Tag: ಊಟ

  • ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್‌ನ ಇಲಿನಾಯ್ಸ್‌ನಲ್ಲಿರುವ ವ್ಯಕ್ತಿಯೊಬ್ಬನ ಮನೆಯ ಬಾತ್‌ರೂಮ್‌ ಗೋಡೆಯಲ್ಲಿ 60 ವರ್ಷದ ಹಿಂದೆ ಮಾಡಿದ್ದ ಮೆಕ್‍ಡೊನಾಲ್ಡ್ಸ್ ಊಟ ಸಿಕ್ಕಿದೆ. ಈ ಕುರಿತು ಆತ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

    ಇಲಿನಾಯ್ಸ್‌ನಲ್ಲಿರುವ ವ್ಯಕ್ತಿಯೊಬ್ಬರ ಮನೆಯನ್ನು ನವೀಕರಣ ಮಾಡುವ ವೇಳೆ ಬಾತ್‌ರೂಮ್‌ ಗೋಡೆಯಲ್ಲಿ 60 ವರ್ಷ ಮೆಕ್‍ಡೊನಾಲ್ಡ್ಸ್ ಊಟ ಸಿಕ್ಕಿದೆ. ಇದನ್ನು ನೋಡಿ ಅಚ್ಚರಿಗೊಂಡ ಆ ವ್ಯಕ್ತಿ ರೆಡ್ಡಿಟ್‍ನಲ್ಲಿ ಅದರ ಬಗ್ಗೆ ಪೋಸ್ಟ್ ಮಾಡಿದ್ದಾನೆ. ಅಲ್ಲಿ ಅವರು ಫಾಸ್ಟ್ ಫುಡ್‍ನ ವಾಸನೆಯು ತನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಏನಿದು? 
    ರಾಬ್ ಎಂದು ಗುರುತಿಸಲಾದ ವ್ಯಕ್ತಿಯ ಮನೆಯನ್ನು ನವೀಕರಣಗೊಳ್ಳಿಸಲಾಗುತ್ತಿತ್ತು. ಈ ವೇಳೆ ಬಾತ್‌ರೂಮ್‌ ಗೋಡೆಯಲ್ಲಿ ಹಳೆಯ ಚಿಂದಿ ಪೇಪರ್ ಮತ್ತು ಬಟ್ಟೆಯಲ್ಲಿ ಸುತ್ತಿದ್ದ ಫ್ರೆಂಚ್ ಫ್ರೈಗಳ ಪ್ಯಾಕೆಟ್ ಕಂಡುಬಂದಿದೆ. ಇದನ್ನು ಪರಿಶೀಲಿಸಿ ನೋಡಿದಾಗ ಇದು 60 ವರ್ಷದ ಹಳೆ ಊಟ ಎಂಬುದು ತಿಳಿದುಬಂದಿದೆ.

    3,286 Mcdonalds Stock Photos, Pictures & Royalty-Free Images - iStock

    ಈ ಕುರಿತು ರಾಬ್ ಅವರು ಐದು ದಿನಗಳ ಹಿಂದೆ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದು, ಪ್ರಶ್ನೆಗಳ ಸುರಿಮಳೆಯನ್ನು ಕೇಳಿದ್ದಾರೆ. ಈ ಕಾಮೆಂಟ್‍ಗಳಿಗೆ ರಾಬ್ ಕೂಡ ಉತ್ತರಿಸುತ್ತಿದ್ದಾರೆ. ಇದನ್ನೂ ಓದಿ: ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    ಈ ವೇಳೆ ರಾಬ್, ಕ್ರಿಸ್ಟಲ್ ಲೇಕ್‍ನಲ್ಲಿರುವ ಮೂಲ ಮೆಕ್‍ಡೊನಾಲ್ಡ್ಸ್ ಸ್ಥಳವೊಂದರಲ್ಲಿ ನಮ್ಮ ಕುಟುಂಬ ವಾಸಿಸುತ್ತಿದೆ. ಕುತೂಹಲಕಾರಿಯಾದ ವಿಷಯವೆಂದರೆ 1959ರಲ್ಲಿ ಔಟ್ಲೆಟ್ ಮೊದಲ ಬಾರಿಗೆ ಓಪನ್ ಮಾಡಲಾಯಿತು. ಅದೇ ವರ್ಷ ನಮ್ಮ ಮನೆಯನ್ನು ನಿರ್ಮಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

  • ಸೂಪರ್ ಫಾಸ್ಟ್ ಊಟ ಮಾಡಿ 5 ಸಾವಿರ ಹಣ ಗೆದ್ದ!

    ಸೂಪರ್ ಫಾಸ್ಟ್ ಊಟ ಮಾಡಿ 5 ಸಾವಿರ ಹಣ ಗೆದ್ದ!

    ಜೈಪುರ: ಯುವಕನೊಬ್ಬ ರಾಜಸ್ಥಾನ ಥಾಲಿ ಊಟವನ್ನು 10 ನಿಮಿಷದಲ್ಲಿ ತಿಂದು ಮುಗಿಸಿ 5,100 ರೂಪಾಯಿ ಬಹುಮಾನ ಗೆದ್ದಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ಸಸ್ಯಾಹಾರಿ ಹೊಟೇಲ್‍ನಲ್ಲಿ 499 ಬೆಲೆಯ ಥಾಲಿಯನ್ನು ನೀಡಿ ಅದನ್ನು 10 ನಿಮಿಷದಲ್ಲಿ ತಿಂದು ಮುಗಿಸಿದವರೆಗೆ ಬಹುಮಾನವನ್ನು ನೀಡುವುದಾಗಿ ಘೋಷಿಸಲಾಗಿತ್ತು. ಥಾಲಿಯಲ್ಲಿ ಬೆಣ್ಣೆ ಸವರಿದ ಬಾಹುಬಲಿ ನಾನ್ ನೀಡಲಾಗಿತ್ತು. ಇದರಲ್ಲಿ ರುಮಾಲಿ ರೋಟಿ, ವೆಜಿಟೇರಿಯನ್ ಚಾಪ್, ದಾಲ್ ಮತ್ತು ಪನ್ನೀರ್ ನೀಡಲಾಗಿತ್ತು. ಇದನ್ನೂ ಓದಿ: ಪುರುಷರ ಟಾಯ್ಲೆಟ್‍ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!

    ವ್ಯಕ್ತಿಯೊಬ್ಬ ಈ ಚಾಲೆಂಜ್ ಸ್ವೀಕರಿಸಿ 10 ನಿಮಿಷದಲ್ಲಿ ಥಾಲಿಯನ್ನು ಸಂಪೂರ್ಣವಾಗಿ ತಿಂದು ಮುಗಿಸಿ 5,100ರೂ ಬಹುಮಾನ ಗೆದ್ದಿದ್ದಾನೆ. ಬಳಿಕ ಆತ ಮಾಡಿದ ಕೆಲಸ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಆತ ಬಹುಮಾನವಾಗಿ ಗೆದ್ದ ಹಣವನ್ನು ಅದೇ ಅಂಗಡಿಯ ಮಾಲೀಕನಿಗೆ ವಾಪಸ್ ಕೊಟ್ಟು ತಿನಿಸು ರುಚಿಕರವಾಗಿತ್ತುಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾನೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಬಹುಮಾನವಾಗಿ ಗೆದ್ದ ಹಣವನ್ನು ಹಿಂದಿರುಗಿಸಿದ್ದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಫುಡ್ ಆರ್ಡರ್ ಮಾಡಿ ಹಲ್ಲಿ ಕಂಡು ಬೆಚ್ಚಿಬಿದ್ದಳು

    ಫುಡ್ ಆರ್ಡರ್ ಮಾಡಿ ಹಲ್ಲಿ ಕಂಡು ಬೆಚ್ಚಿಬಿದ್ದಳು

    ಮುಂಬೈ: ಆನ್‍ಲೈನ್‍ನಲ್ಲಿ ರೆಸ್ಟೋರೇಂಟ್‍ವೊಂದರಿಂದ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಆಹಾರದಲ್ಲಿ ಹಲ್ಲಿಯೊಂದು ಕಂಡಿದೆ. ಈ ದೃಶ್ಯ ಕಂಡೊಡನೆ ಗ್ರಾಹಕ ಕೌಸ್ತವ್ ಕುಮಾರ್ ಸಿನ್ಹಾ ಟ್ವಿಟರ್ ಮೂಲಕ ಕಂಪನಿಗೆ ದೂರು ನೀಡಿದ್ದಾರೆ.

    ಜನವರಿ 14ರಂದು ಕೌಸ್ತವ್ ಕುಮಾರ್ ಸಿನ್ಹಾ ತಮ್ಮ ಟ್ವಿಟರ್ ಹ್ಯಾಂಡಲ್‍ನಿಂದ ವೀಡಿಯೊವನ್ನು ಹಂಚಿಕೊಂಡಿದ್ದು, ನೋಯ್ಡಾದ ಗ್ರೆನೋ ವೆಸ್ಟ್‍ನಲ್ಲಿರುವ ಪಂಜಾಬಿ ರಸೋಯ್ ರೆಸ್ಟೊರೆಂಟ್‍ನಿಂದ ಆಹಾರವನ್ನು ಆರ್ಡರ್ ಮಾಡಿರುವುದಾಗಿ ವೀಡಿಯೊದಲ್ಲಿ ವ್ಯಕ್ತಿ ಹೇಳಿದ್ದಾನೆ. ಆಹಾರವನ್ನು ತೆರೆದ ತಕ್ಷಣ ಅದರೊಳಗಿನಿಂದ ಹಲ್ಲಿ ಹೊರಬಂದಿತು. ಸತ್ತ ಹಲ್ಲಿಯನ್ನು ನೋಡಿದ ಕೌಸ್ತವ್ ಟ್ವಿಟರ್ ಮೂಲಕ ದೂರು ದಾಖಲಿಸಿದ್ದಾರೆ. ಊಟದಲ್ಲಿ ಹಲ್ಲಿ ಪತ್ತೆಯಾಗಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲ ತೆಗೆದುಹಾಕಿದ ವೈದ್ಯರು

    ತನ್ನ ಟ್ವೀಟ್‍ನಲ್ಲಿ ಕೌಸ್ತವ್ ಕುಮಾರ್ ಸಿನ್ಹಾ, ತಿನ್ನುವ ಆಹಾರದಲ್ಲಿ ಸತ್ತ ಹಲ್ಲಿಯನ್ನು ನೋಡಿ ಆಘಾತವಾಗಿದೆ. ಕೋವಿಡ್‍ನ ಮಧ್ಯೆ ಇದೆಲ್ಲ ಉದ್ದೇಶಪೂರ್ವಕವಾಗಿ ನಡೆಯುತ್ತಿದೆಯೇ ಎಂದನಿಸುತ್ತಿದ್ದು, ಇದೊಂದು ತುಂಬಾ ಕೆಟ್ಟ ಅನುಭವ ಎಂದಿದ್ದಾರೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಕಂಪನಿ, ಪಂಜಾಬಿ ರಸೋಯ್ ಹೆಸರಿನ ರೆಸ್ಟೋರೆಂಟ್ ನಿಂದ ಆಹಾರ ಆರ್ಡರ್ ಮಾಡಿರುವುದಾಗಿ ಗ್ರಾಹಕರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಅವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಫೆÇೀನ್ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಆನ್‍ಲೈನ್ ಫುಡ್ ಸಮಸ್ಯೆ ಇದೆ ಮೊದಲೇನು ಅಲ್ಲ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ.

  • ಸ್ಕೇಲಿನಲ್ಲಿ ಮದುವೆ ಊಟದ ಮೆನು- ನೆಟ್ಟಿಗರು ಹೇಳಿದ್ದೇನು?

    ಸ್ಕೇಲಿನಲ್ಲಿ ಮದುವೆ ಊಟದ ಮೆನು- ನೆಟ್ಟಿಗರು ಹೇಳಿದ್ದೇನು?

    ದುವೆ ಮನೆಯ ಊಟ ಎಂದರೆ ಎಲ್ಲರಿಗೂ ಇಷ್ಟ. ತರಹೇವಾರಿ ಸಿಹಿತಿಂಡಿಗಳು ಸವಿಯಲು ಸಿಗುತ್ತವೆ. ಇತ್ತೀಚೆಗೆ ಮದುವೆಯನ್ನು ವಿಶೇಷವಾಗಿ ಮಾಡಬೇಕು, ವಿಶೇಷವಾಗಿ ಕಾಣಿಸಿಕೊಳ್ಳಬೇಕು ಎಂದು ವಧು, ವರರು ಪ್ರಯತ್ನಿಸುತ್ತಾರೆ. ಇಲ್ಲೊಂದು ಕುಟುಂಬ ಮರದ ಸ್ಕೇಲ್‍ನಲ್ಲಿ ಮದುವೆಯ ಊಟದ ಮೆನು ಬರೆಸಿರುವುದು ಸಖತ್ ವೈರಲ್ ಆಗಿದೆ.

    2013ರಲ್ಲಿ ನಡೆದ ಬೆಂಗಾಲಿ ಮದುವೆಯೊಂದರ ಊಟದ ಮೆನು ಕಾರ್ಡ್ ಇದಾಗಿದೆ.  ಸುಶ್ಮಿತಾ ಹಾಗೂ ಅನಿಮೇಶ್ ಅವರ ಮದುವೆಯಲ್ಲಿ ಈ ರೀತಿ ಮೆನು ಕಾರ್ಡ್ ತಯಾರಿಸಲಾಗಿದೆ. ಇದನ್ನೂ ಓದಿ: ಹಸುಗೂಸನ್ನು ಹೊತ್ತೊಯ್ದು ವಾಟರ್ ಟ್ಯಾಂಕ್‍ಗೆ ಹಾಕಿದ ಖತರ್ನಾಕ್ ಕೋತಿಗಳು

    ಮೆನು ಕಾರ್ಡ್‍ನಲ್ಲಿ ಏನಿದೆ?: 30 ಸೆಂ ಮೀ ಉದ್ದದ ಸ್ಕೇಲ್‍ನಲ್ಲಿ ಊಟದ ಮೆನುವನ್ನು ಬರೆಯಲಾಗಿದೆ. ಮೆನುವುನಲ್ಲಿ ಫ್ರೈಡ್ ರೈಸ್, ಮಟನ್ ಮಸಾಲಾ, ಫಿಶ್ ಕಲಿಯಾ ಸೇರದಂತೆ ವಿವಿಧ ರೀತಿಯ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ. ಸ್ಟೀರಿಯೋ ಟೈಪ್‍ರೈಟರ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ಸ್ಕೆಲ್ ಮೆನುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಹಾರ ತಿಂದಿದ್ದಕ್ಕೆ ಇದೇ ಸ್ಕೇಲಿನಿಂದ ತಿರುಗಿಸಿ ಹೊಡೆಯಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಪಂಜಾಬ್‌ ಚುನಾವಣೆ – ನಟ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ

  • ಮದುವೆ ಹಾಲ್‍ಗೆ ಬೆಂಕಿ ಹೊತ್ತಿ ಉರಿದರೂ ಕ್ಯಾರೇ ಎನ್ನದ ಅತಿಥಿಗಳು

    ಮದುವೆ ಹಾಲ್‍ಗೆ ಬೆಂಕಿ ಹೊತ್ತಿ ಉರಿದರೂ ಕ್ಯಾರೇ ಎನ್ನದ ಅತಿಥಿಗಳು

    ಮುಂಬೈ: ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಭೋಜನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಅತಿಥಿಗಳು ಮದುವೆ ಸಮಾರಂಭವನ್ನು ಆನಂದಿಸದಿದ್ದರೂ ಊಟವನ್ನು ಮಾತ್ರ ಒಲ್ಲೆಎನ್ನುವವರು ನಮ್ಮಲ್ಲಿ ಅತೀ ವಿರಳ. ಆದರೆ ಮದುವೆ ಸಮಾರಂಭವೊಂದರಲ್ಲಿ ಹಾಲ್‍ಗೆ ಬೆಂಕಿ ತಗುಲಿ ಹೊತ್ತಿ ಉರಿದರೂ ಅತಿಥಿಗಳು ವಿಚಲಿತರಾಗದೇ ಊಟವನ್ನು ಸವಿದಿದ್ದಾರೆ.

    ಮದುವೆಯೊಂದರಲ್ಲಿ ಊಟವನ್ನು ಸವಿಯುತ್ತಿದ್ದ ವ್ಯಕ್ತಿ ಅಗ್ನಿ ದುರಂತವನ್ನು ಕಂಡರೂ ಏನೂ ಆಗಿಲ್ಲದಂತೆ ವರ್ತಿಸಿ ಮತ್ತೆ ತನ್ನ ಊಟದ ಕಡೆ ಗಮನವನ್ನು ಹರಿಸಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅವನ ಹಿಂದುಗಡೆ ಒಂದು ದೊಡ್ಡ ಅಗ್ನಿ ದುರಂತವನ್ನು ಗುರುತಿಸಿದ್ದರೂ ಊಟವನ್ನು ಬಿಟ್ಟು ಆ ಕಡೆ ಗಮನ ಕೊಡಲೂ ಸಾಧ್ಯವಾಗದಷ್ಟು ಮಗ್ನತೆ ತೋರಿದ್ದಾನೆ. ಇದನ್ನೂ ಓದಿ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

    ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿನ ಅನ್ಸಾರಿ ಮ್ಯಾರೇಜ್ ಹಾಲ್ ನಲ್ಲಿ ನಡೆದಿದೆ. ಈ ವಿಡಿಯೋವನ್ನು ಇಂಡಿಯನ್ ಫೈರ್ ಸರ್ವಿಸ್ ಎಂಬ ಫೇಸ್‍ಬುಕ್ ಪುಟ ಹಂಚಿಕೊಂಡಿದೆ.

    ನವೆಂಬರ್ 28 ರಂದು ಈ ಘಟನೆ ನಡೆದಿದ್ದು, ಬೆಂಕಿ ಮದುವೆ ಮಂಟಪದ ಸ್ಟೋರ್ ರೂಮ್ ನಿಂದ ಕಾಣಿಸಿಕೊಂಡಿತ್ತು. ಸಮಾರಂಭದಲ್ಲಿ ಬಳಸಿದ ಪಟಾಕಿಯೇ ಬೆಂಕಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿತ್ತು. ಬೆಂಕಿಯಿಂದ ಆರು ದ್ವಿಚಕ್ರ ವಾಹನಗಳು, ಕೆಲವು ಕುರ್ಚಿಗಳು ಮತ್ತು ಅಲಂಕಾರಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂಬುದು ವರದಿಯಾಗಿದೆ.

  • ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು

    ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು

    ದುವೆಯ ಆರತಕ್ಷತೆಯ ವೆಚ್ಚವನ್ನು ಭರಿಸಲು ಆಗದೇ ವಧು ತನ್ನ ಅತಿಥಿಗಳಿಗೆ ಅಂದಾಜು 7,370ರೂ. (ಅಮೇರಿಕನ್ ಡಾಲರ್ 99)ಗಳನ್ನು ಪಾವತಿಸುವಂತೆ ಕೇಳಿದ್ದಾರೆ.

    ಈ ವಿಚಿತ್ರ ಘಟನೆ ಕುರಿತಂತೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಕೆಲ ದಿನಗಳ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ. ಈ ವೇಳೆ ಆರತಕ್ಷತೆಗೆ ಆಗಮಿಸಿದ ಅತಿಥಿಗಳಿಗೆಲ್ಲಾ ವಧು 7,300 ರೂಪಾಯಿಯನ್ನು ಪಾವತಿಸಿ ಊಟ ಮಾಡುವಂತೆ ಹೇಳಿದಳು. ಕಾರಣ ವಧು ಮತ್ತು ವರ ಮದುವೆಗೆ ಹಣ ಖರ್ಚು ಮಾಡಲು ಶಕ್ತರಾಗಿರಲಿಲ್ಲ.

    ಆಹ್ವಾನ ಪತ್ರಿಕೆಯಲ್ಲಿ ವಧು, ತನಗೆ ಊಟದ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಹಾಗಾಗಿ ಮದುವೆಗೆ ಆಗಮಿಸುವ ಅತಿಥಿಗಳು ತಮ್ಮ ಊಟದ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು, ಮದುವೆಗೆ ಆಗಮಿಸುವ ಅತಿಥಿಗಳಿಗೆ 7,300 ರೂಪಾಯಿ ಕೇಳಿದ್ದರು. ಇದನ್ನೂ ಓದಿ: ಕೇರಳದಲ್ಲಿ 13 ನೊರೊವೈರಸ್ ಪ್ರಕರಣ ಪತ್ತೆ – ನೀರಿನಿಂದ ಹರಡುವ ಹೊಸ ಕಾಯಿಲೆ

    ಮದುವೆ ಸಮಾರಂಭ ಮನೆಯಿಂದ ದೂರದಲ್ಲಿದ್ದು, 4 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಯಿತು. ಹೆಚ್ಚು ಸಮಯದ ಜೊತೆಗೆ ಪೆಟ್ರೋಲ್ ಹಾಗೂ ಹಣ ಕೂಡ ವ್ಯಯ ಮಾಡಲಾಯಿತು. ಅಲ್ಲದೇ ಮದುವೆಯಲ್ಲಿ ಊಟ ಮಾಡಲು ನಮ್ಮ ಹಣವನ್ನೇ ಪಾವತಿಸಬೇಕಾಯಿತು. ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಇಟ್ಟು ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್‍ಗೆ ಹೊಸ ಟ್ವಿಸ್ಟ್ – ಸೀಜೇ ಮಾಡಿಲ್ಲವೆಂದು ಕೋರ್ಟಿಗೆ ಸಿಸಿಬಿ ರಿಪೋರ್ಟ್

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಹಲವಾರು ಮಂದಿ ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತಾವು ಅಂತಹ ಮದುವೆಗೆ ಹೋಗುವುದಿಲ್ಲ ಎಂದರೆ ಮತ್ತೆ ಕೆಲವರು ಅದ್ದೂರಿಯಾಗಿ ಮದುವೆಯಾಗಲು ಸಾಧ್ಯವಾಗದಿದ್ದರೆ ಸರಳವಾಗಿ ವಿವಾಹವಾಗಬಹುದಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್  

    ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್  

    ನವದೆಹಲಿ: ಸ್ವಿಗ್ಗಿಯಲ್ಲಿ ಊಟ ಸರಿಯಾಗಿ ಸಮಯಕ್ಕೆ ಬರಲಿಲ್ಲ ಎಂದರೆ ಕಂಪನಿಗೆ ಕರೆ ಮಾಡಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ದೂರುವುದನ್ನು ನಾವು ನೋಡಿದ್ದೆವೆ. ಆದರೆ ಬೆಂಗಾಳಿ ಸಿನಿಮಾ ಸೂಪರ್ ಸ್ಟಾರ್  ಪ್ರಸೂನ್‌ಜಿತ್ ಚಟರ್ಜಿ  , ಸ್ವಿಗ್ಗಿ ವಿರುದ್ಧ ಪ್ರಧಾನಿ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾಗೆ ಬಹಿರಂಗ ಪತ್ರ ಬರೆದಿದ್ದಾರೆ.

    ತಾವು ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲ. ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಮೋದಿ ಹಾಗೂ ಮಮತಾ ಅವರಿಗೆ ಬರೆದಿರುವ ಪತ್ರ ಇದಾಗಿದೆ.

    ಪತ್ರದಲ್ಲಿ ಏನಿದೆ?:
    ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಬ್ಬದ ಶುಭಾಶಯಗಳು. ನೀವು ಚೆನ್ನಾಗಿರುತ್ತೀರಿ ಎಂದು ಭಾವಿಸುತ್ತೇವೆ. ನಾನು ಇತ್ತೀಚೆಗೆ ಎದುರಿಸಿದ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರುತ್ತೇನೆ. ನವೆಂಬರ್ 3 ರಂದು ನಾನು ಆಹಾರ ವಿತರಣಾ ಅಪ್ಲಿಕೇಶನ್ ಆಗಿರುವ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ್ದೆ. ಆದರೆ ನಾನು ಆಹಾರವನ್ನು ಸ್ವೀಕರಿಸಲಿಲ್ಲ. ಸ್ವಿಗ್ಗಿ ಅವರಿಗೆ ನಾನು ಆಗಿರುವ ಸಮಸ್ಯೆಯನ್ನು ಹೇಳಿಕೊಂಡೆ. ಅವರು ಆರ್ಡರ್ ಪ್ರಿಪೇಯ್ಡ್ ಆಗಿರುವುದರಿಂದ ಅವರು ನನಗೆ ಹಣವನ್ನು ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

    ಆದರೆ ಮುಂದೆ ಯಾರಾದರೂ ಈ ಸಮಸ್ಯೆಯನ್ನು ಎದುರಿಸಬಹುದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೆನೆ. ಯಾರಾದರೂ ತಮ್ಮ ರಾತ್ರಿಯ ಊಟಕ್ಕೆ ಈ ಫುಡ್ ಅಪ್ಲಿಕೇಶನ್‍ಗಳನ್ನು ಅವಲಂಬಿಸಿದ್ದರೆ ಏನು? ಅವರು ಹಸಿವಿನಿಂದ ಇರುತ್ತಾರೆಯೇ? ಅಂತಹ ಅನೇಕ ಸಂದರ್ಭಗಳು ಇರಬಹುದು. ಹೀಗೆ ಈ ಸಮಸ್ಯೆ ಕುರಿತಾಗಿ ಮಾತನಾಡುವುದು ಅಗತ್ಯ ಎಂದು ನನಗೆ ಅನಿಸಿತು ಎಂದು ಬರೆದುಕೊಂಡು ಮೋದಿ ಮತ್ತು ಮಮತಾ ಅವರು ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?

  • ನಾಳೆಯಿಂದ ಹೋಟೆಲ್ ಊಟ, ತಿಂಡಿ ದರ ಏರಿಕೆ

    ನಾಳೆಯಿಂದ ಹೋಟೆಲ್ ಊಟ, ತಿಂಡಿ ದರ ಏರಿಕೆ

    ಬೆಂಗಳೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್‍ ಅಸೋಸಿಯೇಷನ್ ಮುಂದಾಗಿದೆ.

    ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 10% ಹೆಚ್ಚಳ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಸಂಬಂಧ ಕೆಳದಿನಗಳ ಹಿಂದೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆದಿತ್ತು. ಇದೀಗ ನಾಳೆಯಿಂದ ಹೊಟೇಲ್ ಗಳಲ್ಲಿ ಹಂತ ಹಂತವಾಗಿ ದರ ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ತೀರ್ಮಾನಿಸಿದೆ. ಇದನ್ನೂ ಓದಿ: ತೈಲ ಬೆಲೆ ಇಳಿಕೆ ಬೆನ್ನಲ್ಲೇ ದುಬಾರಿಯಾಗಲಿದೆ ಹೋಟೆಲ್ ಫುಡ್

    ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಹಾಗಾಗಿ ಹೋಟೆಲ್ ಆಹಾರಗಳ ದರ ಹೆಚ್ಚಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಎಷ್ಟೆಷ್ಟು ರೇಟ್ ಆಗಬಹುದು..!?
    ದೋಸೆ- 5 ರೂ ಏರಿಕೆ
    ರೈಸ್ ಬಾತ್ – 5 ರೂ ಏರಿಕೆ
    ಊಟ- 6-8 ರೂ ಏರಿಕೆ
    ನಾರ್ಥ್ ಇಂಡಿಯನ್ ಊಟ- 10 ರೂ.ಏರಿಕೆ
    ಕಾಫಿ, ಟೀ- 5 ರೂ ಏರಿಕೆ
    ರೈಸ್ ಬಾತ್-4-5 ರೂ ಏರಿಕೆ
    ಪ್ರತಿ ತಿಂಡಿಯ ಮೇಲೆ 5-10 ರೂ ದರ ಏರಿಕೆ ಸಾಧ್ಯತೆ

  • ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಲಾಗಿದ್ದು, ಅಲ್ಲಿಯವರೆಗೂ ಆರ್ಯನ್ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ.

    ಕೋವಿಡ್-19 ಪರೀಕ್ಷೆಯಲ್ಲಿ ಆರ್ಯನ್‍ಗೆ ನೆಗಟಿವ್ ವರದಿ ಬಂದ ನಂತರ, ಗುರುವಾರ ಅವರನ್ನು ಬ್ಯಾರಕ್‍ಗೆ ವರ್ಗಾಯಿಸಲಾಯಿತು. ಇದೀಗ ಆರ್ಯನ್‍ಗೆ ಖೈದಿ ಸಂಖ್ಯೆ ಎನ್956 ಎಂದು ನಿಗದಿಪಡಿಸಲಾಗಿದೆ. ಆರ್ಯನ್‍ಗೆ ಜೈಲಿನಲ್ಲಿರಲು ಗೊಂದಲ, ಉದ್ವಿಗ್ನತೆ ಹಾಗೂ ಅನ್ ಕಂಫರ್ಟ್‍ಟೇಬಲ್ ಆಗುತ್ತಿದ್ದು, ಜೈಲಿನ ಆಹಾರ ಕೂಡ ಇಷ್ಟವಾಗುತ್ತಿಲ್ಲ. ಹೀಗಾಗಿ ಮಗನಿಗೆ ಕ್ಯಾಂಟೀನ್‍ನಲ್ಲಿ ಊಟದ ವ್ಯವಸ್ಥೆಗೊಳಿಸಲು ಆರ್ಥರ್ ರೋಡ್ ಜೈಲು ಅಧಿಕಾರಿಗಳಿಗೆ ಶಾರೂಖ್ ಖಾನ್ 4,500ರೂ. ಮನಿ ಆರ್ಡರ್ ಕಳುಹಿಸಿದ್ದಾರೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

    ಜೈಲು ಅಧಿಕಾರಿಗಳು ಆರ್ಯನ್ ಖಾನ್ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಎಲ್ಲಾ ಡ್ರಗ್ ಪ್ರಕರಣ ಆರೋಪಿಗಳಿಗೆ ಭದ್ರತೆ ಒದಗಿಸುವ ಸಲುವಾಗಿ ಇತರ ಖೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ

    ಮುಂಬೈ ಸಮುದ್ರದಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಈ ಅರ್ಜಿ ವಿಚಾರಣೆ ನಡೆದಿದ್ದು, ನ್ಯಾ.ವಿವಿ ಪಾಟೀಲ್ ಸುದೀರ್ಘ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದ್ದಾರೆ.

  • ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

    ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

    ಕಾರವಾರ: ಕುಡಿದ ಅಮಲಿನಲ್ಲಿ ಊಟದ ವಿಚಾರವಾಗಿ ಗಲಾಟೆ ಮಾಡಿಕೊಂಡು ತಾಯಿ ಹಾಗೂ ಅಕ್ಕನನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದದಲ್ಲಿ ನಡೆದಿದೆ.

    ಮಂಜುನಾಥ್ ಜಯಂತ್ ನಾರಾಯಣ ಹಸಲರ್, ಕೊಲೆಗೈದ ಆರೋಪಿ. ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಮೃತ ದುರ್ದೈವಿಗಳಾಗಿದ್ದಾರೆ. ಊಟದ ವಿಷಯದಲ್ಲಿ ಗಲಾಟೆ ತೆಗೆದಿದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಹೊಡೆದಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

    ಇನ್ನೂ ತಂದೆ ನಾರಾಯಣ್ ಮನೆಯಲ್ಲಿ ಇರಲ್ಲದೇ ಇರುವ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ:  ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು