ನಟನೆಯ ‘ಜಟ್’ (Jaat) ಸಿನಿಮಾದಲ್ಲಿ ‘ಟಚ್ ಕಿಯಾ’ ಹಾಡಿಗೆ ಅವರು ಸೊಂಟ ಬಳುಕಿಸಿದ್ದಾರೆ. ನಟಿಯು ಮಾದಕವಾಗಿ ಡ್ಯಾನ್ಸ್ ಮಾಡಿರೋದನ್ನು ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸದ್ಯ ಈ ಸಾಂಗ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದನ್ನೂ ಓದಿ:ಬ್ರೇಕಪ್ ಬೆನ್ನಲ್ಲೇ ಸಂಬಂಧವನ್ನು ಐಸ್‌ಕ್ರೀಮ್‌ನಂತೆ ಆಸ್ವಾದಿಸಬೇಕು ಎಂದ ವಿಜಯ್ ವರ್ಮಾ

     

    View this post on Instagram

     

    A post shared by Mythri Movie Makers (@mythriofficial)

    ‘ಜಟ್’ ಚಿತ್ರ ಜಬರ್‌ದಸ್ತ್ ಆಗಿರುವ ಆ್ಯಕ್ಷನ್ಸ್ ಒಳಗೊಂಡಿರುವ ಸಿನಿಮಾ ಆಗಿದೆ. ಸನ್ನಿ ಡಿಯೋಲ್ (Sunny Deol)  ಜೊತೆ ರಣದೀಪ್ ಹೂಡಾ, ರೆಜಿನಾ, ಸೆಯಾಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಏ.10ರಂದು ರಿಲೀಸ್ ಆಗಲಿದೆ.

  • ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊರ್ವಶಿ ರೌಟೇಲಾಗೆ ಏಟು- ಆಸ್ಪತ್ರೆಗೆ ದಾಖಲು

    ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊರ್ವಶಿ ರೌಟೇಲಾಗೆ ಏಟು- ಆಸ್ಪತ್ರೆಗೆ ದಾಖಲು

    ನ್ನಡದ ‘ಐರಾವತ’ ನಟಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಬಾಲಯ್ಯ ನಟನೆಯ 109ನೇ ಸಿನಿಮಾದ ಶೂಟಿಂಗ್‌ನಲ್ಲಿ ನಟಿ ಕಾಲಿಗೆ ಏಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:ರಜನಿಕಾಂತ್ ನಟನೆಯ ಚಿತ್ರಕ್ಕೆ ‘ರತ್ನನ್ ಪ್ರಪಂಚ’ ನಟಿ ಎಂಟ್ರಿ

    ಬಾಲಯ್ಯ (Balayya) ಹೊಸ ಸಿನಿಮಾದಲ್ಲಿ ಊರ್ವಶಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊವರ್ಶಿ ಕಾಲಿಗೆ ಪೆಟ್ಟಾಗಿದ್ದು, ಕೂಡಲೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯದ ತೀವ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಬಾಲಿವುಡ್ ಬೆಡಗಿಗೆ ಪೆಟ್ಟಾಗಿರುವ ವಿಷಯ ತಿಳಿದು ಅಭಿಮಾನಿಗಳು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ.

    ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದು, ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ನಟಿ ಚಾಂದಿನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಭಾರತ-ಪಾಕ್ ಪಂದ್ಯದ ವೇಳೆ ಚಿನ್ನದ ಫೋನ್ ಕಳೆದುಕೊಂಡ ಊರ್ವಶಿ

    ಭಾರತ-ಪಾಕ್ ಪಂದ್ಯದ ವೇಳೆ ಚಿನ್ನದ ಫೋನ್ ಕಳೆದುಕೊಂಡ ಊರ್ವಶಿ

    ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಅ.14ರಂದು ನಡೆದ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ, ಐರಾವತ ನಟಿ ಊರ್ವಶಿ ರೌಟೇಲಾ ಕೂಡ ಬಂದಿದ್ದರು. ಪಂದ್ಯ ನೋಡುವಾಗ ಅವರು ಅತ್ಯಂತ ದುಬಾರಿ ಚಿನ್ನದ ಐಫೋನ್ ಕಳೆದುಕೊಂಡಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ನಟಿ ಅಳಲು ತೋಡಿಕೊಂಡಿದ್ದಾರೆ.

     

    View this post on Instagram

     

    A post shared by Urvashi Rautela (@urvashirautela)

    ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ:ಪತಿ ರಣ್‌ಬೀರ್, ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌ಗೆ ಆಲಿಯಾ ಭಟ್ ಪ್ರತಿಕ್ರಿಯೆ

    ನಟಿ ಊರ್ವಶಿ ಇದೀಗ ಶೇರ್ ಮಾಡಿರುವ ಪೋಸ್ಟ್ ಕೂಡ ಸಖತ್ ಟ್ರೋಲ್ ಆಗುತ್ತಿದೆ. ಸುದ್ದಿಯಾಗಲು ಸದಾ ಒಂದಲ್ಲಾ ಒಂದು ಗಿಮಿಕ್ ಮಾಡುತ್ತಿರುತ್ತಾರೆ ಎಂದು ನೆಟ್ಟಿಗರು ನಟಿಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಐಫೋನ್ ಕಳೆದುಕೊಂಡಿದ್ದಾರೆ ಎಂಬ ವಿಚಾರವೇ ಸುಳ್ಳು ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿಯ ಬಗ್ಗೆ ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟಿಯರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ವೇಳೆ ಹಲವು ಆಟಗಾರರ ಹೆಸರು ಕೂಡ ನಟಿಯರೊಂದಿಗೆ ಕೇಳಿ ಬರುತ್ತದೆ. ಸದ್ಯ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಗೆಳತಿ, ನಟಿ ಊರ್ವಶಿ ರೌಟೇಲಾ ಅವರ ಮೊಬೈಲ್ ನಂಬರನ್ನು ತಮ್ಮ ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇತ್ತೀಚೆಗಷ್ಟೇ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಪ್ರೇಯಸಿ ಇಶಾ ನೇಗಿ ಅವರೊಂದಿಗೆ ಇರುವ ಫೋಟೋವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಾವಿಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿರುವುದಾಗಿ ತಿಳಿಸಿದ್ದರು. ಆದರೆ ಇದಾದ ಬಳಿಕ ರಿಷಬ್ ಪಂತ್ ಅವರ ಮಾಜಿ ಗೆಳತಿ, ನಟಿ ಊರ್ವಶಿ ರೌಟೇಲಾ ಮತ್ತೆ ರಿಷಬ್‍ರನ್ನು ಸಂಪರ್ಕ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

    ಊರ್ವಶಿ ರೌಟೇಲಾರೊಂದಿಗೆ ಮಾತನಾಡಲು ಇಷ್ಟಪಡದ ರಿಷಬ್, ತಮ್ಮ ಮೊಬೈಲ್‍ನಲ್ಲಿ ನಟಿಯ ಮೊಬೈಲ್ ಸಂಖ್ಯೆಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ಪರಸ್ಪರ ಚರ್ಚೆ ನಡೆಸಿಕೊಂಡ ಬಳಿಕವೇ ತಮ್ಮ ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ಊರ್ವಶಿ ರೌಟೇಲಾ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on