Tag: ಊರು

  • ನಾಡಿನೊಳಗೆ ಕಾಡು ಬೆಳೆಸಲು ಹೊರಟ ಸಂವೇದನಾ ಯುವಕರು

    ನಾಡಿನೊಳಗೆ ಕಾಡು ಬೆಳೆಸಲು ಹೊರಟ ಸಂವೇದನಾ ಯುವಕರು

    ಉಡುಪಿ: ಕಾಡು ನಾಶ ಆಗುತ್ತಿದ್ದು, ಕಾಡಿರುವ ಜಾಗದಲ್ಲಿ ನಾಡು ನಿರ್ಮಾಣ ಆಗಿದೆ ಎಂಬ ಒಂದು ದೊಡ್ಡ ಕೂಗು ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಹೀಗಾಗಿಯೇ ನಾಡಿನೊಳಗೆ ಕಾಡು ನಿರ್ಮಾಣ ಮಾಡಲು ಉಡುಪಿಯ ಸಂಸ್ಥೆಯೊಂದು ಮುಂದಾಗಿದೆ. ಪೇಟೆಯೊಳಗೆ ಒಂದು ಚಿಕ್ಕ ಜಾಗ ಸಿಕ್ಕರೂ ಸಾಕು ಅಲ್ಲಿ ದೊಡ್ಡ ಕಾಡು ನಿರ್ಮಾಣ ಮಾಡಬೇಕು ಎಂಬ ಕನಸು ಈ ಸಂಸ್ಥೆಯದ್ದಾಗಿದೆ.

    ಉಡುಪಿಯ ಸಂವೇದನಾ ಸಂಸ್ಥೆ ಸದ್ದಿಲ್ಲದೆ ಇಂತಹದೊಂದು ಕೆಲಸವನ್ನು ಮಾಡುತ್ತಿದೆ. ತನ್ನ ವನ ಸಂವೇದನಾ ಯೋಜನೆಯ ಅಂಗವಾಗಿ ಉಡುಪಿಯ ಮಲ್ಪೆ ಸಮೀಪದ ಕಂಗಣಬೆಟ್ಟು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಸಿರಿವನವನ್ನು ನಿರ್ಮಿಸಿದೆ. ಇದು ಸಂಸ್ಥೆಯ ಎರಡನೇ ವನ. ಇಲ್ಲಿ 23 ಜಾತಿಯ 600 ಗಿಡಗಳನ್ನು ತಿಂಗಳ ಹಿಂದೆ ನೆಟ್ಟಾಗಿದೆ.

    ಬಿಲ್ವ ಪತ್ರೆ, ಮುತ್ತುಗ, ಶಿವಾನಿ, ಬಾಗೆ ಮರೆ, ಸಿಲ್ವರ್ ಓಕ್, ಬೀಟೆ, ರಕ್ತ ಚಂದನ ಹೀಗೆ 15 ಜಾತಿ ಆಯುರ್ವೇದ ಗಿಡ ನೆಡಲಾಗಿದೆ. ಅದರ ಪಾಲನೆ ಪೋಷಣೆಗೆ ಸ್ವಯಂ ಸೇವಕರ ತಂಡಕ್ಕೆ ಜವಾಬ್ದಾರಿ ಕೊಡಲಾಗಿದೆ.

    ಸಿರಿವನದಲ್ಲಿ ಹಕ್ಕಿಗಳನ್ನು ಸೆಳೆಯುವ ಶಕ್ತಿಯಿರುವ ಮರಗಳನ್ನು ಬೆಳೆಸಲಾಗುತ್ತಿದೆ. ಈ ಪೈಕಿ ಮುತ್ತುಗ ಸಂಪೂರ್ಣ ಆಯುರ್ವೇದಿಕ್ ಸಸ್ಯ. ಎಲ್ಲಾ ಹಕ್ಕಿಗಳನ್ನು ಮುತ್ತುಗದ ಹೂವು ಆಕರ್ಷಿಸುತ್ತದೆ. ಮುತ್ತುಗಕ್ಕೆ ಆ ಶಕ್ತಿಯಿದೆ. ಸುಮಾರು 20ಕ್ಕೂ ಹಕ್ಕಿಗಳನ್ನು ಸೆಳೆಯುವ ಗಿಡಗಳನ್ನು ನೆಡಲಾಗಿದೆ. ಕಾಗೆಯನ್ನು ಯಾವ ಹೂವುಗಳೂ ಆಕರ್ಷಿಸುವುದಿಲ್ಲ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂವೇದನಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್, ಸಮಾನ ಮನಸ್ಕರ ತಂಡ ಪರಿಸರದ ಬಗ್ಗೆ ಚಿಂತನೆ ಮಾಡಿದಾಗ ಯೋಜನೆ ಚರ್ಚೆಗೆ ಬಂತು. ನಾಡಿನೊಳಗೊಂದು ಕಾಡು ನಿರ್ಮಾಣ ಆಗಬೇಕು. ಅದು ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಉಪಯೋಗ ಆಗಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಊರಿನ, ರಾಜ್ಯದ ಅಲ್ಲಲ್ಲಿ ಪುಟ್ಟ ಪುಟ್ಟ ಕಾಡುಗಳನ್ನು ನಾವು ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಇದರ ಜೊತೆ ಪರಿಸರ ಕಾಳಜಿಯ ಹತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದೇವೆ. ನಮಗೆ ಖಾಲಿ ಜಮೀನು ಮತ್ತು ಊರಿನ ಆಸಕ್ತ ಯುವಕ ತಂಡ ಸಿಕ್ಕರೆ ನಿಮ್ಮೂರಲ್ಲೂ ಇಂತಹ ವನ ಕಟ್ಟುತ್ತೇವೆ ಎಂದು ಹೇಳಿದರು.

  • ಕೆಲಸವಿಲ್ಲವೆಂದು ಬೆಂಗ್ಳೂರಿಂದ ಊರಿಗೆ ಪ್ರಯಾಣ- ಅಸ್ವಸ್ಥಗೊಂಡು ಬಸ್ಸಿನಲ್ಲೇ ಕೊನೆಯುಸಿರೆಳೆದ ಟೆಕ್ಕಿ

    ಕೆಲಸವಿಲ್ಲವೆಂದು ಬೆಂಗ್ಳೂರಿಂದ ಊರಿಗೆ ಪ್ರಯಾಣ- ಅಸ್ವಸ್ಥಗೊಂಡು ಬಸ್ಸಿನಲ್ಲೇ ಕೊನೆಯುಸಿರೆಳೆದ ಟೆಕ್ಕಿ

    – ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ

    ಉಡುಪಿ: ಸಾಫ್ಟ್ ವೇರ್ ಉದ್ಯೋಗಿ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಪ್ರಾಣ ಬಿಟ್ಟಿರುವ ದುರ್ಘಟನೆ ನಡೆದಿದೆ.

    ಇಂದು ಬೆಳಗ್ಗೆ ಕುಂದಾಪುರದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ(25) ಸಾವನ್ನಪ್ಪಿದ ಯುವಕ. ಬೆಂಗಳೂರಿನಿಂದ ಹುಟ್ಟೂರಿಗೆ ಖಾಸಗಿ ಬಸ್‍ನಲ್ಲಿ ಮರಳುವಾಗ ಪ್ರಯಾಣದ ವೇಳೆ ದುರ್ಘಟನೆ ಸಂಬವಿಸಿದೆ. ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ.

    ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಚೈತನ್ಯ, ಎರಡು ವರ್ಷಗಳಿಂದ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಡುತ್ತಿದ್ದ. ಕೊರೊನಾ ಹಿನ್ನೆಲೆ ಕೆಲಸ ಕಡಿಮೆ ಇರುವ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ. ಅದರಂತೆ ಸೋಮವಾರ ರಾತ್ರಿ ಖಾಸಗಿ ಬಸ್‍ನಲ್ಲಿ ಊರಿಗೆ ಹೊರಟಿದ್ದಾನೆ. ಅಲ್ಲದೆ ಬೆಳಗ್ಗೆ 6.30ರ ಸುಮಾರಿಗೆ ಕರೆಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ಮನೆಯವರಿಗೆ ತಿಳಿದ್ದಾನೆ.

    ತನ್ನ ಊರು ಕೋಟೇಶ್ವರ ಬಂದರೂ ಯುವಕ ಇಳಿಯದ್ದನ್ನು ಕಂಡ ನಿರ್ವಾಹಕ, ಅನುಮಾನಗೊಂಡು ಹತ್ತಿರ ಬಂದು ನೋಡಿದ್ದಾನೆ. ಆಗ ಚೈತನ್ಯ ಅಸ್ವಸ್ಥಗೊಂಡಿದ್ದಾನೆ. ಮಲಗಿರಬಹುದು ಎಂದು ಎಬ್ಬಿಸಲು ನೋಡಿದ್ದಾನೆ. ಆದರೆ ಎದ್ದಿಲ್ಲ, ಅಷ್ಟೊತ್ತಿಗೆ ಮನೆಯವರ ಕರೆ ಬಂದಿದ್ದು, ಬಸ್ ನಿರ್ವಾಹಕ ಕರೆ ಸ್ವೀಕರಿಸಿ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಷ್ಟರಲ್ಲಾಗಲೇ ಚೈತನ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಘಟನೆ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

  • ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    -ಆರು ರಾಜ್ಯ ದಾಟಿ ಸೇರಬೇಕಿದೆ ಗೂಡು
    -ರೈಲ್ವೇ ಟಿಕೆಟ್ ಕನ್ಫರ್ಮ್ ಆಗ್ತಿಲ್ಲ ಏನ್ ಮಾಡೋದು?

    ಚೆನ್ನೈ: ಯುವಕರಿಬ್ಬರು 1860 ಕಿಲೋ ಮೀಟರ್ ದೂರದ ಊರು ಸೇರಲು ಪ್ರಯಾಣ ಆರಂಭಿಸಿದ್ದಾರೆ. ರೈಲ್ವೇ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಯುವಕರಿಬ್ಬರು ಸೈಕಲ್‍ನಲ್ಲಿಯೇ ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಪಯಣ ಬೆಳೆಸಿದ್ದಾರೆ.

    ಸೋನು ಮತ್ತು ಶೈಲು ಉತ್ತರ ಪ್ರದೇಶದ ಔರಿಯಾ ಜಿಲ್ಲೆಯವರಾಗಿದ್ದು, ತಮಿಳುನಾಡಿನ ಅರ್ಕನೊಂನಲ್ಲಿ ವಾಸವಾಗಿದ್ದರು. ಅರ್ಕನೋಂನಲ್ಲಿ ಕ್ಯಾಂಡಿ ವ್ಯಾಪಾರ ಮಾಡಿಕೊಂಡಿದ್ದ ಇವರ ಬದುಕನ್ನು ಕೊರೊನಾ ಕಿತ್ತುಕೊಂಡಿತ್ತು. ಇದೀಗ ಪ್ರಯಾಣ ಆರಂಭಿಸಿರುವ ಸೋನು ಮತ್ತು ಶೈಲು ಆರು ರಾಜ್ಯಗಳನ್ನು ಪಾರು ಮಾಡಿ ಹೋಗಬೇಕಿರೋದು ದೊಡ್ಡ ಸವಾಲು ಆಗಿದೆ.

    ನಾವು ಕೆಲಸ ಆರಂಭಿಸಿದ ದಿನದಿಂದಲೂ ಸ್ವಲ್ಪ ಹಣ ಕೂಡಿಟ್ಟು ಅದರಲ್ಲಿ ಒಂದು ಭಾಗವನ್ನು ಊರಿಗೆ ಕಳಿಸ್ತಾ ಇದ್ದೀವಿ. ಲಾಕ್‍ಡೌನ್ ನಿಂದಾಗಿ ಇಷ್ಟು ದಿನ ಕೂಡಿಟ್ಟ ಹಣದಿಂದ ಜೀವನ ನಡೆಯಿತ್ತು. ಹಣ ಇಲ್ಲದಿದ್ರೆ ಈ ಊರಿನಲ್ಲಿರಲು ಆಗಲ್ಲ. ನಮ್ಮ ಟ್ರೈನ್ ಟಿಕೆಟ್ ಸಹ ಕನ್ಫರ್ಮ್ ಆಗುತ್ತಿಲ್ಲ. ವಿಧಿಯಿಲ್ಲದೇ ಗೆಳೆಯನ ಜೊತೆ ಸೇರಿ ಬ್ಯಾಗ್ ಗಳಿಗೆ ಬಟ್ಟೆ ಹಾಕಿಕೊಂಡು ಸೈಕಲ್ ಮೇಲೆಯೇ ಊರಿಗೆ ಹೊರಟಿದ್ದೇವೆ ಎಂದು ಸೋನು ಹೇಳುತ್ತಾರೆ.

    ಹೆದ್ದಾರಿಯ ಪುಟ್ಟ ಗುಡಿಸಲಿನಲ್ಲಿ ವಾಸವಾಗಿರುವ ಮಹಿಳೆ ಸುಂಕಮ್ಮ ಮಾತನಾಡಿ, ನನ್ನ ಕಣ್ಮುಂದೆ ಕಾರ್ಮಿಕರು ನಡೆದುಕೊಂಡು ಹೋಗೋದನ್ನು ನೋಡಿ ದುಃಖವಾಗುತ್ತದೆ. ಕೆಲವರು ಬಂದು ಬಾಟಲ್ ಗಳಿಗೆ ನೀರು ತುಂಬಿಕೊಡುವಂತೆ ಕೇಳುತ್ತಾರೆ. ಬಾಟಲ್ ಗಳಿಗೆ ನೀರು ತುಂಬಿ ಕೆಲವು ಬಾರಿ ಊಟ ಸಹ ನೀಡುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

  • ತೋಟದಲ್ಲಿದ್ದ ಕಾರ್ಮಿಕರು ಸರ್ಕಾರಿ ಬಸ್ಸಲ್ಲಿ ಸ್ವಂತ ಊರಿಗೆ ಶಿಫ್ಟ್

    ತೋಟದಲ್ಲಿದ್ದ ಕಾರ್ಮಿಕರು ಸರ್ಕಾರಿ ಬಸ್ಸಲ್ಲಿ ಸ್ವಂತ ಊರಿಗೆ ಶಿಫ್ಟ್

    ಚಿಕ್ಕಮಗಳೂರು: ಕೂಲಿಗಾಗಿ ರಾಜ್ಯದ ಇತರ ಜಿಲ್ಲೆಗಳಿಂದ ಬಂದು ಕೊರೊನಾದಿಂದಾಗಿ ಲಾಕ್‍ಡೌನ್ ಘೋಷಿಸಿದಾಗಿನಿಂದ ಊರಿಗೆ ಹೋಗಲಾಗದೆ ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕಾರ್ಮಿಕರನ್ನು ಜಿಲ್ಲೆಯ ಮೂಡಿಗೆರೆಯಿಂದ ಸರ್ಕಾರಿ ಬಸ್‍ನಲ್ಲಿ ತಮ್ಮ ಊರುಗಳಿಗೆ ಸ್ಥಳಾಂತರಿಸಲಾಗಿದೆ.

     

    ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಕಾಫಿ ಹಾಗೂ ಮೆಣಸು ಕೊಯ್ಯಲು ಕೂಲಿ ಕಾರ್ಮಿಕರು ಆಗಮಿಸಿದ್ದರು. ಅವರೆಲ್ಲಾ ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ತೋಟದ ಲೈನ್ ಮನೆಗಳಲ್ಲೇ ವಾಸವಿದ್ದರು. ಇಂದು 11 ಬಸ್‍ಗಳ ಮೂಲಕ ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ವಿವಿಧ ಊರುಗಳಿಗೆ 200ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸಲಾಗಿದೆ.

    ಒಂದೊಂದು ಬಸ್‍ನಲ್ಲಿ ಕೇವಲ 21 ಜನ ಮಾತ್ರ ಇದ್ದು. ಎಲ್ಲರಿಗೂ ಮುಖಕ್ಕೆ ಮಾಸ್ಕ್ ಹಾಕಿ ಬಸ್‍ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರನ್ನೂ ತಮ್ಮ-ತಮ್ಮ ಊರುಗಳಿಗೆ ಕಳುಹಿಸಲಾಗಿದೆ. ಏಪ್ರಿಲ್ 25ರಂದು 5 ಬಸ್, 26ರಂದು 7 ಬಸ್ ಹಾಗೂ ಇಂದು ಒಟ್ಟು 11 ಬಸ್‍ಗಳಲ್ಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲಾಗಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ಹೊರ ಜಿಲ್ಲೆಗಳಿಂದ ಬಂದ ಕೂಲಿಕಾರ್ಮಿಕರು ಕಾಫಿತೋಟದ ಲೈನ್ ಮನೆಗಳಲ್ಲೇ ವಾಸಿವಿದ್ದರು. ಕೆಲ ಕಾರ್ಮಿಕರು ಕದ್ದು ಮುಚ್ಚಿ ಊರಿಗೆ ಹೋಗಲು ಯತ್ನಿಸಿ ಸಿಕ್ಕಿಬಿದ್ದು, ಸರ್ಕಾರದ ನಿರಾಶ್ರಿತ ಘಟಕದ ಪಾಲಾಗಿದ್ದರು. ಆದರೆ ನಿನ್ನೆಯಿಂದ ಸರ್ಕಾರವೇ ಕಾರ್ಮಿಕರನ್ನು ಸ್ವಂತ ಜಿಲ್ಲೆ ಹಾಗೂ ಊರುಗಳಿಗೆ ಕಳುಹಿಸಲು ಮುಂದಾಗಿದೆ.

  • ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಹಾವೇರಿ: ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಸೈನಿಕರಿಗೆ ಹಾವೇರಿಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

    ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಜಗದೀಶ್, ಅಗಡಿ ಗ್ರಾಮದ ನಜೀರ್ ಅಹಮ್ಮದ್ ಮತ್ತು ಲಕ್ಷ್ಮಣ ಅವರನ್ನು ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು. ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರು ಇಂದು ಊರಿಗೆ ಮರಳಿದ್ದಾರೆ. ಕಾರು ಇಳಿಯುತ್ತಿದ್ದಂತೆ ನಿವೃತ್ತ ಸೈನಿಕರಿಗೆ ಮಕ್ಕಳು ಪುಷ್ಪಗುಚ್ಛ ನೀಡಿದರು. ಇದೇ ವೇಳೆ ಕುಟುಂಬಸ್ಥರು ಸಹ ಸ್ವಾಗತಿಸಿದರು.

    ನಂತರ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ತೆರೆದ ವಾಹನದಲ್ಲಿ ದೇಶಭಕ್ತಿ ಗೀತೆಗಳ ಮೂಲಕ ನಿವೃತ್ತ ಸೈನಿಕರ ಮೆರವಣಿಗೆ ಮಾಡಲಾಯ್ತು. ಹಾವೇರಿಯಿಂದ ಸೈನಿಕರ ಸ್ವಗ್ರಾಮ ಅಗಡಿವರೆಗೆ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಮೂಲಕ ದೇಶಾಭಿಮಾನ ಮೆರೆದರು.