Tag: ಊಟ

  • ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿ ಕತ್ತು ಹಿಸುಕಿ ಕೊಂದ ಪತ್ನಿ

    ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿ ಕತ್ತು ಹಿಸುಕಿ ಕೊಂದ ಪತ್ನಿ

    ಭುವನೇಶ್ವರ್: ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿಯನ್ನು ಕತ್ತು ಹಿಸುಕಿ ಪತ್ನಿ ಕೊಂದಿರುವ ಘಟನೆ ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.

    ಹೇಮಂತ ಬಾಗ್ (35) ಪತ್ನಿಯಿಂದ ಹತ್ಯೆಯಾದ ವ್ಯಕ್ತಿ. ಕೊಲೆ ಮಾಡಿದ ಆತನ ಪತ್ನಿ ಸರಿತಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಮಾವ ಶಶಿ ಭೂಷಣ್‌ ಬಾಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಸರಿತಾಳನ್ನು ಅರೆಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಹೇಮಂತ ಊಟ ಮಾಡುವಾಗ ಅನ್ನದಲ್ಲಿ ಇರುವೆ ಸಿಕ್ಕಿದೆ. ಊಟದಲ್ಲಿ ಇರುವೆ ಇದೆ ಎಂದು ಆತ ಪತ್ನಿ ಮೇಲೆ ರೇಗಾಡಿದ್ದಾನೆ. ಪತಿ, ಪತ್ನಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸರಿತಾ ಕತ್ತು ಹಿಸುಕಿ ಕೊಂದಿದ್ದಾಳೆ.

    ಹೇಮಂತ ಬಾಗ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಸರಿತಾ, ಪುತ್ರಿ ಹೇಮಲತಾ, ಪುತ್ರ ಸೌಮ್ಯ ಜೊತೆ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    Live Tv
    [brid partner=56869869 player=32851 video=960834 autoplay=true]

  • ಜೈಲಿನಲ್ಲಿ ಬರೋಬ್ಬರಿ 8 ಕೆ.ಜಿ ತೂಕ ಹೆಚ್ಚಿಸಿಕೊಂಡ ಸಚಿವ ಸತ್ಯೇಂದ್ರ ಜೈನ್!

    ಜೈಲಿನಲ್ಲಿ ಬರೋಬ್ಬರಿ 8 ಕೆ.ಜಿ ತೂಕ ಹೆಚ್ಚಿಸಿಕೊಂಡ ಸಚಿವ ಸತ್ಯೇಂದ್ರ ಜೈನ್!

    ನವದೆಹಲಿ: ಮಸಾಜ್ ಬೆನ್ನಲ್ಲೇ ಇದೀಗ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊಂದು ವೀಡಿಯೋ ಬಿಡುಗಡೆಯಾಗಿದ್ದು, ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.

    ಹೌದು, ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುವ ವೀಡಿಯೋ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ಬೆನ್ನಲ್ಲೇ ಇದೀಗ ಸಚಿವರು ಜೈಲಿನಲ್ಲಿ ಆರಾಮವಾಗಿ ಊಟ ಮಾಡುತ್ತಿರುವ ವೀಡಿಯೋ ಕೂಡ ಬಿಡುಗಡೆ ಆಗಿದೆ. ಸತ್ಯೇಂದ್ರ ಜೈನ್ ಅವರು ಹೊರಗಿನಿಂದ ಊಟ ತರಿಸಿಕೊಂಡು ತಿನ್ನುತ್ತಿರುವುದನ್ನು  ವೀಡಿಯೋದಲ್ಲಿ ಕಾಣಬಹುದಾಗಿದೆ.

    ಜೈನ್‌ ಅವರು ಜೈಲಿನಲ್ಲಿ 8 ಕೆ.ಜಿ ತೂಕ ಹೆಚ್ಚಿಕೊಂಡಿದ್ದಾರೆ ಎಂಬುದಾಗಿ ಜೈಲಿನ ಮೂಲಗಳು ತಿಳಿಸಿವೆ. ಆದರೆ ಇದನ್ನು ಸಚಿವರ ಪರ ವಕೀಲರು ತಳ್ಳಿ ಹಾಕಿದ್ದು, 28 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ವೈರಲ್ ವೀಡಿಯೋದಲ್ಲಿರೋದು ಫಿಸಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್: ಬಿಜೆಪಿ

    ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಸಚಿವರು ತನ್ನ ಕಾಲಿಗೆ ಮಸಾಜ್ ಮಾಡಿಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ ಈ ವೀಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿದೆ ಹೊರತು ಮಸಾಜ್ ಅಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು.

    ಈ ಬೆನ್ನಲ್ಲೇ ಬಿಜೆಪಿ ಮತ್ತೊಂದು ಆರೋಪ ಮಾಡಿದೆ. ಈ ಸಂಬಂಧ ಬಿಜೆಪಿ ವಕ್ತಾರ ಶೆಹ್‍ಜಾದ್ ಪೂನಾವಾಲಾ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅದರಲ್ಲಿ ಸತ್ಯೇಂದ್ರ ಜೈನ್‍ಗೆ ಮಸಾಜ್ ಮಡುತ್ತಿರುವ ವ್ಯಕ್ತಿಯ ಹೆಸರು ರಿಂಕು. ಈತ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಭುವನೇಶ್ವರ: ಹೋಟೆಲ್‍ನಲ್ಲಿ (Restaurant) ಆಹಾರದ ರುಚಿ ಹಾಗೂ ಬೆಲೆಗೆ (Price) ಸಂಬಂಧಿಸಿ ನಡೆದ ಜಗಳದಲ್ಲಿ  ಮಾಲೀಕನೊಬ್ಬ (Owner) ಗ್ರಾಹಕನ (Customer) ಮೇಲೆ ಬಿಸಿ ಎಣ್ಣೆ (Hot Oil) ಸುರಿದಿರುವ ಘಟನೆ ಓಡಿಶಾದ (Odisha) ಜಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಲಿಚಂದ್ರಾಪುರ ಗ್ರಾಮದ ನಿವಾಸಿ ಪ್ರಸಂಜಿತ್ ಪರಿದಾ (48) ಊಟ ಮಾಡಲೆಂದು ಸ್ಥಳೀಯ ಮಾರುಕಟ್ಟೆಯಲ್ಲಿರುವ ಹೋಟೆಲ್‍ವೊಂದಕ್ಕೆ ತೆರಳಿದ್ದ. ಈ ವೇಳೆ ಊಟ ಚೆನ್ನಾಗಿಲ್ಲ ಎಂದು ಅಲ್ಲಿನ ಹೋಟೆಲ್ ಮಾಲೀಕ ಪ್ರವಾಕರ ಸಾಹೂಗೆ ದೂರು ನೀಡಿದ್ದಾನೆ. ಈ ವೇಳೆ ಆಹಾರದ ಬೆಲೆಯ ವಿಚಾರವಾಗಿಯೂ ಗಲಾಟೆ ನಡೆದಿದೆ.

    crime

    ಇದರಿಂದ ಕೋಪಗೊಂಡ ಸಾಹೂ, ಪರಿದಾ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಈ ವೇಳೆ ಪರಿದಾನ ಮುಖ, ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಕೈಗಳು ಸುಟ್ಟು ಹೋಗಿದೆ. ತಕ್ಷಣ ಪರಿದಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    Live Tv
    [brid partner=56869869 player=32851 video=960834 autoplay=true]

  • ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ

    ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ

    ಮಂಡ್ಯ: ಊಟ ತಿಂಡಿ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಯ ಮೇಲೆ 63 ವರ್ಷದ ವೃದ್ಧ ಬಲವಂತವಾಗಿ ಅತ್ಯಾಚಾರವೆಸಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ವ್ಯಾಪ್ತಿಯ ಗ್ರಾಮವೊಂದರಲ್ಲಿ 63 ವರ್ಷದ ವಯೋವೃದ್ಧ ಗ್ರಾಮದ ಹದಿನೈದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಹಲಗೂರು ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದನು. ಈ ವೇಳೆ ಬಾಲಕಿಗೆ ಊಟ ತಿಂಡಿ ಕೊಡಿಸಿ ನಂತರ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಾಲಕಿ ಆರೋಪಿ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದನ್ನೂ ಓದಿ: IIT ಉದ್ಘಾಟನೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದೇನೆ: ಪ್ರಹ್ಲಾದ್ ಜೋಶಿ

    ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹಲಗೂರು ವೃತ್ತ ನಿರೀಕ್ಷಕರು ಶ್ರೀಧರ್ ಮತ್ತು ಪಿಎಸ್‍ಐ ನೇತೃತ್ವದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪಿಯು ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ 17 ವರ್ಷದ ಹುಡುಗ!

    Live Tv
    [brid partner=56869869 player=32851 video=960834 autoplay=true]

  • ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ

    ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ

    ಚಿಕ್ಕಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಬಸವರಾಜ ಬೊಮ್ಮಾಯಿಯವರು (Basavaraj Bommai) ಜನಸಾಮಾನ್ಯರಿಗೆ ಊಟ ಉಣಬಡಿಸಿ (Served Food), ಅವರೊಂದಿಗೇ ಕೂತು ಊಟ ಸವಿದ ಬಲು ಅಪರೂಪದ ಘಟನೆ ಚಿಕ್ಕಬಳ್ಳಾಪುರದ (Chikkaballapur) ಈಶಾ ಯೋಗ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ನರಸಿಂಹದೇವರಬೆಟ್ಟದ ಬಳಿ ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ ಕೇಂದ್ರ, 112 ಅಡಿ ಎತ್ತರದ ಅದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಇದೇ ಜಾಗದಲ್ಲಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮ ನಿನ್ನೆ ನೆರವೇರಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಬಸ್‍ಗಳದ್ದೇ ಹವಾ- ಖಾಸಗೀಕರಣದ ಆತಂಕದಲ್ಲಿ ನೌಕರರು

    ಈ ಕಾರ್ಯದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಕಾರ್ಯಕ್ರಮ ಮುಗಿದ ನಂತರ ಜನಸಾಮಾನ್ಯರಿಗೆ ತಮ್ಮ ಕೈಯ್ಯಾರೆ ಊಟ ಬಡಿಸಿದ್ದಾರೆ. ತದನಂತರ ಜನಸಾಮಾನ್ಯರ ಜೊತೆಯಲ್ಲೇ ಕೂತು ಊಟ ಮಾಡಿದ್ದಾರೆ.

    ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗೀ ವಾಸುದೇವ್ ಹಾಗೂ ಸಚಿವ ಸುಧಾಕರ್ ಸಹ ಸಾಥ್ ನೀಡಿದರು. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

    Live Tv
    [brid partner=56869869 player=32851 video=960834 autoplay=true]

  • ಅನ್ನ ರಸಂ, ಲಡ್ಡು ಸೇವಿಸಿ ಮೂವರು ಸಾವು, 11 ಮಕ್ಕಳು ಅಸ್ವಸ್ಥ

    ಅನ್ನ ರಸಂ, ಲಡ್ಡು ಸೇವಿಸಿ ಮೂವರು ಸಾವು, 11 ಮಕ್ಕಳು ಅಸ್ವಸ್ಥ

    ಚೆನ್ನೈ: ಮನೆಯಲ್ಲಿದ್ದ ವಿಷಪೂರಿತ ಆಹಾರ (Food) ಸೇವಿಸಿ ಮೂವರು ಮಕ್ಕಳು (Children) ಸಾವನ್ನಪ್ಪಿದ್ದು, 11 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ ತಮಿಳುನಾಡಿನ (Tamil Nadu) ತಿರುಪ್ಪೂರಿನಲ್ಲಿ ನಡೆದಿದೆ.

    ಮಕ್ಕಳೆಲ್ಲರೂ ರಾತ್ರಿ ಊಟಕ್ಕೆ ಅನ್ನ, ರಸಂ ಹಾಗೂ ಲಡ್ಡುವನ್ನು ಸೇವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ.

    crime

    ಗುರುವಾರ ಬೆಳಿಗ್ಗೆ ಅವರೆಲ್ಲರೂ ಉಪಹಾರ ಸೇವಿಸಿದ್ದರು. ಇದಾದ ಬಳಿಕ ಅವರ ಸ್ಥಿತಿ ಹದಗೆಟ್ಟಿದೆ. ಅವರಲ್ಲಿದ್ದ ಕೆಲವರು ಪ್ರಜ್ಞಾಹೀನರಾದರು. ಕೂಡಲೇ ಅವರೆಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಾಳೆ ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ

    POLICE JEEP

    ಆಸ್ಪತ್ರೆಗೆ ಭೇಟಿ ನೀಡಿದ್ದ ತಿರುಪುರ್ ಜಿಲ್ಲಾಧಿಕಾರಿ ಎಸ್. ವಿನೀತ್ ಅವರು, ಆಹಾರದಲ್ಲಿ ವಿಷ ಹೇಗೆ ಬಂತು ಎನ್ನುವುದರ ಕುರಿತು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

    Live Tv
    [brid partner=56869869 player=32851 video=960834 autoplay=true]

  • ಮದುವೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ- ಊಟ ಬೇಕಾದ್ರೆ ಆಧಾರ್ ತೋರಿಸಿ ಎಂದ ವಧು ಕಡೆಯವರು

    ಮದುವೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ- ಊಟ ಬೇಕಾದ್ರೆ ಆಧಾರ್ ತೋರಿಸಿ ಎಂದ ವಧು ಕಡೆಯವರು

    ಲಕ್ನೋ: ಮದುವೆಯಂತಹ (Wedding) ಸಮಾರಂಭದಲ್ಲಿ ಹೆಚ್ಚು ಜನರು ಸೇರುವುದು ಸಹಜ. ಆದರೆ ಇಲ್ಲೊಂದು ಮದುವೆಗೆ ಆಧಾರ್ ಕಾರ್ಡ್ (Aadhar card) ಇದ್ದವರಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೌದು.. ಉತ್ತರಪ್ರದೇಶದ (Uttar Pradesh) ಅಮ್ರೋಹಾದ ಹಸನ್‌ಪುರದಲ್ಲಿ ಮದುವೆ ನಡೆದದಿದೆ. ಈ ಸಂದರ್ಭದಲ್ಲಿ ನಿರೀಕ್ಷೆಗಿಂತಲೂ ಅತಿಥಿಗಳು ಹೆಚ್ಚು ಪಾಲ್ಗೊಂಡಿದ್ದಾರೆ. ಇದರಲ್ಲಿ ಪರಿಚಿತರು ಯಾರು ಅಪರಿಚಿತರು ಯಾರೂ ಎಂದು ತಿಳಿಯಲು ಅಸಾಧ್ಯವಾಗಿದೆ. ಇದರಿಂದಾಗಿ ವಧುವಿನ ಕಡೆಯವರು ನೆರೆದವರಿಗೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಆಧಾರ್ ಕಾರ್ಡ್ ಇದ್ದವರಿಗೆ ಮಾತ್ರ ಮದುವೆ ಊಟ ಸಿಗುತ್ತದೆ ಎಂದು ಷರತ್ತನ್ನು ಹಾಕಿದರು. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    ಈ ಷರತ್ತಿನ ಪ್ರಕಾರವಾಗಿ ಮದುವೆ ಮನೆಯ ಪ್ರವೇಶದಲ್ಲಿ ಆಧಾರ್ ಕಾರ್ಡ್‌ನ್ನು ಪರೀಕ್ಷಿಸಲು ಇಬ್ಬರನ್ನು ನಿಲ್ಲಿಸಲಾಯಿತು. ಆಧಾರ್ ಕಾರ್ಡ್ ತೊರಿಸಿ ಕೆಲವರು ಊಟ ಸವಿದರೆ, ಇನ್ನೂ ಕೆಲವರು ಅನುಮಾನ ಪಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಹಿಂದಿರುಗಿದರು. ಇದೀಗ ಆಧಾರ್ ಕಾರ್ಡ್ ತೋರಿಸಿ ಮದುವೆ ಮನೆಗೆ ಪ್ರವೇಶಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಗಳ ಮದುವೆಯ ಸಾಲ ತೀರಿಸಿಲ್ಲ ಅಂತ ಪೆಟ್ರೋಲ್ ಸುರಿದು ಬೆಂಕಿ ಇಟ್ರು

    Live Tv
    [brid partner=56869869 player=32851 video=960834 autoplay=true]

  • ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    ನವದೆಹಲಿ: ಇಂದಿನಿಂದ ನವರಾತ್ರಿ (Navratri) ಹಬ್ಬ ಪ್ರಾರಂಭವಾಗಿದೆ. ದೇಶದ್ಯಾಂತ ಅದ್ದೂರಿಯಾಗಿ, ಸಂಭ್ರಮದಿಂದ ದಸರಾ (Dasara) ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಭಾರತೀಯ ರೈಲ್ವೆ (Indian Railway) ಕೂಡಾ ಈ ಅವಧಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಊಟ (Meal) ನೀಡಲು ನಿರ್ಧರಿಸಿದೆ.

    ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ಭಾರತೀಯ ರೈಲ್ವೆಯಲ್ಲಿ ವಿಶೇಷ ಊಟದ ಮೆನು ಇರಲಿದ್ದು, ರೈಲಿನಲ್ಲೂ ಹಬ್ಬದ ಊಟ ಸವಿಯಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಈ ಸ್ಪೆಷಲ್ ಮೆನು ಇರಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್, irctc.co.in ಅಥವಾ 1323 ಗೆ ಕರೆ ಮಾಡಿ ವಿಶೇಷ ಮೆನುವನ್ನು ಆರ್ಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಈ ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ವಿಶೇಷ ಥಾಲಿಯ ಫೋಟೋವನ್ನೂ ಲಗತ್ತಿಸಿದೆ. ಇದನ್ನೂ ಓದಿ: ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    Live Tv
    [brid partner=56869869 player=32851 video=960834 autoplay=true]

  • ಹಾಸ್ಟೆಲ್ ಮಕ್ಕಳ ಜೊತೆ ಸಾಲಿನಲ್ಲಿ ಕೂತು ಊಟ ಮಾಡಿದ ಕರಂದ್ಲಾಜೆ

    ಹಾಸ್ಟೆಲ್ ಮಕ್ಕಳ ಜೊತೆ ಸಾಲಿನಲ್ಲಿ ಕೂತು ಊಟ ಮಾಡಿದ ಕರಂದ್ಲಾಜೆ

    ಚಿಕ್ಕಮಗಳೂರು: ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಶುಕ್ರವಾರ ಮಕ್ಕಳ (Children) ಜೊತೆ ಸರದಿ ಸಾಲಲ್ಲಿ ಕೂತು ಹಾಸ್ಟೆಲ್ (Hostel) ಊಟವನ್ನು ಸವಿದಿದ್ದಾರೆ.

    ಶೋಭಾ ಕರಂದ್ಲಾಜೆ ಅವರು ಇಂದು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ, ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದರು. ಭೇಟಿಯ ಬಳಿಕ ಹಾಸ್ಟೆಲ್ ಮಕ್ಕಳ ಜೊತೆ ಟೇಬಲ್ ಮೇಲೆ ಸರದಿ ಸಾಲಲ್ಲಿ ಕೂತು ಊಟ ಮಾಡಿದ್ದಾರೆ. ಇದನ್ನೂ ಓದಿ: ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ

    ಊಟ ಮುಗಿಸಿ ಹೊರಬಂದಾಗಲೂ ಊಟಕ್ಕೆಂದು ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳನ್ನು ಆತ್ಮೀಯಂತೆಯಿಂದ ಮಾತನಾಡಿಸಿ, ಅವರ ಕಷ್ಟ-ಸುಖ, ಕುಂದು-ಕೊರತೆಯನ್ನು ಕೇಳಿದ್ದಾರೆ. ಮಕ್ಕಳಿರುವ ಜಾಗಕ್ಕೆ ಹೋಗಿ ಮಾತನಾಡಿಸಿದ ಸಂಸದೆಯನ್ನು ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.

    ಶೋಭಾ ಮಕ್ಕಳಿಗೆ ಚೆನ್ನಾಗಿದ್ದೀರಾ? ಎಂದು ಕೇಳಿದಾಗ, ಮಕ್ಕಳು ಹೌದು ಮೇಡಂ, ನೀವು ಚೆನ್ನಾಗಿದ್ದೀರಾ? ಎಂದು ಆತ್ಮೀಯತೆಯಿಂದಲೇ ಕೇಳಿದ್ದಾರೆ. ಮಕ್ಕಳನ್ನು ಕಂಡು ಸಂಸದೆ ಹಾಗೂ ಸಂಸದರನ್ನು ಕಂಡು ಮಕ್ಕಳೂ ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ: ಕೈಗಾರಿಕಾ ಸ್ಥಾಪನೆಗಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ – ನಿರಾಣಿ

    Live Tv
    [brid partner=56869869 player=32851 video=960834 autoplay=true]

  • ಅಡುಗೆ ಮಾಡುವ ಮುನ್ನ ಅಕ್ಕಿ ತೊಳೆದಿರಲಿಲ್ಲ- 31 ವಿದ್ಯಾರ್ಥಿಗಳು ಅಸ್ವಸ್ಥ

    ಅಡುಗೆ ಮಾಡುವ ಮುನ್ನ ಅಕ್ಕಿ ತೊಳೆದಿರಲಿಲ್ಲ- 31 ವಿದ್ಯಾರ್ಥಿಗಳು ಅಸ್ವಸ್ಥ

    ಹೈದರಾಬಾದ್: ಸರ್ಕಾರಿ ಶಾಲೆಯ (Govt School) ವಸತಿ ನಿಲಯದಲ್ಲಿ (Hostel) ರಾತ್ರಿ ಊಟ (Dinner) ಸೇವಿಸಿದ ಬಳಿಕ 31 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ (Hospital) ಸೇರಿರುವ ಘಟನೆ ತೆಲಂಗಾಣದ (Telangana) ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಕಾಗಜನಗರ ಪಟ್ಟಣದ ಬಾಲಕರ ವಸತಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಊಟ ಮಾಡಿದ ಬಳಿಕ ಹೊಟ್ಟೆನೋವು, ವಾಂತಿಭೇದಿ ಕಾಣಿಸಿಕೊಂಡಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಮಾಧ್ಯಮದವರು ಶಾಲೆಗೆ ಬಂದಿದ್ದಾರೆ ಆದರೆ ಸಿಬ್ಬಂದಿ ಅವರನ್ನು ಆವರಣಕ್ಕೆ ಪ್ರವೇಶಿಸಲು ಬಿಡಲಿಲ್ಲ.

    ಬಳಿಕ ವಸತಿ ನಿಲಯದ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಹಿಂಬಾಗಿಲಿನಿಂದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್‌ ಗ್ಯಾಂಗ್‌ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್

    ವಸತಿ ನಿಲಯದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಅಡುಗೆ ಮಾಡುವ ಮುನ್ನ ಅಕ್ಕಿಯನ್ನು ತೊಳೆದಿರಲಿಲ್ಲ. ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಕ್ರಿಮಿ ಕೀಟಗಳು ಕಾಣಿಸಿಕೊಂಡಿರುವ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ, ಘಟನೆಯ ಕುರಿತು ತನಿಖೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ(ಡಿಎಂಹೆಚ್‌ಒ) ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಹೊಟ್ಟೆಯಲ್ಲಿ 1 ಕೆ.ಜಿ ಚಿನ್ನ ಬಚ್ಚಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯ ಬಂಧನ

    Live Tv
    [brid partner=56869869 player=32851 video=960834 autoplay=true]